ಙ್ಞಾನೋಕ್ತಿಗಳು 18 : 1 (ERVKN)
ಸ್ನೇಹಭಾವವಿಲ್ಲದವನು ಮಾಡುವುದೆಲ್ಲ ಸ್ವಾರ್ಥತೆಯಿಂದಲೇ, ಪ್ರತಿಯೊಂದು ಒಳ್ಳೆಯದರ ವಿರುದ್ಧವಾಗಿ ಅವನು ವಾದಿಸುತ್ತಾನೆ.
ಙ್ಞಾನೋಕ್ತಿಗಳು 18 : 2 (ERVKN)
ಮೂಢನಿಗೆ ಅರ್ಥಮಾಡಿಕೊಳ್ಳಲು ಇಷ್ಟವಿಲ್ಲ. ಅವನು ತನ್ನ ಆಲೋಚನೆಗಳನ್ನೇ ಹೇಳಬಯಸುತ್ತಾನೆ.
ಙ್ಞಾನೋಕ್ತಿಗಳು 18 : 3 (ERVKN)
ನೀನು ಕೇಡುಮಾಡಿದರೆ ಜನರು ನಿನ್ನನ್ನು ಇಷ್ಟಪಡುವುದಿಲ್ಲ; ನಾಚಿಕೆಕರವಾದದ್ದನ್ನು ಮಾಡಿದರೆ ನಿನ್ನನ್ನು ಪರಿಹಾಸ್ಯ ಮಾಡುವರು.
ಙ್ಞಾನೋಕ್ತಿಗಳು 18 : 4 (ERVKN)
ಬಾಯಿಮಾತುಗಳು ಆಳವಾದ ನೀರುಗಳಂತಿರಲು ಸಾಧ್ಯ; ಆದರೆ ಜ್ಞಾನದ ಮೂಲವು ನುಗ್ಗಿಬರುವ ತೊರೆಯಂತಿದೆ.
ಙ್ಞಾನೋಕ್ತಿಗಳು 18 : 5 (ERVKN)
ಅಪರಾಧಿಗೆ ಪಕ್ಷಪಾತ ಮಾಡುವುದು ಸರಿಯಲ್ಲ; ನಿರಪರಾಧಿಗೆ ಅನ್ಯಾಯ ಮಾಡುವುದು ಸರಿಯಲ್ಲ.
ಙ್ಞಾನೋಕ್ತಿಗಳು 18 : 6 (ERVKN)
ಮೂಢನು ವಾದಕ್ಕೆ ಇಳಿಯುತ್ತಾನೆ; ಅವನ ಮಾತುಗಳು ಜಗಳವನ್ನು ಎಬ್ಬಿಸಿ, ಏಟಿಗಾಗಿ ಕೇಳಿಕೊಳ್ಳುತ್ತವೆ.
ಙ್ಞಾನೋಕ್ತಿಗಳು 18 : 7 (ERVKN)
ಮೂಢನು ಮಾತಿನಲ್ಲಿ ತನ್ನನ್ನೇ ನಾಶಪಡಿಸಿಕೊಳ್ಳುವನು. ಅವನ ಮಾತುಗಳೇ ಅವನಿಗೆ ಬಲೆಯಾಗುತ್ತವೆ.
ಙ್ಞಾನೋಕ್ತಿಗಳು 18 : 8 (ERVKN)
ಜನರಿಗೆ ಹರಟೆಮಾತನ್ನು ಕೇಳಲು ಇಷ್ಟ. ಹರಟೆ ಮಾತುಗಳು ರುಚಿಕರವಾದ ಆಹಾರದಂತಿವೆ.
ಙ್ಞಾನೋಕ್ತಿಗಳು 18 : 9 (ERVKN)
ಸೋಮಾರಿಯು ನಾಶಮಾಡುವ ವ್ಯಕ್ತಿಯಂತಿದ್ದಾನೆ.
ಙ್ಞಾನೋಕ್ತಿಗಳು 18 : 10 (ERVKN)
ಯೆಹೋವನ ಹೆಸರು ಬಲವಾದ ಗೋಪುರದಂತಿದೆ. ಒಳ್ಳೆಯವರು ಅದರೊಳಗೆ ಓಡಿಹೋಗಿ ಸುರಕ್ಷಿತವಾಗಿರುವರು.
ಙ್ಞಾನೋಕ್ತಿಗಳು 18 : 11 (ERVKN)
ಐಶ್ವರ್ಯವು ತಮ್ಮನ್ನು ಬಲವಾದ ಕೋಟೆಯಂತೆ ಕಾಪಾಡುತ್ತದೆ ಎಂಬುದು ಐಶ್ವರ್ಯವಂತರ ಭಾವನೆ.
ಙ್ಞಾನೋಕ್ತಿಗಳು 18 : 12 (ERVKN)
ಗರ್ವಿಯು ಬೇಗನೆ ಹಾಳಾಗುವನು; ದೀನನಾದರೋ ಸನ್ಮಾನವನ್ನು ಹೊಂದುವನು.
ಙ್ಞಾನೋಕ್ತಿಗಳು 18 : 13 (ERVKN)
ಗಮನವಿಟ್ಟು ಕೇಳದೆ ಉತ್ತರಿಸುವವನು ಮೂಢನೇ ಸರಿ; ಅವನು ನಾಚಿಕೆಗೆ ಒಳಗಾಗುವನು.
ಙ್ಞಾನೋಕ್ತಿಗಳು 18 : 14 (ERVKN)
ಅಸ್ವಸ್ಥನನ್ನು ಅವನ ಮನಸ್ಸು ಜೀವಂತವಾಗಿಡಬಲ್ಲದು. ಆದರೆ ಮುರಿದ ಆತ್ಮವನ್ನು ಯಾರು ಸಹಿಸಿಕೊಳ್ಳಬಲ್ಲರು?
ಙ್ಞಾನೋಕ್ತಿಗಳು 18 : 15 (ERVKN)
ಜ್ಞಾನಿಗೆ ಹೆಚ್ಚು ಕಲಿತುಕೊಳ್ಳುವುದಕ್ಕೆ ಇಷ್ಟ; ಆದ್ದರಿಂದ ಅವನು ಗಮನವಿಟ್ಟು ಕೇಳುವನು.
ಙ್ಞಾನೋಕ್ತಿಗಳು 18 : 16 (ERVKN)
ಪ್ರಮುಖನನ್ನು ಭೇಟಿಯಾಗಬೇಕಿದ್ದರೆ, ಅವನಿಗೆ ಒಂದು ಉಡುಗೊರೆಯನ್ನು ಕೊಡು. ಆಗ ನೀನು ಅವನನ್ನು ಸುಲಭವಾಗಿ ಭೇಟಿಯಾಗಬಹುದು.
ಙ್ಞಾನೋಕ್ತಿಗಳು 18 : 17 (ERVKN)
ಮೊದಲು ತನ್ನ ವಾದವನ್ನು ಮಂಡಿಸುವವನು ಯಾವಾಗಲೂ ನೀತಿವಂತನಂತೆ ಕಾಣುತ್ತಾನೆ. ಆದರೆ ಪ್ರತಿವಾದಿ ಎದ್ದಮೇಲೆ ಅವನ ನಿಜಪರೀಕ್ಷೆ ಆಗುವುದು.
ಙ್ಞಾನೋಕ್ತಿಗಳು 18 : 18 (ERVKN)
ಬಲಿಷ್ಠರಾದ ಇಬ್ಬರು ವಾದಮಾಡುತ್ತಿರುವಾಗ ನಿರ್ಧಾರಕ್ಕಾಗಿ ಚೀಟುಹಾಕಿದರೆ ಅವರ ಜಗಳ ಶಮನವಾಗುತ್ತದೆ.
ಙ್ಞಾನೋಕ್ತಿಗಳು 18 : 19 (ERVKN)
ಅವಮಾನಿತನಾದ ಸಹೋದರನನ್ನು ಗೆದ್ದುಕೊಳ್ಳುವುದು ಕೋಟೆಯುಳ್ಳ ಪಟ್ಟಣವನ್ನು ಗೆದ್ದುಕೊಳ್ಳುವುದಕ್ಕಿಂತಲೂ ಕಷ್ಟ, ಜಗಳಗಳು ಅರಮನೆಯ ಬಾಗಿಲಿನಂತೆ ಜನರನ್ನು ಪ್ರತ್ಯೇಕಗೊಳಿಸುತ್ತದೆ.
ಙ್ಞಾನೋಕ್ತಿಗಳು 18 : 20 (ERVKN)
ಒಬ್ಬನು ತಾನು ಹೇಳಿದ ಒಳ್ಳೆಯದಕ್ಕೇ ಆಗಲಿ ಕೆಟ್ಟದ್ದಕ್ಕೇ ಆಗಲಿ ಪ್ರತಿಫಲವನ್ನು ಪಡೆಯಲೇಬೇಕು.
ಙ್ಞಾನೋಕ್ತಿಗಳು 18 : 21 (ERVKN)
ಒಬ್ಬನ ಮಾತುಗಳು ಜೀವವನ್ನು ಉಳಿಸಬಲ್ಲವು ಅಥವಾ ಮರಣವನ್ನು ತರಬಲ್ಲವು. ಜನರು ತಮ್ಮ ಮಾತಿನ ಫಲವನ್ನು ಅನುಭವಿಸಲೇಬೇಕು.
ಙ್ಞಾನೋಕ್ತಿಗಳು 18 : 22 (ERVKN)
ಹೆಂಡತಿಯುಳ್ಳವನು ಸಂತೋಷವನ್ನೇ ಪಡೆದುಕೊಂಡಿದ್ದಾನೆ; ಯೆಹೋವನು ಅವನ ಬಗ್ಗೆ ಸಂತೋಷಪಡುವನು.
ಙ್ಞಾನೋಕ್ತಿಗಳು 18 : 23 (ERVKN)
ಬಡವನು ವಿನಯದಿಂದ ಬೇಡಿಕೊಳ್ಳುವನು; ಐಶ್ವರ್ಯವಂತನು ಬಿರುಸಾಗಿ ಉತ್ತರಕೊಡುವನು.
ಙ್ಞಾನೋಕ್ತಿಗಳು 18 : 24 (ERVKN)
ಒಬ್ಬನಿಗೆ ಬಹಳ ಮಂದಿ ಸ್ನೇಹಿತರಿದ್ದರೆ, ಅದು ಅವನನ್ನು ನಾಶಮಾಡಬಹುದು. ಆದರೆ ನಿಜವಾದ ಸ್ನೇಹಿತನು ಸಹೋದರನಿಗಿಂತಲೂ ನಂಬಿಗಸ್ತನಾಗಿರುವನು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24