ಅರಣ್ಯಕಾಂಡ 9 : 1 (ERVKN)
ಪಸ್ಕಹಬ್ಬ ಇಸ್ರೇಲರು ಈಜಿಪ್ಟ್ ದೇಶವನ್ನು ಬಿಟ್ಟುಬಂದ ನಂತರ ಎರಡನೆ ವರ್ಷದ ಮೊದಲನೆಯ ತಿಂಗಳಲ್ಲಿ ಸೀನಾಯಿ ಮರುಭೂಮಿಯಲ್ಲಿ ಯೆಹೋವನು ಮೋಶೆಯೊಡನೆ ಮಾತಾಡಿದನು. ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
ಅರಣ್ಯಕಾಂಡ 9 : 2 (ERVKN)
“ಇಸ್ರೇಲರು ನೇಮಕವಾದ ಕಾಲದಲ್ಲಿ ಪಸ್ಕಹಬ್ಬವನ್ನು ಆಚರಿಸಬೇಕು.
ಅರಣ್ಯಕಾಂಡ 9 : 3 (ERVKN)
ಅವರು ಈ ತಿಂಗಳ ಹದಿನಾಲ್ಕನೆಯ ದಿನದ ನಸುಸಂಜೆಯ ವೇಳೆ ಪಸ್ಕದ ಊಟವನ್ನು ಮಾಡಬೇಕು. ಅವರು ಇದನ್ನು ಪಸ್ಕಹಬ್ಬದ ಎಲ್ಲಾ ನಿಯಮಗಳ ಪ್ರಕಾರ ನೇಮಕವಾದ ಕಾಲದಲ್ಲಿ ಮಾಡಬೇಕು.”
ಅರಣ್ಯಕಾಂಡ 9 : 4 (ERVKN)
ಆದ್ದರಿಂದ ಮೋಶೆ ಇಸ್ರೇಲರಿಗೆ, ಪಸ್ಕಹಬ್ಬವನ್ನು ಆಚರಿಸಬೇಕೆಂದು ಹೇಳಿದನು.
ಅರಣ್ಯಕಾಂಡ 9 : 5 (ERVKN)
ಜನರು ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ನಸುಸಂಜೆಯ ವೇಳೆಯಲ್ಲಿ ಸೀನಾಯಿ ಮರುಭೂಮಿಯಲ್ಲಿ ಇದನ್ನು ಆಚರಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಪ್ರತಿಯೊಂದನ್ನೂ ಮಾಡಿದರು.
ಅರಣ್ಯಕಾಂಡ 9 : 6 (ERVKN)
ಆದರೆ ಕೆಲವು ಜನರು ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿ ಆ ದಿನದಲ್ಲಿ ಪಸ್ಕಹಬ್ಬವನ್ನು ಆಚರಿಸಲಾಗಲಿಲ್ಲ. ಆದ್ದರಿಂದ ಅವರು ಆ ದಿನ ಮೋಶೆ ಆರೋನರ ಬಳಿಗೆ ಬಂದು,
ಅರಣ್ಯಕಾಂಡ 9 : 7 (ERVKN)
“ನಾವು ಮನುಷ್ಯ ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿದ್ದೇವೆ. ಆದರೆ ನೇಮಕವಾದ ಕಾಲದಲ್ಲಿ ಯೆಹೋವನ ಪಸ್ಕಹಬ್ಬದ ಯಜ್ಞವನ್ನು ಇತರ ಇಸ್ರೇಲರೊಡನೆ ಅರ್ಪಿಸುವುದಕ್ಕೆ ಸಾಧ್ಯವಿಲ್ಲವೇ?” ಎಂದು ಕೇಳಿದರು.
ಅರಣ್ಯಕಾಂಡ 9 : 8 (ERVKN)
ಮೋಶೆಯು ಅವರಿಗೆ, “ಇಲ್ಲೇ ಇರಿ. ಇದರ ವಿಷಯದಲ್ಲಿ ಯೆಹೋವನು ಏನು ಹೇಳುತ್ತಾನೆಂದು ನಾನು ಆತನನ್ನು ವಿಚಾರಿಸುತ್ತೇನೆ” ಎಂದು ಹೇಳಿದನು.
ಅರಣ್ಯಕಾಂಡ 9 : 9 (ERVKN)
ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
ಅರಣ್ಯಕಾಂಡ 9 : 10 (ERVKN)
“ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸು: ನಿಮ್ಮಲ್ಲಿಯಾಗಲಿ ನಿಮ್ಮ ಸಂತತಿಯವರಲ್ಲಿಯಾಗಲಿ ಮನುಷ್ಯಶವ ಸೋಂಕಿದ್ದರಿಂದ ಅಶುದ್ಧರಾದವರೂ ದೂರಪ್ರಯಾಣದಲ್ಲಿರುವವರೂ ಸಹ ಯೆಹೋವನ ಪಸ್ಕಹಬ್ಬವನ್ನು ಆಚರಿಸಲೇಬೇಕು.
ಅರಣ್ಯಕಾಂಡ 9 : 11 (ERVKN)
ಅಂಥವರು ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದ ನಸುಸಂಜೆ ವೇಳೆಯಲ್ಲಿ ಪಸ್ಕಹಬ್ಬವನ್ನು ಆಚರಿಸಬೇಕು. ಆ ಸಮಯದಲ್ಲಿ ಅವರು ಪಸ್ಕದ ಕುರಿಮರಿಯ ಮಾಂಸವನ್ನು ಹುಳಿಯಿಲ್ಲದ ರೊಟ್ಟಿಗಳೊಡನೆ ಮತ್ತು ಕಹಿಯಾದ ಸೊಪ್ಪುಗಳೊಡನೆ ಊಟಮಾಡಬೇಕು.
ಅರಣ್ಯಕಾಂಡ 9 : 12 (ERVKN)
ಅದರಲ್ಲಿ ಯಾವುದನ್ನೂ ಮರುದಿನದವರೆಗೆ ಇಡಬಾರದು. ಅವರು ಅದೆಲ್ಲವನ್ನು ತಿಂದುಬಿಡಬೇಕು. ಆ ಕುರಿಮರಿಯ ಎಲುಬುಗಳನ್ನು ಮುರಿಯಬಾರದು. ಅವರು ಪಸ್ಕಹಬ್ಬದ ವಿಷಯವಾಗಿ ನೇಮಕವಾಗಿರುವ ನಿಯಮಗಳ ಪ್ರಕಾರವೇ ಅದನ್ನು ಆಚರಿಸಬೇಕು.
ಅರಣ್ಯಕಾಂಡ 9 : 13 (ERVKN)
ಆದರೆ ಯಾವನಾದರೂ ಶುದ್ಧನಾಗಿದ್ದರೂ ಪ್ರಯಾಣದಲ್ಲಿಲ್ಲದಿದ್ದರೂ ಪಸ್ಕಹಬ್ಬವನ್ನು ಆಚರಿಸದಿದ್ದರೆ, ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು. ಅವನು ಯೆಹೋವನಿಂದ ನೇಮಕವಾದ ಯಜ್ಞವನ್ನು ಸರಿಯಾದ ಕಾಲದಲ್ಲಿ ಸಮರ್ಪಿಸದೆ ಹೋದದ್ದರಿಂದ ಅವನು ದೋಷಿಯಾಗಿದ್ದಾನೆ ಮತ್ತು ಅವನಿಗೆ ಶಿಕ್ಷೆಯಾಗಬೇಕು.
ಅರಣ್ಯಕಾಂಡ 9 : 14 (ERVKN)
“ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯದೇಶಸ್ಥನು ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ, ಅದರ ವಿಷಯವಾದ ನಿಯಮಗಳ ಪ್ರಕಾರವೇ ಅದನ್ನು ಆಚರಿಸಬೇಕು. ಪರದೇಶದವನಿಗೂ ಸ್ವದೇಶದವನಿಗೂ ಒಂದೇ ವಿಧಿಯಿರಬೇಕು.”
ಅರಣ್ಯಕಾಂಡ 9 : 15 (ERVKN)
ಮೇಘಸ್ತಂಭ ಮತ್ತು ಅಗ್ನಿಸ್ತಂಭ ಇಸ್ರೇಲರು ಒಡಂಬಡಿಕೆಯ ಗುಡಾರವಾದ ಪವಿತ್ರ ಗುಡಾರವನ್ನು ಎತ್ತಿ ನಿಲ್ಲಿಸಿದ ದಿನದಲ್ಲಿ ಮೇಘವು ಅದರ ಮೇಲೆ ಮುಚ್ಚಿಕೊಂಡಿತು ಮತ್ತು ಅದು ರಾತ್ರಿಯಲ್ಲಿ ಬೆಂಕಿಯಂತೆ ಕಾಣಿಸುತ್ತಿತ್ತು.
ಅರಣ್ಯಕಾಂಡ 9 : 16 (ERVKN)
ಹೀಗೆ ಮೇಘವು ಯಾವಾಗಲೂ ದೇವದರ್ಶನಗುಡಾರವನ್ನು ಮುಚ್ಚಿಕೊಂಡಿರುವುದು. ರಾತ್ರಿವೇಳೆಯಲ್ಲಿ ಆ ಮೇಘವು ಬೆಂಕಿಯಂತೆ ಕಾಣಿಸುವುದು.
ಅರಣ್ಯಕಾಂಡ 9 : 17 (ERVKN)
ಆ ಮೇಘವು ಪವಿತ್ರ ಗುಡಾರದಿಂದ ಮೇಲಕ್ಕೆ ಎದ್ದಾಗಲೆಲ್ಲಾ ಇಸ್ರೇಲರು ಮುಂದಕ್ಕೆ ಪ್ರಯಾಣಮಾಡುವರು. ಆ ಮೇಘವು ನಿಂತಲ್ಲೆಲ್ಲಾ ಇಸ್ರೇಲರು ಪಾಳೆಯ ಮಾಡಿಕೊಳ್ಳುವರು.
ಅರಣ್ಯಕಾಂಡ 9 : 18 (ERVKN)
ಇಸ್ರೇಲರು ಯೆಹೋವನ ಸೂಚನೆಯನ್ನು ಹೊಂದಿದ ಮೇಲೆ ಪ್ರಯಾಣಮಾಡುವರು. ಆ ಮೋಡವು ಪವಿತ್ರಗುಡಾರದ ಮೇಲಿರುವ ತನಕ ಅವರು ತಾವಿರುವಲ್ಲಿಯೇ ಇರುವರು.
ಅರಣ್ಯಕಾಂಡ 9 : 19 (ERVKN)
ಕೆಲವು ಬಾರಿ ಆ ಮೇಘವು ಬಹುದಿನಗಳವರೆಗೂ ಪವಿತ್ರಗುಡಾರದ ಮೇಲೆ ಇರುವ ಸಂದರ್ಭದಲ್ಲಿ ಇಸ್ರೇಲರು ಯೆಹೋವನಿಗೆ ವಿಧೇಯರಾಗಿ ಮುಂದಕ್ಕೆ ಪ್ರಯಾಣಮಾಡಲಿಲ್ಲ.
ಅರಣ್ಯಕಾಂಡ 9 : 20 (ERVKN)
ಒಂದೊಂದು ವೇಳೆಯಲ್ಲಿ ಮೇಘವು ಕೆಲವು ದಿವಸ ಮಾತ್ರ ಪವಿತ್ರ ಗುಡಾರದ ಮೇಲೆ ನಿಂತಿರುವುದು. ಯೆಹೋವನ ಆಜ್ಞೆಯ ಪ್ರಕಾರ ಅವರು ಇಳಿದುಕೊಳ್ಳುತ್ತಿದ್ದರು ಮತ್ತು ಯೆಹೋವನ ಆಜ್ಞೆಯ ಪ್ರಕಾರ ಹೊರಡುತ್ತಿದ್ದರು.
ಅರಣ್ಯಕಾಂಡ 9 : 21 (ERVKN)
ಕೆಲವು ಸಮಯಗಳಲ್ಲಿ ಮೇಘವು ಸಾಯಂಕಾಲದಿಂದ ಹೊತ್ತಾರೆಯವರೆಗೂ ಇರುತ್ತಿತ್ತು; ಬೆಳಿಗ್ಗೆ ಅದು ಮೇಲಕ್ಕೆ ಎದ್ದಾಗ ಜನರು ಪ್ರಯಾಣ ಮಾಡುತ್ತಿದ್ದರು. ಮೋಡವು ಚಲಿಸಿದಾಗ ಅದು ಹಗಲಾಗಿರಲಿ ರಾತ್ರಿಯಾಗಿರಲಿ ಜನರು ಅದನ್ನು ಹಿಂಬಾಲಿಸುವರು.
ಅರಣ್ಯಕಾಂಡ 9 : 22 (ERVKN)
ಆ ಮೇಘವು ಪವಿತ್ರಗುಡಾರದ ಮೇಲೆ ಎರಡು ದಿನವಾಗಲಿ ಒಂದು ತಿಂಗಳಾಗಲಿ ಒಂದು ವರ್ಷವಾಗಲಿ ನಿಂತರೆ ಅದು ನಿಂತಿರುವ ತನಕ ಇಸ್ರೇಲರು ಪ್ರಯಾಣ ಮಾಡದೆ ಇಳಿದುಕೊಂಡೇ ಇರುವರು. ಅದು ಮೇಲಕ್ಕೆ ಎದ್ದಾಗ ಅವರು ಹೊರಡುವರು.
ಅರಣ್ಯಕಾಂಡ 9 : 23 (ERVKN)
ಹೀಗೆ ಯೆಹೋವನ ಸೂಚನೆಯಂತೆ ಜನರು ಪಾಳೆಯ ಮಾಡಿಕೊಳ್ಳುವರು; ಪ್ರಯಾಣ ಮುಂದುವರಿಸುವರು. ಮೋಶೆಯ ಮೂಲಕವಾಗಿ ಆಜ್ಞಾಪಿಸಿದಂತೆ ಜನರು ಯೆಹೋವನ ಸೂಚನೆಗಳನ್ನು ಲಕ್ಷ್ಯವಿಟ್ಟು ಅನುಸರಿಸಿ ನಡೆಯುತ್ತಿದ್ದರು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23