ಅರಣ್ಯಕಾಂಡ 30 : 1 (ERVKN)
ವಿಶೇಷ ಹರಕೆಗಳು ಮೋಶೆಯು ಇಸ್ರೇಲರ ಕುಲಪ್ರಧಾನರಿಗೆ ಹೇಳಿದ್ದೇನೆಂದರೆ: ಯೆಹೋವನು ಹೀಗೆ ಆಜ್ಞಾಪಿಸಿದ್ದಾನೆ:
ಅರಣ್ಯಕಾಂಡ 30 : 2 (ERVKN)
“ಯಾವನಾದರೂ ಯೆಹೋವನಿಗೆ ಇಂಥದ್ದನ್ನು ಕೊಡುತ್ತೇನೆಂದು ಹರಕೆ ಮಾಡಿದರೆ ಅಥವಾ ತಾನು ಇಂಥದ್ದನ್ನು ಮಾಡುವುದಿಲ್ಲ ಎಂದು ಆಣೆಯಿಟ್ಟುಕೊಂಡರೆ, ಅವನು ತನ್ನ ಮಾತನ್ನು ಮೀರದೆ ತಾನು ಹೇಳಿದಂತೆಯೇ ನೆರವೇರಿಸಬೇಕು.
ಅರಣ್ಯಕಾಂಡ 30 : 3 (ERVKN)
“ಇನ್ನೂ ತನ್ನ ತಂದೆಯ ಮನೆಯಲ್ಲಿರುವ ಯುವತಿಯು ಯೆಹೋವನಿಗೆ ಇಂಥದ್ದನ್ನು ಕೊಡುತ್ತೇನೆಂದು ಹರಕೆ ಮಾಡಿಕೊಂಡರೆ ಅಥವಾ ಇಂಥದ್ದನ್ನು ಮಾಡುವುದಿಲ್ಲ ಎಂದು ಆಣೆಯಿಟ್ಟುಕೊಂಡರೆ,
ಅರಣ್ಯಕಾಂಡ 30 : 4 (ERVKN)
ಅವಳ ತಂದೆಯು ಅವಳ ಹರಕೆಯನ್ನಾಗಲಿ ಆಣೆಯನ್ನಾಗಲಿ ಕೇಳಿಯೂ ಅದರ ಬಗ್ಗೆ ಅವಳಿಗೆ ಏನೂ ಹೇಳದಿದ್ದರೆ, ಆಕೆಯು ಅಂಥಾ ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು.
ಅರಣ್ಯಕಾಂಡ 30 : 5 (ERVKN)
ಆದರೆ ತಂದೆಯು ಆ ಸಂಗತಿಯನ್ನು ತಿಳಿದ ದಿನವೇ ಅದನ್ನು ಆಕ್ಷೇಪಿಸಿದರೆ, ಆಕೆಯು ಮಾಡಿದ ಹರಕೆಯನ್ನಾಗಲಿ ಇಟ್ಟುಕೊಂಡ ಆಣೆಯನ್ನಾಗಲಿ ನೆರವೇರಿಸಬೇಕಿಲ್ಲ. ತಂದೆಯು ಆಕ್ಷೇಪಿಸಿದ್ದರಿಂದ ಯೆಹೋವನು ಅವಳನ್ನು ಕ್ಷಮಿಸುವನು.
ಅರಣ್ಯಕಾಂಡ 30 : 6 (ERVKN)
“ಆದರೆ ಅವಳು ತನ್ನ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಿಲ್ಲದಿರುವಾಗಲೇ ಮದುವೆಯಾದರೆ,
ಅರಣ್ಯಕಾಂಡ 30 : 7 (ERVKN)
ಗಂಡನು ಅದರ ಬಗ್ಗೆ ತಿಳಿದ ದಿನದಂದು ಆಕೆಗೆ ಅದರ ಬಗ್ಗೆ ಏನೂ ಹೇಳದಿದ್ದರೆ, ಆಕೆ ತಾನು ಮಾಡಿದ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಬೇಕು.
ಅರಣ್ಯಕಾಂಡ 30 : 8 (ERVKN)
ಆದರೆ ಗಂಡನು ಅದನ್ನು ಕೇಳಿದ ದಿನವೇ ಆಕ್ಷೇಪಿಸಿದರೆ, ಆಕೆಯು ಮಾಡಿದ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಬೇಕಿಲ್ಲ. ಯೆಹೋವನು ಅವಳನ್ನು ಕ್ಷಮಿಸುವನು.
ಅರಣ್ಯಕಾಂಡ 30 : 9 (ERVKN)
“ವಿಧವೆಯಾಗಲಿ ವಿವಾಹವಿಚ್ಛೇಧನ ಹೊಂದಿದ ಸ್ತ್ರೀಯಾಗಲಿ ತಾನು ಮಾಡಿದ ಪ್ರತಿಯೊಂದು ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು.
ಅರಣ್ಯಕಾಂಡ 30 : 10 (ERVKN)
“ವಿವಾಹಿತ ಸ್ತ್ರೀಯು ಅಂಥಾ ಹರಕೆಯನ್ನಾಗಲಿ ಪ್ರಮಾಣವನ್ನಾಗಲಿ ಮಾಡಿದಾಗ,
ಅರಣ್ಯಕಾಂಡ 30 : 11 (ERVKN)
ಅವಳ ಗಂಡನು ತಿಳಿದು ಅಡ್ಡಿಮಾಡದೆ ಏನೂ ಹೇಳದಿದ್ದರೆ ಆಕೆಯು ಆ ಹರಕೆಗಳನ್ನೂ ಆಣೆಗಳನ್ನೂ ನೆರವೇರಿಸಬೇಕು.
ಅರಣ್ಯಕಾಂಡ 30 : 12 (ERVKN)
ಆದರೆ ಗಂಡನು ಅವುಗಳನ್ನು ತಿಳಿದಾಗಲೇ ರದ್ದುಗೊಳಿಸಿದರೆ, ಅವಳ ಎಲ್ಲ ಹರಕೆಗಳಿಗೆ ಮತ್ತು ಆಣೆಗಳಿಗೆ ಬೆಲೆಯಿರುವುದಿಲ್ಲ. ಯಾಕೆಂದರೆ ಗಂಡನು ಅವುಗಳನ್ನು ರದ್ದುಪಡಿಸಿದನು. ಆದ್ದರಿಂದ ಯೆಹೋವನು ಆಕೆಯನ್ನು ಕ್ಷಮಿಸುತ್ತಾನೆ.
ಅರಣ್ಯಕಾಂಡ 30 : 13 (ERVKN)
ಹೆಂಡತಿ ಮಾಡಿದ ಹರಕೆಯನ್ನೂ ಆಣೆಯನ್ನೂ ಸ್ಥಿರಪಡಿಸುವುದಕ್ಕಾಗಲಿ ರದ್ದುಪಡಿಸುವುದಕ್ಕಾಗಲಿ ಗಂಡನಿಗೆ ಅಧಿಕಾರವಿರುವುದು.
ಅರಣ್ಯಕಾಂಡ 30 : 14 (ERVKN)
ಆದರೆ ಅವಳ ಗಂಡನು ಅದನ್ನು ಕೇಳಿದ ದಿನದಿಂದ ಅದರ ಬಗ್ಗೆ ಆಕ್ಷೇಪಿಸದಿದ್ದರೆ, ಅವನು ಅವಳ ಎಲ್ಲಾ ಹರಕೆಗಳನ್ನು ಮತ್ತು ಆಣೆಗಳನ್ನು ಸ್ಥಿರಪಡಿಸಿದ್ದಾನೆ. ಯಾಕೆಂದರೆ ಅವನು ಅದರ ಬಗ್ಗೆ ಕೇಳಿದ ದಿನದಂದು ಅವಳಿಗೆ ಏನೂ ಹೇಳಲಿಲ್ಲ.
ಅರಣ್ಯಕಾಂಡ 30 : 15 (ERVKN)
ಆದರೆ ಅವನು ಅವುಗಳ ಬಗ್ಗೆ ಕೇಳಿ ಸ್ವಲ್ಪ ದಿನಗಳಾದ ಮೇಲೆ ಆಕೆಯ ಹರಕೆಗಳನ್ನಾಗಲಿ ವಾಗ್ದಾನಗಳನ್ನಾಗಲಿ ರದ್ದುಪಡಿಸಿದರೆ, ಆಕೆಯ ಹರಕೆಯನ್ನು ಮುರಿದದ್ದಕ್ಕಾಗಿ ಅವನು ಶಿಕ್ಷೆಯನ್ನು ಅನುಭವಿಸುವನು.”
ಅರಣ್ಯಕಾಂಡ 30 : 16 (ERVKN)
ಗಂಡಹೆಂಡತಿಯರ ಬಗ್ಗೆ ಮತ್ತು ತಂದೆಯೊಡನೆ ಇನ್ನೂ ಮನೆಯಲ್ಲಿರುವ ಮಗಳ ವಿಷಯದಲ್ಲಿ ಯೆಹೋವನು ಮೋಶೆಗೆ ಈ ಆಜ್ಞೆಗಳನ್ನು ಕೊಟ್ಟನು.

1 2 3 4 5 6 7 8 9 10 11 12 13 14 15 16