ಅರಣ್ಯಕಾಂಡ 1 : 1 (ERVKN)
ಮೋಶೆಯು ಇಸ್ರೇಲರನ್ನು ಲೆಕ್ಕಿಸಿದ್ದು ಯೆಹೋವನು ದೇವದರ್ಶನಗುಡಾರದೊಳಗೆ ಮೋಶೆಯೊಡನೆ ಮಾತಾಡಿದನು. ಆಗ ದೇವದರ್ಶನಗುಡಾರವು ಸೀನಾಯಿ ಮರುಭೂಮಿಯಲ್ಲಿತ್ತು. ಇಸ್ರೇಲರು ಈಜಿಪ್ಟನ್ನು ಬಿಟ್ಟ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಇದು ನಡೆಯಿತು. ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
ಅರಣ್ಯಕಾಂಡ 1 : 2 (ERVKN)
“ಇಸ್ರೇಲ್ ಜನರೆಲ್ಲರನ್ನು ಅವರವರ ಗೋತ್ರ ಕುಟುಂಬಗಳ ಪ್ರಕಾರ ಲೆಕ್ಕಿಸಿ ಪ್ರತಿಯೊಬ್ಬನ ಹೆಸರನ್ನೂ ಪಟ್ಟಿಮಾಡಿ,
ಅರಣ್ಯಕಾಂಡ 1 : 3 (ERVKN)
ನೀನೂ ಆರೋನನೂ ಇಸ್ರೇಲರಲ್ಲಿ ಎಲ್ಲಾ ಪುರುಷರನ್ನು ಲೆಕ್ಕಿಸಬೇಕು. ಇಸ್ರೇಲ್ ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸುಳ್ಳ ಪುರುಷರನ್ನು ಲೆಕ್ಕಿಸು. ಅವರನ್ನು ಅವರವರ ವಿಭಾಗಗಳಿಗೆ ಅನುಸಾರವಾಗಿ ಪಟ್ಟಿಮಾಡು.
ಅರಣ್ಯಕಾಂಡ 1 : 4 (ERVKN)
ಪ್ರತಿಯೊಂದು ಕುಲದ ಕುಟುಂಬದ ನಾಯಕನು ನಿಮಗೆ ಸಹಾಯಮಾಡಬೇಕು
ಅರಣ್ಯಕಾಂಡ 1 : 5 (ERVKN)
ನಿಮ್ಮೊಡನಿದ್ದು ನಿಮಗೆ ಸಹಾಯಮಾಡುವ ಪುರುಷರು ಯಾರೆಂದರೆ: ರೂಬೇನ್ ಕುಲದಿಂದ ಶೆದೇಯೂರನ ಮಗನಾದ ಎಲೀಚೂರ್.
ಅರಣ್ಯಕಾಂಡ 1 : 6 (ERVKN)
ಸಿಮೆಯೋನ್ ಕುಲದಿಂದ ಚೂರೀಷದ್ದೈಯ ಮಗನಾದ ಶೆಲುಮೀಯೇಲ್;
ಅರಣ್ಯಕಾಂಡ 1 : 7 (ERVKN)
ಯೆಹೂದ ಕುಲದಿಂದ ಅಮ್ಮೀನಾದ್ವಾನ ಮಗನಾದ ನಹಶೋನ್;
ಅರಣ್ಯಕಾಂಡ 1 : 8 (ERVKN)
ಇಸ್ಸಾಕಾರ್ ಕುಲದಿಂದ ಚೂವಾರನ ಮಗನಾದ ನೆತನೇಲ್;
ಅರಣ್ಯಕಾಂಡ 1 : 9 (ERVKN)
ಜೆಬುಲೂನ್ ಕುಲದಿಂದ ಹೇಲೋನನ ಮಗನಾದ ಎಲೀಯಾಬ್;
ಅರಣ್ಯಕಾಂಡ 1 : 10 (ERVKN)
ಯೋಸೇಫನ ಸಂತಾನದಿಂದ: ಎಫ್ರಾಯೀಮ್ ಕುಲದಿಂದ ಅಮ್ಮೀಹೂದನ ಮಗನಾದ ಎಲೀಷಾಮಾ; ಮನಸ್ಸೆ ಕುಲದಿಂದ ಪೆದಾಚೂರನ ಮಗನಾದ ಗಮ್ಲೀಯೇಲ್;
ಅರಣ್ಯಕಾಂಡ 1 : 11 (ERVKN)
ಬೆನ್ಯಾಮೀನ್ ಕುಲದಿಂದ ಗಿದ್ಯೋನಿಯ ಮಗನಾದ ಅಬೀದಾನ್;
ಅರಣ್ಯಕಾಂಡ 1 : 12 (ERVKN)
ದಾನ್ ಕುಲದಿಂದ ಅಮ್ಮಾಷದ್ದೈಯ ಮಗನಾದ ಅಹೀಗೆಜೆರ್;
ಅರಣ್ಯಕಾಂಡ 1 : 13 (ERVKN)
ಆಶೇರ್ ಕುಲದಿಂದ ಒಕ್ರಾನನ ಮಗನಾದ ಪಗೀಯೇಲ್;
ಅರಣ್ಯಕಾಂಡ 1 : 14 (ERVKN)
ಗಾದ್ ಕುಲದಿಂದ ರೆಗೂವೇಲನ ಮಗನಾದ ಎಲ್ಯಾಸಾಫ್;
ಅರಣ್ಯಕಾಂಡ 1 : 15 (ERVKN)
ನಫ್ತಾಲಿ ಕುಲದಿಂದ ಏನಾನನ ಮಗನಾದ ಅಹೀರ.”
ಅರಣ್ಯಕಾಂಡ 1 : 16 (ERVKN)
ಸರ್ವಸಮೂಹದವರೊಳಗಿಂದ ಆರಿಸಲ್ಪಟ್ಟಿದ್ದ ಇವರು ತಮ್ಮ ಪೂರ್ವಿಕರ ಕುಲಗಳಿಗೆ ನಾಯಕರು ಮತ್ತು ಇಸ್ರೇಲರಿಗೆ ಸಹಸ್ರಾಧಿಪತಿಗಳಾಗಿದ್ದರು.
ಅರಣ್ಯಕಾಂಡ 1 : 17 (ERVKN)
ಹೆಸರೆಸರಾಗಿ ಆರಿಸಲ್ಪಟ್ಟ ಈ ಜನರನ್ನು ಮೋಶೆ ಆರೋನರು ತೆಗೆದುಕೊಂಡರು.
ಅರಣ್ಯಕಾಂಡ 1 : 18 (ERVKN)
ಎರಡನೆ ತಿಂಗಳಿನ ಮೊದಲನೆ ದಿನದಲ್ಲಿ ಎಲ್ಲಾ ಜನರು ಒಟ್ಟಾಗಿ ಸೇರಿಬಂದರು. ಜನರು ತಮ್ಮತಮ್ಮ ಕುಟುಂಬಗಳಿಗನುಸಾರವಾಗಿ, ಗೋತ್ರಗಳಿಗನುಸಾರವಾಗಿ ಪಟ್ಟಿ ಮಾಡಿಸಿದರು. ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 19 (ERVKN)
ಯೆಹೋವನು ಆಜ್ಞಾಪಿಸಿದ ಪ್ರಕಾರವೇ ಮೋಶೆಯು ಮಾಡಿದನು. ಜನರು ಸೀನಾಯಿ ಮರುಭೂಮಿಯಲ್ಲಿದ್ದಾಗ ಮೋಶೆಯು ಅವರನ್ನು ಲೆಕ್ಕಿಸಿದನು.
ಅರಣ್ಯಕಾಂಡ 1 : 20 (ERVKN)
ಅವರು ಇಸ್ರೇಲನ ಚೊಚ್ಚಲ ಮಗನಾದ ರೂಬೇನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿ ಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ ಮತ್ತು ಕುಟುಂಬಗಳಿಗನುಸಾರವಾಗಿ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 21 (ERVKN)
ರೂಬೇನ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 46, 500
ಅರಣ್ಯಕಾಂಡ 1 : 22 (ERVKN)
ಅವರು ಸಿಮೆಯೋನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ ಮತ್ತು ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 23 (ERVKN)
ಸಿಮೆಯೋನ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 59, 300
ಅರಣ್ಯಕಾಂಡ 1 : 24 (ERVKN)
ಗಾದ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ ಮತ್ತು ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 25 (ERVKN)
ಗಾದ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 45, 650
ಅರಣ್ಯಕಾಂಡ 1 : 26 (ERVKN)
ಯೆಹೂದನ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿಯೂ ಕುಟುಂಬಗಳಿಗನುಸಾರವಾಗಿಯೂ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 27 (ERVKN)
ಯೆಹೂದನ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 74, 600
ಅರಣ್ಯಕಾಂಡ 1 : 28 (ERVKN)
ಇಸ್ಸಾಕಾರ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 29 (ERVKN)
ಇಸ್ಸಾಕಾರ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 54, 400
ಅರಣ್ಯಕಾಂಡ 1 : 30 (ERVKN)
ಜೆಬುಲೂನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 31 (ERVKN)
ಜೆಬುಲೂನ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 57, 400
ಅರಣ್ಯಕಾಂಡ 1 : 32 (ERVKN)
ಯೋಸೇಫನ ಮಗನಾದ ಎಫ್ರಾಯೀಮ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 33 (ERVKN)
ಎಫ್ರಾಯೀಮ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 40, 500
ಅರಣ್ಯಕಾಂಡ 1 : 34 (ERVKN)
ಯೋಸೇಫನ ಮಗನಾದ ಮನಸ್ಸೆಯ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 35 (ERVKN)
ಮನಸ್ಸೆ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 32, 200
ಅರಣ್ಯಕಾಂಡ 1 : 36 (ERVKN)
ಬೆನ್ಯಾಮೀನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 37 (ERVKN)
ಬೆನ್ಯಾಮೀನನ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 35, 400
ಅರಣ್ಯಕಾಂಡ 1 : 38 (ERVKN)
ದಾನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 39 (ERVKN)
ದಾನನ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 62, 700
ಅರಣ್ಯಕಾಂಡ 1 : 40 (ERVKN)
ಆಶೇರ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 41 (ERVKN)
ಆಶೇರ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 41, 500
ಅರಣ್ಯಕಾಂಡ 1 : 42 (ERVKN)
ನಫ್ತಾಲಿ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು.
ಅರಣ್ಯಕಾಂಡ 1 : 43 (ERVKN)
ನಫ್ತಾಲಿಯ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 53, 400
ಅರಣ್ಯಕಾಂಡ 1 : 44 (ERVKN)
ಮೋಶೆ, ಆರೋನ ಮತ್ತು ಇಸ್ರೇಲರ ಹನ್ನೆರಡು ಮಂದಿ ನಾಯಕರು ಈ ಜನರನ್ನು ಲೆಕ್ಕಿಸಿದರು. (ಪ್ರತಿಯೊಬ್ಬ ನಾಯಕನು ತನ್ನ ಕುಲದ ಪ್ರತಿನಿಧಿಯಾಗಿದ್ದನು.)
ಅರಣ್ಯಕಾಂಡ 1 : 45 (ERVKN)
ಅವರು ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಪ್ರತಿ ಪುರುಷನನ್ನು ಲೆಕ್ಕಿಸಿದರು. ಪ್ರತಿಯೊಬ್ಬನೂ ಅವನ ಕುಟುಂಬದೊಡನೆ ಲೆಕ್ಕಿಸಲ್ಪಟ್ಟನು.
ಅರಣ್ಯಕಾಂಡ 1 : 46 (ERVKN)
ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 6,03, 550
ಅರಣ್ಯಕಾಂಡ 1 : 47 (ERVKN)
ಆದರೆ ಲೇವಿ ಕುಲದ ಕುಟುಂಬಗಳು ಇತರ ಇಸ್ರೇಲರೊಡನೆ ಲೆಕ್ಕಿಸಲ್ಪಡಲಿಲ್ಲ.
ಅರಣ್ಯಕಾಂಡ 1 : 48 (ERVKN)
ಯಾಕೆಂದರೆ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,
ಅರಣ್ಯಕಾಂಡ 1 : 49 (ERVKN)
“ಲೇವಿ ಕುಲದ ಪುರುಷರನ್ನು ಲೆಕ್ಕಿಸಬೇಡ. ಅವರನ್ನು ಉಳಿದ ಇಸ್ರೇಲರ ಜನಗಣತಿಯೊಡನೆ ಸೇರಿಸಬಾರದು.
ಅರಣ್ಯಕಾಂಡ 1 : 50 (ERVKN)
ಒಡಂಬಡಿಕೆಯ ಪವಿತ್ರ ಗುಡಾರವನ್ನು ನೋಡಿಕೊಳ್ಳುವ ಜವಾಬ್ದಾರಿಯು ಲೇವಿಯರಿಗೆ ಸೇರಿರುವುದರಿಂದ ಅವರಿಗೆ ಅದನ್ನು ತಿಳಿಸು. ಅವರು ಅದನ್ನೂ ಅದರ ಉಪಕರಣಗಳನ್ನೂ ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಯೊಂದನ್ನೂ ನೋಡಿಕೊಳ್ಳಬೇಕು. ಅವರು ಪವಿತ್ರ ಗುಡಾರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಹೊತ್ತುಕೊಂಡು ಹೋಗಬೇಕು. ಅವರು ಅದರ ಸುತ್ತಲೂ ಪಾಳೆಯಮಾಡಿಕೊಂಡು ಅದನ್ನು ನೋಡಿಕೊಳ್ಳಬೇಕು.
ಅರಣ್ಯಕಾಂಡ 1 : 51 (ERVKN)
ಪವಿತ್ರ ಗುಡಾರವನ್ನು ತೆಗೆದುಕೊಂಡು ಹೋಗುವಾಗಲೆಲ್ಲಾ ಲೇವಿಯರೇ ಅದನ್ನು ಬಿಚ್ಚಬೇಕು, ಇಳಿಸುವಾಗಲೆಲ್ಲಾ ಲೇವಿಯರೇ ಅದನ್ನು ಹಾಕಬೇಕು. ಪವಿತ್ರ ಗುಡಾರವನ್ನು ನೋಡಿಕೊಳ್ಳುವವರು ಅವರೇ. ಲೇವಿ ಕುಲಕ್ಕೆ ಸೇರದ ಯಾವನಾದರೂ ಅದರ ಸಮೀಪಕ್ಕೆ ಬಂದರೆ, ಅವನಿಗೆ ಮರಣಶಿಕ್ಷೆಯಾಗಬೇಕು.
ಅರಣ್ಯಕಾಂಡ 1 : 52 (ERVKN)
ಇಸ್ರೇಲರ ಆಯಾ ದಂಡುಗಳು ತಮ್ಮತಮ್ಮ ಕುಲದ ಧ್ವಜ ಇರುವಲ್ಲಿಯೇ ಪಾಳೆಯ ಮಾಡಿಕೊಳ್ಳಬೇಕು.
ಅರಣ್ಯಕಾಂಡ 1 : 53 (ERVKN)
ಆದರೆ ಲೇವಿಯರು ಮಾತ್ರ ಪವಿತ್ರ ಗುಡಾರದ ಸುತ್ತಲೂ ತಮ್ಮ ಪಾಳೆಯ ಮಾಡಿಕೊಳ್ಳಬೇಕು. ಹೀಗೆ ಲೇವಿಯರು ಒಡಂಬಡಿಕೆಯ ಪವಿತ್ರ ಗುಡಾರವನ್ನು ಕಾಯುವರು; ಇಸ್ರೇಲರಿಗೆ ಯಾವ ಕೇಡೂ ಸಂಭವಿಸದಂತೆ ಅವರು ಪವಿತ್ರ ಗುಡಾರವನ್ನು ಸಂರಕ್ಷಿಸುವರು.”
ಅರಣ್ಯಕಾಂಡ 1 : 54 (ERVKN)
ಹೀಗೆ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದ ಪ್ರತಿಯೊಂದನ್ನು ಇಸ್ರೇಲರು ಮಾಡಿದರು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54