ಮತ್ತಾಯನು 1 : 1 (ERVKN)
{ಯೇಸುವಿನ ವಂಶಾವಳಿ} (ಲೂಕ 3:23-38) [PS] ಯೇಸು ಕ್ರಿಸ್ತನ ವಂಶಾವಳಿಯಿದು. ಆತನು ದಾವೀದನ ವಂಶದವನು. ದಾವೀದನು ಅಬ್ರಹಾಮನ ವಂಶದವನು.
ಮತ್ತಾಯನು 1 : 2 (ERVKN)
ಅಬ್ರಹಾಮನು ಇಸಾಕನ ತಂದೆ. ಇಸಾಕನು ಯಾಕೋಬನ ತಂದೆ. ಯಾಕೋಬನು ಯೆಹೂದ ಮತ್ತು ಅವನ ಸಹೋದರರ ತಂದೆ.
ಮತ್ತಾಯನು 1 : 3 (ERVKN)
ಯೆಹೂದನು ಪೆರೆಚನ ಮತ್ತು ಜೆರಹನ ತಂದೆ. (ಅವರ ತಾಯಿ ತಾಮರಳು.) ಪೆರೆಚನು ಹೆಚ್ರೋನನ ತಂದೆ. ಹೆಚ್ರೋನನು ಅರಾಮನ ತಂದೆ.
ಮತ್ತಾಯನು 1 : 4 (ERVKN)
ಅರಾಮನು ಅಮ್ಮಿನಾದಾಬನ ತಂದೆ. ಅಮ್ಮಿನಾದಾಬನು ನಹಶೋನನ ತಂದೆ. ನಹಶೋನನು ಸಲ್ಮೋನನ ತಂದೆ.
ಮತ್ತಾಯನು 1 : 5 (ERVKN)
ಸಲ್ಮೋನನು ಬೋವಜನ ತಂದೆ. (ಬೋವಜನ ತಾಯಿ ರಹಾಬಳು.) ಬೋವಜನು ಓಬೇದನ ತಂದೆ. (ಓಬೇದನ ತಾಯಿ ರೂತಳು.) ಓಬೇದನು ಇಷಯನ ತಂದೆ.
ಮತ್ತಾಯನು 1 : 6 (ERVKN)
ಇಷಯನು ಅರಸನಾದ ದಾವೀದನ ತಂದೆ. ದಾವೀದನು ಸೊಲೊಮೋನನ ತಂದೆ. (ಸೊಲೊಮೋನನ ತಾಯಿ ಊರೀಯನ ಹೆಂಡತಿಯಾಗಿದ್ದಳು.)
ಮತ್ತಾಯನು 1 : 7 (ERVKN)
ಸೊಲೊಮೋನನು ರೆಹಬ್ಬಾಮನ ತಂದೆ. ರೆಹಬ್ಬಾಮನು ಅಬೀಯನ ತಂದೆ. ಅಬೀಯನು ಆಸನ ತಂದೆ.
ಮತ್ತಾಯನು 1 : 8 (ERVKN)
ಆಸನು ಯೆಹೋಷಾಫಾಟನ ತಂದೆ. ಯೆಹೋಷಾಫಾಟನು ಯೆಹೋರಾಮನ ತಂದೆ. ಯೆಹೋರಾಮನು ಉಜ್ಜೀಯನ ತಂದೆ.
ಮತ್ತಾಯನು 1 : 9 (ERVKN)
ಉಜ್ಜೀಯನು ಯೋತಾಮನ ತಂದೆ. ಯೋತಾಮನು ಆಹಾಜನ ತಂದೆ. ಆಹಾಜನು ಹಿಜ್ಕೀಯನ ತಂದೆ.
ಮತ್ತಾಯನು 1 : 10 (ERVKN)
ಹಿಜ್ಕೀಯನು ಮನಸ್ಸೆಯ ತಂದೆ. ಮನಸ್ಸೆಯು ಆಮೋನನ ತಂದೆ. ಆಮೋನನು ಯೋಷೀಯನ ತಂದೆ.
ಮತ್ತಾಯನು 1 : 11 (ERVKN)
ಯೋಷೀಯನು ಯೆಕೊನ್ಯ ಮತ್ತು ಅವನ ಸಹೋದರರ ತಂದೆ. (ಈ ಸಮಯದಲ್ಲಿಯೇ ಯೆಹೂದ್ಯ ಜನರನ್ನು ಗುಲಾಮಗಿರಿಗಾಗಿ ಬಾಬಿಲೋನಿಗೆ ಕೊಂಡೊಯ್ದದ್ದು.)
ಮತ್ತಾಯನು 1 : 12 (ERVKN)
ಯೆಹೂದ್ಯರನ್ನು ಬಾಬಿಲೋನಿಗೆ ಕೊಂಡೊಯ್ದ ನಂತರದ ಕುಟುಂಬದ ಚರಿತ್ರೆ: ಯೆಕೊನ್ಯನು ಶೆಯಲ್ತಿಯೇಲನ ತಂದೆ. ಶೆಯಲ್ತಿಯೇಲನು ಜೆರುಬ್ಬಾಬೆಲನ ತಂದೆ.
ಮತ್ತಾಯನು 1 : 13 (ERVKN)
ಜೆರುಬ್ಬಾಬೆಲನು ಅಬಿಹೂದನ ತಂದೆ. ಅಬಿಹೂದನು ಎಲ್ಯಕೀಮನ ತಂದೆ. ಎಲ್ಯಕೀಮನು ಅಜೋರನ ತಂದೆ.
ಮತ್ತಾಯನು 1 : 14 (ERVKN)
ಅಜೋರನು ಸದೋಕನ ತಂದೆ. ಸದೋಕನು ಅಖೀಮನ ತಂದೆ. ಅಖೀಮನು ಎಲಿಹೂದನ ತಂದೆ.
ಮತ್ತಾಯನು 1 : 15 (ERVKN)
ಎಲಿಹೂದನು ಎಲಿಯಾಜರನ ತಂದೆ. ಎಲಿಯಾಜರನು ಮತ್ತಾನನ ತಂದೆ. ಮತ್ತಾನನು ಯಾಕೋಬನ ತಂದೆ.
ಮತ್ತಾಯನು 1 : 16 (ERVKN)
ಯಾಕೋಬನು ಯೋಸೇಫನ ತಂದೆ. ಯೋಸೇಫನು ಮರಿಯಳ ಗಂಡ. ಮರಿಯಳು ಯೇಸುವಿನ ತಾಯಿ. ಯೇಸುವನ್ನು ಕ್ರಿಸ್ತ [*ಕ್ರಿಸ್ತನು ಇದರರ್ಥ “ಅಭಿಷಿಕ್ತನು” (ಮೆಸ್ಸೀಯನು) ಅಥವಾ ‘ದೇವರಿಂದ ಆರಿಸಲ್ಪಟ್ಟವನು.’] ನೆಂದು ಕರೆಯುತ್ತಿದ್ದರು. [PS]
ಮತ್ತಾಯನು 1 : 17 (ERVKN)
ಅಬ್ರಹಾಮನಿಂದಿಡಿದು ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು. ದಾವೀದನಿಂದಿಡಿದು ಬಾಬಿಲೋನಿಗೆ ಸೆರೆಯೊಯ್ದ ಸಮಯದವರೆಗೆ ಹದಿನಾಲ್ಕು ತಲೆಮಾರುಗಳು. ಬಾಬಿಲೋನಿಗೆ ಸೆರೆಹಿಡಿದುಕೊಂಡು ಹೋದಂದಿನಿಂದ ಕ್ರಿಸ್ತನು ಹುಟ್ಟುವವರೆಗೆ ಹದಿನಾಲ್ಕು ತಲೆಮಾರುಗಳು. [PE][PS]
ಮತ್ತಾಯನು 1 : 18 (ERVKN)
{ಯೇಸು ಕ್ರಿಸ್ತನ ಜನನ} (ಲೂಕ 2:1-7) [PS] ಯೇಸು ಕ್ರಿಸ್ತನ ತಾಯಿ ಮರಿಯಳು. ಯೇಸುವಿನ ಜನನ ಈ ರೀತಿ ಸಂಭವಿಸಿತು: ಮದುವೆಮಾಡಿಕೊಳ್ಳಲು ಯೋಸೇಫನಿಗೂ ಮರಿಯಳಿಗೂ ನಿಶ್ಚಿತಾರ್ಥವಾಗಿತ್ತು. ಆದರೆ ಮದುವೆಗೆ ಮೊದಲೇ ತಾನು ಗರ್ಭಿಣಿಯಾಗಿರುವುದು ಮರಿಯಳಿಗೆ ತಿಳಿದುಬಂತು. ಮರಿಯಳು ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಳು.
ಮತ್ತಾಯನು 1 : 19 (ERVKN)
ಮರಿಯಳನ್ನು ಮದುವೆಯಾಗಲಿದ್ದ ಯೋಸೇಫನು ನೀತಿವಂತನಾಗಿದ್ದನು. ಮರಿಯಳನ್ನು ಜನರ ಮುಂದೆ ನಾಚಿಕೆಪಡಿಸಲು ಅವನು ಇಷ್ಟಪಡಲಿಲ್ಲ. ಆದ್ದರಿಂದ ಅವನು ಗುಟ್ಟಾಗಿ ನಿಶ್ಚಿತಾರ್ಥವನ್ನು ರದ್ದುಗೊಳಿಸಬೇಕೆಂದಿದ್ದನು. [PE][PS]
ಮತ್ತಾಯನು 1 : 20 (ERVKN)
ಯೋಸೇಫನು ಹೀಗೆ ಆಲೋಚಿಸಿಕೊಂಡನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಆ ದೂತನು, “ದಾವೀದನ ಮಗನಾದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯಾಗಿ ಸ್ವೀಕರಿಸಲು ಭಯಪಡಬೇಡ. ಆಕೆ ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಾಳೆ.
ಮತ್ತಾಯನು 1 : 21 (ERVKN)
ಆಕೆ ಒಬ್ಬ ಮಗನನ್ನು ಹೆರುವಳು. ನೀನು ಆ ಮಗುವಿಗೆ ಯೇಸು ಎಂದು ಹೆಸರಿಡುವೆ. ನೀನು ಆತನಿಗೆ ಆ ಹೆಸರನ್ನೇ ಇಡು; ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು” ಎಂದು ಹೇಳಿದನು. [PE][PS]
ಮತ್ತಾಯನು 1 : 22 (ERVKN)
ಪ್ರವಾದಿಯ ಮೂಲಕ ಪ್ರಭು ತಿಳಿಸಿದ್ದೆಲ್ಲ ನೆರವೇರುವಂತೆ ಇದೆಲ್ಲಾ ನಡೆಯಿತು.
ಮತ್ತಾಯನು 1 : 23 (ERVKN)
ಅದೇನೆಂದರೆ: “ಕನ್ನಿಕೆಯೊಬ್ಬಳು ಗರ್ಭಿಣಿಯಾಗಿ ಒಬ್ಬ ಮಗನಿಗೆ ಜನ್ಮ ಕೊಡುತ್ತಾಳೆ. ಆತನಿಗೆ ಇಮ್ಮಾನುವೇಲ್ ಎಂಬ ಹೆಸರನ್ನು ಇಡುವರು.” [✡ಉಲ್ಲೇಖನ: ಯೆಶಾಯ 7:14.] (ಇಮ್ಮಾನುವೇಲ್ ಎಂದರೆ “ದೇವರು ನಮ್ಮ ಸಂಗಡ ಇದ್ದಾನೆ” ಎಂದರ್ಥ.) [PE][PS]
ಮತ್ತಾಯನು 1 : 24 (ERVKN)
ಯೋಸೇಫನು ಎಚ್ಚರಗೊಂಡ ಮೇಲೆ ಪ್ರಭುವಿನ ದೂತನು ಕನಸಿನಲ್ಲಿ ಹೇಳಿದ್ದಂತೆಯೇ ಮರಿಯಳನ್ನು ಪತ್ನಿಯನ್ನಾಗಿ ಸ್ವೀಕರಿಸಿಕೊಂಡನು.
ಮತ್ತಾಯನು 1 : 25 (ERVKN)
ಆದರೆ ಮರಿಯಳು ಮಗನನ್ನು ಹೆರುವ ತನಕ ಯೋಸೇಫನು ಅವಳೊಂದಿಗೆ ಶರೀರ ಸಂಬಂಧವಿಲ್ಲದೆ ಇದ್ದನು. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25

BG:

Opacity:

Color:


Size:


Font: