ಲೂಕನು 3 : 1 (ERVKN)
ಯೋಹಾನನ ಬೋಧನೆ (ಮತ್ತಾಯ 3:1-12; ಮಾರ್ಕ 1:1-8; ಯೋಹಾನ 1:19-28) ಚಕ್ರವರ್ತಿಯಾದ ತಿಬೇರಿಯಸ್ ಸೀಸರನ ಆಳ್ವಿಕೆಯ ಹದಿನೈದನೇ ವರ್ಷ ಅದಾಗಿತ್ತು. ಆಗ, ಪೊಂತ್ಯ ಪಿಲಾತನು ಜುದೇಯ ಪ್ರಾಂತ್ಯಕ್ಕೂ ಹೆರೋದನು ಗಲಿಲಾಯಕ್ಕೂ ಹೆರೋದನ ಸಹೋದರನಾದ ಫಿಲಿಪ್ಪನು ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೂ ಲೂಸನ್ಯನು ಅಬಿಲೇನೆ ಪ್ರಾಂತ್ಯಕ್ಕೂ ಅಧಿಪತಿಯಾಗಿದ್ದರು.
ಲೂಕನು 3 : 2 (ERVKN)
ಅನ್ನನು ಮತ್ತು ಕಾಯಫನು ಮಹಾಯಾಜಕರಾಗಿದ್ದರು. *ಮಹಾಯಾಜಕ ಪ್ರಾಮುಖ್ಯರಾದ ಯೆಹೂದ್ಯಯಾಜಕರು. ಆ ಸಮಯದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ದೇವರಿಂದ ಆಜ್ಞೆಯೊಂದು ಬಂತು. ಯೋಹಾನನು ಗುಡ್ಡಗಾಡಿನಲ್ಲಿ ವಾಸವಾಗಿದ್ದನು.
ಲೂಕನು 3 : 3 (ERVKN)
ಯೋಹಾನನು ಜೋರ್ಡನ್ ನದಿಯ ಸುತ್ತಲಿರುವ ಪ್ರದೇಶದಲ್ಲೆಲ್ಲಾ ಸಂಚರಿಸಿ, ತಮ್ಮ ಪಾಪಪರಿಹಾರಕ್ಕಾಗಿ ಅವರು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಜನರಿಗೆ ತಿಳಿಸಿದನು.
ಲೂಕನು 3 : 4 (ERVKN)
ಯೆಶಾಯ ಪ್ರವಾದಿಯು ತನ್ನ ಗ್ರಂಥದಲ್ಲಿ ಬರೆದಿರುವಂತೆಯೇ ಇದು ನಡೆಯಿತು. ಅದೇನೆಂದರೆ: “ ‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಮಾಡಿರಿ. ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ.
ಲೂಕನು 3 : 5 (ERVKN)
ಪ್ರತಿಯೊಂದು ಕಣಿವೆಯು ಮುಚ್ಚಲ್ಪಡುವವು. ಪ್ರತಿಯೊಂದು ಬೆಟ್ಟಗುಡ್ಡಗಳು ಸಮನಾಗಿ ಮಾಡಲ್ಪಡುವವು.
ಡೊಂಕಾದ ದಾರಿಗಳು ನೀಟಾಗುವವು. ಕೊರಕಲಾದ ದಾರಿಗಳು ಸಮವಾಗುವವು.
ಲೂಕನು 3 : 6 (ERVKN)
ಪ್ರತಿಯೊಬ್ಬನೂ ದೇವರ ರಕ್ಷಣೆಯನ್ನು ಕಾಣುವನು!’
ಎಂಬುದಾಗಿ ಅಡವಿಯಲ್ಲಿ ಒಬ್ಬನು ಕೂಗುತ್ತಿದ್ದಾನೆ.” ಯೆಶಾಯ 40:3-5]
ಲೂಕನು 3 : 7 (ERVKN)
ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರಿಗೆ. “ನೀವು ವಿಷಕರವಾದ ಹಾವುಗಳಂತಿದ್ದೀರಿ! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು?
ಲೂಕನು 3 : 8 (ERVKN)
ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿರುವುದಾದರೆ ಅದನ್ನು ನಿಮ್ಮ ತಕ್ಕಕಾರ್ಯಗಳಿಂದ ತೋರಿಸಿರಿ. ‘ಅಬ್ರಹಾಮನು ನಮ್ಮ ತಂದೆ’ ಎಂದು ಜಂಬ ಕೊಚ್ಚಿಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಇಲ್ಲಿರುವ ಕಲ್ಲುಗಳಿಂದ ಮಕ್ಕಳನ್ನು ಕೊಡಬಲ್ಲನೆಂದು ನಾನು ನಿಮಗೆ ಹೇಳುತ್ತೇನೆ.
ಲೂಕನು 3 : 9 (ERVKN)
ಮರಗಳನ್ನು ಕಡಿಯುವುದಕ್ಕೆ ಕೊಡಲಿಯು ಸಿದ್ಧವಾಗಿದೆ. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನು ಕತ್ತರಿಸಿ ಬೆಂಕಿಯಲ್ಲಿ ಹಾಕಲಾಗುವುದು” ಎಂದು ಹೇಳಿದನು.
ಲೂಕನು 3 : 10 (ERVKN)
ಆದ್ದರಿಂದ ಜನರು, “ಈಗ ನಾವೇನು ಮಾಡಬೇಕು?” ಎಂದು ಕೇಳಿದರು.
ಲೂಕನು 3 : 11 (ERVKN)
ಯೋಹಾನನು, “ನಿಮ್ಮಲ್ಲಿ ಎರಡು ಅಂಗಿಗಳಿದ್ದರೆ, ಏನೂ ಇಲ್ಲದವನಿಗೆ ಒಂದು ಕೊಡಿರಿ. ನಿಮ್ಮಲ್ಲಿ ಆಹಾರವಿದ್ದರೆ, ಅದನ್ನೂ ಹಂಚಿಕೊಡಿರಿ” ಎಂದು ಹೇಳಿದನು.
ಲೂಕನು 3 : 12 (ERVKN)
ಸುಂಕವಸೂಲಿಗಾರರು †ಸುಂಕವಸೂಲಿಗಾರರು ತೆರಿಗೆ ವಸೂಲಿಮಾಡುವುದಕ್ಕೆ ರೋಮನ್ನರಿಂದ ಸಂಬಳಕ್ಕೆ ನೇಮಿಸಲ್ಪಟ್ಟ ಯೆಹೂದ್ಯರು. ಅವರು ಆಗಾಗ್ಗೆ ಮೋಸಮಾಡುತ್ತಿದ್ದರು. ಆದ್ದರಿಂದ ಯೆಹೂದ್ಯರು ಅವರನ್ನು ದ್ವೇಷಿಸುತ್ತಿದ್ದರು. ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಯೋಹಾನನ ಬಳಿಗೆ ಬಂದರು. ಅವರು ಯೋಹಾನನಿಗೆ, “ಉಪದೇಶಕನೇ, ನಾವೇನು ಮಾಡಬೇಕು?” ಎಂದು ಕೇಳಿದರು.
ಲೂಕನು 3 : 13 (ERVKN)
ಯೋಹಾನನು ಅವರಿಗೆ, “ನೇಮಕವಾದ ತೆರಿಗೆಗಿಂತ ಹೆಚ್ಚಾಗಿ ಜನರಿಂದ ತೆಗೆದುಕೊಳ್ಳಬೇಡಿರಿ” ಎಂದು ಹೇಳಿದನು.
ಲೂಕನು 3 : 14 (ERVKN)
ಸೈನಿಕರು ಯೋಹಾನನಿಗೆ, “ನಾವೇನು ಮಾಡಬೇಕು?” ಎಂದು ಕೇಳಿದರು. ಯೋಹಾನನು ಅವರಿಗೆ, “ಲಂಚ ತೆಗೆದುಕೊಳ್ಳಬೇಡಿ, ಸುಳ್ಳುದೂರು ಹೇಳಬೇಡಿರಿ. ನಿಮಗೆ ಸಿಕ್ಕುವ ಸಂಬಳದಲ್ಲಿ ಸಂತೋಷವಾಗಿರಿ” ಎಂದು ಹೇಳಿದನು.
ಲೂಕನು 3 : 15 (ERVKN)
ಜನರೆಲ್ಲರೂ ಕ್ರಿಸ್ತನ ಆಗಮನವನ್ನು ನಿರೀಕ್ಷಿಸುತ್ತಿದ್ದುದರಿಂದ ಅವರು ಯೋಹಾನನ ಬಗ್ಗೆ ಆಶ್ಚರ್ಯಪಟ್ಟು, “ಒಂದುವೇಳೆ ಈತನೇ ಕ್ರಿಸ್ತನಾಗಿರಬಹುದು” ಎಂದು ಭಾವಿಸಿಕೊಂಡರು.
ಲೂಕನು 3 : 16 (ERVKN)
ಅದಕ್ಕೆ ಯೋಹಾನನು, “ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನಗಿಂತಲೂ ಶಕ್ತನಾಗಿರುವಾತನು ಬರುತ್ತಾನೆ. ಆತನ ಪಾದರಕ್ಷೆಗಳನ್ನು ಬಿಚ್ಚುವದಕ್ಕೂ ನನಗೆ ಯೋಗ್ಯತೆ ಇಲ್ಲ. ಆತನು ನಿಮಗೆ ಪವಿತ್ರಾತ್ಮನಲ್ಲಿಯೂ, ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು.
ಲೂಕನು 3 : 17 (ERVKN)
ಆತನು ರಾಶಿಯನ್ನು ಶುದ್ಧಮಾಡುವುದಕ್ಕೆ ‡ಶುದ್ಧಮಾಡುವುದಕ್ಕೆ “ಯೇಸು ಒಳ್ಳೆಯವರನ್ನು ಕೆಟ್ಟವರಿಂದ ಬೇರ್ಪಡಿಸುವನು” ಎಂಬುದು ಯೋಹಾನನ ಅರ್ಥವಾಗಿತ್ತು. ಸಿದ್ಧನಾಗಿ ಬರುವನು. ಆತನು ಒಳ್ಳೆಯ ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿ ತನ್ನ ಕಣಜದಲ್ಲಿ ಹಾಕುವನು. ನಂತರ ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು.
ಲೂಕನು 3 : 18 (ERVKN)
ಯೋಹಾನನು ಜನರಿಗೆ ಇನ್ನೂ ಅನೇಕ ವಿಷಯಗಳನ್ನು ಹೇಳಿ ಪ್ರೋತ್ಸಾಹಿಸುತ್ತಾ ಸುವಾರ್ತೆಯನ್ನು ಬೋಧಿಸುತ್ತಿದ್ದನು.
ಲೂಕನು 3 : 19 (ERVKN)
ಯೋಹಾನನ ಸೇವೆಯ ಅಂತ್ಯ ರಾಜ್ಯಪಾಲ ಹೆರೋದನು ತನ್ನ ಸಹೋದರನ ಹೆಂಡತಿಯಾದ ಹೆರೋದ್ಯಳೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವನ್ನು ಮತ್ತು ಹೆರೋದನು ಮಾಡಿದ್ದ ಅನೇಕ ದುಷ್ಕೃತ್ಯಗಳನ್ನು ಯೋಹಾನನು ಖಂಡಿಸಿದನು.
ಲೂಕನು 3 : 20 (ERVKN)
ಆದ್ದರಿಂದ ಹೆರೋದನು ಯೋಹಾನನನ್ನು ಸೆರೆಮನೆಗೆ ಹಾಕಿಸಿ ತನ್ನ ದುಷ್ಕೃತ್ಯಗಳೊಂದಿಗೆ ಮತ್ತೊಂದು ದುಷ್ಕೃತ್ಯವನ್ನು ಸೇರಿಸಿಕೊಂಡನು.
ಲೂಕನು 3 : 21 (ERVKN)
ಯೋಹಾನನಿಂದ ಯೇಸುವಿನ ದೀಕ್ಷಾಸ್ನಾನ (ಮತ್ತಾಯ 3:13-17; ಮಾರ್ಕ 1:9-11) ಯೋಹಾನನನ್ನು ಸೆರೆಮನೆಗೆ ಹಾಕುವುದಕ್ಕಿಂತ ಮೊದಲು, ಜನರೆಲ್ಲರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. ಆಗ ಯೇಸು ಸಹ ಬಂದು ದೀಕ್ಷಾಸ್ನಾನ ಮಾಡಿಸಿಕೊಂಡನು. ಯೇಸು ಪ್ರಾರ್ಥಿಸುತ್ತಿದ್ದಾಗ ಆಕಾಶವು ತೆರೆಯಿತು.
ಲೂಕನು 3 : 22 (ERVKN)
ಪವಿತ್ರಾತ್ಮನು ಆತನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದು ಬಂದನು. ಆ ಕೂಡಲೇ, ಪರಲೋಕದಿಂದ ಧ್ವನಿಯೊಂದು ಹೊರಟು, “ನೀನು ನನ್ನ ಪ್ರಿಯ ಮಗನು, ನಾನು ನಿನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.
ಲೂಕನು 3 : 23 (ERVKN)
ಯೋಸೇಫನ ಕುಟುಂಬ ಚರಿತ್ರೆ (ಮತ್ತಾಯ 1:1-17) ಯೇಸು ಬೋಧಿಸುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಯೇಸು ಯೋಸೇಫನ ಮಗನೆಂದು ಜನರು ಭಾವಿಸಿದ್ದರು. ಯೋಸೇಫನು ಹೇಲಿಯ ಮಗನು.
ಲೂಕನು 3 : 24 (ERVKN)
ಹೇಲಿಯು ಮತ್ತಾತನ ಮಗನು. ಮತ್ತಾತನು ಲೇವಿಯ ಮಗನು. ಲೇವಿಯು ಮೆಲ್ಕಿಯ ಮಗನು. ಮೆಲ್ಕಿಯು ಯನ್ನಾಯನ ಮಗನು. ಯನ್ನಾಯನು ಯೋಸೇಫನ ಮಗನು.
ಲೂಕನು 3 : 25 (ERVKN)
ಯೋಸೇಫನು ಮತ್ತಥೀಯನ ಮಗನು. ಮತ್ತಥೀಯನು ಆಮೋಸನ ಮಗನು. ಆಮೋಸನು ನಹೂಮನ ಮಗನು. ನಹೂಮನು ಎಸ್ಲಿಯ ಮಗನು. ಎಸ್ಲಿಯು ನಗ್ಗಾಯನ ಮಗನು.
ಲೂಕನು 3 : 26 (ERVKN)
ನಗ್ಗಾಯನು ಮಹಾಥತನ ಮಗನು. ಮಹಾಥತನು ಮತ್ತಥೀಯನ ಮಗನು. ಮತ್ತಥೀಯನು ಶಿಮೀಯನ ಮಗನು. ಶಿಮೀಯನು ಯೋಸೇಖನ ಮಗನು. ಯೋಸೇಖನು ಯೂದನ ಮಗನು.
ಲೂಕನು 3 : 27 (ERVKN)
ಯೂದನು ಯೋಹಾನನ ಮಗನು. ಯೋಹಾನನು ರೇಸನ ಮಗನು. ರೇಸನು ಜೆರುಬಾಬೆಲನ ಮಗನು. ಜೆರುಬಾಬೆಲನು ಸಲಥಿಯೇಲನ ಮಗನು. ಸಲಥಿಯೇಲನು ಸೇರಿಯ ಮಗನು.
ಲೂಕನು 3 : 28 (ERVKN)
ಸೇರಿಯು ಮೆಲ್ಕಿಯ ಮಗನು. ಮೆಲ್ಕಿಯು ಅದ್ದಿಯ ಮಗನು. ಅದ್ದಿಯು ಕೋಸಾಮನ ಮಗನು. ಕೋಸಾಮನು ಎಲ್ಮದಾಮನ ಮಗನು. ಎಲ್ಮದಾಮನು ಏರನ ಮಗನು.
ಲೂಕನು 3 : 29 (ERVKN)
ಏರನು ಯೆಹೋಷುವನ ಮಗನು. ಯೆಹೋಷುವನು ಎಲಿಯೇಜರನ ಮಗನು. ಎಲಿಯೇಜರನು ಯೋರೈವುನ ಮಗನು. ಯೋರೈವುನು ಮತ್ತಾತನ ಮಗನು. ಮತ್ತಾತನು ಲೇವಿಯ ಮಗನು.
ಲೂಕನು 3 : 30 (ERVKN)
ಲೇವಿಯು ಸಿಮೆಯೋನನ ಮಗನು. ಸಿಮೆಯೋನನು ಯೂದನ ಮಗನು. ಯೂದನು ಯೋಸೇಫನ ಮಗನು. ಯೋಸೇಫನು ಯೊನಾವುನ ಮಗನು. ಯೊನಾವುನು ಎಲಿಯಕೀಮನ ಮಗನು.
ಲೂಕನು 3 : 31 (ERVKN)
ಎಲಿಯಕೀಮನು ಮೆಲೆಯನ ಮಗನು. ಮೆಲೆಯನು ಮೆನ್ನನ ಮಗನು. ಮೆನ್ನನು ಮತ್ತಾಥನ ಮಗನು. ಮತ್ತಾಥನು ನಾತಾನನ ಮಗನು. ನಾತಾನನು ದಾವೀದನ ಮಗನು.
ಲೂಕನು 3 : 32 (ERVKN)
ದಾವೀದನು ಇಷಯನ ಮಗನು. ಇಷಯನು ಓಬೇದನ ಮಗನು. ಓಬೇದನು ಬೋವಜನ ಮಗನು. ಬೋವಜನು ಸಲ್ಮೋನನ ಮಗನು. ಸಲ್ಮೋನನು ನಹಸ್ಸೋನನ ಮಗನು.
ಲೂಕನು 3 : 33 (ERVKN)
ನಹಸ್ಸೋನನು ಅಮ್ಮಿನಾದ್ವಾನ ಮಗನು. ಅಮ್ಮಿನಾದ್ವಾನು ಅದ್ಮಿನನ ಮಗನು. ಅದ್ಮಿನನು ಅರ್ನೈಯನ ಮಗನು. ಅರ್ನೈಯನು ಹೆಸ್ರೋನನ ಮಗನು. ಹೆಸ್ರೋನನು ಪೆರೆಸನ ಮಗನು. ಪೆರೆಸನು ಯೂದನ ಮಗನು.
ಲೂಕನು 3 : 34 (ERVKN)
ಯೂದನು ಯಾಕೋಬನ ಮಗನು. ಯಾಕೋಬನು ಇಸಾಕನ ಮಗನು. ಇಸಾಕನು ಅಬ್ರಹಾಮನ ಮಗನು. ಅಬ್ರಹಾಮನು ತೇರಹನ ಮಗನು. ತೇರಹನು ನಹೋರನ ಮಗನು.
ಲೂಕನು 3 : 35 (ERVKN)
ನಹೋರನು ಸೆರೂಗನ ಮಗನು. ಸೆರೂಗನು ರೆಗೂವನ ಮಗನು. ರೆಗೂವನು ಪೆಲೆಗನ ಮಗನು. ಪೆಲೆಗನು ಎಬರನ ಮಗನು. ಎಬರನು ಸಾಲನ ಮಗನು.
ಲೂಕನು 3 : 36 (ERVKN)
ಸಾಲನು ಕಯಿನನ ಮಗನು. ಕಯಿನನು ಅರ್ಪಕ್ಷದನ ಮಗನು. ಅರ್ಪಕ್ಷದನು ಶೇಮನ ಮಗನು. ಶೇಮನು ನೋಹನ ಮಗನು. ನೋಹನು ಲಾಮೆಕನ ಮಗನು.
ಲೂಕನು 3 : 37 (ERVKN)
ಲಾಮೆಕನು ಮೆತೂಷಲನ ಮಗನು. ಮೆತೂಷಲನು ಹನೋಕನ ಮಗನು. ಹನೋಕನು ಯೆರೆದನ ಮಗನು. ಯೆರೆದನು ಮಹಲಲೇಲನ ಮಗನು. ಮಹಲಲೇಲನು ಕಯಿನಾನನ ಮಗನು.
ಲೂಕನು 3 : 38 (ERVKN)
ಕಯಿನಾನನು ಎನೋಷನ ಮಗನು. ಎನೋಷನು ಸೇಥನ ಮಗನು. ಸೇಥನು ಆದಾಮನ ಮಗನು. ಆದಾಮನು ದೇವರ ಮಗನು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38