ಯೆರೆಮಿಯ 47 : 1 (ERVKN)
ಫಿಲಿಷ್ಟಿಯರ ಬಗ್ಗೆ ಸಂದೇಶ ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಫಿಲಿಷ್ಟಿಯರ ಬಗ್ಗೆ ಬಂದಿತು. ಫರೋಹನು ಗಾಜಾ ಪಟ್ಟಣದ ಮೇಲೆ ಧಾಳಿ ಮಾಡುವ ಮುಂಚೆ ಈ ಸಂದೇಶ ಬಂದಿತು.
ಯೆರೆಮಿಯ 47 : 2 (ERVKN)
ಯೆಹೋವನು ಹೀಗೆನ್ನುತ್ತಾನೆ:
“ನೋಡಿರಿ, ಉತ್ತರದಲ್ಲಿ ಶತ್ರು ಸೈನಿಕರು ಒಟ್ಟುಗೂಡುತ್ತಿದ್ದಾರೆ. ದಡಮೀರಿ ಭೋರ್ಗರೆಯುವ ನದಿಯಂತೆ ಅವರು ಬರುವರು.
ಅವರು ಪ್ರವಾಹದಂತೆ ಇಡೀ ದೇಶವನ್ನು ವ್ಯಾಪಿಸುವರು. ಅವರು ಪಟ್ಟಣಗಳನ್ನೂ ಅಲ್ಲಿ ವಾಸಿಸುವ ಜನರನ್ನೂ ಮುತ್ತುವರು.
ಆ ದೇಶಗಳಲ್ಲಿ ವಾಸಮಾಡುವ ಎಲ್ಲರೂ ಸಹಾಯಕ್ಕಾಗಿ ಗೋಳಿಡುವರು.
ಯೆರೆಮಿಯ 47 : 3 (ERVKN)
ಅವರು ವೇಗವಾಗಿ ಓಡುವ ಕುದುರೆಗಳ ಶಬ್ಧವನ್ನು ಕೇಳುವರು.
ಅವರು ರಭಸವಾಗಿ ಚಲಿಸುವ ರಥಗಳ ಶಬ್ಧವನ್ನು ಕೇಳುವರು. ಅವರು ಚಕ್ರಗಳ ಗಡಗಡ ಶಬ್ಧವನ್ನು ಕೇಳುವರು.
ತಂದೆಗಳು ತಮ್ಮತಮ್ಮ ಮಕ್ಕಳಿಗೆ ಸುರಕ್ಷಣೆಯನ್ನು ಕೊಡಲಾಗದಷ್ಟು ದುಬರ್ಲರಾಗಿರುವರು.
ಯೆರೆಮಿಯ 47 : 4 (ERVKN)
ಎಲ್ಲಾ ಫಿಲಿಷ್ಟಿಯರ ವಿನಾಶನದ ಕಾಲ ಬಂದಿದೆ.
ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ ಅಳಿದುಳಿದವರನ್ನೆಲ್ಲ ನಾಶಮಾಡುವ ಕಾಲ ಬಂದಿದೆ.
ಯೆಹೋವನು ಬಹುಬೇಗ ಫಿಲಿಷ್ಟಿಯರನ್ನು ನಾಶಮಾಡುವನು. ಕಪ್ತೋರ್ ದಿಬಪದ ಅಳಿದುಳಿದ ಜನರನ್ನು ಆತನು ನಾಶಮಾಡುವನು.
ಯೆರೆಮಿಯ 47 : 5 (ERVKN)
ಗಾಜಾದ ಜನರು ದುಃಖಿತರಾಗಿ ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವರು. ಅಷ್ಕೆಲೋನಿನ ಜನರನ್ನು ಸ್ತಬ್ಧಗೊಳಿಸಲಾಗುವುದು.
ಕಣಿವೆ ಪ್ರದೇಶದಿಂದ ಉಳಿದುಕೊಂಡವರೇ, ನಿಮ್ಮನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿರಿ?
ಯೆರೆಮಿಯ 47 : 6 (ERVKN)
“ಅಯ್ಯೋ, ಯೆಹೋವನ ಖಡ್ಗವೇ, ನೀನಿನ್ನೂ ಹೋಗಲಿಲ್ಲವೇ? ಎಷ್ಟು ಹೊತ್ತು ನೀನು ಹೋರಾಡುತ್ತಿರುವೆ?
ನಿನ್ನ ಒರೆಯಲ್ಲಿ ಹೋಗು! ಸುಮ್ಮನಿರು, ಶಾಂತವಾಗಿರು!
ಯೆರೆಮಿಯ 47 : 7 (ERVKN)
ಆದರೆ ಯೆಹೋವನ ಖಡ್ಗವು ವಿಶ್ರಾಂತಿ ಪಡೆಯುವುದು ಹೇಗೆ ಸಾಧ್ಯ? ಯೆಹೋವನು ಅದಕ್ಕೆ ಒಂದು ಆಜ್ಞೆಯನ್ನು ಕೊಟ್ಟಿದ್ದಾನೆ.
ಅಷ್ಕೆಲೋನ್ ನಗರದ ಮೇಲೆ ಮತ್ತು ಕರಾವಳಿಯ ಮೇಲೆ ಧಾಳಿ ಮಾಡಬೇಕೆಂದು ಯೆಹೋವನು ಅದಕ್ಕೆ ಆಜ್ಞೆ ವಿಧಿಸಿದ್ದಾನೆ.”

1 2 3 4 5 6 7