ಯೆರೆಮಿಯ 46 : 1 (ERVKN)
{ಜನಾಂಗಗಳ ವಿಷಯವಾಗಿ ಯೆಹೋವನ ಸಂದೇಶಗಳು} [PS] ಈ ಸಂದೇಶಗಳು ಪ್ರವಾದಿಯಾದ ಯೆರೆಮೀಯನಿಗೆ ಬಂದವು. ಈ ಸಂದೇಶಗಳು ವಿವಿಧ ಜನಾಂಗಗಳ ಬಗ್ಗೆ ಇವೆ. [PS]
ಯೆರೆಮಿಯ 46 : 2 (ERVKN)
{ಈಜಿಪ್ಟಿನ ಬಗ್ಗೆ ಸಂದೇಶ} [PS] ಈ ಸಂದೇಶವು ಈಜಿಪ್ಟ್ ಜನಾಂಗದ ಬಗ್ಗೆ ಇದೆ. ಈ ಸಂದೇಶವು ಫರೋಹನೆಕೋವಿನ ಸೈನ್ಯದ ಬಗ್ಗೆ ಇದೆ. ಫರೋಹನೆಕೋವು ಈಜಿಪ್ಟಿನ ರಾಜನಾಗಿದ್ದನು. ಅವನ ಸೈನ್ಯವನ್ನು ಕರ್ಕೆಮೀಷ್ ಪಟ್ಟಣದಲ್ಲಿ ಸೋಲಿಸಲಾಯಿತು. ಕರ್ಕೆಮೀಷ್ ಪಟ್ಟಣವು ಯೂಫ್ರೇಟೀಸ್ ನದಿಯ ದಂಡೆಯ ಮೇಲಿದೆ. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಹೂದದಲ್ಲಿ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಫರೋಹನೆಕೋವಿನ ಸೈನ್ಯವನ್ನು ಕರ್ಕೆಮೀಷಿನಲ್ಲಿ ಸೋಲಿಸಿದನು. ಯೆಹೋಯಾಕೀಮನು ರಾಜನಾದ ಯೋಷೀಯನ ಮಗನಾಗಿದ್ದನು. ಈಜಿಪ್ಟಿಗೆ ಯೆಹೋವನ ಸಂದೇಶ ಹೀಗಿತ್ತು:
ಯೆರೆಮಿಯ 46 : 3 (ERVKN)
“ನಿಮ್ಮ ದೊಡ್ಡ ಮತ್ತು ಸಣ್ಣ ಗುರಾಣಿಗಳನ್ನು [QBR2] ಸಿದ್ಧಪಡಿಸಿಕೊಂಡು ಯುದ್ಧಕ್ಕೆ ಹೊರಡಿರಿ. [QBR]
ಯೆರೆಮಿಯ 46 : 4 (ERVKN)
ಕುದುರೆಗಳನ್ನು ಸಜ್ಜುಗೊಳಿಸಿರಿ. [QBR2] ಸೈನಿಕರೇ, ನಿಮ್ಮ ಕುದುರೆಯ ಮೇಲೆ ಹತ್ತಿರಿ, [QBR] ಯುದ್ಧಕ್ಕಾಗಿ ನಿಮ್ಮನಿಮ್ಮ ಸ್ಥಾನಗಳಿಗೆ ಹೋಗಿರಿ. [QBR2] ನಿಮ್ಮ ಶಿರಸ್ತ್ರಾಣಗಳನ್ನು ಧರಿಸಿರಿ, [QBR] ನಿಮ್ಮ ಭರ್ಜಿಗಳನ್ನು ಚೂಪುಗೊಳಿಸಿರಿ. [QBR2] ನಿಮ್ಮ ಕವಚಗಳನ್ನು ಧರಿಸಿರಿ. [QBR]
ಯೆರೆಮಿಯ 46 : 5 (ERVKN)
ನಾನು ನೋಡುತ್ತಿರುವುದೇನು? [QBR2] ಸೈನ್ಯವು ಗಾಬರಿಪಟ್ಟಿದೆ. [QBR] ಸೈನಿಕರು ಓಡಿಹೋಗುತ್ತಿದ್ದಾರೆ. [QBR2] ಅವರ ಶೂರಸೈನಿಕರು ಸೋತಿದ್ದಾರೆ. [QBR] ಅವರು ಅವಸರದಿಂದ ಓಡಿಹೋಗುತ್ತಿದ್ದಾರೆ. [QBR2] ಅವರು ಹಿಂದಕ್ಕೆ ತಿರುಗಿ ಸಹ ನೋಡುತ್ತಿಲ್ಲ. [QBR2] ಎಲ್ಲಾ ಕಡೆಗೂ ಭೀತಿ ಆವರಿಸಿಕೊಂಡಿದೆ” [QBR] ಯೆಹೋವನು ಹೀಗೆಂದನು.
ಯೆರೆಮಿಯ 46 : 6 (ERVKN)
“ವೇಗಶಾಲಿಗಳೂ ಓಡಿಹೋಗಲಾರರು. [QBR2] ಶೂರಸೈನಿಕರೂ ತಪ್ಪಿಸಿಕೊಳ್ಳಲಾರರು. [QBR] ಅವರೆಲ್ಲರೂ ಎಡವಿ ಬಿದ್ದುಬಿಡುವರು. [QBR2] ಇದೆಲ್ಲ ಉತ್ತರದಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ನಡೆಯುವುದು. [QBR]
ಯೆರೆಮಿಯ 46 : 7 (ERVKN)
ನೈಲ್ ನದಿಯಂತೆ ಯಾರು ಬರುತ್ತಿರುವರು? [QBR2] ಶಕ್ತಿಶಾಲಿಯಾದ ಮತ್ತು ರಭಸದಿಂದ ಹರಿಯುವ ನದಿಯಂತೆ ಯಾರು ಬರುತ್ತಿರುವರು? [QBR]
ಯೆರೆಮಿಯ 46 : 8 (ERVKN)
ಭೋರ್ಗರೆಯುವ ನೈಲ್ ನದಿಯಂತೆ [QBR2] ಈಜಿಪ್ಟ್ ಬರುತ್ತಿದೆ. [QBR] ಬಲಿಷ್ಠವಾಗಿಯೂ ಮತ್ತು ರಭಸವಾಗಿಯೂ [QBR2] ಹರಿಯುವ ನದಿಯಂತೆ ಬರುತ್ತಿದೆ. [QBR] ‘ನಾನು ಬಂದು ಭೂಮಿಯ ಮೇಲೆಲ್ಲ ವ್ಯಾಪಿಸಿಕೊಳ್ಳುವೆನು. [QBR2] ನಾನು ನಗರಗಳನ್ನೂ ಅಲ್ಲಿದ್ದ ಜನರನ್ನೂ ನಾಶಮಾಡುವೆನು’ ಎಂದು ಈಜಿಪ್ಟ್ ಹೇಳುತ್ತಿದೆ. [QBR]
ಯೆರೆಮಿಯ 46 : 9 (ERVKN)
ಅಶ್ವಾರೋಹಿಗಳೇ, ಯುದ್ಧದಲ್ಲಿ ಧುಮುಕಿರಿ, [QBR2] ಸಾರಥಿಗಳೇ, ರಥಗಳನ್ನು ವೇಗವಾಗಿ ಓಡಿಸಿರಿ. [QBR] ಶೂರ ಸೈನಿಕರೇ, ಮುನ್ನುಗ್ಗಿರಿ; [QBR2] ಕೂಷ್ಯ ಮತ್ತು ಪೂಟ್ಯ ಸೈನಿಕರೇ, ನಿಮ್ಮ ಗುರಾಣಿಗಳನ್ನು ಹಿಡಿದುಕೊಂಡು ಹೋಗಿರಿ. [QBR2] ಲೂದ್ಯ ಸೈನಿಕರೇ, ನಿಮ್ಮ ಬಿಲ್ಲುಗಳನ್ನು ಉಪಯೋಗಿಸಿರಿ.
ಯೆರೆಮಿಯ 46 : 10 (ERVKN)
“ಆದರೆ ಆ ದಿನ ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಗೆಲ್ಲುವನು. [QBR2] ಆಗ ಆ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುವನು. ಯೆಹೋವನ ವೈರಿಗಳು ತಕ್ಕ ಶಿಕ್ಷೆಯನ್ನು ಅನುಭವಿಸುವರು. [QBR] ಖಡ್ಗವು ಸರ್ವರನ್ನು ಕೊಲೆ ಮಾಡುವುದು. [QBR2] ಖಡ್ಗವು ತನ್ನ ರಕ್ತದ ದಾಹ ತೀರುವವರೆಗೂ ಕೊಲೆ ಮಾಡುವುದು. [QBR] ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನಿಗೆ ಬಲಿ ನಡೆಯಬೇಕಾಗಿರುವುದರಿಂದ ಹೀಗೆಲ್ಲ ಆಗುವುದು. [QBR2] ಈಜಿಪ್ಟಿನ ಸೈನ್ಯವನ್ನು ಉತ್ತರದಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ಬಲಿಯಾಗಿ ಕೊಡಲಾಗುವುದು.
ಯೆರೆಮಿಯ 46 : 11 (ERVKN)
“ಈಜಿಪ್ಟೇ, ಗಿಲ್ಯಾದಿಗೆ ಹೋಗಿ ಔಷಧಿಯನ್ನು ತೆಗೆದುಕೊಂಡು ಬಾ. [QBR2] ನೀನು ಬಗೆಬಗೆಯ ಔಷಧಿಗಳನ್ನು ಉಪಯೋಗಿಸಬಹುದು. [QBR2] ಆದರೆ ಅದರಿಂದ ಪ್ರಯೋಜನವಿಲ್ಲ. ನೀನು ಗುಣಹೊಂದುವುದಿಲ್ಲ. [QBR]
ಯೆರೆಮಿಯ 46 : 12 (ERVKN)
ಬೇರೆ ಜನಾಂಗಗಳು ನೀನು ಗೋಳಾಡುವದನ್ನು ಕೇಳಿಸಿಕೊಳ್ಳುವವು. [QBR2] ನಿನ್ನ ಗೋಳಾಟವು ಇಡೀ ಭೂಮಂಡಲದಲ್ಲೆಲ್ಲ ಕೇಳಿಸುವುದು. [QBR] ‘ಒಬ್ಬ ಶೂರ ಸೈನಿಕನು’ ಮತ್ತೊಬ್ಬ ‘ಶೂರ ಸೈನಿಕನನ್ನು’ ಎದುರಿಸುವನು. [QBR2] ಆ ಶೂರ ಸೈನಿಕರಿಬ್ಬರೂ ಒಟ್ಟಿಗೆ ನೆಲಕ್ಕೆ ಬೀಳುವರು.” [PS]
ಯೆರೆಮಿಯ 46 : 13 (ERVKN)
ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನು ಕೊಟ್ಟ ಸಂದೇಶವಿದು. ಈ ಸಂದೇಶ ನೆಬೂಕದ್ನೆಚ್ಚರನು ಈಜಿಪ್ಟಿನ ಮೇಲೆ ಧಾಳಿ ಮಾಡಲು ಬರುವುದರ ಬಗ್ಗೆ ಇದೆ.
ಯೆರೆಮಿಯ 46 : 14 (ERVKN)
“ಈಜಿಪ್ಟಿನಲ್ಲಿ ಈ ಸಂದೇಶವನ್ನು ಪ್ರಕಟಿಸು, [QBR2] ಮಿಗ್ದೋಲ್ ನಗರದಲ್ಲಿ ಇದನ್ನು ಪ್ರಚುರಪಡಿಸು. [QBR2] ನೋಫ್ ಮತ್ತು ತಹಪನೇಸ್‌ಗಳಲ್ಲಿ ಪ್ರಚುರಪಡಿಸಿರಿ, [QBR] ‘ಯುದ್ಧಕ್ಕೆ ಸಿದ್ಧರಾಗಿರಿ, [QBR2] ಏಕೆಂದರೆ ನಿಮ್ಮ ಸುತ್ತಲೂ ಜನರು ಖಡ್ಗಕ್ಕೆ ಆಹುತಿಯಾಗಿದ್ದಾರೆ.’ [QBR]
ಯೆರೆಮಿಯ 46 : 15 (ERVKN)
ಈಜಿಪ್ಟೇ, ನಿಮ್ಮ ಶೂರಸೈನಿಕರು ಏಕೆ ಕೊಲ್ಲಲ್ಪಡುವರು? [QBR2] ಅವರು ನಿಲ್ಲಲಾರರು. [QBR2] ಏಕೆಂದರೆ ಯೆಹೋವನು ಅವರನ್ನು ನೆಲಕ್ಕೆ ತಳ್ಳುವನು. [QBR]
ಯೆರೆಮಿಯ 46 : 16 (ERVKN)
ಆ ಸೈನಿಕರು ಮತ್ತೆಮತ್ತೆ ಎಡವುತ್ತಾರೆ. [QBR2] ಅವರು ಒಬ್ಬರಮೇಲೊಬ್ಬರು ಬೀಳುವರು. [QBR] ‘ಎದ್ದೇಳು, ನಮ್ಮ ಜನರಲ್ಲಿಗೆ ನಾವು ಹೋಗೋಣ. [QBR2] ನಮ್ಮ ಜನ್ಮಭೂಮಿಗೆ ನಾವು ಹೋಗೋಣ. [QBR2] ನಮ್ಮ ವೈರಿಯು ನಮ್ಮನ್ನು ಸೋಲಿಸುತ್ತಿದ್ದಾನೆ. [QBR2] ನಾವು ಇಲ್ಲಿಂದ ಹೊರಡಬೇಕು’ ಎಂದು ಅವರು ಹೇಳಿಕೊಳ್ಳುವರು. [QBR]
ಯೆರೆಮಿಯ 46 : 17 (ERVKN)
‘ಈಜಿಪ್ಟಿನ ರಾಜನಾದ ಫರೋಹನು ಕೇವಲ ಒಂದು ಪೊಳ್ಳು ಧ್ವನಿ. [QBR2] ಅವನ ವೈಭವದ ದಿನಗಳು ಮುಗಿದವು’ ” [QBR] ಎಂದು ಆ ಸೈನಿಕರು ತಮ್ಮ ಜನ್ಮಭೂಮಿಯಲ್ಲಿ ಹೇಳುವರು. [QBR]
ಯೆರೆಮಿಯ 46 : 18 (ERVKN)
ಈ ಸಂದೇಶವು ರಾಜನಿಂದ ಬಂದದ್ದು. [QBR2] ಆ ರಾಜನೇ ಸರ್ವಶಕ್ತನಾದ ಯೆಹೋವನು. [QBR] “ನನ್ನ ಜೀವದಾಣೆಯಾಗಿ ಹೇಳುತ್ತೇನೆ. [QBR2] ಬಲಿಷ್ಠನಾದ ನಾಯಕನು ಬರುವನು. [QBR] ಅವನು ತಾಬೋರ್ ಬೆಟ್ಟದಂತೆಯೂ ಸಮುದ್ರದ ಸಮೀಪದ ಕರ್ಮೆಲ್ ಗುಡ್ಡದಂತೆಯೂ ಇರುವನು. [QBR]
ಯೆರೆಮಿಯ 46 : 19 (ERVKN)
ಈಜಿಪ್ಟಿನ ಜನಗಳೇ, ನಿಮ್ಮ ವಸ್ತುಗಳನ್ನು ಕಟ್ಟಿಕೊಂಡು [QBR] ಸೆರೆವಾಸಕ್ಕೆ ಸಿದ್ಧರಾಗಿರಿ. [QBR2] ಏಕೆಂದರೆ ನೋಫ್ ಪಟ್ಟಣವು ಹಾಳುಬಿದ್ದ ನಿರ್ಜನವಾದ ಪ್ರದೇಶವಾಗುವುದು. [QBR] ನಗರಗಳನ್ನು ನಾಶಪಡಿಸಲಾಗುವುದು; [QBR2] ಅವುಗಳು ನಿರ್ಜನವಾಗುವವು.
ಯೆರೆಮಿಯ 46 : 20 (ERVKN)
“ಈಜಿಪ್ಟು ಸುಂದರವಾದ ಹಸುವಿನಂತಿದೆ, [QBR2] ಆದರೆ ಉತ್ತರದಿಂದ ತೊಣಚಿಯು [*ತೊಣಚಿ ಹಸುಗಳ ಮತ್ತು ಎತ್ತುಗಳ ಸುತ್ತಲೂ ಹಾರುತ್ತಾ ಕಚ್ಚುವ ಚಿಟ್ಟೆ.] ಅದನ್ನು ಪೀಡಿಸಲು ಬರುತ್ತಿದೆ. [QBR]
ಯೆರೆಮಿಯ 46 : 21 (ERVKN)
ಸಂಬಳಕ್ಕಾಗಿ ದುಡಿಯುವ ಈಜಿಪ್ಟಿನ ಸೈನಿಕರು ಕೊಬ್ಬಿದ ಕರುಗಳಂತಿದ್ದಾರೆ. [QBR] ಅವರೆಲ್ಲರು ಹಿಂತಿರುಗಿ ಓಡಿಹೋಗುವರು. [QBR2] ಅವರು ಧೈರ್ಯದಿಂದ ಧಾಳಿಯನ್ನು ಎದುರಿಸಲಾರರು. [QBR] ಅವರ ವಿನಾಶದ ಕಾಲ ಬರುತ್ತಿದೆ. [QBR2] ಬೇಗ ಅವರನ್ನು ದಂಡಿಸಲಾಗುವುದು. [QBR]
ಯೆರೆಮಿಯ 46 : 22 (ERVKN)
ಈಜಿಪ್ಟು ಬುಸುಗುಟ್ಟಿ ತಪ್ಪಿಸಿಕೊಳ್ಳಲು [QBR2] ಪ್ರಯತ್ನಮಾಡುವ ಹಾವಿನಂತಿದೆ. [QBR] ವೈರಿಗಳು ಬಹಳ ಹತ್ತಿರಕ್ಕೆ ಬಂದಿದ್ದಾರೆ. [QBR2] ಈಜಿಪ್ಟಿನ ಸೈನಿಕರು ಓಡಿಹೋಗಲು ಪ್ರಯತ್ನ ಮಾಡುತ್ತಿದ್ದಾರೆ. [QBR] ವೈರಿಗಳು ಕೊಡಲಿಯನ್ನು ಹಿಡಿದುಕೊಂಡು ಈಜಿಪ್ಟಿನ ಮೇಲೆ ಬೀಳುವರು; [QBR2] ಅವರು ಮರ ಕಡಿಯುವ ಜನರಂತಿದ್ದಾರೆ.”
ಯೆರೆಮಿಯ 46 : 23 (ERVKN)
ಯೆಹೋವನು ಹೀಗೆನ್ನುತ್ತಾನೆ: [QBR] “ವೈರಿಗಳು ಈಜಿಪ್ಟಿನ ಅರಣ್ಯವನ್ನು (ಸೈನ್ಯವನ್ನು) ಕತ್ತರಿಸುವರು. [QBR2] ಆ ಅರಣ್ಯದಲ್ಲಿ (ಸೈನ್ಯದಲ್ಲಿ) ಅನೇಕ ಮರಗಳಿವೆ (ಸೈನಿಕರಿದ್ದಾರೆ). [QBR2] ಆದರೂ ಅದನ್ನು ಕತ್ತರಿಸಲಾಗುವುದು. [QBR] ಮಿಡತೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವೈರಿಗಳ ಸೈನಿಕರಿದ್ದಾರೆ. ಆ ಸೈನಿಕರನ್ನು ಯಾರಿಂದಲೂ ಎಣಿಸಲಾಗದು. [QBR]
ಯೆರೆಮಿಯ 46 : 24 (ERVKN)
ಈಜಿಪ್ಟಿಗೆ ಅವಮಾನವಾಗುವುದು. ಉತ್ತರದ ಶತ್ರು ಅವಳನ್ನು ಸೋಲಿಸುವುದು.” [PS]
ಯೆರೆಮಿಯ 46 : 25 (ERVKN)
ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ: “ಬಹುಬೇಗನೆ ನಾನು ಥೀಬಸ್ಸಿನ ಆಮೋನ್ ದೇವತೆಯನ್ನು ದಂಡಿಸುವೆನು. ನಾನು ಫರೋಹನನ್ನು, ಈಜಿಪ್ಟನ್ನು ಮತ್ತು ಅವಳ ದೇವರುಗಳನ್ನು ದಂಡಿಸುವೆನು. ನಾನು ಈಜಿಪ್ಟಿನ ರಾಜರನ್ನು ದಂಡಿಸುವೆನು. ಫರೋಹನನ್ನು ನಂಬಿದವರನ್ನು ದಂಡಿಸುವೆನು.
ಯೆರೆಮಿಯ 46 : 26 (ERVKN)
ಆ ಜನರನ್ನೆಲ್ಲ ಅವರ ಶತ್ರುಗಳು ಸೋಲಿಸುವಂತೆ ಮಾಡುವೆನು. ಅವರ ಶತ್ರುಗಳು ಅವರನ್ನು ಕೊಲ್ಲಬಯಸುವರು. ನಾನು ಆ ಜನರನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಮತ್ತು ಅವನ ಸೇವಕರ ಕೈಗೆ ಒಪ್ಪಿಸುವೆನು.” [PE][PS] “ಬಹಳ ಹಿಂದೆ, ಈಜಿಪ್ಟ್ ದೇಶದಲ್ಲಿ ಶಾಂತಿ ನೆಲೆಸಿತ್ತು. ತೊಂದರೆಗಳ ಈ ದಿನಗಳ ತರುವಾಯ ಈಜಿಪ್ಟ್ ಪುನಃ ಶಾಂತಿಯ ಬೀಡಾಗುವುದು” ಇದು ಯೆಹೋವನ ನುಡಿ.
ಯೆರೆಮಿಯ 46 : 27 (ERVKN)
{ಉತ್ತರ ಇಸ್ರೇಲಿಗೆ ಸಂದೇಶ} [PS] “ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ. [QBR2] ಇಸ್ರೇಲೇ, ಅಂಜಬೇಡ. [QBR] ಆ ದೂರಸ್ಥಳಗಳಿಂದ ನಾನು ನಿನ್ನನ್ನು ಖಂಡಿತವಾಗಿ ರಕ್ಷಿಸುತ್ತೇನೆ. [QBR2] ಬಂಧಿಯಾಗಿರುವ ದೇಶಗಳಿಂದ ನಾನು ನಿನ್ನ ಮಕ್ಕಳನ್ನು ರಕ್ಷಿಸುತ್ತೇನೆ. [QBR] ಯಾಕೋಬು ಪುನಃ ನೆಮ್ಮದಿಯಾಗಿಯೂ ಸುರಕ್ಷಿತವಾಗಿಯೂ ಇರುವುದು. [QBR2] ಯಾರೂ ಅದನ್ನು ಹೆದರಿಸಲಾರರು.” [QBR]
ಯೆರೆಮಿಯ 46 : 28 (ERVKN)
ಯೆಹೋವನು ಹೀಗೆನ್ನುತ್ತಾನೆ: [QBR] “ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ. [QBR2] ನಾನು ನಿನ್ನ ಜೊತೆಯಲ್ಲಿದ್ದೇನೆ. [QBR] ನಾನು ನಿನ್ನನ್ನು ಅನೇಕ ಸ್ಥಳಗಳಿಗೆ ಕಳುಹಿಸಿದೆ. [QBR2] ನಾನು ಆ ಜನಾಂಗಗಳನ್ನೆಲ್ಲ ಸಂಪೂರ್ಣವಾಗಿ ನಾಶಮಾಡುತ್ತೇನೆ. [QBR2] ಆದರೆ ನಿನ್ನನ್ನು ನಾನು ಸಂಪೂರ್ಣವಾಗಿ ನಾಶಮಾಡುವದಿಲ್ಲ. [QBR] ನೀನು ಮಾಡಿದ ದುಷ್ಕೃತ್ಯಗಳಿಗಾಗಿ ನಿನಗೆ ಶಿಕ್ಷೆ ಆಗಲೇಬೇಕು. [QBR] ಆದ್ದರಿಂದ ನೀನು ದಂಡನೆಯಿಂದ ತಪ್ಪಿಸಿಕೊಳ್ಳಲು ನಾನು ಬಿಡುವದಿಲ್ಲ. [QBR] ನಾನು ನಿನಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ, ಆದರೆ ನ್ಯಾಯವಂತನಾಗಿರುವೆನು.” [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28

BG:

Opacity:

Color:


Size:


Font: