ಯೆರೆಮಿಯ 4 : 1 (ERVKN)
ಇದು ಯೆಹೋವನ ಸಂದೇಶ: [QBR] “ಇಸ್ರೇಲೇ, ನೀನು ಹಿಂತಿರುಗಿ ಬರಲು ಇಚ್ಛಿಸಿದರೆ [QBR2] ನನ್ನಲ್ಲಿಗೆ ಹಿಂತಿರುಗಿ ಬಾ. [QBR] ನಿನ್ನ ವಿಗ್ರಹಗಳನ್ನು ಎಸೆದುಬಿಡು. [QBR2] ನನ್ನಿಂದ ದೂರಸರಿದು ಅಲೆದಾಡಬೇಡ. [QBR]
ಯೆರೆಮಿಯ 4 : 2 (ERVKN)
ನೀನು ಹೀಗೆ ಮಾಡಿದರೆ [QBR2] ನನ್ನ ಹೆಸರಿನ ಮೇಲೆ ಪ್ರಮಾಣ ಮಾಡಲು ಶಕ್ತಳಾಗುವೆ. [QBR] ‘ಹಾದು, ಯೆಹೋವನಾಣೆ’ ಎಂದು ಹೇಳಶಕ್ತಳಾಗುವೆ. [QBR2] ನೀನು ಆ ಪದಗಳನ್ನು ಸತ್ಯವಾಗಿಯೂ ಪ್ರಾಮಾಣಿಕವಾಗಿಯೂ ಸರಿಯಾಗಿ ಉಪಯೋಗಿಸಲು ಸಾಧ್ಯವಾಗುತ್ತದೆ. [QBR] ನೀನು ಹೀಗೆ ಮಾಡಿದರೆ, [QBR2] ಎಲ್ಲಾ ಜನಾಂಗಗಳು ಯೆಹೋವನ ಆಶೀರ್ವಾದವನ್ನು ಪಡೆಯುತ್ತವೆ. [QBR] ಆತನ ಕಾರ್ಯಗಳಿಗಾಗಿ [QBR2] ಆತನಿಗೆ ಸ್ತೋತ್ರ ಮಾಡುತ್ತವೆ.” [PS]
ಯೆರೆಮಿಯ 4 : 3 (ERVKN)
ಯೆಹೂದ ಜನಾಂಗದ ಜನರಿಗೂ ಜೆರುಸಲೇಮ್ ನಗರದ ಜನರಿಗೂ ಯೆಹೋವನು ಹೀಗೆ ಹೇಳುತ್ತಾನೆ: “ನಿಮ್ಮ ಹೊಲಗಳಲ್ಲಿ ನೇಗಿಲು ಹೊಡೆದಿಲ್ಲ, [QBR2] ಆ ಹೊಲಗಳನ್ನು ನೇಗಿಲು ಹೊಡೆದು ಸ್ವಚ್ಛಮಾಡಿರಿ. [QBR2] ಮುಳ್ಳುಗಳಲ್ಲಿ ಬೀಜಗಳನ್ನು ಬಿತ್ತಬೇಡಿರಿ. [QBR]
ಯೆರೆಮಿಯ 4 : 4 (ERVKN)
ಯೆಹೋವನ ಮನುಷ್ಯರಾಗಿರಿ, [QBR2] ನಿಮ್ಮ ಹೃದಯ ಪರಿವರ್ತನೆ [*ಹೃದಯ ಪರಿವರ್ತನೆ ಅಕ್ಷರಶಃ, ನಿಮ್ಮ ಹೃದಯದ ಮುಂದೊಗಲನ್ನು ಕತ್ತರಿಸಿ ಹಾಕಿರಿ.] ಮಾಡಿಕೊಳ್ಳಿರಿ. [QBR] ಯೆಹೂದದ ಜನಗಳೇ, ಜೆರುಸಲೇಮಿನ ಜನರೇ, ನೀವು ಬದಲಾಗದಿದ್ದರೆ [QBR2] ನನಗೆ ವಿಪರೀತ ಕೋಪ ಬರುವುದು. [QBR] ನನ್ನ ಕೋಪವು ಬೆಂಕಿಯ ಜ್ವಾಲೆಯಂತೆ ಭರದಿಂದ ಹಬ್ಬುವದು. [QBR2] ನನ್ನ ಕೋಪವು ನಿಮ್ಮನ್ನು ಸುಟ್ಟು ಬೂದಿ ಮಾಡುವುದು. [QBR] ಯಾರಿಂದಲೂ ಆ ಬೆಕಿಯನ್ನು ಆರಿಸುವುದು ಸಾಧ್ಯವಾಗುವದಿಲ್ಲ. [QBR2] ಇದೆಲ್ಲ ಏಕೆ ನಡೆಯುವುದು? ನೀವು ಮಾಡಿದ ದುಷ್ಕೃತ್ಯಗಳಿಂದಲೇ.” [PS]
ಯೆರೆಮಿಯ 4 : 5 (ERVKN)
{ಉತ್ತರ ದಿಕ್ಕಿನಿಂದ ವಿಪತ್ತು} [PS] “ಈ ಸಂದೇಶವನ್ನು ಯೆಹೂದ ಜನರಲ್ಲಿ ಸಾರಿರಿ: ಜೆರುಸಲೇಮ್ ನಗರದ ಪ್ರತಿಯೊಬ್ಬನಿಗೂ [QBR2] ‘ದೇಶದಲ್ಲೆಲ್ಲಾ ತುತ್ತೂರಿಗಳನ್ನು ಊದಿರಿ’ ಎಂದು ಹೇಳಿರಿ. [QBR] ದೊಡ್ಡ ಧ್ವನಿಯಲ್ಲಿ [QBR2] ‘ಒಂದು ಕಡೆ ಸೇರೋಣ ಬನ್ನಿ, [QBR2] ರಕ್ಷಣೆಗಾಗಿ ಭದ್ರವಾದ ನಗರಗಳಿಗೆ ಓಡಿಹೋಗೋಣ ಬನ್ನಿ’ ಎಂದು ಕೂಗಿ ಹೇಳಿರಿ. [QBR]
ಯೆರೆಮಿಯ 4 : 6 (ERVKN)
ಚೀಯೋನಿನ ಕಡೆಗೆ ಧ್ವಜವನ್ನು ಎತ್ತಿ ಸಂಕೇತ ಕೊಡಿ. [QBR2] ನಿಲ್ಲಬೇಡಿ. ನಿಮ್ಮ ಜೀವ ರಕ್ಷಣೆಗಾಗಿ ಓಡಿರಿ. [QBR] ನಾನು ಉತ್ತರದಿಂದ ವಿಪತ್ತನ್ನು ತರುತ್ತಿರುವುದರಿಂದ ನೀವು ಹೀಗೆ ಮಾಡಬೇಕು. [QBR2] ನಾನು ಭಯಂಕರವಾದ ವಿನಾಶವನ್ನುಟು ಮಾಡಲಿದ್ದೇನೆ.” [QBR]
ಯೆರೆಮಿಯ 4 : 7 (ERVKN)
ತನ್ನ ಗುಹೆಯಿಂದ ಒಂದು “ಸಿಂಹವು” ಹೊರಬಂದಿದೆ. [QBR2] ಜನಾಂಗಗಳ ವಿನಾಶಕವಾದ ಸಿಂಹವು ಹೆಜ್ಜೆ ಹಾಕುತ್ತಿದೆ. [QBR] ಅದು ನಿಮ್ಮ ಪ್ರದೇಶವನ್ನು ನಾಶಮಾಡಲು ತನ್ನ ಗುಹೆಯನ್ನು ಬಿಟ್ಟು ಹೊರಟಿದೆ. [QBR] ನಿಮ್ಮ ಪಟ್ಟಣಗಳೆಲ್ಲ ನಾಶಹೊಂದುವವು. [QBR2] ಅಲ್ಲಿ ವಾಸಿಸಲು ಜನರೇ ಇಲ್ಲದಂತಾಗುವುದು. [QBR]
ಯೆರೆಮಿಯ 4 : 8 (ERVKN)
ಆದ್ದರಿಂದ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ. ದೊಡ್ಡ ಧ್ವನಿಯಿಂದ ಗೋಳಾಡಿರಿ. [QBR2] ಏಕೆಂದರೆ ಯೆಹೋವನು ನಮ್ಮ ಮೇಲೆ ತುಂಬ ಕೋಪಗೊಂಡಿದ್ದಾನೆ. [QBR]
ಯೆರೆಮಿಯ 4 : 9 (ERVKN)
ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ [QBR2] ರಾಜನು ಮತ್ತು ನಾಯಕರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು. [QBR] ಯಾಜಕರು ಭಯಪಡುವರು; [QBR2] ಪ್ರವಾದಿಗಳು ಬೆರಗಾಗುವರು.” [PS]
ಯೆರೆಮಿಯ 4 : 10 (ERVKN)
ಆಗ ಯೆರೆಮೀಯನೆಂಬ ನಾನು, “ನನ್ನ ಒಡೆಯನಾದ ಯೆಹೋವನೇ, ನೀನು ಯೆಹೂದ ಮತ್ತು ಜೆರುಸಲೇಮಿನ ಜನರಿಗೆ ಮೋಸ ಮಾಡಿದೆ, ‘ನೀವು ಶಾಂತಿಯಿಂದ ಇರುವಿರಿ’ ಎಂದು ನೀನು ಅವರಿಗೆ ಹೇಳಿದೆ. ಆದರೆ ಈಗ ಅವರ ಕತ್ತಿನ ಮೇಲೆ ಖಡ್ಗ ಇದೆ” ಎಂದೆನು.
ಯೆರೆಮಿಯ 4 : 11 (ERVKN)
ಆ ಸಮಯದಲ್ಲಿ ಯೆಹೂದ ಮತ್ತು ಜೆರುಸಲೇಮಿನ ಜನರಿಗೆ [QBR2] ಒಂದು ಸಂದೇಶವನ್ನು ಕೊಡಲಾಗುವುದು. [QBR] “ಬೋಳುಬೆಟ್ಟಗಳಿಂದ ಒಂದು ಬಿಸಿಗಾಳಿಯು ಬೀಸುವುದು. [QBR2] ಅದು ಮರಳುಗಾಡಿನಿಂದ ಬೀಸುವುದು. [QBR] ಇದು ರೈತನು ತೂರಿ ಹೊಟ್ಟಿನಿಂದ ಕಾಳನ್ನು ಬೇರ್ಪಡಿಸಲು [QBR2] ಬೇಕಾಗುವ ಸೌಮ್ಯವಾದ ಗಾಳಿಯಂತಲ್ಲ. [QBR]
ಯೆರೆಮಿಯ 4 : 12 (ERVKN)
ಇದು ಅದಕ್ಕಿಂತಲೂ ಬಹು ಬಿರುಸಾಗಿ ಬೀಸುತ್ತದೆ. [QBR2] ಅದು ನನ್ನಿಂದ ಬರುತ್ತದೆ. [QBR] ಈಗ ಯೆಹೂದದ ಜನರಿಗೆ ನ್ಯಾಯವಾದ ದಂಡನೆಗಳನ್ನು ವಿಧಿಸುವೆನು.” [QBR]
ಯೆರೆಮಿಯ 4 : 13 (ERVKN)
ಇಗೋ, ಆ ಶತ್ರುವು ಮೇಘಮಾಲೆಯಂತೆ ಬರುತ್ತಿದ್ದಾನೆ. [QBR2] ಅವನ ರಥಗಳು ಬಿರುಗಾಳಿಯಂತೆ ಕಾಣುತ್ತಿವೆ. [QBR2] ಅವನ ಕುದುರೆಗಳು ಹದ್ದುಗಳಿಗಿಂತ ವೇಗವಾಗಿ ಓಡುತ್ತಿವೆ. [QBR] ಇದು ನಮಗೆ ತುಂಬ ಅಪಾಯಕಾರಿಯಾಗಿದೆ; [QBR2] ನಾವು ಹಾಳಾಗಿಹೋದೆವು.
ಯೆರೆಮಿಯ 4 : 14 (ERVKN)
ಜೆರುಸಲೇಮಿನ ಜನರೇ, ನಿಮ್ಮ ಹೃದಯದ ಕೆಟ್ಟತನವನ್ನು ತೊಳೆದುಕೊಳ್ಳಿರಿ. [QBR] ರಕ್ಷಣೆಹೊಂದಲು ನಿಮ್ಮ ಹೃದಯಗಳನ್ನು ಪವಿತ್ರಗೊಳಿಸಿರಿ. [QBR2] ದುರಾಲೋಚನೆಗಳನ್ನು ಮುಂದುವರಿಸಬೇಡಿರಿ. [QBR]
ಯೆರೆಮಿಯ 4 : 15 (ERVKN)
ಕೇಳಿರಿ, ದಾನ್ ಪ್ರದೇಶದಿಂದ [QBR2] ದೂತನ ಸ್ವರವು ಕೇಳಿಬರುತ್ತಿದೆ. [QBR] ಎಫ್ರಾಯೀಮ್ ಬೆಟ್ಟಪ್ರದೇಶದಿಂದ [QBR2] ಒಬ್ಬನು ಕೆಟ್ಟ ಸಮಾಚಾರವನ್ನು ತರುತ್ತಿದ್ದಾನೆ. [QBR]
ಯೆರೆಮಿಯ 4 : 16 (ERVKN)
“ಇದನ್ನು ಈ ಜನಾಂಗಕ್ಕೆ ತಿಳಿಸಿರಿ. [QBR2] ಜೆರುಸಲೇಮಿನ ಜನರಲ್ಲಿ ಈ ಸಮಾಚಾರವನ್ನು ಹರಡಿರಿ. [QBR] ಬಹುದೂರದೇಶದಿಂದ ಶತ್ರುಗಳು ಬರುತ್ತಿದ್ದಾರೆ. [QBR] ಆ ಶತ್ರುಗಳು ಯೆಹೂದದ ನಗರಗಳ ವಿರುದ್ಧ [QBR2] ಯುದ್ಧದ ಘೋಷಣೆಗಳನ್ನು ಕೂಗುತ್ತಿದ್ದಾರೆ. [QBR]
ಯೆರೆಮಿಯ 4 : 17 (ERVKN)
ಹೊಲವನ್ನು ಕಾಯುವ ಜನರಂತೆ [QBR2] ವೈರಿಗಳು ಜೆರುಸಲೇಮನ್ನು ಮುತ್ತಿಕೊಂಡಿದ್ದಾರೆ. [QBR] ಯೆಹೂದವೇ, ನೀನು ನನಗೆ ತಿರುಗಿಬಿದ್ದೆ, [QBR2] ಅದಕ್ಕಾಗಿ ನಿನ್ನ ಮೇಲೆ ಶತ್ರುಗಳು ಬೀಳುತ್ತಿದ್ದಾರೆ” [QBR] ಎಂದು ಯೆಹೋವನು ಹೇಳುವನು.
ಯೆರೆಮಿಯ 4 : 18 (ERVKN)
“ನಿನ್ನ ನಡತೆಯೂ ನಿನ್ನ ಕೃತ್ಯಗಳೂ [QBR2] ನಿನಗೆ ಈ ಕಷ್ಟವನ್ನು ತಂದವು. [QBR] ನಿನ್ನ ದುಷ್ಟತನವೇ ನಿನ್ನ ಜೀವನವನ್ನು ಇಷ್ಟು ಕಷ್ಟಕರವನ್ನಾಗಿ ಮಾಡಿದೆ. [QBR] ನಿನ್ನ ದುಷ್ಟತನವೇ ನಿನ್ನ ಮನಸ್ಸಿಗೆ [QBR2] ಆಳವಾದ ನೋವನ್ನು ಉಂಟುಮಾಡಿದೆ.”
ಯೆರೆಮಿಯ 4 : 19 (ERVKN)
{ಯೆರೆಮೀಯನ ಗೋಳಾಟ} [PS] ಅಯ್ಯೋ, ನನ್ನ ದುಃಖ ಮತ್ತು ಚಿಂತೆ ನನ್ನ ಹೊಟ್ಟೆಯಲ್ಲಿ ಸಂಕಟವನ್ನು ಉಂಟುಮಾಡುತ್ತಿವೆ. [QBR2] ನೋವಿನಿಂದ ನಾನು ಬಾಗಿಹೋಗಿದ್ದೇನೆ. [QBR] ನಾನು ತುಂಬ ಹೆದರಿಕೊಂಡಿದ್ದೇನೆ. [QBR2] ನನ್ನ ಹೃದಯವು ಒಳಗೆ ತಳಮಳಗೊಳ್ಳುತ್ತಿದೆ. [QBR] ನಾನು ಬಾಯಿ ಮುಚ್ಚಿಕೊಂಡಿರಲಾರೆ. ಏಕೆಂದರೆ, ನಾನು ತುತ್ತೂರಿಯ ಶಬ್ದವನ್ನು ಕೇಳಿದ್ದೇನೆ. [QBR2] ಆ ತುತ್ತೂರಿಯು ಸೈನ್ಯವನ್ನು ಯುದ್ಧಕ್ಕೆ ಕರೆಯುತ್ತಿದೆ. [QBR]
ಯೆರೆಮಿಯ 4 : 20 (ERVKN)
ವಿನಾಶನದ ಮೇಲೆ ವಿನಾಶವು ಬಂದು [QBR2] ಇಡೀ ದೇಶವೇ ಹಾಳಾಗಿದೆ. [QBR] ಫಕ್ಕನೆ ನನ್ನ ಗುಡಾರಗಳು ಹಾಳಾದವು. [QBR2] ನನ್ನ ಪರದೆಗಳು ಹರಿದುಹೋದವು. [QBR]
ಯೆರೆಮಿಯ 4 : 21 (ERVKN)
ಯೆಹೋವನೇ, ಎಷ್ಟು ಹೊತ್ತಿನವರೆಗೆ ನಾನು ಯುದ್ಧ ಧ್ವಜಗಳನ್ನು ನೋಡಬೇಕು? [QBR2] ಎಷ್ಟು ಹೊತ್ತಿನವರೆಗೆ ನಾನು ಯುದ್ಧದ ತುತ್ತೂರಿಗಳ ಶಬ್ಧವನ್ನು ಕೇಳಬೇಕು?
ಯೆರೆಮಿಯ 4 : 22 (ERVKN)
ದೇವರು, “ನನ್ನ ಜನರು ಮೂರ್ಖರಾಗಿದ್ದಾರೆ. [QBR2] ಅವರು ನನ್ನನ್ನು ಅರಿಯದವರಾಗಿದ್ದಾರೆ. [QBR] ಅವರು ಮೂಢ ಮಕ್ಕಳಾಗಿದ್ದಾರೆ. [QBR2] ಅವರು ಅವಿವೇಕಿಗಳಾಗಿದ್ದಾರೆ. [QBR] ಅವರು ದುಷ್ಕೃತ್ಯದಲ್ಲಿ ನಿಪುಣರಾಗಿದ್ದಾರೆ. [QBR2] ಅವರು ಒಳ್ಳೆಯದನ್ನು ಮಾಡಲರಿಯದವರಾಗಿದ್ದಾರೆ” ಎಂದನು.
ಯೆರೆಮಿಯ 4 : 23 (ERVKN)
{ವಿಪತ್ತಿನ ಆಗಮನ} [PS] ನಾನು ಭೂಮಿಯ ಕಡೆಗೆ ನೋಡಿದೆ, [QBR2] ಭೂಮಿಯು ಬರಿದಾಗಿತ್ತು. [QBR2] ಭೂಮಿಯ ಮೇಲೇನೂ ಇರಲಿಲ್ಲ. [QBR] ನಾನು ಆಕಾಶದ ಕಡೆಗೆ ನೋಡಿದೆ, [QBR2] ಅದರ ಬೆಳಕು ಹೋಗಿಬಿಟ್ಟಿತ್ತು. [QBR]
ಯೆರೆಮಿಯ 4 : 24 (ERVKN)
ನಾನು ಪರ್ವತಗಳ ಕಡೆಗೆ ನೋಡಿದೆ, [QBR2] ಅವುಗಳು ನಡುಗುತ್ತಿದ್ದವು. [QBR2] ಎಲ್ಲಾ ಬೆಟ್ಟಗಳು ಅದರುತ್ತಿದ್ದವು. [QBR]
ಯೆರೆಮಿಯ 4 : 25 (ERVKN)
ನಾನು ನೋಡಿದರೂ ಅಲ್ಲಿ ಜನರಿರಲಿಲ್ಲ. [QBR2] ಆಕಾಶದ ಎಲ್ಲಾ ಪಕ್ಷಿಗಳು ಹಾರಿಹೋಗಿದ್ದವು. [QBR]
ಯೆರೆಮಿಯ 4 : 26 (ERVKN)
ನಾನು ನೋಡಿದಾಗ ಫಲವತ್ತಾದ ಭೂಮಿಯು ಮರಳುಗಾಡಾಗಿತ್ತು. [QBR2] ಆ ಪ್ರದೇಶದ ಎಲ್ಲಾ ನಗರಗಳು ಹಾಳಾಗಿ ಹೋಗಿದ್ದವು. ಯೆಹೋವನು ಇದನ್ನು ಮಾಡಿದನು. ಯೆಹೋವನು ತನ್ನ ಭಯಂಕರವಾದ ಕೋಪದಿಂದ ಇದನ್ನು ಮಾಡಿದನು.
ಯೆರೆಮಿಯ 4 : 27 (ERVKN)
ಯೆಹೋವನು ಹೀಗೆ ಹೇಳುತ್ತಾನೆ: [QBR] “ಇಡೀ ದೇಶವು ಹಾಳಾಗುವುದು. [QBR2] ಆದರೆ ನಾನು ಭೂಮಿಯನ್ನು ಸಂಪೂರ್ಣವಾಗಿ ನಾಶಮಾಡುವದಿಲ್ಲ. [QBR]
ಯೆರೆಮಿಯ 4 : 28 (ERVKN)
ಈ ಪ್ರದೇಶದ ಜನರು ಸತ್ತವರಿಗಾಗಿ ಅಳುವರು. [QBR2] ಆಕಾಶವು ಕಪ್ಪಾಗುವುದು. [QBR] ನಾನು ಹೇಳಿದ್ದೇನೆ, ಅದು ಬದಲಾಗುವುದಿಲ್ಲ. [QBR2] ನಾನು ಒಂದು ನಿರ್ಣಯ ತೆಗೆದುಕೊಂಡಿದ್ದೇನೆ, ನಾನು ನನ್ನ ಮನಸ್ಸನ್ನು ಬದಲಾಯಿಸುವದಿಲ್ಲ.”
ಯೆರೆಮಿಯ 4 : 29 (ERVKN)
ಯೆಹೂದದ ಜನರು ಕುದುರೆಗಳ, ಸವಾರರ, [QBR2] ಬಿಲ್ಲುಗಾರರ ಶಬ್ಧಗಳನ್ನು ಕೇಳಿ ಓಡಿಹೋಗುವರು. [QBR] ಕೆಲವು ಜನರು ಗುಹೆಯಲ್ಲಿ ಅಡಗಿಕೊಳ್ಳುವರು. [QBR2] ಕೆಲವರು ಪೊದೆಗಳಲ್ಲಿ ಅವಿತುಕೊಳ್ಳುವರು. [QBR2] ಕೆಲವರು ಬೆಟ್ಟಗಳನ್ನು ಹತ್ತಿಹೋಗುವರು. [QBR] ಯೆಹೂದದ ಎಲ್ಲಾ ನಗರಗಳು ಬರಿದಾಗುವವು. [QBR2] ಅಲ್ಲಿ ಒಬ್ಬರೂ ಇರುವದಿಲ್ಲ.
ಯೆರೆಮಿಯ 4 : 30 (ERVKN)
ಹಾಳಾಗಿಹೋದ ಯೆಹೂದವೇ, [QBR2] ನೀನು ಮಾಡುತ್ತಿರುವುದೇನು? [QBR] ಅತ್ಯುತ್ತಮವಾದ ಕೆಂಪುಬಣ್ಣದ ಪೋಷಾಕನ್ನು ನೀನು ಧರಿಸಿಕೊಳ್ಳುತ್ತಿರುವುದೇಕೆ? [QBR] ಸುವರ್ಣಾಭರಣಗಳಿಂದ ನಿನ್ನನ್ನು ಏಕೆ ಅಲಂಕರಿಸಿಕೊಳ್ಳುತ್ತಿರುವೆ? [QBR] ಕಣ್ಣಿಗೆ ಕಾಡಿಗೆಯನ್ನು ಏಕೆ ಹಚ್ಚುತ್ತಿರುವೆ? [QBR] ನೀನು ಅಲಂಕಾರ ಮಾಡಿಕೊಳ್ಳುವದೆಲ್ಲ ವ್ಯರ್ಥ. [QBR] ನಿನ್ನ ಪ್ರಿಯತಮರು ನಿನ್ನನ್ನು ತಿರಸ್ಕರಿಸುತ್ತಾರೆ. [QBR2] ಅವರು ನಿನ್ನನ್ನು ಕೊಲೆಮಾಡುವ ಪ್ರಯತ್ನದಲ್ಲಿದ್ದಾರೆ. [QBR]
ಯೆರೆಮಿಯ 4 : 31 (ERVKN)
ಮೊದಲನೆ ಹೆರಿಗೆಯ ಸಮಯದಲ್ಲಿ [QBR2] ವೇದನೆಪಡುವ ಹೆಂಗಸಿನ ಸ್ವರದಂತಿರುವ ಒಂದು ಧ್ವನಿಯನ್ನು ನಾನು ಕೇಳಿದೆ, [QBR2] ಇದು ಚೀಯೋನ್ ನಗರಿಯ ಮಗಳ ಕೂಗಾಟ. [QBR] ಅವಳು ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಪ್ರಾರ್ಥಿಸುತ್ತಾ, [QBR2] “ಅಯ್ಯೋ, ನಾನು ಮೂರ್ಛೆ, ಹೋಗುವುದರಲ್ಲಿದ್ದೇನೆ, [QBR2] ನನ್ನ ಸುತ್ತಲೆಲ್ಲ ಕೊಲೆಗಡುಕರಿದ್ದಾರೆ” ಎಂದು ಹೇಳುತ್ತಿದ್ದಾಳೆ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31

BG:

Opacity:

Color:


Size:


Font: