ಯೆಶಾಯ 34 : 1 (ERVKN)
ದೇವರು ತನ್ನ ಶತ್ರುಗಳನ್ನು ಶಿಕ್ಷಿಸುತ್ತಾನೆ ಎಲ್ಲಾ ಜನಾಂಗಗಳೇ, ಹತ್ತಿರ ಬಂದು ಕೇಳಿರಿ; ಜನಗಳೇ ಸ್ಪಷ್ಟವಾಗಿ ಕೇಳಿಸಿಕೊಳ್ಳಿರಿ. ಭೂಮಿಯೂ ಭೂಮಿಯ ಮೇಲಿರುವ ಸಮಸ್ತವೂ ಅವುಗಳಿಗೆ ಕಿವಿಗೊಡಬೇಕು. ಲೋಕವೂ ಅದರಲ್ಲಿರುವ ಸಮಸ್ತವೂ ಆಲಿಸಲಿ.
ಯೆಶಾಯ 34 : 2 (ERVKN)
ಯೆಹೋವನು ಎಲ್ಲಾ ದೇಶಗಳವರ ಮೇಲೆಯೂ ಅವುಗಳ ಸೈನ್ಯದ ಮೇಲೆಯೂ ಕೋಪಗೊಂಡಿದ್ದಾನೆ. ಯೆಹೋವನು ಅವರೆಲ್ಲರನ್ನು ನಾಶಮಾಡುತ್ತಾನೆ. ಅವರೆಲ್ಲರೂ ಕೊಲ್ಲಲ್ಪಡುವಂತೆ ಮಾಡುತ್ತಾನೆ.
ಯೆಶಾಯ 34 : 3 (ERVKN)
ಅವರ ಹೆಣಗಳು ಹೊರಗೆ ಬಿಸಾಡಲ್ಪಡುವವು. ದುರ್ವಾಸನೆಯು ಹರಡುವದು, ರಕ್ತವು ಪರ್ವತದಿಂದ ಹರಿಯುವುದು.
ಯೆಶಾಯ 34 : 4 (ERVKN)
ಆಕಾಶವು ಸುರುಳಿಯಂತೆ ಮುಚ್ಚಿಹೋಗುವದು. ನಕ್ಷತ್ರಗಳು ದ್ರಾಕ್ಷಾಲತೆಯ ಒಣಗಿದ ಎಲೆಗಳಂತೆಯೂ ಅಂಜೂರದ ಒಣಗಿದ ಎಲೆಗಳಂತೆಯೂ ಉದುರಿಬೀಳುವವು. ಆಕಾಶದಲ್ಲಿರುವ ಎಲ್ಲಾ ನಕ್ಷತ್ರಗಳು ಕರಗಿಹೋಗುವವು.
ಯೆಶಾಯ 34 : 5 (ERVKN)
“ಆಕಾಶದಲ್ಲಿರುವ ನನ್ನ ಖಡ್ಗವು ರಕ್ತದಲ್ಲಿ ಮುಳುಗಿದಾಗ ಇವೆಲ್ಲಾ ಸಂಭವಿಸುವದು” ಎಂದು ಯೆಹೋವನು ಅನ್ನುತ್ತಾನೆ. ಯೆಹೋವನ ಖಡ್ಗವು ಎದೋಮನ್ನು ತುಂಡರಿಸುವುದು. ಆತನು ಆ ಜನರನ್ನು ದೋಷಿಗಳೆಂದು ನ್ಯಾಯತೀರಿಸಿದ್ದಾನೆ. ಆದ್ದರಿಂದ ಅವರು ಸಾಯಬೇಕು.
ಯೆಶಾಯ 34 : 6 (ERVKN)
ಆತನು ಬೊಚ್ರದಲ್ಲಿ ಮತ್ತು ಎದೋಮಿನಲ್ಲಿ ಕೊಲ್ಲುವ ಸಮಯವನ್ನು ನಿರ್ಧರಿಸಿರುತ್ತಾನೆ. ಯೆಹೋವನ ಖಡ್ಗವು ವಪೆಯಿಂದಲೂ, ಕುರಿಹೋತಗಳ ರಕ್ತದಿಂದಲೂ, ಟಗರುಗಳ ಪಿತ್ತಕೋಶದ ಕೊಬ್ಬಿನಿಂದಲೂ ರಕ್ತಭರಿತವಾಗಿದೆ.
ಯೆಶಾಯ 34 : 7 (ERVKN)
ಟಗರುಗಳು, ದನಕುರಿಗಳು ಮತ್ತು ಬಲವಾದ ಹೋರಿಗಳು ಕೊಲ್ಲಲ್ಪಡುವವು. ಭೂಮಿಯು ಅವುಗಳ ರಕ್ತದಿಂದ ತುಂಬಿಹೋಗುವದು. ಅಲ್ಲಿನ ಧೂಳು ಅವುಗಳ ಕೊಬ್ಬಿನಿಂದ ಆವೃತವಾಗಿದೆ.
ಯೆಶಾಯ 34 : 8 (ERVKN)
ಇದು ನೆರವೇರುವುದು, ಯಾಕೆಂದರೆ ದೇವರು ದಂಡನೆಗಾಗಿ ಸಮಯವನ್ನು ಆರಿಸಿಕೊಂಡಿದ್ದಾನೆ. ಜನರು ಚೀಯೋನಿನಲ್ಲಿ ಮಾಡಿದ ಕಾರ್ಯಗಳಿಗೆ ದಂಡನೆಯನ್ನು ಅನುಭವಿಸುವುದಕ್ಕಾಗಿ ಆತನು ಒಂದು ವರ್ಷವನ್ನು ಆರಿಸಿಕೊಂಡಿದ್ದಾನೆ.
ಯೆಶಾಯ 34 : 9 (ERVKN)
ಎದೋಮಿನ ನದಿಗಳು ಕರಗಿರುವ ರಾಳದಂತಿರುವದು. ಅದರ ನೆಲವು ಸುಡುವ ಗಂಧಕದಂತಿರುವದು.
ಯೆಶಾಯ 34 : 10 (ERVKN)
ಬೆಂಕಿಯು ಹಗಲಿರುಳು ಉರಿಯುವದು. ಯಾರಿಗೂ ಅದನ್ನು ನಂದಿಸಲು ಸಾಧ್ಯವಿಲ್ಲ. ಎದೋಮಿನಿಂದ ಹೊಗೆಯು ಯಾವಾಗಲೂ ಮೇಲಕ್ಕೇರುವದು. ಆ ದೇಶವು ನಿತ್ಯಕಾಲಕ್ಕೂ ನಾಶವಾಗಿ ಹೋಗುವದು. ಆ ದೇಶದೊಳಗೆ ಯಾರೂ ಪ್ರಯಾಣ ಮಾಡುವದಿಲ್ಲ.
ಯೆಶಾಯ 34 : 11 (ERVKN)
ಪಕ್ಷಿಗಳು ಮತ್ತು ಚಿಕ್ಕಪ್ರಾಣಿಗಳೂ ಅದರಲ್ಲಿ ವಾಸಿಸುವವು. ಗೂಬೆಗಳೂ ಕಾಗೆಗಳೂ ಅಲ್ಲಿ ವಾಸಿಸುವವು. ಅದು “ಬೆಂಗಾಡಿನ ಮರುಭೂಮಿ” ಎಂದು ಕರೆಯಲ್ಪಡುವದು.
ಯೆಶಾಯ 34 : 12 (ERVKN)
ಅದರ ನಾಯಕರೂ ಸ್ವತಂತ್ರರೂ *ಸ್ವತಂತ್ರರು ಪಟ್ಟಣದ ಅಥವಾ ದೇಶದ ಮುಖ್ಯಪ್ರಜೆಗಳು. ಇವರು ಒಳ್ಳೆಯ ಕುಟುಂಬಗಳಿಂದ ಸ್ವತಂತ್ರರು ಪಟ್ಟಣದ ಅಥವಾ ದೇಶದ ಮುಖ್ಯಪ್ರಜೆಗಳು. ಇವರು ಒಳ್ಳೆಯ ಕುಟುಂಬಗಳಿಂದ ಬಂದವರಾಗಿರುವರು ಮತ್ತು ಹಿಂದೆಂದೂ ಗುಲಾಮರಾಗಿರಲಿಲ್ಲ. ಇಲ್ಲವಾಗುವರು; ಯಾಕೆಂದರೆ ಅವರಿಗೆ ಆಳಲಿಕ್ಕೆ ಅಲ್ಲಿ ಏನೂ ಇರದು.
ಯೆಶಾಯ 34 : 13 (ERVKN)
ಮುಳ್ಳುಗಿಡಗಳು ಅಲ್ಲಿಯ ಸುಂದರವಾದ ಬಂಗಲೆಗಳಲ್ಲಿ ಬೆಳೆಯುವವು. ಕಾಡುನಾಯಿಗಳೂ ಗೂಬೆಗಳೂ ಆ ಮನೆಗಳಲ್ಲಿ ವಾಸಿಸುವವು. ಕಾಡುಪ್ರಾಣಿಗಳು ಅದನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುವವು. ಅಲ್ಲಿ ಬೆಳೆಯುವ ಎತ್ತರವಾದ ಹುಲ್ಲುಗಳಲ್ಲಿ ಉಷ್ಟ್ರಪಕ್ಷಿಗಳು ವಾಸಮಾಡುವವು.
ಯೆಶಾಯ 34 : 14 (ERVKN)
ಕಾಡುಬೆಕ್ಕುಗಳು ಮತ್ತು ಕತ್ತೆಕಿರುಬಗಳು ಅಲ್ಲಿ ವಾಸಮಾಡುವವು. ಕಾಡುಹೋತಗಳು ತಮ್ಮ ಸ್ನೇಹಿತರನ್ನು ಕರೆಯುವವು. ರಾತ್ರಿಪ್ರಾಣಿಗಳು ಅಲ್ಲಿ ವಿಶ್ರಮಿಸಿಕೊಳ್ಳುವವು.
ಯೆಶಾಯ 34 : 15 (ERVKN)
ಅಲ್ಲಿ ಹಾವುಗಳು ತಮ್ಮ ಮನೆಗಳನ್ನು ಮಾಡಿಕೊಳ್ಳುವವು. ಅಲ್ಲಿಯೇ ಮೊಟ್ಟೆಗಳನ್ನಿಡುವವು, ಮೊಟ್ಟೆಗಳು ಒಡೆದಾಗ ಸಣ್ಣ ಹಾವುಮರಿಗಳು ಆ ಕತ್ತಲೆಯ ಜಾಗದಲ್ಲಿ ಹರಿದಾಡುವವು. ಹೆಂಗಸರು ಪರಸ್ಪರ ಸಂಧಿಸಿ ಮಾತನಾಡುವಂತೆ ಸತ್ತಪ್ರಾಣಿಗಳ ಮಾಂಸವನ್ನು ತಿನ್ನುವ ಪಕ್ಷಿಗಳು ಒಟ್ಟಾಗಿ ಸೇರುವವು.
ಯೆಶಾಯ 34 : 16 (ERVKN)
ಯೆಹೋವನ ಸುರುಳಿಯನ್ನು ನೋಡಿರಿ. ಅಲ್ಲಿ ಬರೆದಿರುವದನ್ನು ಓದಿರಿ. ಅದರಲ್ಲಿ ಯಾವದೂ ಕಳೆದುಹೋಗಿಲ್ಲ. ಆ ಪ್ರಾಣಿಗಳು ಒಟ್ಟಾಗಿ ವಾಸಿಸುವವೆಂದು ಆ ಸುರುಳಿಯಲ್ಲಿ ಬರೆದದೆ. ಅವುಗಳನ್ನು ಒಟ್ಟಾಗಿ ಸೇರಿಸುತ್ತೇನೆಂದು ದೇವರು ಹೇಳಿದ್ದಾನೆ. ಆದ್ದರಿಂದ ಯೆಹೋವನ ಆತ್ಮವು ಅವುಗಳನ್ನು ಒಟ್ಟಾಗಿ ಸೇರಿಸುವದು.
ಯೆಶಾಯ 34 : 17 (ERVKN)
ಅವುಗಳಿಗೆ ಮಾಡತಕ್ಕದ್ದನ್ನು ದೇವರು ತೀರ್ಮಾನಿಸಿದ್ದಾನೆ. ಆತನು ಅವುಗಳಿಗೆ ಒಂದು ಸ್ಥಳವನ್ನು ಆರಿಸಿದ್ದಾನೆ. ಆತನು ಮೇರೆಯನ್ನು ನಿರ್ಮಿಸಿ ಅವುಗಳ ದೇಶವನ್ನು ತೋರಿಸಿದ್ದಾನೆ. ಹೀಗೆ ಆ ಪ್ರಾಣಿಗಳು ದೇಶವನ್ನು ನಿತ್ಯಕಾಲಕ್ಕೂ ತಮ್ಮದಾಗಿ ಮಾಡಿಕೊಳ್ಳುವವು. ವರ್ಷವರ್ಷವೂ ಅವುಗಳು ಅಲ್ಲಿಯೇ ವಾಸಮಾಡುವವು.
❮
❯
1
2
3
4
5
6
7
8
9
10
11
12
13
14
15
16
17