ಯೆಶಾಯ 19 : 1 (ERVKN)
{ಈಜಿಪ್ಟಿಗೆ ದೇವರ ಸಂದೇಶ} [PS] ಈಜಿಪ್ಟಿನ ವಿಷಯವಾಗಿ ದುಃಖಕರವಾದ ಸಂದೇಶ: ಯೆಹೋವನು ವೇಗವಾಗಿ ಬರುವ ಮೋಡದೊಂದಿಗೆ ಬರುತ್ತಿದ್ದಾನೆ. ಆತನು ಈಜಿಪ್ಟನ್ನು ಪ್ರವೇಶಿಸುವಾಗ ಈಜಿಪ್ಟಿನ ಸುಳ್ಳುದೇವರುಗಳೆಲ್ಲಾ ಹೆದರಿ ನಡುಗುವವು. ಈಜಿಪ್ಟು ಧೈರ್ಯಶಾಲಿ ದೇಶವಾಗಿದ್ದರೂ, ಅದರ ಧೈರ್ಯ ಮೇಣದಂತೆ ಕರಗಿಹೋಗುವದು. [PE][PS]
ಯೆಶಾಯ 19 : 2 (ERVKN)
ದೇವರು ಹೇಳುವುದೇನೆಂದರೆ: “ನಾನು ಈಜಿಪ್ಟಿನ ಜನರಲ್ಲಿ ಒಳಜಗಳವನ್ನು ಹುಟ್ಟಿಸುವೆನು. ಜನರು ತಮ್ಮ ಸಹೋದರರೊಂದಿಗೆ ಜಗಳವಾಡುವರು. ನೆರೆಹೊರೆಯವರು ಪರಸ್ಪರ ಜಗಳವಾಡುವರು. ನಗರವು ನಗರದೊಂದಿಗೆ ಯುದ್ಧ ಮಾಡುವದು. ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರದೊಂದಿಗೆ ಯುದ್ಧಮಾಡುವದು.
ಯೆಶಾಯ 19 : 3 (ERVKN)
ಈಜಿಪ್ಟಿನ ಜನರಲ್ಲಿ ಗಲಿಬಿಲಿ ಉಂಟಾಗುವದು. ಆ ಜನರು ತಮ್ಮ ಸುಳ್ಳುದೇವರುಗಳ ಬಳಿಗೂ ಪಂಡಿತರ ಬಳಿಗೂ ಓಡಿ ತಾವು ಏನು ಮಾಡಬೇಕೆಂದು ವಿಚಾರಿಸುವರು. ಮಂತ್ರವಾದಿಗಳನ್ನೂ ಪ್ರೇತವಿಚಾರಕರನ್ನೂ ಬೇತಾಳಿಕರನ್ನೂ ಕೇಳುವರು. ಆದರೆ ಅವರ ಯಾವ ಸಲಹೆಗಳೂ ಪ್ರಯೋಜನಕ್ಕೆ ಬರುವದಿಲ್ಲ.”
ಯೆಶಾಯ 19 : 4 (ERVKN)
ಸರ್ವಶಕ್ತನೂ ಒಡೆಯನೂ ಆಗಿರುವ ಯೆಹೋವನು ಹೇಳುವುದೇನೆಂದರೆ: “ನಾನು ಈಜಿಪ್ಟನ್ನು ಕಠಿಣನಾದ ಒಡೆಯನಿಗೆ ಒಪ್ಪಿಸುವೆನು. ಬಲಿಷ್ಠ ಒಡೆಯನು ಅವರನ್ನು ಆಳುವನು.” [PE][PS]
ಯೆಶಾಯ 19 : 5 (ERVKN)
ನೈಲ್ ನದಿಯು ಬತ್ತಿಹೋಗುವದು. ಪ್ರವಾಹದ ನೀರು ಇಲ್ಲವಾಗುವದು.
ಯೆಶಾಯ 19 : 6 (ERVKN)
ಎಲ್ಲಾ ನದಿಗಳಿಂದ ದುರ್ವಾಸನೆ ಹೊರಡುವದು. ಈಜಿಪ್ಟಿನ ಕಾಲಿವೆಗಳು ಬತ್ತಿಹೋಗುತ್ತವೆ; ಜಲಸಸ್ಯಗಳೆಲ್ಲ ಒಣಗಿಹೋಗುತ್ತವೆ.
ಯೆಶಾಯ 19 : 7 (ERVKN)
ನದಿಯ ದಡದಲ್ಲಿರುವ ಮರಗಳೆಲ್ಲಾ ಒಣಗಿಹೋಗಿ ಗಾಳಿಯಲ್ಲಿ ಹಾರಿಹೋಗುವವು. ನದಿಯ ತೀರದಲ್ಲಿರುವ ಮರಗಳೂ ಒಣಗಿಹೋಗುವವು. [PE][PS]
ಯೆಶಾಯ 19 : 8 (ERVKN)
ಬೆಸ್ತರೂ ಮೀನು ಹಿಡಿಯುವವರೂ ನೈಲ್ ನದಿಯ ನೀರು ಬತ್ತಿಹೋದದ್ದಕ್ಕಾಗಿ ದುಃಖಿಸುತ್ತಾ ಅಳುವರು. ಅವರು ಜೀವನೋಪಾಯಕ್ಕಾಗಿ ನೈಲ್ ನದಿಯನ್ನು ಆಧಾರ ಮಾಡಿಕೊಂಡಿದ್ದರು.
ಯೆಶಾಯ 19 : 9 (ERVKN)
ಬಟ್ಟೆಗಳನ್ನು ನೇಯುವವರೂ ದುಃಖಿಸುವರು. ನದಿ ಬತ್ತಿಹೋದದ್ದರಿಂದಲೂ ನದಿಯ ತೀರದಲ್ಲಿ ನಾರಿನ ಗಿಡಗಳು ಬೆಳೆಯದೆ ಇರುವದರಿಂದಲೂ ಅವರಿಗೆ ಬಟ್ಟೆ ನೇಯಲು ನಾರು ಸಿಗುವುದಿಲ್ಲ.
ಯೆಶಾಯ 19 : 10 (ERVKN)
ನೀರನ್ನು ಉಳಿಸುವದಕ್ಕಾಗಿ ನದಿಗೆ ಅಣೆಕಟ್ಟನ್ನು ಕಟ್ಟುವ ಜನರೂ ದುಃಖಿಸುವರು. ಯಾಕೆಂದರೆ ನದಿಯಲ್ಲಿ ನೀರಿಲ್ಲದ ನಿಮಿತ್ತ ಅವರಿಗೆ ಕೆಲಸವಿರುವುದಿಲ್ಲ. [PE][PS]
ಯೆಶಾಯ 19 : 11 (ERVKN)
ಚೋಯನಿನ ನಗರದ ಪ್ರಮುಖರು ಮೂರ್ಖರಾಗಿದ್ದಾರೆ. ಫರೋಹನ “ಜ್ಞಾನಿಗಳಾದ ಸಲಹೆಗಾರರು” ತಪ್ಪು ಸಲಹೆ ಕೊಡುತ್ತಾರೆ. ಅವರು ತಾವೇ ಬುದ್ಧಿವಂತರೆಂದೂ ರಾಜವಂಶದವರೆಂದೂ ಹೇಳಿಕೊಳ್ಳುವರು. ಆದರೆ ತಾವು ನೆನಸುವಷ್ಟರ ಮಟ್ಟಿಗೆ ಅವರು ಬುದ್ಧಿವಂತರಲ್ಲ.
ಯೆಶಾಯ 19 : 12 (ERVKN)
ಈಜಿಪ್ಟೇ, ನಿನ್ನ ಜ್ಞಾನಿಗಳು ಎಲ್ಲಿ? ಸರ್ವಶಕ್ತನಾದ ಯೆಹೋವನು ಈಜಿಪ್ಟ್ ದೇಶಕ್ಕೆ ಮಾಡಿರುವ ಯೋಜನೆಯನ್ನು ನಿನ್ನ ಜ್ಞಾನಿಗಳು ಮೊದಲು ತಿಳಿದುಕೊಳ್ಳಬೇಕು. ನಿಮಗೆ ಸಂಭವಿಸಲಿರುವುದನ್ನು ಅವರು ನಿನಗೆ ತಿಳಿಸಬೇಕು. [PE][PS]
ಯೆಶಾಯ 19 : 13 (ERVKN)
ಚೋಯನಿನ ಅಧಿಪತಿಗಳು ಮೋಸಹೋದರು. ನೋಫಿನ ಪ್ರಮುಖರು ಸುಳ್ಳನ್ನು ನಂಬಿದರು. ಆದ್ದರಿಂದ ನಾಯಕರು ಈಜಿಪ್ಟನ್ನು ತಪ್ಪುದಾರಿಗೆ ನಡೆಸಿದರು.
ಯೆಶಾಯ 19 : 14 (ERVKN)
ಯೆಹೋವನು ಆ ನಾಯಕರನ್ನು ಗಲಿಬಿಲಿಪಡಿಸಿದನು. ಅವರು ಈಜಿಪ್ಟನ್ನು ತಪ್ಪಾದ ದಾರಿಯಲ್ಲಿ ನಡೆಸಿದರು. ಅವರು ಮಾಡುವ ಪ್ರತಿಯೊಂದು ಕಾರ್ಯವೂ ತಪ್ಪಾದದ್ದೇ. ಅವರು ಕುಡಿದು ಮತ್ತರಾದವರಂತೆ ನೆಲದ ಮೇಲೆ ಬಿದ್ದು ಹೊರಳಾಡುತ್ತಾರೆ.
ಯೆಶಾಯ 19 : 15 (ERVKN)
ಆ ನಾಯಕರುಗಳಿಗೆ ಏನೂ ಮಾಡಲಾಗದು. (ಈ ನಾಯಕರುಗಳು “ತಲೆಯೂ ಬಾಲವೂ” ಆಗಿದ್ದಾರೆ; “ಮರದ ಕೊಂಬೆಯೂ ಕಾಂಡವೂ” ಆಗಿದ್ದಾರೆ.) [PE][PS]
ಯೆಶಾಯ 19 : 16 (ERVKN)
ಆ ಸಮಯದಲ್ಲಿ ಈಜಿಪ್ಟಿನವರು ಭಯದಿಂದ ಕಂಗೆಟ್ಟ ಹೆಂಗಸರಂತಿರುವರು. ಅವರು ಸರ್ವಶಕ್ತನಾದವನಿಗೆ ಭಯಪಡುವರು. ಯೆಹೋವನು ಜನರನ್ನು ಶಿಕ್ಷಿಸಲು ತನ್ನ ಕೈಯನ್ನೆತ್ತುವನು. ಆಗ ಅವರೆಲ್ಲರೂ ಹೆದರಿಹೋಗುವರು.
ಯೆಶಾಯ 19 : 17 (ERVKN)
ಯೆಹೂದ ಪ್ರಾಂತ್ಯದವರೂ ಈಜಿಪ್ಟಿನಲ್ಲಿರುವವರೂ ಭಯಪಡಬೇಕಾಗಿದೆ. ಈಜಿಪ್ಟಿನಲ್ಲಿ ಯಾರೇ ಆಗಲಿ ಯೆಹೂದದ ಹೆಸರು ಕೇಳಿದಾಗ ಭಯಪಡುವರು. ಯಾಕೆಂದರೆ ಭಯಂಕರ ಘಟನೆಗಳು ಈಜಿಪ್ಟಿನಲ್ಲಿ ಸಂಭವಿಸುವಂತೆ ಸರ್ವಶಕ್ತನಾದ ಯೆಹೋವನು ಮಾಡುತ್ತಾನೆ.
ಯೆಶಾಯ 19 : 18 (ERVKN)
ಆ ಸಮಯದಲ್ಲಿ ಈಜಿಪ್ಟಿನಲ್ಲಿ ಕಾನಾನ್ ದೇಶದ (ಯೆಹೂದ್ಯರ) ಭಾಷೆಯನ್ನಾಡುವ ಐದು ಪಟ್ಟಣಗಳಿರುವವು. ಅದರಲ್ಲಿ ಒಂದರ ಹೆಸರು “ನಾಶನದ ನಗರ.” ಆ ಜನರು ಸರ್ವಶಕ್ತನಾದ ಯೆಹೋವನನ್ನು ಹಿಂಬಾಲಿಸಲು ತೀರ್ಮಾನಿಸುವರು. [PE][PS]
ಯೆಶಾಯ 19 : 19 (ERVKN)
ಆ ಸಮಯದಲ್ಲಿ ಈಜಿಪ್ಟಿನ ಮಧ್ಯದಲ್ಲಿ ಯೆಹೋವನಿಗಾಗಿ ಒಂದು ವೇದಿಕೆ ಇರುವದು. ಈಜಿಪ್ಟಿನ ಗಡಿಯಲ್ಲಿ ಯೆಹೋವನ ಗೌರವಾರ್ಥವಾಗಿ ಸ್ಮಾರಕಸ್ತಂಭ ಇರುವದು.
ಯೆಶಾಯ 19 : 20 (ERVKN)
ಇದು ಸರ್ವಶಕ್ತನಾದ ಯೆಹೋವನು ಅದ್ಭುತವನ್ನು ನಡಿಸುತ್ತಾನೆಂಬುದಕ್ಕೆ ಗುರುತಾಗಿದೆ. ಜನರು ಯಾವಾಗಲಾದರೂ ಸರಿಯೇ ಸಹಾಯಕ್ಕಾಗಿ ಮೊರೆಯಿಟ್ಟರೆ ಆತನು ಸಹಾಯವನ್ನು ಕಳುಹಿಸುವನು. ಯೆಹೋವನು ಅವರನ್ನು ರಕ್ಷಿಸಲೂ ಕಾಪಾಡಲೂ ಒಬ್ಬನನ್ನು ಕಳುಹಿಸುವನು. ಆ ಮನುಷ್ಯನು ಬೇರೆಯವರಿಂದ ಶೋಷಿತರಾದವರನ್ನು ಸಂರಕ್ಷಿಸುವನು. [PE][PS]
ಯೆಶಾಯ 19 : 21 (ERVKN)
ಆ ಸಮಯದಲ್ಲಿ ಈಜಿಪ್ಟಿನ ಜನರು ಯೆಹೋವನನ್ನು ನಿಜವಾಗಿಯೂ ಅರಿತುಕೊಳ್ಳುವರು. ಅವರು ದೇವರನ್ನು ಪ್ರೀತಿಸುವರು. ಅವರು ಯೆಹೋವನನ್ನು ಸೇವಿಸಿ ಅನೇಕ ಯಜ್ಞಗಳನ್ನು ಸಮರ್ಪಿಸುವರು. ಯೆಹೋವನಿಗೆ ಹರಕೆ ಹೊತ್ತು ಸಲ್ಲಿಸುವರು.
ಯೆಶಾಯ 19 : 22 (ERVKN)
ಯೆಹೋವನು ಈಜಿಪ್ಟಿನ ಜನರನ್ನು ಶಿಕ್ಷಿಸುವನು. ಆಮೇಲೆ ಆತನು ಅವರನ್ನು ಕ್ಷಮಿಸುವನು. ಆಗ ಅವರು ಆತನ ಬಳಿಗೆ ಹಿಂದಿರುಗಿ ಬರುವರು. ಯೆಹೋವನು ಅವರ ಪ್ರಾರ್ಥನೆಯನ್ನು ಕೇಳಿ ಅವರನ್ನು ಕ್ಷಮಿಸುವನು. [PE][PS]
ಯೆಶಾಯ 19 : 23 (ERVKN)
ಆ ಸಮಯದಲ್ಲಿ ಈಜಿಪ್ಟಿನಿಂದ ಅಶ್ಶೂರದವರೆಗೆ ಹೆದ್ದಾರಿ ಇರುವುದು. ಆಗ ಅಶ್ಶೂರದವರು ಈಜಿಪ್ಟಿಗೂ, ಈಜಿಪ್ಟಿನವರು ಅಶ್ಶೂರಕ್ಕೂ ಪ್ರಯಾಣ ಮಾಡುವರು. ಈಜಿಪ್ಟಿನವರು ಅಶ್ಶೂರದವರೊಟ್ಟಿಗೆ ಕೆಲಸ ಮಾಡುವರು.
ಯೆಶಾಯ 19 : 24 (ERVKN)
ಆ ಸಮಯದಲ್ಲಿ ಇಸ್ರೇಲ್, ಅಶ್ಶೂರ ಮತ್ತು ಈಜಿಪ್ಟು ಒಟ್ಟಾಗಿ ಸೇರಿ ದೇಶವನ್ನು ನಿಯಂತ್ರಿಸುವರು. ಇದು ದೇಶಕ್ಕೆ ಆಶೀರ್ವಾದದಾಯಕವಾಗಿರುವದು.
ಯೆಶಾಯ 19 : 25 (ERVKN)
ಸರ್ವಶಕ್ತನಾದ ಯೆಹೋವನು ಈ ದೇಶಗಳನ್ನು ಆಶೀರ್ವದಿಸುವನು. ಆತನು, “ಈಜಿಪ್ಟೇ, ನೀನು ನನ್ನವನು; ಅಶ್ಶೂರವೇ, ನಾನು ನಿನ್ನನ್ನು ನಿರ್ಮಿಸಿದೆನು. ಇಸ್ರೇಲೇ, ನೀನು ನನ್ನ ಸ್ವಾಸ್ತ್ಯ. ನೀವೆಲ್ಲರೂ ಆಶೀರ್ವದಿಸಲ್ಪಟ್ಟವರು” ಎನ್ನುವನು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25

BG:

Opacity:

Color:


Size:


Font: