ಹೋಶೇ 4 : 1 (ERVKN)
ಇಸ್ರೇಲರ ಮೇಲೆ ಯೆಹೋವನು ಕೋಪಗೊಂಡಿದ್ದಾನೆ ಇಸ್ರೇಲ್ ಜನರೇ, ಯೆಹೋವನ ಮಾತಿಗೆ ಕಿವಿಗೊಡಿರಿ! ಈ ದೇಶದಲ್ಲಿ ವಾಸಿಸುವ ಜನರ ವಿರುದ್ಧವಾಗಿ ಯೆಹೋವನು ತನ್ನ ವಾದವನ್ನು ಅವರ ಮುಂದಿಡುತ್ತಾನೆ. “ಈ ದೇಶದಲ್ಲಿರುವ ಜನರು ಯೆಹೋವನನ್ನು ನಿಜವಾಗಿಯೂ ತಿಳಿದಿಲ್ಲ. ಅವರು ಯೆಹೋವನಿಗೆ ಸತ್ಯವಂತರೂ ಅಲ್ಲ. ನಿಷ್ಠಾವಂತರೂ ಅಲ್ಲ.
ಹೋಶೇ 4 : 2 (ERVKN)
ಜನರು ಆಣೆ ಇಟ್ಟುಕೊಳ್ಳುತ್ತಾರೆ, ಸುಳ್ಳನ್ನಾಡುತ್ತಾರೆ, ಕೊಲೆ ಮಾಡುತ್ತಾರೆ ಮತ್ತು ಸೂರೆ ಮಾಡುತ್ತಾರೆ. ಅವರು ವ್ಯಭಿಚಾರವೆಂಬ ಪಾಪಗಳನ್ನು ಮಾಡುತ್ತಾರೆ. ಆದ್ದರಿಂದ ಅವರು ಮಕ್ಕಳನ್ನು ಹುಟ್ಟಿಸುತ್ತಾರೆ. ಜನರು ತಿರುಗಿತಿರುಗಿ ಕೊಲೆ ಮಾಡುತ್ತಾರೆ.
ಹೋಶೇ 4 : 3 (ERVKN)
ಹೀಗೆ ದೇಶವು ಸತ್ತವರಿಗಾಗಿ ಗೋಳಾಡುವ ಮನುಷ್ಯನಂತಿರುವದು. ಆದ್ದರಿಂದ ಅದರ ಜನರೆಲ್ಲಾ ಬಲಹೀನರಾಗತ್ತಾರೆ. ಅಡವಿಯಲ್ಲಿರುವ ಪ್ರಾಣಿಗಳೂ ಆಕಾಶದ ಪಕ್ಷಿಗಳೂ ಸಮುದ್ರದಲ್ಲಿರುವ ಮೀನುಗಳೂ ಸಾಯುತ್ತಿವೆ.
ಹೋಶೇ 4 : 4 (ERVKN)
ಯಾರೂ ಪರಸ್ಪರ ವಾದಿಸದೆ ತಪ್ಪು ಹೊರಿಸದೆ ಇರಬೇಕು. ಯಾಜಕರೇ, ನಿಮ್ಮೊಂದಿಗೆ ನಾನು ವಾದಿಸುತ್ತೇನೆ.
ಹೋಶೇ 4 : 5 (ERVKN)
ನೀವು (ಯಾಜಕರು) ಹಗಲಿನಲ್ಲಿ ಬಿದ್ದುಹೋಗುವಿರಿ. ರಾತ್ರಿ ಹೊತ್ತಿನಲ್ಲಿ ಪ್ರವಾದಿಗಳೂ ನಿಮ್ಮ ಜೊತೆಗೆ ಬೀಳುವರು ಮತ್ತು ನಾನು ನಿಮ್ಮ ತಾಯಿಯನ್ನು ಸಹ ನಾಶಮಾಡುವೆನು.
ಹೋಶೇ 4 : 6 (ERVKN)
“ನನ್ನ ಜನರು ಅಜ್ಞಾನಿಗಳಾಗಿರುವುದರಿಂದ ಅವರು ನಾಶವಾಗುವರು, ನೀವು ಕಲಿಯಲು ನಿರಾಕರಿಸುತ್ತೀರಿ. ಆದ್ದರಿಂದ ನೀವು ನನ್ನ ಯಾಜಕರಾಗಿರಲು ನಾನು ನಿರಾಕರಿಸುತ್ತೇನೆ. ನಿಮ್ಮ ದೇವರ ಕಟ್ಟಳೆಗಳನ್ನು ನೀವು ಮರೆತುಬಿಟ್ಟಿರುವಿರಿ. ಆದ್ದರಿಂದ ನಾನು ನಿಮ್ಮ ಮಕ್ಕಳನ್ನು ಮರೆತುಬಿಡುವೆನು.
ಹೋಶೇ 4 : 7 (ERVKN)
ಅವರು ಅಹಂಕಾರಿಗಳಾದರು. ನನ್ನ ವಿರುದ್ಧವಾಗಿ ಹೆಚ್ಚೆಚ್ಚಾಗಿ ಪಾಪ ಮಾಡಿದರು. ಆದ್ದರಿಂದ ಅವರ ಗೌರವವನ್ನು ನಾನು ಲಜ್ಜಾಸ್ಪದವನ್ನಾಗಿ ಮಾಡುವೆನು.
ಹೋಶೇ 4 : 8 (ERVKN)
“ಜನರ ಪಾಪದೊಂದಿಗೆ ಯಾಜಕರೂ ಒಂದಾದರು, ಅವರು ಹೆಚ್ಚುಹೆಚ್ಚು ಪಾಪಗಳನ್ನು ಮಾಡಲು ಆಶಿಸಿದರು.
ಹೋಶೇ 4 : 9 (ERVKN)
ಯಾಜಕರು ಸಾಮಾನ್ಯ ಜನರಿಂದ ಬೇರೆ ಆಗಿರಲಿಲ್ಲ. ಅವರು ಮಾಡಿದ ಪಾಪಗಳಿಗಾಗಿ ಅವರನ್ನು ನಾನು ಶಿಕ್ಷಿಸುವೆನು. ಕೆಟ್ಟ ಕೆಲಸವನ್ನು ಮಾಡಿದ್ದಕ್ಕೆ ಅವರಿಗೆ ಪ್ರತಿಫಲ ಕೊಡುವೆನು.
ಹೋಶೇ 4 : 10 (ERVKN)
ಅವರು ತಿನ್ನುವರು ಆದರೆ ಅವರು ತೃಪ್ತಿಹೊಂದುವದಿಲ್ಲ. ಅವರು ಲೈಂಗಿಕಪಾಪ ಮಾಡುವರು ಆದರೆ ಅವರಿಗೆ ಮಕ್ಕಳಾಗುವದಿಲ್ಲ. ಕಾರಣವೇನೆಂದರೆ ಅವರು ಯಹೋವನನ್ನು ತೊರೆದು ವೇಶ್ಯೆಯರಂತೆ ವರ್ತಿಸಿದರು.
ಹೋಶೇ 4 : 11 (ERVKN)
“ಲೈಂಗಿಕಪಾಪ, ಗಡುಸಾದ ಮದ್ಯ ಮತ್ತು ಹೊಸ ದ್ರಾಕ್ಷಾರಸ ಇವುಗಳಿಂದ ವಿಚಾರಪ್ರಜ್ಞೆಯನ್ನು ಕಳೆದುಕೊಳ್ಳುವರು.
ಹೋಶೇ 4 : 12 (ERVKN)
ನನ್ನ ಜನರು ಮರದ ತುಂಡುಗಳಿಂದ ಸಲಹೆಗಳನ್ನು ಕೇಳುವರು. ಆ ಮರದ ತುಂಡುಗಳು ಅವರಿಗೆ ಉತ್ತರಿಸುವವು ಎಂದು ಅವರು ನೆನಸುತ್ತಾರೆ. ಯಾಕೆಂದರೆ, ವೇಶ್ಯೆಯರಂತೆ ಅವರು ಆ ಸುಳ್ಳು ದೇವರುಗಳನ್ನು ಹಿಂದಟ್ಟಿಕೊಂಡು ಹೋಗುವರು. ಅವರು ತಮ್ಮ ದೇವರುಗಳನ್ನು ಬಿಟ್ಟು ವೇಶ್ಯೆಯರಂತೆ ವರ್ತಿಸುತ್ತಾರೆ.
ಹೋಶೇ 4 : 13 (ERVKN)
ಅವರು ಪರ್ವತ ಶಿಖರಗಳ ಮೇಲೆ ಯಜ್ಞಗಳನ್ನರ್ಪಿಸುತ್ತಾರೆ; ಬೆಟ್ಟಗಳ ಮೇಲೆಯೂ ಓಕ್, ಪಾಪಲಾರ್ ಮತ್ತು ಏಲ್ಮ್ ಮರಗಳಡಿಗಳಲ್ಲಿಯೂ ಧೂಪ ಹಾಕುತ್ತಾರೆ. ಆ ಮರಗಳ ನೆರಳು ದಟ್ಟವಾಗಿರುವದು. ಆದ್ದರಿಂದ ನಿಮ್ಮ ಹೆಣ್ಣುಮಕ್ಕಳು ವೇಶ್ಯೆಯರಂತೆ ಅದರಡಿಯಲ್ಲಿ ಮಲಗುವರು. ನಿಮ್ಮ ಸೊಸೆಯಂದಿರು ಲೈಂಗಿಕಪಾಪದಲ್ಲಿ ಮಗ್ನರಾಗಿರುವರು.
ಹೋಶೇ 4 : 14 (ERVKN)
“ನಿಮ್ಮ ಹೆಣ್ಣುಮಕ್ಕಳು ಸೂಳೆತನ ಮಾಡುವದಕ್ಕಾಗಲಿ ನಿಮ್ಮ ಸೊಸೆಯರು ಲೈಂಗಿಕಪಾಪ ಮಾಡುವದಕ್ಕಾಗಲಿ ನಾನು ಅವರನ್ನು ದೂರುವದಿಲ್ಲ. ಗಂಡಸರು ವೇಶ್ಯೆಯರೊಂದಿಗೆ ಮಲಗುವರು. ಅವರು ಮಂದಿರದ ವೇಶ್ಯೆಯರೊಂದಿಗೆ ಯಜ್ಞವನ್ನರ್ಪಿಸುವರು. ಹೀಗೆ ಆ ಬುದ್ಧಿಯಿಲ್ಲದ ಜನರು ತಮ್ಮನ್ನು ತಾವೇ ನಾಶಮಾಡಿಕೊಳ್ಳುತ್ತಾರೆ.
ಹೋಶೇ 4 : 15 (ERVKN)
ಇಸ್ರೇಲಿನ ಲಜ್ಜಾಸ್ಪದವಾದ ಪಾಪಗಳು “ಇಸ್ರೇಲೇ, ನೀನು ಸೂಳೆಯಂತೆ ವರ್ತಿಸುತ್ತೀ. ಆದರೆ ಯೆಹೂದವನ್ನು ತಪ್ಪಿತಸ್ಥಳನ್ನಾಗಿ ಮಾಡಬೇಡ. ಗಿಲ್ಗಾಲಿಗಾಗಲಿ ಬೇತಾವೆನಿಗಾಗಲಿ ಹೋಗದಿರು. ಯೆಹೋವನ ಮೇಲೆ ಆಣೆ ಇಡಬೇಡ. ‘ಯೆಹೋವನಾಣೆ’ ಎಂದು ಹೇಳಬೇಡ.
ಹೋಶೇ 4 : 16 (ERVKN)
ಇಸ್ರೇಲಿಗೆ ಅನೇಕ ಸಂಗತಿಗಳನ್ನು ಯೆಹೋವನು ಕೊಟ್ಟಿರುತ್ತಾನೆ. ಆತನು ಕುರಿಗಳನ್ನು ವಿಶಾಲವಾದ ಮತ್ತು ಹುಲುಸಾದ ಹುಲ್ಲುಗಾವಲಿಗೆ ಒಯ್ಯುವ ಕುರುಬನಂತಿದ್ದಾನೆ. ಆದರೆ ಇಸ್ರೇಲ್ ಹಠಮಾರಿಯಾಗಿರುತ್ತದೆ. ಬಾರಿಬಾರಿಗೆ ಹೊರಗೆ ಓಡುವ ಯೌವನ ಹಸುವಿನಂತಿದೆ.
ಹೋಶೇ 4 : 17 (ERVKN)
“ಅವನ ವಿಗ್ರಹಗಳೊಂದಿಗೆ ಎಫ್ರಾಯೀಮು ಸೇರಿರುತ್ತಾನೆ. ಆದ್ದರಿಂದ ಅವನನ್ನು ಸುಮ್ಮನೆ ಬಿಟ್ಟುಬಿಡು.
ಹೋಶೇ 4 : 18 (ERVKN)
ಅವರು ಅಮಲೇರಿದ ಮೇಲೆ ಸೂಳೆಯರಂತೆ ವರ್ತಿಸುತ್ತಾರೆ. ಅವರು ಲಂಚವನ್ನು ಪ್ರೀತಿಸುತ್ತಾರೆ ಮತ್ತು ಲಂಚಕೊಡುವಂತೆ ಒತ್ತಾಯ ಮಾಡುತ್ತಾರೆ. ಆ ಅಧಿಪತಿಗಳು ತಮ್ಮ ಜನರ ಮೇಲೆ ಅಪಮಾನ ಬರಮಾಡುತ್ತಾರೆ.
ಹೋಶೇ 4 : 19 (ERVKN)
ಅವರು ತಮ್ಮ ಭಧ್ರತೆಗಾಗಿ ಆ ದೇವರುಗಳ ಬಳಿಗೆ ಹೋದರು ಮತ್ತು ತಮ್ಮ ಯೋಚನೆ ಮಾಡುವ ಶಕ್ತಿಯನ್ನೇ ಕಳಕೊಂಡರು. ಅವರ ಧೂಪಹೋಮಗಳೇ ಅವರನ್ನು ನಾಚಿಕೆಗೆ ಗುರಿಪಡಿಸುವವು.”
❮
❯
1
2
3
4
5
6
7
8
9
10
11
12
13
14
15
16
17
18
19