ಆದಿಕಾಂಡ 42 : 1 (ERVKN)
{ಕನಸುಗಳು ನಿಜವಾದವು} [PS] ಈಜಿಪ್ಟಿನಲ್ಲಿ ದವಸಧಾನ್ಯಗಳಿರುವುದಾಗಿ ಕಾನಾನಿನಲ್ಲಿದ್ದ ಯಾಕೋಬನಿಗೆ ತಿಳಿಯಿತು. ಆದ್ದರಿಂದ ಯಾಕೋಬನು ತನ್ನ ಗಂಡುಮಕ್ಕಳಿಗೆ, “ನಾವು ಇಲ್ಲಿ ಏನೂ ಮಾಡದೆ ಕುಳಿತುಕೊಂಡಿರುವುದೇಕೆ?
ಆದಿಕಾಂಡ 42 : 2 (ERVKN)
ಈಜಿಪ್ಟಿನಲ್ಲಿ ದವಸಧಾನ್ಯಗಳಿರುವುದಾಗಿ ನಾನು ಕೇಳಿದ್ದೇನೆ. ಆದ್ದರಿಂದ ನಾವು ಅಲ್ಲಿಗೆ ಹೋಗಿ ನಮ್ಮ ಆಹಾರವನ್ನು ಕೊಂಡುಕೊಳ್ಳೋಣ. ಆಗ ನಾವು ಸಾಯದೆ ಬದುಕಿಕೊಳ್ಳುವೆವು” ಎಂದು ಹೇಳಿದನು. [PE][PS]
ಆದಿಕಾಂಡ 42 : 3 (ERVKN)
ಆದ್ದರಿಂದ ಯೋಸೇಫನ ಹತ್ತು ಮಂದಿ ಸಹೋದರರು ದವಸಧಾನ್ಯಗಳನ್ನು ಕೊಂಡುಕೊಳ್ಳಲು ಈಜಿಪ್ಟಿಗೆ ಹೋದರು.
ಆದಿಕಾಂಡ 42 : 4 (ERVKN)
ಯಾಕೋಬನು ಬೆನ್ಯಾಮೀನನನ್ನು ಕಳುಹಿಸಲಿಲ್ಲ. (ಬೆನ್ಯಾಮೀನನು ಯೋಸೇಫನ ಒಡಹುಟ್ಟಿದ ಒಬ್ಬನೇ ತಮ್ಮನಾಗಿದ್ದನು.) ಬೆನ್ಯಾಮೀನನಿಗೆ ಏನಾದರೂ ಕೇಡಾಗಬಹುದೆಂಬ ಭಯ ಯಾಕೋಬನಿಗಿತ್ತು. [PE][PS]
ಆದಿಕಾಂಡ 42 : 5 (ERVKN)
ಕಾನಾನಿನಲ್ಲಿ ಬರಗಾಲ ಭೀಕರವಾಗಿತ್ತು. ಆದ್ದರಿಂದ ದವಸಧಾನ್ಯಗಳನ್ನು ಕೊಂಡುಕೊಳ್ಳಲು ಅನೇಕ ಜನರು ಕಾನಾನಿನಿಂದ ಈಜಿಪ್ಟಿಗೆ ಹೋದರು; ಇಸ್ರೇಲನ ಗಂಡುಮಕ್ಕಳೂ ಅವರೊಂದಿಗೆ ಹೋದರು. [PE][PS]
ಆದಿಕಾಂಡ 42 : 6 (ERVKN)
ಯೋಸೇಫನು ಈಜಿಪ್ಟಿನ ರಾಜ್ಯಪಾಲನಾಗಿದ್ದರಿಂದ ಅವನ ಅನುಮತಿಯಿಲ್ಲದೆ ದವಸಧಾನ್ಯಗಳನ್ನು ಕೊಂಡುಕೊಳ್ಳಲು ಯಾರಿಗೂ ಸಾಧ್ಯವಿರಲಿಲ್ಲ. ಯೋಸೇಫನ ಸಹೋದರರು ಬಂದು ಅವನ ಮುಂದೆ ಅಡ್ಡಬಿದ್ದರು.
ಆದಿಕಾಂಡ 42 : 7 (ERVKN)
ಯೋಸೇಫನು ಅವರನ್ನು ಕಂಡು, ತನ್ನ ಅಣ್ಣಂದಿರೆಂದು ತಿಳಿದುಕೊಂಡನು. ಆದರೂ ಅವನು ತನಗೆ ಅವರು ಗೊತ್ತೇ ಇಲ್ಲದಂತೆ ಅವರೊಂದಿಗೆ ಕಟುವಾಗಿ ಮಾತಾಡಿ, ಅವರಿಗೆ, “ನೀವು ಎಲ್ಲಿಂದ ಬಂದಿರುವಿರಿ?” ಎಂದು ಕೇಳಿದನು. ಸಹೋದರರು, “ಆಹಾರವನ್ನು ಕೊಂಡುಕೊಳ್ಳಲು ಕಾನಾನ್ ದೇಶದಿಂದ ಬಂದಿದ್ದೇವೆ” ಎಂದು ಉತ್ತರಿಸಿದರು. [PE][PS]
ಆದಿಕಾಂಡ 42 : 8 (ERVKN)
ಯೋಸೇಫನು ತನ್ನ ಅಣ್ಣಂದಿರನ್ನು ಗುರುತಿಸಿದರೂ ಅವನ ಅಣ್ಣಂದಿರು ಯೋಸೇಫನನ್ನು ಗುರುತಿಸಲಿಲ್ಲ.
ಆದಿಕಾಂಡ 42 : 9 (ERVKN)
ಆಗ ಯೋಸೇಫನು ತನ್ನ ಅಣ್ಣಂದಿರ ಬಗ್ಗೆ ತಾನು ಕಂಡಿದ್ದ ಕನಸುಗಳ ಬಗ್ಗೆ ಜ್ಞಾಪಿಸಿಕೊಂಡು [PE][PS] ಅವರಿಗೆ, “ನೀವು ಆಹಾರವನ್ನು ಕೊಂಡುಕೊಳ್ಳಲು ಬಂದಿಲ್ಲ; ನೀವು ಗೂಢಚಾರರು. ನಮ್ಮ ದೇಶದ ದುರ್ಬಲ ಸ್ಥಳಗಳನ್ನು ತಿಳಿದುಕೊಳ್ಳಲು ಬಂದಿರುವಿರಿ” ಎಂದು ಹೇಳಿದನು. [PE][PS]
ಆದಿಕಾಂಡ 42 : 10 (ERVKN)
ಸಹೋದರರು ಅವನಿಗೆ, “ಇಲ್ಲ! ಸ್ವಾಮೀ, ನಿಮ್ಮ ಸೇವಕರಾದ ನಾವು ಆಹಾರವನ್ನು ಕೊಂಡುಕೊಳ್ಳಲು ಬಂದಿದ್ದೇವೆ.
ಆದಿಕಾಂಡ 42 : 11 (ERVKN)
ನಾವೆಲ್ಲರೂ ಸಹೋದರರು. ನಮ್ಮೆಲ್ಲರಿಗೂ ಒಬ್ಬನೇ ತಂದೆ. ನಾವು ಯಥಾರ್ಥವಾಗಿ ಬಂದವರೇ ಹೊರತು ಗೂಢಚಾರರಲ್ಲ” ಎಂದು ಹೇಳಿದರು. [PE][PS]
ಆದಿಕಾಂಡ 42 : 12 (ERVKN)
ಯೋಸೇಫನು ಅವರಿಗೆ, “ಇಲ್ಲ! ನಮ್ಮ ದುರ್ಬಲ ಸ್ಥಳಗಳನ್ನು ಕಂಡುಕೊಳ್ಳುವುದಕ್ಕೆ ನೀವು ಬಂದಿದ್ದೀರಿ” ಎಂದು ಹೇಳಿದನು. [PE][PS]
ಆದಿಕಾಂಡ 42 : 13 (ERVKN)
ಅದಕ್ಕೆ ಅವರು, “ಇಲ್ಲ, ನಾವೆಲ್ಲಾ ಸಹೋದರರು. ನಮ್ಮ ಕುಟುಂಬದಲ್ಲಿ ಹನ್ನೆರಡು ಮಂದಿ ಅಣ್ಣತಮ್ಮಂದಿರು. ನಮ್ಮೆಲ್ಲರಿಗೂ ಒಬ್ಬನೇ ತಂದೆ. ನಮ್ಮ ಕಿರಿಯ ತಮ್ಮನು ನಮ್ಮ ತಂದೆಯೊಂದಿಗೆ ಮನೆಯಲ್ಲಿದ್ದಾನೆ; ಇನ್ನೊಬ್ಬ ತಮ್ಮನು ಹೊರಟುಹೋದನು. ತಮ್ಮ ಸೇವಕರಾದ ನಾವು ಕಾನಾನ್ ದೇಶದಿಂದ ಬಂದವರು” ಎಂದು ಹೇಳಿದರು. [PE][PS]
ಆದಿಕಾಂಡ 42 : 14 (ERVKN)
ಯೋಸೇಫನು ಅವರಿಗೆ, “ಇಲ್ಲ, ನಾನು ಹೇಳಿದಂತೆ ನೀವು ಗೂಢಚಾರರೇ.
ಆದಿಕಾಂಡ 42 : 15 (ERVKN)
ಆದರೆ ನೀವು ಹೇಳುತ್ತಿರುವುದು ಸತ್ಯವಾಗಿದ್ದರೆ ನಿಮ್ಮ ಚಿಕ್ಕ ತಮ್ಮನು ಇಲ್ಲಿಗೆ ಬರಬೇಕು; ಇಲ್ಲವಾದರೆ ಫರೋಹನ ಜೀವದಾಣೆ, ಅಲ್ಲಿಯವರೆಗೂ ನೀವು ಈ ಸ್ಥಳದಿಂದ ಹೋಗಕೂಡದು.
ಆದಿಕಾಂಡ 42 : 16 (ERVKN)
ಆದ್ದರಿಂದ ನಿಮ್ಮಲ್ಲೊಬ್ಬನು ಹಿಂತಿರುಗಿ ಹೋಗಿ ನಿಮ್ಮ ಚಿಕ್ಕ ತಮ್ಮನನ್ನು ಇಲ್ಲಿಗೆ ಕರೆದುಕೊಂಡು ಬರಬೇಕು. ಅಲ್ಲಿಯವರೆಗೆ ಉಳಿದವರೆಲ್ಲರೂ ಇಲ್ಲಿ ಸೆರೆಮನೆಯಲ್ಲಿರಬೇಕು. ನೀವು ಹೇಳುತ್ತಿರುವುದು ಸತ್ಯವೋ ಸುಳ್ಳೋ ಆಗ ನನಗೆ ಗೊತ್ತಾಗುವುದು. ಆದರೆ ನೀವಂತೂ ಗೂಢಚಾರರೆಂದು ತಿಳಿದುಕೊಂಡಿದ್ದೇನೆ” ಎಂದು ಹೇಳಿದನು.
ಆದಿಕಾಂಡ 42 : 17 (ERVKN)
ಆಮೇಲೆ ಯೋಸೇಫನು ಅವರೆಲ್ಲರನ್ನು ಮೂರು ದಿನಗಳವರೆಗೆ ಸೆರೆಮನೆಯಲ್ಲಿಟ್ಟನು. [PS]
ಆದಿಕಾಂಡ 42 : 18 (ERVKN)
{ಸಿಮೆಯೋನನನ್ನು ಒತ್ತೆಯಾಳಾಗಿ ಇಟ್ಟದ್ದು} [PS] ಮೂರು ದಿನಗಳಾದ ಮೇಲೆ ಯೋಸೇಫನು ಅವರಿಗೆ, “ನಾನು ದೇವರಲ್ಲಿ ಭಯಭಕ್ತಿಯುಳ್ಳವನು. ನೀವು ಈ ಕಾರ್ಯವೊಂದನ್ನು ಮಾಡಿದರೆ ನಾನು ನಿಮ್ಮನ್ನು ಉಳಿಸುತ್ತೇನೆ;
ಆದಿಕಾಂಡ 42 : 19 (ERVKN)
ನೀವು ಯಥಾರ್ಥವಂತರಾಗಿದ್ದರೆ, ನಿಮ್ಮ ಸಹೋದರರಲ್ಲಿ ಒಬ್ಬನನ್ನು ಸೆರೆಮನೆಯಲ್ಲಿಡುತ್ತೇನೆ; ಉಳಿದವರು ನಿಮ್ಮ ಜನರಿಗಾಗಿ ದವಸಧಾನ್ಯಗಳನ್ನು ತೆಗೆದುಕೊಂಡು ಹೋಗಬಹುದು.
ಆದಿಕಾಂಡ 42 : 20 (ERVKN)
ಆಮೇಲೆ ನಿಮ್ಮ ಕಿರಿಯ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬಂದರೆ ನೀವು ಹೇಳುತ್ತಿರುವುದು ಸತ್ಯವೆಂದು ತಿಳಿದುಕೊಳ್ಳುವೆನು” ಎಂದು ಹೇಳಿದನು. [PE][PS] ಸಹೋದರರು ಇದಕ್ಕೆ ಒಪ್ಪಿಕೊಂಡರು.
ಆದಿಕಾಂಡ 42 : 21 (ERVKN)
ಅವರು ಒಬ್ಬರಿಗೊಬ್ಬರು, “ನಾವು ನಮ್ಮ ತಮ್ಮನಾದ ಯೋಸೇಫನಿಗೆ ಮಾಡಿದ ಕೆಟ್ಟಕಾರ್ಯಕ್ಕಾಗಿ ಈ ಶಿಕ್ಷೆಯನ್ನು ಅನುಭವಿಸುತ್ತಿದ್ದೇವೆ. ಪ್ರಾಣಸಂಕಟದಲ್ಲಿದ್ದ ಅವನು ತನ್ನನ್ನು ಕಾಪಾಡುವಂತೆ ನಮ್ಮನ್ನು ಬೇಡಿಕೊಂಡರೂ ನಾವು ಅವನ ಮೊರೆಯನ್ನು ತಿರಸ್ಕರಿಸಿದೆವು. ಆದ್ದರಿಂದ ಈಗ ಪ್ರಾಣಸಂಕಟಕ್ಕೀಡಾಗಿದ್ದೇವೆ” ಎಂದು ಮಾತಾಡಿಕೊಂಡರು. [PE][PS]
ಆದಿಕಾಂಡ 42 : 22 (ERVKN)
ಅದಕ್ಕೆ ರೂಬೇನನು ಅವರಿಗೆ, “ಆ ಹುಡುಗನಿಗೆ ಕೇಡು ಮಾಡಬೇಡಿ ಎಂದು ನಾನು ನಿಮಗೆ ಹೇಳಿದರೂ ನೀವು ನನ್ನ ಮಾತನ್ನು ಕೇಳಲಿಲ್ಲ. ಆದ್ದರಿಂದ ಈಗ ನಾವು ಅವನ ಮರಣಕ್ಕೆ ತಕ್ಕ ಶಿಕ್ಷೆ ಹೊಂದುತ್ತಿದ್ದೇವೆ” ಎಂದು ಹೇಳಿದನು. [PE][PS]
ಆದಿಕಾಂಡ 42 : 23 (ERVKN)
ಯೋಸೇಫನು ತನ್ನ ಸಹೋದರರೊಂದಿಗೆ ಭಾಷಾಂತರಕಾರನ ಮೂಲಕ ಮಾತಾಡುತ್ತಿದ್ದನು. ಆದ್ದರಿಂದ ಆ ಸಹೋದರರು ತಮ್ಮ ಭಾಷೆ ಯೋಸೇಫನಿಗೆ ಅರ್ಥವಾಗುವುದಿಲ್ಲವೆಂದು ತಿಳಿದುಕೊಂಡಿದ್ದರು. ಆದರೆ ಯೋಸೇಫನಿಗೆ ಅವರ ಮಾತುಗಳೆಲ್ಲಾ ಅರ್ಥವಾಯಿತು.
ಆದಿಕಾಂಡ 42 : 24 (ERVKN)
ಅವರ ಮಾತುಗಳಿಂದ ಅವನಿಗೆ ತುಂಬ ದುಃಖವಾಯಿತು. ಆದ್ದರಿಂದ ಯೋಸೇಫನು ಅವರ ಬಳಿಯಿಂದ ಸ್ವಲ್ಪದೂರ ಹೋಗಿ ಕಣ್ಣೀರು ಸುರಿಸಿ ಹಿಂತಿರುಗಿ ಬಂದನು. ಬಳಿಕ ಸಹೋದರರಲ್ಲಿ ಒಬ್ಬನಾದ ಸಿಮೆಯೋನನನ್ನು ಅವರ ಕಣ್ಣೆದುರಿನಲ್ಲೇ ಬಂಧಿಸಿದನು.
ಆದಿಕಾಂಡ 42 : 25 (ERVKN)
ಆಮೇಲೆ ಯೋಸೇಫನು ತನ್ನ ಸೇವಕರಿಗೆ, “ಅವರ ಚೀಲಗಳಿಗೆ ದವಸಧಾನ್ಯಗಳನ್ನು ತುಂಬಿರಿ” ಎಂದು ಹೇಳಿದನು. ಈ ದವಸಧಾನ್ಯಗಳಿಗೆ ಸಹೋದರರು ಹಣವನ್ನು ಪಾವತಿ ಮಾಡಿದರೂ ಯೋಸೇಫನು ಆ ಹಣವನ್ನು ಇಟ್ಟುಕೊಳ್ಳಲಿಲ್ಲ. ಅವನು ಆ ಹಣವನ್ನು ಅವರವರ ದವಸಧಾನ್ಯಗಳ ಚೀಲಗಳಲ್ಲಿ ಇಡಿಸಿದನು. ಅಲ್ಲದೆ ಪ್ರಯಾಣಕ್ಕೆ ಬೇಕಾದ ವಸ್ತುಗಳನ್ನೂ ಅವರಿಗೆ ಕೊಟ್ಟನು. [PE][PS]
ಆದಿಕಾಂಡ 42 : 26 (ERVKN)
ಸಹೋದರರು ದವಸಧಾನ್ಯಗಳನ್ನು ಕತ್ತೆಗಳ ಮೇಲೆ ಹೇರಿಸಿಕೊಂಡು ಅಲ್ಲಿಂದ ಹೊರಟರು.
ಆದಿಕಾಂಡ 42 : 27 (ERVKN)
ಆ ರಾತ್ರಿ ಸಹೋದರರು ಒಂದು ಸ್ಥಳದಲ್ಲಿ ಇಳಿದುಕೊಂಡರು. ಸಹೋದರರಲ್ಲಿ ಒಬ್ಬನು ಕತ್ತೆಗೋಸ್ಕರ ಸ್ವಲ್ಪ ದವಸಧಾನ್ಯಗಳನ್ನು ತೆಗೆದುಕೊಳ್ಳಲು ತನ್ನ ಚೀಲವನ್ನು ಬಿಚ್ಚಿದಾಗ ತಾನು ಪಾವತಿ ಮಾಡಿದ್ದ ಹಣವು ಚೀಲದಲ್ಲಿರುವುದನ್ನು ನೋಡಿದನು.
ಆದಿಕಾಂಡ 42 : 28 (ERVKN)
ಅವನು ತನ್ನ ಉಳಿದ ಸಹೋದರರಿಗೆ, “ನೋಡಿ, ನಾನು ದವಸಧಾನ್ಯಗಳಿಗೆ ಕೊಟ್ಟ ಹಣ ಇಲ್ಲೇ ಇದೆ. ಯಾರೋ ಒಬ್ಬನು ಹಣವನ್ನು ಮತ್ತೆ ನನ್ನ ಚೀಲದಲ್ಲಿ ಇಟ್ಟಿರುವನು” ಎಂದು ಹೇಳಿದನು. ಸಹೋದರರಿಗೆ ತುಂಬ ಭಯವಾಯಿತು. ಅವರು ಒಬ್ಬರಿಗೊಬ್ಬರು, “ದೇವರು ನಮಗೆ ಮಾಡುತ್ತಿರುವುದೇನು?” ಎಂದು ಮಾತಾಡಿಕೊಂಡರು. [PS]
ಆದಿಕಾಂಡ 42 : 29 (ERVKN)
{ಸಹೋದರರು ಯಾಕೋಬನಿಗೆ ನೀಡಿದ ವರದಿ} [PS] ಸಹೋದರರು ಕಾನಾನ್ ದೇಶದಲ್ಲಿದ್ದ ತಮ್ಮ ತಂದೆಯಾದ ಯಾಕೋಬನ ಬಳಿಗೆ ಹೋದರು. ನಡೆದ ಸಂಗತಿಗಳನ್ನೆಲ್ಲಾ ಯಾಕೋಬನಿಗೆ ಹೇಳುತ್ತಾ,
ಆದಿಕಾಂಡ 42 : 30 (ERVKN)
“ಆ ದೇಶದ ರಾಜ್ಯಪಾಲನು ನಮ್ಮನ್ನು ಗೂಢಚಾರರೆಂದು ಭಾವಿಸಿ ನಮ್ಮೊಂದಿಗೆ ಒರಟಾಗಿ ಮಾತನಾಡಿದನು.
ಆದಿಕಾಂಡ 42 : 31 (ERVKN)
ನಾವು ಅವನಿಗೆ, ‘ನಾವು ಯಥಾರ್ಥವಂತರು; ಗೂಢಚಾರರಲ್ಲ’ ಎಂದು ಹೇಳಿದೆವು.
ಆದಿಕಾಂಡ 42 : 32 (ERVKN)
ನಾವು ಹನ್ನೆರಡು ಮಂದಿ ಅಣ್ಣತಮ್ಮಂದಿರೆಂದೂ ನಮಗೆ ಒಬ್ಬನೇ ತಂದೆಯೆಂದೂ ಅವನಿಗೆ ಹೇಳಿದೆವು. ನಮ್ಮ ಒಬ್ಬ ತಮ್ಮನು ಸತ್ತುಹೋದನೆಂದೂ ನಮ್ಮ ಕಿರಿಯ ತಮ್ಮನು ಕಾನಾನ್ ದೇಶದಲ್ಲಿರುವ ನಮ್ಮ ಮನೆಯಲ್ಲಿರುವನೆಂದೂ ಅವನಿಗೆ ಹೇಳಿದೆವು. [PE][PS]
ಆದಿಕಾಂಡ 42 : 33 (ERVKN)
“ಆಗ ಆ ದೇಶದ ರಾಜ್ಯಪಾಲನು, ‘ನೀವು ಯಥಾರ್ಥವಂತರೆಂದು ತೋರಿಸಬೇಕಾದರೆ ನಿಮ್ಮ ಸಹೋದರರಲ್ಲಿ ಒಬ್ಬನನ್ನು ನನ್ನ ಬಳಿಯಲ್ಲಿ ಬಿಟ್ಟು ನಿಮ್ಮ ಕುಟುಂಬಗಳಿಗೆ ದವಸಧಾನ್ಯಗಳನ್ನು ತೆಗೆದುಕೊಂಡು ಹೋಗಿರಿ.
ಆದಿಕಾಂಡ 42 : 34 (ERVKN)
ಆಮೇಲೆ ನಿಮ್ಮ ಕಿರಿಯ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ. ಆಗ ನೀವು ಯಥಾರ್ಥರಾದವರೋ ಗೂಢಚಾರರೋ ಎಂದು ಗೊತ್ತಾಗುವುದು. ನೀವು ಸತ್ಯವನ್ನು ಹೇಳಿದ್ದರೆ ನಿಮ್ಮ ಸಹೋದರನನ್ನು ನಿಮಗೆ ಒಪ್ಪಿಸುವೆನು; ನಮ್ಮ ದೇಶದಲ್ಲಿ ಆಹಾರವನ್ನು ಕೊಳ್ಳಲು ನಿಮಗೆ ಯಾವ ತಡೆಯೂ ಇರುವುದಿಲ್ಲ’ ಎಂದು ಹೇಳಿದನು” ಎಂದರು. [PE][PS]
ಆದಿಕಾಂಡ 42 : 35 (ERVKN)
ಬಳಿಕ ಸಹೋದರರು ತಮ್ಮ ಚೀಲಗಳಿಂದ ದವಸಧಾನ್ಯಗಳನ್ನು ತೆಗೆಯಲು ಹೋದಾಗ ಪ್ರತಿಯೊಬ್ಬ ಸಹೋದರನ ಚೀಲದಲ್ಲಿಯೂ ತಾವು ಪಾವತಿ ಮಾಡಿದ್ದ ಹಣವನ್ನು ಕಂಡು ತುಂಬ ಭಯಗೊಂಡರು. [PE][PS]
ಆದಿಕಾಂಡ 42 : 36 (ERVKN)
ಯಾಕೋಬನು ಅವರಿಗೆ, “ನಾನು ನನ್ನ ಮಕ್ಕಳನ್ನೆಲ್ಲ ಕಳೆದುಕೊಳ್ಳಬೇಕೆಂಬುದು ನಿಮಗೆ ಇಷ್ಟವೇ? ಯೋಸೇಫನು ಇಲ್ಲವಾದನು. ಸಿಮೆಯೋನನೂ ಇಲ್ಲವಾದನು. ಈಗ ಬೆನ್ಯಾಮೀನನನ್ನು ತೆಗೆದುಕೊಂಡು ಹೋಗಬೇಕೆಂದಿರುವಿರಿ” ಎಂದು ಹೇಳಿದನು. [PE][PS]
ಆದಿಕಾಂಡ 42 : 37 (ERVKN)
ರೂಬೇನನು ತನ್ನ ತಂದೆಗೆ, “ಅಪ್ಪಾ, ನಾನು ಬೆನ್ಯಾಮೀನನನ್ನು ಕರೆದುಕೊಂಡು ಬರದಿದ್ದರೆ ನೀನು ನನ್ನ ಇಬ್ಬರು ಗಂಡುಮಕ್ಕಳನ್ನು ಕೊಲ್ಲಬಹುದು. ನನ್ನನ್ನು ನಂಬು. ನಾನು ಬೆನ್ಯಾಮೀನನನ್ನು ನಿನ್ನ ಬಳಿಗೆ ಕರೆದುಕೊಂಡು ಬರುವೆನು” ಎಂದು ಹೇಳಿದನು. [PE][PS]
ಆದಿಕಾಂಡ 42 : 38 (ERVKN)
ಯಾಕೋಬನು, “ನಾನು ನಿಮ್ಮೊಂದಿಗೆ ಬೆನ್ಯಾಮೀನನನ್ನು ಕಳುಹಿಸಿಕೊಡುವುದಿಲ್ಲ. ಅವನ ಸಹೋದರನು ಸತ್ತುಹೋದನು; ನನ್ನ ಹೆಂಡತಿಯಾದ ರಾಹೇಲಳಲ್ಲಿ ಹುಟ್ಟಿದ ಗಂಡುಮಕ್ಕಳಲ್ಲಿ ಇವನೊಬ್ಬನೇ ಉಳಿದಿರುವುದು. ಈಜಿಪ್ಟಿಗೆ ಪ್ರಯಾಣ ಮಾಡುವಾಗ ಇವನಿಗೆ ಅಪಾಯ ಸಂಭವಿಸಿದರೆ ವಯಸ್ಸಾದ ನಾನು ದುಃಖದಿಂದಲೇ ಸಮಾಧಿಗೆ ಸೇರಲು ನೀವು ಕಾರಣವಾಗುವಿರಿ” ಎಂದು ಹೇಳಿದನು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38

BG:

Opacity:

Color:


Size:


Font: