ಆದಿಕಾಂಡ 3 : 1 (ERVKN)
{ಪಾಪದ ಪ್ರಾರಂಭ} [PS] ದೇವರಾದ ಯೆಹೋವನು ಸೃಷ್ಟಿಸಿದ ಪ್ರಾಣಿಗಳಲ್ಲೆಲ್ಲಾ ಹಾವು ಅತಿ ಬುದ್ಧಿವಂತವಾದ ಮತ್ತು ಕುತಂತ್ರವುಳ್ಳ ಜಂತುವಾಗಿತ್ತು. ಹಾವು ಸ್ತ್ರೀಯನ್ನು ಮೋಸಗೊಳಿಸಬೇಕೆಂದಿತ್ತು. ಹಾವು ಅವಳಿಗೆ, “ಅಮ್ಮಾ, ಈ ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಕೂಡದೆಂದು ದೇವರು ನಿಮಗೆ ಹೇಳಿರುವುದು ನಿಜವೇ?” ಎಂದು ಕೇಳಿತು. [PE][PS]
ಆದಿಕಾಂಡ 3 : 2 (ERVKN)
ಸ್ತ್ರೀಯು ಹಾವಿಗೆ, “ಇಲ್ಲ! ದೇವರು ಹಾಗೆ ಹೇಳಲಿಲ್ಲ! ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು.
ಆದಿಕಾಂಡ 3 : 3 (ERVKN)
ಆದರೆ ಒಂದು ಮರದ ಹಣ್ಣನ್ನು ಮಾತ್ರ ನಾವು ತಿನ್ನಕೂಡದು. ದೇವರು ನಮಗೆ, ‘ತೋಟದ ಮಧ್ಯದಲ್ಲಿರುವ ಮರದ ಹಣ್ಣನ್ನು ನೀವು ತಿನ್ನಕೂಡದು; ಆ ಮರವನ್ನು ಮುಟ್ಟಕೂಡದು, ಇಲ್ಲವಾದರೆ ನೀವು ಸಾಯುವಿರಿ’ ಎಂದು ಹೇಳಿದ್ದಾನೆ” ಎಂಬುದಾಗಿ ಉತ್ತರಕೊಟ್ಟಳು. [PE][PS]
ಆದಿಕಾಂಡ 3 : 4 (ERVKN)
ಅದಕ್ಕೆ ಹಾವು ಸ್ತ್ರೀಗೆ, “ನೀವು ಸಾಯುವುದಿಲ್ಲ.
ಆದಿಕಾಂಡ 3 : 5 (ERVKN)
ನೀವು ಆ ಮರದ ಹಣ್ಣನ್ನು ತಿಂದರೆ ನಿಮಗೆ ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಬರುತ್ತದೆಯೆಂದು ದೇವರಿಗೆ ಗೊತ್ತಿದೆ. ಅಲ್ಲದೆ ನೀವು ದೇವರಿಗೆ ಸರಿಸಮಾನರಾಗುವಿರಿ” ಎಂದು ಹೇಳಿತು. [PE][PS]
ಆದಿಕಾಂಡ 3 : 6 (ERVKN)
ಸ್ತ್ರೀಗೆ ಆ ಮರವು ಸುಂದರವಾಗಿ ಕಂಡಿತು. ಅದರ ಹಣ್ಣು ಆಕೆಗೆ ತಿನ್ನಲು ಯೋಗ್ಯವಾಗಿ ಕಂಡಿತು. ಆ ಮರವು ತನ್ನನ್ನು ಜ್ಞಾನಿಯನ್ನಾಗಿ ಮಾಡುತ್ತದೆಯೆಂದು ಆಕೆ ಉತ್ಸಾಹಗೊಂಡಳು. ಆದ್ದರಿಂದ ಸ್ತ್ರೀಯು ಆ ಮರದ ಹಣ್ಣನ್ನು ಕಿತ್ತುಕೊಂಡು ತಿಂದಳು; ತನ್ನೊಂದಿಗಿದ್ದ ಗಂಡನಿಗೂ ಸ್ವಲ್ಪ ಹಣ್ಣನ್ನು ಕೊಟ್ಟಳು. ಅವನು ಸಹ ಅದನ್ನು ತಿಂದನು. [PE][PS]
ಆದಿಕಾಂಡ 3 : 7 (ERVKN)
ಕೂಡಲೇ ಪುರುಷನಲ್ಲಿಯೂ ಸ್ತ್ರೀಯಲ್ಲಿಯೂ ಬದಲಾವಣೆಗಳಾದವು. ಅವರ ಕಣ್ಣುಗಳು ತೆರೆದವು. ಅವರಿಗೆ ಎಲ್ಲವೂ ವಿಚಿತ್ರವಾಗಿ ಕಂಡವು. ತಾವು ಬೆತ್ತಲೆಯಿಂದಿರುವುದನ್ನು ಕಂಡು ಅಂಜೂರದ ಎಲೆಗಳನ್ನು ಕಿತ್ತು ಒಂದಕ್ಕೊಂದು ಜೋಡಿಸಿ ಸುತ್ತಿಕೊಂಡರು. [PE][PS]
ಆದಿಕಾಂಡ 3 : 8 (ERVKN)
ಅಂದು ಸಂಜೆ ತಂಗಾಳಿ ಬೀಸುತ್ತಿರಲು ದೇವರಾದ ಯೆಹೋವನು ತೋಟದಲ್ಲಿ ತಿರುಗಾಡುತ್ತಿದ್ದನು. ಆತನ ಸಪ್ಪಳವನ್ನು ಕೇಳಿದ ಪುರುಷನು ಮತ್ತು ಅವನ ಹೆಂಡತಿಯು ತೋಟದ ಮರಗಳ ಮರೆಯಲ್ಲಿ ಅಡಗಿಕೊಂಡರು.
ಆದಿಕಾಂಡ 3 : 9 (ERVKN)
ದೇವರಾದ ಯೆಹೋವನು ಪುರುಷನಿಗೆ, “ನೀನು ಎಲ್ಲಿರುವೆ?” ಎಂದು ಕೂಗಿ ಕೇಳಿದನು. [PE][PS]
ಆದಿಕಾಂಡ 3 : 10 (ERVKN)
ಅದಕ್ಕೆ ಪುರುಷನು, “ನೀನು ತೋಟದಲ್ಲಿ ತಿರುಗಾಡುತ್ತಿರುವ ಸಪ್ಪಳವನ್ನು ನಾನು ಕೇಳಿದೆನು. ಆದರೆ ನಾನು ಬೆತ್ತಲೆಯಾಗಿದ್ದರಿಂದ ಭಯದಿಂದ ಅಡಗಿಕೊಂಡೆನು” ಎಂದು ಹೇಳಿದನು. [PE][PS]
ಆದಿಕಾಂಡ 3 : 11 (ERVKN)
ದೇವರು ಪುರುಷನಿಗೆ, “ನೀನು ಬೆತ್ತಲೆಯಾಗಿರುವೆ ಎಂದು ನಿನಗೆ ಹೇಳಿದವರು ಯಾರು? ವಿಶೇಷವಾದ ಆ ಮರದ ಹಣ್ಣನ್ನು ನೀನು ತಿಂದೆಯಾ? ಆ ಮರದ ಹಣ್ಣನ್ನು ತಿನ್ನಕೂಡದೆಂದು ನಾನು ನಿನಗೆ ಆಜ್ಞಾಪಿಸಿದ್ದೆನಲ್ಲಾ!” ಎಂದು ಹೇಳಿದನು. [PE][PS]
ಆದಿಕಾಂಡ 3 : 12 (ERVKN)
ಅದಕ್ಕೆ ಪುರುಷನು, “ನೀನು ನನಗಾಗಿ ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ಆದ್ದರಿಂದ ನಾನು ತಿಂದೆ” ಅಂದನು. [PE][PS]
ಆದಿಕಾಂಡ 3 : 13 (ERVKN)
ಆಗ ದೇವರಾದ ಯೆಹೋವನು ಸ್ತ್ರೀಗೆ, “ನೀನು ಮಾಡಿದ್ದೇನು?” ಎಂದು ಕೇಳಿದನು. [PE][PS] ಅದಕ್ಕೆ ಸ್ತ್ರೀಯು, “ಆ ಹಾವಿನ ಮೋಸಕ್ಕೆ ಒಳಗಾಗಿ ನಾನು ಆ ಹಣ್ಣನ್ನು ತಿಂದೆ” ಅಂದಳು. [PE][PS]
ಆದಿಕಾಂಡ 3 : 14 (ERVKN)
ಆಗ ದೇವರಾದ ಯೆಹೋವನು ಹಾವಿಗೆ, “ನೀನು ಮಾಡಿದ ಈ ಕೆಟ್ಟಕಾರ್ಯದಿಂದ [QBR2] ನಿನಗೂ ಕೇಡುಗಳಾಗುತ್ತವೆ. [*ಕೇಡುಗಳಾಗುತ್ತವೆ ಅಕ್ಷರಶಃ, “ನೀನು ಶಾಪಗ್ರಸ್ತನಾಗಿರುವೆ.”] [QBR] ಬೇರೆಲ್ಲಾ ಪ್ರಾಣಿಗಳಿಗಿಂತಲೂ [QBR2] ನಿನಗೆ ಹೀನಸ್ಥಿತಿ ಉಂಟಾಗುವುದು. [QBR] ನೀನು ಹೊಟ್ಟೆಯಿಂದಲೇ ತೆವಳಿಕೊಂಡು [QBR2] ನಿನ್ನ ಜೀವಮಾನವೆಲ್ಲಾ ಮಣ್ಣನ್ನೇ ತಿನ್ನುವೆ. [QBR]
ಆದಿಕಾಂಡ 3 : 15 (ERVKN)
ನೀನು ಮತ್ತು ಸ್ತ್ರೀಯು ಒಬ್ಬರಿಗೊಬ್ಬರು ವೈರಿಗಳಾಗಿರುವಂತೆ ಮಾಡುವೆನು. [QBR2] ನಿನ್ನ ಮಕ್ಕಳು ಮತ್ತು ಅವಳ ಮಕ್ಕಳು [†ಅವಳ ಮಕ್ಕಳು ಅಕ್ಷರಶಃ, ಹೀಬ್ರೂ ಭಾಷೆಯಲ್ಲಿ “ನಿನ್ನ ಬೀಜ ಮತ್ತು ಅವಳ ಬೀಜ.”] ಒಬ್ಬರಿಗೊಬ್ಬರು ವೈರಿಗಳಾಗಿರುವರು. [QBR] ನೀನು ಆಕೆಯ ಮಗನ ಪಾದವನ್ನು ಕಚ್ಚುವೆ. [QBR2] ಆದರೆ ಅವನು ನಿನ್ನ ತಲೆಯನ್ನು ಜಜ್ಜಿ ಹಾಕುವನು” ಎಂದನು. [PS]
ಆದಿಕಾಂಡ 3 : 16 (ERVKN)
ಬಳಿಕ ದೇವರಾದ ಯೆಹೋವನು ಸ್ತ್ರೀಗೆ, “ನೀನು ಗರ್ಭಿಣಿಯಾಗಿರುವಾಗ [QBR2] ಬಹು ಸಂಕಟಪಡುವೆ. [QBR] ನೀನು ಮಕ್ಕಳನ್ನು ಹೆರುವಾಗ [QBR2] ಬಹಳ ವೇದನೆಪಡುವೆ. [QBR] ನೀನು ಗಂಡನನ್ನು ಬಹಳವಾಗಿ ಇಷ್ಟಪಡುವೆ; [QBR2] ಆದರೆ ಅವನು ನಿನ್ನನ್ನು ಆಳುವನು” ಎಂದನು. [PS]
ಆದಿಕಾಂಡ 3 : 17 (ERVKN)
ಆಮೇಲೆ ದೇವರಾದ ಯೆಹೋವನು ಪುರುಷನಿಗೆ, “ವಿಶೇಷವಾದ ಆ ಮರದ ಹಣ್ಣನ್ನು ತಿನ್ನಕೂಡದೆಂದು ನಾನು ನಿನಗೆ ಆಜ್ಞಾಪಿಸಿದ್ದೆ. [QBR2] ಆದರೆ ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ಆ ಮರದ ಹಣ್ಣನ್ನು ತಿಂದೆ. [QBR] ನಿನ್ನ ದೆಸೆಯಿಂದ ನಾನು ಭೂಮಿಯನ್ನು ಶಪಿಸುವೆನು. [QBR2] ಭೂಮಿಯು ಫಲಿಸುವ ಆಹಾರಕ್ಕಾಗಿ ನೀನು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಕಷ್ಟಪಟ್ಟು ದುಡಿಯಲೇಬೇಕು. [QBR]
ಆದಿಕಾಂಡ 3 : 18 (ERVKN)
ಭೂಮಿಯು ನಿನಗೋಸ್ಕರ ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸುವುದು. [QBR2] ಹೊಲದಲ್ಲಿ ಬೆಳೆಯುವ ಬೆಳೆಯನ್ನು ನೀನು ತಿನ್ನುವೆ. [QBR]
ಆದಿಕಾಂಡ 3 : 19 (ERVKN)
ನಿನ್ನ ಮುಖದಲ್ಲಿ ಬೆವರು ಹರಿಯುವ ತನಕ [QBR2] ನೀನು ಆಹಾರಕ್ಕಾಗಿ ಕಷ್ಟಪಟ್ಟು ದುಡಿಯುವೆ. [QBR] ನೀನು ಸಾಯುವ ದಿನದವರೆಗೆ ಕಷ್ಟಪಟ್ಟು ಕೆಲಸ ಮಾಡುವೆ. [QBR2] ಆಮೇಲೆ ನೀನು ಮಣ್ಣಾಗುವೆ. [QBR] ನಾನು ನಿನ್ನನ್ನು ನಿರ್ಮಿಸಲು ಮಣ್ಣನ್ನು ಉಪಯೋಗಿಸಿದೆ. [QBR2] ನೀನು ಸತ್ತಾಗ ಮತ್ತೆ ಮಣ್ಣೇ ಆಗುವೆ” ಎಂದನು. [PS]
ಆದಿಕಾಂಡ 3 : 20 (ERVKN)
ಆದಾಮನು ತನ್ನ ಹೆಂಡತಿಗೆ ಹವ್ವ ಎಂದು ಹೆಸರಿಟ್ಟನು. ಆದಾಮನು ಹವ್ವ ಎಂದು ಹೆಸರಿಡಲು ಕಾರಣವೇನೆಂದರೆ ಈ ಲೋಕದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಆಕೆಯೇ ಮೂಲ ತಾಯಿ. [PE][PS]
ಆದಿಕಾಂಡ 3 : 21 (ERVKN)
ದೇವರಾದ ಯೆಹೋವನು ಪ್ರಾಣಿಯ ಚರ್ಮದಿಂದ ಉಡುಪುಗಳನ್ನು ಮಾಡಿ ಆದಾಮನಿಗೆ ಮತ್ತು ಅವನ ಹೆಂಡತಿಗೆ ತೊಡಿಸಿದನು. [PE][PS]
ಆದಿಕಾಂಡ 3 : 22 (ERVKN)
ದೇವರಾದ ಯೆಹೋವನು, “ಮನುಷ್ಯನು ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ತಿಳಿದುಕೊಂಡು ನಮ್ಮಂತಾದನು. ಈಗ ಮನುಷ್ಯನು ಜೀವದಾಯಕ ಮರದ ಹಣ್ಣನ್ನೇನಾದರೂ ತೆಗೆದುಕೊಂಡು ತಿಂದರೆ ಅವನು ಸದಾಕಾಲ ಬದುಕುವನು” ಅಂದುಕೊಂಡನು. [PE][PS]
ಆದಿಕಾಂಡ 3 : 23 (ERVKN)
ಆದ್ದರಿಂದ ಆತನು ಆದಾಮನನ್ನು ಅವನು ಉತ್ಪತ್ತಿಗೊಂಡಿದ್ದ ನೆಲದಲ್ಲಿ ವ್ಯವಸಾಯ ಮಾಡಲು ಬಲವಂತವಾಗಿ ಏದೆನ್ ತೋಟದಿಂದ ಹೊರಡಿಸಿಬಿಟ್ಟನು.
ಆದಿಕಾಂಡ 3 : 24 (ERVKN)
ಅಲ್ಲದೆ ಏದೆನ್ ತೋಟವನ್ನು ಸಂರಕ್ಷಿಸುವುದಕ್ಕಾಗಿ ಆತನು ಕೆರೂಬಿದೂತರನ್ನು ತೋಟದ ಪೂರ್ವಭಾಗದಲ್ಲಿ ಇರಿಸಿದನು. ಇದಲ್ಲದೆ ಆತನು ಬೆಂಕಿಯ ಖಡ್ಗವನ್ನು ಅಲ್ಲಿಟ್ಟನು. ಈ ಖಡ್ಗವು ಎಲ್ಲಾ ದಿಕ್ಕುಗಳತ್ತ ತಿರುಗುತ್ತಾ ಧಗಧಗನೆ ಪ್ರಜ್ವಲಿಸುತ್ತಾ ಜೀವದಾಯಕ ಮರದ ಮಾರ್ಗವನ್ನು ಕಾಯುತ್ತಿತ್ತು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24

BG:

Opacity:

Color:


Size:


Font: