ಎಜ್ರನು 4 : 1 (ERVKN)
ದೇವಾಲಯ ಕಟ್ಟುವ ಕಾರ್ಯವನ್ನು ವಿರೋಧಿಸಿದ ವೈರಿಗಳು (1-2) ಆ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ ಬೇರೆ ಜನರು ಯೆಹೂದ ಮತ್ತು ಬೆನ್ಯಾಮೀನ್ ಕುಲಗಳ ಜನರಿಗೆ ವಿರುದ್ಧವಾಗಿದ್ದರು. ಸೆರೆಯಿಂದ ಬಂದ ಜನರು ಇಸ್ರೇಲರ ದೇವರಾದ ಯೆಹೋವನ ದೇವಾಲಯವನ್ನು ಕಟ್ಟುತ್ತಿದ್ದಾರೆಂಬ ವರ್ತಮಾನವನ್ನು ವೈರಿಗಳು ಕೇಳಿ ಜೆರುಬ್ಬಾಬೆಲನ ಬಳಿಗೂ ಮತ್ತು ಕುಲಪ್ರಧಾನರ ಬಳಿಗೂ ಬಂದು, “ಕಟ್ಟುವ ಕಾರ್ಯದಲ್ಲಿ ನಿಮಗೆ ಸಹಾಯ ಮಾಡಲು ಬಂದಿದ್ದೇವೆ. ನಾವು ಸಹ ನಿಮ್ಮಂತೆಯೇ ದೇವರನ್ನು ಪ್ರಾರ್ಥಿಸುತ್ತೇವೆ. ಅಶ್ಶೂರದ ರಾಜನಾದ ಏಸರ್ಹದ್ದೋನನು ನಮ್ಮನ್ನು ಇಲ್ಲಿಗೆ ತಂದು ಬಿಟ್ಟಂದಿನಿಂದ ನಾವು ನಿಮ್ಮ ದೇವರನ್ನೇ ಆರಾಧಿಸುತ್ತೇವೆ” ಅಂದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24