ಧರ್ಮೋಪದೇಶಕಾಂಡ 32 : 1 (ERVKN)
“ಆಕಾಶವೇ, ನಾನು ಹೇಳುವುದನ್ನು ಕೇಳು. [QBR2] ಭೂಮಿಯೇ, ನನ್ನ ಬಾಯಿಯ ಮಾತುಗಳನ್ನು ಆಲಿಸು. [QBR]
ಧರ್ಮೋಪದೇಶಕಾಂಡ 32 : 2 (ERVKN)
ನನ್ನ ಬೋಧನೆಯು ಮಳೆಯಂತೆ ಬರುವುದು. [QBR2] ನೆಲದ ಮೇಲೆ ಬೀಳುವ ಇಬ್ಬನಿಯಂತಿರುವುದು; [QBR] ಮೃದುವಾದ ಹುಲ್ಲಿನ ಮೇಲೆ ಬೀಳುವ ಹದವಾದ ಮಳೆಯಂತಿರುವುದು; [QBR2] ಹಸಿರು ಸಸಿಗಳ ಮೇಲೆ ಬೀಳುವ ಮಳೆಯ ಹನಿಯಂತಿರುವುದು. [QBR]
ಧರ್ಮೋಪದೇಶಕಾಂಡ 32 : 3 (ERVKN)
ಯೆಹೋವನ ಹೆಸರಿನಲ್ಲಿ [QBR2] ಮಾತಾಡುವಂತೆ ಮಾಡಿದ ದೇವರಿಗೆ ಸ್ತೋತ್ರ!
ಧರ್ಮೋಪದೇಶಕಾಂಡ 32 : 4 (ERVKN)
“ಯೆಹೋವನ ಕಾರ್ಯವು ನಿಷ್ಕಳಂಕವಾದದ್ದು. [QBR2] ಯಾಕೆಂದರೆ ಆತನ ಮಾರ್ಗವೆಲ್ಲವೂ ಸರಿಯಾದದ್ದೇ. [QBR] ದೇವರು ಸತ್ಯವಂತನೂ ನಂಬಿಗಸ್ತನೂ ಆಗಿದ್ದಾನೆ. [QBR2] ಆತನು ಒಳ್ಳೆಯವನೂ ಪ್ರಾಮಾಣಿಕನೂ ಆಗಿದ್ದಾನೆ. [QBR]
ಧರ್ಮೋಪದೇಶಕಾಂಡ 32 : 5 (ERVKN)
ನೀವು ದ್ರೋಹಿಗಳೇ, ನೀವು ಆತನ ಮಕ್ಕಳಲ್ಲ. [QBR2] ನಿಮ್ಮ ಪಾಪಗಳು ಆತನನ್ನು ಮಲಿನ ಮಾಡುವವು. [QBR2] ನೀವು ಡೊಂಕಾದ ಸುಳ್ಳುಗಾರರು. [QBR]
ಧರ್ಮೋಪದೇಶಕಾಂಡ 32 : 6 (ERVKN)
ಹೀಗೆ ಆತನು ನಿಮಗೆ ಮಾಡಿದ ಒಳ್ಳೆಯದಕ್ಕೆ ಉಪಕಾರ ತೋರಿಸುವಿರಾ? [QBR2] ಇಲ್ಲ! ನೀವು ಬುದ್ಧಿಹೀನರಾಗಿದ್ದೀರಿ. [QBR] ಯೆಹೋವನು ನಿಮ್ಮ ತಂದೆಯಾಗಿದ್ದಾನೆ. ಆತನೇ ನಿಮ್ಮನ್ನು ನಿರ್ಮಿಸಿದಾತನು. [QBR2] ಆತನೇ ನಿಮ್ಮನ್ನು ಉಂಟುಮಾಡಿದಾತನು. ಆತನೇ ಆಧಾರ ನೀಡುವಾತನು.
ಧರ್ಮೋಪದೇಶಕಾಂಡ 32 : 7 (ERVKN)
“ಹಿಂದೆ ಏನಾಯಿತೆಂದು ಜ್ಞಾಪಕಕ್ಕೆ ತಂದುಕೊಳ್ಳಿರಿ. [QBR2] ಬಹಳ ವರ್ಷಗಳ ಹಿಂದೆ ನಡೆದದ್ದನ್ನು ಜ್ಞಾಪಕ ಮಾಡಿಕೊಳ್ಳಿರಿ. [QBR] ನಿಮ್ಮ ತಂದೆಗಳನ್ನು ಕೇಳಿ, ಅವರು ಹೇಳುವರು. [QBR2] ನಿಮ್ಮ ಹಿರಿಯರನ್ನು ವಿಚಾರಿಸಿ, ಅವರು ಹೇಳುವರು. [QBR]
ಧರ್ಮೋಪದೇಶಕಾಂಡ 32 : 8 (ERVKN)
ಪರಲೋಕದಲ್ಲಿರುವ ದೇವರು ಭೂಮಿಯ ಮೇಲಿದ್ದ ಜನರನ್ನು ಪ್ರತ್ಯೇಕಿಸಿದನು. [QBR2] ಪ್ರತಿಯೊಂದು ಜನಾಂಗಕ್ಕೆ ಅದರದೇ ಆದ ದೇಶವನ್ನು ಕೊಟ್ಟನು. [QBR] ಅದಕ್ಕೆ ಮೇರೆಯನ್ನು ಆತನು ಮಾಡಿಕೊಟ್ಟನು. [QBR2] ಇಸ್ರೇಲರಲ್ಲಿ ಎಷ್ಟು ಜನರು ಇದ್ದಾರೋ ಅಷ್ಟು ಜನಾಂಗಗಳಿವೆ. [QBR]
ಧರ್ಮೋಪದೇಶಕಾಂಡ 32 : 9 (ERVKN)
ಯೆಹೋವನ ಪಾಲು ಆತನ ಜನರೇ. [QBR2] ಇಸ್ರೇಲನ ವಂಶಸ್ಥರು ದೇವಜನರಾಗಿದ್ದಾರೆ.
ಧರ್ಮೋಪದೇಶಕಾಂಡ 32 : 10 (ERVKN)
“ಮರುಭೂಮಿಯಲ್ಲಿ ಯೆಹೋವನು ಇಸ್ರೇಲನನ್ನು ಕಂಡನು. [QBR2] ಅದು ಬರಿದಾದ ಗಾಳಿ ಬೀಸುತ್ತಿದ್ದ ಸ್ಥಳವಾಗಿತ್ತು. [QBR] ಯೆಹೋವನು ಅದನ್ನು ಸುತ್ತುವರಿದು ಇಸ್ರೇಲನ್ನು ಸಂರಕ್ಷಿಸಿದನು; [QBR2] ತನ್ನ ಕಣ್ಣುಗುಡ್ಡೆಯಂತೆ ಅವರನ್ನು ಕಾಪಾಡಿದನು. [QBR]
ಧರ್ಮೋಪದೇಶಕಾಂಡ 32 : 11 (ERVKN)
ಇಸ್ರೇಲರಿಗೆ ಯೆಹೋವನು ಹದ್ದಿನಂತಿರುವನು! [QBR2] ಹದ್ದು ತನ್ನ ಮರಿಗಳಿಗೆ ಹಾರಲು ಕಲಿಸಲು ಗೂಡಿನಿಂದ ಕೆಳಕ್ಕೆ ತಳ್ಳುವುದು. [QBR] ಮರಿಗಳು ಕೆಳಗೆ ಬೀಳದಂತೆ ಅವುಗಳ ಜೊತೆಯಲ್ಲಿ ಹಾರಾಡುವುದು. [QBR2] ಅವುಗಳು ಬೀಳುವಾಗ ತನ್ನ ರಕ್ಕೆಯನ್ನು ಚಾಚಿ ಬೀಳದಂತೆ ಮಾಡುವದು. [QBR] ನಂತರ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವುದು. [QBR2] ಯೆಹೋವನು ಅದರಂತೆಯೇ. [QBR]
ಧರ್ಮೋಪದೇಶಕಾಂಡ 32 : 12 (ERVKN)
ಯೆಹೋವನೇ ಇಸ್ರೇಲನ್ನು ನಡೆಸಿದನು. [QBR2] ಅನ್ಯದೇವರು ಸಹಾಯ ಮಾಡಲಿಲ್ಲ. [QBR]
ಧರ್ಮೋಪದೇಶಕಾಂಡ 32 : 13 (ERVKN)
ಬೆಟ್ಟಗುಡ್ಡಗಳ ಪ್ರಾಂತ್ಯವನ್ನು ವಶಪಡಿಸಲು ಇಸ್ರೇಲನ್ನು ನಡೆಸಿದನು. [QBR2] ಹೊಲದ ಬೆಳೆಯನ್ನು ಇಸ್ರೇಲ್ ಕೊಯಿಲು ಮಾಡಿದನು. [QBR] ಬಂಡೆಯಿಂದ ಜೇನನ್ನು ಯೆಹೋವನು ಇಸ್ರೇಲಿಗೆ ಕೊಟ್ಟನು. [QBR2] ಗಟ್ಟಿಯಾದ ಬಂಡೆಯಿಂದ ಎಣ್ಣೆಯು ಹೊರಡುವಂತೆ ಮಾಡಿದನು. [QBR]
ಧರ್ಮೋಪದೇಶಕಾಂಡ 32 : 14 (ERVKN)
ಯೆಹೋವನು ಇಸ್ರೇಲಿಗೆ ಹಿಂಡಿನಿಂದ ಬೆಣ್ಣೆಯನ್ನೂ ಹಾಲನ್ನೂ ಕೊಟ್ಟನು. [QBR2] ಆತನು ಕೊಬ್ಬಿದ ಕುರಿಮರಿಗಳನ್ನೂ ಆಡುಗಳನ್ನೂ [QBR] ಬಾಷಾನಿನ ಅತ್ಯುತ್ತಮವಾದ ಟಗರುಗಳನ್ನೂ ಕೊಟ್ಟನು. ಜೊತೆಗೆ ಉತ್ತಮವಾದ ಗೋಧಿಯನ್ನೂ ಕೊಟ್ಟನು. [QBR2] ಇಸ್ರೇಲಿನ ಜನರು ಕೆಂಪು ದ್ರಾಕ್ಷಿಯಿಂದ ಮಾಡಿದ ಉತ್ತಮ ದ್ರಾಕ್ಷಾರಸವನ್ನು ಕುಡಿದರು.
ಧರ್ಮೋಪದೇಶಕಾಂಡ 32 : 15 (ERVKN)
“ಆದರೆ ಯೆಶುರೂನು ಕೊಬ್ಬಿದನು; ಕೊಬ್ಬಿದ ಹೋರಿಯಂತೆ ಒದ್ದನು; [QBR2] ಅವನು ಚೆನ್ನಾಗಿ ತಿಂದು ಕೊಬ್ಬಿ ಊದಿಕೊಂಡನು; [QBR] ತನ್ನ ನಿರ್ಮಾಣಿಕನಾದ ಯೆಹೋವನನ್ನು ತೊರೆದನು; [QBR2] ತನ್ನನ್ನು ಸಂರಕ್ಷಿಸಿದ ಬಂಡೆಯಿಂದ ಓಡಿಹೋದನು; [QBR]
ಧರ್ಮೋಪದೇಶಕಾಂಡ 32 : 16 (ERVKN)
ದೇವಜನರು ಇತರ ದೇವರುಗಳನ್ನು ಪೂಜಿಸಿ ಯೆಹೋವನನ್ನು ರೇಗಿಸಿದರು. [QBR2] ಅವರು ಅಸಹ್ಯ ವಿಗ್ರಹಗಳನ್ನು ಪೂಜಿಸಿ ಯೆಹೋವನನ್ನು ಸಿಟ್ಟಿಗೆಬ್ಬಿಸಿದರು. [QBR]
ಧರ್ಮೋಪದೇಶಕಾಂಡ 32 : 17 (ERVKN)
ಅವರು ದೆವ್ವಗಳಿಗೆ ಯಜ್ಞವನ್ನರ್ಪಿಸಿದರು. ಅವುಗಳು ನಿಜ ದೇವರುಗಳಲ್ಲ. [QBR2] ಅವುಗಳು ಮಾಡಲ್ಪಟ್ಟ ದೇವರುಗಳೆಂದು ಅವರಿಗೆ ಗೊತ್ತಿರಲಿಲ್ಲ. [QBR2] ಅವುಗಳು ಕೈಯಿಂದ ಮಾಡಲ್ಪಟ್ಟ ದೇವರುಗಳು. [QBR2] ಅವರ ಪೂರ್ವಿಕರಿಗೆ ತಿಳಿಯದಂಥ ದೇವರುಗಳು. [QBR]
ಧರ್ಮೋಪದೇಶಕಾಂಡ 32 : 18 (ERVKN)
ನೀವು ನಿಮ್ಮನ್ನು ನಿರ್ಮಿಸಿದ ಬಂಡೆಯಂತಿರುವ ದೇವರನ್ನು ತೊರೆದುಬಿಟ್ಟಿರಿ; [QBR2] ನಿಮಗೆ ಪ್ರಾಣವನ್ನು ಕೊಟ್ಟ ದೇವರನ್ನು ನೀವು ಮರೆತುಬಿಟ್ಟಿರಿ.
ಧರ್ಮೋಪದೇಶಕಾಂಡ 32 : 19 (ERVKN)
“ಯೆಹೋವನು ಇದನ್ನು ನೋಡಿ ಕೋಪಗೊಂಡನು. [QBR2] ಆತನ ಮಕ್ಕಳೇ ಆತನನ್ನು ಸಿಟ್ಟಿಗೆಬ್ಬಿಸಿದರು. [QBR]
ಧರ್ಮೋಪದೇಶಕಾಂಡ 32 : 20 (ERVKN)
ಆಗ ಯೆಹೋವನು, ‘ನಾನು ಅವರಿಗೆ ವಿಮುಖನಾಗುವೆನು. [QBR2] ಆಗ ಅವರಿಗೇನು ಸಂಭವಿಸುವುದೋ ನೋಡೋಣ. [QBR] ಅವರು ಎದುರುಬೀಳುವ ಜನರಾಗಿದ್ದಾರೆ. [QBR2] ಅವರು ತಮ್ಮ ಪಾಠಗಳನ್ನು ಕಲಿಯದ ಮಕ್ಕಳಂತಿದ್ದಾರೆ. [QBR]
ಧರ್ಮೋಪದೇಶಕಾಂಡ 32 : 21 (ERVKN)
ಅವರು ದೆವ್ವಗಳನ್ನು ದೇವರನ್ನಾಗಿ ಮಾಡಿ ನನ್ನಲ್ಲಿ ಅಸೂಯೆಯನ್ನು ಉಂಟುಮಾಡಿದರು. ಆ ವಿಗ್ರಹಗಳು ನಿಜವಾದ ದೇವರುಗಳಲ್ಲ! [QBR2] ಅವರು ಪ್ರಯೋಜನವಿಲ್ಲದ ವಿಗ್ರಹಗಳನ್ನು ಮಾಡಿ ನನ್ನನ್ನು ಸಿಟ್ಟಿಗೆಬ್ಬಿಸಿದರು. [QBR] ಆದ್ದರಿಂದ ನಿಜವಾದ ಜನಾಂಗವಲ್ಲದವರಿಂದ ನಾನು ಅವರಲ್ಲಿ ಈರ್ಷೆಯನ್ನು ಉಂಟು ಮಾಡುವೆನು. [QBR2] ಮೂರ್ಖ ಜನಾಂಗದಿಂದ ಅವರನ್ನು ಸಿಟ್ಟಿಗೆಬ್ಬಿಸುವೆನು. [QBR]
ಧರ್ಮೋಪದೇಶಕಾಂಡ 32 : 22 (ERVKN)
ನನ್ನ ಕೋಪವು ಬೆಂಕಿಯಂತೆ ದಹಿಸುವುದು; [QBR2] ಪಾತಾಳವನ್ನು ಸುಡುವುದು. [QBR] ಭೂಮಿಯನ್ನೂ ಅದರಲ್ಲಿರುವ ಸಕಲ ವಸ್ತುಗಳನ್ನೂ ಸುಡುವುದು. [QBR2] ಪರ್ವತಗಳ ಬುಡದ ಕೆಳಗೂ ದಹಿಸುವುದು.
ಧರ್ಮೋಪದೇಶಕಾಂಡ 32 : 23 (ERVKN)
“ ‘ನಾನು ಇಸ್ರೇಲಿಗೆ ಸಂಕಟವನ್ನು ಬರಮಾಡುವೆನು. [QBR2] ನನ್ನ ಬಾಣಗಳನ್ನೆಲ್ಲಾ ಅದಕ್ಕೆ ಬಿಡುವೆನು. [QBR]
ಧರ್ಮೋಪದೇಶಕಾಂಡ 32 : 24 (ERVKN)
ಹಸಿವೆಯಿಂದ ಅವರು ಕ್ಷೀಣವಾಗುವರು; [QBR2] ಭಯಂಕರ ವ್ಯಾಧಿಯಿಂದ ಅವರು ನಾಶವಾಗುವರು. [QBR] ಕಾಡುಪ್ರಾಣಿಗಳನ್ನು ಅವರ ಮಧ್ಯೆ ಕಳುಹಿಸುವೆನು. [QBR2] ವಿಷಸರ್ಪಗಳೂ ಹಲ್ಲಿಗಳೂ ಅವರನ್ನು ಕಚ್ಚುವವು. [QBR]
ಧರ್ಮೋಪದೇಶಕಾಂಡ 32 : 25 (ERVKN)
ರಸ್ತೆಗಳಲ್ಲಿ ಸಿಪಾಯಿಗಳು ಅವರನ್ನು ಕೊಲ್ಲುವರು. [QBR2] ಅವರ ಮನೆಗಳಲ್ಲಿ ಭಯಂಕರ ಸಂಗತಿಗಳು ನಡೆಯುವವು. [QBR] ಯುವಕಯುವತಿಯರನ್ನೂ ಸಿಪಾಯಿಗಳು ಕೊಲ್ಲುವರು, [QBR2] ಮುದುಕರನ್ನೂ ಎಳೆಗೂಸುಗಳನ್ನೂ ಸಂಹರಿಸುವರು.
ಧರ್ಮೋಪದೇಶಕಾಂಡ 32 : 26 (ERVKN)
“ ‘ನಾನು ಇಸ್ರೇಲರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ಯೋಚಿಸಿದೆನು. [QBR2] ಲೋಕದಲ್ಲಿ ಅವರ ಹೆಸರು ಉಳಿಯದಂತೆ ಮಾಡುವೆನು ಎಂದು ನೆನಸಿದೆನು. [QBR]
ಧರ್ಮೋಪದೇಶಕಾಂಡ 32 : 27 (ERVKN)
ಆದರೆ ಅವರ ವೈರಿಗಳು ಏನು ಹೇಳುತ್ತಾರೆಂಬುದು ನನಗೆ ಗೊತ್ತಿದೆ. [QBR2] ವೈರಿಯು ಅರ್ಥಮಾಡಿಕೊಳ್ಳುವುದಿಲ್ಲ, [QBR] ಅವರಿಗೆ ವಿಷಯವು ತಿಳಿಯದು. ಅವರು ಜಂಬದಿಂದ ಹೀಗೆ ಹೇಳುವರು, [QBR2] “ಯೆಹೋವನು ಇಸ್ರೇಲನ್ನು ನಾಶಮಾಡಲಿಲ್ಲ. [QBR2] ನಾವು ನಮ್ಮ ಬಲದಿಂದಲೇ ಅವರನ್ನು ಬಡಿದುಹಾಕಿದೆವು.’ ”
ಧರ್ಮೋಪದೇಶಕಾಂಡ 32 : 28 (ERVKN)
“ಇಸ್ರೇಲರು ಬುದ್ಧಿಹೀನರಾಗಿದ್ದಾರೆ; [QBR2] ಅವರಿಗೇನೂ ತಿಳಿಯುವುದಿಲ್ಲ. [QBR]
ಧರ್ಮೋಪದೇಶಕಾಂಡ 32 : 29 (ERVKN)
ಅವರು ಬುದ್ಧಿವಂತರಾಗಿದ್ದಲ್ಲಿ [QBR2] ಅವರಿಗೆ ಏನು ಸಂಭವಿಸುವುದೆಂದು ಅವರು ತಿಳಿಯುತ್ತಿದ್ದರು. [QBR]
ಧರ್ಮೋಪದೇಶಕಾಂಡ 32 : 30 (ERVKN)
ಒಬ್ಬನು ಸಾವಿರ ಮಂದಿಯನ್ನು ಓಡಿಸಬಲ್ಲನೇ? [QBR2] ಇಬ್ಬರು ಹತ್ತು ಸಾವಿರ ಮಂದಿಯನ್ನು ಓಡಿಸುವರೇ? [QBR] ಯೆಹೋವನು ಅವರನ್ನು ಅವರ ಶತ್ರುಗಳಿಗೆ ಒಪ್ಪಿಸುವಾಗ ಹಾಗೆಯೇ ಆಗುವುದು, [QBR2] ಅವರ ಬಂಡೆಯಾದ ದೇವರು ಅವರನ್ನು ಗುಲಾಮರನ್ನಾಗಿ ಮಾರುವನು; [QBR]
ಧರ್ಮೋಪದೇಶಕಾಂಡ 32 : 31 (ERVKN)
ನಮ್ಮ ವೈರಿಗಳ ಬಂಡೆಯು ನಮ್ಮ ಬಂಡೆಯಂತೆ ಬಲಶಾಲಿಯಲ್ಲ. [QBR2] ವೈರಿಗಳಿಗೂ ಇದು ಗೊತ್ತಿದೆ. [QBR]
ಧರ್ಮೋಪದೇಶಕಾಂಡ 32 : 32 (ERVKN)
ಅವರ ಹೊಲಗಳೂ ದ್ರಾಕ್ಷಾಲತೆಗಳೂ [QBR2] ಸೊದೋಮ್ ಗೊಮೋರಗಳಂತೆ ನಾಶ ಮಾಡಲ್ಪಡುವವು. [QBR]
ಧರ್ಮೋಪದೇಶಕಾಂಡ 32 : 33 (ERVKN)
ಅವರ ದ್ರಾಕ್ಷೆಯು ವಿಷದಂತೆಯೂ [QBR2] ಅವರ ದ್ರಾಕ್ಷಾರಸವು ಹಾವಿನ ವಿಷದಂತೆಯೂ ಕಹಿಯಾಗಿವೆ.
ಧರ್ಮೋಪದೇಶಕಾಂಡ 32 : 34 (ERVKN)
“ಯೆಹೋವನು ಹೀಗೆನ್ನುತ್ತಾನೆ: ‘ಆ ಶಿಕ್ಷೆಯನ್ನು ನಾನು ಜೋಪಾನವಾಗಿಟ್ಟಿದ್ದೇನೆ. [QBR2] ಅದನ್ನು ನಾನು ನನ್ನ ಉಗ್ರಾಣದಲ್ಲಿ ಸುರಕ್ಷಿತವಾಗಿರಿಸಿದ್ದೇನೆ. [QBR]
ಧರ್ಮೋಪದೇಶಕಾಂಡ 32 : 35 (ERVKN)
ಅವರ ದುಷ್ಕೃತ್ಯಗಳಿಗಾಗಿ ನಾನು ಅವರನ್ನು ಶಿಕ್ಷಿಸುವೆನು. [QBR2] ಅವರು ಜಾರಿ ಕೆಟ್ಟಕಾರ್ಯಗಳನ್ನು ಮಾಡಿದಾಗ ನಾನು ಅವರನ್ನು ಶಿಕ್ಷಿಸುವೆನು. [QBR] ಅವರ ಮಹಾಸಂಕಟ ಕಾಲವು ಹತ್ತಿರವೇ ಇದೆ. [QBR2] ಅವರಿಗೋಸ್ಕರ ಸಿದ್ಧವಾಗಿರುವ ಶಿಕ್ಷೆಯು ಬೇಗನೆ ಬರುತ್ತದೆ.’
ಧರ್ಮೋಪದೇಶಕಾಂಡ 32 : 36 (ERVKN)
“ಯೆಹೋವನು ತನ್ನ ಜನರಿಗೆ ನ್ಯಾಯತೀರಿಸುವನು. [QBR2] ಅವರು ಆತನ ಸೇವಕರಾಗಿದ್ದಾರೆ. ಆತನು ಅವರಿಗೆ ಕರುಣೆ ತೋರಿಸುವನು. [QBR] ಅವರ ಬಲವು ಕುಂದುವಂತೆ ಮಾಡುವನು. [QBR2] ಗುಲಾಮರಾಗಿರಲಿ ಸ್ವತಂತ್ರರಾಗಿರಲಿ ಅವರನ್ನು ಆತನು ನಿಸ್ಸಹಾಯಕರನ್ನಾಗಿ ಮಾಡುವನು. [QBR]
ಧರ್ಮೋಪದೇಶಕಾಂಡ 32 : 37 (ERVKN)
ಆಗ ಯೆಹೋವನು ಹೀಗೆನ್ನುವನು: ‘ನಿಮ್ಮ ಸುಳ್ಳುದೇವರುಗಳೆಲ್ಲಿ? [QBR2] ನಿಮ್ಮ ಸಂರಕ್ಷಣೆಗಾಗಿ ನೀವು ಆಶ್ರಯಿಸಿಕೊಂಡಿದ್ದ “ಬಂಡೆ” ಎಲ್ಲಿ? [QBR]
ಧರ್ಮೋಪದೇಶಕಾಂಡ 32 : 38 (ERVKN)
ನಿಮ್ಮ ಯಜ್ಞಗಳ ಕೊಬ್ಬನ್ನು ಆ ಸುಳ್ಳುದೇವರುಗಳು ತಿಂದುಬಿಟ್ಟವು. [QBR2] ನೀವು ಅರ್ಪಿಸಿದ ದ್ರಾಕ್ಷಾರಸವನ್ನು ಕುಡಿದುಬಿಟ್ಟವು. [QBR] ಆ ದೇವರುಗಳೆದ್ದು ನಿಮಗೆ ಸಹಾಯಮಾಡಲಿ. [QBR2] ಅವುಗಳು ನಿಮ್ಮನ್ನು ಸಂರಕ್ಷಿಸಲಿ.
ಧರ್ಮೋಪದೇಶಕಾಂಡ 32 : 39 (ERVKN)
“ ‘ನಾನೇ ದೇವರು, ನನ್ನ ಹೊರತು ಬೇರೆ ದೇವರಿಲ್ಲ. [QBR2] ಜನರಿಗೆ ಮರಣವನ್ನೂ ಜೀವವನ್ನೂ ಕೊಡುವವನು ನಾನೇ. [QBR] ಅವರಿಗೆ ಗಾಯ ಮಾಡುವವನೂ ನಾನೇ, [QBR2] ಅದನ್ನು ಗುಣಮಾಡುವವನೂ ನಾನೇ. [QBR] ನನ್ನ ಶಕ್ತಿಯ ಹಿಡಿತದಿಂದ ಇನ್ನೊಬ್ಬನನ್ನು [QBR2] ರಕ್ಷಿಸಲು ಯಾರಿಗೂ ಸಾಧ್ಯವಿಲ್ಲ. [QBR]
ಧರ್ಮೋಪದೇಶಕಾಂಡ 32 : 40 (ERVKN)
ನನ್ನ ಕೈಗಳನ್ನು ಆಕಾಶದ ಕಡೆಗೆತ್ತಿ ವಚನ ಕೊಡುತ್ತೇನೆ. [QBR2] ನಾನು ನಿತ್ಯಕಾಲಕ್ಕೆ ಜೀವಿಸುವುದು ಎಷ್ಟು ಸತ್ಯವೋ ಅದೇರೀತಿ ಇವೆಲ್ಲವೂ ನೆರವೇರುವವು. [QBR]
ಧರ್ಮೋಪದೇಶಕಾಂಡ 32 : 41 (ERVKN)
ಥಳಥಳಿಸುವ ನನ್ನ ಖಡ್ಗವನ್ನು ನಾನು ಹದಮಾಡುವೆನು. [QBR2] ನನ್ನ ವೈರಿಗಳನ್ನು ಶಿಕ್ಷಿಸಲು ನಾನದನ್ನು ಉಪಯೋಗಿಸುವೆನು. [QBR] ನಾನು ಅವರಿಗೆ ಯೋಗ್ಯವಾದ ದಂಡನೆಯನ್ನು ಕೊಡುವೆನು [QBR2] ಎಂದು ನಾನು ಆಣೆಯಿಟ್ಟು ಹೇಳುತ್ತೇನೆ. [QBR]
ಧರ್ಮೋಪದೇಶಕಾಂಡ 32 : 42 (ERVKN)
ನನ್ನ ವೈರಿಗಳು ಕೊಲ್ಲಲ್ಪಡುವರು ಮತ್ತು ಸೆರೆಯಾಳುಗಳಾಗಿ ಒಯ್ಯಲ್ಪಡುವರು. [QBR2] ನನ್ನ ಬಾಣಗಳು ಅವರ ರಕ್ತದಿಂದ ಮುಚ್ಚಲ್ಪಟ್ಟಿವೆ. [QBR2] ನನ್ನ ಖಡ್ಗವು ಅವರ ಸೈನಿಕರ ತಲೆಯನ್ನು ಕತ್ತರಿಸುವುದು.’
ಧರ್ಮೋಪದೇಶಕಾಂಡ 32 : 43 (ERVKN)
“ಭೂಲೋಕವೆಲ್ಲಾ ದೇವಜನರಿಗಾಗಿ ಸಂತೋಷಿಸುವದು; [QBR2] ಯಾಕೆಂದರೆ ಆತನು ಅವರನ್ನು ಸಾಯಿಸುವನು; [QBR] ತನ್ನ ಸೇವಕರನ್ನು ಸಂಹರಿಸುವವರನ್ನು ಶಿಕ್ಷಿಸುವನು; ತನ್ನ ವೈರಿಗಳಿಗೆ ತಕ್ಕ ದಂಡನೆ ಕೊಡುವನು. [QBR2] ತನ್ನ ದೇಶವನ್ನೂ ತನ್ನ ಜನರನ್ನೂ ಶುದ್ಧಿ ಮಾಡುವನು.” [PS]
ಧರ್ಮೋಪದೇಶಕಾಂಡ 32 : 44 (ERVKN)
{ಮೋಶೆಯು ಜನರಿಗೆ ಹಾಡನ್ನು ಕಲಿಸಿದನು} [PS] ಮೋಶೆಯು ಈ ಹಾಡಿನ ಎಲ್ಲಾ ಪದಗಳನ್ನು ಇಸ್ರೇಲರು ಕೇಳುವಂತೆ ಹೇಳಿದನು. ನೂನನ ಮಗನಾದ ಯೆಹೋಶುವನು ಮೋಶೆಯ ಸಂಗಡ ಇದ್ದನು.
ಧರ್ಮೋಪದೇಶಕಾಂಡ 32 : 45 (ERVKN)
ಮೋಶೆಯು ಜನರಿಗೆ ಬೋಧಿಸಿದ ಬಳಿಕ
ಧರ್ಮೋಪದೇಶಕಾಂಡ 32 : 46 (ERVKN)
ಹೀಗೆ ಹೇಳಿದನು: “ನಾನು ಈ ದಿನ ಹೇಳಿದ ಎಲ್ಲಾ ಆಜ್ಞೆಗಳನ್ನು ಅನುಸರಿಸಲು ಜಾಗರೂಕರಾಗಿರಿ. ಅವುಗಳನ್ನು ನಿಮ್ಮ ಮಕ್ಕಳಿಗೂ ತಿಳಿಸಿ; ಕಟ್ಟಳೆಗಳನ್ನು ಸಂಪೂರ್ಣವಾಗಿ ಕೈಗೊಳ್ಳುವಂತೆ ಅವರಿಗೆ ಬೋಧಿಸಿರಿ, ಕಲಿಸಿರಿ.
ಧರ್ಮೋಪದೇಶಕಾಂಡ 32 : 47 (ERVKN)
ಈ ಬೋಧನೆಗಳು ಮುಖ್ಯವಾದವುಗಳಲ್ಲವೆಂದು ತಿಳಿಯಬೇಡಿ. ಅವು ನಿಮ್ಮ ಜೀವವಾಗಿವೆ. ನೀವು ತೆಗೆದುಕೊಳ್ಳಲು ಸಿದ್ಧರಾಗಿರುವ ಜೋರ್ಡನ್ ನದಿಯ ಆಚೆಕಡೆಯಲ್ಲಿರುವ ದೇಶದಲ್ಲಿ ಈ ಉಪದೇಶಗಳ ಮೂಲಕ ಬಹುಕಾಲ ಬದುಕುವಿರಿ.” [PS]
ಧರ್ಮೋಪದೇಶಕಾಂಡ 32 : 48 (ERVKN)
{ನೆಬೋ ಪರ್ವತದ ಮೇಲೆ ಮೋಶೆ} [PS] ಅದೇ ದಿನದಲ್ಲಿ ಯೆಹೋವನು ಮೋಶೆಯೊಂದಿಗೆ ಮಾತನಾಡಿ,
ಧರ್ಮೋಪದೇಶಕಾಂಡ 32 : 49 (ERVKN)
“ಮೋವಾಬ್ ಪ್ರಾಂತ್ಯದಲ್ಲಿರುವ ಅಬಾರೀಮ್ ಬೆಟ್ಟದ ಸಾಲಿಗೆ ಹೋಗಿ ಅಲ್ಲಿ ನೆಬೋ ಬೆಟ್ಟವನ್ನೇರು. ಇದು ಜೆರಿಕೊ ಕೋಟೆಗೆ ಎದುರಾಗಿ ಇದೆ. ಅಲ್ಲಿಂದ ನಾನು ಇಸ್ರೇಲರಿಗೆ ಕೊಡುವ ಕಾನಾನ್ ದೇಶವನ್ನು ನೀನು ನೋಡುವಿ.
ಧರ್ಮೋಪದೇಶಕಾಂಡ 32 : 50 (ERVKN)
ನಿನ್ನ ಅಣ್ಣನಾದ ಆರೋನನು ಹೋರ್ ಬೆಟ್ಟದಲ್ಲಿ ಸತ್ತುಹೋದಂತೆಯೇ ನೀನೂ ನೆಬೋ ಬೆಟ್ಟದ ಮೇಲೆ ಸಾಯುವೆ.
ಧರ್ಮೋಪದೇಶಕಾಂಡ 32 : 51 (ERVKN)
ಯಾಕೆಂದರೆ ನೀವಿಬ್ಬರೂ ನನಗೆ ವಿರುದ್ಧವಾಗಿ ಪಾಪಮಾಡಿದಿರಿ. ಚಿನ್ ಮರುಭೂಮಿಯಲ್ಲಿರುವ ಕಾದೇಶ್ ಬಳಿಯಲ್ಲಿದ್ದ ಮೆರೀಬಾ ಎಂಬ ಸ್ಥಳದ ನೀರಿನ ಬಳಿಯಲ್ಲಿ ನೀನು ಜನರ ಮುಂದೆ ನನ್ನನ್ನು ಅವಮಾನಪಡಿಸಿದೆ. ನೀನು ನನ್ನನ್ನು ಮಹಾಪವಿತ್ರನೆಂದು ಗೌರವಿಸಬೇಕಿತ್ತು, ಆದರೆ ನೀನು ಗೌರವಿಸಲಿಲ್ಲ.
ಧರ್ಮೋಪದೇಶಕಾಂಡ 32 : 52 (ERVKN)
ಆದ್ದರಿಂದ ನಾನು ಇಸ್ರೇಲರಿಗೆ ಕೊಡುವ ದೇಶವನ್ನು ನೀನು ನೋಡುವೆ ಆದರೆ ಅದನ್ನು ಪ್ರವೇಶಿಸುವುದಿಲ್ಲ.” [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52

BG:

Opacity:

Color:


Size:


Font: