ಧರ್ಮೋಪದೇಶಕಾಂಡ 29 : 1 (ERVKN)
ಮೋವಾಬ್ಯರೊಂದಿಗೆ ಒಡಂಬಡಿಕೆ ಇಸ್ರೇಲ್ ಜನಾಂಗದೊಂದಿಗೆ ಹೋರೇಬ್ ಬೆಟ್ಟದಲ್ಲಿ ಯೆಹೋವನು ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಅಲ್ಲದೆ ಇಸ್ರೇಲರು ಮೋವಾಬ್ ಪ್ರಾಂತ್ಯದಲ್ಲಿದ್ದಾಗ ಯೆಹೋವನು ಮೋಶೆಗೆ ಅವರೊಡನೆ ಇನ್ನೊಂದು ಒಡಂಬಡಿಕೆಯನ್ನು ಮಾಡಿಕೊಳ್ಳಲು ಹೇಳಿದನು. ಅದು ಯಾವುದೆಂದರೆ:
ಧರ್ಮೋಪದೇಶಕಾಂಡ 29 : 2 (ERVKN)
ಮೋಶೆಯು ಇಸ್ರೇಲರ ಜನಸಮೂಹವನ್ನು ಕರೆದು, “ಈಜಿಪ್ಟ್ ದೇಶದಲ್ಲಿ ಯೆಹೋವನು ನಡಿಸಿದ ಕಾರ್ಯಗಳನ್ನೆಲ್ಲಾ ನೀವು ನೋಡಿದ್ದೀರಿ. ಆತನು ಫರೋಹನಿಗೂ ಅವನ ಪರಿವಾರದವರಿಗೂ ಮತ್ತು ಇಡೀ ಈಜಿಪ್ಟಿನವರಿಗೂ ಮಾಡಿದ್ದನ್ನೆಲ್ಲಾ ನೀವು ನೋಡಿದ್ದೀರಿ.
ಧರ್ಮೋಪದೇಶಕಾಂಡ 29 : 3 (ERVKN)
ಅವರಿಗೆ ಕೊಟ್ಟಂಥ ಭಯಂಕರ ಸಂಕಟಗಳನ್ನು ನೋಡಿದಿರಿ; ಆತನು ನಡಿಸಿದ ಅದ್ಭುತಕಾರ್ಯಗಳನ್ನು ನೋಡಿದಿರಿ.
ಧರ್ಮೋಪದೇಶಕಾಂಡ 29 : 4 (ERVKN)
ಆದರೆ ಇಂದಿನ ತನಕವೂ ನೀವು ಅದನ್ನು ಸಂಪೂರ್ಣವಾಗಿ ಅರಿಯಲಿಲ್ಲ. ನೀವು ಕಂಡವುಗಳನ್ನು ಮತ್ತು ಕೇಳಿದವುಗಳನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳದಂತೆ ಯೆಹೋವನು ಮಾಡಿದನು.
ಧರ್ಮೋಪದೇಶಕಾಂಡ 29 : 5 (ERVKN)
ನಲವತ್ತು ವರ್ಷಗಳ ತನಕ ಯೆಹೋವನು ನಿಮ್ಮನ್ನು ಅಡವಿಯಲ್ಲಿ ನಡೆಸಿದನು. ಆದರೆ ನಿಮ್ಮ ಬಟ್ಟೆಗಳು ಜೀರ್ಣವಾಗಲಿಲ್ಲ ಮತ್ತು ಕಾಲಿಗೆ ಹಾಕಿದ ಕೆರಗಳು ಸವೆಯಲಿಲ್ಲ.
ಧರ್ಮೋಪದೇಶಕಾಂಡ 29 : 6 (ERVKN)
ನಿಮ್ಮಲ್ಲಿ ಆಹಾರವಿರಲಿಲ್ಲ; ಕುಡಿಯಲು ದ್ರಾಕ್ಷಾರಸವಾಗಲಿ ಪಾನೀಯವಾಗಲಿ ಇರಲಿಲ್ಲ. ಆದರೆ ಯೆಹೋವನು ಮನ್ನವನ್ನು ಮತ್ತು ನೀರನ್ನು ಕೊಟ್ಟನು. ಆತನೇ ನಿಮ್ಮ ದೇವರಾದ ಯೆಹೋವನೆಂದು ನೀವು ಅರಿತುಕೊಳ್ಳುವ ಹಾಗೆ ಮಾಡಿದನು.
ಧರ್ಮೋಪದೇಶಕಾಂಡ 29 : 7 (ERVKN)
“ನಾವು ಈ ಸ್ಥಳಕ್ಕೆ ಬಂದಾಗ ಹೆಪ್ಬೋನಿನ ರಾಜ ಸೀಹೋನ ಮತ್ತು ಬಾಷಾನಿನ ರಾಜ ಓಗನು ನಮ್ಮೊಂದಿಗೆ ಯುದ್ಧ ಮಾಡಲು ಬಂದರು. ನಾವು ಅವರನ್ನು ಸೋಲಿಸಿದೆವು.
ಧರ್ಮೋಪದೇಶಕಾಂಡ 29 : 8 (ERVKN)
ನಾವು ಅವರ ದೇಶವನ್ನು ರೂಬೇನ್, ಗಾದ್ ಮತ್ತು ಮನಸ್ಸೆಯ ಅರ್ಧ ಕುಲದವರಿಗೆ ಹಂಚಿದೆವು.
ಧರ್ಮೋಪದೇಶಕಾಂಡ 29 : 9 (ERVKN)
ನೀವು ದೇವರೊಡನೆ ಮಾಡಿದ ಒಪ್ಪಂದವನ್ನು ಪಾಲಿಸುತ್ತಾ ಬಂದರೆ ನೀವು ನಿಮ್ಮ ಕಾರ್ಯಗಳಲ್ಲಿ ಜಯವನ್ನು ಹೊಂದುವಿರಿ.
ಧರ್ಮೋಪದೇಶಕಾಂಡ 29 : 10 (ERVKN)
“ಈ ದಿನ ನೀವೆಲ್ಲರೂ ದೇವರ ಮುಂದೆ ನಿಂತಿದ್ದೀರಿ. ನಿಮ್ಮ ನಾಯಕರು, ಹಿರಿಯರು, ನಿಮ್ಮ ಜನರೆಲ್ಲಾ ಇಲ್ಲಿ ಇರುವಿರಿ.
ಧರ್ಮೋಪದೇಶಕಾಂಡ 29 : 11 (ERVKN)
ನಿಮ್ಮ ಹೆಂಡತಿಮಕ್ಕಳೂ, ನಿಮ್ಮೊಂದಿಗಿರುವ ಪರದೇಶಸ್ಥರೂ ನಿಮ್ಮ ಸೇವೆ ಮಾಡುವವರೂ ಇದ್ದಾರೆ.
ಧರ್ಮೋಪದೇಶಕಾಂಡ 29 : 12 (ERVKN)
ನೀವೆಲ್ಲಾ ನಿಮ್ಮ ದೇವರಾದ ಯೆಹೋವನೊಂದಿಗೆ ಒಡಂಬಡಿಕೆಯನ್ನು ಮಾಡುವುದಕ್ಕೋಸ್ಕರ ನಿಂತಿದ್ದೀರಿ. ದೇವರು ನಿಮ್ಮೊಂದಿಗೆ ಒಡಂಬಡಿಕೆಯನ್ನು ಮಾಡುತ್ತಾನೆ.
ಧರ್ಮೋಪದೇಶಕಾಂಡ 29 : 13 (ERVKN)
ಈ ಒಡಂಬಡಿಕೆಯ ಮೂಲಕ ದೇವರು ನಿಮ್ಮನ್ನು ತನ್ನ ಸ್ವಕೀಯ ಜನರನ್ನಾಗಿ ಮಾಡುತ್ತಾನೆ. ಆತನು ನಿಮಗೆ ದೇವರಾಗಿದ್ದಾನೆ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಹೇಳಿದಂತೆ ನಿಮಗೂ ಹೇಳುತ್ತಾನೆ.
ಧರ್ಮೋಪದೇಶಕಾಂಡ 29 : 14 (ERVKN)
ಯೆಹೋವನು ವಾಗ್ದಾನಗಳನ್ನು ಒಳಗೊಂಡ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾತ್ರ ಮಾಡದೆ ಇಲ್ಲಿ ಕೂಡಿಬಂದಿರುವ ಎಲ್ಲರೊಂದಿಗೂ ಮಾಡುತ್ತಾನೆ.
ಧರ್ಮೋಪದೇಶಕಾಂಡ 29 : 15 (ERVKN)
ಇಂದು ನಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಇಲ್ಲಿ ನಿಂತಿರುವ ನಮ್ಮೆಲ್ಲರೊಂದಿಗೂ ಇಂದು ನಮ್ಮೊಂದಿಗಿಲ್ಲದ ನಮ್ಮ ಸಂತತಿಯವರಿಗೂ ಆತನು ಈ ಒಡಂಬಡಿಕೆಯನ್ನು ಮಾಡುತ್ತಿದ್ದಾನೆ.
ಧರ್ಮೋಪದೇಶಕಾಂಡ 29 : 16 (ERVKN)
ನಾನು ಈಜಿಪ್ಟಿನಲ್ಲಿ ಹೇಗೆ ಜೀವಿಸುತ್ತಿದ್ದೆವೆಂಬುದನ್ನೂ, ನಾವು ಇಲ್ಲಿಗೆ ಬರುವಾಗ ಹೇಗೆ ದೇಶಗಳನ್ನು ದಾಟಿಕೊಂಡು ಬಂದೆವೆಂಬುದನ್ನೂ ಸ್ಮರಿಸಿರಿ.
ಧರ್ಮೋಪದೇಶಕಾಂಡ 29 : 17 (ERVKN)
ನೀವು ಅವರ ಅಸಹ್ಯವಾದ ವಿಗ್ರಹಗಳನ್ನು ನೋಡಿದಿರಿ. ಅವುಗಳು ಮರ, ಕಲ್ಲು, ಬೆಳ್ಳಿಬಂಗಾರಗಳಿಂದ ಕೆತ್ತಲ್ಪಟ್ಟವುಗಳಾಗಿದ್ದವು.
ಧರ್ಮೋಪದೇಶಕಾಂಡ 29 : 18 (ERVKN)
ಇಲ್ಲಿರುವ ಯಾವ ಪುರುಷನಾಗಲಿ ಸ್ತ್ರೀಯಾಗಲಿ ಯಾವ ಗೋತ್ರದವರಾಗಲಿ ನಿಮ್ಮ ದೇವರಾದ ಯೆಹೋವನನ್ನು ಬಿಟ್ಟುಹೋಗದಂತೆ ನೋಡಿಕೊಳ್ಳಿರಿ. ಯಾವನೂ ಹೋಗಿ ಬೇರೆ ಜನಾಂಗಗಳ ದೇವರುಗಳ ಸೇವೆಮಾಡಬಾರದು. ಅಂಥದ್ದನ್ನು ಮಾಡುವ ಜನರು ಕಹಿಯಾದ ಮತ್ತು ವಿಷಭರಿತವಾದ ಹಣ್ಣನ್ನು ಬಿಡುವ ಗಿಡದಂತಿದ್ದಾರೆ.
ಧರ್ಮೋಪದೇಶಕಾಂಡ 29 : 19 (ERVKN)
“ನಾನು ತಿಳಿಸಿದ ಶಾಪವನ್ನೆಲ್ಲಾ ಕೇಳಿಸಿಕೊಂಡು, ‘ನಾನು ನನ್ನ ಇಷ್ಟ ಬಂದಂತೆ ಮಾಡುತ್ತೇನೆ. ನನಗೆ ಯಾವ ಕೇಡೂ ಆಗುವುದಿಲ್ಲ’ ಎಂದು ಯಾವನಾದರೂ ಹೇಳಿಕೊಂಡು ತನ್ನನ್ನು ತಾನೇ ಸಮಾಧಾನಪಡಿಸಿಕೊಂಡರೆ, ಅವನು ತನಗೆ ಮಾತ್ರವಲ್ಲ ಎಲ್ಲಾ ಒಳ್ಳೆಯ ಜನರಿಗೂ ಕೇಡಾಗುವಂತೆ ಮಾಡುತ್ತಾನೆ.
ಧರ್ಮೋಪದೇಶಕಾಂಡ 29 : 20 (ERVKN)
(20-21) ಯೆಹೋವನು ಆ ಮನುಷ್ಯನನ್ನು ಕ್ಷಮಿಸುವುದಿಲ್ಲ. ಅವನ ಮೇಲೆ ಕೋಪಗೊಂಡು ಅವನನ್ನು ಶಿಕ್ಷಿಸುವನು. ಅವನನ್ನು ಇಸ್ರೇಲ್ ಕುಲಗಳಿಂದ ತೆಗೆದುಹಾಕುವನು. ಈ ಪುಸ್ತಕದಲ್ಲಿ ಬರೆದ ಎಲ್ಲಾ ಶಾಪಗಳಿಂದ ಬಾಧಿಸಿ ನಾಶಪಡಿಸುವನು. ಈ ಬೋಧನಾ ಪುಸ್ತಕದಲ್ಲಿ ಬರೆದಿರುವ ಒಡಂಬಡಿಕೆಗೆ ಅದು ಸೇರಿರುತ್ತದೆ.
ಧರ್ಮೋಪದೇಶಕಾಂಡ 29 : 21 (ERVKN)
ಧರ್ಮೋಪದೇಶಕಾಂಡ 29 : 22 (ERVKN)
“ಮುಂದಿನ ದಿವಸಗಳಲ್ಲಿ ನಿಮ್ಮ ಸಂತತಿಯವರೂ ದೂರದೇಶದ ಪರದೇಶಸ್ಥರೂ ನಿಮ್ಮ ದೇಶವು ಹೇಗೆ ಹಾಳಾಗಿ ಹೋಯಿತು ಎಂಬುದನ್ನು ನೋಡುವರು. ಯೆಹೋವನು ದೇಶಕ್ಕೆ ತಂದ ವ್ಯಾಧಿಗಳನ್ನು ಅವರು ನೋಡುವರು.
ಧರ್ಮೋಪದೇಶಕಾಂಡ 29 : 23 (ERVKN)
ನಿಮ್ಮ ದೇಶವೆಲ್ಲಾ ನಿಷ್ಪ್ರಯೋಜಕವಾಗಿರುವುದು. ಅದರ ಮೇಲೆ ಉಪ್ಪೂ ಗಂಧಕವೂ ತುಂಬಿರುವುದು. ಅದರ ಮೇಲೆ ಯಾವ ಸಸಿಯೂ ಬೆಳೆಯಲಾರದು; ಕೂಳೆಯೂ ಬೆಳೆಯುವುದಿಲ್ಲ. ಸೊದೋಮ್, ಗೊಮೋರ, ಅದ್ಮಾ ಮತ್ತು ಚೆಬೋಯೀಮ್ ಎಂಬ ಪಟ್ಟಣಗಳು ಯೆಹೋವನ ಕೋಪದ ನಿಮಿತ್ತ ನಾಶವಾದಂತೆ ನಿಮ್ಮ ದೇಶವೂ ನಾಶವಾಗುವುದು.
ಧರ್ಮೋಪದೇಶಕಾಂಡ 29 : 24 (ERVKN)
“ಇತರ ದೇಶಗಳವರು, ‘ದೇವರು ಈ ದೇಶವನ್ನು ಯಾಕೆ ನಾಶಮಾಡಿದನು? ಆತನು ಯಾಕೆ ಕೋಪಗೊಂಡನು?’ ಎಂದು ವಿಚಾರಿಸುವರು.
ಧರ್ಮೋಪದೇಶಕಾಂಡ 29 : 25 (ERVKN)
ಯಾಕೆಂದರೆ ‘ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನೊಂದಿಗೆ ಮಾಡಿದ ಒಡಂಬಡಿಕೆಯನ್ನು ಬಿಟ್ಟು ತೊಲಗಿದರು. ಅವರನ್ನು ಈಜಿಪ್ಟಿನಿಂದ ಹೊರತರುವಾಗ ಯೆಹೋವನೊಂದಿಗೆ ಮಾಡಿದ ಒಡಂಬಡಿಕೆಯನ್ನು ಅನುಸರಿಸಲಿಲ್ಲ.
ಧರ್ಮೋಪದೇಶಕಾಂಡ 29 : 26 (ERVKN)
ಇಸ್ರೇಲ್ ಜನರು ಅನ್ಯದೇವರುಗಳನ್ನು ಪೂಜಿಸಲು ಪ್ರಾರಂಭಿಸಿದರು. ಅಂಥಾ ದೇವರುಗಳನ್ನು ಅವರು ಹಿಂದೆಂದೂ ಪೂಜಿಸಿರಲಿಲ್ಲ. ಯೆಹೋವನು ಅನ್ಯದೇವತೆಗಳನ್ನು ಪೂಜಿಸಬಾರದು ಎಂದು ಆಜ್ಞಾಪಿಸಿದ್ದರೂ ಅವರು ಅದನ್ನು ಉಲ್ಲಂಘಿಸಿದರು.
ಧರ್ಮೋಪದೇಶಕಾಂಡ 29 : 27 (ERVKN)
ಈ ಕಾರಣಕ್ಕಾಗಿಯೇ ದೇವರು ಅವರ ಮೇಲೆ ಸಿಟ್ಟುಗೊಂಡು ಈ ಪುಸ್ತಕದಲ್ಲಿ ಬರೆದಿರುವ ಶಾಪವನ್ನು ಅವರಿಗೆ ಬರಮಾಡಿದನು.
ಧರ್ಮೋಪದೇಶಕಾಂಡ 29 : 28 (ERVKN)
ದೇವರು ಅವರ ಮೇಲೆ ಬಹಳವಾಗಿ ಸಿಟ್ಟುಗೊಂಡದ್ದರಿಂದ ಅವರ ದೇಶದಿಂದ ಅವರನ್ನು ಕಿತ್ತು ಅವರು ಈಗ ವಾಸಿಸುವ ಮತ್ತೊಂದು ದೇಶದಲ್ಲಿ ಅವರನ್ನಿರಿಸಿದನು.’
ಧರ್ಮೋಪದೇಶಕಾಂಡ 29 : 29 (ERVKN)
“ಯೆಹೋವನು ಕೆಲವು ಸಂಗತಿಗಳನ್ನು ಗುಪ್ತವಾಗಿಟ್ಟಿದ್ದಾನೆ. ಅದು ಆತನಿಗೆ ಮಾತ್ರ ತಿಳಿದದೆ. ಆದರೆ ಪ್ರಕಟಿಸಲ್ಪಟ್ಟಿರುವ ಸಂಗತಿಗಳನ್ನು ನಾವು ಮತ್ತು ನಮ್ಮ ಸಂತತಿಗಳವರು ಮಾತ್ರ ತಿಳಿದಿದ್ದೇವೆ. *ಆದರೆ …ತಿಳಿದಿದ್ದೇವೆ ಇದು ಈ ಅರ್ಥವನ್ನೂ ಕೊಡಬಲ್ಲದು: “ನಾವು ಕಂಡಿರುವ ಹಿಂದಿನ ಸಂಗತಿಗಳನ್ನು ಮತ್ತು ಈಗ ಸಂಭವಿಸುತ್ತಿರುವ ಸಂಗತಿಗಳನ್ನು ಮಾತ್ರ ನಾವು ತಿಳಿದಿದ್ದೇವೆ.” ಆ ಬೋಧನೆಗೆ ನಾವು ನಿತ್ಯಕಾಲಕ್ಕೂ ವಿಧೇಯರಾಗುವಂತೆ ಹೇಳಿದ್ದಾನೆ. ಆತನಿಗೆ ವಿಧೇಯರಾಗುವುದು ನಮ್ಮ ಕರ್ತವ್ಯ.
❮
❯