ಧರ್ಮೋಪದೇಶಕಾಂಡ 28 : 1 (ERVKN)
{ಕಟ್ಟಳೆಗಳನ್ನು ಅನುಸರಿಸಿದವರ ಆಶೀರ್ವಾದ} [PS] “ನಾನು ಹೇಳಿದಂಥ ಎಲ್ಲಾ ಧರ್ಮಶಾಸ್ತ್ರವನ್ನು ಅನುಸರಿಸಿ ಅದಕ್ಕೆ ವಿಧೇಯರಾದರೆ ನಿಮ್ಮ ದೇವರಾದ ಯೆಹೋವನು ಪ್ರಪಂಚದ ಎಲ್ಲಾ ದೇಶಗಳಿಗಿಂತ ನಿಮ್ಮ ದೇಶವನ್ನು ಅತೀ ಉನ್ನತಸ್ಥಾನದಲ್ಲಿರುವ ದೇಶವನ್ನಾಗಿ ಮಾಡುವನು.
ಧರ್ಮೋಪದೇಶಕಾಂಡ 28 : 2 (ERVKN)
ನೀವು ದೇವರಿಗೆ ವಿಧೇಯರಾದರೆ ಈ ಎಲ್ಲಾ ಆಶೀರ್ವಾದಗಳು ನಿಮ್ಮದಾಗುವವು.
ಧರ್ಮೋಪದೇಶಕಾಂಡ 28 : 3 (ERVKN)
“ಯೆಹೋವನು ನಿಮ್ಮನ್ನು ಹೊಲಗಳಲ್ಲಿಯೂ [QBR2] ಪಟ್ಟಣಗಳಲ್ಲಿಯೂ ಆಶೀರ್ವದಿಸುವನು. [QBR]
ಧರ್ಮೋಪದೇಶಕಾಂಡ 28 : 4 (ERVKN)
ಯೆಹೋವನು ನಿಮ್ಮನ್ನು ಆಶೀರ್ವದಿಸಿ [QBR2] ನಿಮಗೆ ಅನೇಕ ಮಕ್ಕಳನ್ನು ಅನುಗ್ರಹಿಸುವನು. [QBR] ನಿಮ್ಮ ಹೊಲಗಳನ್ನು ಆಶೀರ್ವದಿಸಿ [QBR2] ಒಳ್ಳೆಯ ಬೆಳೆಯನ್ನು ಅನುಗ್ರಹಿಸುವನು. [QBR] ನಿಮ್ಮ ಪಶುಪ್ರಾಣಿಗಳನ್ನು ಆಶೀರ್ವದಿಸಿ [QBR2] ಅವು ಹೆಚ್ಚು ಮರಿಗಳನ್ನು ಈಯುವಂತೆ ಮಾಡುವನು. [QBR2] ಆತನು ನಿಮ್ಮ ಎಲ್ಲಾ ದನಕರು, ಕುರಿಮರಿಗಳನ್ನು ಆಶೀರ್ವದಿಸುವನು. [QBR]
ಧರ್ಮೋಪದೇಶಕಾಂಡ 28 : 5 (ERVKN)
ಯೆಹೋವನು ನಿಮ್ಮ ಪುಟ್ಟಿಗಳನ್ನೂ ಪಾತ್ರೆಗಳನ್ನೂ ಆಶೀರ್ವದಿಸಿ [QBR2] ಅವು ಯಾವಾಗಲೂ ಆಹಾರಪದಾರ್ಥಗಳಿಂದ ತುಂಬಿರುವಂತೆ ಮಾಡುವನು. [QBR]
ಧರ್ಮೋಪದೇಶಕಾಂಡ 28 : 6 (ERVKN)
ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ [QBR2] ಸಫಲ ಹೊಂದುವಂತೆ ಆಶೀರ್ವದಿಸುವನು. [PS]
ಧರ್ಮೋಪದೇಶಕಾಂಡ 28 : 7 (ERVKN)
“ವೈರಿಗಳು ನಿಮ್ಮೆದುರಾಗಿ ಯುದ್ಧಮಾಡಲು ಬಂದಾಗ ನಿಮಗೆ ಆತನು ಸಹಾಯ ಮಾಡುವನು. ವೈರಿಗಳು ಒಂದು ದಿಕ್ಕಿನಿಂದ ಬಂದರೆ ಏಳು ದಾರಿಯಲ್ಲಿ ಪಲಾಯನ ಮಾಡುವರು. [PE][PS]
ಧರ್ಮೋಪದೇಶಕಾಂಡ 28 : 8 (ERVKN)
“ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮ್ಮ ಕಣಜಗಳನ್ನು ಆಶೀರ್ವದಿಸುವನು. ನೀವು ಮಾಡುವ ಕಾರ್ಯಗಳನ್ನೆಲ್ಲಾ ಆಶೀರ್ವದಿಸುವನು. ನಿಮಗೆ ಕೊಡುವ ದೇಶದಲ್ಲಿ ನೀವು ವಾಸಿಸುವಾಗ ನಿಮ್ಮನ್ನು ಆಶೀರ್ವದಿಸುವನು.
ಧರ್ಮೋಪದೇಶಕಾಂಡ 28 : 9 (ERVKN)
ನೀವು ಯೆಹೋವನ ಆಜ್ಞೆಗಳಿಗೆ ವಿಧೇಯರಾದರೆ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ತನ್ನ ವಾಗ್ದಾನಕ್ಕನುಸಾರವಾಗಿ ವಿಶೇಷವಾದ ಸ್ವಕೀಯ ಪ್ರಜೆಯನ್ನಾಗಿ ಮಾಡುವನು.
ಧರ್ಮೋಪದೇಶಕಾಂಡ 28 : 10 (ERVKN)
ಆಗ ನಿಮ್ಮ ದೇಶದಲ್ಲಿ ವಾಸಿಸುವವರೆಲ್ಲರೂ ನೀವು ದೇವರ ಹೆಸರಿನಿಂದ ಕರೆಯಲ್ಪಟ್ಟವರೆಂಬುದನ್ನು ನೋಡುವಾಗ ನಿಮಗೆ ಭಯಪಡುವರು. [PE][PS]
ಧರ್ಮೋಪದೇಶಕಾಂಡ 28 : 11 (ERVKN)
“ನಿಮ್ಮ ದೇವರಾದ ಯೆಹೋವನು ನಿಮಗೆ ಒಳ್ಳೆಯ ವಸ್ತುಗಳನ್ನು ಕೊಡುವನು; ನಿಮಗೆ ಹೆಚ್ಚು ಮಕ್ಕಳನ್ನು ಅನುಗ್ರಹಿಸುವನು. ನಿಮ್ಮ ಪಶುಗಳು ಹೆಚ್ಚು ಮರಿಗಳನ್ನು ಈಯುವಂತೆ ಮಾಡುವನು. ಯೆಹೋವನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶದಲ್ಲಿ ನಿಮ್ಮ ಹೊಲವು ಒಳ್ಳೆಯ ಬೆಳೆಗಳನ್ನು ಫಲಿಸುತ್ತದೆ.
ಧರ್ಮೋಪದೇಶಕಾಂಡ 28 : 12 (ERVKN)
ಯೆಹೋವನು ತನ್ನ ಆಶೀರ್ವಾದಗಳೆಂಬ ಭಂಡಾರವನ್ನೇ ನಿಮಗೆ ತೆರೆಯುವನು. ಕಾಲಕ್ಕೆ ತಕ್ಕಹಾಗೆ ಮಳೆ ಸುರಿಯುವಂತೆ ಮಾಡುವನು; ನಿಮ್ಮ ಕಾರ್ಯವನ್ನೆಲ್ಲಾ ಸಫಲ ಮಾಡುವನು. ಇತರ ದೇಶಗಳಿಗೆ ಸಾಲ ಕೊಡಲು ನಿಮ್ಮಲ್ಲಿ ಹಣವಿರುವುದು; ಬೇರೆಯವರಿಂದ ಸಾಲ ತೆಗೆದುಕೊಳ್ಳುವ ಅವಶ್ಯಕತೆ ನಿಮಗೆ ಬಾರದು.
ಧರ್ಮೋಪದೇಶಕಾಂಡ 28 : 13 (ERVKN)
ಯೆಹೋವನು ನಿಮ್ಮನ್ನು ತಲೆಯನ್ನಾಗಿ ಮಾಡಲು ಬಯಸುತ್ತಾನೆಯೇ ಹೊರತು ಬಾಲವನ್ನಾಗಿಯಲ್ಲ. ನೀವು ಮೇಲಿನ ಅಂತಸ್ತಿನಲ್ಲಿರುವಿರಿ, ಕೆಳಗಿನದರಲ್ಲಿ ಅಲ್ಲ. ನೀವು ಯೆಹೋವನ ಆಜ್ಞೆಯನ್ನು ಪಾಲಿಸಿದಾಗ ನಿಮಗೆ ಹೀಗೆ ಆಗುವುದು.
ಧರ್ಮೋಪದೇಶಕಾಂಡ 28 : 14 (ERVKN)
ನಾನು ಈ ಹೊತ್ತು ಬೋಧಿಸುವ ಯಾವುದನ್ನೂ ನೀವು ಉಲ್ಲಂಘಿಸಬಾರದು. ಇತರ ದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಪೂಜಿಸಬಾರದು. [PS]
ಧರ್ಮೋಪದೇಶಕಾಂಡ 28 : 15 (ERVKN)
{ಕಟ್ಟಳೆಗಳನ್ನು ಅನುಸರಿಸದಿದ್ದಲ್ಲಿ ಶಾಪ} [PS] “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಆಜ್ಞೆ, ಕಟ್ಟಳೆಗಳಿಗೆ ನೀವು ವಿಧೇಯರಾಗದಿದ್ದರೆ ಈ ಕೆಟ್ಟ ಸಂಗತಿಗಳು ನಿಮಗೆ ತಟ್ಟುವವು:
ಧರ್ಮೋಪದೇಶಕಾಂಡ 28 : 16 (ERVKN)
“ನಿಮ್ಮ ಹೊಲದಲ್ಲಿಯೂ ನೀವು ವಾಸಿಸುವ ಪಟ್ಟಣದಲ್ಲಿಯೂ [QBR2] ಯೆಹೋವನು ನಿಮ್ಮನ್ನು ಶಪಿಸುವನು. [QBR]
ಧರ್ಮೋಪದೇಶಕಾಂಡ 28 : 17 (ERVKN)
ನಿಮ್ಮ ಪುಟ್ಟಿಗಳನ್ನೂ ಪಾತ್ರೆಗಳನ್ನೂ [QBR2] ಆಹಾರವಿಲ್ಲದಂತೆ ಬರಿದಾಗಿ ಮಾಡುವನು. [QBR]
ಧರ್ಮೋಪದೇಶಕಾಂಡ 28 : 18 (ERVKN)
ನಿಮಗೆ ಹೆಚ್ಚು ಮಕ್ಕಳಿಲ್ಲದಂತೆ ಮಾಡುವನು. [QBR] ನಿಮ್ಮ ಹೊಲಗಳನ್ನು ಶಪಿಸಿ [QBR2] ನಿಮಗೆ ಹೆಚ್ಚು ಬೆಳೆಯಾಗದಂತೆ ಮಾಡುವನು. [QBR] ನಿಮ್ಮ ಪಶುಪ್ರಾಣಿಗಳನ್ನು ಶಪಿಸಿ [QBR2] ಅವುಗಳು ಮರಿಗಳನ್ನು ಈಯದಂತೆ ಮಾಡುವನು. [QBR2] ಆತನು ನಿಮ್ಮ ಎಲ್ಲಾ ಮರಿಗಳನ್ನೂ ಕರುಗಳನ್ನೂ ಶಪಿಸುವನು. [QBR]
ಧರ್ಮೋಪದೇಶಕಾಂಡ 28 : 19 (ERVKN)
ನೀವು ಎಲ್ಲಾ ಸಮಯಗಳಲ್ಲಿ ಮಾಡುವ ಎಲ್ಲಾ ಕೆಲಸಕಾರ್ಯಗಳನ್ನು [QBR2] ನಿಮ್ಮ ದೇವರಾದ ಯೆಹೋವನು ಶಪಿಸುವನು. [PS]
ಧರ್ಮೋಪದೇಶಕಾಂಡ 28 : 20 (ERVKN)
“ನೀವು ಕೆಟ್ಟಕಾರ್ಯಗಳನ್ನು ಮಾಡಿ ಯೆಹೋವನಿಂದ ದೂರವಾಗಿ ಹೋದರೆ ನಿಮಗೆ ಕೆಟ್ಟಸಂಗತಿಗಳು ಉಂಟಾಗುವವು. ನಿಮಗೆ ಉಪದ್ರವಗಳೂ ಮನಸ್ಸಿಗೆ ಅಸಮಾಧಾನವೂ ಉಂಟಾಗುವವು. ನೀವು ಸಂಪೂರ್ಣವಾಗಿ ನಾಶವಾಗುವ ತನಕ ಈ ಸಂಗತಿಗಳು ನಿಮ್ಮನ್ನು ಬಾಧಿಸುವವು. ನೀವು ಆತನನ್ನು ತೊರೆದದ್ದರಿಂದ ನಿಮಗೆ ಹಾಗೆ ಮಾಡುವನು.
ಧರ್ಮೋಪದೇಶಕಾಂಡ 28 : 21 (ERVKN)
ನೀವು ಸ್ವಾಸ್ತ್ಯವಾಗಿ ಹೊಂದಲಿರುವ ದೇಶದಿಂದ ನೀವು ನಾಶವಾಗುವವರೆಗೆ, ನಿಮ್ಮ ದೇವರಾದ ಯೆಹೋವನು ನಿಮಗೆ ಭಯಂಕರವಾದ ರೋಗಗಳನ್ನು ಬರಮಾಡುವನು.
ಧರ್ಮೋಪದೇಶಕಾಂಡ 28 : 22 (ERVKN)
ಜ್ವರ, ಬಾಧೆ, ದೇಹ ಊದಿಕೊಳ್ಳುವಿಕೆ ಇವುಗಳಿಂದ ನಿಮ್ಮನ್ನು ಶಿಕ್ಷಿಸುವನು. ನಿಮ್ಮ ದೇಶದೊಳಗೆ ಸಹಿಸಲಾರದ ಉಷ್ಣವನ್ನು ಕಳುಹಿಸಿ ಮಳೆಬೀಳದಂತೆ ಮಾಡುವನು. ನಿಮ್ಮ ಬೆಳೆ ರೋಗದಿಂದಲೂ ಬಿಸಿಲಿನಿಂದಲೂ ನಾಶವಾಗುವುದು. ಇವೆಲ್ಲಾ ನಿಮಗೆ ಉಂಟಾಗಿ ನೀವು ನಾಶವಾಗುವ ತನಕ ಮುಂದುವರಿಯುವವು.
ಧರ್ಮೋಪದೇಶಕಾಂಡ 28 : 23 (ERVKN)
ಆಕಾಶವು ಮೋಡಗಳೇ ಇರದ ಕಾದ ಹಿತ್ತಾಳೆಯಂತಿರುವುದು. ಕಾಲಿನ ಅಡಿಯಲ್ಲಿರುವ ನೆಲವು ಕಬ್ಬಿಣದಂತೆ ಗಟ್ಟಿಯಾಗಿರುವುದು.
ಧರ್ಮೋಪದೇಶಕಾಂಡ 28 : 24 (ERVKN)
ಯೆಹೋವನು ನಿಮಗೆ ಮಳೆಯನ್ನು ಬೀಳಮಾಡುವುದಿಲ್ಲ; ಕೇವಲ ಧೂಳು ಮತ್ತು ಮರಳು ಆಕಾಶದಿಂದ ಬೀಳುವುದು. ನೀವು ನಾಶವಾಗುವವರೆಗೆ ಅದು ಮೇಲಿನಿಂದ ಬೀಳುತ್ತಿರುವುದು. [PE][PS]
ಧರ್ಮೋಪದೇಶಕಾಂಡ 28 : 25 (ERVKN)
“ನಿಮ್ಮ ವೈರಿಗಳು ಬಂದು ನಿಮ್ಮನ್ನು ಸೋಲಿಸಿಬಿಡುವಂತೆ ಮಾಡುವನು. ನೀವು ಒಂದು ದಾರಿಯಿಂದ ನಿಮ್ಮ ವೈರಿಗೆ ಎದುರಾಗಿ ಯುದ್ಧಕ್ಕೆ ಇಳಿದರೆ ಏಳುದಾರಿಗಳಿಂದ ರಣರಂಗದಿಂದ ಪಲಾಯನ ಮಾಡುವಿರಿ. ನಿಮಗೆ ಸಂಭವಿಸುವ ಬಾಧೆಗಳನ್ನು ನೋಡಿ ಇತರ ಜನಾಂಗದವರು ಭಯಪಡುವರು.
ಧರ್ಮೋಪದೇಶಕಾಂಡ 28 : 26 (ERVKN)
ಕಾಡುಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ನಿಮ್ಮ ಹೆಣಗಳು ಆಹಾರವಾಗುವವು. ಅವುಗಳನ್ನು ಓಡಿಸಲು ಯಾರೂ ಇರುವುದಿಲ್ಲ. [PE][PS]
ಧರ್ಮೋಪದೇಶಕಾಂಡ 28 : 27 (ERVKN)
“ಈಜಿಪ್ಟಿನವರಿಗೆ ಕಳುಹಿಸಿದಂತೆ ನಿಮಗೂ ಮೈಯಲ್ಲಿ ಬಾಧಿಸುವ ಹುಣ್ಣುಗಳನ್ನು ಕಳುಹಿಸುವನು. ದೇಹದಲ್ಲಿ ಗಡ್ಡೆಗಳುಂಟಾಗುವವು. ಕೀವುಸೋರುವ ಹುಣ್ಣುಗಳು, ಗುಣವಾಗದ ತುರಿಸುವ ಕಜ್ಜಿಗಳು ಉಂಟಾಗುವವು.
ಧರ್ಮೋಪದೇಶಕಾಂಡ 28 : 28 (ERVKN)
ಯೆಹೋವನು ನಿಮ್ಮನ್ನು ದಿಗ್ಬ್ರಾಂತರನ್ನಾಗಿ ಮಾಡುವನು; ನಿಮ್ಮನ್ನು ಕುರುಡರನ್ನಾಗಿ ಮಾಡಿ ಗಲಿಬಿಲಿ ಮಾಡುವನು.
ಧರ್ಮೋಪದೇಶಕಾಂಡ 28 : 29 (ERVKN)
ಹಗಲಿನಲ್ಲೂ ಕುರುಡರಂತೆ ನೀವು ತಡವರಿಸುವಿರಿ. ನೀವು ಮಾಡುವ ಕಾರ್ಯವೆಲ್ಲವೂ ನಿಷ್ಫಲವಾಗುವವು. ಜನರು ನಿಮ್ಮನ್ನು ಬಾಧಿಸಿ ನಿಮ್ಮಲ್ಲಿರುವದನ್ನೆಲ್ಲಾ ದೋಚಿಕೊಂಡು ಹೋಗುವರು. ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ. [PE][PS]
ಧರ್ಮೋಪದೇಶಕಾಂಡ 28 : 30 (ERVKN)
“ನೀವು ಮದುವೆಯಾಗಲು ಕನ್ನಿಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವಿರಿ. ಆದರೆ ಬೇರೊಬ್ಬನು ಆಕೆಯನ್ನು ಕೂಡುವನು. ನೀವೊಂದು ಮನೆಯನ್ನು ಕಟ್ಟುವಿರಿ. ಆದರೆ ಬೇರೊಬ್ಬನು ಅದರಲ್ಲಿ ವಾಸಿಸುವನು. ನೀವು ದ್ರಾಕ್ಷಾತೋಟ ಮಾಡಿ ದ್ರಾಕ್ಷಾಲತೆಗಳನ್ನು ನೆಡುವಿರಿ. ಆದರೆ ಅದರ ಫಲಗಳನ್ನು ನೀವು ಕೂಡಿಸುವುದಿಲ್ಲ.
ಧರ್ಮೋಪದೇಶಕಾಂಡ 28 : 31 (ERVKN)
ನಿಮ್ಮ ದನಗಳನ್ನು ನಿಮ್ಮೆದುರಿನಲ್ಲಿ ಜನರು ಕೊಯ್ಯುವರು. ಆದರೆ ನೀವು ಅದರ ಮಾಂಸವನ್ನು ತಿನ್ನುವುದಿಲ್ಲ. ನಿಮ್ಮ ಕತ್ತೆಗಳನ್ನು ಜನರು ನಿಮ್ಮಿಂದ ತೆಗೆದುಕೊಂಡು ಹೋಗುವರು. ಆದರೆ ಅವುಗಳನ್ನು ಹಿಂದಕ್ಕೆ ಕೊಡರು. ನಿಮ್ಮ ಕುರಿಗಳನ್ನು ವೈರಿಗಳು ಕೊಂಡೊಯ್ಯುವರು. ನಿಮ್ಮನ್ನು ರಕ್ಷಿಸಲು ಯಾರೂ ಬರಲಾರರು. [PE][PS]
ಧರ್ಮೋಪದೇಶಕಾಂಡ 28 : 32 (ERVKN)
“ನಿಮ್ಮ ಗಂಡುಹೆಣ್ಣು ಮಕ್ಕಳನ್ನು ಬೇರೆಯವರು ಎತ್ತಿಕೊಂಡು ಹೋಗುವರು. ನೀವು ಹಗಲುರಾತ್ರಿ ನಿಮ್ಮ ಮಕ್ಕಳಿಗಾಗಿ ಹುಡುಕಾಡುವಿರಿ. ಹುಡುಕಾಡುತ್ತಾ ನಿಮ್ಮ ಕಣ್ಣುಗಳು ಕಂಗೆಡುವವು; ಆದರೆ ಅವರು ನಿಮಗೆ ದೊರಕುವುದಿಲ್ಲ. ಯೆಹೋವನು ನಿಮಗೆ ಸಹಾಯ ಮಾಡುವುದಿಲ್ಲ. [PE][PS]
ಧರ್ಮೋಪದೇಶಕಾಂಡ 28 : 33 (ERVKN)
“ನೀವು ಅರಿಯದಿರುವ ದೇಶದವರು ಬಂದು ನಿಮ್ಮ ಪೈರನ್ನು ಕೊಯ್ದುಕೊಂಡು ಹೋಗುವರು; ನೀವು ದುಡಿದು ಸಂಪಾದಿಸಿದವುಗಳನ್ನು ಎತ್ತಿಕೊಂಡು ಹೋಗುವರು. ಜನರು ನಿಮ್ಮನ್ನು ಕುಗ್ಗಿಸಿ ಬಲಹೀನರನ್ನಾಗಿ ಮಾಡುವರು.
ಧರ್ಮೋಪದೇಶಕಾಂಡ 28 : 34 (ERVKN)
ನೀವು ನೋಡುವ ಸಂಗತಿಗಳು ನಿಮ್ಮನ್ನು ಹುಚ್ಚರನ್ನಾಗಿ ಮಾಡುತ್ತವೆ.
ಧರ್ಮೋಪದೇಶಕಾಂಡ 28 : 35 (ERVKN)
ಯೆಹೋವನು ನಿಮ್ಮನ್ನು ಉರಿಯುವ ಹುಣ್ಣುಗಳಿಂದ ಬಾಧಿಸುವನು; ಅವುಗಳು ಗುಣವಾಗುವುದಿಲ್ಲ. ಈ ಹುಣ್ಣುಗಳು ನಿಮ್ಮ ದೇಹದ ಎಲ್ಲಾ ಭಾಗಗಳಲ್ಲಿ ಅಂದರೆ ನಿಮ್ಮ ಪಾದದಿಂದ ಹಿಡಿದು ನಡುನೆತ್ತಿಯ ತನಕ ಇರುವವು. [PE][PS]
ಧರ್ಮೋಪದೇಶಕಾಂಡ 28 : 36 (ERVKN)
“ಯೆಹೋವನು ನಿಮ್ಮನ್ನೂ ನಿಮ್ಮ ಅರಸನನ್ನೂ ನೀವು ಅರಿಯದ ದೇಶಕ್ಕೆ ಅಟ್ಟಿಬಿಡುವನು. ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಆ ದೇಶವನ್ನು ಎಂದೂ ನೋಡಲಿಲ್ಲ. ಅಲ್ಲಿ ಮರ, ಕಲ್ಲುಗಳಿಂದ ಮಾಡಿದ ಸುಳ್ಳುದೇವರನ್ನು ಆರಾಧಿಸುವಿರಿ.
ಧರ್ಮೋಪದೇಶಕಾಂಡ 28 : 37 (ERVKN)
ನೀವು ಯಾವ ದೇಶಕ್ಕೆ ಕಳುಹಿಸಲ್ಪಡುವಿರೋ ಆ ದೇಶದವರು ನಿಮ್ಮ ದುರವಸ್ಥೆಯನ್ನು ನೋಡಿ ನಗುವರು; ಕೆಟ್ಟಮಾತುಗಳನ್ನಾಡುವರು. [PS]
ಧರ್ಮೋಪದೇಶಕಾಂಡ 28 : 38 (ERVKN)
{ಸೋಲು} [PS] “ಹೊಲದಲ್ಲಿ ಧಾನ್ಯ ಯಥೇಚ್ಛವಾಗಿ ಬೆಳೆದರೂ ನೀವು ಮನೆಯೊಳಗೆ ತರುವುದು ಸ್ವಲ್ಪ ಮಾತ್ರ. ಮಿಡತೆಯು ನಿಮ್ಮ ಬೆಳೆಯನ್ನು ತಿಂದು ಬಿಡುವದು.
ಧರ್ಮೋಪದೇಶಕಾಂಡ 28 : 39 (ERVKN)
ನೀವು ದ್ರಾಕ್ಷಾತೋಟ ಮಾಡಿ ಪ್ರಯಾಸಪಟ್ಟು ಅದರಲ್ಲಿ ಕೆಲಸ ಮಾಡುವಿರಿ. ಆದರೆ ಅದರ ಫಲವನ್ನು ಹುಳಗಳು ತಿಂದುಬಿಡುವುದರಿಂದ ನೀವು ದ್ರಾಕ್ಷಿಯನ್ನು ಸಂಗ್ರಹಿಸುವುದಿಲ್ಲ; ದ್ರಾಕ್ಷಾರಸವನ್ನು ಕುಡಿಯುವುದಿಲ್ಲ.
ಧರ್ಮೋಪದೇಶಕಾಂಡ 28 : 40 (ERVKN)
ನಿಮ್ಮ ಭೂಮಿಯಲ್ಲಿ ಆಲಿವ್ ಮರಗಳು ತುಂಬಿದ್ದರೂ ಎಣ್ಣೆಯ ಬರದಲ್ಲಿ ಸಂಕಟಪಡುವಿರಿ. ಯಾಕೆಂದರೆ ಆಲಿವ್ ಕಾಯಿಗಳು ಭೂಮಿಯ ಮೇಲೆ ಉದುರಿಬಿದ್ದು ಹಾಳಾಗುವವು.
ಧರ್ಮೋಪದೇಶಕಾಂಡ 28 : 41 (ERVKN)
ನಿಮಗೆ ಗಂಡುಹೆಣ್ಣು ಮಕ್ಕಳು ಹುಟ್ಟುವರು. ಆದರೆ ಅವರು ನಿಮ್ಮೊಂದಿಗೆ ಇರುವುದಿಲ್ಲ. ಅವರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು.
ಧರ್ಮೋಪದೇಶಕಾಂಡ 28 : 42 (ERVKN)
ನಿಮ್ಮ ತೋಟದ ಎಲ್ಲಾ ಮರಗಳನ್ನೂ ಹೊಲದ ಪೈರುಗಳನ್ನೂ ಮಿಡತೆಗಳು ತಿಂದುಬಿಡುವವು.
ಧರ್ಮೋಪದೇಶಕಾಂಡ 28 : 43 (ERVKN)
ನಿಮ್ಮ ಮಧ್ಯದಲ್ಲಿ ವಾಸಿಸುವ ಅನ್ಯರು ಬಲಿಷ್ಠರಾಗುವರು. ನೀವಾದರೋ ಬಲಹೀನರಾಗುವಿರಿ.
ಧರ್ಮೋಪದೇಶಕಾಂಡ 28 : 44 (ERVKN)
ನಿಮಗೆ ಸಾಲ ಕೊಡಲು ವಿದೇಶಿಯರಿಗೆ ಹಣವಿರುವುದು. ಆದರೆ ಅವರಿಗೆ ಸಾಲ ಕೊಡಲು ನಿಮ್ಮಲ್ಲಿ ಹಣವಿರುವುದಿಲ್ಲ. ತಲೆಯು ದೇಹವನ್ನು ಹೇಗೆ ಹಿಡಿತದಲ್ಲಿಟ್ಟುಕೊಂಡಿರುತ್ತದೋ ಹಾಗೆಯೇ ಅವರು ನಿಮ್ಮನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವರು. ನೀವು ಅವರಿಗೆ ಬಾಲದಂತಿರುವಿರಿ. [PE][PS]
ಧರ್ಮೋಪದೇಶಕಾಂಡ 28 : 45 (ERVKN)
“ನಿಮ್ಮ ದೇವರಾದ ಯೆಹೋವನು ಹೇಳಿದ ಸಂಗತಿಗಳಿಗೆ ನೀವು ಕಿವಿಗೊಡದೆ ಹೋದದ್ದರಿಂದ, ಆತನು ಕೊಟ್ಟ ಆಜ್ಞೆಗಳಿಗೂ ನಿಯಮಗಳಿಗೂ ನೀವು ವಿಧೇಯರಾಗದಿದ್ದ ಕಾರಣ ಈ ಶಾಪಗಳೆಲ್ಲಾ ನಿಮ್ಮ ಮೇಲೆ ಬರುತ್ತವೆ. ನೀವು ನಾಶವಾಗುವವರೆಗೂ ಅವು ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತವೆ.
ಧರ್ಮೋಪದೇಶಕಾಂಡ 28 : 46 (ERVKN)
ನೀವೂ ನಿಮ್ಮ ಸಂತತಿಯವರೂ ದೇವರ ಶಾಶ್ವತವಾದ ತೀರ್ಪನ್ನು ಹೊಂದಿದ್ದೀರೆಂಬುದಕ್ಕೆ ಬೇರೆಯವರಿಗೆ ಈ ಶಾಪಗಳೇ ಸೂಚನೆಯಾಗಿಯೂ ರುಜುವಾತಾಗಿಯೂ ಇರುತ್ತವೆ. [PE][PS]
ಧರ್ಮೋಪದೇಶಕಾಂಡ 28 : 47 (ERVKN)
“ನಿಮ್ಮದೇವರಾದ ಯೆಹೋವನು ನಿಮಗೆ ಹೆಚ್ಚಾದ ಆಶೀರ್ವಾದವನ್ನು ಕೊಟ್ಟನು. ಆದರೆ ನೀವು ಸಂತೋಷ ಮತ್ತು ಉಪಕಾರದ ಹೃದಯದಿಂದ ಆತನ ಸೇವೆಮಾಡಲಿಲ್ಲ.
ಧರ್ಮೋಪದೇಶಕಾಂಡ 28 : 48 (ERVKN)
ಆದ್ದರಿಂದ ಆತನು ನಿಮ್ಮ ವೈರಿಗಳನ್ನು ಕಳುಹಿಸಿ ಅವರ ಸೇವೆ ನೀವು ಮಾಡುವಂತೆ ಮಾಡುವನು. ನೀವು ಹಸಿವು ಬಾಯಾರಿಕೆಗಳಿಂದ ಬಳಲುವಿರಿ; ಬಟ್ಟೆಯಿಲ್ಲದೆ ಬಡವರಾಗಿ ಜೀವಿಸುವಿರಿ. ನಿಮ್ಮ ಯೆಹೋವನು ನಿಮ್ಮ ಮೇಲೆ ಭಾರವನ್ನು ಹೊರಿಸುವನು. ಆ ಭಾರವನ್ನು ನಿಮ್ಮಿಂದ ತೆಗೆಯಲಾಗುವುದಿಲ್ಲ; ನೀವು ನಾಶವಾಗುವಿರಿ. [PS]
ಧರ್ಮೋಪದೇಶಕಾಂಡ 28 : 49 (ERVKN)
{ವೈರಿಜನಾಂಗದ ಶಾಪ} [PS] “ಬಹಳ ದೂರದಿಂದ ಒಂದು ಜನಾಂಗವು ನಿಮ್ಮೊಂದಿಗೆ ಯುದ್ಧಮಾಡಲು ಬರುವಂತೆ ಯೆಹೋವನು ಮಾಡುವನು. ನೀವು ಅವರ ಭಾಷೆಯನ್ನು ಅರಿಯದಿರುವಿರಿ. ಆಕಾಶದಿಂದ ಹದ್ದು ಹಾರಿಬರುವಂತೆ ಅತೀ ವೇಗವಾಗಿ ಅವರು ನಿಮ್ಮ ಮೇಲೆ ಬೀಳುವರು.
ಧರ್ಮೋಪದೇಶಕಾಂಡ 28 : 50 (ERVKN)
ಅವರು ಮಹಾಕ್ರೂರಿಗಳು. ಅವರು ನಿಮ್ಮಲ್ಲಿರುವ ಮುದುಕರಿಗೆ ಅಥವಾ ಎಳೆಗೂಸುಗಳಿಗೆ ಕರುಣೆ ತೋರಿಸರು.
ಧರ್ಮೋಪದೇಶಕಾಂಡ 28 : 51 (ERVKN)
ಅವರು ನಿಮ್ಮ ಪಶುಗಳನ್ನು ಅಟ್ಟಿಸಿಕೊಂಡು ಹೋಗುವರು; ನೀವು ಬೆಳೆದ ಬೆಳೆಯನ್ನು ಕೊಂಡೊಯ್ಯುವರು. ನಿಮ್ಮನ್ನು ನಾಶಪಡಿಸುವ ತನಕ ಅವರು ಪ್ರತಿಯೊಂದನ್ನೂ ತೆಗೆದುಕೊಂಡು ಹೋಗುವರು. ಅವರು ನಿಮಗೆ ದವಸಧಾನ್ಯವನ್ನಾಗಲಿ ದ್ರಾಕ್ಷಾರಸವನ್ನಾಗಲಿ ಎಣ್ಣೆಯನ್ನಾಗಲಿ ಹಸುಗಳನ್ನಾಗಲಿ ಕುರಿಗಳನ್ನಾಗಲಿ ಮೇಕೆಗಳನ್ನಾಗಲಿ ಬಿಟ್ಟುಹೋಗುವುದಿಲ್ಲ. ಅವರು ನಿಮ್ಮನ್ನು ನಾಶಪಡಿಸುವ ತನಕ ಪ್ರತಿಯೊಂದನ್ನೂ ತೆಗೆದುಕೊಂಡು ಹೋಗುವರು. [PE][PS]
ಧರ್ಮೋಪದೇಶಕಾಂಡ 28 : 52 (ERVKN)
“ಆ ವೈರಿಗಳು ನಿಮ್ಮ ಪಟ್ಟಣಗಳನ್ನೆಲ್ಲಾ ಮುತ್ತಿ ವಶಪಡಿಸಿಕೊಳ್ಳುವರು. ಆ ಪಟ್ಟಣಗಳಿಗೆ ಎತ್ತರದ ಪೌಳಿಗೋಡೆಗಳಿವೆ. ಆದ್ದರಿಂದ ನಮಗೆ ಭಯವಿಲ್ಲವೆಂದು ನೀವು ಭರವಸೆಯಿಂದಿರುವಿರಿ. ಆದರೆ ಅವರು ಪೌಳಿಗೋಡೆಗಳನ್ನು ಕೆಡವಿ ನೆಲಸಮ ಮಾಡುವರು. ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲೆಲ್ಲಾ ತೊಂದರೆ ಮಾಡುವರು.
ಧರ್ಮೋಪದೇಶಕಾಂಡ 28 : 53 (ERVKN)
ವೈರಿಗಳು ನಿಮ್ಮ ಪಟ್ಟಣವನ್ನು ಮುತ್ತಿಗೆ ಹಾಕಿದಾಗ ನೀವು ಸಂಕಟ ಅನುಭವಿಸುವಿರಿ. ಆಗ ನೀವು ಊಟಕ್ಕೆ ಇಲ್ಲದೆ ತೊಂದರೆಗೊಳಗಾಗುವಿರಿ; ಹಸಿವು ತಾಳಲಾರದೆ ನಿಮ್ಮ ಮಕ್ಕಳನ್ನೇ ತಿನ್ನುವಿರಿ. [PE][PS]
ಧರ್ಮೋಪದೇಶಕಾಂಡ 28 : 54 (ERVKN)
“ನಿಮ್ಮಲ್ಲಿರುವ ಮೃದುವಾದ ಮತ್ತು ಕನಿಕರವುಳ್ಳ ಮನುಷ್ಯನೂ ಬೇರೆಯವರಿಗೆ ಕ್ರೂರಿಯಾಗುವನು; ತನ್ನನ್ನು ಬಹಳವಾಗಿ ಪ್ರೀತಿಸುವ ಹೆಂಡತಿಗೂ ಅವನು ಕ್ರೂರಿಯಾಗುವನು; ಇನ್ನೂ ಜೀವಂತವಾಗಿರುವ ತನ್ನ ಮಕ್ಕಳಿಗೂ ಅವನು ಕ್ರೂರಿಯಾಗುವನು.
ಧರ್ಮೋಪದೇಶಕಾಂಡ 28 : 55 (ERVKN)
ಅವನಿಗೆ ಊಟಕ್ಕೇನೂ ಇಲ್ಲದಿರುವುದರಿಂದ ಸ್ವಂತ ಮಕ್ಕಳನ್ನೇ ತಿನ್ನುವನು. ಅವರನ್ನು ಇತರರೊಂದಿಗೆ ಹಂಚಿಕೊಳ್ಳದೆ, ತನ್ನ ಸ್ವಂತ ಕುಟುಂಬದವರೊಂದಿಗೆ ಹಂಚಿಕೊಳ್ಳದೆ ತಾನೊಬ್ಬನೇ ತಿನ್ನುವನು. ನಿಮ್ಮ ವೈರಿಗಳು ಬಂದು ನಿಮ್ಮ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ನಿಮಗೆ ಇವೆಲ್ಲಾ ಸಂಭವಿಸುತ್ತವೆ. [PE][PS]
ಧರ್ಮೋಪದೇಶಕಾಂಡ 28 : 56 (ERVKN)
“ನಿಮ್ಮಲ್ಲಿರುವ ಅತ್ಯಂತ ಮೃದುವಾದ ಮತ್ತು ಕನಿಕರವುಳ್ಳ ಸ್ತ್ರೀಯೂ ಕ್ರೂರಿಯಾಗುವಳು. ನೆಲದ ಮೇಲೆ ಬರಿಗಾಲಿನಲ್ಲಿ ಎಂದೂ ನಡೆಯದಷ್ಟು ಮೃದುವೂ ಕೋಮಲೆಯೂ ಆಗಿದ್ದ ಆಕೆ ತನ್ನನ್ನು ಬಹಳವಾಗಿ ಪ್ರೀತಿಸುವ ಗಂಡನಿಗೇ ಕ್ರೂರಿಯಾಗುವಳು; ಅವಳು ತನ್ನ ಸ್ವಂತ ಮಗನಿಗೂ ಮಗಳಿಗೂ ಕ್ರೂರಿಯಾಗುವಳು.
ಧರ್ಮೋಪದೇಶಕಾಂಡ 28 : 57 (ERVKN)
ಅವಳು ಅಡಗಿಕೊಂಡು ಮಗುವನ್ನು ಹೆರುವಳು. ಬಳಿಕ ಆ ಮಗುವನ್ನೂ ಅದರೊಡನೆ ಬರುವುದೆಲ್ಲವನ್ನೂ ಭಯಂಕರವಾದ ಹಸಿವೆಯಿಂದಾಗಿ ತಿಂದುಬಿಡುವಳು. ನಿಮ್ಮ ಶತ್ರುವು ಬಂದು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಸಂಕಟಕ್ಕೆ ಗುರಿ ಮಾಡಿದಾಗ ಈ ಕೆಟ್ಟ ಸಂಗತಿಗಳೆಲ್ಲಾ ನಿಮಗೆ ಸಂಭವಿಸುತ್ತವೆ. [PE][PS]
ಧರ್ಮೋಪದೇಶಕಾಂಡ 28 : 58 (ERVKN)
“ಈ ಪುಸ್ತಕದಲ್ಲಿ ಬರೆದಿರುವ ಎಲ್ಲಾ ಆಜ್ಞೆಗಳಿಗೂ ಉಪದೇಶಗಳಿಗೂ ನೀವು ವಿಧೇಯರಾಗಬೇಕು. ನಿಮ್ಮ ದೇವರಾದ ಯೆಹೋವನು ಅದ್ಭುತನೂ ಭಯಂಕರನೂ ಆಗಿರುವುದರಿಂದ ಆತನ ಹೆಸರನ್ನು ನೀವು ಗೌರವಿಸಬೇಕು.
ಧರ್ಮೋಪದೇಶಕಾಂಡ 28 : 59 (ERVKN)
ನಿಮಗೂ ನಿಮ್ಮ ಸಂತತಿಯವರಿಗೂ ಅನೇಕ ತೊಂದರೆಗಳನ್ನು ಕೊಡುವನು. ಆ ತೊಂದರೆಗಳು ಮತ್ತು ರೋಗಗಳು ಭಯಂಕರವಾಗಿವೆ.
ಧರ್ಮೋಪದೇಶಕಾಂಡ 28 : 60 (ERVKN)
ನೀವು ಈಜಿಪ್ಟಿನಲ್ಲಿರುವಾಗ ದೇವರು ಅವರಿಗೆ ಕಳುಹಿಸಿದ ವ್ಯಾಧಿಸಂಕಟಗಳನ್ನು ನೋಡಿ ಭಯಗ್ರಸ್ತರಾದಿರಿ. ಅಂಥ ಸಂಕಟಗಳು ನಿಮಗೆ ಬರುವವು.
ಧರ್ಮೋಪದೇಶಕಾಂಡ 28 : 61 (ERVKN)
ಈ ಪುಸ್ತಕದಲ್ಲಿ ಬರೆದಿಲ್ಲದ ಸಂಕಟಗಳೂ ರೋಗಗಳೂ ನಿಮಗೆ ಪ್ರಾಪ್ತಿಯಾಗುವವು. ನೀವು ನಾಶವಾಗುವ ತನಕ ಅವೆಲ್ಲಾ ನಿಮಗೆ ಬರುತ್ತವೆ.
ಧರ್ಮೋಪದೇಶಕಾಂಡ 28 : 62 (ERVKN)
ನೀವು ಆಕಾಶದ ನಕ್ಷತ್ರದಷ್ಟು ಅಸಂಖ್ಯಾತರಾಗಿದ್ದರೂ ನಿಮ್ಮಲ್ಲಿ ಕೆಲವರೇ ಉಳಿದುಕೊಳ್ಳುವರು. ಯಾಕೆಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಕಿವಿಗೊಡಲಿಲ್ಲ. [PE][PS]
ಧರ್ಮೋಪದೇಶಕಾಂಡ 28 : 63 (ERVKN)
“ಯೆಹೋವನು ನಿಮ್ಮ ಅಭಿವೃದ್ದಿಯಲ್ಲಿ ಸಂತೋಷಪಡುವಂತೆ ನಿಮ್ಮ ಅವನತಿಯಲ್ಲಿಯೂ ನಿಮ್ಮ ನಾಶನದಲ್ಲಿಯೂ ಸಂತೋಷಪಡುವನು. ನೀವು ಆ ದೇಶವನ್ನು ನಿಮ್ಮದನ್ನಾಗಿಸಿಕೊಳ್ಳಲು ಹೋಗುವಿರಿ. ಆದರೆ ಜನರು ನಿಮ್ಮನ್ನು ದೇಶದಿಂದ ಹೊರಡಿಸಿ ಅಟ್ಟಿಬಿಡುವರು.
ಧರ್ಮೋಪದೇಶಕಾಂಡ 28 : 64 (ERVKN)
ಯೆಹೋವನು ನಿಮ್ಮನ್ನು ಲೋಕದ ಎಲ್ಲಾ ದೇಶಗಳಿಗೆ ಚದರಿಸಿಬಿಡುವನು. ಆತನು ಪ್ರಪಂಚದ ಒಂದು ಕಡೆಯಿಂದ ಇನ್ನೊಂದು ಕಡೆಯ ತನಕ ನಿಮ್ಮನ್ನು ಚದರಿಸುವನು. ಅಲ್ಲಿ ನೀವು ಕಲ್ಲುಮರಗಳಿಂದ ಮಾಡಿದ ದೇವರುಗಳನ್ನು ಪೂಜಿಸುವಿರಿ. ಆ ಸುಳ್ಳುದೇವರುಗಳನ್ನು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಎಂದೂ ಪೂಜಿಸಿರಲಿಲ್ಲ. [PE][PS]
ಧರ್ಮೋಪದೇಶಕಾಂಡ 28 : 65 (ERVKN)
“ಆ ಜನಾಂಗದವರೊಂದಿಗೆ ಜೀವಿಸುವಾಗ ನಿಮಗೆ ಸಮಾಧಾನವಿರುವುದಿಲ್ಲ; ನಿಮಗೆ ವಿಶ್ರಾಂತಿ ಇರುವುದಿಲ್ಲ. ನಿಮ್ಮ ಯೆಹೋವನು ನಿಮಗೆ ಚಿಂತೆಬೇಸರಗಳನ್ನು ತಂದು ತುಂಬಿಸುವನು. ನಿಮ್ಮ ಕಣ್ಣುಗಳು ಆಯಾಸದಿಂದ ತುಂಬಿರುವವು; ನೀವು ಕಳವಳದಿಂದಿರುವಿರಿ.
ಧರ್ಮೋಪದೇಶಕಾಂಡ 28 : 66 (ERVKN)
ನೀವು ಹಗಲಿರುಳು ಭಯದಿಂದಿರುವಿರಿ ಮತ್ತು ಅಪಾಯದಲ್ಲಿ ಜೀವಿಸುವಿರಿ. ನಿಮ್ಮ ಜೀವಿತದ ಬಗ್ಗೆ ನಿಮಗೆಂದಿಗೂ ನಿಶ್ಚಯತ್ವವಿರುವುದಿಲ್ಲ.
ಧರ್ಮೋಪದೇಶಕಾಂಡ 28 : 67 (ERVKN)
ಮುಂಜಾನೆಯಲ್ಲಿ ನೀವು, ‘ಇದು ಸಾಯಂಕಾಲವಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ಸಾಯಂಕಾಲದಲ್ಲಿ, ‘ಇದು ಮುಂಜಾನೆಯಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ನಿಮ್ಮ ಹೃದಯದಲ್ಲಿರುವ ಭಯ ಮತ್ತು ನೀವು ಕಣ್ಣಾರೆ ಕಾಣುವ ಭಯಂಕರ ಸಂಗತಿಗಳೇ ಇದಕ್ಕೆ ಕಾರಣ.
ಧರ್ಮೋಪದೇಶಕಾಂಡ 28 : 68 (ERVKN)
ಯೆಹೋವನು ನಿಮ್ಮನ್ನು ಹಡಗುಗಳ ಮುಖಾಂತರ ಈಜಿಪ್ಟಿಗೆ ಕೊಂಡೊಯ್ಯುವನು. ನೀವು ಅಲ್ಲಿಗೆ ಹೋಗುವುದೇ ಇಲ್ಲವೆಂದು ನಾನು ಹೇಳಿದ್ದೆನು. ಆದರೆ ದೇವರು ನಿಮ್ಮನ್ನು ಅಲ್ಲಿಗೆ ಕಳುಹಿಸುವನು. ಈಜಿಪ್ಟಿನಲ್ಲಿ ನಿಮ್ಮನ್ನು ನೀವೇ ಗುಲಾಮರನ್ನಾಗಿ ನಿಮ್ಮ ವೈರಿಗಳಿಗೆ ಮಾರಿಕೊಳ್ಳುವಿರಿ; ಆದರೆ ಯಾರೂ ನಿಮ್ಮನ್ನು ಕೊಂಡುಕೊಳ್ಳುವವರಿರುವುದಿಲ್ಲ.” [PE]
❮
❯