ಧರ್ಮೋಪದೇಶಕಾಂಡ 20 : 1 (ERVKN)
ಯುದ್ಧ ಕ್ರಮಗಳು “ನೀವು ನಿಮಗಿಂತ ಬಲಿಷ್ಠರಾದ ವೈರಿಗಳ ಮೇಲೆ ಯುದ್ಧಕ್ಕೆ ಹೋದಾಗ ಅವರ ರಥಾಶ್ವಗಳನ್ನು ಮತ್ತು ನಿಮಗಿಂತಲೂ ಹೆಚ್ಚಾದ ಸೈನ್ಯಬಲವನ್ನು ನೋಡಿ ನೀವು ಭಯಗ್ರಸ್ತರಾಗಬೇಡಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿದ್ದಾನೆ. ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ತಂದವನು ಆತನೇ.
ಧರ್ಮೋಪದೇಶಕಾಂಡ 20 : 2 (ERVKN)
“ನೀವು ಯುದ್ಧಕ್ಕೆ ಹೊರಟುನಿಂತಾಗ ಯಾಜಕನು ಸೈನಿಕರ ಬಳಿಗೆ ಹೋಗಿ ಹೀಗೆ ಹೇಳಬೇಕು:
ಧರ್ಮೋಪದೇಶಕಾಂಡ 20 : 3 (ERVKN)
‘ಇಸ್ರೇಲ್ ಜನರೇ, ನನ್ನ ಮಾತನ್ನು ಆಲಿಸಿರಿ. ಈ ದಿವಸ ನಿಮ್ಮ ವೈರಿಗಳೊಂದಿಗೆ ಕಾದಾಡಲು ಹೋಗುತ್ತಿದ್ದೀರಿ. ನೀವು ಅಧೈರ್ಯಗೊಳ್ಳಬೇಡಿರಿ. ಗಲಿಬಿಲಿಗೆ ಸಿಕ್ಕಿಕೊಳ್ಳಬೇಡಿ; ವೈರಿಗಳಿಗೆ ಭಯಪಡಬೇಡಿರಿ.
ಧರ್ಮೋಪದೇಶಕಾಂಡ 20 : 4 (ERVKN)
ನಿಮ್ಮ ದೇವರಾದ ಯೆಹೋವನು ನಿಮ್ಮ ಮುಂದೆ ಹೋಗುವನು. ವೈರಿಗಳೊಂದಿಗೆ ಯುದ್ಧಮಾಡಲು ಆತನು ನಿಮಗೆ ಸಹಾಯ ಮಾಡುವನು ಮತ್ತು ನಿಮಗೆ ಜಯವನ್ನು ಕೊಡುವನು.’
ಧರ್ಮೋಪದೇಶಕಾಂಡ 20 : 5 (ERVKN)
“ಆ ಲೇವಿಯ ಅಧಿಕಾರಿಗಳು ಸೈನಿಕರಿಗೆ, ‘ನಿಮ್ಮಲ್ಲಿ ಯಾರಾದರೂ ಹೊಸಮನೆಯನ್ನು ಕಟ್ಟಿ ಗೃಹಪ್ರವೇಶ ಮಾಡಿರದಿದ್ದರೆ ಅವನು ತನ್ನ ಮನೆಗೆ ಹೋಗಲಿ. ಒಂದುವೇಳೆ ಅವನು ರಣರಂಗದಲ್ಲಿ ಸತ್ತರೆ ಇನ್ನೊಬ್ಬನು ಅವನ ಮನೆಗೆ ಸೇರಿಕೊಳ್ಳಬಹುದು.
ಧರ್ಮೋಪದೇಶಕಾಂಡ 20 : 6 (ERVKN)
ನಿಮ್ಮಲ್ಲಿ ಯಾವನಾದರೂ ದ್ರಾಕ್ಷಿತೋಟವನ್ನು ಮಾಡಿ ಅದರ ಫಲವನ್ನು ಕೂಡಿಸಿಲ್ಲದಿದ್ದರೆ ಅವನು ತನ್ನ ಮನೆಗೆ ಹೋಗಲಿ. ಅವನು ರಣರಂಗದಲ್ಲಿ ಮಡಿದರೆ ಅವನ ದ್ರಾಕ್ಷಿತೋಟದ ಫಲಗಳು ಬೇರೊಬ್ಬನ ಪಾಲಾಗುವುದು.
ಧರ್ಮೋಪದೇಶಕಾಂಡ 20 : 7 (ERVKN)
ನಿಮ್ಮಲ್ಲಿ ಯಾರಾದರೂ ಮದುವೆಯಾಗಲು ಹೆಣ್ಣನ್ನು ನಿಶ್ಚಯಿಸಿದ್ದರೆ ಅವನು ತನ್ನ ಮನೆಗೆ ಹಿಂತಿರುಗಿಹೋಗಲಿ; ಯಾಕೆಂದರೆ ಅವನು ರಣರಂಗದಲ್ಲಿ ಮಡಿದರೆ ಅವನಿಗೆ ನಿಶ್ಚಯವಾದ ಹೆಣ್ಣನ್ನು ಇನ್ನೊಬ್ಬನು ಮದುವೆ ಮಾಡಿಕೊಳ್ಳಬಹುದು’ ಎಂದು ಹೇಳುವರು.
ಧರ್ಮೋಪದೇಶಕಾಂಡ 20 : 8 (ERVKN)
“ಆ ಲೇವಿಯ ಅಧಿಕಾರಿಗಳು ಹೇಳಬೇಕಾದದ್ದೇನೆಂದರೆ: ‘ನಿಮ್ಮಲ್ಲಿ ಯಾರಾದರೂ ತಮ್ಮ ಧೈರ್ಯವನ್ನು ಕಳೆದುಕೊಂಡಿದ್ದರೆ ಅವನು ತನ್ನ ಮನೆಗೆ ಹೋಗಲಿ. ಅವನಿಂದಾಗಿ ಇತರ ಸೈನಿಕರೂ ತಮ್ಮ ಧೈರ್ಯವನ್ನು ಕಳೆದುಕೊಳ್ಳಬಹುದು.’
ಧರ್ಮೋಪದೇಶಕಾಂಡ 20 : 9 (ERVKN)
ಲೇವಿಯ ಅಧಿಕಾರಿಗಳು ಸೈನಿಕರೊಂದಿಗೆ ಮಾತಾಡುವುದನ್ನು ನಿಲ್ಲಿಸಿದ ಬಳಿಕ ಅವರು ತಮಗೆ ಸೈನ್ಯಾಧಿಕಾರಿಗಳನ್ನು ನೇಮಿಸಬೇಕು.
ಧರ್ಮೋಪದೇಶಕಾಂಡ 20 : 10 (ERVKN)
“ನೀವು ಒಂದು ಪಟ್ಟಣವನ್ನು ಆಕ್ರಮಿಸಲು ಹೋದಾಗ, ಅಲ್ಲಿಯ ಜನರಿಗೆ ‘ಶಾಂತಿಸಂಧಾನಕ್ಕೆ’ ಕರೆಯನ್ನು ಕೊಡಬೇಕು.
ಧರ್ಮೋಪದೇಶಕಾಂಡ 20 : 11 (ERVKN)
ಅವರು ನಿಮ್ಮ ಸಂಧಾನವನ್ನು ಸ್ವೀಕರಿಸಿ ನಿಮಗೆ ತಮ್ಮ ಬಾಗಿಲುಗಳನ್ನು ತೆರೆದುಕೊಟ್ಟರೆ ಆ ಪಟ್ಟಣದಲ್ಲಿರುವವರೆಲ್ಲರೂ ನಿಮಗೆ ಗುಲಾಮರಾಗುವರು. ಅವರು ನಿಮ್ಮ ಕೆಲಸಗಳನ್ನು ಮಾಡಲೇಬೇಕು.
ಧರ್ಮೋಪದೇಶಕಾಂಡ 20 : 12 (ERVKN)
ಆದರೆ ಆ ಪಟ್ಟಣದವರು ನಿಮ್ಮೊಂದಿಗೆ ಶಾಂತಿಸಂಧಾನ ಮಾಡಲು ಒಪ್ಪದಿದ್ದರೆ ಮತ್ತು ನಿಮ್ಮೊಂದಿಗೆ ಕಾದಾಡಲು ಬಂದರೆ ನೀವು ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು.
ಧರ್ಮೋಪದೇಶಕಾಂಡ 20 : 13 (ERVKN)
ನಿಮ್ಮ ದೇವರಾದ ಯೆಹೋವನು ಆ ಪಟ್ಟಣವನ್ನು ಸ್ವಾಧೀನ ಮಾಡಲು ಸಹಾಯಮಾಡಿದಾಗ ನೀವು ಆ ಪಟ್ಟಣದೊಳಗಿದ್ದ ಗಂಡಸರನ್ನೆಲ್ಲಾ ಕೊಂದುಬಿಡಬೇಕು.
ಧರ್ಮೋಪದೇಶಕಾಂಡ 20 : 14 (ERVKN)
ಹೆಂಗಸರನ್ನು, ಮಕ್ಕಳನ್ನು, ದನಕುರಿಗಳನ್ನು ಮತ್ತು ಪಟ್ಟಣದೊಳಗಿದ್ದವುಗಳನ್ನೆಲ್ಲಾ ನಿಮ್ಮ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಳ್ಳಬಹುದು. ನಿಮ್ಮ ದೇವರಾದ ಯೆಹೋವನು ಅವುಗಳನ್ನು ನಿಮಗೆ ಕೊಟ್ಟಿದ್ದಾನೆ.
ಧರ್ಮೋಪದೇಶಕಾಂಡ 20 : 15 (ERVKN)
ನಿಮ್ಮಿಂದ ಬಹುದೂರವಿರುವ ಪಟ್ಟಣಗಳಿಗೆ ಅಂದರೆ ನೀವು ವಾಸಿಸಲಿರುವ ದೇಶದಿಂದ ದೂರವಿರುವ ಪಟ್ಟಣಗಳಿಗೆ ನೀವು ಆ ರೀತಿಯಾಗಿ ಮಾಡಬೇಕು.
ಧರ್ಮೋಪದೇಶಕಾಂಡ 20 : 16 (ERVKN)
“ಆದರೆ ನಿಮಗೆ ವಾಗ್ದಾನ ಮಾಡಿದ ದೇಶದ ಪಟ್ಟಣಗಳನ್ನು ಸ್ವಾಧೀನ ಮಾಡುವಾಗ ನೀವು ಪಟ್ಟಣದಲ್ಲಿರುವವರೆಲ್ಲರನ್ನು ಕೊಲ್ಲಬೇಕು.
ಧರ್ಮೋಪದೇಶಕಾಂಡ 20 : 17 (ERVKN)
ನೀವು ಹಿತ್ತಿಯರನ್ನು, ಅಮೋರಿಯರನ್ನು, ಕಾನಾನ್ಯರನ್ನು, ಪೆರಿಜ್ಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ಸಂಪೂರ್ಣವಾಗಿ ಹತ್ಯೆ ಮಾಡಬೇಕು. ಇದು ನಿಮ್ಮ ದೇವರಾದ ಯೆಹೋವನ ಅಪ್ಪಣೆ.
ಧರ್ಮೋಪದೇಶಕಾಂಡ 20 : 18 (ERVKN)
ಯಾಕೆಂದರೆ ಆಗ ಅವರು ನಿಮ್ಮ ದೇವರಾದ ಯೆಹೋವನಿಗೆ ವಿರೋಧವಾಗಿ ಪಾಪಮಾಡುವಂತೆ ನಿಮಗೆ ಉಪದೇಶಿಸಲು ಸಾಧ್ಯವಾಗುವುದಿಲ್ಲ; ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ಮಾಡುವ ಭಯಂಕರ ಕೃತ್ಯಗಳನ್ನು ಮಾಡುವಂತೆ ನಿಮಗೆ ಉಪದೇಶಿಸಲು ಸಾಧ್ಯವಾಗುವುದಿಲ್ಲ.
ಧರ್ಮೋಪದೇಶಕಾಂಡ 20 : 19 (ERVKN)
“ನೀವು ಒಂದು ಪಟ್ಟಣವನ್ನು ಬಹುಕಾಲದಿಂದ ಮುತ್ತಿಗೆ ಹಾಕಿದರೆ ಸುತ್ತಮುತ್ತಲಿರುವ ಮರಗಳನ್ನು ಕಡಿದುಹಾಕಬಾರದು. ಅವುಗಳ ಫಲಗಳನ್ನು ತಿನ್ನಬಹುದು; ಆದರೆ ಕಡಿಯಬಾರದು. ಅವು ನಿಮ್ಮ ವೈರಿಗಳಲ್ಲವಲ್ಲಾ? ಅವು ನಿಮ್ಮೊಂದಿಗೆ ಯುದ್ಧ ಮಾಡುವುದಿಲ್ಲವಲ್ಲಾ?
ಧರ್ಮೋಪದೇಶಕಾಂಡ 20 : 20 (ERVKN)
ಹಣ್ಣುಗಳನ್ನು ಕೊಡದ ಮರಗಳನ್ನು ಕಡಿಯಬಹುದು. ಆ ಮರಗಳಿಂದ ಆಯುಧಗಳನ್ನು ತಯಾರಿಸಿ *ಆಯುಧಗಳನ್ನು ತಯಾರಿಸಿ ಅಕ್ಷರಶಃ, “ಪಟ್ಟಣಕ್ಕೆ ವಿರೋಧವಾಗಿ ಮುತ್ತಿಗೆ ಹಾಕಲು ಬೇಕಾದ ಮರದ ಉಪಕರಣಗಳನ್ನು ಶೇಖರಿಸಿಟ್ಟುಕೊಳ್ಳಬಹುದು.” ಆ ಪಟ್ಟಣದ ಜನರೊಂದಿಗೆ ಯುದ್ಧ ಮಾಡಬಹುದು. ಆ ಪಟ್ಟಣವು ನಿಮ್ಮ ಕೈವಶವಾಗುವ ತನಕ ನೀವು ಅದನ್ನು ಉಪಯೋಗಿಸಬಹುದು.

1 2 3 4 5 6 7 8 9 10 11 12 13 14 15 16 17 18 19 20