1 ಪೂರ್ವಕಾಲವೃತ್ತಾ 5 : 1 (ERVKN)
ರೂಬೇನನ ಸಂತತಿಯವರು (1-3) ರೂಬೇನನು ಇಸ್ರೇಲನ ಚೊಚ್ಚಲಮಗ. ಅವನು ಚೊಚ್ಚಲಮಗನಿಗೆ ಸಿಗಬೇಕಾಗಿದ್ದ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಅವನು ತನ್ನ ತಂದೆಯ ಉಪಪತ್ನಿಯೊಡನೆ ಸಂಭೋಗಿಸಿದ್ದರಿಂದ ಅವನ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೊರೆತವು. ಆದ್ದರಿಂದ ವಂಶಾವಳಿಯಲ್ಲಿ ಚೊಚ್ಚಲ ಮಗನ ಸ್ಥಾನ ಅವನಿಗೆ ದೊರೆಯಲಿಲ್ಲ. ಯೆಹೂದನು ತನ್ನ ಎಲ್ಲಾ ಸಹೋದರರಿಗಿಂತ ಬಲಾಢ್ಯನಾದನು. ಆದ್ದರಿಂದ ಅವನ ಕುಲದಿಂದಲೇ ನಾಯಕರುಗಳು ಬಂದರು. ಆದರೆ ಚೊಚ್ಚಲ ಮಗನಿಗೆ ಸಿಗಬೇಕಾಗಿದ್ದ ಇತರ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೊರೆತವು. ರೂಬೇನನ ಮಕ್ಕಳು ಯಾರೆಂದರೆ: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.
1 ಪೂರ್ವಕಾಲವೃತ್ತಾ 5 : 2 (ERVKN)
1 ಪೂರ್ವಕಾಲವೃತ್ತಾ 5 : 3 (ERVKN)
1 ಪೂರ್ವಕಾಲವೃತ್ತಾ 5 : 4 (ERVKN)
ಇವರು ಯೋವೇಲನ ಸಂತತಿಯವರು: ಶೆಮಾಯನು ಯೋವೇಲನ ಮಗ. ಗೋಗನು ಶೆಮಾಯನ ಮಗ. ಶಿಮ್ಮಿಯು ಗೋಗನ ಮಗ.
1 ಪೂರ್ವಕಾಲವೃತ್ತಾ 5 : 5 (ERVKN)
ಶಿಮ್ಮಿಯ ಮಗನು ಮೀಕ. ಮೀಕನ ಮಗ ರೆವಾಯ. ರೆವಾಯನ ಮಗನು ಬಾಳ್‌ಮಯೊನ್.
1 ಪೂರ್ವಕಾಲವೃತ್ತಾ 5 : 6 (ERVKN)
ಬಾಳ್‌ಮಯೊನನ ಮಗನು ಬೇರ. ಅಶ್ಯೂರದ ಅರಸನಾದ ತಿಗ್ಲತ್ಪಿಲೆಸರನು ಬೇರನನ್ನು ಅವನ ಮನೆಯಿಂದ ಹೊರಡಿಸಿದನು; ಬೇರನು ಅವನ ಸೆರೆಯಾಳಾದನು. ಬೇರನು ರೂಬೇನ್ ಕುಲದ ಪ್ರಧಾನನಾಗಿದ್ದನು.
1 ಪೂರ್ವಕಾಲವೃತ್ತಾ 5 : 7 (ERVKN)
ಯೋವೇಲನ ಮತ್ತು ಅವನ ಸಂತತಿಯವರೆಲ್ಲರ ವಿಷಯವಾಗಿ ಸಂತಾನಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತದೆ: ಅವನ ಚೊಚ್ಚಲಮಗನು ಯೆಗೀಯೇಲ್, ಅನಂತರ ಹುಟ್ಟಿದವರು ಜೆಕರ್ಯ ಮತ್ತು ಬೆಳ.
1 ಪೂರ್ವಕಾಲವೃತ್ತಾ 5 : 8 (ERVKN)
ಆಜಾಜನ ಮಗನು ಬೆಳ. ಆಜಾಜನು ಶೆಮಯನ ಮಗ, ಶೆಮಯನು ಯೋವೇಲನ ಮಗನು. ಇವರೆಲ್ಲರೂ ನೆಬೋ ಮತ್ತು ಬಾಳ್ಮೆಯೋನ್ ಪ್ರಾಂತ್ಯದ ಅರೋಯೇರ್ ಸುತ್ತಮುತ್ತ ವಾಸಿಸಿದರು.
1 ಪೂರ್ವಕಾಲವೃತ್ತಾ 5 : 9 (ERVKN)
ಬೆಳನ ಜನರು ಯೂಫ್ರೇಟೀಸ್ ನದಿಯ ಸಮೀಪದಲ್ಲಿರುವ ಮರುಭೂಮಿಯವರೆಗೂ ನೆಲೆಸಿದರು. ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳು ಇದ್ದುದರಿಂದ ಗಿಲ್ಯಾದ್ ಪ್ರಾಂತ್ಯದಲ್ಲಿಯೇ ನೆಲೆಸಿದರು.
1 ಪೂರ್ವಕಾಲವೃತ್ತಾ 5 : 10 (ERVKN)
ಸೌಲನು ಅರಸನಾಗಿದ್ದ ಸಮಯದಲ್ಲಿ ಬೆಳನ ಜನರು ಹಗ್ರೀಯರೊಂದಿಗೆ ಯುದ್ಧಮಾಡಿ ಅವರ ಗುಡಾರಗಳಲ್ಲಿ ವಾಸಮಾಡಿದರು. ಆ ಗುಡಾರಗಳಲ್ಲಿ ವಾಸಮಾಡುತ್ತಾ ಗಿಲ್ಯಾದಿನ ಪೂರ್ವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದರು.
1 ಪೂರ್ವಕಾಲವೃತ್ತಾ 5 : 11 (ERVKN)
ಗಾದನ ಸಂತತಿಯವರು ರೂಬೇನ್ಯರು ವಾಸಿಸಿದ್ದ ಪ್ರಾಂತ್ಯದ ಪಕ್ಕದಲ್ಲಿಯೇ ಗಾದನ ಕುಲದವರು ವಾಸಿಸಿದರು. ಇವರು ಬಾಷಾನಿನ ಪ್ರದೇಶದಲ್ಲಿ ಸಾಲೆಖ ಪಟ್ಟಣದವರೆಗೂ ನೆಲೆಸಿದರು.
1 ಪೂರ್ವಕಾಲವೃತ್ತಾ 5 : 12 (ERVKN)
ಯೋವೇಲನೇ ಬಾಷಾನಿನ ಮೊದಲನೇ ಪ್ರಧಾನನು. ಇವನ ನಂತರ ಶಾಫಾಮ ಪ್ರಧಾನನಾದನು. ಆಮೇಲೆ ಯನ್ನೈ ಪ್ರಧಾನನಾದನು.
1 ಪೂರ್ವಕಾಲವೃತ್ತಾ 5 : 13 (ERVKN)
ಅವರ ಕುಟುಂಬದ ಏಳು ಮಂದಿ ಸಹೋದರರು ಯಾರೆಂದರೆ: ಮೀಕಾಯೇಲ್, ಮೆಷುಲ್ಲಾಮ್, ಶೆಬ, ಯೋರೈ, ಯಕ್ಕಾನ್, ಜೀಯ ಮತ್ತು ಏಬೆರ್.
1 ಪೂರ್ವಕಾಲವೃತ್ತಾ 5 : 14 (ERVKN)
ಇವರು ಅಬೀಹೈಲನ ಸಂತತಿಯವರು. ಅಬೀಹೈಲನು ಹೂರೀಯ ಮಗ. ಹೂರೀಯು ಯಾರೋಹನ ಮಗ. ಯಾರೋಹನು ಗಿಲ್ಯಾದನ ಮಗ. ಗಿಲ್ಯಾದನು ಮೀಕಾಯೇಲನ ಮಗನು. ಮೀಕಾಯೇಲನು ಯೆಷೀಷೈಯನ ಮಗನು. ಯೆಷೀಷೈ ಯೆಹ್ದೋವಿನ ಮಗನು. ಯೆಹ್ದೋವಿಯು ಅಹೀಬೂಜನ ಮಗನು.
1 ಪೂರ್ವಕಾಲವೃತ್ತಾ 5 : 15 (ERVKN)
ಅಬ್ದೀಯೇಲನ ಮಗನು ಅಹೀಬೂಜನು. ಅಬ್ದೀಯೇಲನು ಗೂನೀಯ ಮಗನು. ಅಹೀಬೂಜನು ಕುಟುಂಬ ಪ್ರಧಾನನಾಗಿದ್ದನು.
1 ಪೂರ್ವಕಾಲವೃತ್ತಾ 5 : 16 (ERVKN)
ಗಿಲ್ಯಾದ್ ಪ್ರಾಂತ್ಯದಲ್ಲಿ ಗಾದ್ ಕುಟುಂಬದ ಜನರು ವಾಸಿಸಿದರು. ಅವರು ಬಾಷಾನ್ ಪ್ರಾಂತ್ಯದಲ್ಲಿಯೂ ಅದರ ಸುತ್ತಮುತ್ತಲಿದ್ದ ಊರುಗಳಲ್ಲಿಯೂ ಶಾರೋನ್ ಪ್ರಾಂತ್ಯದ ಹುಲ್ಲುಗಾವಲುಗಳ ಗಡಿಗಳವರೆಗೂ ನೆಲೆಸಿದರು.
1 ಪೂರ್ವಕಾಲವೃತ್ತಾ 5 : 17 (ERVKN)
ಯೋತಾವು ಮತ್ತು ಯಾರೊಬ್ಬಾಮನ ಕಾಲದಲ್ಲಿ ಇವರ ಹೆಸರುಗಳನ್ನೆಲ್ಲಾ ಗಾದ್ಯರ ಸಂತಾನ ಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಯೋತಾವುನು ಯೆಹೂದದ ಅರಸನಾಗಿದ್ದನು ಮತ್ತು ಯಾರೊಬ್ಬಾಮನು ಇಸ್ರೇಲರ ಅರಸನಾಗಿದ್ದನು.
1 ಪೂರ್ವಕಾಲವೃತ್ತಾ 5 : 18 (ERVKN)
ಶೂರರಾದ ಯುದ್ಧವೀರರು ರೂಬೇನ್ ಮತ್ತು ಗಾದ್ ಕುಲಗಳಲ್ಲಿ ಮತ್ತು ಮನಸ್ಸೆಯ ಅರ್ಧಕುಲದವರಲ್ಲಿ ನಲವತ್ತನಾಲ್ಕು ಸಾವಿರದ ಏಳುನೂರ ಅರವತ್ತು ಮಂದಿ ಯುದ್ಧವೀರರಿದ್ದರು. ಇವರೆಲ್ಲಾ ಖಡ್ಗ ಗುರಾಣಿಗಳನ್ನೂ ಬಿಲ್ಲುಬಾಣಗಳನ್ನೂ ಉಪಯೋಗಿಸುವದರಲ್ಲಿ ನಿಪುಣರಾಗಿದ್ದರು.
1 ಪೂರ್ವಕಾಲವೃತ್ತಾ 5 : 19 (ERVKN)
ಅವರು ಹಗ್ರೀಯರೊಂದಿಗೂ ಯೆಟೂರ್, ನಾಫೀಷ್ ಮತ್ತು ನೋದ್ವಾ್ ಊರಿನವರೊಂದಿಗೂ ಯುದ್ಧ ಮಾಡಿದರು.
1 ಪೂರ್ವಕಾಲವೃತ್ತಾ 5 : 20 (ERVKN)
ರೂಬೇನ್, ಮನಸ್ಸೆ, ಗಾದ್ ಕುಲಗಳ ಯೋಧರು ಯುದ್ಧಮಾಡುವಾಗ ದೇವರಲ್ಲಿ ಪ್ರಾರ್ಥಿಸಿದರು. ಅವರು ದೇವರ ಮೇಲೆ ಭರವಸೆಯಿಟ್ಟು ಸಹಾಯಕ್ಕಾಗಿ ಬೇಡಿಕೊಂಡದ್ದರಿಂದ ದೇವರು ಅವರಿಗೆ ಜಯವನ್ನು ಕೊಟ್ಟನು.
1 ಪೂರ್ವಕಾಲವೃತ್ತಾ 5 : 21 (ERVKN)
ವೈರಿಗಳಲ್ಲಿದ್ದ ಎಲ್ಲಾ ಪಶುಗಳನ್ನು ಅವರು ತಮ್ಮ ವಶಕ್ಕೆ ತೆಗೆದುಕೊಂಡರು. ಅವರು ಐವತ್ತು ಸಾವಿರ ಒಂಟೆಗಳು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳು, ಎರಡು ಸಾವಿರ ಕತ್ತೆಗಳು ಅಲ್ಲದೆ ಒಂದು ಲಕ್ಷ ಸೆರೆಯಾಳುಗಳನ್ನು ತೆಗೆದುಕೊಂಡರು.
1 ಪೂರ್ವಕಾಲವೃತ್ತಾ 5 : 22 (ERVKN)
ದೇವರು ಅವರಿಗೆ ಜಯವನ್ನು ಕೊಟ್ಟಿದ್ದರಿಂದ ಹಗ್ರೀಯರಲ್ಲಿ ಬಹಳ ಮಂದಿಯನ್ನು ಕೊಂದರು. ಆ ಹಗ್ರೀಯರ ಪ್ರದೇಶದಲ್ಲಿ ರೂಬೇನ್, ಗಾದ್, ಮನಸ್ಸೆ ಕುಲಗಳವರು ಸಹ ವಾಸಿಸಿದರು. ಬಾಬಿಲೋನಿನ ಅರಸನು ಇಸ್ರೇಲರನ್ನು ಸೆರೆಹಿಡಿದು ಕೊಂಡೊಯ್ಯುವ ತನಕ ಅವರು ಅಲ್ಲಿಯೇ ವಾಸಮಾಡಿದರು.
1 ಪೂರ್ವಕಾಲವೃತ್ತಾ 5 : 23 (ERVKN)
ಮನಸ್ಸೆಯ ಅರ್ಧಕುಲದ ಜನರು ಬಾಷಾನ್ ಪ್ರದೇಶದಿಂದಿಡಿದು ಬಾಳ್‌ಹೆರ್ಮೋನ್, ಸೆನೀರ್ ಮತ್ತು ಹೆರ್ಮೋನ್ ಪರ್ವತ ಪ್ರಾಂತ್ಯದವರೆಗೂ ನೆಲೆಸಿದರು. ಅವರ ಕುಲದ ಜನರು ಬಹುಸಂಖ್ಯಾತರಾದರು.
1 ಪೂರ್ವಕಾಲವೃತ್ತಾ 5 : 24 (ERVKN)
ಮನಸ್ಸೆಯ ಅರ್ಧಕುಲದ ಅಧಿಪತಿಗಳು ಯಾರೆಂದರೆ: ಏಫೆರ್, ಇಷ್ಷೀ, ಎಲೀಯೇಲ್, ಅಜ್ರೀಯೇಲ್, ಯೆರೆಮೀಯ, ಹೋದವ್ಯ ಮತ್ತು ಯೆಹ್ತೀಯೇಲ್, ಇವರೆಲ್ಲಾ ಬಲಾಢ್ಯರೂ ಧೈರ್ಯಶಾಲಿಗಳೂ ಆದ ವೀರರಾಗಿದ್ದರು.
1 ಪೂರ್ವಕಾಲವೃತ್ತಾ 5 : 25 (ERVKN)
ಆದರೆ ಆ ಅಧಿಪತಿಗಳು ತಮ್ಮ ಪೂರ್ವಿಕರು ಆರಾಧಿಸುತ್ತಿದ್ದ ದೇವರನ್ನು ಬಿಟ್ಟು ಬೇರೆ ದೇವರುಗಳನ್ನು ಪೂಜಿಸತೊಡಗಿ ತಮ್ಮ ದೇವರ ವಿರುದ್ಧವಾಗಿ ಪಾಪಮಾಡಿದರು. ತಾವು ಸೋಲಿಸಿದ ಅನ್ಯಜನಾಂಗದವರ ದೇವರುಗಳನ್ನು ಇವರು ಆರಾಧಿಸಿದರು.
1 ಪೂರ್ವಕಾಲವೃತ್ತಾ 5 : 26 (ERVKN)
ಇಸ್ರೇಲರ ದೇವರು ಅಶ್ಯೂರದ ರಾಜನಾದ ಪೂಲ್ (ತಿಗ್ಲತ್ಪಿಲೆಸರ್) ಅವರ ಮೇಲೆ ಯುದ್ಧಕ್ಕೆ ಹೋಗುವಂತೆ ಮಾಡಿದನು. ಅವರು ಬಂದು ರೂಬೇನ್, ಗಾದ್ ಮತ್ತು ಮನಸ್ಸೆಯ ಅರ್ಧ ಕುಲದವರೊಂದಿಗೆ ಯುದ್ಧ ಮಾಡಿದರು. ಯುದ್ಧದಲ್ಲಿ ಅವರನ್ನು ಸೋಲಿಸಿ, ಸೆರೆಹಿಡಿದು ಹಲಹ, ಹಾಬೋರ್, ಹಾರ ಮತ್ತು ಗೋಜಾನ್ ನದಿಯ ಸಮೀಪದ ಸ್ಥಳಕ್ಕೆ ಕೈದಿಗಳನ್ನಾಗಿ ಕೊಂಡೊಯ್ದರು. ಅಂದಿನಿಂದ ಇಂದಿನ ತನಕವೂ ಇಸ್ರೇಲರು ಆ ಸ್ಥಳಗಳಲ್ಲಿ ವಾಸಮಾಡುತ್ತಿರುವರು.
❮
❯