1 ಪೂರ್ವಕಾಲವೃತ್ತಾ 4 : 1 (ERVKN)
ಯೆಹೂದನ ಗಂಡುಮಕ್ಕಳ ಪಟ್ಟಿ ಪೆರೆಚ್, ಹೆಚ್ರೋನ್, ಕರ್ಮಿ, ಹೂರ್ ಮತ್ತು ಶೋಬಾಲರು.
1 ಪೂರ್ವಕಾಲವೃತ್ತಾ 4 : 2 (ERVKN)
ಶೋಬಾಲನ ಮಗ ರೆವಾಯ. ರೆವಾಯನ ಮಗನು ಯಹತ್. ಯಹತನ ಗಂಡುಮಕ್ಕಳು ಅಹೂಮೈ ಮತ್ತು ಲಹದ್. ಅಹೂಮೈ ಮತ್ತು ಲಹದ್ರವರು ಚೊರ್ರರ ಸಂತತಿಯವರು.
1 ಪೂರ್ವಕಾಲವೃತ್ತಾ 4 : 3 (ERVKN)
ಏಟಾಮನ ಗಂಡುಮಕ್ಕಳು ಯಾರೆಂದರೆ: ಇಜ್ರೆಯೇಲ್, ಇಷ್ಮ ಮತ್ತು ಇಬ್ಬಾಷ್. ಇವರ ಸಹೋದರಿ ಹಚೆಲೆಲ್ ಪೋನೀ.
1 ಪೂರ್ವಕಾಲವೃತ್ತಾ 4 : 4 (ERVKN)
ಪೆನೂವೇಲನು ಗೆದೋರನ ತಂದೆ: ಏಜೆರನು ಹೂಷಾಹ್ಯನ ತಂದೆ. ಇವರು ಹೂರನ ಗಂಡುಮಕ್ಕಳು. ಹೂರನು ಎಫ್ರಾತಾಹಳ ಮೊದಲನೆಯ ಮಗನು. ಇವನೇ ಬೆತ್ಲೇಹೇಮ್ಯರ ಮೂಲಪಿತೃ.
1 ಪೂರ್ವಕಾಲವೃತ್ತಾ 4 : 5 (ERVKN)
ತೆಕೋವನ ತಂದೆಯಾದ ಅಷ್ಹೂರನಿಗೆ ಇಬ್ಬರು ಹೆಂಡತಿಯರು. ಇವರ ಹೆಸರು ಹೆಲಾಹ ಮತ್ತು ನಾರ.
1 ಪೂರ್ವಕಾಲವೃತ್ತಾ 4 : 6 (ERVKN)
ನಾರಳಲ್ಲಿ ಹುಟ್ಟಿದ ಗಂಡುಮಕ್ಕಳು: ಅಹುಜ್ಜಾಮ್, ಹೇಫೆರ್, ತೇಮಾನ್ ಮತ್ತು ಅಹಷ್ಟಾರ್ಯ.
1 ಪೂರ್ವಕಾಲವೃತ್ತಾ 4 : 7 (ERVKN)
ಹೆಲಾಹಳ ಗಂಡುಮಕ್ಕಳು: ಚೆರೆತ್, ಇಚ್ಹಾರ್, ಎತ್ನಾನ್ ಮತ್ತು ಕೋಚ.
1 ಪೂರ್ವಕಾಲವೃತ್ತಾ 4 : 8 (ERVKN)
ಕೋಚನು ಆನೂಬ್ ಮತ್ತು ಚೊಬೇಬನ ತಂದೆ. ಕೋಚನು ಅಹರ್ಹೇಲ್ ವಂಶದವರ ಮೂಲಪಿತೃ. ಅಹರ್ಹೇಲನು ಹಾರಮನ ಮಗನು.
1 ಪೂರ್ವಕಾಲವೃತ್ತಾ 4 : 9 (ERVKN)
ಯಾಬೇಚನು ತುಂಬ ಒಳ್ಳೆಯ ವ್ಯಕ್ತಿಯಾಗಿದ್ದನು. ಅವನು ತನ್ನ ಅಣ್ಣತಮ್ಮಂದಿರಿಗಿಂತ ಉತ್ತಮನಾಗಿದ್ದನು. ಅವನ ತಾಯಿ, “ನಾನು ಅವನನ್ನು ಹೆರುವಾಗ ತುಂಬಾ ನೋವನ್ನು ಅನುಭವಿಸಿದ್ದರಿಂದ ನಾನು ಅವನಿಗೆ ಯಾಬೇಚ ಎಂದು ಹೆಸರಿಟ್ಟೆನು” ಎಂದು ಹೇಳಿದಳು.
1 ಪೂರ್ವಕಾಲವೃತ್ತಾ 4 : 10 (ERVKN)
ಯಾಬೇಚನು ಇಸ್ರೇಲರ ದೇವರಿಗೆ ಹೀಗೆ ಪ್ರಾರ್ಥಿಸಿದನು: “ದೇವರೇ, ನೀನು ನನ್ನನ್ನು ನಿಜವಾಗಿಯೂ ಆಶೀರ್ವದಿಸು. ನನ್ನ ಪ್ರಾಂತ್ಯವನ್ನು ವಿಸ್ತರಿಸು. ನನ್ನ ಬಳಿಯಲ್ಲಿಯೇ ಇದ್ದು ನನಗಾರೂ ನೋವು ಮಾಡದಂತೆ ನೋಡಿಕೊಂಡು ನನ್ನನ್ನು ರಕ್ಷಿಸು” ಎಂಬ ಯಾಬೇಚನ ಕೋರಿಕೆಯನ್ನು ದೇವರು ಕೇಳಿದನು.
1 ಪೂರ್ವಕಾಲವೃತ್ತಾ 4 : 11 (ERVKN)
ಕೆಲೂಬನು ಶೂಹನ ಸಹೋದರ. ಕೆಲೂಬನ ಮಗನು ಮೆಹೀರ್. ಮೆಹೀರನು ಎಷ್ಟೋನನ ತಂದೆ.
1 ಪೂರ್ವಕಾಲವೃತ್ತಾ 4 : 12 (ERVKN)
ಎಷ್ಟೋನನು ಬೇತ್ರಾಫ, ಪಾಸೇಹ ಮತ್ತು ತೆಹಿನ್ನ ಇವರ ತಂದೆ. ತೆಹಿನ್ನ ಇರ್ನಾಹಷನ ತಂದೆ. ಇವರೆಲ್ಲರೂ ರೇಕಾಬದವರು.
1 ಪೂರ್ವಕಾಲವೃತ್ತಾ 4 : 13 (ERVKN)
ಕೆನಜನ ಗಂಡುಮಕ್ಕಳು ಯಾರೆಂದರೆ: ಒತ್ನೀಯೇಲ್ ಮತ್ತು ಸೆರಾಯ. ಒತ್ನೀಯೇಲನ ಮಕ್ಕಳು: ಹತತ್ ಮತ್ತು ಮೆಯೋನೋತೈ.
1 ಪೂರ್ವಕಾಲವೃತ್ತಾ 4 : 14 (ERVKN)
ಮೆಯೋನೋತೈ ಒಫ್ರಾಹನ ತಂದೆ. ಸೆರಾಯನು ಯೋವಾಬನ ತಂದೆ. ಯೋವಾಬನು ಗೇಹರಾಷೀಮ್ಯರ ಸ್ಥಾಪಕನು. ಇಲ್ಲಿಯವರು ನಿಪುಣ ಕುಶಲ ಕೆಲಸಗಾರರಾಗಿದ್ದುದರಿಂದ ಅವರಿಗೆ ಈ ಹೆಸರು ಬಂದಿತು.
1 ಪೂರ್ವಕಾಲವೃತ್ತಾ 4 : 15 (ERVKN)
ಕಾಲೇಬನು ಯೆಫುನ್ನೆಯ ಮಗನು. ಕಾಲೇಬನ ಗಂಡುಮಕ್ಕಳು: ಈರು, ಏಲ, ನಾಮ್, ಏಲನ ಮಗನ ಹೆಸರು ಕೆನಜ್.
1 ಪೂರ್ವಕಾಲವೃತ್ತಾ 4 : 16 (ERVKN)
ಯೆಹಲ್ಲೆಲೇಲನ ಗಂಡುಮಕ್ಕಳು ಯಾರೆಂದರೆ: ಜೀಪ್, ಜೀಫಾ, ತೀರ್ಯ ಮತ್ತು ಅಸರೇಲ್.
1 ಪೂರ್ವಕಾಲವೃತ್ತಾ 4 : 17 (ERVKN)
(17-18) ಎಜ್ರನ ಗಂಡುಮಕ್ಕಳು ಯಾರೆಂದರೆ: ಯೆತೆರ್, ಮೆರೆದ್, ಏಫೆರ್, ಯಾಲೋನ್, ಮೆರೆದನ ಗಂಡುಮಕ್ಕಳು: ಮಿರ್ಯಾಮ್, ಶಮ್ಮೈ ಮತ್ತು ಇಷ್ಬಹ. ಇಷ್ಬಹನ ಮಗ ಎಷ್ಟೆಮೋ. ಮೆರೆದನಿಗೆ ಯೆಹೂದ್ಯಳಾದ ಹೆಂಡತಿಯಿದ್ದಳು. ಅವಳಲ್ಲಿ ಯೆರೆದ್, ಹೆಬೆರ್ ಮತ್ತು ಯೆಕೊತೀಯೇಲ್ ಎಂಬ ಗಂಡುಮಕ್ಕಳು ಹುಟ್ಟಿದರು. ಯೆರೆದನು ಗೆದೋರ್ಯನ ತಂದೆ. ಹೆಬೆರನು ಸೋಕೋನನ ತಂದೆ; ಯೆಕೊತೀಯೇಲನು ಜಾನೋಹನ ತಂದೆ. ಇವರು ಬಿತ್ಯಳ ಮಕ್ಕಳು; ಬಿತ್ಯಳು ಫರೋಹನ ಮಗಳು. ಈಕೆಯೇ ಮೆರೆದನ ಈಜಿಪ್ಟಿನ ಹೆಂಡತಿ.
1 ಪೂರ್ವಕಾಲವೃತ್ತಾ 4 : 18 (ERVKN)
1 ಪೂರ್ವಕಾಲವೃತ್ತಾ 4 : 19 (ERVKN)
ಮೆರೆದನ ಹೆಂಡತಿಯು ನೆಹಮನ ತಂಗಿ. ಮೆರೆದನ ಹೆಂಡತಿಯು ಯೂದಾಯದಿಂದ ಬಂದವಳು. ಮೆರೆದನ ಹೆಂಡತಿಯ ಗಂಡುಮಕ್ಕಳು: ಕೆಯೀಲ ಮತ್ತು ಎಷ್ಟೆಮೋ ಗೋತ್ರಗಳ ಮೂಲಪಿತೃಗಳು. ಕೆಯೀಲನು ಗರ್ಮ್ಯರಿಗೆ ಸೇರಿದವನು ಮತ್ತು ಎಷ್ಟೆಮೋವನು ಮಾಕಾತ್ಯರಿಗೆ ಸೇರಿದವನು.
1 ಪೂರ್ವಕಾಲವೃತ್ತಾ 4 : 20 (ERVKN)
ಶೀಮೋನನ ಮಕ್ಕಳು ಯಾರೆಂದರೆ: ಅಮ್ನೋನ್, ರಿನ್ನ, ಬೆನ್ಹಾನಾನ್ ಮತ್ತು ತೀಲೋನ್. ಇಷ್ಷೀಯ ಮಕ್ಕಳು: ಜೋಹೇತ್ ಮತ್ತು ಬೆನ್ ಜೋಹೇತ್.
1 ಪೂರ್ವಕಾಲವೃತ್ತಾ 4 : 21 (ERVKN)
(21-22) ಶೇಲನು ಯೆಹೂದನ ಮಗನು. ಶೇಲನ ಮಕ್ಕಳು: ಏರ್, ಲದ್ದ, ಯೊಕೀವ್, ಕೋಜೇಬದ ಜನರು. ಯೋವಾಷ್ ಮತ್ತು ಸಾರಾಫ್. ಏರನ ಮಗನು ಲೇಕಾಹ್ಯ. ಲದ್ದನು ಮರೇಷನ ತಂದೆ ಮತ್ತು ಬೇತಷ್ಬೇಯದ, ಬಟ್ಟೆ ನೇಕಾರರ ಮೂಲಪಿತೃ. ಯೋವಾಷ್ ಮತ್ತು ಸಾರಾಫ್ ಮೋವಾಬ್ಯರ ಸ್ತ್ರೀಯರನ್ನು ಮದುವೆಮಾಡಿಕೊಂಡು ಬೆತ್ಲೆಹೇಮಿಗೆ ಹಿಂತಿರುಗಿದರು. ಈ ಕುಟುಂಬದ ಕುರಿತಾದ ಬರಹಗಳು ಪುರಾತನ ಕಾಲದ್ದು.
1 ಪೂರ್ವಕಾಲವೃತ್ತಾ 4 : 22 (ERVKN)
1 ಪೂರ್ವಕಾಲವೃತ್ತಾ 4 : 23 (ERVKN)
ಶೇಲನ ಮಕ್ಕಳು ಮಣ್ಣಿನಿಂದ ವಸ್ತುಗಳನ್ನು ತಯಾರಿಸುತ್ತಿದ್ದರು. ನೆಟಾಯಿಮ್ ಮತ್ತು ಗೆದೇರ ಎಂಬ ಸ್ಥಳಗಳಲ್ಲಿ ವಾಸವಾಗಿದ್ದ ಅವರು ಅರಸನಿಗೋಸ್ಕರ ಕೆಲಸಮಾಡುತ್ತಿದ್ದರು.
1 ಪೂರ್ವಕಾಲವೃತ್ತಾ 4 : 24 (ERVKN)
ಸಿಮೆಯೋನನ ಗಂಡುಮಕ್ಕಳು ಸಿಮೆಯೋನನ ಗಂಡುಮಕ್ಕಳು ಯಾರೆಂದರೆ: ನೆಮೂವೇಲ್, ಯಾಮೀನ್, ಯಾರೀದ್, ಜೆರಹ ಮತ್ತು ಸೌಲ.
1 ಪೂರ್ವಕಾಲವೃತ್ತಾ 4 : 25 (ERVKN)
ಸೌಲನ ಮಗನು ಶಲ್ಲುಮ. ಶಲ್ಲುಮನ ಮಗನು ಮಿಬ್ಸಾಮ್; ಮಿಬ್ಸಾಮನ ಮಗನು ಮಿಷ್ಮ.
1 ಪೂರ್ವಕಾಲವೃತ್ತಾ 4 : 26 (ERVKN)
ಮಿಷ್ಮನ ಮಗನು ಹಮ್ಮೂವೇಲ. ಹಮ್ಮೂವೇಲನ ಮಗನು. ಜಕ್ಕೂರ್. ಜಕ್ಕೂರನ ಮಗನು ಶಿಮ್ಮೀ.
1 ಪೂರ್ವಕಾಲವೃತ್ತಾ 4 : 27 (ERVKN)
ಶಿಮ್ಮೀಗೆ ಹದಿನಾರು ಮಂದಿ ಗಂಡುಮಕ್ಕಳೂ ಆರು ಮಂದಿ ಹೆಣ್ಣುಮಕ್ಕಳೂ ಇದ್ದರು. ಶಿಮ್ಮೀಯ ಸಹೋದರರಿಗೆ ಹೆಚ್ಚು ಮಕ್ಕಳಿರಲಿಲ್ಲ. ಇವರ ಸಂತತಿಯವರ ಸಂಖ್ಯೆಯು ಯೆಹೂದದ ಸಂತತಿಯವರಷ್ಟು ಹೆಚ್ಚಾಗಿರಲಿಲ್ಲ.
1 ಪೂರ್ವಕಾಲವೃತ್ತಾ 4 : 28 (ERVKN)
ಶಿಮ್ಮಿಯ ಗಂಡುಮಕ್ಕಳು ಬೇರ್ಷೆಬ, ಮೋಲಾದ್, ಹಚರ್ ಷೂವಾಲ್,
1 ಪೂರ್ವಕಾಲವೃತ್ತಾ 4 : 29 (ERVKN)
1 ಪೂರ್ವಕಾಲವೃತ್ತಾ 4 : 30 (ERVKN)
ಬೆತೂವೇಲ್, ಹೊರ್ಮ, ಚಿಕ್ಲಗ್,
1 ಪೂರ್ವಕಾಲವೃತ್ತಾ 4 : 31 (ERVKN)
ಬೇತ್ಮರ್ಕಾಬೋತ್, ಹಚರ್ ಸೂಸೀಮ್, ಬೇತ್ಬಿರೀ ಮತ್ತು ಶಾರಯಿಮ್ ಊರುಗಳಲ್ಲಿ ವಾಸಿಸಿದರು. ದಾವೀದನು ಅರಸನಾಗುವ ತನಕ ಅವರು ಆ ಊರುಗಳಲ್ಲಿ ನೆಲೆಸಿದರು.
1 ಪೂರ್ವಕಾಲವೃತ್ತಾ 4 : 32 (ERVKN)
ಈ ಪಟ್ಟಣಗಳ ಹತ್ತಿರವಿರುವ ಐದು ಹಳ್ಳಿಗಳು ಯಾವುವೆಂದರೆ: ಏಟಾಮ್, ಅಯಿನ್, ರಿಮ್ಮೋನ್, ತೋಕೆನ್ ಮತ್ತು ಆಷಾನ್.
1 ಪೂರ್ವಕಾಲವೃತ್ತಾ 4 : 33 (ERVKN)
ಬೇರೆ ಹಳ್ಳಿಗಳು ಬಾಲ್ ತನಕವೂ ಇದ್ದವು. ಅವರು ವಾಸವಾಗಿದ್ದದ್ದು ಅಲ್ಲಿಯೇ. ಇದಲ್ಲದೆ ಅವರು ತಮ್ಮ ವಂಶದ ಚರಿತ್ರೆಯನ್ನೂ ಬರೆದಿಟ್ಟರು.
1 ಪೂರ್ವಕಾಲವೃತ್ತಾ 4 : 34 (ERVKN)
(34-38) ಅವರ ಕುಲಪ್ರಧಾನರು ಯಾರೆಂದರೆ: ಮೊಷೋಬಾಬ್, ಯಮ್ಲೇಕ್, ಅಮಚ್ಯನ ಮಗನಾದ ಯೋಷ, ಯೋವೇಲ್, ಯೇಹೂ (ಯೇಹೂವು ಯೊಷಿಬ್ಯನ ಮಗ, ಸೆರಾಯನ ಮೊಮ್ಮಗ ಮತ್ತು ಅಸಿಯೇಲನ ಮರಿಮಗ). ಎಲ್ಯೋವೇನೈ, ಯಾಕೋಬ, ಯೆಷೋಹಾಮ, ಅಸಾಯ, ಆದೀಯೇಲ್, ಯೆಸೀಮಿಯೇಲ್, ಬೆನಾಯ ಮತ್ತು ಶಿಷ್ಪಿಯನ ಮಗನಾದ ಜೀಜ. ಶಿಪ್ಪಿಯು ಅಲ್ಲೋನನ ಮಗನು; ಅಲ್ಲೋನನು ಯೆದಾಯನ ಮಗನು; ಯೆದಾಯನು ಶಿಮ್ರಿಯ ಮಗನು; ಶಿಮ್ರಿಯು ಶೆಮಾಯನ ಮಗನು. ಈ ಕುಲದ ಜನರು ಬಹುಸಂಖ್ಯಾತರಾಗಿ ಹೆಚ್ಚಿದರು.
1 ಪೂರ್ವಕಾಲವೃತ್ತಾ 4 : 35 (ERVKN)
1 ಪೂರ್ವಕಾಲವೃತ್ತಾ 4 : 36 (ERVKN)
1 ಪೂರ್ವಕಾಲವೃತ್ತಾ 4 : 37 (ERVKN)
1 ಪೂರ್ವಕಾಲವೃತ್ತಾ 4 : 38 (ERVKN)
1 ಪೂರ್ವಕಾಲವೃತ್ತಾ 4 : 39 (ERVKN)
ಗೆದೋರ್ ಊರಿನ ಹೊರಭಾಗದಲ್ಲಿರುವ ತಗ್ಗಿನ ಪೂರ್ವ ದಿಕ್ಕಿನಲ್ಲಿ ಅವರು ನೆಲೆಸಿದರು. ತಮ್ಮ ದನಕುರಿಗಳಿಗಾಗಿ ಹುಲ್ಲುಗಾವಲನ್ನು ಹುಡುಕಿಕೊಂಡು ಅವರು ಅಲ್ಲಿಗೆ ಹೋಗಿದ್ದರು.
1 ಪೂರ್ವಕಾಲವೃತ್ತಾ 4 : 40 (ERVKN)
ಅಲ್ಲಿ ಫಲವತ್ತಾದ ಭೂಮಿಯನ್ನೂ ಹಸಿರು ಹುಲ್ಲುಗಾವಲನ್ನೂ ಕಂಡು ಅಲ್ಲಿಯೇ ನೆಲೆಸಿದರು. ಆ ಪ್ರದೇಶವು ಪ್ರಶಾಂತವಾಗಿತ್ತು. ಹಿಂದಿನ ಕಾಲದಲ್ಲಿ ಹಾಮನ ಸಂತತಿಯವರು ಅಲ್ಲಿ ನೆಲೆಸಿದ್ದರು.
1 ಪೂರ್ವಕಾಲವೃತ್ತಾ 4 : 41 (ERVKN)
ಯೆಹೂದದ ಅರಸನಾಗಿದ್ದ ಹಿಜ್ಕೀಯನ ಕಾಲದಲ್ಲಿ ಇದು ಆಯಿತು. ಇವರು ಗೆದೋರಿಗೆ ಬಂದು ಹಾಮನ ಸಂತತಿಯವರೊಂದಿಗೆ ಯುದ್ಧಮಾಡಿ ಅವರ ಗುಡಾರಗಳನ್ನು ನಾಶಮಾಡಿದರು. ಅಲ್ಲದೆ ಮೆಗೂನ್ಯರ ವಿರುದ್ಧವಾಗಿ ಯುದ್ಧಮಾಡಿ ಅಲ್ಲಿ ನೆಲೆಸಿದರು. ಇವರು ಮೆಗೂನ್ಯರನ್ನೆಲ್ಲಾ ನಾಶಮಾಡಿದರು. ಇಂದಿನವರೆಗೂ ಮೆಗೂನ್ಯರಲ್ಲಿ ಯಾರೂ ಉಳಿದಿಲ್ಲ. ಹೀಗೆ ಆ ಸ್ಥಳದಲ್ಲಿ ಅವರು ನೆಲೆಸಿದರು; ಯಾಕೆಂದರೆ ಅವರ ಪಶುಗಳಿಗೆ ಅಲ್ಲಿ ಸಾಕಷ್ಟು ಹುಲ್ಲಿತ್ತು.
1 ಪೂರ್ವಕಾಲವೃತ್ತಾ 4 : 42 (ERVKN)
ಸಿಮೆಯೋನನ ಕುಲದ ಐನೂರು ಮಂದಿ ಸೇಯೀರ್ ಬೆಟ್ಟಪ್ರಾಂತ್ಯಕ್ಕೆ ಹೋದರು. ಇಷ್ಷೀಯ ಗಂಡುಮಕ್ಕಳು ಈ ಗುಂಪಿನ ನಾಯಕರಾಗಿದ್ದರು. ಅವರು ಯಾರೆಂದರೆ: ಪೆಲಟ್ಯ, ನೆಗರ್ಯ, ರೆಫಾಯ ಮತ್ತು ಉಜ್ಜೀಯೇಲ್. ಅಲ್ಲಿ ವಾಸಿಸುವ ಜನರೊಂದಿಗೆ ಇವರು ಕಾದಾಡಿದರು.
1 ಪೂರ್ವಕಾಲವೃತ್ತಾ 4 : 43 (ERVKN)
ಆಗ ಅಲ್ಲಿ ಸ್ವಲ್ಪವೇ ಮಂದಿ ಅಮಾಲೇಕ್ಯರು ವಾಸಿಸುತ್ತಿದ್ದರು. ಈ ಸಿಮೆಯೋನರು ಅವರನ್ನು ಕೊಂದು ಆ ಸ್ಥಳದಲ್ಲಿ ನೆಲೆಸಿದರು. ಇಂದಿನವರೆಗೂ ಸಿಮೆಯೋನರು ಅಲ್ಲಿ ನೆಲೆಸಿದ್ದಾರೆ.
❮
❯