1 ಪೂರ್ವಕಾಲವೃತ್ತಾ 25 : 1 (ERVKN)
{ಗಾಯಕವೃಂದ} [PS] ದಾವೀದನೂ ಸೇನಾಪತಿಗಳೂ ಆಸಾಫನ ಸಂತತಿಯವರನ್ನು ವಿಶೇಷವಾದ ಸೇವೆಗೆ ಪ್ರತ್ಯೇಕಿಸಿದರು. ಆಸಾಫನ ಗಂಡುಮಕ್ಕಳು ಹೇಮಾನ್ ಮತ್ತು ಯೆದುತೂನ್. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸುತ್ತಾ ದೇವರ ಸಂದೇಶವನ್ನು ಪ್ರವಾದಿಸುವುದೇ ಇವರ ಸೇವೆಯಾಗಿತ್ತು. ಈ ರೀತಿಯಾಗಿ ದೇವರ ಸೇವೆಯನ್ನು ಮಾಡಿದವರು ಯಾರೆಂದರೆ:
1 ಪೂರ್ವಕಾಲವೃತ್ತಾ 25 : 2 (ERVKN)
ಆಸಾಫನ ಸಂತತಿಯಲ್ಲಿ: ಜಕ್ಕೂರ, ಯೋಸೇಫ್, ನೆತನ್ಯ ಮತ್ತು ಅಶರೇಲ, ಅರಸನಾದ ದಾವೀದನು ಆಸಾಫನನ್ನು ಪ್ರವಾದಿಸುವುದಕ್ಕಾಗಿ ಆರಿಸಿಕೊಂಡನು. ಆಸಾಫನು ತನ್ನ ಮಕ್ಕಳಿಗೂ ಮಾರ್ಗದರ್ಶನ ನೀಡಿದನು.
1 ಪೂರ್ವಕಾಲವೃತ್ತಾ 25 : 3 (ERVKN)
ಯೆದುತೂನನ ಸಂತತಿಯವರಲ್ಲಿ: ಗೆದಲ್ಯ, ಜೇರಿ, ಯೆಶಾಯ, ಶಿಮ್ಮೀ, ಹಷಬ್ಯ ಮತ್ತು ಮತ್ತಿತ್ಯ. ಒಟ್ಟು ಅವನ ಆರು ಮಂದಿ ಮಕ್ಕಳು ತಮ್ಮ ತಂದೆಯಾದ ಯೆದುತೂನನೊಂದಿಗೆ ಹಾರ್ಪ್ ವಾದ್ಯಗಳನ್ನು ಬಾರಿಸಿ ದೇವರ ಸಂದೇಶವನ್ನು ತಿಳಿಸಿದರು ಮತ್ತು ದೇವರಿಗೆ ಕೃತಜ್ಞತಾಸ್ತುತಿಯನ್ನು ಅರ್ಪಿಸಿದರು.
1 ಪೂರ್ವಕಾಲವೃತ್ತಾ 25 : 4 (ERVKN)
ಹೇಮಾನನ ಸಂತತಿಯವರಲ್ಲಿ ಗಾಯನವೃಂದದಲ್ಲಿ ಸೇವೆ ಮಾಡಿದವರು ಯಾರೆಂದರೆ: ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೂಬಾಯೇಲ್ ಮತ್ತು ಯೆರೀಮೋತ; ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ ಮತ್ತು ರೋಮಮ್ತಿ ಯೆಜೆರ್; ಯೊಷ್ಬೆಕಾಷ, ಮಲ್ಲೋತೀ, ಹೋತೀರ್ ಮತ್ತು ಮಹಜೀಯೋತ್.
1 ಪೂರ್ವಕಾಲವೃತ್ತಾ 25 : 5 (ERVKN)
ಇವರೆಲ್ಲರೂ ಹೇಮಾನನ ಮಕ್ಕಳು. ಹೇಮಾನನು ದಾವೀದನ ಪ್ರವಾದಿಯಾಗಿದ್ದನು. ಅವನನ್ನು ಬಲಿಷ್ಠನನ್ನಾಗಿ ಮಾಡುವುದಾಗಿ ದೇವರು ವಾಗ್ದಾನ ಮಾಡಿದ್ದನು. ಆದ್ದರಿಂದ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳೂ ಮೂವರು ಹೆಣ್ಣುಮಕ್ಕಳೂ ಹುಟ್ಟಿದರು. [PS]
1 ಪೂರ್ವಕಾಲವೃತ್ತಾ 25 : 6 (ERVKN)
ಹೇಮಾನನು ತನ್ನ ಮಕ್ಕಳೆಲ್ಲರನ್ನು ದೇವಾಲಯದಲ್ಲಿ ಹಾಡುವದಕ್ಕಾಗಿ ಬಳಸಿಕೊಂಡನು. ಅವರು ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ತಾಳಗಳನ್ನೂ ಬಾರಿಸಿದರು. ಹೀಗೆ ದೇವಾಲಯದಲ್ಲಿ ಸೇವೆಮಾಡುವುದಕ್ಕಾಗಿ ಅರಸನಾದ ದಾವೀದನು ಅವರನ್ನು ಆರಿಸಿಕೊಂಡನು.
1 ಪೂರ್ವಕಾಲವೃತ್ತಾ 25 : 7 (ERVKN)
ಅವರೂ ಅವರ ಸಂಬಂಧಿಕರೂ ಹಾಡುಗಳನ್ನು ಹಾಡಲು ತರಬೇತಿ ಹೊಂದಿದವರಾಗಿದ್ದರು. ಒಟ್ಟು ಇನ್ನೂರ ಎಂಭತ್ತೆಂಟು ಮಂದಿ ಗಾಯಕರು ದೇವರಿಗೆ ಸ್ತುತಿಗೀತೆ ಹಾಡಲು ತರಬೇತಿ ಹೊಂದಿದವರಾಗಿದ್ದರು.
1 ಪೂರ್ವಕಾಲವೃತ್ತಾ 25 : 8 (ERVKN)
ಪ್ರತಿಯೊಬ್ಬರಿಗೂ ಕೆಲಸಗಳನ್ನು ಗೊತ್ತುಪಡಿಸಲು ಚೀಟುಹಾಕಿ ನೇಮಕ ಮಾಡಿದರು. ಅವರು ಯಾವ ಪಕ್ಷಪಾತವನ್ನೂ ಮಾಡಲಿಲ್ಲ. ದೊಡ್ಡವರು, ಚಿಕ್ಕವರು, ಉಪಾಧ್ಯಾಯರು, ವಿದ್ಯಾರ್ಥಿಗಳು ಎಂಬ ಬೇಧಭಾವವಿಲ್ಲದೆ ಆರಿಸಲ್ಪಟ್ಟರು.
1 ಪೂರ್ವಕಾಲವೃತ್ತಾ 25 : 9 (ERVKN)
ಮೊದಲನೆಯದಾಗಿ, ಆಸಾಫ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ. ಎರಡನೆಯದಾಗಿ, ಗೆದಲ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 10 (ERVKN)
ಮೂರನೆಯದಾಗಿ, ಜಕ್ಕೂರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 11 (ERVKN)
ನಾಲ್ಕನೆಯದಾಗಿ, ಇಚ್ರೀಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 12 (ERVKN)
ಐದನೆಯದಾಗಿ, ನೆತನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 13 (ERVKN)
ಆರನೆಯದಾಗಿ, ಬುಕ್ಕೀಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 14 (ERVKN)
ಏಳನೆಯದಾಗಿ, ಯೆಸರೇಲನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 15 (ERVKN)
ಎಂಟನೆಯದಾಗಿ, ಯೆಶಾಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 16 (ERVKN)
ಒಂಭತ್ತನೆಯದಾಗಿ, ಮತ್ತನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 17 (ERVKN)
ಹತ್ತನೆಯದಾಗಿ, ಶಿಮ್ಮೀಯನ ಗಂಡುಮಕ್ಕಳಲ್ಲಿ ಮತ್ತು ಅವನ ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 18 (ERVKN)
ಹನ್ನೊಂದನೆಯದಾಗಿ, ಅಜರೇಲನ ಗಂಡುಮಕ್ಕಳಲ್ಲಿ ಮತ್ತು ಅವನ ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 19 (ERVKN)
ಹನ್ನೆರಡನೆಯದಾಗಿ, ಹಷಬ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 20 (ERVKN)
ಹದಿಮೂರನೆಯದಾಗಿ, ಶೂಬಾಯೇಲನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 21 (ERVKN)
ಹದಿನಾಲ್ಕನೆಯದಾಗಿ, ಮತ್ತಿತ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 22 (ERVKN)
ಹದಿನೈದನೆಯದಾಗಿ, ಯೆರೆಮೋತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 23 (ERVKN)
ಹದಿನಾರನೆಯದಾಗಿ, ಹನನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 24 (ERVKN)
ಹದಿನೇಳನೆಯದಾಗಿ, ಯೊಷ್ಬೆಕಾಷನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 25 (ERVKN)
ಹದಿನೆಂಟನೆಯದಾಗಿ, ಹನಾನೀಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 26 (ERVKN)
ಹತ್ತೊಂಭತ್ತನೆಯದಾಗಿ, ಮಲ್ಲೋತಿಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 27 (ERVKN)
ಇಪ್ಪತ್ತನೆಯದಾಗಿ, ಎಲೀಯಾತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 28 (ERVKN)
ಇಪ್ಪತ್ತೊಂದನೆಯದಾಗಿ, ಹೋತೀರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 29 (ERVKN)
ಇಪ್ಪತ್ತೆರಡನೆಯದಾಗಿ, ಗಿದ್ದಲ್ತಿಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 30 (ERVKN)
ಇಪ್ಪತ್ತಮೂರನೆಯದಾಗಿ, ಮಹಜೀಯೋತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
1 ಪೂರ್ವಕಾಲವೃತ್ತಾ 25 : 31 (ERVKN)
ಇಪ್ಪತ್ತನಾಲ್ಕನೆಯದಾಗಿ, ರೋಮಮ್ತಿಯೆಜೆರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31

BG:

Opacity:

Color:


Size:


Font: