1 ಪೂರ್ವಕಾಲವೃತ್ತಾ 23 : 1 (ERVKN)
ದಾವೀದನು ಬಹಳ ಮುದುಕನಾದಾಗ ತನ್ನ ಮಗನಾದ ಸೊಲೊಮೋನನನ್ನು ಇಸ್ರೇಲರ ಅರಸನನ್ನಾಗಿ ಮಾಡಿದನು.
1 ಪೂರ್ವಕಾಲವೃತ್ತಾ 23 : 2 (ERVKN)
ದಾವೀದನು ರಾಜ್ಯದ ಎಲ್ಲಾ ಮುಖಂಡರುಗಳನ್ನೂ ಯಾಜಕರನ್ನೂ ಲೇವಿಯರನ್ನೂ ಕರೆದನು.
1 ಪೂರ್ವಕಾಲವೃತ್ತಾ 23 : 3 (ERVKN)
ಅವನು ಮೂವತ್ತು ವರ್ಷದ ಮತ್ತು ಅದಕ್ಕಿಂತ ಮೇಲ್ಪಟ್ಟ ಲೇವಿಯರನ್ನು ಲೆಕ್ಕಿಸಿದಾಗ ಒಟ್ಟು ಮೂವತ್ತೆಂಟು ಸಾವಿರ ಮಂದಿ ಪುರುಷರಿದ್ದರು.
1 ಪೂರ್ವಕಾಲವೃತ್ತಾ 23 : 4 (ERVKN)
ದಾವೀದನು, “ಇವರಲ್ಲಿ ಇಪ್ಪತ್ನಾಲ್ಕು ಸಾವಿರ ಮಂದಿ ಲೇವಿಯರು ದೇವಾಲಯದ ಕಟ್ಟಡದ ಮೇಲ್ವಿಚಾರಕರಾಗಿಯೂ ಆರು ಸಾವಿರ ಮಂದಿ ಲೇವಿಯರು ನ್ಯಾಯಾಧೀಶರಾಗಿಯೂ ಕಾನೂನು ಪಾಲಕರಾಗಿಯೂ
1 ಪೂರ್ವಕಾಲವೃತ್ತಾ 23 : 5 (ERVKN)
ನಾಲ್ಕು ಸಾವಿರ ಮಂದಿ ಲೇವಿಯರು ದ್ವಾರಪಾಲಕರಾಗಿಯೂ ನಾಲ್ಕು ಸಾವಿರ ಮಂದಿ ಲೇವಿಯರು ಗಾಯಕರಾಗಿಯೂ ಸೇವೆ ಮಾಡಬೇಕು. ನಾನು ಅವರಿಗಾಗಿ ವಿಶೇಷ ವಾದ್ಯಗಳನ್ನು ತಯಾರಿಸಿಟ್ಟಿರುತ್ತೇನೆ. ಅವರು ಅವುಗಳನ್ನು ನುಡಿಸುತ್ತಾ ದೇವರಿಗೆ ಸ್ತೋತ್ರ ಮಾಡಬೇಕು” ಅಂದನು.
1 ಪೂರ್ವಕಾಲವೃತ್ತಾ 23 : 6 (ERVKN)
ದಾವೀದನು ಲೇವಿಯರನ್ನು ಮೂರು ಗುಂಪುಗಳನ್ನಾಗಿ ಮಾಡಿದನು. ಗೇರ್ಷೋನ್ಯರು, ಕೆಹಾತ್ಯರು ಮತ್ತು ಮೆರಾರೀಯರು.
1 ಪೂರ್ವಕಾಲವೃತ್ತಾ 23 : 7 (ERVKN)
ಗೇರ್ಷೋನ್‌ಕುಲದಲ್ಲಿ ಲದ್ದಾನ್ ಮತ್ತು ಶಿಮ್ಮೀ ಎಂಬವರಿದ್ದರು.
1 ಪೂರ್ವಕಾಲವೃತ್ತಾ 23 : 8 (ERVKN)
ಲದ್ದಾನನಿಗೆ ಮೂವರು ಗಂಡುಮಕ್ಕಳು. ಮೊದಲನೆ ಮಗನು ಯೆಹೀಯೇಲ್. ಉಳಿದ ಇನ್ನಿಬ್ಬರು ಜೀತಾಮ್ ಮತ್ತು ಯೋವೇಲ್.
1 ಪೂರ್ವಕಾಲವೃತ್ತಾ 23 : 9 (ERVKN)
ಶಿಮ್ಮೀಯನ ಗಂಡುಮಕ್ಕಳು ಯಾರೆಂದರೆ: ಶೆಲೋಮೋತ್, ಹಜೀಯೇಲ್ ಮತ್ತು ಹಾರಾನ್. ಈ ಮೂವರು ಲದ್ದಾನನ ಸಂತತಿಯವರ ಮುಖಂಡರಾಗಿದ್ದರು.
1 ಪೂರ್ವಕಾಲವೃತ್ತಾ 23 : 10 (ERVKN)
ಶಿಮ್ಮೀಗೆ ನಾಲ್ಕು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಯಹತ್, ಜೀಜ, ಯೆಯೂಷ್ ಮತ್ತು ಬೆರೀಯ.
1 ಪೂರ್ವಕಾಲವೃತ್ತಾ 23 : 11 (ERVKN)
ಯಹತನು ಚೊಚ್ಚಲಮಗನು. ಜೀಜನು ಎರಡನೆಯವನು. ಯೆಯೂಷನಿಗೂ ಬೆರೀಯನಿಗೂ ಹೆಚ್ಚು ಮಕ್ಕಳಿರಲಿಲ್ಲ. ಆದುದರಿಂದ ಅವರಿಬ್ಬರನ್ನು ಒಂದೇ ಕುಟುಂಬವೆಂದು ಲೆಕ್ಕಿಸಲಾಯಿತು.
1 ಪೂರ್ವಕಾಲವೃತ್ತಾ 23 : 12 (ERVKN)
ಕೆಹಾತನಿಗೆ ನಾಲ್ಕು ಮಂದಿ ಗಂಡುಮಕ್ಕಳು: ಅಮ್ರಾಮ್, ಇಚ್ಚಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
1 ಪೂರ್ವಕಾಲವೃತ್ತಾ 23 : 13 (ERVKN)
ಅಮ್ರಾಮನ ಗಂಡುಮಕ್ಕಳು ಯಾರೆಂದರೆ: ಆರೋನ್ ಮತ್ತು ಮೋಶೆ. ಆರೋನನು ಮತ್ತು ಅವನ ಸಂತತಿಯವರು ಮಹಾಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟರು; ಇವರು ಯೆಹೋವನ ಸನ್ನಿಧಿಯಲ್ಲಿ ಸದಾಕಾಲ ಧೂಪ ಸುಡುವುದಕ್ಕಾಗಿಯೂ ಆತನ ಸೇವೆಮಾಡುವುದಕ್ಕಾಗಿಯೂ ಯೆಹೋವನ ಹೆಸರಿನಲ್ಲಿ ಜನರನ್ನು ಸದಾಕಾಲ ಆಶೀರ್ವದಿಸುವುದಕ್ಕಾಗಿಯೂ ಆರಿಸಲ್ಪಟ್ಟರು.
1 ಪೂರ್ವಕಾಲವೃತ್ತಾ 23 : 14 (ERVKN)
ಮೋಶೆಯು ದೇವರ ಮನುಷ್ಯನಾಗಿದ್ದನು. ಅವನ ಮಕ್ಕಳು ಲೇವಿಕುಲದಲ್ಲಿ ಸೇರಿಸಲ್ಪಟ್ಟಿದ್ದರು.
1 ಪೂರ್ವಕಾಲವೃತ್ತಾ 23 : 15 (ERVKN)
ಮೋಶೆಯ ಮಕ್ಕಳು ಯಾರೆಂದರೆ: ಗೇರ್ಷೋಮ್ ಮತ್ತು ಎಲೀಯೆಜೆರ್,
1 ಪೂರ್ವಕಾಲವೃತ್ತಾ 23 : 16 (ERVKN)
ಗೇರ್ಷೋಮನ ಚೊಚ್ಚಲ ಮಗನು ಶೆಬೂವೇಲ.
1 ಪೂರ್ವಕಾಲವೃತ್ತಾ 23 : 17 (ERVKN)
ಎಲೀಯೆಜರನ ಚೊಚ್ಚಲ ಮಗನು ರೆಹಬ್ಯ. ಎಲೀಯೆಜೆರನಿಗೆ ಬೇರೆ ಮಕ್ಕಳಿರಲಿಲ್ಲ. ಆದರೆ ರೆಹಬ್ಯನಿಗೆ ಅನೇಕ ಮಕ್ಕಳಿದ್ದರು.
1 ಪೂರ್ವಕಾಲವೃತ್ತಾ 23 : 18 (ERVKN)
ಇಚ್ಹಾರನ ಚೊಚ್ಚಲಮಗನು ಶೆಲೋಮೋತ್.
1 ಪೂರ್ವಕಾಲವೃತ್ತಾ 23 : 19 (ERVKN)
ಹೆಬ್ರೋನಿನ ಚೊಚ್ಚಲಮಗನು ಯೆರೀಯ. ಎರಡನೆಯ ಮಗನು ಅಮರ್ಯ. ಯಹಜೀಯೇಲನು ಮೂರನೆಯ ಮಗ. ಯೆಕಮ್ಮಾಮನು ನಾಲ್ಕನೆಯ ಮಗ.
1 ಪೂರ್ವಕಾಲವೃತ್ತಾ 23 : 20 (ERVKN)
ಉಜ್ಜೀಯೇಲನ ಚೊಚ್ಚಲಮಗನು ಮೀಕ; ಇಷ್ಷೀಯನು ಅವನ ಎರಡನೆಯ ಮಗ.
1 ಪೂರ್ವಕಾಲವೃತ್ತಾ 23 : 21 (ERVKN)
ಮಹ್ಲೀ ಮತ್ತು ಮೂಷೀ ಮೆರಾರೀಯ ಗಂಡುಮಕ್ಕಳು. ಮಹ್ಲೀಯ ಮಕ್ಕಳು ಯಾರೆಂದರೆ: ಎಲ್ಲಾಜಾರ್ ಮತ್ತು ಕೀಷ್.
1 ಪೂರ್ವಕಾಲವೃತ್ತಾ 23 : 22 (ERVKN)
ಎಲ್ಲಾಜಾರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಹೆಣ್ಣುಮಕ್ಕಳು ಮಾತ್ರವೇ ಇದ್ದರು. ಇವರು ತಮ್ಮ ಸಂಬಂಧಿಕರಲ್ಲಿಯೇ ಮದುವೆಯಾದರು. ಕೀಷನ ಗಂಡುಮಕ್ಕಳು ಅವರ ಸಂಬಂಧಿಕರಾಗಿದ್ದರು.
1 ಪೂರ್ವಕಾಲವೃತ್ತಾ 23 : 23 (ERVKN)
ಮೂಷಿಯ ಗಂಡುಮಕ್ಕಳು ಯಾರೆಂದರೆ: ಮಹ್ಲೀ, ಏದೆರ್ ಮತ್ತು ಯೆರೇಮೋತ್. ಅವನಿಗೆ ಮೂರು ಮಂದಿ ಗಂಡುಮಕ್ಕಳು.
1 ಪೂರ್ವಕಾಲವೃತ್ತಾ 23 : 24 (ERVKN)
ಇವರೇ ಲೇವಿಯರ ಸಂತತಿಯವರು. ಇವರೇ ಆಯಾ ಕುಟುಂಬಗಳ ಪ್ರಧಾನರು. ಇವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಮೇಲ್ಪಟ್ಟವರನ್ನು ಮಾತ್ರ ಲೆಕ್ಕಿಸಲಾಯಿತು. ಅವರು ದೇವಾಲಯದಲ್ಲಿ ಸೇವೆಮಾಡಿದರು.
1 ಪೂರ್ವಕಾಲವೃತ್ತಾ 23 : 25 (ERVKN)
ದಾವೀದನು, “ಇಸ್ರೇಲರ ದೇವರಾದ ಯೆಹೋವನು ತನ್ನ ಜನರಿಗೆ ಸಮಾಧಾನವನ್ನು ಅನುಗ್ರಹಿಸಿದ್ದಾನೆ. ದೇವರು ನಿರಂತರವೂ ಜೆರುಸಲೇಮಿನಲ್ಲಿ ವಾಸಿಸಲು ಬಂದಿರುತ್ತಾನೆ.
1 ಪೂರ್ವಕಾಲವೃತ್ತಾ 23 : 26 (ERVKN)
ಆದುದರಿಂದ ಇನ್ನು ಮುಂದೆ ಲೇವಿಯರಿಗೆ ದೇವದರ್ಶನ ಗುಡಾರವನ್ನಾಗಲೀ ಅದರ ಸಾಮಾಗ್ರಿಗಳನ್ನಾಗಲೀ ಹೊರುವ ಅವಶ್ಯವಿಲ್ಲ” ಎಂದು ಹೇಳಿದ್ದನು.
1 ಪೂರ್ವಕಾಲವೃತ್ತಾ 23 : 27 (ERVKN)
ದಾವೀದನ ಕೊನೇ ಆಜ್ಞೆಯ ಪ್ರಕಾರ ಲೇವಿ ವಂಶದವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಮೇಲ್ಪಟ್ಟವರನ್ನು ಲೆಕ್ಕಿಸಲಾಯಿತು.
1 ಪೂರ್ವಕಾಲವೃತ್ತಾ 23 : 28 (ERVKN)
ಲೇವಿಯರು ಆರೋನನ ಸಂತತಿಯವರಾದ ಯಾಜಕರಿಗೆ ದೇವಾಲಯದಲ್ಲಿ ಸೇವೆಮಾಡಲು ಸಹಾಯ ಮಾಡುತ್ತಿದ್ದರು. ಇದಲ್ಲದೆ ಅವರು ದೇವಾಲಯದ ಹೊರಗಿನ ಅಂಗಳವನ್ನೂ ದೇವಾಲಯದ ಎಡಬಲಗಡೆಗಳಲ್ಲಿದ್ದ ಕೋಣೆಗಳನ್ನೂ ನೋಡಿಕೊಳ್ಳುತ್ತಿದ್ದರು; ಪರಿಶುದ್ಧ ಸಾಮಾಗ್ರಿಗಳನ್ನು ಯಾವಾಗಲೂ ಶುದ್ಧವಾಗಿಡುತ್ತಿದ್ದರು. ಹೀಗೆ ದೇವಾಲಯದ ಸೇವೆಯನ್ನು ಮಾಡುತ್ತಿದ್ದರು.
1 ಪೂರ್ವಕಾಲವೃತ್ತಾ 23 : 29 (ERVKN)
ಮಾತ್ರವಲ್ಲದೆ ಅವರು ಗೋಧಿಹಿಟ್ಟನ್ನು ಅಳೆದು ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ದೇವಾಲಯದೊಳಗಿರುವ ಮೇಜಿನ ಮೇಲೆ ಇಡುತ್ತಿದ್ದರು.
1 ಪೂರ್ವಕಾಲವೃತ್ತಾ 23 : 30 (ERVKN)
ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ದೇವಾಲಯದೊಳಗೆ ಸ್ತುತಿಗೀತೆಗಳನ್ನು ಹಾಡಿ ದೇವರನ್ನು ಮಹಿಮೆಪಡಿಸುತ್ತಿದ್ದರು.
1 ಪೂರ್ವಕಾಲವೃತ್ತಾ 23 : 31 (ERVKN)
ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ಬೇರೆ ವಿಶೇಷ ದಿನಗಳಲ್ಲಿಯೂ ದೇವರಿಗೆ ಸಮರ್ಪಿಸುವ ಸರ್ವಾಂಗ ಹೋಮವನ್ನು ತಯಾರು ಮಾಡುತ್ತಿದ್ದರು. ಪ್ರತಿದಿನ ಎಷ್ಟು ಮಂದಿ ಲೇವಿಯರು ಸೇವೆ ಮಾಡಬೇಕೆಂಬುದನ್ನು ಮೊದಲೇ ಗೊತ್ತುಪಡಿಸಲಾಗಿತ್ತು.
1 ಪೂರ್ವಕಾಲವೃತ್ತಾ 23 : 32 (ERVKN)
ಹೀಗೆ ಲೇವಿಯರು ತಾವು ಮಾಡಬೇಕಾದ ಕೆಲಸಗಳನ್ನೆಲ್ಲಾ ಮಾಡಿದರು. ಅವರು ಪವಿತ್ರ ಗುಡಾರವನ್ನು ಮತ್ತು ಪವಿತ್ರಸ್ಥಳವನ್ನು ನೋಡಿಕೊಂಡರು; ತಮ್ಮ ಸಂಬಂಧಿಕರೂ ಆರೋನನ ಕುಲದವರೂ ಆಗಿದ್ದ ಯಾಜಕರಿಗೆ ಸಹಾಯ ಮಾಡಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32

BG:

Opacity:

Color:


Size:


Font: