ನ್ಯಾಯಸ್ಥಾಪಕರು 1 : 1 (KNV)
ಯೆಹೋಶುವನು ಸತ್ತ ತರುವಾಯ ಆದದ್ದೇನಂದರೆ, ಇಸ್ರಾಯೇಲ್‌ ಮಕ್ಕಳು ಕರ್ತನಿಗೆ--ಕಾನಾನ್ಯರ ಮೇಲೆ ಮೊದಲು ನಮಗಾಗಿ ಯುದ್ಧಕ್ಕೆ ಹೋಗುವವರು ಯಾರು ಎಂದು ಕೇಳಿದರು.
ನ್ಯಾಯಸ್ಥಾಪಕರು 1 : 2 (KNV)
ಅದಕ್ಕೆ ಕರ್ತನು--ಯೂದನು ಹೋಗಲಿ; ಇಗೋ, ನಾನು ಆ ದೇಶವನ್ನು ಅವನ ಕೈಯಲ್ಲಿ ಒಪ್ಪಿಸಿಕೊಟ್ಟಿ ದ್ದೇನೆ ಅಂದನು.
ನ್ಯಾಯಸ್ಥಾಪಕರು 1 : 3 (KNV)
ಯೂದನು ತನ್ನ ಸಹೋದರನಾದ ಸಿಮೆಯೋನನಿಗೆ--ನೀನು ನನ್ನ ಸಂಗಡ ನನ್ನ ಭಾಗಕ್ಕೆ ಬಾ, ಕಾನಾನ್ಯರ ಮೇಲೆ ಯುದ್ಧಮಾಡೋಣ; ನಾನು ಹಾಗೆಯೇ ನಿನ್ನ ಸಂಗಡ ನಿನ್ನ ಭಾಗಕ್ಕೆ ಬರುವೆನು ಅಂದನು. ಹೀಗೆ ಸಿಮೆಯೋನನು ಅವನ ಸಂಗಡ ಹೋದನು.
ನ್ಯಾಯಸ್ಥಾಪಕರು 1 : 4 (KNV)
ಯೂದನು ಹೋದಾಗ ಕರ್ತನು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟನು. ಬೆಜೆಕಿನಲ್ಲಿ ಇವರು ಅವರಲ್ಲಿ ಹತ್ತು ಸಾವಿರ ಜನರನ್ನು ಕೊಂದರು.
ನ್ಯಾಯಸ್ಥಾಪಕರು 1 : 5 (KNV)
ಅವರು ಬೆಜೆಕಿನಲ್ಲಿ ಅದೋನೀಬೆಜೆಕನನ್ನು ಕಂಡು ಅವನಿಗೆ ವಿರೋಧವಾಗಿ ಯುದ್ಧಮಾಡಿ ಅಲ್ಲಿ ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಕೊಂದುಹಾಕಿದರು.
ನ್ಯಾಯಸ್ಥಾಪಕರು 1 : 6 (KNV)
ಆದರೆ ಅದೋನೀಬೆಜೆಕನು ಓಡಿಹೋದದರಿಂದ ಅವನನ್ನು ಹಿಂದಟ್ಟಿ ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿ ಹಾಕಿ ದರು.
ನ್ಯಾಯಸ್ಥಾಪಕರು 1 : 7 (KNV)
ಆಗ ಅದೋನೀಬೆಜೆಕನು--ನಾನು ಕೈಕಾಲು ಗಳ ಹೆಬ್ಬೆರಳುಗಳನ್ನು ಕತ್ತರಿಸಿದ ಎಪ್ಪತ್ತು ಮಂದಿ ಅರಸುಗಳು ನನ್ನ ಮೇಜಿನ ಕೆಳಗೆ ತಮ್ಮ ಆಹಾರ ವನ್ನು ಕೂಡಿಸಿದರು; ನಾನು ಹೇಗೆ ಮಾಡಿದೆನೋ ಹಾಗಾಯೇ ದೇವರು ನನಗೆ ಮುಯ್ಯಿಗೆ ಮುಯ್ಯಿಮಾಡಿದ್ದಾನೆ ಅಂದನು. ಅವನನ್ನು ಯೆರೂಸಲೇಮಿಗೆ ತಕ್ಕೊಂಡು ಬಂದರು; ಅವನು ಅಲ್ಲಿ ಸತ್ತನು.
ನ್ಯಾಯಸ್ಥಾಪಕರು 1 : 8 (KNV)
ಯೂದನ ಮಕ್ಕಳು ಯೆರೂಸಲೇಮಿನ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಕತ್ತಿಯಿಂದ ಹೊಡೆದು ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
ನ್ಯಾಯಸ್ಥಾಪಕರು 1 : 9 (KNV)
ತರುವಾಯ ಯೂದನ ಮಕ್ಕಳು ಬೆಟ್ಟದಲ್ಲಿಯೂ ದಕ್ಷಿಣದಲ್ಲಿಯೂ ತಗ್ಗಿನ ಲ್ಲಿಯೂ ವಾಸಿಸಿದ ಕಾನಾನ್ಯರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೋದರು.
ನ್ಯಾಯಸ್ಥಾಪಕರು 1 : 10 (KNV)
ಯೂದನು ಪೂರ್ವದಲ್ಲಿ ಕಿರ್ಯತರ್ಬ ಎಂಬ ಹೆಸರಿದ್ದ ಹೆಬ್ರೋನಿನಲ್ಲಿ ವಾಸವಾಗಿದ್ದ ಕಾನಾನ್ಯರ ಮೇಲೆ ಹೋಗಿ ಶೇಷೈ, ಅಹೀಮನ್‌, ತಲ್ಮೈರನ್ನು ಕೊಂದುಹಾಕಿದನು.
ನ್ಯಾಯಸ್ಥಾಪಕರು 1 : 11 (KNV)
ಅಲ್ಲಿಂದ ದೆಬೀರಿನಲ್ಲಿ ವಾಸ ವಾಗಿರುವವರಿಗೆ ವಿರೋಧವಾಗಿ ಹೋದರು; ದೆಬೀ ರಿಗೆ ಪೂರ್ವದಲ್ಲಿ ಕಿರ್ಯತ್‌ಸೇಫೆರ್‌ ಎಂಬ ಹೆಸ ರಿತ್ತು.
ನ್ಯಾಯಸ್ಥಾಪಕರು 1 : 12 (KNV)
ಕಾಲೇಬನು--ಕಿರ್ಯತೆಸೇಫೆರನ್ನು ಹೊಡೆದು ತೆಗೆದುಕೊಳ್ಳುವವನಿಗೆ ನನ್ನ ಕುಮಾರ್ತೆಯಾದ ಅಕ್ಷಾ ಳನ್ನು ಹೆಂಡತಿಯಾಗಿ ಕೊಡುವೆನು ಎಂದು ಹೇಳಿದ್ದನು.
ನ್ಯಾಯಸ್ಥಾಪಕರು 1 : 13 (KNV)
ಆಗ ಕಾಲೇಬನ ತಮ್ಮನು ಕೆನಜನ ಮಗನಾದ ಒತ್ನೀಯೇಲನು ಅದನ್ನು ಹಿಡಿದನು. ಆಗ ಅವನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.
ನ್ಯಾಯಸ್ಥಾಪಕರು 1 : 14 (KNV)
ಅವಳು ಅವನ ಬಳಿಗೆ ಹೋಗುವಾಗ ತನ್ನ ತಂದೆಯಿಂದ ಒಂದು ಹೊಲವನ್ನು ಕೇಳುವದಕ್ಕೆ ಅವನನ್ನು ಪ್ರೇರೇಪಿಸಿದವಳಾಗಿ ಕತ್ತೆಯಿಂದ ಇಳಿದಳು; ಕಾಲೇಬನು ಅವಳಿಗೆ--ನಿನಗೆ ಏನು ಬೇಕು ಅಂದನು.
ನ್ಯಾಯಸ್ಥಾಪಕರು 1 : 15 (KNV)
ಅವಳು ಅವನಿಗೆ--ನನಗೆ ಆಶೀರ್ವಾದಕೊಡು; ನೀನು ದಕ್ಷಿಣ ಭೂಮಿಯನ್ನು ನನಗೆ ಕೊಟ್ಟುಬಿಟ್ಟೆ ಯಲ್ಲಾ, ನೀರು ಬುಗ್ಗೆಗಳನ್ನು ಸಹ ಕೊಡು ಅಂದಳು. ಕಾಲೇಬನು ಮೇಲಿನ ಬುಗ್ಗೆಗಳನ್ನೂ ಕೆಳಗಿನ ಬುಗ್ಗೆಗಳನ್ನೂ ಅವಳಿಗೆ ಕೊಟ್ಟನು.
ನ್ಯಾಯಸ್ಥಾಪಕರು 1 : 16 (KNV)
ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು ಯೂದನ ಮಕ್ಕಳ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೂದದ ಅರಣ್ಯಕ್ಕೆ ಬಂದು ಜನರ ಸಂಗಡ ವಾಸವಾಗಿದ್ದರು.
ನ್ಯಾಯಸ್ಥಾಪಕರು 1 : 17 (KNV)
ಯೆಹೂದ್ಯರು ತಮ್ಮ ಸಹೋದರರಾದ ಸಿಮೆ ಯೋನ್ಯರ ಸಂಗಡ ಹೊರಟು ಚೆಫತ್‌ನಲ್ಲಿ ವಾಸವಾಗಿ ರುವ ಕಾನಾನ್ಯರನ್ನು ಕೊಂದು ಆ ಪಟ್ಟಣವನ್ನು ನಿರ್ಮೂಲ ಮಾಡಿದರು. ಆ ಪಟ್ಟಣವು ಹೋರ್ಮಾ ಎಂದು ಕರೆಯಲ್ಪಟ್ಟಿತು.
ನ್ಯಾಯಸ್ಥಾಪಕರು 1 : 18 (KNV)
ಇದಲ್ಲದೆ ಯೂದನು ಗಾಜಾವನ್ನೂ ಅದರ ಮೇರೆಯನ್ನೂ ಅಷ್ಕೆಲೋನನ್ನ್ನೂ ಅದರ ಮೇರೆಯನ್ನೂ ಎಕ್ರೋನನ್ನ್ನೂ ಅದರ ಮೇರೆ ಯನ್ನೂ ತೆಗೆದುಕೊಂಡನು.
ನ್ಯಾಯಸ್ಥಾಪಕರು 1 : 19 (KNV)
ಕರ್ತನು ಯೂದನ ಸಂಗಡ ಇದ್ದದರಿಂದ ಅವನು ಬೆಟ್ಟದ ನಿವಾಸಿಗಳನ್ನು ಹೊರಡಿಸಿಬಿಟ್ಟನು; ಆದರೆ ತಗ್ಗಿನ ನಿವಾಸಿಗಳಿಗೆ ಕಬ್ಬಿ ಣದ ರಥಗಳಿದ್ದದರಿಂದ ಅವನು ಅವರನ್ನು ಹೊರ ಡಿಸಲಾರದೆ ಹೋದನು.
ನ್ಯಾಯಸ್ಥಾಪಕರು 1 : 20 (KNV)
ಮೋಶೆಯು ಹೇಳಿದ ಪ್ರಕಾರ ಅವರು ಹೆಬ್ರೋನನ್ನ್ನು ಕಾಲೇಬನಿಗೆ ಕೊಟ್ಟರು. ಅವನು ಅನಾಕನ ಮೂವರು ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟನು.
ನ್ಯಾಯಸ್ಥಾಪಕರು 1 : 21 (KNV)
ಬೆನ್ಯಾವಿಾನನ ಮಕ್ಕಳು ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲಿಲ್ಲ. ಆದರೆ ಯೆಬೂಸಿಯರು ಈ ದಿನದ ವರೆಗೆ ಬೆನ್ಯಾವಿಾ ನನ ಮಕ್ಕಳ ಸಂಗಡ ವಾಸವಾಗಿದ್ದಾರೆ.
ನ್ಯಾಯಸ್ಥಾಪಕರು 1 : 22 (KNV)
ಇದಲ್ಲದೆ ಯೋಸೇಫನ ಮನೆಯವರು ಬೇತೇಲಿಗೆ ಹೋದರು. ಕರ್ತನು ಅವರ ಸಂಗಡ ಇದ್ದನು.
ನ್ಯಾಯಸ್ಥಾಪಕರು 1 : 23 (KNV)
ಆದರೆ ಮೊದಲು ಲೂಜ್‌ ಎಂದು ಹೆಸರಿದ್ದ ಬೇತೇಲೆಂಬ ಪಟ್ಟಣವನ್ನು ಪಾಳತಿ ನೋಡಲು ಯೋಸೇಫನ ಮನೆಯವರು ಕಳುಹಿಸಿದರು.
ನ್ಯಾಯಸ್ಥಾಪಕರು 1 : 24 (KNV)
ಪಾಳತಿಯವರು ಪಟ್ಟಣದೊಳಗಿಂದ ಬರುವ ಒಬ್ಬ ಮನುಷ್ಯನನ್ನು ಕಂಡು ಅವನಿಗೆ--ದಯಮಾಡಿ ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ನಮಗೆ ತೋರಿಸು; ನಾವು ನಿನಗೆ ಕರುಣೆ ತೋರಿಸುವೆವು ಅಂದರು.
ನ್ಯಾಯಸ್ಥಾಪಕರು 1 : 25 (KNV)
ಅವನು ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ಅವರಿಗೆ ತೋರಿಸಿದಾಗ ಅವರು ಬಂದು ಪಟ್ಟಣವನ್ನು ಕತ್ತಿಯಿಂದ ಹೊಡೆದು ಆ ಮನುಷ್ಯನನ್ನೂ ಅವನ ಸಮಸ್ತ ಕುಟುಂಬವನ್ನೂ ಕಳುಹಿಸಿಬಿಟ್ಟರು.
ನ್ಯಾಯಸ್ಥಾಪಕರು 1 : 26 (KNV)
ಆ ಮನುಷ್ಯನು ಹಿತ್ತಿಯರ ದೇಶಕ್ಕೆ ಹೋಗಿ ಅಲ್ಲಿ ಒಂದು ಪಟ್ಟಣವನ್ನು ಕಟ್ಟಿ ಅದಕ್ಕೆ ಲೂಜ್‌ ಎಂದು ಹೆಸರಿಟ್ಟನು. ಈ ವರೆಗೂ ಅದಕ್ಕೆ ಅದೇ ಹೆಸರು.
ನ್ಯಾಯಸ್ಥಾಪಕರು 1 : 27 (KNV)
ಮನಸ್ಸೆಯವರು ಬೇತ್‌ಷೆಯಾನ್‌ ತಾನಾಕ್‌ ದೋರ್‌ ಇಬ್ಲೆಯಾಮ್‌ ಮೆಗಿದ್ದೋ ಎಂಬ ಪಟ್ಟಣ ಗಳನ್ನು ಅವುಗಳ ಗ್ರಾಮಗಳನ್ನು ಸ್ವಾಧೀನಮಾಡಿ ಕೊಳ್ಳಲಿಲ್ಲ. ಆದದರಿಂದ ಕಾನಾನ್ಯರು ಆ ಪ್ರಾಂತ ಗಳಲ್ಲೇ ವಾಸಿಸುವದಕ್ಕೆ ದೃಢಮಾಡಿದರು.
ನ್ಯಾಯಸ್ಥಾಪಕರು 1 : 28 (KNV)
ಇಸ್ರಾ ಯೇಲ್ಯರು ಬಲಗೊಂಡಾಗ ಅವರನ್ನು ಪೂರ್ಣವಾಗಿ ಹೊರಡಿಸಿಬಿಡದೆ ಕಪ್ಪಕೊಡಲು ಕಾನಾನ್ಯರಿಗೆ ನೇಮಕ ಮಾಡಿದರು.
ನ್ಯಾಯಸ್ಥಾಪಕರು 1 : 29 (KNV)
ಇದಲ್ಲದೆ ಎಫ್ರಾಯಾಮ್‌ ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾ ನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು.
ನ್ಯಾಯಸ್ಥಾಪಕರು 1 : 30 (KNV)
ಜೆಬುಲೂನ್ಯರು ಕಿಟ್ರೋನಿನ ವಾಸಿಗಳನ್ನೂ ನಹಲೋಲಿನ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಅವರಲ್ಲಿ ವಾಸವಾಗಿದ್ದು ಕಪ್ಪ ವನ್ನು ಕೊಡುವವರಾದರು.
ನ್ಯಾಯಸ್ಥಾಪಕರು 1 : 31 (KNV)
ಆಶೇರ್ಯರು ಅಕ್ಕೋವಿನ ವಾಸಿಗಳನ್ನೂ ಚೀದೋನಿನ ವಾಸಿಗಳನ್ನೂ ಅಹ್ಲಾಬ್‌, ಅಕ್ಜೀಬ್‌, ಹೆಲ್ಬಾ, ಅಫೀಕ್‌, ರೆಹೋಬ್‌ ಪಟ್ಟಣ ಗಳ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ.
ನ್ಯಾಯಸ್ಥಾಪಕರು 1 : 32 (KNV)
ಆದರೆ ಆಶೇರ್ಯರು ಅವರನ್ನು ಹೊರಡಿಸಿಬಿಡದೆ ಆ ದೇಶದ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸವಾಗಿದ್ದರು.
ನ್ಯಾಯಸ್ಥಾಪಕರು 1 : 33 (KNV)
ನಫ್ತಾಲ್ಯರು ಬೇತ್‌ಷೆಮೆಷಿನ ವಾಸಿಗಳನ್ನೂ ಬೇತ ನಾತಿನ ವಾಸಿಗಳನ್ನೂ ಹೊರಡಿಸಿಬಿಡದೆ ಆ ದೇಶ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸಿಸಿದ್ದರು. ಆದರೆ ಬೇತ್‌ಷೆಮೆಷ್‌ ಬೇತನಾತನ ಪಟ್ಟಣವಾಸಿಗಳು ಅವರಿಗೆ ಕಪ್ಪಕೊಡುವವರಾದರು.
ನ್ಯಾಯಸ್ಥಾಪಕರು 1 : 34 (KNV)
ಇದಲ್ಲದೆ ಅಮೋರಿಯರು ದಾನನ ಮಕ್ಕಳನ್ನು ತಗ್ಗಿನಲ್ಲಿ ಇಳಿಯಗೊಡದೆ ಬೆಟ್ಟಗಳಿಗೆ ಓಡಿಸಿಬಿಟ್ಟು
ನ್ಯಾಯಸ್ಥಾಪಕರು 1 : 35 (KNV)
ತಾವು ಹರ್‌ಹೆರೆಸ್‌ ಬೆಟ್ಟದಲ್ಲಿಯೂ ಅಯ್ಯಾಲೋನಿ ನಲ್ಲಿಯೂ ಶಾಲ್ಬೀಮಿನಲ್ಲಿಯೂ ವಾಸಿಸಬೇಕೆಂದಿದ್ದರು. ಆದರೆ ಯೋಸೇಫನ ಮನೆಯವರ ಕೈ ಭಾರವಾದದ್ದ ರಿಂದ ಅವರಿಗೆ ಕಪ್ಪಕೊಡುವವರಾದರು.ಹೀಗೆಯೇ ಅಮೋರಿಯರ ಮೇರೆಯು ಅಕ್ರಬ್ಬೀಮು ಹಿಡಿದು ಬಂಡೆಯಿಂದ ಮೇಲ್ಗಡೆಗೆ ಹಾದುಹೋಗುವದಾಗಿತ್ತು.
ನ್ಯಾಯಸ್ಥಾಪಕರು 1 : 36 (KNV)
ಹೀಗೆಯೇ ಅಮೋರಿಯರ ಮೇರೆಯು ಅಕ್ರಬ್ಬೀಮು ಹಿಡಿದು ಬಂಡೆಯಿಂದ ಮೇಲ್ಗಡೆಗೆ ಹಾದುಹೋಗುವದಾಗಿತ್ತು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36

BG:

Opacity:

Color:


Size:


Font: