ಪ್ರಕಟನೆ 8 : 1 (KNV)
ಆತನು ಏಳನೆಯ ಮುದ್ರೆಯನ್ನು ತೆರೆ ದಾಗ ಸುಮಾರು ಅರ್ಧಗಂಟೆ ಹೊತ್ತಿನವರೆಗೂ ಪರಲೋಕದಲ್ಲಿ ನಿಶ್ಯಬ್ದವಾಯಿತು.
ಪ್ರಕಟನೆ 8 : 2 (KNV)
ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ಮಂದಿ ದೂತರನ್ನು ಕಂಡೆನು; ಅವರಿಗೆ ಏಳು ತುತೂರಿಗಳು ಕೊಡಲ್ಪಟ್ಟಿದ್ದವು.
ಪ್ರಕಟನೆ 8 : 3 (KNV)
ಆಮೇಲೆ ಚಿನ್ನದ ಧೂಪದ ಪಾತ್ರೆಯಿದ್ದ ಮತ್ತೊಬ್ಬ ದೂತನು ಬಂದು ಯಜ್ಞವೇದಿಯ ಬಳಿ ಯಲ್ಲಿ ನಿಂತನು; ಸಿಂಹಾಸನದ ಮುಂದೆ ಇದ್ದ ಚಿನ್ನದ ಧೂಪವೇದಿಯ ಮೇಲೆ ಪರಿಶುದ್ಧರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಸಮರ್ಪಿಸುವದಕ್ಕಾಗಿ ಅವನಿಗೆ ಬಹಳ ಧೂಪ ಕೊಡಲ್ಪಟ್ಟಿತು.
ಪ್ರಕಟನೆ 8 : 4 (KNV)
ಆಗ ಧೂಪದ ಹೊಗೆಯು ದೂತನ ಕೈಯೊಳಗಿಂದ ಹೊರಟು ಪರಿಶುದ್ಧರ ಪ್ರಾರ್ಥನೆಗಳೊಂದಿಗೆ ಕೂಡಿ ದೇವರ ಸನ್ನಿಧಾನಕ್ಕೆ ಏರಿಹೋಯಿತು.
ಪ್ರಕಟನೆ 8 : 5 (KNV)
ತರುವಾಯ ಆ ದೇವದೂತನು ಧೂಪದ ಪಾತ್ರೆಯನ್ನು ತೆಗೆದುಕೊಂಡು ಯಜ್ಞವೇದಿಯ ಬೆಂಕಿಯಿಂದ ಅದನ್ನು ತುಂಬಿಸಿ ಭೂಮಿಗೆ ಬಿಸಾಡಿದನು. ಆಗ ವಾಣಿಗಳೂ ಗುಡುಗುಗಳೂ ಮಿಂಚುಗಳೂ ಭೂ ಕಂಪವೂ ಉಂಟಾದವು.
ಪ್ರಕಟನೆ 8 : 6 (KNV)
ಏಳು ತುತೂರಿಗಳಿದ್ದ ಏಳು ಮಂದಿ ದೂತರು ತುತೂರಿಗಳನ್ನೂದುವದಕ್ಕೆ ಸಿದ್ಧಮಾಡಿಕೊಂಡರು.
ಪ್ರಕಟನೆ 8 : 7 (KNV)
ಮೊದಲನೆಯ ದೂತನು ಊದಿದಾಗ ರಕ್ತದಲ್ಲಿ ಕಲಸಿದ್ದ ಆನೆಕಲ್ಲಿನ ಮಳೆಯೂ ಬೆಂಕಿಯೂ ಭೂಮಿಗೆ ಸುರಿಸಲ್ಪಟ್ಟವು; ಮರಗಳೊಳಗೆ ಮೂರರಲ್ಲಿ ಒಂದು ಭಾಗ ಸುಟ್ಟುಹೋಯಿತು; ಹಸುರು ಹುಲ್ಲೆಲ್ಲಾ ಸುಟ್ಟುಹೋಯಿತು.
ಪ್ರಕಟನೆ 8 : 8 (KNV)
ಎರಡನೆಯ ದೂತನು ಊದಿದಾಗ ಬೆಂಕಿಯಿಂದ ಉರಿಯುವ ದೊಡ್ಡ ಬೆಟ್ಟವೋ ಎಂಬಂತಿದ್ದದ್ದು ಸಮುದ್ರದಲ್ಲಿ ಹಾಕಲ್ಪಟ್ಟಿತು. ಆಗ ಸಮುದ್ರದ ಮೂರ ರಲ್ಲಿ ಒಂದು ಭಾಗ ರಕ್ತವಾಯಿತು;
ಪ್ರಕಟನೆ 8 : 9 (KNV)
ಸಮುದ್ರದಲ್ಲಿರುವ ಪ್ರಾಣವಿದ್ದ ಜೀವಿಗಳೊಳಗೆ ಮೂರರಲ್ಲಿ ಒಂದು ಭಾಗ ಸತ್ತುಹೋಯಿತು; ಹಡಗುಗಳೊಳಗೆ ಮೂರರಲ್ಲಿ ಒಂದು ಭಾಗ ನಾಶವಾಯಿತು.
ಪ್ರಕಟನೆ 8 : 10 (KNV)
ಮೂರನೆಯ ದೂತನು ಊದಿದಾಗ ದೀಪ ದಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶ ದಿಂದ ಬಿತ್ತು. ಅದು ನದಿಗಳೊಳಗೆ ಮೂರರಲ್ಲಿ ಒಂದು ಭಾಗದ ಮೇಲೆಯೂ ನೀರಿನ ಒರತೆಗಳ ಮೇಲೆಯೂ ಬಿತ್ತು.
ಪ್ರಕಟನೆ 8 : 11 (KNV)
ಆ ನಕ್ಷತ್ರಕ್ಕೆ ಮಾಚಿಪತ್ರೆ ಎಂದು ಹೆಸರು. ನೀರಿನಲ್ಲಿ ಮೂರರೊಳಗೆ ಒಂದು ಭಾಗ ಮಾಚಿಪತ್ರೆ ಯಾಯಿತು. ಆ ನೀರು ವಿಷವಾದದ್ದರಿಂದ ಮನುಷ್ಯರಲ್ಲಿ ಬಹಳ ಮಂದಿ ಸತ್ತರು.
ಪ್ರಕಟನೆ 8 : 12 (KNV)
ನಾಲ್ಕನೆಯ ದೂತನು ಊದಿದಾಗ ಸೂರ್ಯನ ಮೂರರಲ್ಲಿ ಒಂದು ಭಾಗವೂ ಚಂದ್ರನ ಮೂರರಲ್ಲಿ ಒಂದು ಭಾಗವೂ ನಕ್ಷತ್ರಗಳ ಮೂರರಲ್ಲಿ ಒಂದು ಭಾಗವೂ ಒಡೆಯಲ್ಪಟ್ಟದ್ದರಿಂದ ಮೂರನೇ ಭಾಗವು ಕತ್ತಲಾಯಿತು; ಹಗಲಿನೊಳಗೆ ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಇತ್ತು; ರಾತ್ರಿಯು ಹಾಗೆಯೇ ಆ
ಪ್ರಕಟನೆ 8 : 13 (KNV)
ಆಮೇಲೆ ನಾನು ನೋಡಲಾಗಿ ಇಗೋ, ಒಬ್ಬ ದೂತನು ಆಕಾಶ ಮಧ್ಯದಲ್ಲಿ ಹಾರುತ್ತಾ--ಇನ್ನೂ ಊದಬೇಕಾಗಿರುವ ಮೂವರು ದೂತರ ಮಿಕ್ಕಾದ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿ ಗಳಿಗೆ ಅಯ್ಯೋ, ಅಯ್ಯೋ, ಅಯ್ಯೋ ಎಂದು ಮಹಾ ಶಬ್ದದಿಂದ ಹೇಳುವದನ್ನು ಕೇಳಿದೆನು.
❮
❯
1
2
3
4
5
6
7
8
9
10
11
12
13