ಪ್ರಕಟನೆ 14 : 1 (KNV)
ಆಗ ಇಗೋ, ಕುರಿಮರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರು ವದನ್ನು ನಾನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ ಇದ್ದರು; ಅವರ ಹಣೆಗಳ ಮೇಲೆ ಆತನ ತಂದೆಯ ಹೆಸರು ಬರೆಯ ಲ್ಪಟ್ಟಿತು.
ಪ್ರಕಟನೆ 14 : 2 (KNV)
ಇದಲ್ಲದೆ ಪರಲೋಕದ ಕಡೆಯಿಂದ ಬಹಳ ನೀರುಗಳಂತೆಯೂ ಮಹಾಗುಡುಗಿನಂತೆಯೂ ಇದ್ದ ಶಬ್ದವನ್ನು ನಾನು ಕೇಳಿದೆನು. ತಮ್ಮ ವೀಣೆಗಳನ್ನು ಬಾರಿಸುತ್ತಿದ್ದ ವೀಣೆಗಾರರ ಸ್ವರವನ್ನೂ ನಾನು ಕೇಳಿದೆನು.
ಪ್ರಕಟನೆ 14 : 3 (KNV)
ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡಿನಂತಿದ್ದ ಹಾಡನ್ನು ಅವರು ಹಾಡಿದರು. ಭೂ ಲೋಕದೊಳಗಿಂದ ವಿಮೋಚಿಸಲ್ಪಟ್ಟ ಆ ಲಕ್ಷದ ನಾಲ್ವತ್ತು ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು.
ಪ್ರಕಟನೆ 14 : 4 (KNV)
ಸ್ತ್ರೀಯ ರೊಂದಿಗೆ ಮಲಿನರಾಗದವರು ಇವರೇ. ಯಾಕಂದರೆ ಇವರು ಕನ್ನಿಕೆಯರು. ಕುರಿಮರಿಯಾದಾತನು ಎಲ್ಲಿಗೆ ಹೋದರೂ ಆತನ ಹಿಂದೆ ಹೋಗುವವರು ಇವರೇ. ದೇವರಿಗೂ ಕುರಿಮರಿಯಾದಾತನಿಗೂ ಪ್ರಥಮ ಫಲ ವಾಗಿರುವ ಇವರು ಮನುಷ್ಯರೊಳಗಿಂದ ವಿಮೋಚಿಸ ಲ್ಪಟ್ಟವರು.
ಪ್ರಕಟನೆ 14 : 5 (KNV)
ಇವರ ಬಾಯಲ್ಲಿ ವಂಚನೆ ಸಿಕ್ಕಲಿಲ್ಲ; ಯಾಕಂದರೆ ಇವರು ದೇವರ ಸಿಂಹಾಸನದ ಮುಂದೆ ನಿರ್ದೋಷಿಗಳಾಗಿದ್ದಾರೆ.
ಪ್ರಕಟನೆ 14 : 6 (KNV)
ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜನಾಂಗ ಕ್ಕೂ ಕುಲದವರಿಗೂ ಭಾಷೆಯವರಿಗೂ ಮತ್ತು ಜನ ರಿಗೂ ಸಾರುವದಕ್ಕೆ ನಿತ್ಯವಾದ ಸುವಾರ್ತೆ ಇದ್ದ ಇನ್ನೊಬ್ಬ ದೂತನು ಆಕಾಶದ ಮಧ್ಯದಲ್ಲಿ ಹಾರುವದನ್ನು ನಾನು ಕಂಡೆನು.
ಪ್ರಕಟನೆ 14 : 7 (KNV)
ಅವನು--ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ; ಯಾಕಂದರೆ ಆತನು ನ್ಯಾಯತೀರ್ಪು ಮಾಡುವ ಗಳಿಗೆ ಬಂದದೆ; ಪರಲೋಕವನ್ನೂ ಭೂ ಲೋಕವನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟು ಮಾಡಿದಾತನನ್ನೇ ಆರಾಧಿಸಿರಿ ಎಂದು ಮಹಾ ಶಬ್ದದಿಂದ ಹೇಳಿದನು.
ಪ್ರಕಟನೆ 14 : 8 (KNV)
ಅವನ ಹಿಂದೆ ಇನ್ನೊಬ್ಬ ದೂತನು ಬಂದು--ಬಾಬೆಲೆಂಬ ಆ ಮಹಾನಗರಿಯು ಬಿದ್ದಳು, ಬಿದ್ದಳು; ಯಾಕಂದರೆ ಅವಳು ತನ್ನ ಜಾರತ್ವವೆಂಬ ಕೋಪದ ದ್ರಾಕ್ಷಾರಸವನ್ನು ಸಕಲ ಜನಾಂಗಗಳು ಕುಡಿಯುವಂತೆ ಮಾಡಿದಳು ಎಂದು ಹೇಳಿದನು.
ಪ್ರಕಟನೆ 14 : 9 (KNV)
ತರುವಾಯ ಮೂರನೆಯ ದೂತನು ಅವರನ್ನು ಹಿಂಬಾಲಿಸಿ--ಯಾರಾದರೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ ತನ್ನ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿ ಕೊಂಡರೆ
ಪ್ರಕಟನೆ 14 : 10 (KNV)
ಅಂಥವನು ದೇವರ ಕೋಪವೆಂಬ ಪಾತ್ರೆ ಯಲ್ಲಿ ಏನೂ ಬೆರಸದೆ ಹಾಕಿದ ಆತನ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೂತರ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದ ಮತ್ತು ಗಂಧಕದಿಂದ ಯಾತನೆಪಡು ವನು.
ಪ್ರಕಟನೆ 14 : 11 (KNV)
ಅವರ ಯಾತನೆಯ ಹೊಗೆಯು ಯುಗ ಯುಗಾಂತರಗಳಲ್ಲಿ ಏರುತ್ತಿರುವದು. ಆ ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡುವವರೂ ಅದರ ಹೆಸರಿನ ಗುರುತನ್ನು ಹಾಕಿಸಿಕೊಂಡಿರುವವರೂ ಹಗಲಿ ರುಳು ವಿಶ್ರಾಂತಿಯಿಲ್ಲದೆ ಇರುವರು ಎಂದು ಮಹಾ ಶಬ್ದದಿಂದ ಹೇಳಿದನು.
ಪ್ರಕಟನೆ 14 : 12 (KNV)
ದೇವರ ಆಜ್ಞೆ ಗಳನ್ನೂ ಯೇಸುವಿನ ಮೇಲಣ ನಂಬಿಕೆಯನ್ನೂ ಕಾಪಾಡುವ ಪರಿಶುದ್ಧರ ತಾಳ್ಮೆಯು ಇದರಲ್ಲಿ ಇರುತ್ತದೆ.
ಪ್ರಕಟನೆ 14 : 13 (KNV)
ಪರಲೋಕದಿಂದ ಬಂದ ಶಬ್ದವನ್ನು ನಾನು ಕೇಳಿ ದೆನು. ಅದು--ಇಂದಿನಿಂದ ಕರ್ತನಲ್ಲಿ ಯಾರಾರು ಸಾಯುವರೋ ಆ ಸತ್ತವರು ಧನ್ಯರು ಎಂಬದಾಗಿ ಬರೆ ಎಂದು ನನಗೆ ಹೇಳಿತು; ಹೌದು, ಅವರು ತಮ್ಮ ಪ್ರಯಾಸಗಳಿಂದ ವಿಶ್ರಮಿಸಿಕೊಳ್ಳುವರು, ಅವರ ಕ್ರಿಯೆಗಳು ಅವರನ್ನು ಹಿಂಬಾಲಿಸುತ್ತವೆ ಎಂದು ಆತ
ಪ್ರಕಟನೆ 14 : 14 (KNV)
ಆಗ ಒಂದು ಬಿಳೀ ಮೇಘವನ್ನೂ ಆ ಮೇಘದ ಮೇಲೆ ಮನುಷ್ಯ ಕುಮಾರನಂತಿದ್ದ ಒಬ್ಬಾತನು ಕೂತಿರುವುದನ್ನೂ ನಾನು ಕಂಡೆನು; ಆತನ ತಲೆಯ ಮೇಲೆ ಬಂಗಾರದ ಕಿರೀಟವಿತ್ತು; ಆತನ ಕೈಯಲ್ಲಿ ಹದವಾದ ಕುಡುಗೋಲು ಇತ್ತು.
ಪ್ರಕಟನೆ 14 : 15 (KNV)
ಆಗ ಮತ್ತೊಬ್ಬ ದೂತನು ಆಲಯದೊಳಗಿಂದ ಬಂದು ಮೇಘದ ಮೇಲೆ ಕೂತಿದ್ದಾತನಿಗೆ--ನಿನಗೆ ಕೊಯ್ಯುವ ಕಾಲ ಬಂದಿರುವದರಿಂದ ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ; ಯಾಕಂದರೆ ಭೂಮಿಯ ಪೈರು ಮಾಗಿದೆ ಎಂದು ಮಹಾಶಬ್ದದಿಂದ ಕೂಗಿದನು.
ಪ್ರಕಟನೆ 14 : 16 (KNV)
ಮೇಘದ ಮೇಲೆ ಕೂತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದನು; ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.
ಪ್ರಕಟನೆ 14 : 17 (KNV)
ಮತ್ತೊಬ್ಬ ದೂತನು ಪರಲೋಕದಲ್ಲಿರುವ ದೇವಾಲಯದೊಳಗಿಂದ ಬಂದನು; ಅವನಲ್ಲಿಯೂ ಹದವಾದ ಕುಡುಗೋಲು ಇತ್ತು.
ಪ್ರಕಟನೆ 14 : 18 (KNV)
ಬೆಂಕಿಯ ಮೇಲೆ ಅಧಿಕಾರವಿದ್ದ ಇನ್ನೊಬ್ಬ ದೂತನು ಯಜ್ಞವೇದಿಯ ಬಳಿಯಿಂದ ಬಂದು ಆ ಹದವಾದ ಕುಡುಗೋಲು ಇದ್ದವನಿಗೆ--ನಿನ್ನ ಹದವಾದ ಕುಡುಗೋಲನ್ನು ಹಾಕಿ ಭೂಮಿಯ ದ್ರಾಕ್ಷೇ ಗೊಂಚಲುಗಳನ್ನು ಕೂಡಿಸು; ಯಾಕಂದರೆ ಅದರ ಹಣ್ಣುಗಳು ಪೂರಾ ಮಾಗಿವೆ ಎಂದು ಮಹಾಶಬ್ದದಿಂದ ಕೂಗಿ ಹೇಳಿದನು.
ಪ್ರಕಟನೆ 14 : 19 (KNV)
ಆಗ ಆ ದೂತನು ತನ್ನ ಕುಡುಗೋಲನ್ನು ಭೂಮಿಗೆ ಹಾಕಿ ಭೂಮಿಯ ದ್ರಾಕ್ಷೇಹಣ್ಣನ್ನು ಕೂಡಿಸಿ ದೇವರ ರೌದ್ರದ ದೊಡ್ಡ ದ್ರಾಕ್ಷೇತೊಟ್ಟಿಯಲ್ಲಿ ಹಾಕಿದನು.
ಪ್ರಕಟನೆ 14 : 20 (KNV)
ಆ ದ್ರಾಕ್ಷೇ ತೊಟ್ಟಿಯನ್ನು ಪಟ್ಟಣದ ಹೊರಗೆ ತುಳಿದರು. ಆ ತೊಟ್ಟಿಯೊಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಇನ್ನೂರು ಮೈಲಿ ದೂರ ಹರಿಯಿತು.
❮
❯