ಪ್ರಕಟನೆ 13 : 1 (KNV)
ಆಗ ನಾನು ಸಮುದ್ರದ ಮರಳಿನ ಮೇಲೆ ನಿಂತೆನು, ಸಮುದ್ರದೊಳಗಿಂದ ಮೃಗವು ಏರಿ ಬರುವದನ್ನು ಕಂಡೆನು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಕೊಂಬುಗಳ ಮೇಲೆ ಹತ್ತು ಕಿರೀಟಗಳೂ ತಲೆಗಳ ಮೇಲೆ ದೂಷಣೆಯ ನಾಮವೂ ಇದ್ದವು.
ಪ್ರಕಟನೆ 13 : 2 (KNV)
ನಾನು ಕಂಡ ಮೃಗವು ಚಿರತೆಯಂತಿತ್ತು; ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಂತೆಯೂ ಇದ್ದವು; ಅದಕ್ಕೆ ಘಟಸರ್ಪವು ತನ್ನ ಶಕ್ತಿಯನ್ನೂ ತನ್ನ ಆಸನವನ್ನು ಮಹಾ ಅಧಿಕಾರವನ್ನೂ ಕೊಟ್ಟಿತು.
ಪ್ರಕಟನೆ 13 : 3 (KNV)
ಅದರ ತಲೆಗಳಲ್ಲಿ ಒಂದು ಗಾಯ ಹೊಂದಿ ಸಾಯುವಹಾಗಿರುವದನ್ನು ನಾನು ಕಂಡೆನು. ಮರಣಕರವಾದ ಆ ಗಾಯವು ವಾಸಿಯಾಯಿತು; ಆಗ ಭೂಲೋಕದವರೆಲ್ಲರು ಆ ಮೃಗದ ವಿಷಯವಾಗಿ ಆಶ್ಚರ್ಯಪಟ್ಟರು.
ಪ್ರಕಟನೆ 13 : 4 (KNV)
ಘಟ ಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟವ ನಾದ್ದರಿಂದ ಅವರು ಆ ಘಟಸರ್ಪನನ್ನು ಆರಾಧನೆ ಮಾಡುವವರಾದರು. ಇದಲ್ಲದೆ ಆ ಮೃಗವನ್ನು ಆರಾ ಧಿಸಿ--ಈ ಮೃಗಕ್ಕೆ ಸಮಾನರು ಯಾರು? ಇದರ ಮೇಲೆ ಯುದ್ಧ ಮಾಡುವದಕ್ಕೆ ಯಾರು ಶಕ್ತರು ಅಂದರು.
ಪ್ರಕಟನೆ 13 : 5 (KNV)
ಬಡಾಯಿ ಮಾತುಗಳನ್ನೂ ದೂಷಣೆಯ ಮಾತು ಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು. ನಾಲ್ವತ್ತೆರಡು ತಿಂಗಳುಗಳವರೆಗೆ ಮುಂದುವರಿಯುವ ಹಾಗೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು.
ಪ್ರಕಟನೆ 13 : 6 (KNV)
ಆಗ ಅದು ದೇವರ ಹೆಸರನ್ನೂ ಆತನ ಗುಡಾರವನ್ನೂ ಪರಲೋಕದಲ್ಲಿ ವಾಸವಾಗಿರುವವರನ್ನೂ ದೂಷಿಸಿ ದ್ದಲ್ಲದೆ ದೇವರಿಗೆ ವಿರೋಧವಾದ ದೂಷಣೆಗೆ ತನ್ನ ಬಾಯಿಯನ್ನು ತೆರೆಯಿತು.
ಪ್ರಕಟನೆ 13 : 7 (KNV)
ಇದಲ್ಲದೆ ಪರಿಶುದ್ಧರ ಮೇಲೆ ಯುದ್ಧಮಾಡಿ ಅವರನ್ನು ಗೆಲ್ಲುವಂತೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು. ಸಕಲ ಕುಲ ಭಾಷೆ ಜನಾಂಗಗಳ ಮೇಲೆ ಅವನಿಗೆ ಅಧಿಕಾರವು ಕೊಡಲ್ಪಟ್ಟಿತು.
ಪ್ರಕಟನೆ 13 : 8 (KNV)
ಜಗತ್ತಿಗೆ ಅಸ್ತಿವಾರ ಹಾಕಿದಂದಿನಿಂದ ಯಾರಾರ ಹೆಸರುಗಳು ವಧಿಸಲ್ಪಟ್ಟ ಕುರಿಮರಿಯಾದಾ ತನ ಜೀವಗ್ರಂಥದಲ್ಲಿ ಬರೆದಿರುವದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಮೃಗವನ್ನು ಆರಾಧಿಸುವರು.
ಪ್ರಕಟನೆ 13 : 9 (KNV)
ಕಿವಿಯುಳ್ಳವನು ಕೇಳಲಿ.
ಪ್ರಕಟನೆ 13 : 10 (KNV)
ಸೆರೆಗೆ ನಡಿಸುವವನು ಸೆರೆಗೆ ಹೋಗುವನು; ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಕೊಲೆಯಾಗಬೇಕು. ಇದರಲ್ಲಿ ಪರಿ ಶುದ್ಧರ ತಾಳ್ಮೆಯೂ ನಂಬಿಕೆಯೂ ಇರುತ್ತದೆ.
ಪ್ರಕಟನೆ 13 : 11 (KNV)
ಮತ್ತೊಂದು ಮೃಗವು ಭೂಮಿಯೊಳಗಿಂದ ಬರು ವದನ್ನು ನಾನು ಕಂಡೆನು. ಇದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು; ಇದು ಘಟಸರ್ಪದಂತೆ ಮಾತನಾಡಿತು.
ಪ್ರಕಟನೆ 13 : 12 (KNV)
ಇದು ಮೊದಲನೆಯ ಮೃಗದ ಅಧಿಕಾರವನ್ನೆಲ್ಲಾ ಅದರ ಮುಂದೆಯೇ ನಡಿಸುತ್ತದೆ. ಮರಣಕರವಾದ ಗಾಯ ವಾಸಿಯಾದ ಮೊದಲನೆಯ ಮೃಗಕ್ಕೆ ಭೂಲೋಕವೂ ಭೂನಿವಾಸಿಗಳೂ ಆರಾಧಿಸು ವಂತೆ ಇದು ಮಾಡುವಂಥದ್ದಾಗಿದೆ.
ಪ್ರಕಟನೆ 13 : 13 (KNV)
ಇದು ಮಹ ತ್ತಾದ ಸೂಚಕಕಾರ್ಯಗಳನ್ನು ನಡಿಸುವಂಥದ್ದಾಗಿ ಜನರ ಮುಂದೆ ಬೆಂಕಿಯು ಆಕಾಶದಿಂದ ಭೂಮಿಗೆ ಇಳಿದು ಬರುವಂತೆ ಮಾಡುತ್ತದೆ.
ಪ್ರಕಟನೆ 13 : 14 (KNV)
ಮೃಗದ ಮುಂದೆ ಇಂಥಾ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರ ವನ್ನು ಹೊಂದಿ ಭೂಮಿಯ ಮೇಲೆ ವಾಸಿಸುವ ಜನರನ್ನು ಮೋಸಗೊಳಿಸುವದಲ್ಲದೆ ಕತ್ತಿಯಿಂದ ಗಾಯಹೊಂದಿ ಬದುಕಿದ ಮೃಗಕ್ಕಾಗಿ ವಿಗ್ರಹವನ್ನು ಮಾಡಿಕೊಳ್ಳ ಬೇಕೆಂದು ಅವರಿಗೆ ಹೇಳುತ್ತದೆ.
ಪ್ರಕಟನೆ 13 : 15 (KNV)
ಮೃಗದ ವಿಗ್ರಹವು ಮಾತನಾಡುವಂತೆಯೂ ಆ ಮೃಗದ ವಿಗ್ರಹವನ್ನು ಯಾರಾರು ಆರಾಧಿಸುವದಿಲ್ಲವೋ ಅವರನ್ನು ಕೊಲ್ಲಿಸು ವಂತೆಯೂ ಆ ಮೃಗದ ವಿಗ್ರಹಕ್ಕೆ ಜೀವ ಕೊಡುವ ಅಧಿಕಾರವು ಅದಕ್ಕೆ ಇತ್ತು.
ಪ್ರಕಟನೆ 13 : 16 (KNV)
ಅದು ಚಿಕ್ಕವರು ದೊಡ್ಡ ವರು ಐಶ್ವರ್ಯವಂತರು ಬಡವರು ಸ್ವತಂತ್ರರು ದಾಸರು ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ ಹಣೆಗಳ ಮೇಲಾಗಲಿ ಗುರುತು ಹೊಂದಬೇಕೆಂತಲೂ
ಪ್ರಕಟನೆ 13 : 17 (KNV)
ಆ ಗುರುತಾಗಲಿ ಮೃಗದ ಹೆಸರಾಗಲಿ ಅದರ ಹೆಸರಿನ ಅಂಕೆಯಾಗಲಿ ಇಲ್ಲದವನು ಕ್ರಯ ವಿಕ್ರಯಗಳನ್ನು ಮಾಡದಂತೆಯೂ ಅದು ಮಾಡುತ್ತದೆ.
ಪ್ರಕಟನೆ 13 : 18 (KNV)
ಇದರಲ್ಲಿ ಜ್ಞಾನವಿದೆ. ತಿಳುವಳಿಕೆಯುಳ್ಳವನು ಆ ಮೃಗದ ಅಂಕೆಯನ್ನು ಎಣಿಸಲಿ; ಯಾಕಂದರೆ ಅದು ಒಬ್ಬ ಮನುಷ್ಯನ ಅಂಕೆಯಾಗಿದೆ; ಅವನ ಅಂಕೆಯು ಆರುನೂರ ಅರವತ್ತಾರು.
❮
❯