ಯೆಹೋಶುವ 21 : 1 (KNV)
ಲೇವಿಯರ ಪಿತೃಗಳ ಹಿರಿಯರು ಕಾನಾನ್ ದೇಶದ ಶೀಲೋವಿನಲ್ಲಿರುವ ಯಾಜಕ ನಾದ ಎಲಿಯಾಜರನ ಬಳಿಗೂ ನೂನನ ಮಗನಾದ ಯೆಹೋಶುವನ ಬಳಿಗೂ ಇಸ್ರಾಯೇಲ್ ಮಕ್ಕಳ ಗೋತ್ರಗಳ ಪಿತೃಗಳಲ್ಲಿರುವ ಹಿರಿಯರ ಬಳಿಗೂ ಬಂದು ಅವರ ಸಂಗಡ ಮಾತನಾಡಿ--
ಯೆಹೋಶುವ 21 : 2 (KNV)
ನಾವು ವಾಸವಾಗಿರುವ ಪಟ್ಟಣಗಳನ್ನು ನಮ್ಮ ಪಶುಗಳಿಗೋಸ್ಕರ ಅವುಗಳ ಉಪನಗರಗಳೊಂದಿಗೆ ನಮಗೆ ಕೊಡಬೇಕೆಂದು ಕರ್ತನು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿ ದ್ದಾನೆ ಅಂದರು.
ಯೆಹೋಶುವ 21 : 3 (KNV)
ಹಾಗೆಯೇ ಇಸ್ರಾಯೇಲ್ ಮಕ್ಕಳು ತಮ್ಮ ಬಾಧ್ಯತೆಯಲ್ಲಿ ಲೇವಿಯರಿಗೆ ಕರ್ತನ ಅಜ್ಞೆಯ ಪ್ರಕಾರ ಪಟ್ಟಣಗಳನ್ನೂ ಅವುಗಳ ಉಪನಗರಗಳನ್ನೂ ಕೊಟ್ಟರು. ಅವು ಯಾವವೆಂದರೆ--
ಯೆಹೋಶುವ 21 : 4 (KNV)
ಕೆಹಾತ್ಯರ ಗೋತ್ರಗಳಿಗೆ ಚೀಟು ಹಾಕಿದಾಗ ಲೇವಿಯರಲ್ಲಿ ಯಾಜಕನಾದ ಆರೋನನ ಮಕ್ಕಳಿಗೆ ಯೂದನ ಗೋತ್ರದಲ್ಲಿಯೂ ಸಿಮೆಯೋನನ ಗೋತ್ರ ದಲ್ಲಿಯೂ ಬೆನ್ಯಾವಿಾನನ ಗೋತ್ರದಲ್ಲಿಯೂ ಹದಿ ಮೂರು ಪಟ್ಟಣಗಳು ದೊರಕಿದವು.
ಯೆಹೋಶುವ 21 : 5 (KNV)
ಕೆಹಾತನ ಉಳಿದ ಮಕ್ಕಳಿಗೆ ಎಫ್ರಾಯಾಮನ ಗೊತ್ರದಲ್ಲಿಯೂ ದಾನನ ಗೋತ್ರದಲ್ಲಿಯೂ ಮನಸ್ಸೆಯ ಅರ್ಧಗೋತ್ರದ ಲ್ಲಿಯೂ ಹತ್ತು ಪಟ್ಟಣಗಳೂ ದೊರಕಿದವು.
ಯೆಹೋಶುವ 21 : 6 (KNV)
ಗೆರ್ಷೋನ್ಯನ ಮಕ್ಕಳಿಗೆ ಚೀಟಿ ಹಾಕಿದಾಗ ಇಸ್ಸಾಕಾರನ ಗೋತ್ರಗಳ ಕುಟುಂಬಗಳಲ್ಲಿಯೂ ಆಶೇರನ ಗೋತ್ರದಲ್ಲಿಯೂ ನಫ್ತಾಲಿಯ ಗೋತ್ರ ದಲ್ಲಿಯೂ ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ದೊರ ಕಿದವು.
ಯೆಹೋಶುವ 21 : 7 (KNV)
ಇದಲ್ಲದೆ ಮೆರಾರಿಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ರೂಬೇನನ ಗೋತ್ರದಲ್ಲಿಯೂ ಗಾದನ ಗೋತ್ರದಲ್ಲಿಯೂ ಜೆಬುಲೂನನ ಗೋತ್ರ ದಲ್ಲಿಯೂ ಹನ್ನೆರಡು ಪಟ್ಟಣಗಳು ದೊರಕಿದವು.
ಯೆಹೋಶುವ 21 : 8 (KNV)
ಈ ಪಟ್ಟಣಗಳನ್ನು ಅವುಗಳ ಉಪನಗರಗಳನ್ನು ಇಸ್ರಾಯೇಲ್ ಮಕ್ಕಳು ಕರ್ತನು ಮೋಶೆಯ ಮುಖಾಂತರ ಆಜ್ಞಾಪಿಸಿದ ಪ್ರಕಾರ ಲೇವಿಯರಿಗೆ ಚೀಟುಹಾಕಿ ಕೊಟ್ಟರು.
ಯೆಹೋಶುವ 21 : 9 (KNV)
ಆದರೆ ಲೇವಿಯ ಮಕ್ಕಳಲ್ಲಿ ಮೊದಲನೇ ಚೀಟು ಬಿದ್ದ ಕೆಹಾತ್ಯರ ಗೋತ್ರಗಳಲ್ಲಿ ಇರುವ ಆರೋನನ ಮಕ್ಕಳಿಗೆ ಯೂದನ ಮಕ್ಕಳ ಗೋತ್ರದಲ್ಲಿಯೂ ಸಿಮೆಯೋನನ ಮಕ್ಕಳ ಗೋತ್ರದಲ್ಲಿಯೂ ಕೊಡಲ್ಪಟ್ಟ ಪಟ್ಟಣಗಳ ಹೆಸರುಗಳು
ಯೆಹೋಶುವ 21 : 10 (KNV)
ಯಾವವಂದರೆ--ಲೇವಿ ಕುಲದವರೂ ಕೆಹಾತನ ಗೋತ್ರದವರೂ ಆದ ಆರೋನನ ಕುಟುಂಬದವರಿಗೆ ಚೀಟು ಮೊದಲು ಬಿದದ್ದರಿಂದ
ಯೆಹೋಶುವ 21 : 11 (KNV)
ಯೂದನ ಬೆಟ್ಟಗಳಲ್ಲಿರುವ ಅನಾಕನ ತಂದೆಯಾದ ಅರ್ಬನ ಹೆಸರಿನ ಪಟ್ಟಣ ಹೆಬ್ರೋ ನನ್ನೂ ಅದರ ಸುತ್ತಲಿರುವ ಉಪನಗರಗಳನ್ನೂ ಅವ ರಿಗೆ ಕೊಟ್ಟರು.
ಯೆಹೋಶುವ 21 : 12 (KNV)
ಆದರೆ ಆ ಪಟ್ಟಣದ ಹೊಲಗ ಳನ್ನೂ ಗ್ರಾಮಗಳನ್ನೂ ಯೆಫುನ್ನೆಯ ಮಗನಾದ ಕಾಲೇಬನಿಗೆ ಬಾಧ್ಯತೆಯಾಗಿ ಕೊಟ್ಟರು.
ಯೆಹೋಶುವ 21 : 13 (KNV)
ಹೀಗೆಯೇ ಯಾಜಕನಾದ ಆರೋನನ ಮಕ್ಕಳಿಗೆ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಹೆಬ್ರೋನನ್ನೂ ಅದರ ಉಪನಗರಗಳನ್ನೂ ಲಿಬ್ನಾವನ್ನೂ ಅದರ ಉಪ ನಗರಗಳನ್ನೂ
ಯೆಹೋಶುವ 21 : 14 (KNV)
ಯತ್ತೀರನ್ನೂ ಅದರ ಉಪನಗರ ಗಳನ್ನೂ ಎಷ್ಟೆಮೋಹವನ್ನೂ ಅದರ ಉಪನಗರಗ ಳನ್ನೂ
ಯೆಹೋಶುವ 21 : 15 (KNV)
ಹೋಲೋನನ್ನೂ ಅದರ ಉಪನಗರಗ ಳನ್ನೂ ದೆಬೀರನ್ನೂ ಅದರ ಉಪನಗರಗಳನ್ನೂ
ಯೆಹೋಶುವ 21 : 16 (KNV)
ಆಯಿನನ್ನೂ ಅದರ ಉಪನಗರಗಳನ್ನೂ ಯುಟ್ಟಾ ವನ್ನೂ ಅದರ ಉಪನಗರಗಳನ್ನೂ ಬೇತ್ಷೆಮೆಷನ್ನೂ ಅದರ ಉಪನಗರಗಳನ್ನೂ; ಹೀಗೆಯೇ ಆ ಎರಡು ಗೋತ್ರಗಳಿಂದ ಈ ಒಂಭತ್ತು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವ 21 : 17 (KNV)
ಇದಲ್ಲದೆ ಬೆನ್ಯಾವಿಾನನ ಗೋತ್ರದಲ್ಲಿ ಗಿಬ್ಯೋ ನನ್ನೂ ಅದರ ಉಪನಗರಗಳನ್ನೂ ಗೆಬವನ್ನೂ ಅದರ ಉಪನಗರಗಳನ್ನೂ
ಯೆಹೋಶುವ 21 : 18 (KNV)
ಅನಾತೋತನ್ನೂ ಅದರ ಉಪನಗರಗಳನ್ನೂ ಅಲ್ಮೋನನ್ನೂ ಅದರ ಉಪನಗರ ಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವ 21 : 19 (KNV)
ಯಾಜಕನಾದ ಆರೋನನ ಮಕ್ಕಳ ಪಟ್ಟಣಗಳೆಲ್ಲಾ ಹದಿಮೂರು ಪಟ್ಟಣಗಳೂ ಅವುಗಳ ಉಪನಗರಗಳೂ.
ಯೆಹೋಶುವ 21 : 20 (KNV)
ಇದಲ್ಲದೆ ಲೇವಿಯರಾದ ಕೆಹಾತನ ಮಕ್ಕಳ ಕುಟುಂಬದಲ್ಲಿ ಉಳಿದವರಿಗೆ ಎಫ್ರಾಯಾಮನ ಗೋತ್ರದಲ್ಲಿ ಚೀಟಿನಿಂದ ದೊರಕಿದ ಪಟ್ಟಣಗಳು,
ಯೆಹೋಶುವ 21 : 21 (KNV)
ಕೊಲೆಮಾಡಿದವನಿಗೆ ಆಶ್ರಯ ಪಟ್ಟಣವಾದ ಎಫ್ರಾಯಾಮನ ಬೆಟ್ಟಗಳಲ್ಲಿರುವ ಶೆಕೇಮನ್ನೂ ಅದರ ಉಪನಗರಗಳನ್ನೂ ಗೆಜೆರನ್ನೂ ಅದರ ಉಪನಗರ ಗಳನ್ನೂ
ಯೆಹೋಶುವ 21 : 22 (KNV)
ಕಿಬ್ಚೈಮನ್ನೂ ಅದರ ಉಪನಗರಗಳನ್ನೂ; ಬೇತ್ಹೋರೋನನ್ನೂ ಆದರ ಉಪನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವ 21 : 23 (KNV)
ಇದಲ್ಲದೆ ದಾನನ ಗೋತ್ರದಲ್ಲಿ ಎಲ್ತೆಕೇಯನ್ನೂ ಅದರ ಉಪ ನಗರಗಳನ್ನೂ ಗಿಬ್ಬೆತೋನನ್ನೂ ಅದರ ಉಪನಗರ ಗಳನ್ನೂ;
ಯೆಹೋಶುವ 21 : 24 (KNV)
ಅಯ್ಯಾಲೋನನ್ನೂ ಅದರ ಉಪನಗರ ಗಳನ್ನೂ ಗತ್ರಿಮ್ಮೋನನ್ನೂ ಅದರ ಉಪನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವ 21 : 25 (KNV)
ಮನಸ್ಸೆಯ ಅರ್ಧಗೋತ್ರದಲ್ಲಿ ತಾನಾಕನ್ನೂ ಅದರ ಉಪನಗರ ಗಳನ್ನೂ; ಗತ್ರಿಮ್ಮೋನನ್ನೂ ಅದರ ಉಪನಗರ ಗಳನ್ನೂ ಹೀಗೆ ಎರಡು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವ 21 : 26 (KNV)
ಹಾಗೆಯೇ ಉಳಿದಂಥ ಕೆಹಾತನ ಮಕ್ಕಳ ಕುಟುಂಬಗಳಿಗೆ ದೊರೆತ ಪಟ್ಟಣಗಳೆಲ್ಲಾ ಹತ್ತು ಪಟ್ಟಣಗಳೂ ಅವುಗಳ ಉಪನಗರಗಳೂ.
ಯೆಹೋಶುವ 21 : 27 (KNV)
ಲೇವಿಯರ ಕುಟುಂಬಗಳಲ್ಲಿರುವ ಗೆರ್ಷೋನಿನ ಮಕ್ಕಳಿಗೆ ಮನಸ್ಸೆಯ ಅರ್ಧ ಗೋತ್ರದಲ್ಲಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಬಾಷಾನಿ ನಲ್ಲಿರುವ ಗೋಲಾನನ್ನೂ ಅದರ ಉಪನಗರಗಳನ್ನೂ ಬೆಯೆಷ್ಟೆರಾವನ್ನೂ ಅದರ ಉಪನಗರಗಳನ್ನೂ; ಹೀಗೆ ಎರಡು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವ 21 : 28 (KNV)
ಇದಲ್ಲದೆ ಇಸ್ಸಾಕಾರನ ಗೋತ್ರದಲ್ಲಿ ಕಿಷ್ಯೋನನ್ನೂ ಅದರ ಉಪ ನಗರಗಳನ್ನೂ ದಾಬೆರತನ್ನೂ ಅದರ ಉಪನಗರ ಗಳನ್ನೂ
ಯೆಹೋಶುವ 21 : 29 (KNV)
ಯರ್ಮೂತನ್ನೂ ಅದರ ಉಪನಗರ ಗಳನ್ನೂ ಏಂಗನ್ನೀಮನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವ 21 : 30 (KNV)
ಆಶೇರನ ಗೋತ್ರದಲ್ಲಿ ಮಿಷಾಲನ್ನೂ ಅದರ ಉಪನಗರ ಗಳನ್ನೂ ಅಬ್ದೋನನ್ನೂ ಅದರ ಉಪನಗರಗಳನ್ನೂ
ಯೆಹೋಶುವ 21 : 31 (KNV)
ಹೆಲ್ಕಾತನ್ನೂ ಅದರ ಉಪನಗರಗಳನ್ನೂ ರೆಹೋ ಬನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವ 21 : 32 (KNV)
ನಫ್ತಾಲಿಯ ಗೋತ್ರ ದಲ್ಲಿ ಕೊಲೆಮಾಡಿದವನಿಗೆ ಆಶ್ರಯ ಪಟ್ಟಣವಾದ ಗಲಿಲಾಯದಲ್ಲಿರುವ ಕೆದೆಷನ್ನೂ ಅದರ ಉಪನಗರ ಗಳನ್ನೂ ಹಮ್ಮೋತ್ದೋರನ್ನೂ ಅದರ ಉಪನಗರ ಗಳನ್ನೂ ಕರ್ತಾನನ್ನೂ ಅದರ ಉಪನಗರಗಳನ್ನೂ; ಹೀಗೆ ಮೂರು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವ 21 : 33 (KNV)
ಗೆರ್ಷೋನ್ಯರಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಪಟ್ಟಣಗಳೆಲ್ಲಾ ಹದಿಮೂರು ಪಟ್ಟಣಗಳೂ ಅವುಗಳ ಉಪನಗರಗಳೂ.
ಯೆಹೋಶುವ 21 : 34 (KNV)
ಉಳಿದ ಲೇವಿಯರಾದ ಮೆರಾರೀಯ ಮಕ್ಕಳ ಕುಟುಂಬಗಳಿಗೆ ಜೆಬುಲೂನನ ಗೋತ್ರದಲ್ಲಿ ಯೊಕ್ನೆ ಯಾಮನ್ನೂ ಆದರ ಉಪನಗರಗಳನ್ನೂ ಕರ್ತಾನನ್ನೂ ಅದರ ಉಪನಗರಗಳನ್ನೂ
ಯೆಹೋಶುವ 21 : 35 (KNV)
ದಿಮ್ನಾವನ್ನೂ ಅದರ ಉಪನಗರಗಳನ್ನೂ ನಹಲಾಲನ್ನೂ ಅದರ ಉಪ ನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವ 21 : 36 (KNV)
ಇದಲ್ಲದೆ ರೂಬೇನನ ಗೋತ್ರದಲ್ಲಿ ಬೆಚೆರನ್ನೂ ಅದರ ಉಪನಗರಗಳನ್ನೂ ಯಹಚಾ ವನ್ನೂ ಅದರ ಉಪನಗರಗಳನ್ನೂ
ಯೆಹೋಶುವ 21 : 37 (KNV)
ಕೆದೇಮೋತನ್ನೂ ಅದರ ಉಪನಗರಗಳನ್ನೂ ಮೆಫಾಗತನ್ನೂ ಅದರ ಉಪ ನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವ 21 : 38 (KNV)
ಗಾದನ ಗೋತ್ರದಲ್ಲಿ ಕೊಲೆ ಮಾಡಿ ದವನಿಗೆ ಆಶ್ರಯ ಪಟ್ಟಣವಾದ ಗಿಲ್ಯಾದಿನಲ್ಲಿರುವ ರಾಮೋತನ್ನೂ ಅದರ ಉಪನಗರಗಳನ್ನೂ ಮಹನ ಯಿಮನ್ನೂ ಅದರ ಉಪನಗರಗಳನ್ನೂ
ಯೆಹೋಶುವ 21 : 39 (KNV)
ಹೆಷ್ಬೋ ನನ್ನೂ ಅದರ ಉಪನಗರಗಳನ್ನೂ ಯಗ್ಜೇರನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣ ಗಳನ್ನು ಕೊಟ್ಟರು.
ಯೆಹೋಶುವ 21 : 40 (KNV)
ಹೀಗೆಯೇ ಲೇವಿಯರ ಕುಟುಂಬಗಳಲ್ಲಿ ಉಳಿದಂಥ ಮೆರಾರೀಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಚೀಟಿನಿಂದ ದೊರೆತ ಪಟ್ಟಣಗಳೆಲ್ಲಾ ಹನ್ನೆರಡು ಪಟ್ಟಣಗಳೂ ಅವುಗಳ ಉಪನಗರಗಳೂ.
ಯೆಹೋಶುವ 21 : 41 (KNV)
ಇಸ್ರಾಯೇಲ್ ಮಕ್ಕಳ ಸ್ವಾಸ್ತ್ಯದ ಮಧ್ಯದಲ್ಲಿ ಇರುವ ಲೇವಿಯರ ಎಲ್ಲಾ ಪಟ್ಟಣಗಳೂ ಅವುಗಳ ಉಪನಗರಗಳೂ ನಾಲ್ವತ್ತೆಂಟು ಪಟ್ಟಣಗಳು.
ಯೆಹೋಶುವ 21 : 42 (KNV)
ಈ ಪಟ್ಟಣಗಳಲ್ಲಿ ಪ್ರತಿಯೊಂದಕ್ಕೂ ಅದರದರ ಸುತ್ತಲೂ ಉಪನಗರಗಳು ಇದ್ದವು; ಪಟ್ಟಣಗಳಿಗೆಲ್ಲಾ ಹೀಗೆಯೇ ಇದ್ದವು.
ಯೆಹೋಶುವ 21 : 43 (KNV)
ಕರ್ತನು ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನೆಲ್ಲಾ ಇಸ್ರಾಯೇಲಿಗೆ ಕೊಟ್ಟನು; ಅವರು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸವಾಗಿದ್ದರು.
ಯೆಹೋಶುವ 21 : 44 (KNV)
ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ಪ್ರಕಾರವೆಲ್ಲಾ ಅವರ ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು; ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ; ಅವರ ಶತ್ರುಗಳನ್ನೆಲ್ಲಾ ಕರ್ತನು ಅವರ ಕೈಗಳಿಗೆ ಒಪ್ಪಿಸಿದನು.
ಯೆಹೋಶುವ 21 : 45 (KNV)
ಕರ್ತನು ಇಸ್ರಾಯೇಲ್ ಮನೆಗೆ ಹೇಳಿದ ಒಳ್ಳೇ ವಿಷಯಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ; ಎಲ್ಲಾ ನೆರವೇರಿದವು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45