ಯೆಹೋಶುವ 12 : 1 (KNV)
ಯೊರ್ದನಿಗೆ ಆಚೆ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಅರ್ನೋನ್ ನದಿಯಿಂದ ಹೆರ್ಮೋನ್ ಬೆಟ್ಟದ ವರೆಗೂ ಮೂಡಣ ಬೈಲಿನ ಎಲ್ಲಾದರಲ್ಲಿಯೂ ಇಸ್ರಾಯೇಲ್ ಮಕ್ಕಳು ಅವರನ್ನು ಹೊಡೆದು ಸ್ವಾಧೀನ ಪಡಿಸಿಕೊಂಡ ದೇಶಗಳ ಅರಸರು ಯಾರಂದರೆ:
ಯೆಹೋಶುವ 12 : 2 (KNV)
ಅರ್ನೋನ್ ನದಿಯ ಮಧ್ಯಭಾಗ, ದಡದ ಬಳಿಯಲ್ಲಿ ಇರುವ ಅರೋಯೇರಿ ನಿಂದಲೂ ಅರ್ಧ ಗಿಲ್ಯಾದಿನಿಂದಲೂ ಅಮ್ಮೋನನ ಮಕ್ಕಳ ಮೇರೆಯಾದ ಯಬ್ಬೋಕ್ ನದಿಯ ವರೆಗೆ
ಯೆಹೋಶುವ 12 : 3 (KNV)
ಬೈಲಿನಿಂದ ಮೂಡಣದಲ್ಲಿರುವ ಕಿನ್ನೆರೋತ್ ಸಮುದ್ರದ ಪರಿಯಂತರ ವರೆಗೂ ಬೇತ್ಯೊಷಿ ಮೋತಿನ ಮಾರ್ಗವಾಗಿ ಮೂಡಣದಲ್ಲಿರುವ ಬೈಲಿನ ಉಪ್ಪು ಸಮುದ್ರದ ವರೆಗೂ ಅಷ್ಡೋದ್ ಪಿಸ್ಗಾಕ್ಕೆ ಕೆಳಗಾದ ದಕ್ಷಿಣದಿಂದ ಇರುವ ದೇಶವನ್ನು ಆಳಿ ಕೊಂಡಿದ್ದ ಹೆಷ್ಬೋನಿನಲ್ಲಿ ವಾಸಿಸಿದ್ದ ಅಮೋರಿಯರ ಅರಸನಾದ ಸೀಹೋನನೂ
ಯೆಹೋಶುವ 12 : 4 (KNV)
ಅಷ್ಟರೋತಿನಲ್ಲಿಯೂ ಎದ್ರೈಯಲ್ಲಿ ವಾಸಮಾಡಿ
ಯೆಹೋಶುವ 12 : 5 (KNV)
ಹೆರ್ಮೋನ್ ಬೆಟ್ಟವನ್ನೂ ಸಲ್ಕಾವನ್ನೂ ಗೆಷೂರ್ಯರ ಮಾಕತೀಯರ ಮೇರೆಯ ವರೆಗೂ ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯಾಗಿದ್ದ ಗಿಲ್ಯಾದಿನ ಅರ್ಧದ ವರೆಗೂ ಇರುವ ಬಾಷಾನೆಲ್ಲಾ ಆಳಿಕೊಂಡಿದ್ದ ರಾಕ್ಷಸರಲ್ಲಿ ಮಿಕ್ಕ ಬಾಷಾನಿನ ಅರಸನಾದ ಓಗನೂ ಇವರೇ.
ಯೆಹೋಶುವ 12 : 6 (KNV)
ಇವರನ್ನು ಕರ್ತನ ಸೇವಕನಾದ ಮೋಶೆಯೂ ಇಸ್ರಾಯೇಲ್ ಮಕ್ಕಳೂ ಹೊಡೆದು ಬಿಟ್ಟು ಅವರ ದೇಶವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಯ ಅರ್ಧ ಗೋತ್ರದವರಿಗೂ ಸ್ವಾಸ್ತ್ಯವಾಗಿ ಕೊಟ್ಟನು.
ಯೆಹೋಶುವ 12 : 7 (KNV)
ಆದರೆ ಯೊರ್ದನಿಗೆ ಪಶ್ಚಿಮದಲ್ಲಿ ಲೆಬನೋ ನಿನ ತಗ್ಗಿನಲ್ಲಿರುವ ಬಾಲಾದ್ ಮೊದಲುಗೊಂಡು ಸೇಯಾರಿಗೆ ಏರಿಹೋಗುವ ಹಾಲಾಕ್ ಬೆಟ್ಟದ ವರೆಗೆ ಬೆಟ್ಟಗಳಲ್ಲಿಯೂ ತಗ್ಗುಗಳಲ್ಲಿಯೂ ಬೈಲಿನಲ್ಲಿಯೂ ನೀರು ಬುಗ್ಗೆಗಳ ಸ್ಥಳಗಳಲ್ಲಿಯೂ
ಯೆಹೋಶುವ 12 : 8 (KNV)
ಅರಣ್ಯದಲ್ಲಿಯೂ ದಕ್ಷಿಣದಲ್ಲಿಯೂ ಯೆಹೋಶುವನು ಇಸ್ರಾಯೇಲಿನ ಗೋತ್ರಗಳಿಗೆ ಸ್ವಾಸ್ತ್ಯವಾಗಿ ಪಾಲು ಇಟ್ಟ ದೇಶವಾದಂಥ ಹಿತ್ತಿಯರ ಅಮೋರಿಯರ ಕಾನಾನ್ಯರ ಪೆರಿಜ್ಜೀಯರ ಹಿವ್ವೀಯರ ಯೆಬೂಸಿಯರ ದೇಶದಲ್ಲಿದ್ದ ಯೆಹೋಶು ವನೂ ಇಸ್ರಾಯೇಲ್ ಮಕ್ಕಳೂ ಹೊಡೆದುಬಿಟ್ಟ ಅರಸರು ಯಾರಂದರೆ--
ಯೆಹೋಶುವ 12 : 9 (KNV)
ಯೆರಿಕೋವಿನ ಅರಸನು ಒಬ್ಬನು; ಬೇತೇಲ್ ಬಳಿಯಲ್ಲಿರುವ ಆಯಿಯ ಅರಸನು ಒಬ್ಬನು;
ಯೆಹೋಶುವ 12 : 10 (KNV)
ಯೆರೂಸಲೇಮಿನ ಅರಸನು ಒಬ್ಬನು; ಹೆಬ್ರೋನಿನ ಅರಸನು ಒಬ್ಬನು;
ಯೆಹೋಶುವ 12 : 11 (KNV)
ಯರ್ಮೂತಿನ ಅರಸನು ಒಬ್ಬನು; ಲಾಕೀಷಿನ ಅರಸನು ಒಬ್ಬನು;
ಯೆಹೋಶುವ 12 : 12 (KNV)
ಎಗ್ಲೋನಿನ ಅರಸನು ಒಬ್ಬನು; ಗೆಜೆರಿನ ಅರಸನು ಒಬ್ಬನು;
ಯೆಹೋಶುವ 12 : 13 (KNV)
ದೆಬೀರಿನ ಅರಸನು ಒಬ್ಬನು; ಗೆದೆರಿನ ಅರಸನು ಒಬ್ಬನು;
ಯೆಹೋಶುವ 12 : 14 (KNV)
ಹೊರ್ಮದ ಅರಸನು ಒಬ್ಬನು; ಅರಾದಿನ ಅರಸನು ಒಬ್ಬನು;
ಯೆಹೋಶುವ 12 : 15 (KNV)
ಲಿಬ್ನದ ಅರಸನು ಒಬ್ಬನು; ಅದುಲ್ಲಾಮದ ಅರಸನು ಒಬ್ಬನು;
ಯೆಹೋಶುವ 12 : 16 (KNV)
ಮಕ್ಕೇದದ ಅರಸನು ಒಬ್ಬನು; ಬೇತೇಲಿನ ಅರಸನು ಒಬ್ಬನು;
ಯೆಹೋಶುವ 12 : 17 (KNV)
ತಪ್ಪೂಹದ ಅರಸನು ಒಬ್ಬನು; ಹೇಫೆರಿನ ಅರಸನು ಒಬ್ಬನು;
ಯೆಹೋಶುವ 12 : 18 (KNV)
ಅಫೇಕದ ಅರಸನು ಒಬ್ಬನು; ಲಷ್ಷಾರೋನಿನ ಅರಸನು ಒಬ್ಬನು;
ಯೆಹೋಶುವ 12 : 19 (KNV)
ಮಾದೋನಿನ ಅರಸನು ಒಬ್ಬನು; ಹಾಚೋರಿನ ಅರಸನು ಒಬ್ಬನು;
ಯೆಹೋಶುವ 12 : 20 (KNV)
ಶಿಮ್ರೋನ್ಮೆರೋನಿನ ಅರಸನು ಒಬ್ಬನು; ಅಕ್ಷಾಫಿನ ಅರಸನು ಒಬ್ಬನು;
ಯೆಹೋಶುವ 12 : 21 (KNV)
ತಾನಕದ ಅರಸನು ಒಬ್ಬನು; ಮೆಗಿದ್ದೋವಿನ ಅರಸನು ಒಬ್ಬನು;
ಯೆಹೋಶುವ 12 : 22 (KNV)
ಕೆದೆಷಿನ ಅರಸನು ಒಬ್ಬನು; ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು ಒಬ್ಬನು;
ಯೆಹೋಶುವ 12 : 23 (KNV)
ದೋರ್ ಪ್ರಾಂತ್ಯದಲ್ಲಿರುವ ದೋರಿನ ಅರಸನು ಒಬ್ಬನು; ಗಿಲ್ಗಾಲಿನ ಜನಾಂಗಗಳ ಅರಸನು ಒಬ್ಬನು;
ಯೆಹೋಶುವ 12 : 24 (KNV)
ತಿರ್ಚದ ಅರಸನು ಒಬ್ಬನು; ಒಟ್ಟು ಮೂವತ್ತೊಂದು ಅರಸರುಗಳು.

1 2 3 4 5 6 7 8 9 10 11 12 13 14 15 16 17 18 19 20 21 22 23 24