ಯಾಕೋಬನು 4 : 1 (KNV)
ನಿಮ್ಮಲ್ಲಿ ಯುದ್ಧಗಳೂ ಕಾದಾಟಗಳೂ ಎಲ್ಲಿಂದ ಬರುತ್ತವೆ? ನಿಮ್ಮ ಇಂದ್ರಿಯ ಗಳಲ್ಲಿ ಹೊರಾಡುವ ಭೋಗಾಶೆಗಳಿಂದಲೇ ಅಲ್ಲವೇ.
ಯಾಕೋಬನು 4 : 2 (KNV)
ನೀವು ಆಶಿಸಿದರೂ ಹೊಂದದೆ ಇದ್ದೀರಿ. ನೀವು ಕೊಲ್ಲುತ್ತೀರಿ, ಹೊಂದಲು ಅಪೇಕ್ಷಿಸುತ್ತೀರಿ, ಆದರೆ ಪಡೆಯಲಾರಿರಿ. ನೀವು ಕಾದಾಡುತ್ತೀರಿ, ಯುದ್ಧ ಮಾಡುತ್ತೀರಿ. ಆದಾಗ್ಯೂ ನೀವು ಬೇಡಿಕೊಳ್ಳದ ಕಾರಣ ನಿಮಗೇನೂ ದೊರೆಯಲಿಲ್ಲ.
ಯಾಕೋಬನು 4 : 3 (KNV)
ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಗಳಿಗಾಗಿ ಉಪಯೋಗಿಸ ಬೇಕೆಂದು ತಪ್ಪಾಗಿ ಬೇಡಿಕೊಳ್ಳುವದರಿಂದ ನಿಮಗೆ ದೊರೆಯುವದಿಲ್ಲ.
ಯಾಕೋಬನು 4 : 4 (KNV)
ವ್ಯಭಿಚಾರಿಗಳೇ, ವ್ಯಭಿಚಾರಿಣಿ ಯರೇ, ಇಹಲೋಕ ಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಿರ ಬೇಕೆಂದಿರುವವನು ದೇವರಿಗೆ ವೈರಿಯಾಗಿದ್ದಾನೆ.
ಯಾಕೋಬನು 4 : 5 (KNV)
ಇದಲ್ಲದೆ--ನಮ್ಮಲ್ಲಿ ವಾಸವಾಗಿರುವ ಆತ್ಮನು ಅಭಿಮಾನತಾಪದಿಂದ ಹಂಬಲಿಸುತ್ತಾನೆಂಬ ಬರಹವು ವ್ಯರ್ಥವಾಗಿ ಹೇಳುತ್ತದೆ ಎಂದು ನೀವು ಭಾವಿಸು ತ್ತೀರೋ?
ಯಾಕೋಬನು 4 : 6 (KNV)
ಆತನು ಹೆಚ್ಚಾದ ಕೃಪೆಯನ್ನು ಕೊಡುತ್ತಾನೆ. ಆದದರಿಂದ--ದೇವರು ಅಹಂಕಾರಿಗಳನ್ನು ಎದುರಿಸು ತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸು ತ್ತಾನೆ ಎಂದು ಆತನು ಹೇಳುತ್ತಾನೆ.
ಯಾಕೋಬನು 4 : 7 (KNV)
ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.
ಯಾಕೋಬನು 4 : 8 (KNV)
ದೇವರ ಸವಿಾಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸವಿಾಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿ ಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ.
ಯಾಕೋಬನು 4 : 9 (KNV)
ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗೆಯು ದುಃಖಕ್ಕೂ ನಿಮ್ಮ ಸಂತೋಷವು ವ್ಯಥೆಗೂ ತಿರುಗಿಕೊಳ್ಳಲಿ.
ಯಾಕೋಬನು 4 : 10 (KNV)
ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿ ಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆತ್ತುವನು.
ಯಾಕೋಬನು 4 : 11 (KNV)
ಸಹೋದರರೇ, ಒಬ್ಬರ ವಿಷಯದಲ್ಲಿ ಒಬ್ಬರು ಕೆಟ್ಟದ್ದನ್ನು ಮಾತನಾಡಬೇಡಿರಿ. ಯಾವನಾದರೂ ತನ್ನ ಸಹೋದರನ ವಿಷಯದಲ್ಲಿ ಕೆಟ್ಟದ್ದಾಗಿ ಮಾತನಾಡಿದರೆ ಅಥವಾ ತನ್ನ ಸಹೋದರನ ವಿಷಯವಾಗಿ ತೀರ್ಪು ಮಾಡಿದರೆ ಅವನು ನ್ಯಾಯಪ್ರಮಾಣದ ವಿಷಯದಲ್ಲಿ ಕೆಟ್ಟದ್ದಾಗಿ ಮಾತನಾಡಿ ನ್ಯಾಯಪ್ರಮಾಣದ ವಿಷಯ ದಲ್ಲಿ
ಯಾಕೋಬನು 4 : 12 (KNV)
ನ್ಯಾಯಪ್ರಮಾಣ ವನ್ನು ಕೊಟ್ಟಾತನು ಒಬ್ಬನೇ; ಆತನೇ ಉಳಿಸುವದಕ್ಕೂ ನಾಶ ಮಾಡುವದಕ್ಕೂ ಶಕ್ತನು. ಹೀಗಿರುವಾಗ ಮತ್ತೊಬ್ಬನ ವಿಷಯದಲ್ಲಿ ತೀರ್ಪುಮಾಡುವದಕ್ಕೆ ನೀನು ಯಾರು?
ಯಾಕೋಬನು 4 : 13 (KNV)
ಈ ಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರುಷವಿದ್ದುಕೊಂಡು ಕೊಳ್ಳುವ ಮತ್ತು ಮಾರುವ ವ್ಯಾಪಾರವನ್ನು ಮಾಡಿ ಲಾಭವನ್ನು ಸಂಪಾದಿಸುತ್ತೇವೆ ಅನ್ನುವವರೇ, ಕೇಳಿರಿ.
ಯಾಕೋಬನು 4 : 14 (KNV)
ನಾಳೆ ಏನಾಗುವದೋ ನಿಮಗೆ ತಿಳಿಯದು. ನಿಮ್ಮ ಜೀವ ಮಾನವು ಎಂಥದ್ದು? ಅದು ಸ್ವಲ್ಪ ಹೊತ್ತು ಕಾಣಿಸಿ ಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದೆ.
ಯಾಕೋಬನು 4 : 15 (KNV)
ಆದದರಿಂದ--ಕರ್ತನ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು ಎಂದು ನೀವು ಹೇಳತಕ್ಕದ್ದು.
ಯಾಕೋಬನು 4 : 16 (KNV)
ಆದರೆ ನೀವು ನಿಮ್ಮ ಹೊಗಳಿಕೆಗಳಲ್ಲಿ ಸಂತೋಷಪಡುತ್ತೀರಿ. ಅಂಥ ಸಂತೋಷವೆಲ್ಲಾ ಕೆಟ್ಟದ್ದೇ.ಹೀಗಿರುವದರಿಂದ ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನಿಗೆ ಅದು ಪಾಪವಾಗಿದೆ.
ಯಾಕೋಬನು 4 : 17 (KNV)
ಹೀಗಿರುವದರಿಂದ ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನಿಗೆ ಅದು ಪಾಪವಾಗಿದೆ.

1 2 3 4 5 6 7 8 9 10 11 12 13 14 15 16 17

BG:

Opacity:

Color:


Size:


Font: