ಇಬ್ರಿಯರಿಗೆ 7 : 1 (KNV)
ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದು ರಾಜರನ್ನು ಸಂಹರಿಸಿ ಹಿಂತಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶಿರ್ವದಿಸಿದನು.
ಇಬ್ರಿಯರಿಗೆ 7 : 2 (KNV)
ಅಬ್ರಹಾಮನು ಎಲ್ಲವುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಆತನಿಗೆ ಕೊಟ್ಟನು. ಆತನ ಹೆಸರಿಗೆ ಮೊದಲನೆಯದಾಗಿ ನೀತಿರಾಜನೆಂದು ತರುವಾಯ ಸಾಲೇಮಿನರಾಜ ಅಂದರೆ ಸಮಾಧಾನದ ರಾಜನೆಂದು ಅರ್ಥ.
ಇಬ್ರಿಯರಿಗೆ 7 : 3 (KNV)
ಆತನಿಗೆ ತಂದೆಯೂ ತಾಯಿಯೂ ವಂಶಾವಳಿಯೂ ಇಲ್ಲ, ದಿವಸಗಳ ಆರಂಭವೂ ಜೀವದ ಅಂತ್ಯವೂ ಇಲ್ಲ. ಆದರೆ ಆತನು ದೇವರ ಮಗನಿಗೆ ಹೋಲಿಕೆಯಾಗಿ ಮಾಡಲ್ಪಟ್ಟಿದ್ದಾನೆ. ಇದಲ್ಲದೆ ಆತನು ನಿರಂತರವಾಗಿ ಯಾಜಕನಾಗಿದ್ದಾನೆ.
ಇಬ್ರಿಯರಿಗೆ 7 : 4 (KNV)
ಈ ಮನುಷ್ಯನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ನಮ್ಮ ಮೂಲ ಪಿತೃವಾದ ಅಬ್ರಹಾ ಮನು ಸುಲುಕೊಂಡು ಬಂದವುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಆತನಿಗೆ ಕೊಟ್ಟನಲ್ಲಾ.
ಇಬ್ರಿಯರಿಗೆ 7 : 5 (KNV)
ನಿಜವಾಗಿ ಲೇವಿಯ ಮಕ್ಕಳಲ್ಲಿ ಯಾಜಕೋದ್ಯೋಗವನ್ನು ಹೊಂದುವವರು ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ತಮ್ಮ ಸಹೋದರರಿಂದಲೇ ದಶಮ ಭಾಗಗಳನ್ನು ತೆಗೆದುಕೊಳ್ಳುವದಕ್ಕೆ ನ್ಯಾಯ ಪ್ರಮಾಣದಲ್ಲಿ ಅಪ್ಪಣೆಯುಂಟು.
ಇಬ್ರಿಯರಿಗೆ 7 : 6 (KNV)
ಅದರೆ ಅವರ ವಂಶಾವಳಿಯಲ್ಲಿ ಲೆಕ್ಕಿಸಲ್ಪಡದೆ ಇರುವ ಈತನು ಅಬ್ರಹಾಮನಿಂದಲೇ ದಶಮ ಭಾಗಗಳನ್ನು ತಕ್ಕೊಂಡ ದ್ದಲ್ಲದೆ ವಾಗ್ದಾನಗಳನ್ನು ಹೊಂದಿದವನಾದ ಅವನಿಗೆ ಆಶೀರ್ವಾದ ಕೊಟ್ಟನು.
ಇಬ್ರಿಯರಿಗೆ 7 : 7 (KNV)
ಆಶೀರ್ವಾದ ಹೊಂದುವವ ನಿಗಿಂತ ಆಶಿರ್ವದಿಸುವವನು ದೊಡ್ಡವನು ಎಂಬದು ವಿವಾದವಿಲ್ಲದ ಮಾತಷ್ಟೆ. 8ಇಲ್ಲಿ ಸಾಯತಕ್ಕ ಮನುಷ್ಯರು ದಶಮ ಭಾಗಗಳನ್ನು ತಕ್ಕೊಳ್ಳುತ್ತಾರೆ; ಆದರೆ ಅಲ್ಲಿ ಜೀವಿಸುತ್ತಿದ್ದಾನೆಂದು ಸಾಕ್ಷಿಹೊಂದಿರುವಾತನು ತಕ್ಕೊಳ್ಳುತ್ತಾನೆ.
ಇಬ್ರಿಯರಿಗೆ 7 : 8 (KNV)
ಇಲ್ಲಿ ಸಾಯತಕ್ಕ ಮನುಷ್ಯರು ದಶಮ ಭಾಗಗಳನ್ನು ತಕ್ಕೊಳ್ಳುತ್ತಾರೆ; ಆದರೆ ಅಲ್ಲಿ ಜೀವಿಸುತ್ತಿದ್ದಾನೆಂದು ಸಾಕ್ಷಿಹೊಂದಿರುವಾತನು ತಕ್ಕೊಳ್ಳುತ್ತಾನೆ.
ಇಬ್ರಿಯರಿಗೆ 7 : 9 (KNV)
ಇದು ಮಾತ್ರವಲ್ಲದೆ ದಶಮಭಾಗ ಗಳನ್ನು ತಕ್ಕೊಳ್ಳುವ ಲೇವಿಯೂ ಕೂಡ ಅಬ್ರಹಾಮನ ಮೂಲಕ ದಶಮ ಭಾಗಗಳನ್ನು ಕೊಟ್ಟ ಹಾಗಾಯಿ ತೆಂದು ನಾನು ಹೇಳಬಹುದು;
ಇಬ್ರಿಯರಿಗೆ 7 : 10 (KNV)
ಹೇಗೆಂದರೆ ಮೆಲ್ಕಿಜೆದೇಕನು ಲೇವಿಯ ಮೂಲ ಪುರಷನನ್ನು ಎದುರುಗೊಂಡಾಗ ಇವನಲ್ಲಿ ಲೇವಿಯು ಅಡಕ ವಾಗಿದ್ದನು.
ಇಬ್ರಿಯರಿಗೆ 7 : 11 (KNV)
ಲೇವಿಯ ಯಾಜಕತ್ವದಿಂದ ಸಂಪೂರ್ಣ ಸಿದ್ಧಿ ಉಂಟಾಗಿದ್ದರೆ ಆರೋನನ ತರಹದವನಾಗಿರದೆ ಮೆಲ್ಕಿ ಜೆದೇಕನ ತರಹದ ಬೇರೊಬ್ಬ ಯಾಜಕನು ಎದ್ದೇಳು ವದು ಅವಶ್ಯವೇನಿತ್ತು? (ಅದರಲ್ಲಿ ಜನರು ನ್ಯಾಯ ಪ್ರಮಾಣವನ್ನು ಹೊಂದಿದರು).
ಇಬ್ರಿಯರಿಗೆ 7 : 12 (KNV)
ಯಾಜಕತ್ವವು ಬೇರೆಯಾದರೆ ನ್ಯಾಯಪ್ರಮಾಣವು ಕೂಡ ಬೇರೆ ಯಾಗುವದು ಅಗತ್ಯ.
ಇಬ್ರಿಯರಿಗೆ 7 : 13 (KNV)
ಇವು ಯಾವಾತನ ವಿಷಯ ದಲ್ಲಿ ಹೇಳಲ್ಪಟ್ಟಿವೆಯೋ ಆತನು ಬೇರೊಂದು ಗೋತ್ರಕ್ಕೆ ಸಂಬಂಧಪಟ್ಟವನು; ಆ ಗೋತ್ರದವರಲ್ಲಿ ಒಬ್ಬನೂ ಯಜ್ಞವೇದಿಯ ಬಳಿಯಲ್ಲಿ ಸೇವೆಮಾಡಿದ್ದಿಲ್ಲ.
ಇಬ್ರಿಯರಿಗೆ 7 : 14 (KNV)
ನಮ್ಮ ಕರ್ತನು ಯೂದಾ ಗೋತ್ರದಲ್ಲಿ ಜನಿಸಿದಾತನೆಂಬದು ಸ್ಪಷ್ಟವಾಗಿದೆಯಷ್ಟೆ; ಈ ಗೋತ್ರದ ವಿಷಯದಲ್ಲಿ ಮೋಶೆಯು ಯಾಜಕರ ಸಂಬಂಧವಾಗಿ ಏನೂ ಹೇಳಲಿಲ್ಲ.
ಇಬ್ರಿಯರಿಗೆ 7 : 15 (KNV)
ಮೆಲ್ಕಿಜೆದೇಕನ ಹೋಲಿಕೆಗನುಸಾರ ಇನ್ನೊಬ್ಬ ಯಾಜಕನು ಏಳುತ್ತಾನೆಂಬದು ಇನ್ನು ಎಷ್ಟೋ ಹೆಚ್ಚಾಗಿ ಸ್ಪಷ್ಟವಾಗಿದೆ.
ಇಬ್ರಿಯರಿಗೆ 7 : 16 (KNV)
ಆತನು ಶಾರೀರಕವಾದ ಆಜ್ಞೆಯ ನಿಯಮಕ್ಕನುಸಾರ ಅಲ್ಲದೆ ನಿರ್ಲಯವಾದ ಜೀವದ ಶಕ್ತಿಗನುಸಾರವಾಗಿ ಮಾಡಲ್ಪಟ್ಟಿದ್ದಾನೆ.
ಇಬ್ರಿಯರಿಗೆ 7 : 17 (KNV)
ಆತನ ವಿಷಯದಲ್ಲಿ--ನೀನು ಸದಾಕಾಲವು ಮೆಲ್ಕಿಜೆದೇಕನ ತರಹದ ಯಾಜಕನಾಗಿದ್ದೀ ಎಂದು ಆತನು ಸಾಕ್ಷಿ ಕೊಡುತ್ತಾನೆ.
ಇಬ್ರಿಯರಿಗೆ 7 : 18 (KNV)
ಮೊದಲಿದ್ದ ಆಜ್ಞೆಯು ನಿರ್ಬಲವಾಗಿಯೂ ನಿಷ್ಪ್ರಯೋಜಕವಾಗಿಯೂ ಇದ್ದು ನಿಜವಾಗಿಯೂ ರದ್ದಾಗಿಹೋಯಿತು.
ಇಬ್ರಿಯರಿಗೆ 7 : 19 (KNV)
ನ್ಯಾಯ ಪ್ರಮಾಣವು ಯಾವದನ್ನೂ ಸಿದ್ದಿಗೆ ತಾರದಿರುವ ದರಿಂದ ಉತ್ತಮವಾಗಿರುವ ನಿರೀಕ್ಷೆಯು ಸಿದ್ಧಿಗೆ ತಂದಿತು. ಇದರಿಂದ ನಾವು ದೇವರ ಸವಿಾಪಕ್ಕೆ ಸೇರುತ್ತೇವೆ.
ಇಬ್ರಿಯರಿಗೆ 7 : 20 (KNV)
ಆತನು ಆಣೆಯಿಲ್ಲದೆ ಯಾಜಕನಾಗಲೇ ಇಲ್ಲ.
ಇಬ್ರಿಯರಿಗೆ 7 : 21 (KNV)
(ಆ ಯಾಜಕರೂ ಆಣೆಯಿಲ್ಲದೆ ಯಾಜಕರಾದರು); ಈತನಾದರೊ--ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನಾಗಿದ್ದೀ ಎಂದು ಆತನಿಗೆ ಹೇಳಿದ ಕರ್ತನು ಆಣೆಯಿಟ್ಟು ನುಡಿದನು, ಪಶ್ಚಾತ್ತಾಪಪಡುವದಿಲ್ಲ.
ಇಬ್ರಿಯರಿಗೆ 7 : 22 (KNV)
ಇದರಿಂದಲೇ ಯೇಸು ಎಷ್ಟೋ ಶ್ರೇಷ್ಠವಾದ ಒಡಂಬಡಿಕೆಗೆ ಹೊಣೆಗಾರನಾದನು.
ಇಬ್ರಿಯರಿಗೆ 7 : 23 (KNV)
ಅವರು (ಲೇವಿಯರು) ಶಾಶ್ವತವಾಗಿ ಉದ್ಯೋಗ ನಡಿಸುವದಕ್ಕೆ ಮರಣ ಕಾರಣದಿಂದ ನಿಜವಾಗಿಯೂ ಅವರಲ್ಲಿ ಯಾಜಕರಾದವರು ಅನೇಕರು;
ಇಬ್ರಿಯರಿಗೆ 7 : 24 (KNV)
ಈತನಾ ದರೋ ಸದಾಕಾಲವಿರುವದರಿಂದ ಬದಲಾವಣೆಯಾ ಗದ ಯಾಜಕತ್ವವನ್ನು ಹೊಂದಿದ್ದಾನೆ.
ಇಬ್ರಿಯರಿಗೆ 7 : 25 (KNV)
ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿ ಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕವವನಾಗಿದ್ದಾನೆ.
ಇಬ್ರಿಯರಿಗೆ 7 : 26 (KNV)
ಇಂಥವನೇ ನಮಗೆ ಬೇಕಾದ ಮಹಾ ಯಾಜಕನು. ಈತನು ಪರಿಶುದ್ಧನೂ ಕೇಡು ಮಾಡ ದವನೂ ನಿಷ್ಕಳಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವಾತನು ಆಕಾಶಗಳಿಗಿಂತ ಉನ್ನತವಾಗಿ ಮಾಡಲ್ಪಟ್ಟಾತನೂ ಆಗಿದ್ದಾನೆ.
ಇಬ್ರಿಯರಿಗೆ 7 : 27 (KNV)
ಮೊದಲು ತನ್ನ ಸ್ವಂತ ಪಾಪಪರಿಹಾರಕ್ಕಾಗಿ ಆಮೇಲೆ ಜನರ ಪಾಪ ಪರಿಹಾರಕ್ಕಾಗಿ ಯಜ್ಞಾರ್ಪಣೆ ಮಾಡುವ ಮಹಾ ಯಾಜಕರಂತೆ ಈತನು ಪ್ರತಿನಿತ್ಯವೂ ಸಮರ್ಪಿಸ ಬೇಕಾದ ಅವಶ್ಯವಿಲ್ಲ. ಯಾಕಂದರೆ ಈತನು ತನ್ನನ್ನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.ನ್ಯಾಯಪ್ರಮಾಣವು ನಿರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ಮಾಡುತ್ತದೆ; ಆದರೆ ನ್ಯಾಯಪ್ರಮಾಣದ ತರುವಾಯ ಆಣೆಯೊಡನೆ ಉಂಟಾದ ವಾಕ್ಯವು ಸದಾಕಾಲಕ್ಕೂ ಪ್ರತಿಷ್ಠೆ ಮಾಡಿಕೊಂಡ ಮಗನನ್ನೇ ಮಹಾಯಾಜಕ ನನ್ನಾಗಿ ಮಾಡುತ್ತದೆ.
ಇಬ್ರಿಯರಿಗೆ 7 : 28 (KNV)
ನ್ಯಾಯಪ್ರಮಾಣವು ನಿರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ಮಾಡುತ್ತದೆ; ಆದರೆ ನ್ಯಾಯಪ್ರಮಾಣದ ತರುವಾಯ ಆಣೆಯೊಡನೆ ಉಂಟಾದ ವಾಕ್ಯವು ಸದಾಕಾಲಕ್ಕೂ ಪ್ರತಿಷ್ಠೆ ಮಾಡಿಕೊಂಡ ಮಗನನ್ನೇ ಮಹಾಯಾಜಕ ನನ್ನಾಗಿ ಮಾಡುತ್ತದೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28

BG:

Opacity:

Color:


Size:


Font: