ತೀತನಿಗೆ 3 : 1 (KNV)
ದೊರೆತನಗಳಿಗೂ ಅಧಿಕಾರಿಗಳಿಗೂ ಒಳಗಾಗಿ ನ್ಯಾಯಾಧಿಪತಿಗಳಿಗೆ ವಿಧೇಯ ರಾಗಿರಬೇಕೆಂತಲೂ ಪ್ರತಿಯೊಂದು ಸತ್ಕ್ರಿಯೆಗೆ ಸಿದರಾಗಿರಬೇಕೆಂತಲೂ
ತೀತನಿಗೆ 3 : 2 (KNV)
ಯಾರ ವಿಷಯವಾಗಿಯೂ ಕೆಟ್ಟ ಮಾತನ್ನಾಡದವರೂ ಜಗಳವಾಡದವರೂ ಆಗಿದ್ದು ಸಾಧು ಸ್ವಭಾವವುಳ್ಳವರಾಗಿ ಎಲ್ಲಾ ಮನುಷ್ಯರಿಗೆ ಪೂರ್ಣ ಸಾತ್ವಿಕತ್ವವನ್ನು ತೋರಿಸಬೇಕೆಂತಲೂ ಅವ ರಿಗೆ ಜ್ಞಾಪಕಮಾಡು.
ತೀತನಿಗೆ 3 : 3 (KNV)
ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದ ವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ದಾಸರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆ ಮಾಡುವವರೂ ಆಗಿದ್ದೆವು.
ತೀತನಿಗೆ 3 : 4 (KNV)
ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಪ್ರೀತಿಯೂ ಮನುಷ್ಯನ ಕಡೆಗೆ ಪ್ರತ್ಯಕ್ಷವಾದಾಗ
ತೀತನಿಗೆ 3 : 5 (KNV)
ನಾವು ಮಾಡಿದ ನೀತಿಯ ಕ್ರಿಯೆ ಗಳಿಂದಲ್ಲ, ಆತನ ಕರುಣೆಯಿಂದಲೇ ಪುನರ್ಜನ್ಮದ ತೊಳೆಯುವಿಕೆಯಿಂದಲೂ ಪವಿತ್ರಾತ್ಮನು ನೂತನ ಸ್ವಭಾವವನ್ನುಂಟು ಮಾಡುವದರಿಂದಲೂ ಆತನು ನಮ್ಮನ್ನು ರಕ್ಷಿಸಿದನು.
ತೀತನಿಗೆ 3 : 6 (KNV)
ಆತನು (ದೇವರು) ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕ ಆತನನ್ನು (ಪವಿತ್ರಾತ್ಮನನ್ನು) ನಮ್ಮ ಮೇಲೆ ಧಾರಾಳವಾಗಿ ಸುರಿಸಿ ದ್ದಾನೆ.
ತೀತನಿಗೆ 3 : 7 (KNV)
ನಾವು ಹೀಗೆ ಆತನ ಕೃಪೆಯಿಂದ ನೀತಿವಂತ ರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ನಿರೀಕ್ಷೆಗನು ಸಾರವಾಗಿ ಬಾಧ್ಯರಾದೆವು.
ತೀತನಿಗೆ 3 : 8 (KNV)
ಇದು ನಂಬತಕ್ಕ ಮಾತಾ ಗಿದೆ. ದೇವರಲ್ಲಿ ನಂಬಿಕೆ ಇಟ್ಟಿರುವವರು ಸತ್ಕ್ರಿಯೆಗಳನ್ನು ಮಾಡುವದರಲ್ಲಿ ಜಾಗರೂಕರಾಗಿರುವಂತೆ ನೀನು ಈ ಮಾತುಗಳನ್ನು ಯಾವಾಗಲೂ ದೃಢವಾಗಿ ಹೇಳಬೇಕೆಂದು ಅಪೇಕ್ಷಿಸುತ್ತೇನೆ. ಇವು ಮನುಷ್ಯರಿಗೆ ಉತ್ತಮವೂ ಪ್ರಯೋಜನಕರವೂ ಆಗಿವೆ.
ತೀತನಿಗೆ 3 : 9 (KNV)
ಆದರೆ ಬುದ್ಧಿಯಿಲ್ಲದ ವಿತರ್ಕಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ನ್ಯಾಯಪ್ರಮಾಣದ ವಿಷಯವಾದ ವಾಗ್ವಾದಗಳಿಗೂ ದೂರವಾಗಿರು; ಯಾಕಂದರೆ ಅವು ನಿಷ್ಪ್ರಯೋಜನವೂ ವ್ಯರ್ಥವೂ ಆಗಿವೆ.
ತೀತನಿಗೆ 3 : 10 (KNV)
ಭೇದ ಹುಟ್ಟಿಸುವ ಮನುಷ್ಯನನ್ನು ಒಂದೆರಡು ಸಾರಿ ಬುದ್ಧಿ ಹೇಳಿದ ಮೇಲೆ ಬಿಟ್ಟುಬಿಡು;
ತೀತನಿಗೆ 3 : 11 (KNV)
ಅಂಥವನು ಸನ್ಮಾರ್ಗ ತಪ್ಪಿದವನೂ ಪಾಪಮಾಡುವವನು ಆಗಿದ್ದಾನೆ; ತಾನು ಶಿಕ್ಷಾಪಾತ್ರನೆಂದು ತನ್ನನ್ನು ತಾನೇ ಖಂಡಿಸಿಕೊಳ್ಳುವನು.
ತೀತನಿಗೆ 3 : 12 (KNV)
ನಾನು ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದು ನಿಶ್ಚಯಿಸಿಕೊಂಡದರಿಂದ ಅರ್ತೆಮನ ನ್ನಾಗಲಿ ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದ ಕೂಡಲೆ ಅಲ್ಲಿಗೆ ನನ್ನ ಹತ್ತಿರ ಬರುವದಕ್ಕೆ ಪ್ರಯತ್ನ ಮಾಡು.
ತೀತನಿಗೆ 3 : 13 (KNV)
ನ್ಯಾಯಶಾಸ್ತ್ರಿಯಾದ ಜೇನನನ್ನೂ ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಸಾಗಕಳುಹಿಸು; ಅವರಿಗೇನೂ ಕೊರತೆಯಾಗಬಾರದು.
ತೀತನಿಗೆ 3 : 14 (KNV)
ಅಗತ್ಯ ವಾದ ಕೊರತೆಗಳನ್ನು ನೀಗಿಸುವ ಸತ್ಕ್ರಿಯೆಗಳನ್ನು ಮಾಡುವದ ಕ್ಕಾಗಿ ನಮ್ಮವರು ಸಹ ಕಲಿತುಕೊಳ್ಳಲಿ; ಹೀಗೆ ಅವರು ನಿಷ್ಪಲರಾಗಿರುವದಿಲ್ಲ.ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ನಂಬಿಕೆಯಲ್ಲಿ ನಮ್ಮನ್ನು ಪ್ರೀತಿಸುವವರಿಗೆ ವಂದನೆ ಹೇಳು. ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ. ಆಮೆನ್‌.
ತೀತನಿಗೆ 3 : 15 (KNV)
ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ನಂಬಿಕೆಯಲ್ಲಿ ನಮ್ಮನ್ನು ಪ್ರೀತಿಸುವವರಿಗೆ ವಂದನೆ ಹೇಳು. ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ. ಆಮೆನ್‌.

1 2 3 4 5 6 7 8 9 10 11 12 13 14 15

BG:

Opacity:

Color:


Size:


Font: