ಧರ್ಮೋಪದೇಶಕಾಂಡ 34 : 1 (KNV)
ಆಗ ಮೋಶೆ ಮೋವಾಬಿನ ಬೈಲಿನಿಂದ ನೆಬೋ ಪರ್ವತಕ್ಕೆ ಯೆರಿಕೋವಿಗೆ ಎದುರಾಗಿರುವ ಪಿಸ್ಗಾದ ಶಿಖರಕ್ಕೆ ಏರಿ ಹೋದನು. ಅಲ್ಲಿ ಕರ್ತನು ಅವನಿಗೆ ದೇಶವನ್ನೆಲ್ಲಾ ದಾನಿನ ವರೆಗಿರುವ ಗಿಲ್ಯಾದನ್ನೂ
ಧರ್ಮೋಪದೇಶಕಾಂಡ 34 : 2 (KNV)
ಎಲ್ಲಾ ನಫ್ತಾಲಿಯನ್ನೂ ಸಮಸ್ತ ಎಫ್ರಾಯಾಮನ, ಮನಸ್ಸೆಯ ದೇಶವನ್ನೂ ಸಮುದ್ರದ ಕಟ್ಟಕಡೆಯ ವರೆಗಿರುವ ಸಮಸ್ತ ಯೆಹೂದ ದೇಶವನ್ನೂ
ಧರ್ಮೋಪದೇಶಕಾಂಡ 34 : 3 (KNV)
ದಕ್ಷಿಣವನ್ನೂ ಖರ್ಜೂರಗಳ ಪಟ್ಟಣ ವಾದ ಯೆರಿಕೋವಿನ ತಗ್ಗೆಂಬ ಬೈಲನ್ನೂ ಚೋಗ ರೂರಿನ ಪರ್ಯಂತರಕ್ಕೆ ತೋರಿಸಿದನು.
ಧರ್ಮೋಪದೇಶಕಾಂಡ 34 : 4 (KNV)
ಕರ್ತನು ಅವನಿಗೆ--ನಾನು ನಿನ್ನ ಸಂತತಿಗೆ ಕೊಡುತ್ತೇನೆಂದು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಪ್ರಮಾಣಮಾಡಿದ ದೇಶವು ಇದೇ. ಅದನ್ನು ನಿನಗೆ ತೋರಿಸಿದೆನು; ಆದರೆ ನೀನು ಅಲ್ಲಿಗೆ ದಾಟಿ ಸೇರುವದಿಲ್ಲ ಎಂದು ಹೇಳಿದನು.
ಧರ್ಮೋಪದೇಶಕಾಂಡ 34 : 5 (KNV)
ಕರ್ತನ ಮಾತಿನ ಹಾಗೆ ಕರ್ತನ ದಾಸನಾದ ಮೋಶೆಯು ಅಲ್ಲಿ ಮೋವಾಬಿನ ದೇಶದಲ್ಲಿ ಸತ್ತನು.
ಧರ್ಮೋಪದೇಶಕಾಂಡ 34 : 6 (KNV)
ಆತನು ಅವನನ್ನು ಮೋವಾಬಿನ ದೇಶದ ತಗ್ಗಿನಲ್ಲಿ ಬೇತ್ಪಯೋರಿಗೆ ಎದುರಾಗಿ ಹೂಣಿಟ್ಟನು; ಅವನ ಸಮಾಧಿ ಇಂದಿನ ವರೆಗೆ ಯಾರಿಗೂ ಗೊತ್ತಿಲ್ಲ.
ಧರ್ಮೋಪದೇಶಕಾಂಡ 34 : 7 (KNV)
ಮೋಶೆಯು ಸಾಯುವಾಗ ನೂರಿಪ್ಪತ್ತು ವರುಷದವ ನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ; ಅವನ ತ್ರಾಣ ಕುಂದಲಿಲ್ಲ.
ಧರ್ಮೋಪದೇಶಕಾಂಡ 34 : 8 (KNV)
ಇಸ್ರಾಯೇಲ್‌ ಮಕ್ಕಳು ಮೋವಾಬಿನ ಬೈಲಿನಲ್ಲಿ ಮೋಶೆಯ ನಿಮಿತ್ತ ಮೂವತ್ತು ದಿವಸ ಅತ್ತರು. ಈ ಪ್ರಕಾರ ಮೋಶೆಯ ನಿಮಿತ್ತವಾದ ಗೋಳಾಟದಲ್ಲಿ ಅಳುವ ದಿವಸಗಳು ಮುಗಿದವು.
ಧರ್ಮೋಪದೇಶಕಾಂಡ 34 : 9 (KNV)
ಇದಲ್ಲದೆ ನೂನನ ಮಗನಾದ ಯೆಹೋಶುವನು ಜ್ಞಾನದ ಆತ್ಮದಿಂದ ತುಂಬಿದ್ದನು. ಯಾಕಂದರೆ ಮೋಶೆ ಅವನ ಮೇಲೆ ತನ್ನ ಕೈಗಳನ್ನು ಇಟ್ಟಿದ್ದನು. ಇಸ್ರಾಯೇಲ್‌ ಮಕ್ಕಳು ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮಾಡಿ ಅವನ ಮಾತು ಕೇಳಿದರು.
ಧರ್ಮೋಪದೇಶಕಾಂಡ 34 : 10 (KNV)
ಆದರೆ ಐಗುಪ್ತದೇಶದಲ್ಲಿ ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿ ದಕ್ಕೆ ಕರ್ತನು ಅವನನ್ನು ಕಳುಹಿಸಿದ ಸಮಸ್ತ ಗುರುತು ಗಳ ಮತ್ತು ಅದ್ಭುತಗಳ ವಿಷಯದಲ್ಲಿಯೂ
ಧರ್ಮೋಪದೇಶಕಾಂಡ 34 : 11 (KNV)
ಮೋಶೆ ಸಮಸ್ತ ಇಸ್ರಾಯೇಲಿನ ಮುಂದೆ ತೋರಿಸಿದ ಸಮಸ್ತ ಬಲವಾದ ಕೈಯ ಸಮಸ್ತ ಮಹಾಭಯದ ವಿಷಯ ದಲ್ಲಿಯೂಕರ್ತನು ಮುಖಾಮುಖಿಯಾಗಿ ತಿಳಿದ ಮೋಶೆಯ ಹಾಗೆ ಮತ್ತೊಬ್ಬ ಪ್ರವಾದಿ ಇಸ್ರಾ ಯೇಲಿನಲ್ಲಿ ಏಳಲಿಲ್ಲ.
ಧರ್ಮೋಪದೇಶಕಾಂಡ 34 : 12 (KNV)
ಕರ್ತನು ಮುಖಾಮುಖಿಯಾಗಿ ತಿಳಿದ ಮೋಶೆಯ ಹಾಗೆ ಮತ್ತೊಬ್ಬ ಪ್ರವಾದಿ ಇಸ್ರಾ ಯೇಲಿನಲ್ಲಿ ಏಳಲಿಲ್ಲ.

1 2 3 4 5 6 7 8 9 10 11 12

BG:

Opacity:

Color:


Size:


Font: