ಧರ್ಮೋಪದೇಶಕಾಂಡ 30 : 1 (KNV)
ಇದಲ್ಲದೆ ನಾನು ನಿನ್ನ ಮುಂದೆ ಇಟ್ಟ ಈ ಎಲ್ಲಾ ಆಶೀರ್ವಾದವೂ ಶಾಪವೂ ನಿನಗೆ ಸಂಭವಿಸಿದ ಮೇಲೆ ನಾನು ಈಹೊತ್ತು ನಿನಗೆ ಆಜ್ಞಾಪಿಸುವದೆಲ್ಲಾದರಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ತಳ್ಳಿಬಿಟ್ಟ ಎಲ್ಲಾ ಜನಾಂಗಗಳ ಮಧ್ಯದಲ್ಲಿ ನೀನು ನೆನಪುಮಾಡಿ
ಧರ್ಮೋಪದೇಶಕಾಂಡ 30 : 2 (KNV)
ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊಂಡು ನೀನೂ ನಿನ್ನ ಮಕ್ಕಳೂ-- ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ಆತನ ಮಾತಿಗೆ ವಿಧೇಯರಾದರೆ
ಧರ್ಮೋಪದೇಶಕಾಂಡ 30 : 3 (KNV)
ನಿನ್ನ ದೇವರಾದ ಕರ್ತನು ನಿನ್ನನ್ನು ಸೆರೆಯಿಂದ ಬಿಡಿಸಿ ನಿನ್ನ ಮೇಲೆ ಅಂತಃಕರಣಪಟ್ಟು ತಿರುಗಿಕೊಂಡು ನಿನ್ನನ್ನು ಚದುರಿಸಿದ ಎಲ್ಲಾ ಜನಾಂಗಗಳೊಳಗಿಂದ ನಿನ್ನನ್ನು ಕೂಡಿಸುವನು.
ಧರ್ಮೋಪದೇಶಕಾಂಡ 30 : 4 (KNV)
ಆಕಾಶದ ಅಂತ್ಯದಲ್ಲಿ ನಿನ್ನವರು ಹೊರ ಡಿಸಲ್ಪಟ್ಟಿದ್ದರೂ ಅಲ್ಲಿಂದ ದೇವರಾದ ಕರ್ತನು ನಿನ್ನನ್ನು ಕೂಡಿಸಿ ಅಲ್ಲಿಂದ ನಿನ್ನನ್ನು ಕರತರುವನು.
ಧರ್ಮೋಪದೇಶಕಾಂಡ 30 : 5 (KNV)
ಇದಲ್ಲದೆ ನಿನ್ನ ಪಿತೃಗಳು ಸ್ವಾಧೀನಮಾಡಿಕೊಂಡ ದೇಶಕ್ಕೆ ನಿನ್ನ ದೇವರಾದ ಕರ್ತನು ನಿನ್ನನ್ನು ತರುವನು; ನೀನು ಅದನ್ನು ಸ್ವಾಧೀನಮಾಡಿಕೊಳ್ಳುವಿ; ಆತನು ನಿನಗೆ ಒಳ್ಳೇದನ್ನು ಮಾಡಿ ನಿನ್ನ ಪಿತೃಗಳಿಗಿಂತಲೂ ನಿನ್ನನ್ನು ಹೆಚ್ಚಿಸುವನು.
ಧರ್ಮೋಪದೇಶಕಾಂಡ 30 : 6 (KNV)
ಆಗ ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಪ್ರೀತಿಮಾಡಿ ನೀನು ಬದು ಕುವ ಹಾಗೆ ಆತನು ನಿನ್ನ ಹೃದಯವನ್ನೂ ನಿನ್ನ ಸಂತತಿಯ ಹೃದಯವನ್ನೂ ಪರಿಛೇದಿಸುವನು.
ಧರ್ಮೋಪದೇಶಕಾಂಡ 30 : 7 (KNV)
ಇದಲ್ಲದೆ ನಿನ್ನ ದೇವರಾದ ಕರ್ತನು ಆ ಶಾಪಗಳನ್ನೆಲ್ಲಾ ನಿನ್ನ ಶತ್ರುಗಳ ಮೇಲೆಯೂ ನಿನ್ನನ್ನು ಹಿಂಸಿಸಿದ ನಿನ್ನ ಹಗೆಯವರ ಮೇಲೆಯೂ ಹಾಕುವನು.
ಧರ್ಮೋಪದೇಶಕಾಂಡ 30 : 8 (KNV)
ಆದರೆ ನೀನು ತಿರುಗಿ ಕೊಂಡು ಕರ್ತನ ಮಾತನ್ನು ಕೇಳಿ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕೈಕೊಳ್ಳುವಿ.
ಧರ್ಮೋಪದೇಶಕಾಂಡ 30 : 9 (KNV)
ಇದಲ್ಲದೆ ಕರ್ತನು ನಿನ್ನನ್ನು ನಿನ್ನ ಎಲ್ಲಾ ಕೈಕೆಲಸದಲ್ಲಿ, ಗರ್ಭದ ಫಲದಲ್ಲಿ, ಪಶುಗಳ ಫಲದಲ್ಲಿ, ಭೂಮಿಯ ಫಲದಲ್ಲಿ ಒಳ್ಳೇದಕ್ಕೋಸ್ಕರ ಅಭಿವೃದ್ಧಿ ಮಾಡುವನು.
ಧರ್ಮೋಪದೇಶಕಾಂಡ 30 : 10 (KNV)
ನೀನು ನಿನ್ನ ದೇವರಾದ ಕರ್ತನ ಮಾತನ್ನು ಕೇಳಿ ಈ ನ್ಯಾಯಪ್ರಮಾಣದ ಪುಸ್ತಕದಲ್ಲಿ ಬರೆದಿರುವ ಆತನ ಆಜ್ಞೆ ನಿಯಮಗಳನ್ನು ಕಾಪಾಡಿ ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣ ದಿಂದಲೂ ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿ ಕೊಂಡರೆ ಕರ್ತನು ನಿನ್ನ ಪಿತೃಗಳಲ್ಲಿ ಸಂತೋಷಿಸಿದ ಹಾಗೆ ನಿನ್ನಲ್ಲಿ ಒಳ್ಳೇದಕ್ಕೋಸ್ಕರ ಸಂತೋಷಿಸುವನು.
ಧರ್ಮೋಪದೇಶಕಾಂಡ 30 : 11 (KNV)
ನಿಶ್ಚಯವಾಗಿ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಈ ಆಜ್ಞೆಯು ನಿನಗೆ ಮರೆಯಾದದ್ದಲ್ಲ, ಇಲ್ಲವೆ ದೂರವಾದದ್ದಲ್ಲ.
ಧರ್ಮೋಪದೇಶಕಾಂಡ 30 : 12 (KNV)
ನಾವು ಅದನ್ನು ಮಾಡು ವಂತೆ--ಯಾರು ನಮಗೋಸ್ಕರ ಆಕಾಶಕ್ಕೆ ಏರಿಹೋಗಿ ಅದನ್ನು ತಕ್ಕೊಂಡು ತಿಳಿಸುವರು, ಎಂಬುವ ಹಾಗೆ ಅದು ಆಕಾಶದಲ್ಲಿ ಇರುವಂಥದ್ದಲ್ಲ.
ಧರ್ಮೋಪದೇಶಕಾಂಡ 30 : 13 (KNV)
ನಾವು ಅದನ್ನು ಮಾಡುವಂತೆ ಯಾರು ನಮಗೋಸ್ಕರ ಸಮುದ್ರವನ್ನು ದಾಟಿ ತಕ್ಕೊಂಡು ತಿಳಿಸುವರು? ಯಾರು ಹೋಗುವರು ಎಂಬುವ ಹಾಗೆ ಅದು ಸಮುದ್ರದ ಆಚೆಯಲ್ಲಿ ಇರುವಂಥದ್ದಲ್ಲ.
ಧರ್ಮೋಪದೇಶಕಾಂಡ 30 : 14 (KNV)
ಈ ವಾಕ್ಯವು ನಿನಗೆ ಬಹಳ ಸವಿಾಪವಾಗಿದೆ; ಅದನ್ನು ಕೈಕೊಳ್ಳುವ ಹಾಗೆ ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಅದೆ.
ಧರ್ಮೋಪದೇಶಕಾಂಡ 30 : 15 (KNV)
ನೋಡು, ನಾನು ಈಹೊತ್ತು ಜೀವವನ್ನೂ ಮರಣವನ್ನೂ, ಒಳ್ಳೇದನ್ನೂ ಕೆಟ್ಟದ್ದನ್ನೂ ನಿನ್ನ ಮುಂದೆ ಇಟ್ಟಿದ್ದೇನೆ.
ಧರ್ಮೋಪದೇಶಕಾಂಡ 30 : 16 (KNV)
ನಿನ್ನ ದೇವರಾದ ಕರ್ತನನ್ನು ಪ್ರೀತಿಮಾಡಿ ಆತನ ಮಾರ್ಗಗಳಲ್ಲಿ ನಡೆದುಕೊಂಡು ಆತನ ಆಜ್ಞೆ, ನಿಯಮ, ನ್ಯಾಯಗಳನ್ನು ಕಾಪಾಡಬೇಕೆಂದು ಈ ಹೊತ್ತು ನಿಮಗೆ ಆಜ್ಞಾಪಿಸಿದ್ದೇನೆ; ಹಾಗೆ ಮಾಡಿದರೆ ನೀನು ಬದುಕಿ ಹೆಚ್ಚುವಿ; ನೀನು ಸ್ವಾಧೀನಮಾಡಿ ಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸುವನು.
ಧರ್ಮೋಪದೇಶಕಾಂಡ 30 : 17 (KNV)
ಆದರೆ ನಿನ್ನ ಹೃದಯವು ತಿರಿಗಿಬಿದ್ದು, ನೀನು ಕೇಳದೆಹೋದರೆ ಇಲ್ಲವೆ ಬೇರೆ ದೇವರುಗಳ ಕಡೆಗೆ ಸೆಳೆಯಲ್ಪಟ್ಟು ಅಡ್ಡಬಿದ್ದು ಅವುಗಳಿಗೆ ಸೇವೆಮಾಡಿದರೆ
ಧರ್ಮೋಪದೇಶಕಾಂಡ 30 : 18 (KNV)
ಖಂಡಿತ ವಾಗಿಯೂ ನಶಿಸುವಿರೆಂದೂ ನೀವು ಸೇರಿ ಸ್ವಾಧೀನ ಮಾಡಿಕೊಳ್ಳುವದಕ್ಕೆ ಯೊರ್ದನನ್ನು ದಾಟಿಹೋಗುವ ದೇಶದಲ್ಲಿ ನಿಮ್ಮ ದಿವಸಗಳು ಬಹಳವಾಗುವದಿಲ್ಲ ವೆಂದೂ ಈಹೊತ್ತು ನಿಮಗೆ ತಿಳಿಸುತ್ತೇನೆ.
ಧರ್ಮೋಪದೇಶಕಾಂಡ 30 : 19 (KNV)
ನಾನು ಜೀವವನ್ನೂ ಮರಣವನ್ನೂ, ಆಶೀರ್ವಾದವನ್ನೂ ಶಾಪ ವನ್ನೂ ನಿನ್ನ ಮುಂದೆ ಇಟ್ಟಿದ್ದೇನೆಂಬದಕ್ಕೆ ಆಕಾಶವನ್ನೂ ಭೂಮಿಯನ್ನೂ ಈಹೊತ್ತು ನಿಮ್ಮ ಮೇಲೆ ಸಾಕ್ಷಿಗಳಾಗಿ ಕರೆಯುತ್ತೇನೆ.
ಧರ್ಮೋಪದೇಶಕಾಂಡ 30 : 20 (KNV)
ನಾನು ಜೀವವನ್ನೂ ಮರಣವನ್ನೂ, ಆಶೀರ್ವಾದವನ್ನೂ ಶಾಪ ವನ್ನೂ ನಿನ್ನ ಮುಂದೆ ಇಟ್ಟಿದ್ದೇನೆಂಬದಕ್ಕೆ ಆಕಾಶವನ್ನೂ ಭೂಮಿಯನ್ನೂ ಈಹೊತ್ತು ನಿಮ್ಮ ಮೇಲೆ ಸಾಕ್ಷಿಗಳಾಗಿ ಕರೆಯುತ್ತೇನೆ.
❮
❯