ಧರ್ಮೋಪದೇಶಕಾಂಡ 27 : 1 (KNV)
ಇದಲ್ಲದೆ ಮೋಶೆ ಇಸ್ರಾಯೇಲಿನ ಹಿರಿಯರ ಸಂಗಡ ಜನರಿಗೆ--ನಾನು ನಿಮಗೆ ಈ ಹೊತ್ತು ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ಕಾಪಾ ಡಬೇಕು.
ಧರ್ಮೋಪದೇಶಕಾಂಡ 27 : 2 (KNV)
ನೀವು ಯೊರ್ದನನ್ನು ದಾಟಿ ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ಬರುವ ದಿವಸದಲ್ಲಿ ದೊಡ್ಡ ಕಲ್ಲುಗಳನ್ನು ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಿ
ಧರ್ಮೋಪದೇಶಕಾಂಡ 27 : 3 (KNV)
ನೀನು ದಾಟಿಹೋದ ಮೇಲೆ ನಿನ್ನ ಪಿತೃಗಳ ದೇವರಾದ ಕರ್ತನು ನಿನಗೆ ಹೇಳಿದ ಪ್ರಕಾರ ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ನೀನು ಬರುವ ಹಾಗೆ ಅವುಗಳ ಮೇಲೆ ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಬರೆಯಬೇಕು.
ಧರ್ಮೋಪದೇಶಕಾಂಡ 27 : 4 (KNV)
ಆದದರಿಂದ ನೀವು ಯೊರ್ದನನ್ನು ದಾಟಿದ ಮೇಲೆ ನಾನು ಈಹೊತ್ತು ನಿಮಗೆ ಆಜ್ಞಾಪಿಸುವ ಕಲ್ಲುಗಳನ್ನು ಏಬಾಲ್‌ ಬೆಟ್ಟದಲ್ಲಿ ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಬೇಕು.
ಧರ್ಮೋಪದೇಶಕಾಂಡ 27 : 5 (KNV)
ಅಲ್ಲಿ ನಿನ್ನ ದೇವರಾದ ಕರ್ತನಿಗೆ ಬಲಿಪೀಠವನ್ನು ಕಟ್ಟಬೇಕು ಅಂದರೆ ಕಲ್ಲಿನ ಬಲಿಪೀಠವನ್ನು ಕಟ್ಟಬೇಕು. ಆ ಕಲ್ಲುಗಳಿಗೆ ಕಬ್ಬಿಣದ ಆಯುಧ ತಗಲಿಸಬಾರದು.
ಧರ್ಮೋಪದೇಶಕಾಂಡ 27 : 6 (KNV)
ನಿನ್ನ ದೇವರಾದ ಕರ್ತನ ಬಲಿಪೀಠವನ್ನು ಹುಟ್ಟು ಕಲ್ಲುಗಳಿಂದ ಕಟ್ಟಬೇಕು; ಅದರ ಮೇಲೆ ನಿನ್ನ ದೇವ ರಾದ ಕರ್ತನಿಗೆ ದಹನಬಲಿಗಳನ್ನು ಅರ್ಪಿಸಬೇಕು.
ಧರ್ಮೋಪದೇಶಕಾಂಡ 27 : 7 (KNV)
ಸಮಾಧಾನದ ಬಲಿಗಳನ್ನು ಅರ್ಪಿಸಿ ಅಲ್ಲಿ ತಿಂದು ನಿನ್ನ ದೇವರಾದ ಕರ್ತನ ಮುಂದೆ ಸಂತೋಷಪಡಬೇಕು.
ಧರ್ಮೋಪದೇಶಕಾಂಡ 27 : 8 (KNV)
ಇದಲ್ಲದೆ ಆ ಕಲ್ಲುಗಳಲ್ಲಿ ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಬಹಳ ಸರಳವಾಗಿ ಬರೆಯಬೇಕು.
ಧರ್ಮೋಪದೇಶಕಾಂಡ 27 : 9 (KNV)
ಆಗ ಮೋಶೆಯೂ ಲೇವಿಯರಾದ ಯಾಜಕರೂ ಸಮಸ್ತ ಇಸ್ರಾಯೇಲಿನ ಸಂಗಡ ಮಾತನಾಡಿ--ಓ ಇಸ್ರಾಯೇಲೇ, ಎಚ್ಚರಿಕೆ ತಕ್ಕೊಂಡು ಕೇಳು, ಈಹೊತ್ತು ನಿನ್ನ ದೇವರಾದ ಕರ್ತನಿಗೆ ನೀನು ಜನಾಂಗವಾಗಿದ್ದೀ.
ಧರ್ಮೋಪದೇಶಕಾಂಡ 27 : 10 (KNV)
ಹೀಗಿರುವದರಿಂದ ನಿನ್ನ ದೇವರಾದ ಕರ್ತನ ಮಾತಿಗೆ ವಿಧೇಯರಾಗಿ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಆತನ ಆಜ್ಞೆಗಳನ್ನೂ ನಿಯಮಗಳನ್ನೂ ಕೈಕೊಳ್ಳಬೇಕು ಎಂದು ಹೇಳಿದನು.
ಧರ್ಮೋಪದೇಶಕಾಂಡ 27 : 11 (KNV)
ಇದಲ್ಲದೆ ಮೋಶೆ ಅದೇ ದಿವಸದಲ್ಲಿ ಜನ ರಿಗೆ--
ಧರ್ಮೋಪದೇಶಕಾಂಡ 27 : 12 (KNV)
ನೀವು ಯೊರ್ದನನ್ನು ದಾಟಿದ ಮೇಲೆ ಜನ ರನ್ನು ಆಶೀರ್ವದಿಸುವದಕ್ಕೆ ಗೆರಿಜ್ಜೀಮ್‌ ಬೆಟ್ಟದಲ್ಲಿ ನಿಲ್ಲತಕ್ಕವರಾರಂದರೆ -- ಸಿಮೆಯೋನ್‌, ಲೇವಿ, ಯೆಹೂದ, ಇಸ್ಸಾಕಾರ್‌, ಯೋಸೇಫ್‌, ಬೆನ್ಯಾವಿಾನ್‌.
ಧರ್ಮೋಪದೇಶಕಾಂಡ 27 : 13 (KNV)
ಶಪಿಸುವದಕ್ಕೆ ಏಬಾಲ್‌ ಬೆಟ್ಟದಲ್ಲಿ ನಿಲ್ಲತಕ್ಕವರ್ಯಾ ರೆಂದರೆ; ರೂಬೇನ್‌, ಗಾದ್‌, ಆಶೇರ್‌, ಜೆಬುಲೂನ್‌, ದಾನ್‌, ನಫ್ತಾಲಿ ಎಂದು ಆಜ್ಞಾಪಿಸಿ ಹೇಳಿದನು.
ಧರ್ಮೋಪದೇಶಕಾಂಡ 27 : 14 (KNV)
ಆಗ ಲೇವಿಯರು ಉತ್ತರ ಕೊಟ್ಟು ಇಸ್ರಾಯೇಲ್‌ ಜನರೆಲ್ಲರಿಗೆ ದೊಡ್ಡ ಶಬ್ದದಿಂದ--
ಧರ್ಮೋಪದೇಶಕಾಂಡ 27 : 15 (KNV)
ಕರ್ತನಿಗೆ ಅಸಹ್ಯ ವಾಗಿರುವ ವಿಗ್ರಹವನ್ನಾಗಲಿ ಎರಕ ಹೊಯಿದದ್ದ ನ್ನಾಗಲಿ ಮಾಡಿಕೊಂಡು ಶಿಲ್ಪಿಯ ಕೈಯಿಂದ ಮಾಡಿಸಿಗುಪ್ತವಾಗಿ ನಿಲ್ಲಿಸುವವನಿಗೆ ಶಾಪ. ಜನವೆಲ್ಲಾ ಉತ್ತರ ಕೊಟ್ಟು ಆಮೆನ್‌ ಎಂದು ಹೇಳಲಿ.
ಧರ್ಮೋಪದೇಶಕಾಂಡ 27 : 16 (KNV)
ತನ್ನ ತಂದೆ ತಾಯಿಗಳನ್ನು ತಾತ್ಸಾರಮಾಡುವ ವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.
ಧರ್ಮೋಪದೇಶಕಾಂಡ 27 : 17 (KNV)
ನೆರೆಯವನ ಮೇರೆ ತಪ್ಪಿಸುವವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.
ಧರ್ಮೋಪದೇಶಕಾಂಡ 27 : 18 (KNV)
ಕುರುಡನನ್ನು ದಾರಿ ತಪ್ಪಿಸುವವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.
ಧರ್ಮೋಪದೇಶಕಾಂಡ 27 : 19 (KNV)
ಪರವಾಸಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ನ್ಯಾಯ ತಪ್ಪಿಸುವವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.
ಧರ್ಮೋಪದೇಶಕಾಂಡ 27 : 20 (KNV)
ತನ್ನ ತಂದೆಯ ಹೆಂಡತಿಯ ಸಂಗಡ ಮಲಗಿ ತನ್ನ ತಂದೆಯ ವಸ್ತ್ರದ ಸೆರಗನ್ನು ತೆರೆದವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.
ಧರ್ಮೋಪದೇಶಕಾಂಡ 27 : 21 (KNV)
ಯಾವದೊಂದು ಪಶುವಿನ ಸಂಗಡ ಮಲಗು ವವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.
ಧರ್ಮೋಪದೇಶಕಾಂಡ 27 : 22 (KNV)
ತನ್ನ ತಂದೆಗಾಗಲಿ ತಾಯಿಗಾಗಲಿ ಮಗಳಾಗಿರುವ ಸಹೋದರಿಯ ಸಂಗಡ ಮಲಗುವವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.
ಧರ್ಮೋಪದೇಶಕಾಂಡ 27 : 23 (KNV)
ತನ್ನ ಅತ್ತೆಯ ಸಂಗಡ ಮಲಗುವವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.
ಧರ್ಮೋಪದೇಶಕಾಂಡ 27 : 24 (KNV)
ತನ್ನ ನೆರೆಯವನನ್ನು ರಹಸ್ಯವಾಗಿ ಹೊಡೆಯುವ ವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.
ಧರ್ಮೋಪದೇಶಕಾಂಡ 27 : 25 (KNV)
ಅಪರಾಧವಿಲ್ಲದೆ ಮನುಷ್ಯನನ್ನು ಕೊಲ್ಲುವ ಹಾಗೆ ಲಂಚತೆಗೆದುಕೊಳ್ಳುವವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.ಈ ನ್ಯಾಯಪ್ರಮಾಣದ ಮಾತುಗಳನ್ನು ಸ್ಥಾಪಿ ಸದೆ, ಕೈಕೊಳ್ಳದೆ ಇರುವವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ ಎಂದು ಹೇಳಬೇಕು.
ಧರ್ಮೋಪದೇಶಕಾಂಡ 27 : 26 (KNV)
ಈ ನ್ಯಾಯಪ್ರಮಾಣದ ಮಾತುಗಳನ್ನು ಸ್ಥಾಪಿ ಸದೆ, ಕೈಕೊಳ್ಳದೆ ಇರುವವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ ಎಂದು ಹೇಳಬೇಕು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26

BG:

Opacity:

Color:


Size:


Font: