ಧರ್ಮೋಪದೇಶಕಾಂಡ 22 : 1 (KNV)
ನಿನ್ನ ಸಹೋದರನ ಎತ್ತಾಗಲಿ ಕುರಿಯಾಗಲಿ ಮಾರ್ಗ ತಪ್ಪಿದ್ದನ್ನು ನೋಡಿ ಅವುಗಳನ್ನು ಅಲಕ್ಷ್ಯ ಮಾಡಬಾರದು; ಹೇಗಾದರೂ ಅವುಗಳನ್ನು ನಿನ್ನ ಸಹೋದರನಿಗೆ ತಿರುಗಿ ಕೊಡಬೇಕು.
ಧರ್ಮೋಪದೇಶಕಾಂಡ 22 : 2 (KNV)
ಆದರೆ ನಿನ್ನ ಸಹೋದರನು ನಿನಗೆ ಸವಿಾಪವಾಗಿರದೆ ಹೋದರೆ ಇಲ್ಲವೆ ಅವನ ಗುರುತು ನಿನಗೆ ತಿಳಿಯದೆ ಇದ್ದರೆ ತಪ್ಪಿ ಹೋದದ್ದನ್ನು ನಿನ್ನ ಮನೆಗೆ ಒಯ್ಯಬೇಕು; ನಿನ್ನ ಸಹೋದರನು ಅದನ್ನು ಹುಡುಕುವ ವರೆಗೆ ಅದು ನಿನ್ನ ಸಂಗಡ ಇರಬೇಕು; ತರುವಾಯ ಅದನ್ನು ಹಿಂದಕ್ಕೆ ಅವನಿಗೆ ಕೊಡಬೇಕು.
ಧರ್ಮೋಪದೇಶಕಾಂಡ 22 : 3 (KNV)
ಅವನ ಕತ್ತೆಗೆ ಹಾಗೆಯೇ ಮಾಡಬೇಕು; ಅವನ ವಸ್ತ್ರಕ್ಕೂ ಹಾಗೆಯೇ ಮಾಡ ಬೇಕು; ನಿನ್ನ ಸಹೋದರನು ಕಳೆದುಕೊಂಡ ಎಲ್ಲಾ ವಸ್ತುಗಳನ್ನು ನೀನು ಕಂಡುಕೊಂಡರೆ ಹಾಗೆಯೇ ಮಾಡಬೇಕು;
ಧರ್ಮೋಪದೇಶಕಾಂಡ 22 : 4 (KNV)
ನೀನು ಕಾಣದವನಂತೆ ಇರಬಾರದು. ನಿನ್ನ ಸಹೋದರನ ಕತ್ತೆಯಾಗಲಿ ಎತ್ತಾಗಲಿ ಮಾರ್ಗ ದಲ್ಲಿ ಬಿದ್ದಿರುವದನ್ನು ನೋಡಿದರೆ ಅಲಕ್ಷ್ಯಮಾಡ ಬೇಡ; ಹೇಗಾದರೂ ಅವುಗಳನ್ನು ಎಬ್ಬಿಸುವದಕ್ಕೆ ಅವನಿಗೆ ಖಂಡಿತಾ ಸಹಾಯಮಾಡಬೇಕು.
ಧರ್ಮೋಪದೇಶಕಾಂಡ 22 : 5 (KNV)
ಸ್ತ್ರೀಯು ಪುರುಷನ ಉಡಿಗೆ ಉಟ್ಟುಕೊಳ್ಳಬಾರದು; ಪುರುಷನು ಸ್ತ್ರೀ ವಸ್ತ್ರ ಹಾಕಿಕೊಳ್ಳಬಾರದು; ಇವುಗಳನ್ನು ಮಾಡುವವರೆಲ್ಲಾ ಕರ್ತನಿಗೆ ಅಸಹ್ಯ.
ಧರ್ಮೋಪದೇಶಕಾಂಡ 22 : 6 (KNV)
ನಿನಗೆ ಮಾರ್ಗದಲ್ಲಿ ಯಾವದಾದರೊಂದು ಗಿಡದ ಲ್ಲಾಗಲಿ ನೆಲದಲ್ಲಾಗಲಿ ಮರಿಗಳುಳ್ಳ ಇಲ್ಲವೆ ಮೊಟ್ಟೆಗ ಳುಳ್ಳ ಪಕ್ಷಿಯ ಗೂಡು ಸಿಕ್ಕಿದರೆ ಮರಿಗಳ ಮೇಲೆಯಾ ಗಲಿ ಮೊಟ್ಟೆಗಳ ಮೇಲೆಯಾಗಲಿ ತಾಯಿ ಕೂತು ಕೊಂಡಿದ್ದರೆ ಮರಿಗಳ ಸಂಗಡ ತಾಯಿಯನ್ನು ತಕ್ಕೊಳ್ಳ ಬಾರದು;
ಧರ್ಮೋಪದೇಶಕಾಂಡ 22 : 7 (KNV)
ನಿನಗೆ ಒಳ್ಳೇದಾಗುವ ಹಾಗೆಯೂ ನಿನ್ನ ದಿನಗಳು ಹೆಚ್ಚುವ ಹಾಗೆಯೂ ಹೇಗಾದರೂ ತಾಯಿ ಯನ್ನು ಕಳುಹಿಸಿಬಿಟ್ಟು ಮರಿಗಳನ್ನು ತಕ್ಕೊಳ್ಳಬೇಕು.
ಧರ್ಮೋಪದೇಶಕಾಂಡ 22 : 8 (KNV)
ನೀನು ಹೊಸ ಮನೆಯನ್ನು ಕಟ್ಟಿದಾಗ ಯಾವನಾ ದರೂ ಅದರ ಮೇಲಿನಿಂದ ಬೀಳುವ ಪಕ್ಷದಲ್ಲಿ ನೀನು ನಿನ್ನ ಮನೆಗೆ ರಕ್ತಾಪರಾಧ ಹೊರಿಸದ ಹಾಗೆ ನಿನ್ನ ಮಾಳಿಗೆಗೆ ಸಣ್ಣಗೋಡೆ ಕಟ್ಟಬೇಕು.
ಧರ್ಮೋಪದೇಶಕಾಂಡ 22 : 9 (KNV)
ನಿನ್ನ ದ್ರಾಕ್ಷೇತೋಟದಲ್ಲಿ ಎರಡು ತರವಾದ ಬೀಜ ಬಿತ್ತಬಾರದು; ಬಿತ್ತಿದರೆ ನೀನು ಬಿತ್ತಿದ ಬೀಜದ ಪೈರೂ ದ್ರಾಕ್ಷೇತೋಟದ ಹುಟ್ಟುವಳಿಯೂ ಅಶುದ್ಧವಾಗು ವವು.
ಧರ್ಮೋಪದೇಶಕಾಂಡ 22 : 10 (KNV)
ಎತ್ತನ್ನು ಕತ್ತೆಯೊಂದಿಗೆ ಹೂಡಬೇಡ.
ಧರ್ಮೋಪದೇಶಕಾಂಡ 22 : 11 (KNV)
ಉಣ್ಣೆಯೂ ಸಣಬೂ ಕೂಡಿಸಿ ಮಾಡಿದ ವಸ್ತ್ರವನ್ನು ಹೊದಿಯಬಾರದು.
ಧರ್ಮೋಪದೇಶಕಾಂಡ 22 : 12 (KNV)
ನೀನು ಹೊದ್ದುಕೊಳ್ಳುವ ಶಲ್ಯದ ನಾಲ್ಕು ಮೂಲೆ ಗಳಿಗೆ ಗೊಂಡೆಗಳನ್ನು ಮಾಡಿಸಿಕೊಳ್ಳಬೇಕು.
ಧರ್ಮೋಪದೇಶಕಾಂಡ 22 : 13 (KNV)
ಒಬ್ಬನು ಹೆಂಡತಿಯನ್ನು ತಕ್ಕೊಂಡು ಅವಳ ಬಳಿಗೆ ಬಂದ ಮೇಲೆ ಅವಳನ್ನು ಹಗೆಮಾಡಿ
ಧರ್ಮೋಪದೇಶಕಾಂಡ 22 : 14 (KNV)
ಅವಳಿಗೆ ವಿರೋಧವಾದ ಕೆಟ್ಟ ಮಾತಿಗೆ ಆಸ್ಪದಕೊಟ್ಟು ಅವಳ ಹೆಸರನ್ನು ಕೆಡಿಸಿ--ಈ ಹೆಂಗಸನ್ನು ನಾನು ತಕ್ಕೊಂಡು ಅವಳ ಬಳಿಗೆ ಬಂದಾಗ ಅವಳು ಕನ್ಯಾಸ್ತ್ರೀ ಅಲ್ಲವೆಂದು ಕಂಡೆನೆಂಬದಾಗಿ ಹೇಳಿದರೆ
ಧರ್ಮೋಪದೇಶಕಾಂಡ 22 : 15 (KNV)
ಆ ಹುಡುಗಿಯ ತಂದೆಯೂ ತಾಯಿಯೂ ಆ ಹುಡುಗಿಯ ಕನ್ಯಾ ಭಾವದ ಲಕ್ಷಣಗಳನ್ನು ತಕ್ಕೊಂಡು, ಪಟ್ಟಣದ ಹಿರಿಯರ ಮುಂದೆ ಬಾಗಲಿನ ಬಳಿಗೆ ತರಬೇಕು.
ಧರ್ಮೋಪದೇಶಕಾಂಡ 22 : 16 (KNV)
ಆ ಮೇಲೆ ಹುಡುಗಿಯ ತಂದೆಯು ಹಿರಿಯರಿಗೆ ಹೇಳತಕ್ಕದ್ದೇ ನೆಂದರೆ--ನನ್ನ ಮಗಳನ್ನು ಈ ಮನುಷ್ಯನಿಗೆ ಹೆಂಡತಿ ಯಾಗಿ ಕೊಟ್ಟಿದ್ದೇನೆ; ಅವನು ಅವಳನ್ನು ಹಗೆಮಾಡಿ ದ್ದಾನೆ;
ಧರ್ಮೋಪದೇಶಕಾಂಡ 22 : 17 (KNV)
ಇಗೋ, ಅವನು--ನಿನ್ನ ಮಗಳು ಕನ್ಯಾಸ್ತ್ರೀ ಅಲ್ಲವೆಂದು ಕಂಡೆನೆಂಬದಾಗಿ ಅವಳಿಗೆ ವಿರೋಧವಾದ ಕೆಟ್ಟಮಾತಿಗೆ ಆಸ್ಪದಕೊಟ್ಟಿದ್ದಾನೆ; ಆದರೂ ಇದೆ ನನ್ನ ಮಗಳ ಕನ್ಯಾಭಾವದ ಲಕ್ಷಣಗಳು. ಹೀಗೆ ಅವರು ಪಟ್ಟಣದ ಹಿರಿಯರ ಮುಂದೆ ಬಟ್ಟೆಯನ್ನು ಹಾಸಬೇಕು.
ಧರ್ಮೋಪದೇಶಕಾಂಡ 22 : 18 (KNV)
ಆಗ ಪಟ್ಟಣದ ಹಿರಿಯರು ಆ ಮನುಷ್ಯನನ್ನು ತೆಗೆದುಕೊಂಡು ಅವನನ್ನು ಶಿಕ್ಷಿಸಬೇಕು.
ಧರ್ಮೋಪದೇಶಕಾಂಡ 22 : 19 (KNV)
ಅವನು ಇಸ್ರಾಯೇಲಿನಲ್ಲಿ ಒಬ್ಬ ಕನ್ಯಾ ಸ್ತ್ರೀಯ ಹೆಸರನ್ನು ಕೆಡಿಸಿದ್ದರಿಂದ ಅವನು ಬೆಳ್ಳಿಯ ನೂರು ಹಣಗಳನ್ನು ದಂಡ ತೆಗೆದುಕೊಂಡು ಆ ಹುಡುಗಿಯ ತಂದೆಗೆ ಕೊಡಬೇಕು; ಇದಲ್ಲದೆ ಅವಳು ಅವನಿಗೆ ಹೆಂಡತಿ ಯಾಗಬೇಕು; ಅವನು ಬದುಕುವ ದಿವಸಗಳೆಲ್ಲಾ ಅವಳನ್ನು ಕಳುಹಿಸಬಾರದು.
ಧರ್ಮೋಪದೇಶಕಾಂಡ 22 : 20 (KNV)
ಈ ಮಾತು ಸತ್ಯವಾಗಿದ್ದು, ಆ ಹುಡುಗಿಯಲ್ಲಿ ಕನ್ಯಾಭಾವದ ಲಕ್ಷಣ ಕಾಣದೆ ಇದ್ದರೆ
ಧರ್ಮೋಪದೇಶಕಾಂಡ 22 : 21 (KNV)
ಆ ಹುಡುಗಿ ಯನ್ನು ಅವಳ ತಂದೆಯ ಮನೆಯ ಬಾಗಲಿಗೆ ತರಬೇಕು; ಅವಳ ಪಟ್ಟಣದ ಮನುಷ್ಯರು ಅವಳನ್ನು ಸಾಯುವ ಹಾಗೆ ಕಲ್ಲೆಸೆಯಬೇಕು; ಅವಳು ತಂದೆಯ ಮನೆಯಲ್ಲಿ ಸೂಳೆತನ ಮಾಡಿ ಇಸ್ರಾಯೇಲಿನಲ್ಲಿ ದುಷ್ಟತನವನ್ನು ಮಾಡಿದ್ದಾಳೆ. ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದುಹಾಕಬೇಕು;
ಧರ್ಮೋಪದೇಶಕಾಂಡ 22 : 22 (KNV)
ಒಬ್ಬ ಮನುಷ್ಯನು ಮುತ್ತೈದೆಯ ಸಂಗಡ ಮಲಗಿ ಕೊಂಡವನಾಗಿ ಸಿಕ್ಕಿದರೆ ಆ ಸ್ತ್ರೀಯ ಸಂಗಡ ಮಲಗಿ ಕೊಂಡ ಮನುಷ್ಯನೂ ಆ ಸ್ತ್ರೀಯೂ ಅವರಿಬ್ಬರೂ ಸಾಯಬೇಕು; ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು.
ಧರ್ಮೋಪದೇಶಕಾಂಡ 22 : 23 (KNV)
ಕನ್ಯಾ ಸ್ತ್ರೀಯಾದ ಹುಡುಗಿ ಒಬ್ಬ ಮನುಷ್ಯನಿಗೆ ನಿಶ್ಚಯಮಾಡಿರಲಾಗಿ ಮತ್ತೊಬ್ಬ ಮನುಷ್ಯನು ಪಟ್ಟಣ ದಲ್ಲಿ ಅವಳನ್ನು ಕಂಡು ಅವಳ ಸಂಗಡ ಮಲಗಿದರೆ
ಧರ್ಮೋಪದೇಶಕಾಂಡ 22 : 24 (KNV)
ಅವರಿಬ್ಬರನ್ನು ಆ ಪಟ್ಟಣದ ಬಾಗಲಿನ ಹೊರಗೆ ತಂದು ಅವರು ಸಾಯುವ ಹಾಗೆ ಕಲ್ಲೆಸೆಯಬೇಕು; ಆ ಹುಡುಗಿಯು ಪಟ್ಟಣದಲ್ಲಿ ಇದ್ದಾಗ್ಯೂ ಕೂಗದೆ ಇದ್ದದ್ದರಿಂದಲೂ ಆ ಮನುಷ್ಯನು, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿದ್ದರಿಂದಲೂ ಅವರನ್ನು ಸಾಯಿಸ ಬೇಕು. ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದು ಹಾಕಬೇಕು.
ಧರ್ಮೋಪದೇಶಕಾಂಡ 22 : 25 (KNV)
ಒಬ್ಬ ಮನುಷ್ಯನು ನಿಶ್ಚಯಮಾಡಿದ ಹುಡುಗಿ ಯನ್ನು ಹೊಲದಲ್ಲಿ ಕಂಡು ಅವಳನ್ನು ಬಲಾತ್ಕರಿಸಿ ಅವಳ ಸಂಗಡ ಮಲಗಿದರೆ ಅವಳ ಸಂಗಡ ಮಲಗಿದ ಮನುಷ್ಯನು ಮಾತ್ರ ಸಾಯಬೇಕು. ಆದರೆ ಆ ಹುಡುಗಿಗೆ ಏನೂ ಮಾಡಬೇಡ
ಧರ್ಮೋಪದೇಶಕಾಂಡ 22 : 26 (KNV)
ಆ ಹುಡುಗಿಯಲ್ಲಿ ಮರಣಕ್ಕೆ ಯೋಗ್ಯವಾದ ಪಾಪವಿಲ್ಲ. ಆ ಕಾರ್ಯವು ಒಬ್ಬನು ತನ್ನ ನೆರೆಯವನಿಗೆ ವಿರೋಧವಾಗಿ ಎದ್ದು ಅವನನ್ನು ಕೊಂದುಹಾಕಿದ ಹಾಗಿದೆ.
ಧರ್ಮೋಪದೇಶಕಾಂಡ 22 : 27 (KNV)
ಅವನು ಹೊಲದಲ್ಲಿ ಅವಳನ್ನು ಕಂಡನು; ನಿಶ್ಚಯಮಾಡಿದ ಆ ಹುಡುಗಿ ಕೂಗಿದಳು, ಆದರೆ ರಕ್ಷಿಸುವವನು ಅವಳಿಗೆ ಯಾರೂ ಇಲ್ಲ.
ಧರ್ಮೋಪದೇಶಕಾಂಡ 22 : 28 (KNV)
ಒಬ್ಬ ಮನುಷ್ಯನು ನಿಶ್ಚಯಮಾಡದಿರುವ ಕನ್ಯಾ ಸ್ತ್ರೀಯಾದ ಹುಡುಗಿಯನ್ನು ಕಂಡು ಅವಳನ್ನು ಹಿಡಿದು ಅವಳ ಸಂಗಡ ಮಲಗುವಲ್ಲಿ ಅವನು ಸಿಕ್ಕಿದರೆ
ಧರ್ಮೋಪದೇಶಕಾಂಡ 22 : 29 (KNV)
ಅವಳ ಸಂಗಡ ಮಲಗಿದ ಮನುಷ್ಯನು ಆ ಹುಡುಗಿಯ ತಂದೆಗೆ ಐವತ್ತು ಬೆಳ್ಳಿಯ ಹಣಗಳನ್ನು ಕೊಡಬೇಕು; ಮತ್ತು ಅವಳು ಅವನಿಗೆ ಹೆಂಡತಿಯಾಗಬೇಕು; ಅವನು ಅವಳನ್ನು ಕೆಡಿಸಿದ್ದರಿಂದ ಬದುಕುವ ದಿವಸಗಳೆಲ್ಲಾ ಅವಳನ್ನು ಕಳುಹಿಸಿಬಿಡಕೂಡದು.ಒಬ್ಬನು ತನ್ನ ತಂದೆಯ ಹೆಂಡತಿಯನ್ನು ತಕ್ಕೊಳ್ಳ ಕೂಡದು; ತನ್ನ ತಂದೆಯ ವಸ್ತ್ರದ ಸೆರಗನ್ನು ತೆರೆಯ ಕೂಡದು.
ಧರ್ಮೋಪದೇಶಕಾಂಡ 22 : 30 (KNV)
ಒಬ್ಬನು ತನ್ನ ತಂದೆಯ ಹೆಂಡತಿಯನ್ನು ತಕ್ಕೊಳ್ಳ ಕೂಡದು; ತನ್ನ ತಂದೆಯ ವಸ್ತ್ರದ ಸೆರಗನ್ನು ತೆರೆಯ ಕೂಡದು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30

BG:

Opacity:

Color:


Size:


Font: