ಧರ್ಮೋಪದೇಶಕಾಂಡ 2 : 1 (KNV)
ಆಗ ನಾವು ತಿರುಗಿಕೊಂಡು ಕರ್ತನು ನನಗೆ ಹೇಳಿದ ಪ್ರಕಾರ ಕೆಂಪು ಸಮುದ್ರದ ಮಾರ್ಗವಾಗಿ ಅರಣ್ಯಕ್ಕೆ ಹೊರಟು ಅನೇಕ ದಿವಸಗಳು ಸೇಯಾರ್‌ ಬೆಟ್ಟವನ್ನು ಸುತ್ತಿಕೊಂಡೆವು.
ಧರ್ಮೋಪದೇಶಕಾಂಡ 2 : 2 (KNV)
ಆ ಮೇಲೆ ಕರ್ತನು ನನಗೆ ಹೇಳಿದ್ದೇನಂದರೆ--
ಧರ್ಮೋಪದೇಶಕಾಂಡ 2 : 3 (KNV)
ನೀವು ಈ ಬೆಟ್ಟವನ್ನು ಸುತ್ತಿಕೊಂಡದ್ದು ಸಾಕು, ಉತ್ತರಕ್ಕೆ ತಿರುಗಿ ಕೊಳ್ಳಿರಿ.
ಧರ್ಮೋಪದೇಶಕಾಂಡ 2 : 4 (KNV)
ನೀನು ಜನರಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ನೀವು ಸೇಯಾರಿನಲ್ಲಿ ವಾಸಮಾಡುವ ನಿಮ್ಮ ಸಹೋದರರಾದ ಏಸಾವನ ಕುಮಾರರ ಮೇರೆಯನ್ನು ದಾಟಬೇಕು; ಅವರು ನಿಮಗೆ ಭಯಪಡುವರು; ಆದದರಿಂದ ನೀವು ಬಹಳ ಜಾಗ್ರತೆಯಿಂದಿರಬೇಕು.
ಧರ್ಮೋಪದೇಶಕಾಂಡ 2 : 5 (KNV)
ಅವರ ಸಂಗಡ ಜಗಳವಾಡಬೇಡಿರಿ. ನಾನು ನಿಮಗೆ ಅವರ ದೇಶದಲ್ಲಿ ಪಾದದಷ್ಟೂ ಸ್ಥಳ ಕೊಡುವದಿಲ್ಲ; ಸೇಯಾರ್‌ ಬೆಟ್ಟವನ್ನು ಏಸಾವನಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ.
ಧರ್ಮೋಪದೇಶಕಾಂಡ 2 : 6 (KNV)
ನೀವು ಉಣ್ಣುವ ಆಹಾರವನ್ನು ಅವ ರಿಂದ ಹಣಕ್ಕೆ ತಕ್ಕೊಳ್ಳಬೇಕು; ಕುಡಿಯುವ ನೀರನ್ನು ಸಹ ಅವರಿಂದ ಹಣಕ್ಕೆ ತಕ್ಕೊಳ್ಳಬೇಕು.
ಧರ್ಮೋಪದೇಶಕಾಂಡ 2 : 7 (KNV)
ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಕೈಕೆಲಸದಲ್ಲಿ ನಿನ್ನನ್ನು ಆಶೀರ್ವದಿಸಿದ್ದಾನೆ; ನೀನು ಈ ದೊಡ್ಡ ಅರಣ್ಯದಲ್ಲಿ ಸಂಚಾರ ಮಾಡಿದ್ದನ್ನು ಆತನು ಬಲ್ಲನು; ಈ ನಾಲ್ವತ್ತು ವರುಷ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ; ನಿನಗೆ ಏನೂ ಕಡಿಮೆ ಆಗಲಿಲ್ಲ ಎಂದು ಹೇಳಿದನು.
ಧರ್ಮೋಪದೇಶಕಾಂಡ 2 : 8 (KNV)
ಈ ಪ್ರಕಾರ ನಾವು ಸೇಯಾರಿನಲ್ಲಿ ವಾಸಮಾಡುವ ನಮ್ಮ ಸಹೋದರರಾದ ಏಸಾವನ ಮಕ್ಕಳ ಕಡೆಯಿಂದ ಬೈಲಿನ ಮಾರ್ಗವಾಗಿ ಏಲತ್‌, ಎಚ್ಯೋನ್ಗೆಬೆರ್‌ ಎಂಬ ಪಟ್ಟಣಗಳ ಮುಂದಾಗಿ ದಾಟಿ ತಿರುಗಿಕೊಂಡು ಮೋವಾಬಿನ ಅರಣ್ಯದ ಮಾರ್ಗವಾಗಿ ಹಾದು ಹೋದೆವು.
ಧರ್ಮೋಪದೇಶಕಾಂಡ 2 : 9 (KNV)
ಆಗ ಕರ್ತನು ನನಗೆ--ಮೋವಾಬ್ಯರಿಗೆ ಉಪದ್ರಕೊಡಬೇಡ; ಅವರ ಸಂಗಡ ಜಗಳವಾಡಿ ಯುದ್ಧಮಾಡಬೇಡ; ನಾನು ಅವರ ದೇಶದಲ್ಲಿ ನಿನಗೆ ಸ್ವಾಸ್ತ್ಯವನ್ನು ಕೊಡುವದಿಲ್ಲ; ನಾನು ಆರ್‌ ಅನ್ನು ಲೋಟನ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲವೇ ಅಂದನು.
ಧರ್ಮೋಪದೇಶಕಾಂಡ 2 : 10 (KNV)
ಅದರೊಳಗೆ ಪೂರ್ವದಲ್ಲಿ ಏಮಿಯರು ವಾಸವಾಗಿದ್ದರು. ಅವರು ಅನಾಕ್ಯರ ಹಾಗೆ ದೊಡ್ಡವ ರಾಗಿಯೂ ಬಹಳವಾದವರಾಗಿಯೂ ಉದ್ದವಾದವ ರಾಗಿಯೂ ಇರುವ ಜನರು.
ಧರ್ಮೋಪದೇಶಕಾಂಡ 2 : 11 (KNV)
ಅವರು ಅನಾಕ್ಯರ ಹಾಗೆ ಮಹಾಶರೀರಗಳೆನ್ನಿಸಿಕೊಂಡರು; ಮೋವಾಬ್ಯರು ಅವರನ್ನು ಏಮಿಯರೆಂದು ಕರೆದರು.
ಧರ್ಮೋಪದೇಶಕಾಂಡ 2 : 12 (KNV)
ಹೋರಿಯರು ಸಹ ಪೂರ್ವದಲ್ಲಿ ಸೇಯಾರಿನಲ್ಲಿ ವಾಸಮಾಡಿದರು; ಆದರೆ ಏಸಾವನ ಮಕ್ಕಳು ಅವರನ್ನು ಹೊರಡಿಸಿ ತಮ್ಮ ಎದುರಿನಲ್ಲಿ ಸಂಹರಿಸಿ ಇಸ್ರಾಯೇಲ್ಯರು, ಕರ್ತನು ತಮಗೆ ಕೊಟ್ಟ ಸ್ವಾಸ್ತ್ಯದ ದೇಶದಲ್ಲಿ ಮಾಡಿದ ಹಾಗೆ ಅವರ ಬದಲಾಗಿ ವಾಸಮಾಡಿದರು.
ಧರ್ಮೋಪದೇಶಕಾಂಡ 2 : 13 (KNV)
ಈಗ ಎದ್ದು ಜೆರೆದ್‌ ಹಳ್ಳವನ್ನು ದಾಟಿರಿ ಅಂದಮೇಲೆ ನಾವು ಜೆರೆದ್‌ ಹಳ್ಳವನ್ನು ದಾಟಿದೆವು.
ಧರ್ಮೋಪದೇಶಕಾಂಡ 2 : 14 (KNV)
ನಾವು ಕಾದೇಶ್‌ಬರ್ನೆಯವನ್ನು ಬಿಟ್ಟಂದಿನಿಂದ ಜೆರೆದ್‌ ಹಳ್ಳ ವನ್ನು ದಾಟಿದ ವರೆಗೆ ಹೋದ ಕಾಲವು ಮೂವ ತ್ತೆಂಟು ವರುಷ; ಕರ್ತನು ಅವರಿಗೆ ಪ್ರಮಾಣಮಾಡಿದ ಪ್ರಕಾರ ಯುದ್ಧಸ್ಥರ ಸಂತತಿ ಎಲ್ಲಾ ಸೈನ್ಯದೊಳಗಿಂದ ಮುಗಿದುಹೋಗುವ ವರೆಗೆ ತಡವಾಯಿತು.
ಧರ್ಮೋಪದೇಶಕಾಂಡ 2 : 15 (KNV)
ಅವರು ಮುಗಿದುಹೋಗುವ ವರೆಗೆ ಅವರನ್ನು ಸೈನ್ಯದೊಳ ಗಿಂದ ನಿರ್ಮೂಲ ಮಾಡುವದಕ್ಕೆ ಕರ್ತನ ಹಸ್ತವು ಅವರ ಮೇಲಿತ್ತು.
ಧರ್ಮೋಪದೇಶಕಾಂಡ 2 : 16 (KNV)
ಜನರೊಳಗಿಂದ ಸೈನಿಕರೆಲ್ಲರೂ ಸತ್ತುಹೋದ ನಂತರ
ಧರ್ಮೋಪದೇಶಕಾಂಡ 2 : 17 (KNV)
ಕರ್ತನು ನನಗೆ--ಇಂದು ನೀನು ಮೋವಾಬಿನ ಮೇರೆಯಾದ ಆರ್‌ ಅನ್ನು ದಾಟಬೇಕು;
ಧರ್ಮೋಪದೇಶಕಾಂಡ 2 : 18 (KNV)
ಅಮ್ಮೋನನ ಮಕ್ಕಳೆದುರಿಗೆ ನೀನು ಬಂದರೆ ಅವರಿಗೆ ಉಪದ್ರ ಕೊಡಬೇಡ; ಅವರ ಸಂಗಡ ಜಗಳವಾಡ ಬೇಡ;
ಧರ್ಮೋಪದೇಶಕಾಂಡ 2 : 19 (KNV)
ನಾನು ಅಮ್ಮೋನನ ಮಕ್ಕಳ ದೇಶದಲ್ಲಿ ನಿನಗೆ ಸ್ವಾಸ್ತ್ಯವನ್ನು ಕೊಡುವದಿಲ್ಲ. ನಾನು ಅದನ್ನು ಲೋಟನ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ ಅಂದನು.
ಧರ್ಮೋಪದೇಶಕಾಂಡ 2 : 20 (KNV)
(ಇದು ಸಹ ರಾಕ್ಷಸರ ದೇಶವೆನಿಸಿಕೊಂಡಿತು; ಪೂರ್ವದಲ್ಲಿ ರಾಕ್ಷಸರು ಅದರಲ್ಲಿ ವಾಸಮಾಡಿದರು; ಅಮ್ಮೋನಿಯರು ಅವರಿಗೆ ಜಂಜುಮ್ಯರೆಂದು ಕರೆದರು.
ಧರ್ಮೋಪದೇಶಕಾಂಡ 2 : 21 (KNV)
ಅವರು ಅನಾಕ್ಯರ ಹಾಗೆ ದೊಡ್ಡವರೂ ಬಹಳವಾದ ವರೂ ಉದ್ದವಾದವರೂ ಆಗಿರುವ ಜನರು; ಆದರೆ ಕರ್ತನು ಅವರನ್ನು ಇವರ ಮುಂದೆ ನಾಶಮಾಡಿದ್ದರಿಂದ ಇವರು ಅವರನ್ನು ಹೊರಡಿಸಿ ಅವರ ಬದಲಾಗಿ ವಾಸಿಸಿದರು.
ಧರ್ಮೋಪದೇಶಕಾಂಡ 2 : 22 (KNV)
ಕರ್ತನು ಸೇಯಾರಿನಲ್ಲಿ ವಾಸವಾಗಿ ರುವ ಏಸಾವನ ಮಕ್ಕಳಿಗೆ ಮಾಡಿದ ಹಾಗಾಯಿತು. ಅವನು ಅವರ ಮುಂದೆ ಹೋರಿಯರನ್ನು ನಾಶ ಮಾಡಿದಾಗ ಅವರು ಇವರನ್ನು ಹೊರಡಿಸಿ ಇವರ ಬದಲಾಗಿ ಇಂದಿನ ವರೆಗೂ ವಾಸಿಸಿದ್ದವರಲ್ಲಾ.
ಧರ್ಮೋಪದೇಶಕಾಂಡ 2 : 23 (KNV)
ಹಾಗೆ ಹಚರೀಮಿನ ಅಜ್ಹದ ಪರ್ಯಂತರ ವಾಸ ವಾಗಿದ್ದ ಅವ್ವಿಯರನ್ನು ಕಫ್ತೋರಿಂದ ಹೊರಟ ಕಫ್ತೋರ್ಯರು ನಾಶಮಾಡಿ ಅವರ ಬದಲಾಗಿ ವಾಸಿಸಿದರು.)
ಧರ್ಮೋಪದೇಶಕಾಂಡ 2 : 24 (KNV)
ಏಳಿರಿ, ಹೊರಡಿರಿ; ಅರ್ನೋನ್‌ ನದಿಯನ್ನು ದಾಟಿರಿ; ಇಗೋ, ಹೆಷ್ಬೋನಿನ ಅರಸ ನಾದ ಅಮೋರಿಯನಾದ ಸೀಹೋನನನ್ನೂ ಅವನ ದೇಶವನ್ನೂ ನಿನ್ನ ಕೈಯಲ್ಲಿ ಕೊಟ್ಟಿದ್ದೇನೆ, ಸ್ವಾಧೀನ ಪಡಿಸಿಕೊಳ್ಳುವದಕ್ಕೆ ಆರಂಭಮಾಡು. ಅವನ ಸಂಗಡ ಜಗಳವಾಡಿ ಯುದ್ಧಮಾಡು.
ಧರ್ಮೋಪದೇಶಕಾಂಡ 2 : 25 (KNV)
ಇದೇ ದಿವಸ ಆಕಾಶವೆಲ್ಲಾದರ ಕೆಳಗಿರುವ ಜನಾಂಗಗಳ ಮೇಲೆ ನಿನ್ನ ಹೆದರಿಕೆಯನ್ನೂ ನಿನ್ನ ಭಯವನ್ನೂ ಉಂಟು ಮಾಡಲಾರಂಭಿಸುತ್ತೇನೆ. ಅವರು ನಿನ್ನ ಸುದ್ದಿಯನ್ನು ಕೇಳಿ ನಿನಗೋಸ್ಕರ ನಡುಗಿ ಅಂಜುವರು.
ಧರ್ಮೋಪದೇಶಕಾಂಡ 2 : 26 (KNV)
ಆಗ ನಾನು ಕೆದೇಮೋತೆಂಬ ಅರಣ್ಯದಿಂದ ಹೆಷ್ಬೋನಿನ ಅರಸನಾದ ಸೀಹೋನನಿಗೆ ಸಮಾಧಾನ ಸಂದೇಶ ದೂತರನ್ನು ಕಳುಹಿಸಿ--
ಧರ್ಮೋಪದೇಶಕಾಂಡ 2 : 27 (KNV)
ನಾನು ನಿನ್ನ ದೇಶ ವನ್ನು ದಾಟಿಹೋಗುತ್ತೇನೆ. ನಾನು ರಾಜ ಮಾರ್ಗ ದಿಂದಲೇ ಹೋಗುತ್ತೇನೆ; ಎಡಕ್ಕೂ ಬಲಕ್ಕೂ ತಿರುಗು ವದಿಲ್ಲ.
ಧರ್ಮೋಪದೇಶಕಾಂಡ 2 : 28 (KNV)
ನೀನು ಹಣಕ್ಕೋಸ್ಕರ ನನಗೆ ಮಾರುವ ಆಹಾರವನ್ನು ಉಣ್ಣುತ್ತೇನೆ; ಹಣಕ್ಕೋಸ್ಕರ ನನಗೆ ಕೊಡುವ ನೀರನ್ನು ಕುಡಿಯುತ್ತೇನೆ;
ಧರ್ಮೋಪದೇಶಕಾಂಡ 2 : 29 (KNV)
ಕಾಲ್ನಡಿಗೆಯಾಗಿ ಹಾದು ಹೋಗುತ್ತೇನಷ್ಟೆ. ಸೇಯಾರಿನಲ್ಲಿ ವಾಸ ಮಾಡುವ ಏಸಾವನ ಮಕ್ಕಳೂ ಆರ್‌ನಲ್ಲಿ ವಾಸ ಮಾಡುವ ಮೋವಾಬ್ಯರೂ ನನಗೆ ಮಾಡಿದ ಹಾಗೆ ನಾನು ಯೊರ್ದನಿನ ಆಚೆಗೆ ನಮ್ಮ ದೇವರಾದ ಕರ್ತನು ನಮಗೆ ಕೊಡುವ ದೇಶಕ್ಕೆ ಹೋಗುವ ವರೆಗೆ ನನಗೆ ಮಾಡು ಅಂದೆನು.
ಧರ್ಮೋಪದೇಶಕಾಂಡ 2 : 30 (KNV)
ಆದರೆ ಹೆಷ್ಬೋನಿನ ಅರಸ ನಾದ ಸೀಹೋನನು ನಮ್ಮನ್ನು ತನ್ನ ಬಳಿಯಿಂದ ದಾಟಿಹೋಗಲು ಮನಸ್ಸು ಮಾಡಲಿಲ್ಲ; ಯಾಕಂದರೆ ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸುವ ಹಾಗೆ ನಿನ್ನ ದೇವರಾದ ಕರ್ತನು ಅವನ ಬುದ್ಧಿಯನ್ನು ಮಂಕು ಮಾಡಿ ಹೃದಯವನ್ನು ಕಠಿಣಪಡಿಸಿದನೆಂದು ಈಗಾ ಗಲೇ ಪ್ರಸಿದ್ಧವಾಗಿದೆ.
ಧರ್ಮೋಪದೇಶಕಾಂಡ 2 : 31 (KNV)
ಇದಲ್ಲದೆ ಕರ್ತನು ನನಗೆ--ಇಗೋ, ಸೀಹೋ ನನನ್ನೂ ಅವನ ದೇಶವನ್ನೂ ನಿನ್ನ ಮುಂದೆ ಒಪ್ಪಿಸು ವದಕ್ಕೆ ಆರಂಭಮಾಡಿದ್ದೇನೆ; ಅವನ ದೇಶವನ್ನು ಸ್ವಾಸ್ತ್ಯವಾಗಿ ಹೊಂದುವ ಹಾಗೆ ಸ್ವತಂತ್ರಿಸಿಕೊಳ್ಳುವದಕ್ಕೆ ಆರಂಭಮಾಡು ಅಂದನು.
ಧರ್ಮೋಪದೇಶಕಾಂಡ 2 : 32 (KNV)
ಆಗ ಸೀಹೋನನು ತನ್ನ ಜನರೆಲ್ಲರ ಸಂಗಡ ಯುದ್ಧಮಾಡುವದಕ್ಕೆ ಯಹ ಜಿಗೆ ಸವಿಾಪದಲ್ಲಿ ನಮ್ಮೆದುರಿಗೆ ಹೊರಟನು.
ಧರ್ಮೋಪದೇಶಕಾಂಡ 2 : 33 (KNV)
ನಮ್ಮ ದೇವರಾದ ಕರ್ತನು ಅವನನ್ನು ನಮ್ಮ ಕೈಗೆ ಕೊಟ್ಟುಬಿಟ್ಟಿ ದ್ದರಿಂದ ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ ಹೊಡೆದೆವು;
ಧರ್ಮೋಪದೇಶಕಾಂಡ 2 : 34 (KNV)
ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ತಕ್ಕೊಂಡು ಪ್ರತಿಯೊಂದು ಪಟ್ಟಣದ ಗಂಡಸರನ್ನೂ ಹೆಂಗಸರನ್ನೂ ಚಿಕ್ಕವರನ್ನೂ ನಿರ್ಮೂಲ ಮಾಡಿದೆವು, ಒಬ್ಬರನ್ನೂ ಉಳಿಸಲಿಲ್ಲ.
ಧರ್ಮೋಪದೇಶಕಾಂಡ 2 : 35 (KNV)
ಪಶುಗಳನ್ನು ಮಾತ್ರ ನಮಗೆ ಸುಲುಕೊಂಡು ಪಟ್ಟಣಗಳನ್ನು ಕೊಳ್ಳೆ ಹೊಡೆದೆವು.
ಧರ್ಮೋಪದೇಶಕಾಂಡ 2 : 36 (KNV)
ಅರ್ನೋನಿನ ತೀರದಲ್ಲಿರುವ ಅರೋ ಯೇರ್‌ ಮತ್ತು ಆ ಹಳ್ಳದ ಪಟ್ಟಣವು ಮೊದಲ್ಗೊಂಡು ಗಿಲ್ಯಾದಿನ ವರೆಗೂ ಒಂದು ಪಟ್ಟಣವಾದರೂ ನಮಗೆ ಅಸಾಧ್ಯವಾಗಿರಲಿಲ್ಲ; ನಮ್ಮ ದೇವರಾದ ಕರ್ತನು ಅವುಗಳನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿದನು.ಅಮ್ಮೋನಿಯರ ಮಕ್ಕಳ ದೇಶಕ್ಕೂ ಯಬ್ಬೋಕ್‌ ನದಿಯ ಯಾವ ದೊಂದು ಸ್ಥಳಕ್ಕೂ ಪರ್ವತ ಪಟ್ಟಣಗಳಿಗೂ ನಮ್ಮ ದೇವರಾದ ಕರ್ತನು ನಮಗೆ ಬೇಡವೆಂದ ಯಾವ ಸ್ಥಳಕ್ಕೂ ನೀನು ಮಾತ್ರ ಬರಲಿಲ್ಲ.
ಧರ್ಮೋಪದೇಶಕಾಂಡ 2 : 37 (KNV)
ಅಮ್ಮೋನಿಯರ ಮಕ್ಕಳ ದೇಶಕ್ಕೂ ಯಬ್ಬೋಕ್‌ ನದಿಯ ಯಾವ ದೊಂದು ಸ್ಥಳಕ್ಕೂ ಪರ್ವತ ಪಟ್ಟಣಗಳಿಗೂ ನಮ್ಮ ದೇವರಾದ ಕರ್ತನು ನಮಗೆ ಬೇಡವೆಂದ ಯಾವ ಸ್ಥಳಕ್ಕೂ ನೀನು ಮಾತ್ರ ಬರಲಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37

BG:

Opacity:

Color:


Size:


Font: