ರೋಮಾಪುರದವರಿಗೆ 5 : 1 (KNV)
ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ದೇವರೊಂದಿಗೆ ಸಮಾಧಾನ ಉಂಟಾಗಿದೆ.
ರೋಮಾಪುರದವರಿಗೆ 5 : 2 (KNV)
ಈಗ ನಾವು ನೆಲೆ ಗೊಂಡಿರುವ ಈ ಕೃಪೆಯಲ್ಲಿ ಆತನ ಮುಖಾಂತರವೇ ನಂಬಿಕೆಯಿಂದ ಪ್ರವೇಶವಾದದರಿಂದ ದೇವರ ಮಹಿ ಮೆಯ ನಿರೀಕ್ಷೆಯಲ್ಲಿ ಉಲ್ಲಾಸಿಸುತ್ತೇವೆ.
ರೋಮಾಪುರದವರಿಗೆ 5 : 3 (KNV)
ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಉಪದ್ರವ ಗಳಲ್ಲಿಯೂ ಹೆಚ್ಚಳ ಪಡುತ್ತೇವೆ; ಉಪದ್ರವದಿಂದ ತಾಳ್ಮೆಯೂ
ರೋಮಾಪುರದವರಿಗೆ 5 : 4 (KNV)
ತಾಳ್ಮೆಯಿಂದ ಅನುಭವವೂ ಅನುಭವ ದಿಂದ ನಿರೀಕ್ಷೆಯೂ ಉಂಟಾಗುತ್ತವೆಂದು ಬಲ್ಲೆವು.
ರೋಮಾಪುರದವರಿಗೆ 5 : 5 (KNV)
ಈ ನಿರೀಕ್ಷೆಯು ನಾಚಿಕೆಪಡಿಸುವದಿಲ್ಲ; ನಮಗೆ ಕೊಡಲ್ಪಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದದೆ.
ರೋಮಾಪುರದವರಿಗೆ 5 : 6 (KNV)
ನಾವು ಅಶಕ್ತರಾಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲ ದಲ್ಲಿ ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟನು.
ರೋಮಾಪುರದವರಿಗೆ 5 : 7 (KNV)
ನೀತಿ ವಂತನಿಗೋಸ್ಕರ ಯಾರಾದರೂ ಪ್ರಾಣ ಕೊಡುವದು ಅಪರೂಪ, ಒಳ್ಳೆಯವರಿಗೋಸ್ಕರ ಪ್ರಾಣಕೊಡು ವದಕ್ಕೆ ಯಾವನಾದರೂ ಧೈರ್ಯಮಾಡಿದರೂ ಮಾಡಾನು.
ರೋಮಾಪುರದವರಿಗೆ 5 : 8 (KNV)
ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ತೋರ್ಪಡಿಸಿದ್ದಾನೆ.
ರೋಮಾಪುರದವರಿಗೆ 5 : 9 (KNV)
ಈಗ ನಾವು ಆತನ ರಕ್ತದಿಂದ ನೀತಿವಂತ ರಾಗಿರಲಾಗಿ ಬರುವ ಕೋಪದಿಂದ ಆತನ ಮೂಲಕ ರಕ್ಷಿಸಲ್ಪಡುವದು ಮತ್ತೂ ನಿಶ್ಚಯವಲ್ಲವೇ.
ರೋಮಾಪುರದವರಿಗೆ 5 : 10 (KNV)
ವೈರಿ ಗಳಾಗಿದ್ದ ನಾವು ದೇವರ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನವಾಗಿದ್ದರೆ ಸಮಾಧಾನವಾದ ನಮಗೆ ಆತನ ಜೀವದಿಂದ ರಕ್ಷಣೆಯಾಗುವದು ಮತ್ತೂ ನಿಶ್ಚಯವಲ್ಲವೇ.
ರೋಮಾಪುರದವರಿಗೆ 5 : 11 (KNV)
ಇಷ್ಟು ಮಾತ್ರವಲ್ಲದೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಈಗ ಸಮಾಧಾನ ಹೊಂದಿದವರಾಗಿ ಆತನ ಮುಖಾಂತರ ನಾವು ಸಹ ದೇವರಲ್ಲಿ ಹರ್ಷಗೊಳ್ಳುತ್ತೇವೆ.
ರೋಮಾಪುರದವರಿಗೆ 5 : 12 (KNV)
ಈ ವಿಷಯ ಹೇಗಂದರೆ, ಒಬ್ಬ ಮನುಷ್ಯ ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕ ದೊಳಗೆ ಸೇರಿದವು; ಎಲ್ಲರೂ ಪಾಪಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.
ರೋಮಾಪುರದವರಿಗೆ 5 : 13 (KNV)
(ನ್ಯಾಯಪ್ರಮಾಣವು ಕೊಡಲ್ಪಡುವ ತನಕ ಪಾಪವು ಲೋಕದಲ್ಲಿತ್ತು; ಆದರೆ ನ್ಯಾಯಪ್ರಮಾಣ ವಿಲ್ಲದಿರುವಾಗ ಪಾಪವು ಲೆಕ್ಕಕ್ಕೆ ಬರುವದಿಲ್ಲ.
ರೋಮಾಪುರದವರಿಗೆ 5 : 14 (KNV)
ಆದರೂ ಆದಾಮನಿಂದ ಮೋಶೆಯವರೆಗೂ ಮರಣದ ಆಳಿಕೆಯು ನಡೆಯುತ್ತಿತ್ತು. ಆದಾಮನ ಆ ಅತಿಕ್ರಮಣಕ್ಕೆ ಸಮಾನವಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ ಅದು ನಡೆಯುತ್ತಿತ್ತು. ಆ ಆದಾಮನು ಬರಬೇಕಾದ ಒಬ್ಬಾತನಿಗೆ ಸೂಚನೆ ಯಾಗಿದ್ದಾನೆ.
ರೋಮಾಪುರದವರಿಗೆ 5 : 15 (KNV)
ಆದರೆ ಆ ಅಪರಾಧವು ಇದ್ದಂತೆ ಉಚಿತವಾದ ದಾನವು ಇರುವದಿಲ್ಲ; ಹೇಗಂದರೆ ಆ ಒಬ್ಬನ ಅಪ ರಾಧದಿಂದ ಎಲ್ಲಾ ಮನುಷ್ಯರು ಸತ್ತವರಾಗಿದ್ದರೆ ದೇವರ ಕೃಪೆಯೂ ಯೇಸು ಕ್ರಿಸ್ತನೆಂಬ ಈ ಒಬ್ಬ ಮನುಷ್ಯನ ಕೃಪೆಯಿಂದಾದ ದಾನವೂ ಅನೇಕರಿಗೆ ಹೇರಳವಾಗಿ ದೊರೆಯುವದು ಮತ್ತೂ ನಿಶ್ಚಯವಲ್ಲವೇ.
ರೋಮಾಪುರದವರಿಗೆ 5 : 16 (KNV)
ಇದಲ್ಲದೆ ಪಾಪಮಾಡಿದ ಆ ಒಬ್ಬನಿಂದಲೇ ಬಂದಂತೆ ಈ ದಾನವು ಬರಲಿಲ್ಲ; ಯಾಕಂದರೆ ಒಬ್ಬ ಮನುಷ್ಯನ ಅಪರಾಧದ ದೆಸೆಯಿಂದಲೇ ತೀರ್ಪು ಉಂಟಾಯಿತು. ಆದರೆ ಉಚಿತವಾದ ದಾನವು ಅನೇಕರ ಅಪರಾಧಗಳ ಕಾರಣದಿಂದ ಉಂಟಾಗಿ ನಿರ್ಣಯಿಸುವಂಥದ್ದಾಗಿದೆ.
ರೋಮಾಪುರದವರಿಗೆ 5 : 17 (KNV)
ಒಬ್ಬನ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ದೆಸೆಯಿಂದಲೇ ಆಳಿದ್ದರೆ ಕೃಪೆಯನ್ನೂ ನೀತಿಯ ದಾನವನ್ನೂ ಹೇರಳವಾಗಿ ಹೊಂದಿದವರು ಯೇಸು ಕ್ರಿಸ್ತನೆಂಬ ಈ ಒಬ್ಬನ ಮೂಲಕ ಜೀವದಲ್ಲಿ ಆಳುವದು ಮತ್ತೂ ನಿಶ್ಚಯವಲ್ಲವೇ).
ರೋಮಾಪುರದವರಿಗೆ 5 : 18 (KNV)
ಹೀಗಿರಲಾಗಿ ಒಬ್ಬನ ಅಪರಾಧದಿಂದಲೇ ಎಲ್ಲಾ ಮನುಷ್ಯರಿಗೆ ಅಪರಾಧ ನಿರ್ಣಯವು ಹೇಗೆ ಬಂತೋ ಹಾಗೆಯೇ ಒಬ್ಬನ ನೀತಿಯಿಂದಲೇ ಉಚಿತಾರ್ಥವಾದ ದಾನವು ಎಲ್ಲಾ ಮನುಷ್ಯರಿಗೆ ಜೀವದ ನೀತಿ ನಿರ್ಣಯಕ್ಕಾಗಿ ಬಂದಿತು.
ರೋಮಾಪುರದವರಿಗೆ 5 : 19 (KNV)
ಒಬ್ಬ ಮನುಷ್ಯನ ಅವಿಧೇಯತ್ವದಿಂದ ಅನೇಕರು ಹೇಗೆ ಪಾಪಿಗಳಾ ದರೋ ಹಾಗೆಯೇ ಒಬ್ಬನ ವಿಧೇಯತ್ವದಿಂದ ಅನೇಕರು ನೀತಿವಂತರಾಗುವರು.
ರೋಮಾಪುರದವರಿಗೆ 5 : 20 (KNV)
ಹೇಗಾದರೂ ಅಪರಾಧವು ಹೆಚ್ಚಾಗಿ ಕಂಡುಬರುವ ಹಾಗೆ ನ್ಯಾಯಪ್ರಮಾಣವು ಪ್ರವೇಶಿಸಿತು; ಆದರೆ ಪಾಪವು ಹೆಚ್ಚಿದಲ್ಲೇ ಕೃಪೆಯು ಎಷ್ಟೋ ಹೆಚ್ಚಾಗಿ ಪ್ರಬಲವಾಯಿತು.ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು.
ರೋಮಾಪುರದವರಿಗೆ 5 : 21 (KNV)
ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು.

1 2 3 4 5 6 7 8 9 10 11 12 13 14 15 16 17 18 19 20 21

BG:

Opacity:

Color:


Size:


Font: