ರೋಮಾಪುರದವರಿಗೆ 2 : 1 (KNV)
ಆದದರಿಂದ ಓ ಮನುಷ್ಯನೇ, ತೀರ್ಪು ಮಾಡುವ ನೀನು ಯಾವನಾಗಿದ್ದರೂ ನೆವವಿಲ್ಲದವನಾಗಿದ್ದೀ; ಹೇಗೆಂದರೆ ಬೇರೊಬ್ಬನಿಗೆ ತೀರ್ಪು ಮಾಡುವ ನೀನು ಅಂಥವುಗಳನ್ನೇ ಮಾಡುವವ ನಾದ್ದರಿಂದ ನಿನ್ನಷ್ಟಕ್ಕೆ ನೀನೇ ತೀರ್ಪು ಮಾಡಿಕೊಂಡ ಹಾಗಾಯಿತು.
ರೋಮಾಪುರದವರಿಗೆ 2 : 2 (KNV)
ಆದರೆ ಅಂಥವುಗಳನ್ನು ಮಾಡುವವರ ಮೇಲೆ ಸತ್ಯಕ್ಕನುಸಾರವಾಗಿ ದೇವರ ನ್ಯಾಯತೀರ್ಪು ಇದೆಯೆಂದು ನಮಗೆ ನಿಶ್ಚಯವುಂಟು.
ರೋಮಾಪುರದವರಿಗೆ 2 : 3 (KNV)
ಅಂಥವು ಗಳನ್ನು ಮಾಡುವವರಿಗೆ ತೀರ್ಪು ಮಾಡುವ ಓ ಮನುಷ್ಯನೇ, ಅವುಗಳನ್ನೇ ಮಾಡುವವನಾದ ನೀನು ದೇವರ ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳುತ್ತೇನೆಂದು ಯೋಚಿಸುತ್ತೀಯೋ?
ರೋಮಾಪುರದವರಿಗೆ 2 : 4 (KNV)
ಇಲ್ಲವೆ ದೇವರ ದಯೆಯು ನಿನ್ನನ್ನು ಮಾನಸಾಂತರಕ್ಕೆ ನಡಿಸುತ್ತದೆಯೆಂದು ನೀನು ತಿಳಿಯದೆ ಆತನ ಅಪಾರವಾದ ದಯೆ ಸಹನೆ ದೀರ್ಘ ಶಾಂತಿ ಇವುಗಳನ್ನು ಅಸಡ್ಡೆಮಾಡುತ್ತೀಯೋ?
ರೋಮಾಪುರದವರಿಗೆ 2 : 5 (KNV)
ಹೀಗೆ ನಿನ್ನ ಕಾಠಿಣ್ಯತೆ ಮತ್ತು ಪಶ್ಚಾತ್ತಾಪವಿಲ್ಲದ ಹೃದಯದಿಂದ ಉಗ್ರತೆಯ ದಿನಕ್ಕಾಗಿಯೂ ದೇವರ ನೀತಿಯುಳ್ಳ ನ್ಯಾಯತೀರ್ವಿಕೆಯ ಪ್ರತ್ಯಕ್ಷತೆಗಾಗಿಯೂ ದೇವರ ಕೋಪವನ್ನು ನಿನಗೋಸ್ಕರ ಕೂಡಿಸಿಟ್ಟುಕೊಳ್ಳುತ್ತಾ ಇದ್ಧೀ.
ರೋಮಾಪುರದವರಿಗೆ 2 : 6 (KNV)
ದೇವರು ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿ ಗನುಸಾರವಾಗಿ ಪ್ರತಿಫಲ ಕೊಡುವನು.
ರೋಮಾಪುರದವರಿಗೆ 2 : 7 (KNV)
ಯಾರು ಒಳ್ಳೆಯದನ್ನು ಮಾಡುವದರಲ್ಲಿ ತಾಳ್ಮೆಯಿಂದಿದ್ದು ಮಹಿಮೆ ಮಾನ ಮತ್ತು ನಿರ್ಲಯತ್ವವನ್ನು ಹುಡುಕು ತ್ತಾರೋ ಅವರಿಗೆ ನಿತ್ಯಜೀವವನ್ನೂ
ರೋಮಾಪುರದವರಿಗೆ 2 : 8 (KNV)
ಕಲಹಪ್ರಿಯ ರಾಗಿದ್ದು ಸತ್ಯಕ್ಕೆ ವಿಧೇಯರಾಗದೆ ಅನೀತಿಗೆ ವಿಧೇಯ ರಾಗಿ
ರೋಮಾಪುರದವರಿಗೆ 2 : 9 (KNV)
ಕೆಟ್ಟದ್ದನ್ನು ಮಾಡುವ ಪ್ರತಿಯೊಬ್ಬನಿಗೆ ಅಂದರೆ ಮೊದಲು ಯೆಹೂದ್ಯರಿಗೆ ಆಮೇಲೆ ಅನ್ಯರಿಗೆ ಸಹ ರೌದ್ರ, ಕೋಪ, ಸಂಕಟ ಮತ್ತು ಯಾತನೆಯನೂ
ರೋಮಾಪುರದವರಿಗೆ 2 : 10 (KNV)
ಆದರೆ ಒಳ್ಳೆಯದನ್ನು ಮಾಡುವ ಪ್ರತಿ ಮನುಷ್ಯನಿಗೆ ಅಂದರೆ ಮೊದಲು ಯೆಹೂದ್ಯರಿಗೆ ಆಮೇಲೆ ಅನ್ಯರಿಗೆ ಸಹ ಮಹಿಮೆ ಮಾನ ಮತ್ತು ಸಮಾಧಾನವನ್ನೂ ಕೊಡುವನು.
ರೋಮಾಪುರದವರಿಗೆ 2 : 11 (KNV)
ದೇವರಲ್ಲಿ ಪಕ್ಷಪಾತವಿಲ್ಲ.
ರೋಮಾಪುರದವರಿಗೆ 2 : 12 (KNV)
ನ್ಯಾಯ ಪ್ರಮಾಣವಿಲ್ಲದೆ ಪಾಪ ಮಾಡಿದವರೆಲ್ಲರೂ ನ್ಯಾಯ ಪ್ರಮಾಣವಿಲ್ಲದೆ ನಾಶವಾಗುವರು; ನ್ಯಾಯಪ್ರಮಾಣ ವುಳ್ಳವರಾಗಿದ್ದು ಪಾಪ ಮಾಡಿದವರು ನ್ಯಾಯಪ್ರಮಾ ಣದಿಂದಲೇ ತೀರ್ಪು ಹೊಂದುವರು.
ರೋಮಾಪುರದವರಿಗೆ 2 : 13 (KNV)
(ನ್ಯಾಯ ಪ್ರಮಾಣವನ್ನು ಕೇಳುವವರು ದೇವರ ಸನ್ನಿಧಿಯಲಿ ನೀತಿವಂತರಾಗುವದಿಲ್ಲ; ನ್ಯಾಯಪ್ರಮಾಣವನ್ನು ಕೈ ಕೊಂಡು ನಡೆಯುವವರೇ ನೀತಿವಂತರೆಂದು ಎಣಿಸ ಲ್ಪಡುವರು.
ರೋಮಾಪುರದವರಿಗೆ 2 : 14 (KNV)
ನ್ಯಾಯಪ್ರಮಾಣವಿಲ್ಲದ ಅನ್ಯಜನರು ನ್ಯಾಯಪ್ರಮಾಣದಲ್ಲಿರುವವುಗಳನ್ನು ಸ್ವಾಭಾವಿಕವಾಗಿ ಕೈಕೊಳ್ಳುವಾಗ ನ್ಯಾಯಪ್ರಮಾಣವಿಲ್ಲದ ಇವರು ತಮಗೆ ತಾವೇ ನ್ಯಾಯಪ್ರಮಾಣವಾಗಿದ್ದಾರೆ.
ರೋಮಾಪುರದವರಿಗೆ 2 : 15 (KNV)
ಅವರ ಮನಸ್ಸಾಕ್ಷಿಯು ಸಹ ಸಾಕ್ಷಿಕೊಟ್ಟು ಅವರ ಯೋಚನೆಗಳು ಒಂದಕ್ಕೊಂದು ತಪ್ಪುಹೊರಿಸುತ್ತಾ ಇಲ್ಲವೆ ಪ್ರತಿವಾದ ಮಾಡುತ್ತಾ ಇರುವದರಿಂದ ಅವರು ತಮ್ಮ ಹೃದಯ ಗಳಲ್ಲಿ ಬರೆದಿರುವ ನ್ಯಾಯಪ್ರಮಾಣದ ಕ್ರಿಯೆಗಳನ್ನು ತೋರಿಸುತ್ತಾರೆ).
ರೋಮಾಪುರದವರಿಗೆ 2 : 16 (KNV)
ಮನುಷ್ಯರ ರಹಸ್ಯಗಳ ವಿಷಯ ವಾಗಿ ನನ್ನ ಸುವಾರ್ತೆಗನುಸಾರ ಯೇಸು ಕ್ರಿಸ್ತನ ಮುಖಾಂತರ ದೇವರು ನ್ಯಾಯತೀರಿಸುವ ದಿವಸದಲ್ಲಿ ಅವರು ತೀರ್ಪು ಹೊಂದುವರು.
ರೋಮಾಪುರದವರಿಗೆ 2 : 17 (KNV)
ಇಗೋ, ನೀನು ಯೆಹೂದ್ಯನೆಂದು ಕರೆಯಲ್ಪ ಟ್ಟವನೂ ನ್ಯಾಯಪ್ರಮಾಣದಲ್ಲಿ ಭರವಸವಿಟ್ಟವನೂ ದೇವರಲ್ಲಿ ಹೆಚ್ಚಳಪಡುವವನೂ ಆಗಿದ್ದು
ರೋಮಾಪುರದವರಿಗೆ 2 : 18 (KNV)
ಆತನ ಚಿತ್ತವನ್ನು ತಿಳಿದವನಾಗಿ ನ್ಯಾಯಪ್ರಮಾಣದಿಂದ ಶಿಕ್ಷಿತ ನಾಗಿದ್ದು ಅತ್ಯುತ್ತಮವಾದವುಗಳನ್ನು ಮೆಚ್ಚುವವನಾ ಗಿದ್ದೀ;
ರೋಮಾಪುರದವರಿಗೆ 2 : 19 (KNV)
ಇದಲ್ಲದೆ ನೀನೇ ಕುರುಡರ ಮಾರ್ಗದರ್ಶ ಕನೂ ಕತ್ತಲೆಯಲ್ಲಿರುವವರಿಗೆ ಬೆಳಕೂ
ರೋಮಾಪುರದವರಿಗೆ 2 : 20 (KNV)
ಮೂರ್ಖರ ಉಪಾಧ್ಯಾಯನೂ ಶಿಶುಗಳ ಬೋಧಕನೂ ನ್ಯಾಯ ಪ್ರಮಾಣದಲ್ಲಿರುವ ತಿಳುವಳಿಕೆಯ ಮತ್ತು ಸತ್ಯದ ಸ್ವರೂಪವುಳ್ಳವನೂ ಆಗಿದ್ದೀ ಎಂದು ನಂಬಿಕೊಂಡಿದ್ದೀ.
ರೋಮಾಪುರದವರಿಗೆ 2 : 21 (KNV)
ಆದದರಿಂದ ಬೇರೊಬ್ಬನಿಗೆ ಬೋಧಿಸುವ ನೀನು ನಿನಗೆ ನೀನೇ ಬೋಧಿಸಿಕೊಳ್ಳುವದಿಲ್ಲವೋ? ಕದಿಯ ಬೇಡವೆಂದು ಬೇರೊಬ್ಬನಿಗೆ ಸಾರುವ ನೀನು ಕದಿಯು ತ್ತೀಯೋ?
ರೋಮಾಪುರದವರಿಗೆ 2 : 22 (KNV)
ವ್ಯಭಿಚಾರ ಮಾಡಬಾರದೆಂದು ಹೇಳುವ ನೀನು ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ಅಸಹ್ಯಿಸುವ ನೀನು ಪವಿತ್ರಸ್ಥಳವನ್ನು ಹೊಲೆಮಾಡು ತ್ತೀಯೋ?
ರೋಮಾಪುರದವರಿಗೆ 2 : 23 (KNV)
ನ್ಯಾಯಪ್ರಮಾಣದಲ್ಲಿ ಹೆಚ್ಚಳಪಡುವ ನೀನು ನ್ಯಾಯಪ್ರಮಾಣವನ್ನು ವಿಾರುವದರಿಂದ ದೇವ ರನ್ನು ಅವಮಾನಪಡಿಸುತ್ತೀಯೋ?
ರೋಮಾಪುರದವರಿಗೆ 2 : 24 (KNV)
ಬರೆಯಲ್ಪಟ್ಟ ಪ್ರಕಾರ--ನಿಮ್ಮ ಮೂಲಕ ದೇವರ ಹೆಸರು ಅನ್ಯ ಜನಾಂಗಗಳಲ್ಲಿ ದೂಷಿಸಲ್ಪಡುತ್ತದೆ.
ರೋಮಾಪುರದವರಿಗೆ 2 : 25 (KNV)
ನೀನು ನ್ಯಾಯಪ್ರಮಾಣವನ್ನು ಕೈಕೊಂಡರೆ ಸುನ್ನತಿಯು ನಿಜವಾಗಿಯೂ ಪ್ರಯೋಜನವಾದದ್ದೇ. ಆದರೆ ನೀನು ನ್ಯಾಯಪ್ರಮಾಣವನ್ನು ವಿಾರುವದಾದರೆ ನಿನ್ನ ಸುನ್ನತಿಯು ಸುನ್ನತಿ ಅಲ್ಲ.
ರೋಮಾಪುರದವರಿಗೆ 2 : 26 (KNV)
ಆದದರಿಂದ ಸುನ್ನತಿಯಿಲ್ಲದವನು ನ್ಯಾಯ ಪ್ರಮಾಣದ ನೀತಿಯನ್ನು ಕೈಕೊಂಡರೆ ಸುನ್ನತಿಯಿಲ್ಲದವನಾದ ಅವನಿಗೆ ಅದು ಸುನ್ನತಿಯೆಂದು ಎಣಿಸಲ್ಪಡುವದಿಲ್ಲವೋ?
ರೋಮಾಪುರದವರಿಗೆ 2 : 27 (KNV)
ಸ್ವಾಭಾವಿಕವಾಗಿ ಸುನ್ನತಿಯಿಲ್ಲದವನಾಗಿದ್ದು ನ್ಯಾಯಪ್ರಮಾಣ ವನ್ನು ನೆರವೇರಿಸುವದಾದರೆ ನ್ಯಾಯಪ್ರಮಾಣವೂ ಸುನ್ನತಿಯೂ ಇದ್ದು ನ್ಯಾಯಪ್ರಮಾಣವನ್ನು ವಿಾರಿ ನಡೆಯುವ ನಿನಗೆ ಅವನು ತೀರ್ಪು ಮಾಡುವ ದಿಲ್ಲವೋ?
ರೋಮಾಪುರದವರಿಗೆ 2 : 28 (KNV)
ಹೊರಗೆ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಹೊರಗೆ ಶರೀರದಲ್ಲಿ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.ಆದರೆ ಒಳಗೆ ಯೆಹೂದ್ಯ ನಾಗಿರುವವನೇ ಯೆಹೂದ್ಯನು; ಸುನ್ನತಿಯು ಹೃದಯಕ್ಕೆ ಸಂಬಂಧಪಟ್ಟದ್ದಾಗಿ ಅಕ್ಷರೀಕವಾಗಿರದೆ ಆತ್ಮೀಕವಾದದ್ದೇ ಆಗಿದೆ. ಹೀಗೆ ಅವನ ಹೊಗಳಿಕೆಯು ಮನುಷ್ಯರಿಂದಾ ಗಿರದೆ ದೇವರಿಂದಲೇ ಆಗಿರುವದು.
ರೋಮಾಪುರದವರಿಗೆ 2 : 29 (KNV)
ಆದರೆ ಒಳಗೆ ಯೆಹೂದ್ಯ ನಾಗಿರುವವನೇ ಯೆಹೂದ್ಯನು; ಸುನ್ನತಿಯು ಹೃದಯಕ್ಕೆ ಸಂಬಂಧಪಟ್ಟದ್ದಾಗಿ ಅಕ್ಷರೀಕವಾಗಿರದೆ ಆತ್ಮೀಕವಾದದ್ದೇ ಆಗಿದೆ. ಹೀಗೆ ಅವನ ಹೊಗಳಿಕೆಯು ಮನುಷ್ಯರಿಂದಾ ಗಿರದೆ ದೇವರಿಂದಲೇ ಆಗಿರುವದು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29

BG:

Opacity:

Color:


Size:


Font: