ರೋಮಾಪುರದವರಿಗೆ 11 : 1 (KNV)
ಹಾಗಾದರೆ--ದೇವರು ತನ್ನ ಪ್ರಜೆಯನ್ನು ತಳ್ಳಿಬಿಟ್ಟದ್ದುಂಟೇ ಎಂದು ನಾನು ಕೇಳುತ್ತೇನೆ. ಹಾಗೆ ಎಂದಿಗೂ ಹೇಳಬಾರದು. ಯಾಕಂದರೆ ನಾನು ಸಹ ಇಸ್ರಾಯೇಲ್ಯನು. ಅಬ್ರ ಹಾಮನ ಸಂತತಿಯವನು, ಬೆನ್ಯಾವಿಾನನ ಗೋತ್ರ ದವನು ಆಗಿದ್ದೇನಲ್ಲಾ.
ರೋಮಾಪುರದವರಿಗೆ 11 : 2 (KNV)
ದೇವರು ಮುಂದಾಗಿ ಅರಿತುಕೊಂಡಿದ್ದ ತನ್ನ ಜನರನ್ನು ತಳ್ಳಿಹಾಕಲಿಲ್ಲ. ಎಲೀಯನ ವಿಷಯವಾಗಿಯಾದರೋ ಅವನು ಇಸ್ರಾಯೇಲ್ಯರಿಗೆ ವಿರೋಧವಾಗಿ ದೇವರಿಗೆ ವಿಜ್ಞಾಪನೆ ಮಾಡುತ್ತಾ--
ರೋಮಾಪುರದವರಿಗೆ 11 : 3 (KNV)
ಕರ್ತನೇ, ಅವರು ನಿನ್ನ ಪ್ರವಾದಿಗಳನ್ನು ಕೊಂದು ನಿನ್ನ ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ; ಆದರೆ ನಾನೊಬ್ಬನೇ ಉಳಿದಿದ್ದೇನೆ; ಅವರು ನನ್ನ ಪ್ರಾಣವನ್ನು ತೆಗೆಯಲು ಹುಡುಕುತ್ತಿದ್ದಾರೆ ಎಂದು ಬರಹವು ಹೇಳಿದ್ದು ನಿಮಗೆ ಗೊತ್ತಿಲ್ಲವೋ?
ರೋಮಾಪುರದವರಿಗೆ 11 : 4 (KNV)
ಆದರೆ ದೇವರು ಅವನಿಗೆ ಕೊಟ್ಟ ಉತ್ತರವೇನಂದರೆ--ಬಾಳನ ವಿಗ್ರಹಕ್ಕೆ ಮೊಣಕಾಲೂರದ ಏಳುಸಾವಿರ ಜನರನ್ನು ನಾನು ನನಗೋಸ್ಕರ ಉಳಿಸಿಕೊಂಡಿದ್ದೇನೆ ಎಂಬದು.
ರೋಮಾಪುರದವರಿಗೆ 11 : 5 (KNV)
ಅದರಂತೆ ಈಗಿನ ಕಾಲದಲ್ಲಿ ಕೃಪೆಯ ಆಯ್ಕೆಯ ಪ್ರಕಾರ ಒಂದಂಶವು ಉಳಿದಿದೆ.
ರೋಮಾಪುರದವರಿಗೆ 11 : 6 (KNV)
ಕೃಪೆಯಿಂದಾಗಿದ್ದರೆ ಇನ್ನೆಂದಿಗೂ ಕ್ರಿಯೆಗಳಿಂದಲ್ಲ; ಇಲ್ಲವಾದರೆ ಕೃಪೆಯು ಇನ್ನೆಂದಿಗೂ ಕೃಪೆಯೇ ಅಲ್ಲ. ಕ್ರಿಯೆಗಳಿಂದಾಗಿದ್ದರೆ ಇನ್ನೆಂದಿಗೂ ಕೃಪೆಯಲ್ಲ; ಇಲ್ಲವಾದರೆ ಕ್ರಿಯೆಯು ಇನ್ನೆಂದಿಗೂ ಕ್ರಿಯೆಯಲ್ಲ.
ರೋಮಾಪುರದವರಿಗೆ 11 : 7 (KNV)
ಹಾಗಾದರೇನು? ಇಸ್ರಾ ಯೇಲ್ಯರು ತಾವು ಹುಡುಕಿದ್ದನ್ನು ಹೊಂದಿಕೊಳ್ಳಲಿಲ್ಲ; ಆದರೆ ಆಯ್ಕೆಯಾದವರು ಅದನ್ನು ಹೊಂದಿಕೊಂಡರು.
ರೋಮಾಪುರದವರಿಗೆ 11 : 8 (KNV)
(ಬರೆದಿರುವಂತೆ ದೇವರು ಅವರಿಗೆ ತೂಕಡಿಕೆಯ ಆತ್ಮವನ್ನೂ ಕಾಣದ ಕಣ್ಣುಗಳನ್ನೂ ಕೇಳದ ಕಿವಿಗಳನ್ನೂ ಕೊಟ್ಟಿದ್ದಾನೆ). ಉಳಿದವರು ಈ ದಿನದ ವರೆಗೂ ಕುರುಡರಾಗಿದ್ದಾರೆ.
ರೋಮಾಪುರದವರಿಗೆ 11 : 9 (KNV)
ಇದಲ್ಲದೆ ದಾವೀದನು--ಅವರ ಊಟವು ಅವರಿಗೆ ಉರ್ಲೂ ಬೋನೂ ಅಭ್ಯಂತರವೂ ಪ್ರತಿಫಲವೂ ಆಗಲಿ.
ರೋಮಾಪುರದವರಿಗೆ 11 : 10 (KNV)
ನೋಡದಂತೆ ಅವರ ಕಣ್ಣು ಗಳು ಮೊಬ್ಬಾಗಲಿ; ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರಲಿ ಎಂದು ಅನ್ನುತ್ತಾನೆ.
ರೋಮಾಪುರದವರಿಗೆ 11 : 11 (KNV)
ಹಾಗಾದರೆ--ಅವರು ಬಿದ್ದುಹೋಗುವಂತೆ ಎಡವಿದರೆಂದು ನಾನು ಹೇಳಬೇಕೋ? ಹಾಗೆ ಎಂದಿಗೂ ಆಗಬಾರದು; ಆದರೆ ಅವರಲ್ಲಿ ಹುರುಡು ಹುಟ್ಟಿಸುವದಕ್ಕಾಗಿ ಅವರ ಬೀಳುವಿಕೆಯ ಮೂಲಕವೇ ಅನ್ಯಜನರಿಗೆ ರಕ್ಷಣೆಯುಂಟಾಯಿತು.
ರೋಮಾಪುರದವರಿಗೆ 11 : 12 (KNV)
ಅವರ ಬೀಳುವಿಕೆಯು ಲೋಕದ ಐಶ್ವರ್ಯಕ್ಕೂ ಅವರ ಕುಂದುವಿಕೆಯು ಅನ್ಯಜನಗಳ ಸಂಪತ್ತಿಗೂ ಆಗಿರು ವದಾದರೆ ಅವರ ಸಮೃದ್ಧಿಯು ಇನ್ನೂ ಎಷ್ಟೋ ಹೆಚ್ಚಾಗಿರುವದಲ್ಲವೇ?
ರೋಮಾಪುರದವರಿಗೆ 11 : 13 (KNV)
ಅನ್ಯಜನರಾದ ನಿಮ್ಮೊಂದಿಗೆ ನಾನು ಮಾತನಾಡು ತ್ತೇನೆ. ನಾನು ಅನ್ಯಜನಗಳಿಗೆ ಅಪೊಸ್ತಲನಾಗಿ ರುವದರಿಂದ ನನ್ನ ಉದ್ಯೋಗವನ್ನು ಗಣನೆಗೆ ತರುತ್ತೇನೆ.
ರೋಮಾಪುರದವರಿಗೆ 11 : 14 (KNV)
ಹೀಗೆ ಯಾವ ವಿಧದಲ್ಲಿಯಾದರೂ ನನ್ನ ಸ್ವಜನರಲ್ಲಿ ಹುರುಡನ್ನು ಹುಟ್ಟಿಸಿ ಅವರಲ್ಲಿ ಕೆಲವರು ರಕ್ಷಣೆ ಹೊಂದುವಂತೆ ಮಾಡೇನು.
ರೋಮಾಪುರದವರಿಗೆ 11 : 15 (KNV)
ಅವರನ್ನು ತಳ್ಳುವದರಿಂದ ಲೋಕವು ಸಮಾಧಾನವಾಗು ವದಾದರೆ ಅವರನ್ನು ಸೇರಿಸಿಕೊಳ್ಳುವದರಿಂದ ಏನಾಗುವದು? ಸತ್ತವರು ಜೀವಿತರಾಗಿ ಎದ್ದು ಬಂದಂತಾಗುವದಿಲ್ಲವೇ.
ರೋಮಾಪುರದವರಿಗೆ 11 : 16 (KNV)
ಪ್ರಥಮ ಫಲವು ಪವಿತ್ರವಾಗಿದ್ದರೆ ಕಣಕವೂ ಪವಿತ್ರವಾಗಿದೆ ಮತ್ತು ಬೇರು ಪವಿತ್ರವಾಗಿದ್ದರೆ ಕೊಂಬೆಗಳೂ ಪವಿತ್ರವಾಗಿವೆ.
ರೋಮಾಪುರದವರಿಗೆ 11 : 17 (KNV)
ಆದರೆ ಕೆಲವು ಕೊಂಬೆಗಳು ಮುರಿದು ಹಾಕಲ್ಪಟ್ಟ ದ್ದರಿಂದ ಕಾಡೆಣ್ಣೇ ಮರದಂತಿರುವ ನೀನು ಅವುಗಳ ತಾವಿನಲ್ಲಿ ಕಸಿಕಟ್ಟಿಸಿಕೊಂಡವನಾಗಿ ಊರೆಣ್ಣೇ ಮರದ ರಸವತ್ತಾದ ಬೇರಿನಲ್ಲಿ ಪಾಲು ಹೊಂದಿದವನಾಗಿದ್ದೀ.
ರೋಮಾಪುರದವರಿಗೆ 11 : 18 (KNV)
ಆದರೂ ಆ ಕೊಂಬೆಗಳಿಗೆ ಮೇಲಾಗಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ಹೆಚ್ಚಿಸಿಕೊಂಡರೂ ಆ ಬೇರಿಗೆ ನೀನು ಆಧಾರವಲ್ಲ, ಅದು ನಿನಗೆ ಆಧಾರವಾಗಿದೆಯಷ್ಟೆ.
ರೋಮಾಪುರದವರಿಗೆ 11 : 19 (KNV)
ಈ ಮಾತಿಗೆ--ನಾನು ಕಸಿಕಟ್ಟಿಸಿ ಕೊಳ್ಳುವಂತೆ ಕೊಂಬೆಗಳು ಮುರಿದು ಹಾಕಲ್ಪಟ್ಟವಲ್ಲಾ ಎಂದು ನೀನು ಹೇಳುವಿ.
ರೋಮಾಪುರದವರಿಗೆ 11 : 20 (KNV)
ಒಳ್ಳೆಯದು, ಅವರು ನಂಬದೆ ಹೋದದರಿಂದ ಮುರಿದುಹಾಕಲ್ಪಟ್ಟರು, ನೀನು ನಿಂತಿರುವದು ನಂಬಿಕೆಯಿಂದಲೇ, ಗರ್ವ ಪಡಬೇಡ, ಭಯದಿಂದಿರು;
ರೋಮಾಪುರದವರಿಗೆ 11 : 21 (KNV)
ದೇವರು ಹುಟ್ಟು ಕೊಂಬೆಗಳನ್ನು ಉಳಿಸದೆಯಿದ್ದ ಮೇಲೆ ನಿನ್ನನ್ನೂ ಉಳಿಸು ವದಿಲ್ಲ.
ರೋಮಾಪುರದವರಿಗೆ 11 : 22 (KNV)
ಆದದರಿಂದ ದೇವರ ದಯೆಯನ್ನೂ ಕಾಠಿಣ್ಯ ವನ್ನೂ ನೋಡು; ಬಿದ್ದವರ ಕಡೆಗೆ ಕಾಠಿಣ್ಯ; ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ನಿನ್ನ ಕಡೆಗೆ ಆತನ ದಯೆ; ಇಲ್ಲವಾದರೆ ನೀನೂ ಕಡಿದು ಹಾಕಲ್ಪಡುವಿ.
ರೋಮಾಪುರದವರಿಗೆ 11 : 23 (KNV)
ಅವರು ಕೂಡ ಇನ್ನು ಅಪ ನಂಬಿಕೆಯಲ್ಲಿ ನಿಲ್ಲದ ಪಕ್ಷಕ್ಕೆ ಕಸಿಕಟ್ಟಲ್ಪಡುವರು; ಯಾಕಂದರೆ ದೇವರು ಅವರನ್ನು ತಿರಿಗಿ ದೇವರು ಕಸಿಕಟ್ಟುವದಕ್ಕೆ ಸಮರ್ಥನಾಗಿದ್ದಾನೆ.
ರೋಮಾಪುರದವರಿಗೆ 11 : 24 (KNV)
ಹುಟ್ಟು ಕಾಡು ಮರದಿಂದ ಕಡಿದು ತೆಗೆಯಲ್ಪಟ್ಟಿರುವ ನೀನು ನಿನಗೆ ಸಂಬಂಧಪಡದ ಊರುಮರದಲ್ಲಿ ಕಸಿಕಟ್ಟಿಸಿಕೊಂಡವ ನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು ಸ್ವಂತ ಮರದಲ್ಲಿ ಕಸಿಕಟ್ಟಲ್ಪಡುವದು ಎಷ್ಟೋ ಸಹಜವಾಗಿದೆಯಲ್ಲವೇ.
ರೋಮಾಪುರದವರಿಗೆ 11 : 25 (KNV)
ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತ ರೆಂಬದಾಗಿ ಎಣಿಸಿಕೊಳ್ಳದಂತೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿದಿರಬೇಕೆಂದು ಅಪೇಕ್ಷಿಸುತ್ತೇನೆ. ಅದೇನಂದರೆ, ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಕುರುಡುತನವು ಅನ್ಯಜನಗಳು ಸಂಪೂರ್ಣವಾಗಿ ದೇವರ ರಾಜ್ಯದಲ್ಲಿ ಸೇರುವ ತನಕ
ರೋಮಾಪುರದವರಿಗೆ 11 : 26 (KNV)
ಹೀಗೆ ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು.
ರೋಮಾಪುರದವರಿಗೆ 11 : 27 (KNV)
ನಾನು ಅವರ ಪಾಪಗಳನ್ನು ತೆಗೆದು ಹಾಕುವದು ಅವರ ಸಂಗಡ ಮಾಡಿಕೊಂಡ ನನ್ನ ಒಡಂಬಡಿಕೆಯಾಗಿದೆ ಎಂಬದು.
ರೋಮಾಪುರದವರಿಗೆ 11 : 28 (KNV)
ಸುವಾರ್ತೆಯ ವಿಷಯದಲ್ಲಿ ಅವರು ನಿಮ್ಮ ನಿಮಿತ್ತವಾಗಿ ವೈರಿಗಳಾ ಗಿದ್ದಾರೆ; ಆದರೆ ಆಯ್ಕೆಯ ವಿಷಯದಲ್ಲಿ ಅವರು ಪಿತೃಗಳ ನಿಮಿತ್ತವಾಗಿ ಪ್ರಿಯರಾಗಿದ್ದಾರೆ.
ರೋಮಾಪುರದವರಿಗೆ 11 : 29 (KNV)
ದೇವರ ದಾನಗಳೂ ಕರೆಯುವಿಕೆಯೂ ಪಶ್ಚಾತ್ತಾಪವಿಲ್ಲದವು ಗಳಾಗಿವೆ.
ರೋಮಾಪುರದವರಿಗೆ 11 : 30 (KNV)
ಕಳೆದುಹೋದ ಕಾಲಗಳಲ್ಲಿ ನೀವು ದೇವರನ್ನು ನಂಬದೆ ಇದ್ದೀರಿ; ಆದಾಗ್ಯೂ ಅವರ ಅಪನಂಬಿಕೆಯ ಮೂಲಕ ನೀವು ಈಗ ಹೇಗೆ ಕರುಣೆ ಯನ್ನು ಹೊಂದಿದ್ದೀರೋ
ರೋಮಾಪುರದವರಿಗೆ 11 : 31 (KNV)
ಹಾಗೆಯೇ ನೀವು ಹೊಂದಿದ ಕರುಣೆಯ ಮೂಲಕ ಇವರೂ (ಮುಂದೆ) ಕರುಣೆಯನ್ನು ಹೊಂದುವಂತೆ ಈಗ ನಂಬದವ ರಾಗಿದ್ದಾರೆ.
ರೋಮಾಪುರದವರಿಗೆ 11 : 32 (KNV)
ಆದರೆ ದೇವರು ಮನುಷ್ಯರೆಲ್ಲರ ಮೇಲೆ ಕರುಣೆ ತೋರಿಸಬೇಕೆಂದು ಅವರೆಲ್ಲರನ್ನೂ ಅಪನಂಬಿಕೆ ಯಲ್ಲಿ ಮುಚ್ಚಿಹಾಕಿದ್ದಾನೆ.
ರೋಮಾಪುರದವರಿಗೆ 11 : 33 (KNV)
ಹಾ, ದೇವರ ಜ್ಞಾನದ ಮತ್ತು ತಿಳುವಳಿಕೆಯ ಐಶ್ವರ್ಯವು ಎಷ್ಟೋ ಅಗಾಧ ವಾಗಿದೆ! ಆತನ ತೀರ್ಪುಗಳು ಪರಿಶೋಧನೆಗೂ ಆತನ ಮಾರ್ಗಗಳು ಕಂಡು ಹಿಡಿಯುವದಕ್ಕೂ ಅಸಾಧ್ಯ ವಾಗಿವೆ!
ರೋಮಾಪುರದವರಿಗೆ 11 : 34 (KNV)
ಕರ್ತನ ಮನಸ್ಸನ್ನು ತಿಳಿದುಕೊಂಡವನು ಯಾರು? ಇಲ್ಲವೆ ಆತನಿಗೆ ಆಲೋಚನೆ ಹೇಳಿದವನು ಯಾರು?
ರೋಮಾಪುರದವರಿಗೆ 11 : 35 (KNV)
ಇಲ್ಲವೆ ಮೊದಲು ಆತನಿಗೆ ಕೊಟ್ಟು ಪ್ರತಿಫಲವನ್ನು ತೆಗೆದುಕೊಳ್ಳುವವನು ಯಾರು?
ರೋಮಾಪುರದವರಿಗೆ 11 : 36 (KNV)
ಸಮಸ್ತವು ಆತನಿಂದಲೂ ಆತನ ಮುಖಾಂತರವೂ ಆತನಿಗಾಗಿಯೂ ಇರುತ್ತದೆ; ಆತನಿಗೆ ಸದಾಕಾಲವೂ ಮಹಿಮೆಯಾಗಲಿ. ಆಮೆನ್.
❮
❯