ರೋಮಾಪುರದವರಿಗೆ 1 : 1 (KNV)
ಪೌಲನೆಂಬ ನಾನು ಯೇಸು ಕ್ರಿಸ್ತನ ದಾಸನೂ ಅಪೊಸ್ತಲನಾಗಿರುವದಕ್ಕೆ ಕರೆ ಯಲ್ಪಟ್ಟು ದೇವರ ಸುವಾರ್ತೆಗೋಸ್ಕರ ಪ್ರತ್ಯೇಕಿಸ ಲ್ಪಟ್ಟವನೂ ಆಗಿದ್ದೇನೆ.
ರೋಮಾಪುರದವರಿಗೆ 1 : 2 (KNV)
(ಆ ಸುವಾರ್ತೆಯನ್ನು ಆತನು ಮುಂಚಿತವಾಗಿ ಪರಿಶುದ್ಧ ಬರಹಗಳಲ್ಲಿ ತನ್ನ ಪ್ರವಾದಿ ಗಳ ಮುಖಾಂತರ ವಾಗ್ದಾನ ಮಾಡಿದ್ದನು).
ರೋಮಾಪುರದವರಿಗೆ 1 : 3 (KNV)
ಅದು ಯಾವದೆಂದರೆ, ಆತನು ಶಾರೀರಕವಾಗಿ ದಾವೀದನ ಸಂತಾನದಲ್ಲಿ ಹುಟ್ಟಿದಾತನೂ ನಮ್ಮ ಕರ್ತನೂ ಆಗಿರುವ ದೇವರಕುಮಾರನಾದ ಯೇಸು ಕ್ರಿಸ್ತನ ವಿಷಯವಾ ದದ್ದೇ;
ರೋಮಾಪುರದವರಿಗೆ 1 : 4 (KNV)
ಪರಿಶುದ್ಧ ಆತ್ಮಕ್ಕನು ಸಾರವಾಗಿ ಸತ್ತವರೊಳ ಗಿಂದ ಪುನರುತ್ಥಾನ ಹೊಂದುವದರ ಮೂಲಕ ಆತನು ದೇವಕುಮಾರನೆಂದು ಬಲದೊಂದಿಗೆ ಪ್ರಕಟಿಸಲ್ಪ ಟ್ಟನು;
ರೋಮಾಪುರದವರಿಗೆ 1 : 5 (KNV)
ಆತನ ಹೆಸರಿಗಾಗಿ ಎಲ್ಲಾ ಜನಾಂಗಗಳವರು ನಂಬಿಕೆಗೆ ವಿಧೇಯರಾಗುವಂತೆ ಆತನಿಂದ ನಾವು ಕೃಪೆಯನ್ನೂ ಅಪೊಸ್ತಲತನವನ್ನೂ ಹೊಂದಿದ್ದೇವೆ.
ರೋಮಾಪುರದವರಿಗೆ 1 : 6 (KNV)
ಅವರೊಳಗೆ ನೀವು ಸಹ ಯೇಸು ಕ್ರಿಸ್ತನವರಾಗಿರುವ ದಕ್ಕಾಗಿ ಕರೆಯಲ್ಪಟ್ಟಿದ್ದೀರಿ.
ರೋಮಾಪುರದವರಿಗೆ 1 : 7 (KNV)
ಇದಲ್ಲದೆ ದೇವರಿಗೆ ಪ್ರಿಯ ರಾಗಿದ್ದು ಪರಿಶುದ್ಧರಾಗುವದಕ್ಕೆ ಕರೆಯಲ್ಪಟ್ಟ ರೋಮ್‌ ನಲ್ಲಿರುವವರೆಲ್ಲರಿಗೆ ನಮ್ಮ ತಂದೆಯಾದ ದೇವ ರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಉಂಟಾಗಲಿ.
ರೋಮಾಪುರದವರಿಗೆ 1 : 8 (KNV)
ಮೊದಲನೆಯದಾಗಿ ನಿಮ್ಮ ನಂಬಿಕೆಯು ಲೋಕ ದಲ್ಲೆಲ್ಲಾ ಪ್ರಸಿದ್ಧವಾದದರಿಂದ ನಿಮ್ಮೆಲ್ಲರ ವಿಷಯವಾಗಿ ಯೇಸು ಕ್ರಿಸ್ತನ ಮುಖಾಂತರ ನಾನು ನನ್ನ ದೇವರಿಗೆ ಸ್ತೋತ್ರಸಲ್ಲಿಸುತ್ತೇನೆ.
ರೋಮಾಪುರದವರಿಗೆ 1 : 9 (KNV)
ನಾನು ಯಾವಾಗಲೂ ಪ್ರಾರ್ಥನೆಗಳಲ್ಲಿ ಎಡೆಬಿಡದೆ ನಿಮ್ಮನ್ನು ಜ್ಞಾಪಕ ಮಾಡಿ ಕೊಳ್ಳುತ್ತೇನೆ. ನಾನು ಯಾವಾತನ ಮಗನ ಸುವಾರ್ತೆ ಯಲ್ಲಿ ನನ್ನ ಆತ್ಮದೊಂದಿಗೆ ಸೇವಿಸುತ್ತೇನೋ ಆ ದೇವರೇ ಇದಕ್ಕೆ ನನ್ನ ಸಾಕ್ಷಿ.
ರೋಮಾಪುರದವರಿಗೆ 1 : 10 (KNV)
ಕೊನೆಯದಾಗಿ ನಾನು ನಿಮ್ಮ ಬಳಿಗೆ ಹೇಗಾದರೂ ಬರುವದಕ್ಕೆ ದೇವರ ಚಿತ್ತದಿಂದ ನನ್ನ ಪ್ರಯಾಣವು ಸಫಲವಾಗುವಂತೆ ಬೇಡಿಕೊಳ್ಳುತ್ತೇನೆ.
ರೋಮಾಪುರದವರಿಗೆ 1 : 11 (KNV)
ನೀವು ಸ್ಥಿರಗೊಳ್ಳುವಂತೆ ನನ್ನ ಮುಖಾಂತರ ನಿಮಗೆ ಯಾವದಾದರೂ ಆತ್ಮೀಕದಾನ ದೊರೆಯಲಿ ಎಂದು ನಾನು ನಿಮ್ಮನ್ನು ನೋಡಲು ಹಂಬಲಿಸುತ್ತೇನೆ.
ರೋಮಾಪುರದವರಿಗೆ 1 : 12 (KNV)
ಹೀಗೆ ಪರಸ್ಪರ ನಂಬಿಕೆಯ ಮೂಲಕ ನಾನು ನಿಮ್ಮೊಂ ದಿಗೆ ಆದರಿಸಲ್ಪಡುವೆನು.
ರೋಮಾಪುರದವರಿಗೆ 1 : 13 (KNV)
ಇದಲ್ಲದೆ ಸಹೋದರರೇ, ಬೇರೆ ಅನ್ಯಜನಗಳಲ್ಲಿ ಫಲವುಂಟಾ ದಂತೆ ನಿಮ್ಮಲ್ಲಿಯೂ ನನಗೆ ಯಾವದಾದರೂ ಫಲ ದೊರೆಯಲೆಂದು ನಿಮ್ಮ ಬಳಿಗೆ ಬರುವದಕ್ಕೆ ನಾನು ಅನೇಕಸಾರಿ ಉದ್ದೇಶಿಸಿ ದಾಗ್ಯೂ ಈ ವರೆಗೆ ಅಡ್ಡಿಯಾಯಿತೆಂದು ನೀವು ತಿಳಿದಿರಬೇಕೆಂದು ನಾನು ಆಶಿಸುತ್ತೇನೆ.
ರೋಮಾಪುರದವರಿಗೆ 1 : 14 (KNV)
ನಾನು ಗ್ರೀಕರಿಗೂ ಅನ್ಯಜನರಿಗೂ ಜ್ಞಾನಿಗಳಿಗೂ ಅಜ್ಞಾನಿ ಗಳಿಗೂ ಋಣಸ್ಥನಾಗಿದ್ದೇನೆ.
ರೋಮಾಪುರದವರಿಗೆ 1 : 15 (KNV)
ಹೀಗೆ ನಾನಾದರೋ ರೋಮ್‌ನಲ್ಲಿರುವ ನಿಮಗೂ ಸುವಾರ್ತೆಯನ್ನು ಸಾರಲು ಸಿದ್ಧನಾಗಿದ್ದೇನೆ.
ರೋಮಾಪುರದವರಿಗೆ 1 : 16 (KNV)
ಕ್ರಿಸ್ತನ ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೆಪಡುವದಿಲ್ಲ; ಅದು ಮೊದಲು ಯೆಹೂದ್ಯ ರಿಗೂ ತರುವಾಯ ಗ್ರೀಕರಿಗೂ ಅಂತೂ ನಂಬುವ ಪ್ರತಿಯೊಬ್ಬನಿಗೂ ರಕ್ಷಣೆಗಾಗಿ ದೇವರ ಶಕ್ತಿಯಾಗಿದೆ.
ರೋಮಾಪುರದವರಿಗೆ 1 : 17 (KNV)
ನೀತಿವಂತನು ನಂಬಿಕೆಯಿಂದಲೇ ಜೀವಿಸುವನು ಎಂದು ಬರೆಯಲ್ಪಟ್ಟಂತೆ ದೇವರ ನೀತಿಯು ಅದರಲ್ಲಿ ವಿಶ್ವಾಸದಿಂದ ವಿಶ್ವಾಸಕ್ಕೆ ಪ್ರಕಟವಾಯಿತು.
ರೋಮಾಪುರದವರಿಗೆ 1 : 18 (KNV)
ಸತ್ಯವನ್ನು ಅನೀತಿಯಲ್ಲಿ ತಡೆಹಿಡಿದ ಮನುಷ್ಯರ ಎಲ್ಲಾ ಭಕ್ತಿಹೀನತೆಗೆ ಮತ್ತು ಅನೀತಿಗೆ ವಿರೋಧ ವಾಗಿ ದೇವರ ಕೋಪವು ಪರಲೋಕದಿಂದ ತೋರಿ ಬರುತ್ತದೆ.
ರೋಮಾಪುರದವರಿಗೆ 1 : 19 (KNV)
ದೇವರ ವಿಷಯವಾಗಿ ತಿಳಿಯಬಹು ದಾದದ್ದು ಅವರಲ್ಲಿ ಪ್ರಕಟವಾಗಿದೆ; ದೇವರೇ ಅದನ್ನು ಅವರಿಗೆ ತಿಳಿಯಪಡಿಸಿದ್ದಾನೆ.
ರೋಮಾಪುರದವರಿಗೆ 1 : 20 (KNV)
ಹೇಗೆಂದರೆ ಜಗದು ತ್ಪತ್ತಿಗೆ ಮೊದಲುಗೊಂಡು ಆತನ ಅದೃಶ್ಯವಾದವುಗಳು ಅಂದರೆ ಆತನ ನಿತ್ಯ ಶಕ್ತಿಯೂ ದೈವತ್ವವೂ ಸೃಷ್ಟಿಗಳನ್ನು ಗ್ರಹಿಸುವದರ ಮೂಲಕ ಸ್ಪಷ್ಟವಾಗಿ ಕಾಣಬರುತ್ತವೆ.ಆದಕಾರಣ ಅವರು ನೆವವಿಲ್ಲದವರಾಗಿದ್ದಾರೆ.
ರೋಮಾಪುರದವರಿಗೆ 1 : 21 (KNV)
ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು.
ರೋಮಾಪುರದವರಿಗೆ 1 : 22 (KNV)
ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚ ರಾದರು;
ರೋಮಾಪುರದವರಿಗೆ 1 : 23 (KNV)
ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಕ್ಷಿ, ಪಶುಗಳ ಮತ್ತು ಹರಿದಾಡುವವುಗಳ ಪ್ರತಿಮೆಗೆ ಮಾರ್ಪಡಿಸಿದರು.
ರೋಮಾಪುರದವರಿಗೆ 1 : 24 (KNV)
ಆದಕಾರಣ ತಮ್ಮ ಹೃದಯಗಳ ದುರಾಶೆಗಳ ಮೂಲಕ ತಮ್ಮ ಸ್ವಂತ ದೇಹಗಳನ್ನು ತಮ್ಮೊಳಗೆ ಅವ ಮಾನಪಡಿಸಿಕೊಳ್ಳುವಂತೆ ದೇವರು ಅವರನ್ನು ಅಶುದ್ಧ ತನಕ್ಕೆ ಒಪ್ಪಿಸಿದನು;
ರೋಮಾಪುರದವರಿಗೆ 1 : 25 (KNV)
ಅವರು ದೇವರ ವಿಷಯವಾದ ಸತ್ಯವನ್ನು ಸುಳ್ಳಿಗೆ ಬದಲಾಯಿಸಿ ಸೃಷ್ಟಿಕರ್ತನಿಗಿಂತ ಹೆಚ್ಚಾಗಿ ಸೃಷ್ಟಿಯನ್ನೇ ಆರಾಧಿಸಿ ಸೇವಿಸಿದರು; ಆತನು (ಸೃಷ್ಟಿಕರ್ತನು) ಎಂದೆಂದಿಗೂ ಸ್ತುತಿ ಹೊಂದತಕ್ಕವನು. ಆಮೆನ್‌.
ರೋಮಾಪುರದವರಿಗೆ 1 : 26 (KNV)
ಈ ಕಾರಣದಿಂದ ದೇವರು ಅವರನ್ನು ತುಚ್ಛ ವಾದ ಮನೋಭಾವಗಳಿಗೆ ಒಪ್ಪಿಸಿಬಿಟ್ಟನು. ಹೇಗೆಂದರೆ ಅವರ ಹೆಂಗಸರು ಸಹ ಸ್ವಾಭಾವಿಕವಾದ ಭೋಗ ವನ್ನು ಸ್ವಭಾವ ವಿರುದ್ಧವಾದ ಭೋಗಕ್ಕೆ ಮಾರ್ಪಡಿ ಸಿದರು.
ರೋಮಾಪುರದವರಿಗೆ 1 : 27 (KNV)
ಅದರಂತೆ ಗಂಡಸರೂ ಸ್ವಾಭಾವಿಕ ಸ್ತ್ರೀ ಭೋಗವನ್ನು ಬಿಟ್ಟು ಒಬ್ಬರಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ ಗಂಡಸರ ಸಂಗಡ ಗಂಡಸರು ಅಯೋಗ್ಯವಾದದ್ದನ್ನು ಮಾಡುತ್ತಾ ತಮ್ಮ ತಪ್ಪಿಗೆ ತಕ್ಕ ಪ್ರತಿಫಲವನ್ನು ತಮ್ಮಲ್ಲಿ ಹೊಂದಿದರು.
ರೋಮಾಪುರದವರಿಗೆ 1 : 28 (KNV)
ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು.
ರೋಮಾಪುರದವರಿಗೆ 1 : 29 (KNV)
ಹೀಗೆ ಅವರು ಸಕಲ ಅನೀತಿಯಿಂದಲೂ ಜಾರತ್ವ ದುರ್ಮಾರ್ಗತನ ದುರಾಶೆ ದುಷ್ಟತ್ವ ಇವುಗಳಿಂದಲೂ ತುಂಬಿದವರಾಗಿ ಹೊಟ್ಟೇಕಿಚ್ಚು ಕೊಲೆ ವಿವಾದ ಮೋಸ ತುಂಬಿದವರೂ ಅತಿಉಗ್ರತೆಯಿಂದ ತುಂಬಿದವರೂ ಪಿಸುಗುಟ್ಟುವ ವರೂ
ರೋಮಾಪುರದವರಿಗೆ 1 : 30 (KNV)
ಚಾಡಿಹೇಳುವವರೂ ದೇವರನ್ನು ಹಗೆ ಮಾಡುವವರೂ ಧಿಕ್ಕರಿಸುವವರೂ ಅಹಂಕಾರಿಗಳೂ ಉಬ್ಬಿಕೊಳ್ಳುವವರೂ ಕೆಟ್ಟವುಗಳನ್ನು ಕಲ್ಪಿಸುವವರೂ ತಂದೆತಾಯಿಗಳಿಗೆ ಅವಿಧೇಯರೂ
ರೋಮಾಪುರದವರಿಗೆ 1 : 31 (KNV)
ತಿಳುವಳಿಕೆಯಿಲ್ಲ ದವರೂ ಪ್ರಮಾಣಕ್ಕೆ ತಪ್ಪುವವರೂ ಸ್ವಾಭಾವಿಕವಾದ ಮಮತೆಯಿಲ್ಲದವರೂ ಸಮಾಧಾನವಾಗದವರೂ ಕರುಣೆಯಿಲ್ಲದವರೂ ಆದರು.ಇಂಥವುಗಳನ್ನು ಮಾಡುವವರು ಮರಣಕ್ಕೆ ಯೋಗ್ಯರೆಂಬ ದೇವರ ನ್ಯಾಯತೀರ್ಪನ್ನು ಅವರು ತಿಳಿದವರಾಗಿದ್ದರೂ ಅವು ಗಳನ್ನು ಮಾಡುವದಲ್ಲದೆ ಅಂಥವುಗಳನ್ನು ಮಾಡುವವ ರಲ್ಲಿ ಸಂತೋಷಪಡುತ್ತಾರೆ.
ರೋಮಾಪುರದವರಿಗೆ 1 : 32 (KNV)
ಇಂಥವುಗಳನ್ನು ಮಾಡುವವರು ಮರಣಕ್ಕೆ ಯೋಗ್ಯರೆಂಬ ದೇವರ ನ್ಯಾಯತೀರ್ಪನ್ನು ಅವರು ತಿಳಿದವರಾಗಿದ್ದರೂ ಅವು ಗಳನ್ನು ಮಾಡುವದಲ್ಲದೆ ಅಂಥವುಗಳನ್ನು ಮಾಡುವವ ರಲ್ಲಿ ಸಂತೋಷಪಡುತ್ತಾರೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32

BG:

Opacity:

Color:


Size:


Font: