ಅಪೊಸ್ತಲರ ಕೃತ್ಯಗ 6 : 1 (KNV)
ಆ ದಿವಸಗಳಲ್ಲಿ ಶಿಷ್ಯರ ಸಂಖ್ಯೆ ಹೆಚ್ಚಾದಾಗ ಪ್ರತಿ ದಿನದ ಉಪಚಾರದಲ್ಲಿ ಗ್ರೀಕರ ವಿಧವೆಯರು ಅಲಕ್ಷ್ಯಮಾಡಲ್ಪಟ್ಟದ್ದರಿಂದ ಇಬ್ರಿಯ ರಿಗೆ ವಿರುದ್ಧವಾಗಿ ಅವರು ಗುಣುಗುಟ್ಟಿದರು.
ಅಪೊಸ್ತಲರ ಕೃತ್ಯಗ 6 : 2 (KNV)
ಆಗ ಆ ಹನ್ನೆರಡು ಮಂದಿಯು ಶಿಷ್ಯರ ಸಮೂಹವನ್ನು ತಮ್ಮ ಬಳಿಗೆ ಕರೆದು--ನಾವು ದೇವರ ವಾಕ್ಯವನ್ನು ಬಿಟ್ಟು ಉಪಚಾರ ಮಾಡುವದು ವಿಹಿತವಾದದ್ದಲ್ಲ.
ಅಪೊಸ್ತಲರ ಕೃತ್ಯಗ 6 : 3 (KNV)
ಆದದರಿಂದ ಸಹೋದರರೇ, ಈ ಕೆಲಸದ ಮೇಲೆ ನಾವು ನೇಮಿಸುವಂತೆ ಪವಿತ್ರಾತ್ಮನಿಂದಲೂ ಜ್ಞಾನ ದಿಂದಲೂ ತುಂಬಿದ ಯಥಾರ್ಥವಾದ ಏಳು ಮಂದಿ ಯನ್ನು ನಿಮ್ಮಲ್ಲಿಂದ ಆರಿಸಿಕೊಳ್ಳಿರಿ.
ಅಪೊಸ್ತಲರ ಕೃತ್ಯಗ 6 : 4 (KNV)
ಆದರೆ ನಾವು ಪ್ರಾರ್ಥನೆಯಲ್ಲಿಯೂ ವಾಕ್ಯೋಪದೇಶದಲ್ಲಿಯೂ ನಿರತರಾಗಿರುವಂತೆ ನಮ್ಮನ್ನು ಒಪ್ಪಿಸಿಕೊಡುವೆವು ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 6 : 5 (KNV)
ಈ ಮಾತು ಸಮೂಹಕ್ಕೆಲ್ಲಾ ಒಪ್ಪಿಗೆಯಾಯಿತು; ಆಗ ಅವರು ನಂಬಿಕೆಯಿಂದಲೂ ಪವಿತ್ರಾತ್ಮನಿಂದಲೂ ಭರಿತನಾದ ಸ್ತೆಫನನೂ, ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ ಪರ್ಮೇನ ಮತ್ತು ಯೆಹೂದ್ಯ ಮತಾವಲಂಬಿಯಾದ ಅಂತಿ ಯೋಕ್ಯದ ನಿಕೊಲಾಯ ಎಂಬವರನ್ನೂ ಆರಿಸಿಕೊಂಡು
ಅಪೊಸ್ತಲರ ಕೃತ್ಯಗ 6 : 6 (KNV)
ಅವರನ್ನು ಅಪೊಸ್ತಲರ ಮುಂದೆ ನಿಲ್ಲಿಸಲಾಗಿ ಅವರು ಪ್ರಾರ್ಥನೆ ಮಾಡಿ ಅವರ ಮೇಲೆ ಕೈಗಳನ್ನಿಟ್ಟರು.
ಅಪೊಸ್ತಲರ ಕೃತ್ಯಗ 6 : 7 (KNV)
ಹೀಗೆ ದೇವರ ವಾಕ್ಯವು ಪ್ರಬಲವಾಯಿತು; ಯೆರೂಸಲೇಮಿನಲ್ಲಿ ಶಿಷ್ಯರ ಸಂಖ್ಯೆಯು ಬಹಳವಾಗಿ ಹೆಚ್ಚಿತು; ಇದಲ್ಲದೆ ಯಾಜಕರಲ್ಲಿ ದೊಡ್ಡ ಸಮೂಹವು ನಂಬಿಕೆಗೆ ವಿಧೇಯರಾದರು.
ಅಪೊಸ್ತಲರ ಕೃತ್ಯಗ 6 : 8 (KNV)
ಸ್ತೆಫನನು ನಂಬಿಕೆಯಿಂದಲೂ ಬಲದಿಂದಲೂ ತುಂಬಿದವನಾಗಿ ಜನರಲ್ಲಿ ಮಹತ್ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡುತ್ತಿದ್ದನು.
ಅಪೊಸ್ತಲರ ಕೃತ್ಯಗ 6 : 9 (KNV)
ಆಗ ಲಿಬೆರ್ತೀನ ಎಂಬ ಸಭಾಮಂದಿರದಲ್ಲಿಯೂ ಕುರೇನ್ಯ ಅಲೆಕ್ಸಾಂದ್ರಿಯ ಕಿಲಿಕ್ಯ ಆಸ್ಯದವರ ಸಭಾಮಂದಿರ ದಲ್ಲಿಯೂ ಕೆಲವರು ಎದ್ದು ಸ್ತೆಫನನೊಂದಿಗೆ ತರ್ಕ ಮಾಡುತ್ತಿದ್ದರು.
ಅಪೊಸ್ತಲರ ಕೃತ್ಯಗ 6 : 10 (KNV)
ಆದರೆ ಅವನು ಜ್ಞಾನದಿಂದಲೂ ಆತ್ಮನಿಂದಲೂ ಮಾತನಾಡಿದ್ದನ್ನು ಅವರು ಎದುರಿಸ ಲಾರದೆ ಹೋದರು.
ಅಪೊಸ್ತಲರ ಕೃತ್ಯಗ 6 : 11 (KNV)
ಅವರು ಸುಳ್ಳು ಸಾಕ್ಷಿ ಹೇಳುವ ಮನುಷ್ಯರನ್ನು ಸೇರಿಸಿಕೊಂಡು--ಇವನು ಮೋಶೆಗೆ ಮತ್ತು ದೇವರಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನು ಹೇಳುವದನ್ನು ನಾವು ಕೇಳಿದ್ದೇವೆ ಎಂದು ಅವರು ಹೇಳಿದರು.
ಅಪೊಸ್ತಲರ ಕೃತ್ಯಗ 6 : 12 (KNV)
ಇನ್ನೂ ಅವರು ಜನರನ್ನೂ ಹಿರಿಯರನ್ನೂ ಶಾಸ್ತ್ರಿ ಗಳನ್ನೂ ರೇಗಿಸಿದ್ದಲ್ಲದೆ ಬಂದು ಅವನನ್ನು ಹಿಡಿದು ಆಲೋಚನಾಸಭೆಗೆ ತೆಗೆದುಕೊಂಡು ಹೋಗಿ
ಅಪೊಸ್ತಲರ ಕೃತ್ಯಗ 6 : 13 (KNV)
ಸುಳ್ಳು ಸಾಕ್ಷಿಗಳನ್ನು ನಿಲ್ಲಿಸ ಲಾಗಿ ಅವರು--ಈ ಮನುಷ್ಯನು ಈ ಪರಿಶುದ್ಧ ಸ್ಥಳಕ್ಕೂ ನ್ಯಾಯಪ್ರಮಾಣಕ್ಕೂ ವಿರುದ್ಧವಾಗಿ ದೂಷಣೆಯ ಮಾತುಗಳನ್ನಾಡುವದನ್ನು ನಿಲ್ಲಿಸುವದೇ ಇಲ್ಲ.
ಅಪೊಸ್ತಲರ ಕೃತ್ಯಗ 6 : 14 (KNV)
ನಜ ರೇತಿನ ಯೇಸು ಈ ಸ್ಥಳವನ್ನು (ದೇವಾಲಯವನ್ನು) ಕೆಡವಿ ಮೋಶೆಯು ನಮಗೆ ಒಪ್ಪಿಸಿಕೊಟ್ಟ ಆಚಾರಗಳನ್ನು ಮಾರ್ಪಡಿಸುವನು ಎಂದು ಇವನು ಹೇಳುವದನ್ನು ನಾವು ಕೇಳಿದ್ದೇವೆ ಅಂದರು.
ಅಪೊಸ್ತಲರ ಕೃತ್ಯಗ 6 : 15 (KNV)
ಆಗ ಆಲೋಚನಾ ಸಭೆಯಲ್ಲಿ ಕೂತಿದ್ದವರೆಲ್ಲರೂ ಅವನನ್ನು ದೃಷ್ಟಿಸಿ ನೋಡಲಾಗಿ ಅವನ ಮುಖವು ದೂತನ ಮುಖದಂತೆ ಇರುವದನ್ನು ಕಂಡರು.
❮
❯