ಅಪೊಸ್ತಲರ ಕೃತ್ಯಗ 28 : 1 (KNV)
ಅವರು ಪಾರಾದಾಗ ಆ ದ್ವೀಪದ ಹೆಸರು ಮೆಲೀತೆ ಎಂದು ತಿಳಿದು ಕೊಂಡರು.
ಅಪೊಸ್ತಲರ ಕೃತ್ಯಗ 28 : 2 (KNV)
ಅಲ್ಲಿಯ ಅನಾಗರಿಕ ಜನರು ನಮಗೆ ತೋರಿಸಿದ ದಯೆಯು ಅಪಾರವಾಗಿತ್ತು; ಆ ಸಮಯ ದಲ್ಲಿ ಮಳೆಯೂ ಚಳಿಯೂ ಇದ್ದದರಿಂದ ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು.
ಅಪೊಸ್ತಲರ ಕೃತ್ಯಗ 28 : 3 (KNV)
ಪೌಲನು ಕಟ್ಟಿಗೆಯ ಹೊರೆಯನ್ನು ಕೂಡಿಸಿ ಬೆಂಕಿಯ ಮೇಲೆ ಹಾಕಿದಾಗ ಆ ಕಾವಿನ ದೆಸೆಯಿಂದ ಒಂದು ವಿಷ ಸರ್ಪವು ಹೊರಗೆ ಬಂದು ಅವನ ಕೈಯನ್ನು ಬಿಗಿಯಾಗಿ ಸುತ್ತಿಕೊಂಡಿತು.
ಅಪೊಸ್ತಲರ ಕೃತ್ಯಗ 28 : 4 (KNV)
ಆ ವಿಷಜಂತು ಅವನ ಕೈಯಿಂದ ಜೋತಾಡುವದನ್ನು ಆ ಅನಾಗರಿಕರು ನೋಡಿ--ಈ ಮನುಷ್ಯನು ಸಮುದ್ರದಿಂದ ತಪ್ಪಿಸಿ ಕೊಂಡರೂ ಪ್ರತೀಕಾರವು ಇವನನ್ನು ಬದುಕಗೊಡಿಸು ವದಿಲ್ಲ. ಇವನು ನಿಸ್ಸಂದೇಹವಾಗಿ ಕೊಲೆ ಪಾತಕನು ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.
ಅಪೊಸ್ತಲರ ಕೃತ್ಯಗ 28 : 5 (KNV)
ಆಗ ಅವನು ಆ ಜಂತನ್ನು ಬೆಂಕಿಯೊಳಕ್ಕೆ ಝಾಡಿಸಿಬಿಟ್ಟನು; ಯಾವ ಅಪಾಯವೂ ಅವನಿಗೆ ಆಗಲಿಲ್ಲ.
ಅಪೊಸ್ತಲರ ಕೃತ್ಯಗ 28 : 6 (KNV)
ಹೇಗಿದ್ದರೂ ಅವನು ಬಾತುಹೋದಾನು ಇಲ್ಲವೆ ಅಕಸ್ಮಾತ್ತಾಗಿ ಸತ್ತುಬಿದ್ದಾನು ಎಂದು ಅವರು ನೋಡಿಕೊಂಡೇ ಇದ್ದರು; ಬಹಳ ಹೊತ್ತಿನವರೆಗೂ ಅವರು ನೋಡಿದ ಮೇಲೆ ಯಾವ ಅಪಾಯವೂ ಅವನಿಗೆ ಬಾರದೆ ಇರುವದನ್ನು ಕಂಡು ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡು ಅವನೊಬ್ಬ ದೇವರೆಂ
ಅಪೊಸ್ತಲರ ಕೃತ್ಯಗ 28 : 7 (KNV)
ಅದೇ ಸ್ಥಳದಲ್ಲಿ ಪೊಪ್ಲಿಯ ಎಂಬ ಆ ದ್ವೀಪದ ಮುಖ್ಯಸ್ಥನಿಗೆ ಆಸ್ತಿ ಇತ್ತು; ಅವನು ನಮ್ಮನ್ನು ಸೇರಿಸಿಕೊಂಡು ಮೂರು ದಿವಸ ಆದರದಿಂದ ಸತ್ಕರಿಸಿ ದನು.
ಅಪೊಸ್ತಲರ ಕೃತ್ಯಗ 28 : 8 (KNV)
ಇದಾದ ಮೇಲೆ ಪೊಪ್ಲಿಯನ ತಂದೆಯು ಜ್ವರದಿಂದಲೂ ರಕ್ತಭೇದಿಯಿಂದಲೂ ಬಿದ್ದುಕೊಂಡಿ ದ್ದಾಗ ಪೌಲನು ಒಳಗೆ ಪ್ರವೇಶಿಸಿ ಪ್ರಾರ್ಥನೆ ಮಾಡಿ ಅವನ ಮೇಲೆ ತನ್ನ ಕೈಗಳನ್ನಿಟ್ಟು ಅವನನ್ನು ಸ್ವಸಮಾಡಿದನು.
ಅಪೊಸ್ತಲರ ಕೃತ್ಯಗ 28 : 9 (KNV)
ಇದಾದ ಮೇಲೆ ಆ ದ್ವೀಪದಲ್ಲಿ ರೋಗಗಳಿದ್ದ ಬೇರೆಯವರೂ ಬಂದು ಸ್ವಸ್ಥರಾದರು.
ಅಪೊಸ್ತಲರ ಕೃತ್ಯಗ 28 : 10 (KNV)
ಅವರು ಸಹ ನಮ್ಮನ್ನು ಬಹಳವಾಗಿ ಗೌರವಿಸಿ ಸನ್ಮಾನಿಸಿದರು; ನಾವು ಹೊರಟಾಗ ನಮಗೆ ಅವಶ್ಯ ವಾದವುಗಳನ್ನು ತಂದು ಹಡಗಿನಲ್ಲಿಟ್ಟರು.
ಅಪೊಸ್ತಲರ ಕೃತ್ಯಗ 28 : 11 (KNV)
ಮೂರು ತಿಂಗಳಾದ ಮೇಲೆ ಆ ದ್ವೀಪದಲ್ಲಿ ಶೀತಕಾಲ ಕಳೆದ ನಂತರ ಅಶ್ವಿನೀ ದೇವತೆಯ ಚಿನ್ಹೆ ಇದ್ದ ಅಲೆಕ್ಸಾಂದ್ರಿಯದ ಹಡಗನ್ನು ಹತ್ತಿ ನಾವು ಹೊರಟೆವು.
ಅಪೊಸ್ತಲರ ಕೃತ್ಯಗ 28 : 12 (KNV)
ತರುವಾಯ ಸುರಕೂಸಿಗೆ ಸೇರಿ ನಾವು ಅಲ್ಲಿ ಮೂರು ದಿವಸಗಳು ಇದ್ದೆವು.
ಅಪೊಸ್ತಲರ ಕೃತ್ಯಗ 28 : 13 (KNV)
ಅಲ್ಲಿಂದ ನಾವು ಸುತ್ತಿಕೊಂಡು ರೇಗಿಯಕ್ಕೆ ಬಂದೆವು; ಒಂದು ದಿವಸವಾದ ಮೇಲೆ ದಕ್ಷಿಣದ ಗಾಳಿಯು ಬೀಸಿದಾಗ ಮರುದಿನ ನಾವು ಪೊತಿಯೋಲಕ್ಕೆ ಸೇರಿದೆವು.
ಅಪೊಸ್ತಲರ ಕೃತ್ಯಗ 28 : 14 (KNV)
ಅಲ್ಲಿ ನಾವು ಸಹೋದರರನ್ನು ನೋಡಿದಾಗ ಅವರು ನಮ್ಮನ್ನು ಏಳು ದಿವಸ ತಮ್ಮೊಂದಿಗೆ ಇರಬೇಕೆಂದು ಬೇಡಿಕೊಂಡರು; ಹೀಗೆ ನಾವು ರೋಮ್‌ ಕಡೆಗೆ ಹೊರಟೆವು.
ಅಪೊಸ್ತಲರ ಕೃತ್ಯಗ 28 : 15 (KNV)
ಅಲ್ಲಿದ್ದ ಸಹೋದರರು ನಮ್ಮ ವಿಷಯ ವಾಗಿ ಕೇಳಿ ನಮ್ಮನ್ನು ಸಂಧಿಸುವದಕ್ಕಾಗಿ ಅಪ್ಪಿಯ ಪೇಟೆ ಮತ್ತು ತ್ರಿಛತ್ರದ ವರೆಗೆ ಬಂದಾಗ ಪೌಲನು ಅವರನ್ನು ನೋಡಿ ದೇವರಿಗೆ ಸ್ತೋತ್ರಮಾಡಿ ಧೈರ್ಯ ಗೊಂಡನು.
ಅಪೊಸ್ತಲರ ಕೃತ್ಯಗ 28 : 16 (KNV)
ನಾವು ರೋಮ್‌ಗೆ ಬಂದಾಗ ಕಾವಲುಗಾರರ ನಾಯಕನಿಗೆ ಶತಾಧಿಪತಿಯು ಸೆರೆಯವರನ್ನು ಒಪ್ಪಿಸಿ ದನು; ಆದರೆ ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪೌಲನು ಪ್ರತ್ಯೇಕವಾಗಿ ಇರಬಹುದೆಂದು ಅಪ್ಪಣೆ ಹೊಂದಿದನು.
ಅಪೊಸ್ತಲರ ಕೃತ್ಯಗ 28 : 17 (KNV)
ಮೂರು ದಿವಸಗಳಾದ ಮೇಲೆ ಪೌಲನು ಯೆಹೂದ್ಯರ ಮುಖ್ಯಸ್ಥರನ್ನು ಒಟ್ಟಾಗಿ ಕರೆದನು. ಅವರು ಕೂಡಿ ಬಂದಾಗ ಅವನು ಅವರಿಗೆ--ಜನರೇ, ಸಹೊ ದರರೇ, ಜನರಿಗಾಗಲೀ ನಮ್ಮ ಪಿತೃಗಳ ಆಚಾರಗಳಿ ಗಾಗಲೀ ವಿರೋಧವಾಗಿ ಯಾವದನ್ನೂ ಮಾಡ ದಿದ್ದರೂ ಯೆರೂಸಲೇಮಿನಿಂದ ರೋಮ್‌ನವರ ಕೆ
ಅಪೊಸ್ತಲರ ಕೃತ್ಯಗ 28 : 18 (KNV)
ಅವರು ನನ್ನನ್ನು ಪರೀಕ್ಷಿಸಿ ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿ ದ್ದರು.
ಅಪೊಸ್ತಲರ ಕೃತ್ಯಗ 28 : 19 (KNV)
ಆದರೆ ಯೆಹೂದ್ಯರು ಅದಕ್ಕೆ ವಿರೋಧವಾಗಿ ಮಾತನಾಡಿದಾಗ ಕೈಸರನಿಗೆ ಹೇಳಿಕೊಳ್ಳುವಂತೆ ನಾನು ಒತ್ತಾಯ ಮಾಡಲ್ಪಟ್ಟೆನು; ಆದರೆ ನನ್ನ ಸ್ವದೇಶದವರ ಮೇಲೆ ತಪ್ಪು ಹೊರಿಸುವದಕ್ಕಾಗಿ ಅಲ್ಲ.
ಅಪೊಸ್ತಲರ ಕೃತ್ಯಗ 28 : 20 (KNV)
ಈ ಕಾರಣ ದಿಂದಲೇ ನಿಮ್ಮನ್ನು ನೋಡುವದಕ್ಕೂ ನಿಮ್ಮೊಂದಿಗೆ ಮಾತನಾಡುವದಕ್ಕೂ ನಾನು ನಿಮ್ಮನ್ನು ಕರೆಯಿಸಿದೆನು; ಇಸ್ರಾಯೇಲ್ಯರ ನಿರೀಕ್ಷೆಯ ನಿಮಿತ್ತವಾಗಿ ನಾನು ಈ ಸರಪಣಿಯಿಂದ ಕಟ್ಟಲ್ಪಟ್ಟಿದ್ದೇನೆ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 28 : 21 (KNV)
ಆಗ ಅವರು ಅವನಿಗೆ--ನಿನ್ನ ವಿಷಯವಾಗಿ ಯೂದಾಯದಿಂದ ನಮಗೆ ಯಾವ ಪತ್ರಗಳು ಬಂದಿಲ್ಲ, ಇಲ್ಲವೆ ಇಲ್ಲಿ ಬಂದ ಸಹೋದರರಲ್ಲಿ ಯಾವನೂ ನಿನ್ನ ವಿಷಯವಾಗಿ ಕೆಟ್ಟದ್ದೇನೂ ತೋರಿಸ ಲಿಲ್ಲ ಮತ್ತು ಹೇಳಲಿಲ್ಲ.
ಅಪೊಸ್ತಲರ ಕೃತ್ಯಗ 28 : 22 (KNV)
ಆದರೆ ನಿನ್ನ ಅಭಿಪ್ರಾಯ ವೇನೆಂದು ನಿನ್ನಿಂದಲೇ ಕೇಳುವದಕ್ಕೆ ನಾವು ಅಪೇಕ್ಷಿಸು ತ್ತೇವೆ; ಎಲ್ಲಾ ಕಡೆಯಲ್ಲಿಯೂ ಈ ಪಂಗಡದ ವಿಷಯ ದಲ್ಲಿ ಜನರು ವಿರುದ್ಧವಾಗಿ ಮಾತನಾಡುತ್ತಾರೆಂಬದು ನಮಗೆ ಗೊತ್ತದೆ ಎಂದು ಹೇಳಿದರು.
ಅಪೊಸ್ತಲರ ಕೃತ್ಯಗ 28 : 23 (KNV)
ಅವರು ಅವನಿಗೆ ಒಂದು ದಿನವನ್ನು ನೇಮಿಸಿ ದಾಗ ಅನೇಕರು ಅವನ ನಿವಾಸಕ್ಕೆ ಬಂದರು; ಆಗ ಬೆಳಗಿನಿಂದ ಸಾಯಂಕಾಲದವರೆಗೆ ಮೋಶೆಯ ನ್ಯಾಯ ಪ್ರಮಾಣದಿಂದಲೂ ಪ್ರವಾದನೆಗಳಿಂದಲೂ ಯೇಸು ವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಅವರಿಗೆ ದೇವರ ರಾಜ್ಯವನ್ನು ವಿವರಿಸಿ ಸಾಕ್ಷೀಕರಿಸಿದನು.
ಅಪೊಸ್ತಲರ ಕೃತ್ಯಗ 28 : 24 (KNV)
ಅವನು ಹೇಳಿದ ಮಾತುಗಳನ್ನು ಕೆಲವರು ನಂಬಿ ದರು; ಆದರೆ ಕೆಲವರು ನಂಬದೆ ಹೋದರು.
ಅಪೊಸ್ತಲರ ಕೃತ್ಯಗ 28 : 25 (KNV)
ಹೀಗೆ ಅವರಲ್ಲಿ ವಿಭಾಗವಾದಾಗ ಪೌಲನು ಅವರಿಗೆ--ಯೆಶಾಯನು ಪವಿತ್ರಾತ್ಮನಿಂದ ನಮ್ಮ ಪಿತೃಗಳಿಗೆ ವಿಹಿತ ವಾಗಿ ಹೇಳಿದ್ದೇನಂದರೆ--
ಅಪೊಸ್ತಲರ ಕೃತ್ಯಗ 28 : 26 (KNV)
ನೀವು ಕೇಳಿದರೂ ಕೇಳಿ ಗ್ರಹಿಸುವದಿಲ್ಲ; ನೋಡಿದರೂ ನೋಡಿ ಕಾಣುವದಿಲ್ಲ;
ಅಪೊಸ್ತಲರ ಕೃತ್ಯಗ 28 : 27 (KNV)
ಯಾಕಂದರೆ ಅವರು ತಮ್ಮ ಕಣ್ಣುಗಳಿಂದ ನೋಡಿ ಕಿವಿಗಳಿಂದ ಕೇಳಿ ಹೃದಯದಿಂದ ಗ್ರಹಿಸಿ ಮಾರ್ಪಾಟು ಹೊಂದದಂತೆಯೂ ನಾನು ಅವರನ್ನು ಸ್ವಸ್ಥ ಮಾಡ ದಂತೆಯೂ ಈ ಜನರ ಹೃದಯವು ಕೊಬ್ಬೇರಿತು; ಕೇಳುವದಕ್ಕೆ ಅವರ ಕಿವಿಗಳು ಮಂದವಾದವು; ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ
ಅಪೊಸ್ತಲರ ಕೃತ್ಯಗ 28 : 28 (KNV)
ಆದಕಾರಣ ದೇವರ ರಕ್ಷಣೆಯು ಅನ್ಯಜನಾಂಗದವರಿಗೆ ಕಳುಹಿಸಲ್ಪಟ್ಟಿದೆ; ಅದನ್ನು ಅವರು ಕೇಳುವರು ಎಂಬದಾಗಿ ನಿಮಗೆ ತಿಳಿದಿರಲಿ ಅಂದನು.
ಅಪೊಸ್ತಲರ ಕೃತ್ಯಗ 28 : 29 (KNV)
ಅವನು ಈ ಮಾತುಗಳ ನ್ನಾಡಿದಾಗ ಯೆಹೂದ್ಯರು ಹೊರಟುಹೊಗಿ ತಮ್ಮಲ್ಲಿ ತಾವು ಬಹಳವಾಗಿ ತರ್ಕಿಸಿಕೊಂಡರು.
ಅಪೊಸ್ತಲರ ಕೃತ್ಯಗ 28 : 30 (KNV)
ಪೌಲನು ತನ್ನ ಸ್ವಂತ ಬಾಡಿಗೆಯ ಮನೆಯಲ್ಲಿ ಪೂರಾ ಎರಡು ವರಷವಿದ್ದು ತನ್ನ ಬಳಿಗೆ ಬರುವವರ ನ್ನೆಲ್ಲಾ ಸೇರಿಸಿಕೊಂಡನು.ಅವನು ತುಂಬಾ ಧೈರ್ಯ ದೊಂದಿಗೆ ದೇವರರಾಜ್ಯವನ್ನು ಸಾರುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾದವುಗಳನ್ನು ಬೋಧಿಸುತ್ತಿ ದ್ದನು. ಯಾವ ಮನುಷ್ಯನೂಅವನಿಗೆ ಅಡ್ಡಿಮಾಡಲಿಲ್ಲ.
ಅಪೊಸ್ತಲರ ಕೃತ್ಯಗ 28 : 31 (KNV)
ಅವನು ತುಂಬಾ ಧೈರ್ಯ ದೊಂದಿಗೆ ದೇವರರಾಜ್ಯವನ್ನು ಸಾರುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾದವುಗಳನ್ನು ಬೋಧಿಸುತ್ತಿ ದ್ದನು. ಯಾವ ಮನುಷ್ಯನೂಅವನಿಗೆ ಅಡ್ಡಿಮಾಡಲಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31

BG:

Opacity:

Color:


Size:


Font: