ಅಪೊಸ್ತಲರ ಕೃತ್ಯಗ 26 : 1 (KNV)
ಆಗ ಅಗ್ರಿಪ್ಪನು ಪೌಲನಿಗೆ--ನೀನು ನಿನ್ನ ಪಕ್ಷದಲ್ಲಿ ಮಾತನಾಡುವದಕ್ಕೆ ಅಪ್ಪಣೆ ಆಯಿತು ಎಂದು ಹೇಳಿದನು. ಆಗ ಪೌಲನು ಕೈಚಾಚಿ ತನಗಾಗಿ ಪ್ರತಿವಾದಿಸುತ್ತಾ--
ಅಪೊಸ್ತಲರ ಕೃತ್ಯಗ 26 : 2 (KNV)
ಅರಸನಾದ ಅಗ್ರಿಪ್ಪನೇ, ಯೆಹೂದ್ಯರು ನನ್ನ ಮೇಲೆ ಹೊರಿಸಿದ ಎಲ್ಲಾ ಅಪರಾಧಗಳ ವಿಷಯವಾಗಿ ಈ ದಿವಸ ನಿನ್ನ ಮುಂದೆ ನನ್ನ ಪಕ್ಷದಲ್ಲಿ ಪ್ರತಿವಾದ ಮಾಡುವದಕ್ಕಿರುವದರಿಂದ ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.
ಅಪೊಸ್ತಲರ ಕೃತ್ಯಗ 26 : 3 (KNV)
ಪ್ರಾಮುಖ್ಯ ವಾಗಿ ಯೆಹೂದ್ಯರ ಮಧ್ಯದಲ್ಲಿರುವ ಎಲ್ಲಾ ಆಚಾರ ಗಳನ್ನೂ ವಿವಾದಗಳನ್ನೂ ನೀನು ಚೆನ್ನಾಗಿ ಬಲ್ಲವನಾಗಿರು ವದರಿಂದ ಸಹನೆಯಿಂದ ನನ್ನ ಮಾತುಗಳನ್ನು ಕೇಳ ಬೇಕೆಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ.
ಅಪೊಸ್ತಲರ ಕೃತ್ಯಗ 26 : 4 (KNV)
ನಾನು ಮೊದಲಿನಿಂದಲೂ ಯೆರೂಸಲೇಮಿನಲ್ಲಿರುವ ನನ್ನ ಸ್ವಂತ ಜನಾಂಗದವರ ಮಧ್ಯದಲ್ಲಿ ಬಾಲ್ಯದಿಂದ ನಾನು ಬದುಕಿದ ವಿಧಾನವು ಎಲ್ಲಾ ಯೆಹೂದ್ಯರಿಗೆ ತಿಳಿದದೆ.
ಅಪೊಸ್ತಲರ ಕೃತ್ಯಗ 26 : 5 (KNV)
ನಮ್ಮ ಮತದ ಬಹು ನಿಷ್ಠೆಯ ಪಂಗಡಕ್ಕನುಸಾರವಾಗಿ ನಾನು ಒಬ್ಬ ಫರಿಸಾಯನಾಗಿ ಬದುಕಿರುವದನ್ನು ಮೊದಲಿನಿಂದಲೂ ತಿಳಿದವರಾದ ಇವರು ಸಾಕ್ಷಿ ಕೊಡಬೇಕೆಂದಿದ್ದರೆ ಕೊಡಲಿ.
ಅಪೊಸ್ತಲರ ಕೃತ್ಯಗ 26 : 6 (KNV)
ಈಗಲೂ ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದ ನಿರೀಕ್ಷೆಯ ವಿಷಯದಲ್ಲಿ ನಾನು ವಿಚಾರಿಸಲ್ಪಡು ವವನಾಗಿ ನಿಂತುಕೊಂಡಿದ್ದೇನೆ.
ಅಪೊಸ್ತಲರ ಕೃತ್ಯಗ 26 : 7 (KNV)
ನಮ್ಮ ಹನ್ನೆರಡು ಗೋತ್ರದವರು ಆಸಕ್ತಿಯಿಂದ ಹಗಲಿರುಳು ದೇವರನ್ನು ಸೇವಿಸುತ್ತಾ ಈ ವಾಗ್ದಾನದ ನೆರವೇರಿಕೆಗಾಗಿ ನಿರೀಕ್ಷಿಸುತ್ತಿದ್ದಾರೆ; ಅಗ್ರಿಪ್ಪ ರಾಜನೇ, ಈ ನಿರೀಕ್ಷೆಯ ವಿಷಯಕ್ಕಾಗಿಯೇ ಯೆಹೂದ್ಯರು ನನ್ನ ಮೇಲೆ ತಪ್ಪುಹೊರಿಸುತ್ತಾರೆ.
ಅಪೊಸ್ತಲರ ಕೃತ್ಯಗ 26 : 8 (KNV)
ಸತ್ತವರನ್ನು ದೇವರು ಎಬ್ಬಿಸುವನೆಂಬದು ನಂಬಲಾಗದ ಒಂದು ವಿಷಯವೆಂದು ನೀವು ಯಾಕೆ ಯೋಚಿಸುತ್ತೀರಿ?
ಅಪೊಸ್ತಲರ ಕೃತ್ಯಗ 26 : 9 (KNV)
ನಜರೇತಿನ ಯೇಸುವಿನ ಹೆಸರಿಗೆ ಪ್ರತಿಕೂಲವಾಗಿ ಅನೇಕ ಕಾರ್ಯಗಳನ್ನು ಮಾಡಲೇಬೇಕೆಂದು ನಾನು ನಿಜವಾಗಿ ಅಂದುಕೊಂಡಿದ್ದೆನು.
ಅಪೊಸ್ತಲರ ಕೃತ್ಯಗ 26 : 10 (KNV)
ಯೆರೂಸಲೇಮಿ ನಲ್ಲಿ ನಾನು ಹಾಗೆಯೇ ಮಾಡಿದ್ದಲ್ಲದೆ ಪ್ರಧಾನ ಯಾಜಕರಿಂದ ಅಧಿಕಾರವನ್ನು ಪಡೆದು ಪರಿಶುದ್ಧರಲ್ಲಿ ಅನೇಕರನ್ನು ನಾನು ಸೆರೆಯಲ್ಲಿ ಹಾಕಿಸಿದೆನು. ಮಾತ್ರ ವಲ್ಲದೆ ಅವರು ಕೊಲ್ಲಲ್ಪಟ್ಟಾಗ ಅದಕ್ಕೆ ನಾನು ಸಮ್ಮತಿಪಟ್ಟೆನು.
ಅಪೊಸ್ತಲರ ಕೃತ್ಯಗ 26 : 11 (KNV)
ಇದಲ್ಲದೆ ಪ್ರತಿಯೊಂದು ಸಭಾ ಮಂದಿರದಲ್ಲಿ ನಾನು ಅನೇಕ ಸಾರಿ ಅವರನ್ನು ಶಿಕ್ಷಿಸಿ ಅವರು ದೇವದೂಷಣೆ ಮಾಡುವಂತೆ ಒತ್ತಾಯ ಮಾಡಿದೆನು ಮತ್ತು ಅವರ ಮೇಲೆ ಮಹಾಕೋಪೋ ದ್ರೇಕದಿಂದ ಬೇರೆ ಪಟ್ಟಣಗಳ ತನಕ ಅವರನ್ನು ಹಿಂಸಿಸಿದೆನು.
ಅಪೊಸ್ತಲರ ಕೃತ್ಯಗ 26 : 12 (KNV)
ಇದಲ್ಲದೆ ಪ್ರಧಾನಯಾಜಕರಿಂದ ಅಧಿಕಾರವನ್ನೂ ಆಜ್ಞೆಯನ್ನೂ ಪಡೆದು ದಮಸ್ಕಕ್ಕೆ ನಾನು ಹೋಗುತ್ತಿದ್ದೆನು.
ಅಪೊಸ್ತಲರ ಕೃತ್ಯಗ 26 : 13 (KNV)
ಓ ರಾಜನೇ, ನಾನು ದಾರಿಯಲ್ಲಿದ್ದಾಗ ಮಧ್ಯಾಹ್ನದಲ್ಲಿ ನನ್ನ ಮತ್ತು ನನ್ನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದವರ ಸುತ್ತಲೂ ಸೂರ್ಯನ ಪ್ರಕಾಶಕ್ಕಿಂತ ಹೆಚ್ಚಾದ ಬೆಳಕು ಪರಲೋಕ ದಿಂದ ಪ್ರಕಾಶಿಸುತ್ತಿರುವದನ್ನು ನಾನು ಕಂಡೆನು.
ಅಪೊಸ್ತಲರ ಕೃತ್ಯಗ 26 : 14 (KNV)
ನಾವೆಲ್ಲರೂ ನೆಲಕ್ಕೆ ಬಿದ್ದಾಗ--ಸೌಲನೇ, ಸೌಲನೇ, ಯಾಕೆ ನನ್ನನ್ನು ನೀನು ಹಿಂಸಿಸುತ್ತೀ, ಮುಳ್ಳು ಗೋಲನ್ನು ಒದೆಯುವದು ನಿನಗೆ ಕಷ್ಟ ಎಂದು ನನ್ನೊಂದಿಗೆ ಇಬ್ರಿಯ ಭಾಷೆಯಲ್ಲಿ ಮಾತನಾಡಿದ ಒಂದು ಧ್ವನಿಯನ್ನು ನಾನು ಕೇಳಿದೆನು.
ಅಪೊಸ್ತಲರ ಕೃತ್ಯಗ 26 : 15 (KNV)
ಅದಕ್ಕೆ ನಾನು--ಕರ್ತನೇ, ನೀನು ಯಾರು ಎಂದು ಕೇಳಿದೆನು. ಆಗ ಆತನು--ನೀನು ಹಿಂಸೆಪಡಿಸುವ ಯೇಸುವೇ ನಾನು.
ಅಪೊಸ್ತಲರ ಕೃತ್ಯಗ 26 : 16 (KNV)
ಆದರೆ ನೀನು ಎದ್ದು ನಿಂತುಕೋ; ನೀನು ನೋಡಿದವುಗಳ ಮತ್ತು ನಾನು ನಿನಗೆ ಪ್ರತ್ಯಕ್ಷವಾಗಿ ತಿಳಿಯಪಡಿಸುವವುಗಳ ವಿಷಯವಾಗಿ ನಿನ್ನನ್ನು ಸೇವಕನನ್ನಾಗಿಯೂ ಸಾಕ್ಷಿಯನ್ನಾಗಿಯೂ ಮಾತ್ರ ವಲ್ಲದೆ
ಅಪೊಸ್ತಲರ ಕೃತ್ಯಗ 26 : 17 (KNV)
ಈ ಜನರಿಂದ ಮತ್ತು ಈಗ ನಾನು ನಿನ್ನನ್ನು ಕಳುಹಿಸುವ ಅನ್ಯಜನರಿಂದ ನಿನ್ನನ್ನು ಬಿಡಿಸುವದಕ್ಕೂ
ಅಪೊಸ್ತಲರ ಕೃತ್ಯಗ 26 : 18 (KNV)
ಅವರ ಕಣ್ಣುಗಳನ್ನು ತೆರೆಯುವದಕ್ಕೂ ಮತ್ತು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೆ ಅವರನ್ನು ತಿರುಗಿಸುವದಕ್ಕೂ ಅವರು ನನ್ನಲ್ಲಿ ಇಡುವ ನಂಬಿಕೆಯಿಂದಾಗುವ ಪಾಪಕ್ಷಮಾ ಪಣೆಯನ್ನೂ ಪವಿತ್ರರಾದವರಲ್ಲಿ ಸ್ವಾಸ್ಥ್ಯವನ್ನೂ ಹೊಂದುವಂತೆ ಮಾಡುವದಕ್ಕಾಗಿ ನಾನು
ಅಪೊಸ್ತಲರ ಕೃತ್ಯಗ 26 : 19 (KNV)
ಆದ ಕಾರಣ ಓ ಅಗ್ರಿಪ್ಪ ರಾಜನೇ, ಪರಲೋಕದ ಆ ದರ್ಶನಕ್ಕೆ ನಾನು ಅವಿಧೇಯನಾಗಲಿಲ್ಲ.
ಅಪೊಸ್ತಲರ ಕೃತ್ಯಗ 26 : 20 (KNV)
ಆದರೆ ಅವರು ಮಾನಸಾಂತರಪಟ್ಟು ದೇವರ ಕಡೆಗೆ ತಿರುಗಿ ಕೊಂಡು ಮಾನಸಾಂತರಪಟ್ಟದ್ದಕ್ಕಾಗಿ ಯೋಗ್ಯವಾದ ಕ್ರಿಯೆಗಳನ್ನು ಮಾಡಬೇಕೆಂದು ಮೊದಲನೆಯದಾಗಿ ದಮಸ್ಕದವರಿಗೂ ಯೆರೂಸಲೇಮಿನಲ್ಲಿಯೂ ಯೂದಾಯದ ಎಲ್ಲಾ ಕಡೆಯ ತೀರಗಳಲ್ಲಿಯೂ ಅನ್ಯಜನಾಂಗದವರಿಗೂ ಪ್ರಕಟಿಸಿದೆನು.
ಅಪೊಸ್ತಲರ ಕೃತ್ಯಗ 26 : 21 (KNV)
ಯಾಕಂ ದರೆ ಈ ಕಾರಣಗಳಿಗಾಗಿ ಯೆಹೂದ್ಯರು ದೇವಾಲಯ ದಲ್ಲಿ ನನ್ನನ್ನು ಹಿಡಿದು ಕೊಲ್ಲುವದಕ್ಕಾಗಿ ಪ್ರಯತ್ನಿಸಿದರು.
ಅಪೊಸ್ತಲರ ಕೃತ್ಯಗ 26 : 22 (KNV)
ಹೀಗೆ ನಾನು ದೇವರ ಸಹಾಯವನ್ನು ಹೊಂದಿ ಈ ದಿವಸದವರೆಗೆ ಜೀವದಿಂದಿದ್ದು ಪ್ರವಾದಿಗಳೂ ಮೋಶೆಯೂ ಸಂಭವಿಸುವವೆಂದು ಹೇಳಿದವುಗಳನ್ನೇ ಹೊರತು ಮತ್ತೆ ಯಾವ ವಿಷಯಗಳನ್ನೂ ಹೇಳದೆ ಚಿಕ್ಕವರಿಗೂ ದೊಡ್ಡವರಿಗೂ ಸಾಕ್ಷೀಕರಿಸುವವ ನಾಗಿದ್ದೇನೆ.
ಅಪೊಸ್ತಲರ ಕೃತ್ಯಗ 26 : 23 (KNV)
ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತವ ರೊಳಗಿಂದ ಮೊದಲನೆಯವನಾಗಿ ಎದ್ದು ಪ್ರಜೆ ಗಳಿಗೂ ಅನ್ಯಜನಾಂಗದವರಿಗೂ ಬೆಳಕನ್ನು ತೋರಿಸು ವವನಾಗಿರಬೇಕಾಗಿತ್ತು.
ಅಪೊಸ್ತಲರ ಕೃತ್ಯಗ 26 : 24 (KNV)
ಅವನು ಈ ರೀತಿಯಾಗಿ ಪ್ರತಿವಾದ ಮಾಡು ತ್ತಿದ್ದಾಗ ಫೆಸ್ತನು ಮಹಾಶಬ್ದದಿಂದ--ಪೌಲನೇ, ನೀನು ಭ್ರಮೆಗೊಂಡಿದ್ದೀ; ಅತಿಶಯ ಜ್ಞಾನವು ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 26 : 25 (KNV)
ಆದರೆ ಅವನು--ಗೌರವವುಳ್ಳ ಫೆಸ್ತನೇ, ನಾನು ಹುಚ್ಚನಲ್ಲ; ಸ್ವಸ್ಥಬುದ್ಧಿಯಿಂದ ಸತ್ಯವಾದ ಮಾತುಗಳನ್ನೇ ಹೇಳು ತ್ತೇನೆ.
ಅಪೊಸ್ತಲರ ಕೃತ್ಯಗ 26 : 26 (KNV)
ಯಾವ ರಾಜನ ಮುಂದೆ ನಾನು ಸರಳ ವಾಗಿ ಮಾತನಾಡುತ್ತಿರುವೆನೋ ಆ ರಾಜನು ಇವೆಲ್ಲವು ಗಳನ್ನು ತಿಳಿದವನಾಗಿದ್ದಾನೆ; ಈ ವಿಷಯಗಳಲ್ಲಿ ಯಾವವೂ ಅವನಿಗೆ ಮರೆಯಾಗಿಲ್ಲವೆಂದು ನನಗೆ ನಿಶ್ಚಯವಿದೆ; ಈ ವಿಷಯವು ಒಂದು ಮೂಲೆಯಲ್ಲಿ ನಡೆದದ್ದಲ್ಲ.
ಅಪೊಸ್ತಲರ ಕೃತ್ಯಗ 26 : 27 (KNV)
ರಾಜನಾದ ಅಗ್ರಿಪ್ಪನೇ, ಪ್ರವಾದಿ ಗಳನ್ನು ನೀನು ನಂಬುತ್ತೀಯೋ? ನೀನು ನಂಬುತ್ತೀ ಯೆಂದು ನಾನು ಬಲ್ಲೆನು ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 26 : 28 (KNV)
ಆಗ ಅಗ್ರಿಪ್ಪನು ಪೌಲನಿಗೆ--ನಾನು ಕ್ರೈಸ್ತನಾಗುವಂತೆ ನೀನು ನನ್ನನ್ನು ಬಹಳ ಮಟ್ಟಿಗೆ ಒಡಂಬಡಿಸುತ್ತೀ ಅಂದನು.
ಅಪೊಸ್ತಲರ ಕೃತ್ಯಗ 26 : 29 (KNV)
ಆಗ ಪೌಲನು--ಈ ಬೇಡಿಗಳ ಹೊರತು ನೀನು ಮಾತ್ರವಲ್ಲದೆ ಈ ದಿವಸ ನನ್ನ ಮಾತುಗಳನ್ನು ಕೇಳುವವರೆಲ್ಲರೂ ನನ್ನ ಹಾಗೆ ಇರಬೇಕೆಂದು ನಾನು ದೇವರ ಮುಂದೆ ಇಚ್ಛೈಸುತ್ತೇನೆ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 26 : 30 (KNV)
ಅವನು ಹೀಗೆ ಮಾತನಾಡಿದಾಗ ರಾಜನೂ ಅಧಿಪತಿಯೂ ಬೆರ್ನಿಕೆಯೂ ಅವರೊಂದಿಗೆ ಕೂಡಿ ದ್ದವರೂ ಎದ್ದರು.
ಅಪೊಸ್ತಲರ ಕೃತ್ಯಗ 26 : 31 (KNV)
ಅವರು ಆಚೆಗೆ ಹೋಗಿ--ಈ ಮನುಷ್ಯನು ಮರಣದಂಡನೆಗಾಗಲೀ ಬೇಡಿಗಳಿ ಗಾಗಲೀ ಯೋಗ್ಯವಾದ ಯಾವದನ್ನೂ ಮಾಡಲಿಲ್ಲ ವೆಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.ಆಗ ಅಗ್ರಿಪ್ಪನು ಫೆಸ್ತನಿಗೆ--ಈ ಮನುಷ್ಯನು ಕೈಸರನಿಗೆ ಹೇಳಿ ಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡಬಹುದಾಗಿತ್ತು ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 26 : 32 (KNV)
ಆಗ ಅಗ್ರಿಪ್ಪನು ಫೆಸ್ತನಿಗೆ--ಈ ಮನುಷ್ಯನು ಕೈಸರನಿಗೆ ಹೇಳಿ ಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡಬಹುದಾಗಿತ್ತು ಎಂದು ಹೇಳಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32

BG:

Opacity:

Color:


Size:


Font: