ಅಪೊಸ್ತಲರ ಕೃತ್ಯಗ 23 : 1 (KNV)
ಆಗ ಪೌಲನು ಆಲೋಚನಾ ಸಭೆಯನ್ನು ದೃಷ್ಟಿಸಿ ನೋಡುತ್ತಾ--ಜನರೇ, ಸಹೋ ದರರೇ, ನಾನು ಈ ದಿನದ ವರೆಗೆ ದೇವರ ಮುಂದೆ ಒಳ್ಳೇಮನಸ್ಸಾಕ್ಷಿಯಿಂದ ಜೀವಿಸಿದ್ದೇನೆ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 23 : 2 (KNV)
ಅದಕ್ಕೆ ಮಹಾಯಾಜಕನಾದ ಅನನೀಯ ನು ಅವನ ಬಾಯಿಯ ಮೇಲೆ ಹೊಡೆಯಬೇಕೆಂದು ತನ್ನ ಹತ್ತಿರ ನಿಂತಿದ್ದವರಿಗೆ ಅಪ್ಪಣೆಕೊಟ್ಟನು.
ಅಪೊಸ್ತಲರ ಕೃತ್ಯಗ 23 : 3 (KNV)
ಆಗ ಪೌಲನು ಅವನಿಗೆ--ಸುಣ್ಣಾ ಹಚ್ಚಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು; ನ್ಯಾಯಪ್ರಮಾಣ ಕ್ಕನುಸಾರವಾಗಿ ನನ್ನನ್ನು ತೀರ್ಪು ಮಾಡುವದಕ್ಕೆ ಕೂತುಕೊಂಡು ನ್ಯಾಯಪ್ರಮಾಣಕ್ಕೆ ಪ್ರತಿಕೂಲವಾಗಿ ನನ್ನನ್ನು ಹೊಡೆಯುವಂತೆ ನೀನು ಅಪ್ಪಣೆ ಕೊಡು ತ್ತೀಯೋ ಎಂದು ಕೇಳಿದನು.
ಅಪೊಸ್ತಲರ ಕೃತ್ಯಗ 23 : 4 (KNV)
ಹತ್ತಿರ ನಿಂತಿದ್ದವರು ದೇವರ ಮಹಾಯಾಜಕನನ್ನು ನೀನು ದೂಷಿಸುತ್ತೀಯೋ ಎಂದು ಕೇಳಿದರು.
ಅಪೊಸ್ತಲರ ಕೃತ್ಯಗ 23 : 5 (KNV)
ಆಗ ಪೌಲನು--ಸಹೋದರರೇ, ಅವನು ಮಹಾಯಾಜಕನೆಂದು ನನಗೆ ತಿಳಿಯ ಲಿಲ್ಲ; --ನಿನ್ನ ಜನರ ಅಧಿಪತಿಯ ವಿಷಯವಾಗಿ ನೀನು ಕೆಟ್ಟದ್ದನ್ನು ಮಾತನಾಡಬಾರದು ಎಂಬದಾಗಿ ಬರೆದದೆ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 23 : 6 (KNV)
ಆದರೆ ಒಂದು ಭಾಗ ಸದ್ದುಕಾಯರೂ ಮತ್ತೊಂದು ಭಾಗ ಫರಿಸಾಯರೂ ಇರುವದನ್ನು ಪೌಲನು ಗ್ರಹಿಸಿದಾಗ--ಜನರೇ, ಸಹೋದರರೇ, ನಾನು ಫರಿಸಾಯನು, ಒಬ್ಬ ಫರಿಸಾಯನ ಮಗನು; ನಿರೀಕ್ಷೆಯ ವಿಷಯವಾಗಿಯೂ ಸತ್ತವರ ಪುನರುತ್ಥಾನದ ವಿಷಯವಾಗಿಯೂ ನಾನು ವಿಚಾರಣೆ ಮಾಡಲ್ಪಡುತ್ತಿದ್ದೇನೆ ಎಂದು ಆಲೆ
ಅಪೊಸ್ತಲರ ಕೃತ್ಯಗ 23 : 7 (KNV)
ಅವನು ಹಾಗೆ ಹೇಳಿದಾಗ ಫರಿಸಾಯರ ಮತ್ತು ಸದ್ದುಕಾಯರ ನಡುವೆ ಭೇದಉಂಟಾಯಿತು; ಇದರಿಂದ ಸಮೂಹವೂ ವಿಭಾಗವಾಯಿತು.
ಅಪೊಸ್ತಲರ ಕೃತ್ಯಗ 23 : 8 (KNV)
ಪುನರುತ್ಥಾನವಾಗಲೀ ದೂತನಾ ಗಲೀ ಆತ್ಮನಾಗಲೀ ಇಲ್ಲವೆಂದು ಸದ್ದುಕಾಯರು ಹೇಳುತ್ತಾರೆ; ಇವೆಲ್ಲವುಗಳು ಇವೆಯೆಂದು ಫರಿಸಾ ಯರು ಒಪ್ಪಿಕೊಳ್ಳುತ್ತಾರೆ.
ಅಪೊಸ್ತಲರ ಕೃತ್ಯಗ 23 : 9 (KNV)
ಅಲ್ಲಿ ದೊಡ್ಡ ಕೂಗಾಟ ಉಂಟಾದದ್ದರಿಂದ ಫರಿಸಾಯರ ಪಕ್ಷದವರಾದ ಶಾಸ್ತ್ರಿಗಳು ಎದ್ದು--ಈ ಮನುಷ್ಯನಲ್ಲಿ ಯಾವ ಕೆಟ್ಟ ದ್ದನ್ನೂ ನಾವು ಕಾಣಲಿಲ್ಲ; ಆತ್ಮವಾಗಲೀ ದೇವದೂತ ನಾಗಲೀ ಅವನ ಕೂಡ ಮಾತನಾಡಿದರೆ ನಾವು ದೇವರಿಗೆ ವಿರೋಧವಾಗಿ ವ್ಯಾಜ್ಯವಾಡದೆ ಇರೋಣ ಎಂದು ಹೇಳಿ ವಾಗ್ವಾದ ಮಾಡಿದರು.
ಅಪೊಸ್ತಲರ ಕೃತ್ಯಗ 23 : 10 (KNV)
ಅಲ್ಲಿ ದೊಡ್ಡ ಭೇದ ಉಂಟಾದಾಗ ಅವರು ಪೌಲನನ್ನು ಎಳೆದಾಡಿ ತುಂಡುತುಂಡಾಗಿ ಮಾಡಿ ಯಾರು ಎಂದು ಮುಖ್ಯ ನಾಯಕನು ಭಯಪಟ್ಟು ಅವನನ್ನು ಅವರೊಳಗಿಂದ ಬಲವಂತವಾಗಿ ಕೋಟೆಯೊಳಗೆ ತರಬೇಕೆಂದು ಸೈನಿಕರಿಗೆ ಆಜ್ಞಾಪಿಸಿದನು.
ಅಪೊಸ್ತಲರ ಕೃತ್ಯಗ 23 : 11 (KNV)
ಮರುದಿನ ರಾತ್ರಿ ಕರ್ತನು ಅವನ ಬಳಿಯಲ್ಲಿ ನಿಂತು--ಪೌಲನೇ, ಧೈರ್ಯವಾಗಿರು; ಯೆರೂಸ ಲೇಮಿನಲ್ಲಿ ನನ್ನ ವಿಷಯವಾಗಿ ನೀನು ಸಾಕ್ಷಿ ಹೇಳಿ ದಂತೆ ರೋಮ್‌ನಲ್ಲಿಯೂ ಸಾಕ್ಷಿ ಹೇಳತಕ್ಕದ್ದು ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 23 : 12 (KNV)
ಬೆಳಗಾದ ಮೇಲೆ ಯೆಹೂದ್ಯರಲ್ಲಿ ಕೆಲವರು ಒಗ್ಗಟ್ಟಾಗಿ ಕೂಡಿ ತಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಹೇಳಿ ಶಪಥಮಾಡಿಕೊಂಡರು.
ಅಪೊಸ್ತಲರ ಕೃತ್ಯಗ 23 : 13 (KNV)
ಈ ಒಳಸಂಚನ್ನು ಮಾಡಿ ದವರು ನಾಲ್ವತ್ತು ಮಂದಿಗಿಂತ ಹೆಚ್ಚಾಗಿದ್ದರು.
ಅಪೊಸ್ತಲರ ಕೃತ್ಯಗ 23 : 14 (KNV)
ಅವರು ಪ್ರಧಾನಯಾಜಕರ ಮತ್ತು ಹಿರಿಯರ ಬಳಿಗೆ ಬಂದು--ನಾವು ಪೌಲನನ್ನು ಕೊಲ್ಲುವ ತನಕ ಯಾವದನ್ನೂ ತಿನ್ನುವದಿಲ್ಲವೆಂದು ನಮಗೆ ನಾವೇ ದೊಡ್ಡ ಶಪಥವನ್ನು ಮಾಡಿಕೊಂಡಿದ್ದೇವೆ.
ಅಪೊಸ್ತಲರ ಕೃತ್ಯಗ 23 : 15 (KNV)
ಆದ ಕಾರಣ ಈಗ ನೀವು ಪೌಲನ ವಿಷಯದಲ್ಲಿ ಇನ್ನೂ ಸಂಪೂರ್ಣವಾಗಿ ವಿಚಾರಿಸುವವರೋ ಎಂಬಂತೆ ಮುಖ್ಯನಾಯಕನು ಅವನನ್ನು ಮಾರನೆಯ ದಿನದಲ್ಲಿ ನಿಮ್ಮ ಬಳಿಗೆ ತರುವ ಹಾಗೆ ನೀವು ಆಲೋಚನಾ ಸಭೆಯೊಂದಿಗೆ ಅವನಿಗೆ ಸೂಚಿಸಿರಿ; ಅವನು ಹತ್ತಿರಕ್ಕೆ ಬರುವ ಮುಂಚೆಯೇ ನಾವು ಅವನನ್ನು ಕೊಲ್ಲುವದಕ್ಕೆ ಸಿದ
ಅಪೊಸ್ತಲರ ಕೃತ್ಯಗ 23 : 16 (KNV)
ಹೀಗೆ ಅವರು ಹೊಂಚು ಹಾಕಿಕೊಂಡಿರುವದನ್ನು ಪೌಲನ ಸಹೋದರಿಯ ಮಗನು ಕೇಳಿ ಕೋಟೆಯೊಳಗೆ ಪ್ರವೇಶಿಸಿ ಪೌಲನಿಗೆ ತಿಳಿಸಿದನು.
ಅಪೊಸ್ತಲರ ಕೃತ್ಯಗ 23 : 17 (KNV)
ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು--ಈ ಯೌವನಸ್ಥನನ್ನು ಮುಖ್ಯ ನಾಯಕನ ಬಳಿಗೆ ಕರಕೊಂಡು ಹೋಗು; ಅವನಿಗೆ ತಿಳಿಸಬೇಕಾದ ಒಂದು ವಿಷಯ ಇದೆ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 23 : 18 (KNV)
ಇದರಿಂದ ಆ ಶತಾಧಿಪತಿಯು ಅವನನ್ನು ಮುಖ್ಯ ನಾಯಕನ ಬಳಿಗೆ ಕರೆದುಕೊಂಡು ಬಂದು--ನಿನಗೆ ಹೇಳಬೇಕಾದ ಒಂದು ವಿಷಯವು ಈ ಯೌವನಸ್ಥನಿಗೆ ಇರುವದರಿಂದ ಸೆರೆಯವನಾದ ಪೌಲನು ನನ್ನನ್ನು ಕರೆದು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬರುವಂತೆ ಬೇಡಿಕೊಂಡನು ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 23 : 19 (KNV)
ಆಗ ಮುಖ್ಯ ನಾಯಕನು ಅವನ ಕೈಹಿಡಿದು ಒಂದು ಕಡೆಗೆ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ--ನೀನು ನನಗೆ ಹೇಳಬೇಕಾದದ್ದು ಏನು ಎಂದು ಅವನನ್ನು ಕೇಳಿದನು.
ಅಪೊಸ್ತಲರ ಕೃತ್ಯಗ 23 : 20 (KNV)
ಅದಕ್ಕೆ ಅವನು--ಪೌಲನ ವಿಷಯದಲ್ಲಿ ಯೆಹೂದ್ಯರು ಇನ್ನೂ ಸಂಪೂ ರ್ಣವಾಗಿ ವಿಚಾರಣೆ ಮಾಡುವವರೋ ಎಂಬಂತೆ ಅವನನ್ನು ನಾಳೆ ಆಲೋಚನಾಸಭೆಗೆ ತರುವದಕ್ಕಾಗಿ ಅವರು ನಿನ್ನನ್ನು ಬೇಡಿಕೊಳ್ಳುವದಕ್ಕೆ ಅಪೇಕ್ಷೆಪಟ್ಟು ಒಪ್ಪಂದ ಮಾಡಿಕೊಂಡಿದ್ದಾರೆ.
ಅಪೊಸ್ತಲರ ಕೃತ್ಯಗ 23 : 21 (KNV)
ಆದರೆ ನೀನು ಅವರಿಗೆ ಒಪ್ಪಬೇಡ; ಅವನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಶಪಥ ವನ್ನು ಮಾಡಿಕೊಂಡವರಲ್ಲಿ ನಾಲ್ವತ್ತು ಮಂದಿಗಿಂತ ಹೆಚ್ಚಾದವರು ಅವನಿಗಾಗಿ ಕಾಯುತ್ತಿದ್ದಾರೆ; ಈಗ ಅವರು ನಿನ್ನ ಮಾತಿಗಾಗಿ ಎದುರು ನೋಡುತ್ತಾ ಸಿದ್ಧವಾಗಿದ್ದಾರೆ ಎಂದು ಹೇಳಿದ
ಅಪೊಸ್ತಲರ ಕೃತ್ಯಗ 23 : 22 (KNV)
ಹೀಗೆ ಮುಖ್ಯ ನಾಯಕನು ಆ ಯೌವನಸ್ಥನನ್ನು ಕಳುಹಿಸಿಕೊಡು ವಾಗ--ನೀನು ಈ ವಿಷಯಗಳನ್ನು ನನಗೆ ವ್ಯಕ್ತಪಡಿ ಸಿದ್ದೀ ಎಂದು ಯಾರಿಗೂ ಹೇಳಬೇಡ ಎಂದು ಅವನಿಗೆ ಆಜ್ಞಾಪಿಸಿದನು.
ಅಪೊಸ್ತಲರ ಕೃತ್ಯಗ 23 : 23 (KNV)
ಆಗ ಅವನು ಇಬ್ಬರು ಶತಾಧಿಪತಿ ಗಳನ್ನು ತನ್ನ ಬಳಿಗೆ ಕರೆದು--ರಾತ್ರಿ ಮೂರು ಘಂಟೆಗೆ ಕೈಸರೈಯಕ್ಕೆ ಹೋಗುವದಕ್ಕಾಗಿ ಇನ್ನೂರು ಮಂದಿ ಸೈನಿಕರನ್ನೂ ಎಪ್ಪತ್ತು ಮಂದಿ ಕುದುರೆ ಸವಾರರನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಮಾಡಿ,
ಅಪೊಸ್ತಲರ ಕೃತ್ಯಗ 23 : 24 (KNV)
ಕುದುರೆಗಳನ್ನು ತಂದು ಪೌಲನನ್ನು ಹತ್ತಿಸಿ ಅಧಿಪತಿ ಯಾದ ಫೇಲಿಕ್ಸನ ಬಳಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕೆಂದು ಹೇಳಿದನು.
ಅಪೊಸ್ತಲರ ಕೃತ್ಯಗ 23 : 25 (KNV)
ಅವನು ಈ ರೀತಿ ಯಲ್ಲಿ ಒಂದು ಪತ್ರವನ್ನು ಬರೆದನು:-
ಅಪೊಸ್ತಲರ ಕೃತ್ಯಗ 23 : 26 (KNV)
ಅತ್ಯುತ್ತಮ ಅಧಿಪತಿಯಾದ ಫೇಲಿಕ್ಸನಿಗೆ ಕ್ಲೌದ್ಯ ಲೂಸ್ಯನು ಮಾಡುವ ವಂದನೆ.
ಅಪೊಸ್ತಲರ ಕೃತ್ಯಗ 23 : 27 (KNV)
ಯೆಹೂದ್ಯರು ಈ ಮನುಷ್ಯ ನನ್ನು ಹಿಡಿದು ಕೊಲ್ಲಬೇಕೆಂದಿದ್ದಾಗ ನಾನು ಸೈನ್ಯ ದೊಂದಿಗೆ ಬಂದು ಅವನು ರೋಮ್‌ನವನೆಂದು ತಿಳಿದುಕೊಂಡು ಅವನನ್ನು ತಪ್ಪಿಸಿದೆನು.
ಅಪೊಸ್ತಲರ ಕೃತ್ಯಗ 23 : 28 (KNV)
ಅವರು ಅವನ ಮೇಲೆ ತಪ್ಪು ಹೊರಿಸಿದ ಕಾರಣವನ್ನು ತಿಳಿದು ಕೊಳ್ಳಲು ನಾನು ಅಪೇಕ್ಷಿಸಿ ಅವರ ಆಲೋಚನಾಸಭೆಗೆ ಅವನನ್ನು ಕರೆದುಕೊಂಡು ಹೋದೆನು.
ಅಪೊಸ್ತಲರ ಕೃತ್ಯಗ 23 : 29 (KNV)
ಆಗ ತಮ್ಮ ನ್ಯಾಯಪ್ರಮಾಣ ಸಂಬಂಧವಾದ ಪ್ರಶ್ನೆಗಳಿಂದ ಅವನ ಮೇಲೆ ತಪ್ಪು ಹೊರಿಸಿದರೇ ಹೊರತು ಮರಣ ದಂಡನೆಗಾಗಲೀ ಬೇಡಿಗಳಿಗಾಗಲೀ ಯೋಗ್ಯವಾದ ಯಾವದನ್ನೂ ಅವರು ಅವನ ಮೇಲೆ ತಪ್ಪು ಹೊರಿಸ ಲಿಲ್ಲವೆಂದು ನಾನು ಗ್ರಹಿಸಿದೆನು.
ಅಪೊಸ್ತಲರ ಕೃತ್ಯಗ 23 : 30 (KNV)
ಯೆಹೂದ್ಯರು ಹೇಗೆ ಆ ಮನುಷ್ಯನಿಗಾಗಿ ಹೊಂಚುಹಾಕುತ್ತಿದ್ದಾರೆಂದು ನನಗೆ ತಿಳಿದಾಗ ಕೂಡಲೇ ಅವನನ್ನು ನಾನು ನಿನ್ನ ಬಳಿಗೆ ಕಳುಹಿಸಿ ಅವನ ಮೇಲೆ ತಪ್ಪು ಹೊರಿಸುವವರು ಅವನಿಗೆ ವಿರೋಧವಾಗಿ ಮಾತನಾಡುವದನ್ನು ನಿನ್ನ ಮುಂದೆಯೇ ಹೇಳಬೇಕೆಂದು ಅವರಿಗೆ ಸಹ ನಾನು ಅಪ್ಪಣೆಕೊಟ್ಟೆನು; ಶ
ಅಪೊಸ್ತಲರ ಕೃತ್ಯಗ 23 : 31 (KNV)
ಆಗ ತಮಗೆ ಅಪ್ಪಣೆಯಾದಂತೆ ಸೈನಿಕರು ಪೌಲನನ್ನು ರಾತ್ರಿಯ ಸಮಯದಲ್ಲಿ ಅಂತಿಪತ್ರಿಗೆ ಕರೆದುಕೊಂಡು ಹೋದರು.
ಅಪೊಸ್ತಲರ ಕೃತ್ಯಗ 23 : 32 (KNV)
ಮರುದಿನ ಕುದುರೆ ಸವಾರರು ಅವನ ಜೊತೆಯಲ್ಲಿ ಹೋಗುವಂತೆ ಬಿಟ್ಟು ತಾವು ಕೋಟೆಗೆ ಹಿಂತಿರುಗಿದರು.
ಅಪೊಸ್ತಲರ ಕೃತ್ಯಗ 23 : 33 (KNV)
ಅವರು ಕೈಸರೈಯಕ್ಕೆ ಬಂದು ಪತ್ರವನ್ನು ಅಧಿಪತಿಗೆ ತಲುಪಿಸಿ ಪೌಲನನ್ನು ಸಹ ಅವನ ಮುಂದೆ ನಿಲ್ಲಿಸಿದರು.
ಅಪೊಸ್ತಲರ ಕೃತ್ಯಗ 23 : 34 (KNV)
ಆ ಅಧಿಪತಿಯು ಪತ್ರವನ್ನು ಓದಿ ಪೌಲನು ಯಾವ ಪ್ರಾಂತ್ಯದವನು ಎಂದು ವಿಚಾರಿಸಿದಾಗ ಅವನು ಕಿಲಿಕ್ಯದವನೆಂದು ತಿಳುಕೊಂಡು--ನಿನ್ನ ಮೇಲೆ ತಪ್ಪು ಹೊರಿಸುವವರು ಬಂದಾಗ ನಾನು ನಿನ್ನನ್ನು ವಿಚಾರಣೆ ಮಾಡುವೆನು ಎಂದು ಹೇಳಿ ಅವನನ್ನು ಹೆರೋದನ ನ್ಯಾಯಾಲಯದಲ್ಲಿ ಇಟ್ಟು ಕಾಯಬೇಕೆಂದು ಅಪ್ಪಣೆ ಕೊಟ್ಟನು.
ಅಪೊಸ್ತಲರ ಕೃತ್ಯಗ 23 : 35 (KNV)
ನಿನ್ನ ಮೇಲೆ ತಪ್ಪು ಹೊರಿಸುವವರು ಬಂದಾಗ ನಾನು ನಿನ್ನನ್ನು ವಿಚಾರಣೆ ಮಾಡುವೆನು ಎಂದು ಹೇಳಿ ಅವನನ್ನು ಹೆರೋದನ ನ್ಯಾಯಾಲಯದಲ್ಲಿ ಇಟ್ಟು ಕಾಯಬೇಕೆಂದು ಅಪ್ಪಣೆ ಕೊಟ್ಟನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35

BG:

Opacity:

Color:


Size:


Font: