ಅಪೊಸ್ತಲರ ಕೃತ್ಯಗ 16 : 1 (KNV)
ತರುವಾಯ ಅವನು ದೆರ್ಬೆ ಮತ್ತು ಲುಸ್ತ್ರಕ್ಕೆ ಬಂದನು; ಅಲ್ಲಿ ಇಗೋ, ನಂಬಿಕೊಂಡಿದ್ದ ಯೆಹೂದ್ಯ ಸ್ತ್ರೀಯ ಮಗನಾದ ತಿಮೊಥೆಯನೆಂಬ ಹೆಸರುಳ್ಳ ಒಬ್ಬ ಶಿಷ್ಯನಿದ್ದನು. ಅವನ ತಂದೆಯು ಗ್ರೀಕನು.
ಅಪೊಸ್ತಲರ ಕೃತ್ಯಗ 16 : 2 (KNV)
ಲುಸ್ತ್ರದಲ್ಲಿಯೂ ಇಕೋನ್ಯದಲ್ಲಿಯೂ ಇದ್ದ ಸಹೋದರರಿಂದ ಇವನು ಒಳ್ಳೇಸಾಕ್ಷಿ ಹೊಂದಿದವನಾಗಿದ್ದನು.
ಅಪೊಸ್ತಲರ ಕೃತ್ಯಗ 16 : 3 (KNV)
ಇವನನ್ನು ತನ್ನ ಸಂಗಡ ಕರಕೊಂಡು ಹೋಗಬೇಕೆಂದು ಪೌಲನು ಅಪೇಕ್ಷಿಸಿ ಆಯಾ ಸ್ಥಳಗಳಲ್ಲಿದ್ದ ಯೆಹೂದ್ಯರ ನಿಮಿತ್ತವಾಗಿ ಅವನಿಗೆ ಸುನ್ನತಿ ಮಾಡಿಸಿದನು. ಯಾಕಂದರೆ ಅವನ ತಂದೆ ಗ್ರೀಕನೆಂದು ಎಲ್ಲರಿಗೂ ಗೊತ್ತಿತ್ತು.
ಅಪೊಸ್ತಲರ ಕೃತ್ಯಗ 16 : 4 (KNV)
ಅವರು ಪಟ್ಟಣಗಳಲ್ಲಿ ಸಂಚಾರ ಮಾಡುತ್ತಾ ಯೆರೂಸಲೇಮಿನಲ್ಲಿದ್ದ ಅಪೊಸ್ತಲರಿಂದಲೂ ಹಿರಿಯ ರಿಂದಲೂ ನೇಮಿಸಲ್ಪಟ್ಟ ವಿಧಿಗಳನ್ನು ಅನುಸರಿಸುವಂತೆ ಅವರಿಗೆ ಒಪ್ಪಿಸಿದರು.
ಅಪೊಸ್ತಲರ ಕೃತ್ಯಗ 16 : 5 (KNV)
ಹೀಗೆ ಸಭೆಗಳು ವಿಶ್ವಾಸದಲ್ಲಿ ಸ್ಥಿರಗೊಂಡು ಸಂಖ್ಯೆಯಲ್ಲಿ ದಿನಾಲು ಹೆಚ್ಚುತ್ತಿದ್ದವು.
ಅಪೊಸ್ತಲರ ಕೃತ್ಯಗ 16 : 6 (KNV)
ಅವರು ಫ್ರುಗ್ಯ ಗಲಾತ್ಯ ಪ್ರಾಂತ್ಯದ ಕಡೆಗೆಲ್ಲಾ ಹಾದು ಹೋಗುತ್ತಿರುವಾಗ ಆಸ್ಯದಲ್ಲಿ ವಾಕ್ಯವನ್ನು ಸಾರಬಾರದೆಂದು ಪವಿತ್ರಾತ್ಮನು ತಡೆದದ್ದರಿಂದ
ಅಪೊಸ್ತಲರ ಕೃತ್ಯಗ 16 : 7 (KNV)
ಅವರು ಮುಸ್ಯಕ್ಕೆ ಬಂದು ಬಿಥೂನ್ಯಕ್ಕೆ ಹೋಗಲು ಪ್ರಯತ್ನ ಮಾಡಿದರು. ಆದರೆ ಆತ್ಮನು ಅವರನ್ನು ಹೋಗಗೊಡಿಸಲಿಲ್ಲ.
ಅಪೊಸ್ತಲರ ಕೃತ್ಯಗ 16 : 8 (KNV)
ಹೀಗೆ ಅವರು ಮೂಸ್ಯವನ್ನು ದಾಟಿ ತ್ರೋವಕ್ಕೆ ಬಂದರು.
ಅಪೊಸ್ತಲರ ಕೃತ್ಯಗ 16 : 9 (KNV)
ಆಗ ರಾತ್ರಿ ಕಾಲದಲ್ಲಿ ಪೌಲನಿಗೆ ಒಂದು ದರ್ಶನವಾಯಿತು; ಏನಂ ದರೆ--ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು--ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕು ಎಂದು ಅವನನ್ನು ಬೇಡಿಕೊಂಡನು.
ಅಪೊಸ್ತಲರ ಕೃತ್ಯಗ 16 : 10 (KNV)
ಅವನು ಆ ದರ್ಶನವನ್ನು ನೋಡಿದ ತರುವಾಯ ಅವರಿಗೆ ಸುವಾರ್ತೆಯನ್ನು ಸಾರುವದಕ್ಕೆ ಕರ್ತನು ನಿಶ್ಚಯವಾಗಿ ನಮ್ಮನ್ನು ಕರೆದಿದ್ದಾನೆಂದು ತಿಳುಕೊಂಡು ಕೂಡಲೆ ಮಕೆದೋನ್ಯಕ್ಕೆ ಹೋಗುವಂತೆ ಪ್ರಯತ್ನಿ ಸಿದೆವು.
ಅಪೊಸ್ತಲರ ಕೃತ್ಯಗ 16 : 11 (KNV)
ಆದದರಿಂದ ತ್ರೋವದಿಂದ ಪ್ರಯಾಣ ಮಾಡಿ ನೆಟ್ಟಗೆ ಸಮೊಥ್ರಾಕೆಗೆ ಬಂದು ಮರುದಿನ ನೆಯಾಪೊಲಿಗೆ ಸೇರಿ ಅಲ್ಲಿಂದ ಫಿಲಿಪ್ಪಿಗೆ ಮುಟ್ಟಿದೆವು.
ಅಪೊಸ್ತಲರ ಕೃತ್ಯಗ 16 : 12 (KNV)
ಅದು ಮಕೆದೋನ್ಯ ಭಾಗದ ಮುಖ್ಯಪಟ್ಟಣವೂ ವಲಸೆಯ ಸ್ಥಳವೂ ಆಗಿತ್ತು. ಆ ಪಟ್ಟಣದಲ್ಲಿ ನಾವು ಕೆಲವು ದಿವಸ ಇದ್ದೆವು.
ಅಪೊಸ್ತಲರ ಕೃತ್ಯಗ 16 : 13 (KNV)
ಸಬ್ಬತ್ತಿನಲ್ಲಿ ನಾವು ಪಟ್ಟಣದೊಳಗಿಂದ ನದೀತೀರದ ಕಡೆಗೆ ಹೋಗಿದ್ದೆವು. ಅಲ್ಲಿ ವಾಡಿಕೆಯಂತೆ ಪ್ರಾರ್ಥನೆ ನಡೆಯುತ್ತಿತ್ತು; ಕೂಡಿ ಬಂದಿದ್ದ ಸ್ತ್ರೀಯರೊಂದಿಗೆ ನಾವು ಕೂತು ಕೊಂಡು ಮಾತನಾಡಿದೆವು.
ಅಪೊಸ್ತಲರ ಕೃತ್ಯಗ 16 : 14 (KNV)
ದೇವರನ್ನು ಆರಾಧಿಸು ತ್ತಿದ್ದವಳೂ ಥುವತೈರ ಪಟ್ಟಣದವಳೂ ಧೂಮ್ರ ವರ್ಣದ ವಸ್ತ್ರಗಳನ್ನು ಮಾರುತ್ತಿದ್ದವಳೂ ಆದ ಲುದ್ಯ ಳೆಂಬ ಹೆಸರುಳ್ಳ ಒಬ್ಬ ಸ್ತ್ರೀಯು ನಮ್ಮ ಮಾತುಗಳನ್ನು ಕೇಳುತ್ತಿದ್ದಳು. ಕರ್ತನು ಆಕೆಯ ಹೃದಯವನ್ನು ತೆರದ ದ್ದರಿಂದ ಪೌಲನು ಹೇಳಿದ ಮಾತುಗಳಿಗೆ ಆಕೆಯು ಲ
ಅಪೊಸ್ತಲರ ಕೃತ್ಯಗ 16 : 15 (KNV)
ಆಕೆಯೂ ಆಕೆಯ ಮನೆಯವರೂ ಬಾಪ್ತಿಸ್ಮ ಮಾಡಿಸಿಕೊಂಡ ಮೇಲೆ--ನಾನು ಕರ್ತನಿಗೆ ನಂಬಿಗಸ್ತಳಾದವಳೆಂದು ನೀವು ತೀರ್ಮಾನಿಸಿದರೆ ನನ್ನ ಮನೆಗೆ ಬಂದು ಇರಬೇಕು ಎಂದು ಆಕೆಯು ನಮ್ಮನ್ನು ಬೇಡಿಕೊಂಡು ಬಲವಂತಮಾಡಿದಳು.
ಅಪೊಸ್ತಲರ ಕೃತ್ಯಗ 16 : 16 (KNV)
ಇದಾದ ಮೇಲೆ ನಾವು ಪ್ರಾರ್ಥನೆ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದಾಗ ಕಾಲಜ್ಞಾನದ ದುರಾತ್ಮ ಹಿಡಿದವಳಾಗಿ ಕಣಿ ಹೇಳುವದರಿಂದ ತನ್ನ ಯಜ ಮಾನರಿಗೆ ಬಹು ಆದಾಯವನ್ನು ತರುತ್ತಿದ್ದ ಒಬ್ಬ ಹುಡುಗಿಯು ನಮ್ಮನ್ನು ಸಂಧಿಸಿದಳು.
ಅಪೊಸ್ತಲರ ಕೃತ್ಯಗ 16 : 17 (KNV)
ಈಕೆಯು ಪೌಲನನ್ನೂ ನಮ್ಮನ್ನೂ ಹಿಂಬಾಲಿಸಿ--ಇವರು ನಮಗೆ ರಕ್ಷಣೆಯ ಮಾರ್ಗವನ್ನು ತೋರಿಸುವ ಮಹೋನ್ನತ ನಾದ ದೇವರ ಸೇವಕರು ಎಂದು ಕೂಗಿ ಹೇಳುತ್ತಿದ್ದಳು.
ಅಪೊಸ್ತಲರ ಕೃತ್ಯಗ 16 : 18 (KNV)
ಹೀಗೆ ಅವಳು ಅನೇಕ ದಿವಸ ಮಾಡಿದ್ದರಿಂದ ಪೌಲನು ಬಹಳವಾಗಿ ವ್ಯಥೆಪಟ್ಟು ಹಿಂತಿರುಗಿ ಆ ದೆವ್ವಕ್ಕೆ--ಅವಳನ್ನು ಬಿಟ್ಟು ಹೋಗು ಎಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಅಪ್ಪಣೆ ಕೊಡುತ್ತೇನೆ ಎಂದು ಹೇಳಿದನು. ಅದೇ ಗಳಿಗೆಯಲ್ಲಿ ಅದು ಬಿಟ್ಟು ಹೋಯಿತು.
ಅಪೊಸ್ತಲರ ಕೃತ್ಯಗ 16 : 19 (KNV)
ಅವಳ ಯಜಮಾನರು ತಮ್ಮ ಆದಾಯದ ನಿರೀಕ್ಷೆ ತಪ್ಪಿತಲ್ಲಾ ಎಂದು ತಿಳಿದು ಪೌಲನನ್ನೂ ಸೀಲನನ್ನೂ ಹಿಡಿದು ಸಂತೆಯ ಸ್ಥಳಕ್ಕೆ ಅಧಿಕಾರಿಗಳ ಬಳಿಗೆ ಎಳ ಕೊಂಡು ಹೋದರು.
ಅಪೊಸ್ತಲರ ಕೃತ್ಯಗ 16 : 20 (KNV)
ಅವರನ್ನು ನ್ಯಾಯಾಧಿಪತಿಗಳ ಬಳಿಗೆ ಕರಕೊಂಡು ಹೋಗಿ--ಯೆಹೂದ್ಯರಾದ ಈ ಮನುಷ್ಯರು ನಮ್ಮ ಪಟ್ಟಣವನ್ನು ಬಹಳವಾಗಿ ಕಳವಳ ಪಡಿಸುತ್ತಾರೆ.
ಅಪೊಸ್ತಲರ ಕೃತ್ಯಗ 16 : 21 (KNV)
ರೋಮಾಯರಾದ ನಾವು ಒಪ್ಪುವದ ಕ್ಕಾಗಲೀ ಕೈಕೊಳ್ಳುವದಕ್ಕಾಗಲೀ ನ್ಯಾಯವಲ್ಲದ ಆಚಾರ ಗಳನ್ನು ಬೋಧಿಸುತ್ತಾರೆ ಅಂದರು.
ಅಪೊಸ್ತಲರ ಕೃತ್ಯಗ 16 : 22 (KNV)
ಸಮೂಹವು ಒಟ್ಟಾಗಿ ಕೂಡಿ ಅವರಿಗೆ ವಿರೋಧವಾಗಿ ಎದ್ದಾಗ ನ್ಯಾಯಾಧಿಪತಿಗಳು ಅವರ ವಸ್ತ್ರಗಳನ್ನು ಹರಿದು ಅವರನ್ನು ಹೊಡೆಯುವಂತೆ ಅಪ್ಪಣೆಕೊಟ್ಟರು.
ಅಪೊಸ್ತಲರ ಕೃತ್ಯಗ 16 : 23 (KNV)
ಅವರನ್ನು ಬಹಳವಾಗಿ ಹೊಡೆಸಿದ ಮೇಲೆ ಅವರನ್ನು ಭದ್ರವಾಗಿ ಕಾಯಬೇಕೆಂದು ಸೆರೆಮನೆಯ ಅಧಿಕಾರಿಗೆ ಖಂಡಿತವಾಗಿ ಆಜ್ಞಾಪಿಸಿ ಸೆರೆಮನೆಯೊಳಗೆ ಹಾಕಿದರು.
ಅಪೊಸ್ತಲರ ಕೃತ್ಯಗ 16 : 24 (KNV)
ಅವನು ಅಂಥಾ ಒಂದು ಜವಾಬ್ದಾರಿಕೆಯನ್ನು ಹೊಂದಿ ಅವರನ್ನು ಸೆರೆಯ ಒಳಭಾಗಕ್ಕೆ ದೂಡಿ ಅವರ ಕಾಲುಗಳಿಗೆ ಕೋಳವನ್ನು ಹಾಕಿ ಬಿಗಿಸಿದನು.
ಅಪೊಸ್ತಲರ ಕೃತ್ಯಗ 16 : 25 (KNV)
ಮಧ್ಯರಾತ್ರಿಯಲ್ಲಿ ಪೌಲನೂ ಸೀಲನೂ ಪ್ರಾರ್ಥನೆ ಮಾಡಿದವರಾಗಿ ದೇವರಿಗೆ ಸ್ತುತಿಪದಗಳನ್ನು ಹಾಡುತ್ತಿದ್ದರು. ಸೆರೆಯಲ್ಲಿದ್ದವರು ಅವುಗಳನ್ನು ಕೇಳುತ್ತಿದ್ದರು.
ಅಪೊಸ್ತಲರ ಕೃತ್ಯಗ 16 : 26 (KNV)
ಆಗ ಆಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿ ವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು.
ಅಪೊಸ್ತಲರ ಕೃತ್ಯಗ 16 : 27 (KNV)
ಸೆರೆಯ ಅಧಿಕಾರಿಯು ನಿದ್ದೆಯಿಂದ ಎಚ್ಚತ್ತು ಸೆರೆಮನೆಯ ಕದಗಳು ತೆರೆದಿರುವದನ್ನು ಕಂಡು ಸೆರೆಯಲ್ಲಿದ್ದವರು ಓಡಿಹೋದರೆಂದು ಭಾವಿಸಿ ಕತ್ತಿಯನ್ನು ಹಿರಿದು ತನ್ನನ್ನು ತಾನು ಕೊಂದುಕೊಳ್ಳಬೇಕೆಂದಿದ್ದನು.
ಅಪೊಸ್ತಲರ ಕೃತ್ಯಗ 16 : 28 (KNV)
ಆದರೆ ಪೌಲನು ಮಹಾಧ್ವನಿಯಿಂದ ಕೂಗಿ ಅವನಿಗೆ--ನೀನೇನೂ ಕೇಡು ಮಾಡಿಕೊಳ್ಳಬೇಡ; ನಾವೆಲ್ಲರೂ ಇಲ್ಲೇ ಇದ್ದೇವೆ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 16 : 29 (KNV)
ಆಗ ಅವನು ದೀಪ ತರಬೇಕೆಂದು ಹೇಳಿ ಒಳಕ್ಕೆ ಹಾರಿ ನಡುಗುತ್ತಾ ಪೌಲ ಸೀಲರ ಮುಂದೆ ಬಿದ್ದನು.
ಅಪೊಸ್ತಲರ ಕೃತ್ಯಗ 16 : 30 (KNV)
ಅವರನ್ನು ಹೊರಗೆ ಕರಕೊಂಡು ಬಂದು--ಅಯ್ಯಗಳಿರಾ, ನಾನು ರಕ್ಷಣೆ ಹೊಂದುವದಕ್ಕೆ ಏನು ಮಾಡಬೇಕು ಎಂದು ಕೇಳಲು
ಅಪೊಸ್ತಲರ ಕೃತ್ಯಗ 16 : 31 (KNV)
ಅವರು--ಕರ್ತನಾದ ಯೇಸು ಕ್ರಿಸ್ತನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆ ಹೊಂದು ವರು ಎಂದು ಹೇಳಿದರು.
ಅಪೊಸ್ತಲರ ಕೃತ್ಯಗ 16 : 32 (KNV)
ಅವನಿಗೂ ಅವನ ಮನೆಯಲ್ಲಿದ್ದವರೆಲ್ಲರಿಗೂ ಅವರು ಕರ್ತನ ವಾಕ್ಯವನ್ನು ತಿಳಿಸಿದರು.
ಅಪೊಸ್ತಲರ ಕೃತ್ಯಗ 16 : 33 (KNV)
ಆಮೇಲೆ ಅವನು ರಾತ್ರಿಯ ಅದೇ ಗಳಿಗೆಯಲ್ಲಿ ಅವರನ್ನು ಕರಕೊಂಡು ಹೋಗಿ ಅವರ ಗಾಯಗಳನ್ನು ತೊಳೆದನು; ಕೂಡಲೆ ತಾನು ತನ್ನವ ರೆಲ್ಲರ ಸಹಿತವಾಗಿ ಬಾಪ್ತಿಸ್ಮ ಮಾಡಿಸಿಕೊಂಡನು.
ಅಪೊಸ್ತಲರ ಕೃತ್ಯಗ 16 : 34 (KNV)
ತರುವಾಯ ಅವರನ್ನು ತನ್ನ ಮನೆಗೆ ಕರಕೊಂಡು ಹೋಗಿ ಊಟಮಾಡಿಸಿ ತನ್ನ ಮನೆಯವರೆಲ್ಲರ ಸಂಗಡ ದೇವರಲ್ಲಿ ನಂಬಿಕೆಯಿಟ್ಟು ಉಲ್ಲಾಸಗೊಂಡನು.
ಅಪೊಸ್ತಲರ ಕೃತ್ಯಗ 16 : 35 (KNV)
ಬೆಳಗಾದ ಮೇಲೆ ನ್ಯಾಯಾಧಿಪತಿಗಳು--ಆ ಮನುಷ್ಯರನ್ನು ಬಿಟ್ಟುಬಿಡು ಎಂದು ಸಿಪಾಯಿಗಳ ಮೂಲಕ ಹೇಳಿಕಳುಹಿಸಿದರು.
ಅಪೊಸ್ತಲರ ಕೃತ್ಯಗ 16 : 36 (KNV)
ಸೆರೆಯ ಅಧಿ ಕಾರಿಯು ಈ ಮಾತನ್ನು ಪೌಲನಿಗೆ ತಿಳಿಸಿ--ನ್ಯಾಯಾ ಧಿಪತಿಗಳು ನಿಮ್ಮನ್ನು ಬಿಟ್ಟುಬಿಡಬೇಕೆಂದು ಕಳುಹಿಸಿ ದ್ದಾರೆ, ಆದದರಿಂದ ಈಗ ನೀವು ಸಮಾಧಾನದಿಂದ ಹೊರಟುಹೋಗಿರಿ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 16 : 37 (KNV)
ಅದಕ್ಕೆ ಪೌಲನು--ಅವರು ವಿಚಾರಣೆ ಮಾಡದೆ ರೋಮ ನ್ನರಾದ ನಮ್ಮನ್ನು ಎಲ್ಲರ ಮುಂದೆ ಹೊಡಿಸಿ ಸೆರೆಮನೆ ಯೊಳಗೆ ಹಾಕಿಸಿದರು; ಈಗ ನಮ್ಮನ್ನು ಗುಪ್ತವಾಗಿ ಹೊರಗೆ ಕಳುಹಿಸುತ್ತಾರೋ? ಹಾಗೆ ಎಂದಿಗೂ ಆಗಕೂಡದು; ಅವರೇ ಬಂದು ನಮ್ಮನ್ನು ಹೊರಗೆ ಕರಕೊಂಡು ಹೋಗಲಿ ಎಂದು ಹೇಳಿ
ಅಪೊಸ್ತಲರ ಕೃತ್ಯಗ 16 : 38 (KNV)
ಸಿಪಾಯಿಗಳು ಈ ಮಾತುಗಳನ್ನು ನ್ಯಾಯಾಧಿಪತಿ ಗಳಿಗೆ ತಿಳಿಸಿದಾಗ ಅವರು ರೋಮನ್ನರು ಎಂಬ ಮಾತನ್ನು ಕೇಳಿ ಭಯಪಟ್ಟರು.
ಅಪೊಸ್ತಲರ ಕೃತ್ಯಗ 16 : 39 (KNV)
ಅವರ ಬಳಿಗೆ ಬಂದು ಅವರು ವಿನಯವಾಗಿ ಮಾತನಾಡಿ ಹೊರಗೆ ಕರೆದುಕೊಂಡು ಹೋಗಿ ಊರನ್ನು ಬಿಟ್ಟು ಹೋಗ ಬೇಕೆಂದು ಅವರನ್ನು ಬೇಡಿಕೊಂಡರು.ಆಗ ಅವರು ಸೆರೆಮನೆಯೊಳಗಿಂದ ಹೊರಟು ಲುದ್ಯಳ ಮನೆಗೆ ಬಂದು ಸಹೋದರರನ್ನು ನೋಡಿ ಅವರನ್ನು ಧೈರ್ಯಗೊಳಿಸಿ ಹೊರಟು ಹೋದರು.
ಅಪೊಸ್ತಲರ ಕೃತ್ಯಗ 16 : 40 (KNV)
ಆಗ ಅವರು ಸೆರೆಮನೆಯೊಳಗಿಂದ ಹೊರಟು ಲುದ್ಯಳ ಮನೆಗೆ ಬಂದು ಸಹೋದರರನ್ನು ನೋಡಿ ಅವರನ್ನು ಧೈರ್ಯಗೊಳಿಸಿ ಹೊರಟು ಹೋದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40

BG:

Opacity:

Color:


Size:


Font: