ಅಪೊಸ್ತಲರ ಕೃತ್ಯಗ 15 : 1 (KNV)
ಬಳಿಕ ಕೆಲವರು ಯೂದಾಯದಿಂದ ಬಂದು--ಮೋಶೆಯ ನೇಮದ ಪ್ರಕಾರ ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗಲಾರದು ಎಂಬದಾಗಿ ಸಹೋದರರಿಗೆ ಉಪದೇಶ ಮಾಡುತ್ತಿದ್ದರು.
ಅಪೊಸ್ತಲರ ಕೃತ್ಯಗ 15 : 2 (KNV)
ಆದದರಿಂದ ಅವರ ಮತ್ತು ಪೌಲ ಬಾರ್ನಬರ ಮಧ್ಯೆ ದೊಡ್ಡ ಭಿನ್ನಾಭಿ ಪ್ರಾಯವೂ ವಾಗ್ವಾದವೂ ಉಂಟಾದಾಗ ಪೌಲ ಬಾರ್ನಬರೂ ಅವರಲ್ಲಿ ಬೇರೆ ಕೆಲವರೂ ಈ ಪ್ರಶ್ನೆಗಾಗಿ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ ಬಳಿಗೆ ಹೋಗಬೇಕೆಂದು ಅವರು ನಿರ್ಧರಿಸಿದರು.
ಅಪೊಸ್ತಲರ ಕೃತ್ಯಗ 15 : 3 (KNV)
ಸಭೆಯವರು ಅವರನ್ನು ಸಾಗಕಳು ಹಿಸಿದ ಮೇಲೆ ಅವರು ಫೊಯಿನಿಕೆ ಸಮಾರ್ಯಗಳ ಮಾರ್ಗವಾಗಿ ಹಾದು ಹೋಗುತ್ತಿರುವಾಗ ಅನ್ಯಜನರು (ಕರ್ತನ ಕಡೆಗೆ) ತಿರುಗಿಕೊಂಡ ವಿಷಯವನ್ನು ವಿವರ ವಾಗಿ ಹೇಳಿದ್ದರಿಂದ ಸಹೋದರರೆಲ್ಲರೂ ಬಹಳವಾಗಿ ಸಂತೋಷಪಡುವದಕ್ಕೆ ಕಾರಣವಾಯಿತು.
ಅಪೊಸ್ತಲರ ಕೃತ್ಯಗ 15 : 4 (KNV)
ಅವರು ಯೆರೂಸಲೇಮಿಗೆ ಬಂದಮೇಲೆ ಸಭೆಯವರೂ ಅಪೊಸ್ತ ಲರೂ ಹಿರಿಯರೂ ಅವರನ್ನು ಸೇರಿಸಿಕೊಂಡಾಗ ದೇವರು ತಮ್ಮೊಂದಿಗಿದ್ದು ಮಾಡಿದ ಕಾರ್ಯಗಳನ್ನೆಲ್ಲಾ ಅವರಿಗೆ ವಿವರಿಸಿದರು.
ಅಪೊಸ್ತಲರ ಕೃತ್ಯಗ 15 : 5 (KNV)
ಆದರೆ ಫರಿಸಾಯರ ಪಂಗಡದವರಲ್ಲಿ ನಂಬಿದ್ದ ಕೆಲವರು ಎದ್ದು--ಅವರಿಗೆ ಸುನ್ನತಿ ಮಾಡಿಸುವದು ಅವಶ್ಯವೆಂತಲೂ ಮೋಶೆಯ ನ್ಯಾಯಪ್ರಮಾಣವನ್ನು ಕೈಕೊಂಡು ನಡೆಯಬೇಕೆಂತಲೂ ಅವರಿಗೆ ಅಪ್ಪಣೆಕೊಡಬೇಕು ಎಂದು ಹೇಳಿ ದರು.
ಅಪೊಸ್ತಲರ ಕೃತ್ಯಗ 15 : 6 (KNV)
ಅಪೊಸ್ತಲರೂ ಹಿರಿಯರೂ ಈ ವಿಷಯವಾಗಿ ಆಲೋಚಿಸುವದಕ್ಕೆ ಕೂಡಿ ಬಂದಿರುವಾಗ
ಅಪೊಸ್ತಲರ ಕೃತ್ಯಗ 15 : 7 (KNV)
ಬಹು ವಿವಾದವು ನಡೆದ ಮೇಲೆ ಪೇತ್ರನು ಎದ್ದು ಅವ ರಿಗೆ--ಜನರೇ, ಸಹೋದರರೇ, ಅನ್ಯಜನರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬ ಬೇಕೆಂದು ದೇವರು ಬಹಳ ದಿವಸಗಳ ಕೆಳಗೆ ನಮ್ಮೊಳ ಗಿಂದ ಆರಿಸಿಕೊಂಡದ್ದು ನಿಮಗೇ ತಿಳಿದದೆ.
ಅಪೊಸ್ತಲರ ಕೃತ್ಯಗ 15 : 8 (KNV)
ಹೃದಯ ಗಳನ್ನು ಬಲ್ಲವನಾಗಿರುವ ದೇವರು ಹೇಗೆ ಪವಿತ್ರಾತ್ಮ ನನ್ನು ನಮಗೆ ದಯಪಾಲಿಸಿದನೋ ಹಾಗೆಯೇ ಅವರಿಗೂ ದಯಪಾಲಿಸಿ ಅವರ ವಿಷಯದಲ್ಲಿ ಸಾಕ್ಷಿಕೊಟ್ಟನು.
ಅಪೊಸ್ತಲರ ಕೃತ್ಯಗ 15 : 9 (KNV)
ಇದಲ್ಲದೆ ಆತನು ನಮಗೂ ಅವರಿಗೂ ಏನೂ ಭೇದ ಮಾಡದೆ ಅವರ ಹೃದಯ ಗಳನ್ನೂ ನಂಬಿಕೆಯ ಮೂಲಕವಾಗಿ ಶುದ್ಧೀಕರಿಸಿದನು.
ಅಪೊಸ್ತಲರ ಕೃತ್ಯಗ 15 : 10 (KNV)
ಹೀಗಿರುವದರಿಂದ ನಮ್ಮ ಪಿತೃಗಳಾಗಲಿ ನಾವಾಗಲಿ ಹೋರಲಾರದ ನೊಗವನ್ನು ನೀವು ಶಿಷ್ಯರ ಕುತ್ತಿಗೆಯ ಮೇಲೆ ಹಾಕಿ ದೇವರನ್ನು ಪರೀಕ್ಷಿಸುವದು ಯಾಕೆ?
ಅಪೊಸ್ತಲರ ಕೃತ್ಯಗ 15 : 11 (KNV)
ಕರ್ತನಾದ ಯೇಸು ಕ್ರಿಸ್ತನ ಕೃಪೆಯಿಂದಲೇ ನಾವು ರಕ್ಷಣೆ ಹೊಂದುವೆವೆಂಬದಾಗಿ ನಂಬುತ್ತೇವಲ್ಲಾ; ಹಾಗೆಯೇ ಅವರೂ ಹೊಂದುವರು ಎಂದು ಹೇಳಿ ದನು.
ಅಪೊಸ್ತಲರ ಕೃತ್ಯಗ 15 : 12 (KNV)
ಸಮೂಹದವರೆಲ್ಲರೂ ಮೌನವಾಗಿದ್ದು ಬಾರ್ನ ಬನೂ ಪೌಲನೂ ತಮ್ಮ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ್ದ ಎಲ್ಲಾ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ವಿವರಿಸುವದನ್ನು ಕಿವಿಗೊಟ್ಟು ಕೇಳಿದರು.
ಅಪೊಸ್ತಲರ ಕೃತ್ಯಗ 15 : 13 (KNV)
ಅವರು ಮೌನವಾಗಿದ್ದಾಗ ಯಾಕೋ ಬನು ಹೇಳಿದ್ದೇನಂದರೆ--ಜನರೇ, ಸಹೋದರರೇ, ನಾನು ಹೇಳುವದನ್ನು ಕೇಳಿರಿ;
ಅಪೊಸ್ತಲರ ಕೃತ್ಯಗ 15 : 14 (KNV)
ದೇವರು ಮೊದಲೇ ಅನ್ಯಜನರನ್ನು ದರ್ಶಿಸಿ ತನ್ನ ಹೆಸರಿಗಾಗಿ ಅವರೊ ಳಗಿಂದ ಒಂದು ಪ್ರಜೆಯನ್ನು ಆರಿಸಿಕೊಂಡ ವಿಧವನ್ನು ಸಿಮೆಯೋನನು ವಿವರಿಸಿದನಷ್ಟೆ.
ಅಪೊಸ್ತಲರ ಕೃತ್ಯಗ 15 : 15 (KNV)
ಇದಕ್ಕೆ ಪ್ರವಾದಿ ಗಳ ಮಾತುಗಳು ಒಪ್ಪುತ್ತವೆ, ಹೇಗಂದರೆ--
ಅಪೊಸ್ತಲರ ಕೃತ್ಯಗ 15 : 16 (KNV)
ಇದಾದ ಮೇಲೆ ನಾನು ಹಿಂತಿರುಗಿ ಬಂದು ಬಿದ್ದು ಹೋಗಿರುವ ದಾವೀದನ ಗುಡಾರವನ್ನು ತಿರಿಗಿ ಕಟ್ಟುವೆನು. ಅದರಲ್ಲಿ ಹಾಳಾದದ್ದನ್ನು ನಾನು ತಿರಿಗಿ ಸರಿಮಾಡಿಸಿ ಅದನ್ನು ನೆಟ್ಟಗೆ ನಿಲ್ಲಿಸುವೆನು.
ಅಪೊಸ್ತಲರ ಕೃತ್ಯಗ 15 : 17 (KNV)
ಅವೆಲ್ಲವುಗಳನ್ನು ಮಾಡುವ ಕರ್ತನು--ನನ್ನ ಹೆಸರಿನಿಂದ ಕರೆಯಲ್ಪಟ್ಟ ಮನುಷ್ಯರಲ್ಲಿ ಉಳಿದವರೆಲ್ಲರೂ ಅನ್ಯಜನರೆಲ್ಲರೂ ಕರ್ತನನ್ನು ಹುಡುಕುವವರಾಗಿರಬೇಕು ಎಂದು ಹೇಳುತ್ತಾನೆ.
ಅಪೊಸ್ತಲರ ಕೃತ್ಯಗ 15 : 18 (KNV)
ದೇವರು ತನ್ನ ಕಾರ್ಯಗಳನ್ನೆಲ್ಲಾ ಲೋಕಾದಿಯಿಂದ ತಿಳಿದಿದ್ದಾನೆ.
ಅಪೊಸ್ತಲರ ಕೃತ್ಯಗ 15 : 19 (KNV)
ಹೀಗಿರಲಾಗಿ ಅನ್ಯಜನರಿಂದ ದೇವರ ಕಡೆಗೆ ತಿರುಗಿಕೊಂಡವರನ್ನು ನಾವು ತೊಂದರೆಪಡಿ ಸಬಾರದೆಂಬದು ನನ್ನ ಅಭಿಪ್ರಾಯವಾಗಿದೆ.
ಅಪೊಸ್ತಲರ ಕೃತ್ಯಗ 15 : 20 (KNV)
ಆದರೆ ಅವರು ವಿಗ್ರಹಗಳ ಮಲಿನತೆಯನ್ನೂ ಜಾರತ್ವವನ್ನೂ ಕುತ್ತಿಗೆ ಹಿಸುಕಿ ಕೊಂದವುಗಳನ್ನೂ ರಕ್ತವನ್ನೂ ವಿಸ ರ್ಜಿಸಬೇಕೆಂದು ನಾವು ಅವರಿಗೆ ಬರೆಯುವೆವು.
ಅಪೊಸ್ತಲರ ಕೃತ್ಯಗ 15 : 21 (KNV)
ಯಾಕಂದರೆ ಪುರಾತನ ಕಾಲದಿಂದ ಎಲ್ಲಾ ಪಟ್ಟಣಗಳಲ್ಲಿ ಮೋಶೆಯ ಗ್ರಂಥವನ್ನು ಬೋಧಿಸುವ ವರು ಇದ್ದಾರೆ; ಅದು ಪ್ರತಿ ಸಬ್ಬತ್ ದಿನವೂ ಸಭಾಮಂದಿರಗಳಲ್ಲಿ ಪಾರಾಯಣವಾಗುತ್ತದಲ್ಲಾ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 15 : 22 (KNV)
ಆಗ ಅಪೋಸ್ತಲರೂ ಹಿರಿಯರೂ ಸರ್ವಸಭೆಯ ಸಮ್ಮತಿಯಿಂದ ತಮ್ಮಲ್ಲಿ ಕೆಲವರನ್ನು ಆರಿಸಿಕೊಂಡು ಪೌಲ ಬಾರ್ನಬರ ಜೊತೆಯಲ್ಲಿ ಅಂತಿಯೋಕ್ಯಕ್ಕೆ ಕಳುಹಿಸುವದು ಯುಕ್ತವೆಂದು ತೀರ್ಮಾನಿಸಿದರು. ಆದಕಾರಣ ಸಹೋದರರಲ್ಲಿ ಮುಖ್ಯಸ್ಥರಾಗಿದ್ದ ಬಾರ್ಸ ಬ್ಬನೆನಿಸಿಕೊಳ್ಳುವ ಯೂದನನ್ನೂ ಸೀಲನನ್ನೂ ಆರಿಸಿ ಕೊಂ
ಅಪೊಸ್ತಲರ ಕೃತ್ಯಗ 15 : 23 (KNV)
ಅವರು ಬರೆದುಕೊಟ್ಟದ್ದು ಈ ರೀತಿ ಯಲ್ಲಿತ್ತು; ಅಪೊಸ್ತಲರೂ ಹಿರಿಯರೂ ಸಹೋದರರೂ ಅಂತಿಯೋಕ್ಯ ಸಿರಿಯ ಕಿಲಿಕ್ಯ ಸೀಮೆಗಳಲ್ಲಿ ವಾಸಿಸುವ ಅನ್ಯಜನರೊಳಗಿಂದ ಸಹೋದರರಾದವರಿಗೆ ಮಾಡುವ ವಂದನೆ;
ಅಪೊಸ್ತಲರ ಕೃತ್ಯಗ 15 : 24 (KNV)
ನಮ್ಮಿಂದ ಅಪ್ಪಣೆಹೊಂದದೆ ನಮ್ಮೊಳಗಿಂದ ಹೊರಟುಹೋದ ಕೆಲವರು--ನೀವು ಸುನ್ನತಿ ಮಾಡಿಸಿಕೊಂಡು ನ್ಯಾಯಪ್ರಮಾಣವನ್ನು ಅನುಸರಿಸಬೇಕೆಂದು ತಮ್ಮ ಮಾತುಗಳಿಂದ ನಿಮ್ಮನ್ನು ತೊಂದರೆಪಡಿಸಿ ನಿಮ್ಮ ಮನಸ್ಸುಗಳನ್ನು ಕಳವಳ ಗೊಳಿಸಿದ್ದಾರೆಂದು ಕೇಳಿದ್ದರಿಂದ
ಅಪೊಸ್ತಲರ ಕೃತ್ಯಗ 15 : 25 (KNV)
ನಾವು ಒಮ್ಮನ ಸ್ಸಾಗಿ ಸೇರಿಬಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತ ಜೀವದ ಹಂಗನ್ನು ತೊರೆದವರಾಗಿರುವ
ಅಪೊಸ್ತಲರ ಕೃತ್ಯಗ 15 : 26 (KNV)
ನಮ್ಮ ಪ್ರಿಯ ಬಾರ್ನಬ ಸೌಲರ ಜೊತೆಯಲ್ಲಿ ನಾವು ಆರಿಸಿಕೊಂಡವರನ್ನು ನಿಮ್ಮ ಬಳಿಗೆ ಕಳುಹಿ ಸುವದು ಯುಕ್ತವೆಂದು ನಮಗೆ ತೋಚಿತು.
ಅಪೊಸ್ತಲರ ಕೃತ್ಯಗ 15 : 27 (KNV)
ಆದಕಾರಣ ಈ ಮಾತುಗಳನ್ನು ಬಾಯಿಂದ ಸಹ ತಿಳಿಸುವಂತೆ ನಾವು ಯೂದನನ್ನೂ ಸೀಲನನ್ನೂ ಕಳುಹಿಸಿಕೊಟ್ಟಿದ್ದೇವೆ.
ಅಪೊಸ್ತಲರ ಕೃತ್ಯಗ 15 : 28 (KNV)
ಯಾಕಂದರೆ ಅವಶ್ಯವಾದ ಈ ವಿಷಯಗಳಿಗಿಂತ ಹೆಚ್ಚಿನ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಪವಿತ್ರಾತ್ಮನಿಗೂ ನಮಗೂ ಯುಕ್ತ ವೆಂದು ತೋಚಿತು.
ಅಪೊಸ್ತಲರ ಕೃತ್ಯಗ 15 : 29 (KNV)
ಏನಂದರೆ ವಿಗ್ರಹಗಳಿಗೆ ಅರ್ಪಿಸಿದ ಭೋಜನ ಪದಾರ್ಥಗಳನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದವುಗಳನ್ನೂ ಜಾರತ್ವವನ್ನೂ ನೀವು ವಿಸರ್ಜಿಸಬೇಕೆಂಬದೇ. ಇವುಗಳಿಂದ ನಿಮ್ಮನ್ನು ನೀವು ಕಾಪಾಡಿಕೊಂಡರೆ ನಿಮಗೆ ಒಳ್ಳೇದಾಗುವದು. ನಿಮಗೆ ಶುಭವಾಗಲಿ.
ಅಪೊಸ್ತಲರ ಕೃತ್ಯಗ 15 : 30 (KNV)
ಹೀಗೆ ಅವರು ಕಳುಹಿಸಲ್ಪಟ್ಟು ಅಂತಿಯೋಕ್ಯಕ್ಕೆ ಬಂದರು; ಅವರು ಸಮೂಹವನ್ನು ಕೂಡಿಸಿ ಆ ಪತ್ರಿಕೆಯನ್ನು ಒಪ್ಪಿಸಿದರು.
ಅಪೊಸ್ತಲರ ಕೃತ್ಯಗ 15 : 31 (KNV)
ಅವರು ಅದನ್ನು ಓದಿ ಆದರಣೆ ಹೊಂದಿ ಸಂತೋಷಪಟ್ಟರು.
ಅಪೊಸ್ತಲರ ಕೃತ್ಯಗ 15 : 32 (KNV)
ಯೂದನೂ ಸೀಲನೂ ತಾವೇ ಪ್ರವಾದಿಗಳಾಗಿದ್ದದರಿಂದ ಸಹೋ ದರರನ್ನು ಅನೇಕ ಮಾತುಗಳಿಂದ ಪ್ರಭೋದಿಸಿ ದೃಢ ಪಡಿಸಿದರು.
ಅಪೊಸ್ತಲರ ಕೃತ್ಯಗ 15 : 33 (KNV)
ಅಲ್ಲಿ ಕೆಲವು ಕಾಲ ಕಳೆದ ನಂತರ ಸಮಾಧಾನದಿಂದ ಅಪೊಸ್ತಲರ ಬಳಿಗೆ ತಿರಿಗಿ ಹೋಗುವದಕ್ಕೆ ಸಹೋದರರಿಂದ ಅಪ್ಪಣೆ ತೆಗೆದು ಕೊಂಡರು.
ಅಪೊಸ್ತಲರ ಕೃತ್ಯಗ 15 : 34 (KNV)
ಹೀಗಿದ್ದರೂ ಸೀಲನಿಗೆ ಅಲ್ಲಿಯೇ ಇನ್ನೂ ಇರುವದು ಉಚಿತವೆಂದು ತೋಚಿತು.
ಅಪೊಸ್ತಲರ ಕೃತ್ಯಗ 15 : 35 (KNV)
ಆದರೆ ಪೌಲನೂ ಬಾರ್ನಬನೂ ಅಂತಿಯೋಕ್ಯ ದಲ್ಲಿಯೇ ನಿಂತು ಬೇರೆ ಅನೇಕರೊಂದಿಗೆ ಕರ್ತನ ವಾಕ್ಯವನ್ನು ಉಪದೇಶ ಮಾಡುತ್ತಾ ಸಾರುತ್ತಾ ಇದ್ದರು.
ಅಪೊಸ್ತಲರ ಕೃತ್ಯಗ 15 : 36 (KNV)
ಕೆಲವು ದಿವಸಗಳಾದ ಮೇಲೆ ಪೌಲನು ಬಾರ್ನಬನಿಗೆ--ನಾವು ಕರ್ತನ ವಾಕ್ಯವನ್ನು ಸಾರಿದ ಎಲ್ಲಾ ಪಟ್ಟಣಗಳಿಗೆ ತಿರಿಗಿ ಹೋಗಿ ಅಲ್ಲಿರುವ ಸಹೋದರರು ಹೇಗಿದ್ದಾರೆಂದು ನೋಡೋಣ ಬಾ ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 15 : 37 (KNV)
ಬಾರ್ನಬನು ಮಾರ್ಕನೆನಿಸಿ ಕೊಳ್ಳುವ ಯೋಹಾನನನ್ನು ತಮ್ಮ ಸಂಗಡ ಕರೆದು ಕೊಂಡು ಹೋಗಬೇಕೆಂದು ನಿರ್ಧರಿಸಿದನು.
ಅಪೊಸ್ತಲರ ಕೃತ್ಯಗ 15 : 38 (KNV)
ಆದರೆ ಪೌಲನು ತಮ್ಮೊಂದಿಗೆ ಕೆಲಸಕ್ಕೆ ಬಾರದೆ ಪಂಫುಲ್ಯದಿಂದ ತಮ್ಮನ್ನು ಬಿಟ್ಟು ಹೋದವನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವದು ತಕ್ಕದ್ದಲ್ಲ ವೆಂದು ನೆನಸಿದನು.
ಅಪೊಸ್ತಲರ ಕೃತ್ಯಗ 15 : 39 (KNV)
ಈ ವಿಷಯದಲ್ಲಿ ತೀಕ್ಷ್ಣ ವಾಗ್ವಾದವುಂಟಾಗಿ ಅವರು ಒಬ್ಬರನ್ನೊಬ್ಬರು ಅಗಲಿ ದರು. ಹೀಗೆ ಬಾರ್ನಬನು ಮಾರ್ಕನನ್ನು ಕರಕೊಂಡು ಸಮುದ್ರ ಮಾರ್ಗವಾಗಿ ಕುಪ್ರಕ್ಕೆ ಹೋದನು.
ಅಪೊಸ್ತಲರ ಕೃತ್ಯಗ 15 : 40 (KNV)
ಆದರೆ ಪೌಲನು ಸಹೋದರರಿಂದ ದೇವರ ಕೃಪೆಗೆ ಒಪ್ಪಿಸಲ್ಪಟ್ಟು ಸೀಲನನ್ನು ಆರಿಸಿಕೊಂಡು ಹೊರಟನು.
ಅಪೊಸ್ತಲರ ಕೃತ್ಯಗ 15 : 41 (KNV)
ಅವನು ಸಭೆಗಳನ್ನು ದೃಢಪಡಿಸುತ್ತಾ ಸಿರಿಯ ಮತ್ತು ಕಿಲಿಕ್ಯಗಳ ಮಾರ್ಗವಾಗಿ ಹೋದನು.
❮
❯