ಅಪೊಸ್ತಲರ ಕೃತ್ಯಗ 14 : 1 (KNV)
ಇದಾದ ಮೇಲೆ ಇಕೋನ್ಯದಲ್ಲಿ ಅವರಿ ಬ್ಬರೂ ಯೆಹೂದ್ಯರ ಸಭಾಮಂದಿರ ದೊಳಕ್ಕೆ ಹೋಗಿ ಯೆಹೂದ್ಯರಲ್ಲಿಯೂ ಗ್ರೀಕರಲ್ಲಿಯೂ ದೊಡ್ಡ ಜನಸಮೂಹವು ನಂಬುವಂತೆ ಮಾತನಾಡಿ ದರು.
ಅಪೊಸ್ತಲರ ಕೃತ್ಯಗ 14 : 2 (KNV)
ಆದರೆ ನಂಬದೆಹೋದ ಯೆಹೂದ್ಯರು ಅನ್ಯಜನರ ಮನಸ್ಸನ್ನು ಸಹೋದರರಿಗೆ ವಿರುದ್ಧವಾಗಿ ರೇಗಿಸಿ ಕೆಡಿಸಿದರು.
ಅಪೊಸ್ತಲರ ಕೃತ್ಯಗ 14 : 3 (KNV)
ಹೀಗಿರಲಾಗಿ ಕರ್ತನು ಅವರ ಕೈಯಿಂದ ಸೂಚಕಕಾರ್ಯಗಳೂ ಅದ್ಭುತಕಾರ್ಯ ಗಳೂ ಆಗುವಂತೆ ದಯಪಾಲಿಸಿ ತನ್ನ ಕೃಪಾವಾಕ್ಯಕ್ಕೆ ಸಾಕ್ಷಿಕೊಟ್ಟದ್ದರಿಂದ ಅವರು ಬಹುಕಾಲ ಅಲ್ಲಿದ್ದು ಆತನಲ್ಲಿ ಧೈರ್ಯದಿಂದ ಮಾತನಾಡುತ್ತಿದ್ದರು.
ಅಪೊಸ್ತಲರ ಕೃತ್ಯಗ 14 : 4 (KNV)
ಆದರೆ ಆ ಪಟ್ಟಣದ ಜನಸಮೂಹದವರಲ್ಲಿ ಭೇದವುಂಟಾಗಿ ಕೆಲವರು ಯೆಹೂದ್ಯರ ಪಕ್ಷದವರಾದರು. ಕೆಲವರು ಅಪೊಸ್ತಲರ ಪಕ್ಷದವರಾದರು.
ಅಪೊಸ್ತಲರ ಕೃತ್ಯಗ 14 : 5 (KNV)
ಅನ್ಯಜನರೂ ಯೆಹೂದ್ಯರೂ ಕೂಡಿ ತಮ್ಮ ಅಧಿಪತಿಗಳೊಂದಿಗೆ ಅಪೊಸ್ತಲರನ್ನು ಅವಮಾನಪಡಿಸುವದಕ್ಕೂ ಕಲ್ಲೆಸೆದು ಕೊಲ್ಲುವದಕ್ಕೂ ಪ್ರವರ್ತಿಸಿದಾಗ
ಅಪೊಸ್ತಲರ ಕೃತ್ಯಗ 14 : 6 (KNV)
ಅಪೊಸ್ತಲರು ಅದನ್ನು ತಿಳಿದು ಲುಕವೋನ್ಯದಲ್ಲಿದ್ದ ಲುಸ್ತ್ರ ದೆರ್ಬೆ ಎಂಬ ಊರುಗಳಿಗೂ ಅವುಗಳ ಸುತ್ತಲಿರುವ ಸೀಮೆಗೂ ಓಡಿಹೋಗಿ
ಅಪೊಸ್ತಲರ ಕೃತ್ಯಗ 14 : 7 (KNV)
ಅಲ್ಲಿ ಸುವಾರ್ತೆಯನ್ನು ಸಾರಿದರು.
ಅಪೊಸ್ತಲರ ಕೃತ್ಯಗ 14 : 8 (KNV)
ಕಾಲುಗಳಲ್ಲಿ ಬಲವಿಲ್ಲದ ಒಬ್ಬ ಮನುಷ್ಯನು ಲುಸ್ತ್ರದಲ್ಲಿ ಕೂತಿದ್ದನು; ಅವನು ಹುಟ್ಟು ಕುಂಟನಾಗಿದ್ದು ಎಂದಿಗೂ ನಡೆಯದೆ ಇದ್ದವನು.
ಅಪೊಸ್ತಲರ ಕೃತ್ಯಗ 14 : 9 (KNV)
ಪೌಲನು ಆಡುವ ಮಾತುಗಳನ್ನು ಅವನು ಕಿವಿಗೊಟ್ಟು ಕೇಳುತ್ತಿದ್ದನು;ಪೌಲನು ಅವನನ್ನು ಸ್ಥಿರವಾಗಿ ನೋಡಿ ವಾಸಿಯಾಗು ವದಕ್ಕೆ ಬೇಕಾದ ನಂಬಿಕೆಯು ಅವನಲ್ಲಿ ಉಂಟೆಂದು ತಿಳಿದು--
ಅಪೊಸ್ತಲರ ಕೃತ್ಯಗ 14 : 10 (KNV)
ನಿನ್ನ ಕಾಲೂರಿ ನೆಟ್ಟಗೆ ನಿಂತುಕೋ ಎಂದು ಮಹಾಧ್ವನಿಯಿಂದ ಹೇಳಿದನು. ಆ ಮನುಷ್ಯನು ಹಾರಿ ನಡೆದಾಡಿದನು.
ಅಪೊಸ್ತಲರ ಕೃತ್ಯಗ 14 : 11 (KNV)
ಪೌಲನು ಮಾಡಿದ್ದನ್ನು ಜನರು ನೋಡಿ--ದೇವತೆಗಳು ಮನುಷ್ಯರ ರೂಪದಿಂದ ನಮ್ಮ ಬಳಿಗೆ ಇಳಿದು ಬಂದರು ಎಂದು ಲುಕವೋನ್ಯ ಭಾಷೆಯಲ್ಲಿ ತಮ್ಮ ಸ್ವರವೆತ್ತಿ ಕೂಗಿದರು.
ಅಪೊಸ್ತಲರ ಕೃತ್ಯಗ 14 : 12 (KNV)
ಅವರು ಬಾರ್ನಬನನ್ನು ೃಹಸ್ಪತಿ ಎಂದೂ ಪೌಲನು ಮುಖ್ಯ ಪ್ರಸಂಗಿಯಾಗಿದ್ದರಿಂದ ಬುಧನೆಂದೂ ಕರೆದರು;
ಅಪೊಸ್ತಲರ ಕೃತ್ಯಗ 14 : 13 (KNV)
ಆಗ ಅವರ ಪಟ್ಟಣದ ಎದುರಿನಲ್ಲಿದ್ದ ೃಹಸ್ಪತಿಯ ಯಾಜಕನು ಎತ್ತುಗಳನ್ನೂ ಹೂವಿನಹಾರಗಳನ್ನೂ ದ್ವಾರಗಳ ಬಳಿಗೆ ತಂದು ಜನರೊಂದಿಗೆ ಬಲಿಯನ್ನು ಅರ್ಪಿಸಬೇಕೆಂದಿದ್ದನು.
ಅಪೊಸ್ತಲರ ಕೃತ್ಯಗ 14 : 14 (KNV)
ಇದನ್ನು ಕೇಳಿ ಅಪೊಸ್ತಲ ರಾದ ಬಾರ್ನಬ ಪೌಲರು ತಮ್ಮ ವಸ್ತ್ರಗಳನ್ನು ಹರ ಕೊಂಡು ಜನರ ಗುಂಪಿನೊಳಗೆ ಕೂಗುತ್ತಾ ನುಗ್ಗಿ--
ಅಪೊಸ್ತಲರ ಕೃತ್ಯಗ 14 : 15 (KNV)
ಅಯ್ಯಗಳಿರಾ, ನೀವು ಇವುಗಳನ್ನು ಯಾಕೆ ಮಾಡು ತ್ತೀರಿ? ನಾವೂ ಮನುಷ್ಯರು, ನಿಮ್ಮಂಥ ಸ್ವಭಾವ ವುಳ್ಳವರು. ನೀವು ಈ ವ್ಯರ್ಥವಾದವುಗಳನ್ನು ಬಿಟ್ಟು ಬಿಟ್ಟು ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳ ಲ್ಲಿರುವ ಸಮಸ್ತವನ್ನೂ ನಿರ್ಮಾಣ ಮಾಡಿದ ಜೀವ ಸ್ವರೂಪನಾದ ದೇವರ ಕಡೆಗೆ ತಿ
ಅಪೊಸ್ತಲರ ಕೃತ್ಯಗ 14 : 16 (KNV)
ಗತಿಸಿಹೋದ ಕಾಲಗಳಲ್ಲಿ ಆತನು ಎಲ್ಲಾ ಜನಾಂಗಗಳವರನ್ನು ತಮ್ಮ ಸ್ವಂತ ಮಾರ್ಗಗಳಲ್ಲಿ ನಡೆಯುವದಕ್ಕೆ ಬಿಟ್ಟುಬಿಟ್ಟನು;
ಅಪೊಸ್ತಲರ ಕೃತ್ಯಗ 14 : 17 (KNV)
ಆದರೂ ಆತನು ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲ ಗಳನ್ನೂ ದಯಪಾಲಿಸಿ ನಮಗೆ ಆಹಾರ ಕೊಟ್ಟು ನಮ್ಮ ಹೃದಯಗಳನ್ನು ಆನಂದದಿಂದ ತುಂಬಿಸಿ ಒಳ್ಳೇದನ್ನು ಮಾಡುತ್ತಾ ಬಂದನು ಎಂದು ಹೇಳಿದರು.
ಅಪೊಸ್ತಲರ ಕೃತ್ಯಗ 14 : 18 (KNV)
ಅವರು ಈ ಮಾತುಗಳನ್ನು ಹೇಳಿದರೂ ತಮಗೆ ಬಲಿಕೊಡದಂತೆ ಜನರನ್ನು ತಡೆಯವದು ಕಷ್ಟವಾಗಿತ್ತು.
ಅಪೊಸ್ತಲರ ಕೃತ್ಯಗ 14 : 19 (KNV)
ತರುವಾಯ ಅಂತಿಯೋಕ್ಯದಿಂದಲೂ ಇಕೋನ್ಯ ದಿಂದಲೂ ಕೆಲವು ಯೆಹೂದ್ಯರು ಅಲ್ಲಿಗೆ ಬಂದು ಜನರನ್ನು ಪ್ರೇರೇಪಿಸಿ ಪೌಲನ ಮೇಲೆ ಕಲ್ಲೆಸೆದು ಅವನು ಸತ್ತನೆಂದು ಭಾವಿಸಿ ಪಟ್ಟಣದ ಹೊರಕ್ಕೆ ಎಳೆದುಬಿಟ್ಟರು.
ಅಪೊಸ್ತಲರ ಕೃತ್ಯಗ 14 : 20 (KNV)
ಆದಾಗ್ಯೂ ಶಿಷ್ಯರು ಅವನ ಸುತ್ತಲು ನಿಂತುಕೊಂಡಿರುವಾಗ ಅವನು ಎದ್ದು ಪಟ್ಟಣ ದೊಳಕ್ಕೆ ಬಂದನು. ಮರುದಿನ ಬಾರ್ನಬನ ಜೊತೆ ಯಲ್ಲಿ ದೆರ್ಬೆಗೆ ಹೊರಟನು.
ಅಪೊಸ್ತಲರ ಕೃತ್ಯಗ 14 : 21 (KNV)
ಆ ಪಟ್ಟಣದವರಿಗೆ ಸುವಾರ್ತೆಯನ್ನು ಸಾರಿ ಅನೇಕರಿಗೆ ಬೋಧಿಸಿದ ಮೇಲೆ ಪುನಃ ಹಿಂತಿರುಗಿ ಲುಸ್ತ್ರಕ್ಕೂ ಇಕೋನ್ಯಕ್ಕೂ ಅಂತಿಯೋಕ್ಯಕ್ಕೂ ಬಂದು ಶಿಷ್ಯರ ಮನಸ್ಸುಗಳನ್ನು ದೃಢಪಡಿಸಿದರು.
ಅಪೊಸ್ತಲರ ಕೃತ್ಯಗ 14 : 22 (KNV)
ನಾವು ಬಹು ಸಂಕಟಗಳನ್ನು ಅನುಭವಿಸಿ ದೇವರ ರಾಜ್ಯದೊಳಗೆ ಸೇರಬೇಕೆಂಬ ದಾಗಿ ಹೇಳಿ ನಂಬಿಕೆಯಲ್ಲಿ ಸ್ಥಿರವಾಗಿರಬೇಕೆಂದು ಅವರನ್ನು ಎಚ್ಚರಿಸಿದರು.
ಅಪೊಸ್ತಲರ ಕೃತ್ಯಗ 14 : 23 (KNV)
ಇದಲ್ಲದೆ ಪ್ರತಿ ಸಭೆಯಲ್ಲಿ ಹಿರಿಯರನ್ನು ನೇಮಿಸಿ ಉಪವಾಸವಿದ್ದು ಪ್ರಾರ್ಥನೆ ಮಾಡಿ ತಾವು ನಂಬಿದ್ದ ಕರ್ತನ ಕೈಗೆ ಅವರನ್ನು ಒಪ್ಪಿಸಿದರು.
ಅಪೊಸ್ತಲರ ಕೃತ್ಯಗ 14 : 24 (KNV)
ತರುವಾಯ ಪಿಸಿದ್ಯವನ್ನು ಹಾದು ಪಂಫುಲ್ಯಕ್ಕೆ ಬಂದು
ಅಪೊಸ್ತಲರ ಕೃತ್ಯಗ 14 : 25 (KNV)
ಪೆರ್ಗೆಯಲ್ಲಿ ವಾಕ್ಯವನ್ನು ಸಾರಿದ ಮೇಲೆ ಅತಾಲ್ಯಕ್ಕೆ ಇಳಿದು
ಅಪೊಸ್ತಲರ ಕೃತ್ಯಗ 14 : 26 (KNV)
ಅಲ್ಲಿಂದ ಸಮುದ್ರದ ಪ್ರಯಾಣವಾಗಿ ಅಂತಿಯೋಕ್ಯಕ್ಕೆ ಮುಟ್ಟಿ ದರು. ಅವರು ನೆರವೇರಿಸಿ ಬಂದ ಕೆಲಸಕ್ಕೋಸ್ಕರ ದೇವರ ಕೃಪೆಗೆ ಒಪ್ಪಿಸಲ್ಪಟ್ಟವರಾಗಿ ಆ ಊರಿನಿಂದಲೇ ಹೊರಟಿದ್ದರು.
ಅಪೊಸ್ತಲರ ಕೃತ್ಯಗ 14 : 27 (KNV)
ಅವರು ಬಂದಾಗ ಸಭೆಯನ್ನು ಕೂಡಿಸಿ ದೇವರು ತಮ್ಮೊಂದಿಗಿದ್ದು ಮಾಡಿದ್ದೆಲ್ಲವನ್ನೂ ಆತನು ಅನ್ಯಜನರಿಗೆ ನಂಬಿಕೆಯ ಬಾಗಿಲನ್ನು ತೆರೆ ದದ್ದನ್ನೂ ವಿವರವಾಗಿ ಹೇಳಿದರು.
ಅಪೊಸ್ತಲರ ಕೃತ್ಯಗ 14 : 28 (KNV)
ತರುವಾಯ ಅವರು ಅಲ್ಲಿ ಶಿಷ್ಯರ ಸಂಗಡ ಬಹುಕಾಲ ಇದ್ದರು.
❮
❯