ಯೋಹಾನನು 11 : 1 (KNV)
ಮರಿಯಳ ಮತ್ತು ಆಕೆಯ ಸಹೋದರಿ ಯಾದ ಮಾರ್ಥಳ ಊರಾದ ಬೇಥಾನ್ಯ ದಲ್ಲಿ ಲಾಜರನೆಂಬವನೊಬ್ಬನು ಅಸ್ವಸ್ಥನಾಗಿದ್ದನು.
ಯೋಹಾನನು 11 : 2 (KNV)
(ಕರ್ತನಿಗೆ ತೈಲವನ್ನು ಹಚ್ಚಿ ತನ್ನ ತಲೇಕೂದಲಿನಿಂದ ಆತನ ಪಾದಗಳನ್ನು ಒರಸಿದ ಈ ಮರಿಯಳ ಸಹೋ ದರನಾದ ಲಾಜರನು ಅಸ್ವಸ್ಥನಾಗಿದ್ದನು).
ಯೋಹಾನನು 11 : 3 (KNV)
ಆದದ ರಿಂದ ಅವನ ಸಹೋದರಿಯರು--ಕರ್ತನೇ, ಇಗೋ, ನೀನು ಪ್ರೀತಿಮಾಡುತ್ತಿರುವವನು ಅಸ್ವಸ್ಥನಾಗಿದ್ದಾನೆ ಎಂದು ಆತನಿಗೆ ಹೇಳಿಕಳುಹಿಸಿದರು.
ಯೋಹಾನನು 11 : 4 (KNV)
ಯೇಸು ಅದನ್ನು ಕೇಳಿ--ಈ ರೋಗವು ಮರಣಕ್ಕಾಗಿಯಲ್ಲ, ಆದರೆ ದೇವಕುಮಾರನು ಅದರಿಂದ ಮಹಿಮೆ ಹೊಂದುವಂತೆ ದೇವರ ಮಹಿಮೆಗೋಸ್ಕರವೇ ಬಂದದ್ದು ಎಂದು ಹೇಳಿದನು.
ಯೋಹಾನನು 11 : 5 (KNV)
ಮಾರ್ಥಳನ್ನೂ ಅವಳ ಸಹೋದರಿಯನ್ನೂ ಲಾಜರನನ್ನೂ ಯೇಸು ಪ್ರೀತಿಸು ತ್ತಿದ್ದನು.
ಯೋಹಾನನು 11 : 6 (KNV)
ಅವನು ಅಸ್ವಸ್ಥನಾಗಿದ್ದಾನೆಂದು ಆತನು ಕೇಳಿ ದರೂ ಎರಡು ದಿವಸ ತಾನಿದ್ದ ಸ್ಥಳದಲ್ಲೇ ಉಳಿದನು.
ಯೋಹಾನನು 11 : 7 (KNV)
ತರುವಾಯ ಆತನು ತನ್ನ ಶಿಷ್ಯರಿಗೆ--ನಾವು ತಿರಿಗಿ ಯೂದಾಯಕ್ಕೆ ಹೋಗೋಣ ಅಂದನು.
ಯೋಹಾನನು 11 : 8 (KNV)
ಆತನ ಶಿಷ್ಯರು ಆತನಿಗೆ--ಬೋಧಕನೇ, ಆಗಲೇ ಯೆಹೂದ್ಯರು ನಿನ್ನ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿ ದ್ದರಲ್ಲಾ; ತಿರಿಗಿ ನೀನು ಅಲ್ಲಿಗೆ ಹೋಗುತ್ತೀಯೋ? ಅಂದರು.
ಯೋಹಾನನು 11 : 9 (KNV)
ಯೇಸು--ಹಗಲಿಗೆ ಹನ್ನೆರಡು ತಾಸುಗಳು ಇವೆಯಲ್ಲವೇ? ಯಾವ ಮನುಷ್ಯನಾದರೂ ಹಗಲಿ ನಲ್ಲಿ ತಿರುಗಾಡಿದರೆ ಈ ಲೋಕದ ಬೆಳಕನ್ನು ನೋಡು ವದರಿಂದ ಅವನು ಎಡವುವದಿಲ್ಲ.
ಯೋಹಾನನು 11 : 10 (KNV)
ಆದರೆ ಒಬ್ಬ ಮನುಷ್ಯನು ರಾತ್ರಿಯಲ್ಲಿ ತಿರುಗಾಡಿದರೆ ತನ್ನಲ್ಲಿ ಬೆಳಕು ಇಲ್ಲವಾದದರಿಂದ ಅವನು ಎಡವುತ್ತಾನೆ ಎಂದು ಉತ್ತರಕೊಟ್ಟನು.
ಯೋಹಾನನು 11 : 11 (KNV)
ಈ ಮಾತುಗಳನ್ನು ಹೇಳಿದ ತರುವಾಯ ಆತನು ಅವರಿಗೆ--ನಮ್ಮ ಸ್ನೇಹಿತನಾದ ಲಾಜರನು ನಿದ್ರಿಸುತ್ತಿದ್ದಾನೆ; ಆದರೆ ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಾಕ್ಕಾಗಿ ಹೋಗುತ್ತೇನೆ ಎಂದು ಹೇಳಿದನು.
ಯೋಹಾನನು 11 : 12 (KNV)
ಆಗ ಆತನ ಶಿಷ್ಯರು--ಕರ್ತನೇ, ಅವನು ನಿದ್ರೆಮಾಡುತ್ತಿದ್ದರೆ ಸ್ವಸ್ಥನಾಗುವನು ಅಂದರು.
ಯೋಹಾನನು 11 : 13 (KNV)
ಆದರೆ ಯೇಸು ಅವನ ಮರಣದ ವಿಷಯವಾಗಿ ಹೇಳಿದ್ದನು; ಆದರೆ ಅವರು ನಿದ್ರೆಯಲ್ಲಿಯ ವಿಶ್ರಾಂತಿ ಕುರಿತು ಆತನು ಹೇಳಿದ ನೆಂದು ಯೋಚಿಸಿದರು.
ಯೋಹಾನನು 11 : 14 (KNV)
ಆಗ ಯೇಸು ಸ್ಪಷ್ಟವಾಗಿ ಅವರಿಗೆ--ಲಾಜರನು ಸತ್ತಿದ್ದಾನೆ.
ಯೋಹಾನನು 11 : 15 (KNV)
ನೀವು ನಂಬು ವಂತೆ ನಿಮಗೋಸ್ಕರ ನಾನು ಅಲ್ಲಿ ಇಲ್ಲದಿರುವದಕ್ಕೆ ಸಂತೋಷಪಡುತ್ತೇನೆ; ಹೇಗೂ ನಾವು ಅವನ ಬಳಿಗೆ ಹೋಗೋಣ ಎಂದು ಅವರಿಗೆ ಹೇಳಿದನು.
ಯೋಹಾನನು 11 : 16 (KNV)
ತರು ವಾಯ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ--ನಾವು ಸಹ ಆತನೊಂದಿಗೆ ಸಾಯುವಂತೆ ಹೋಗೋಣ ಅಂದನು.
ಯೋಹಾನನು 11 : 17 (KNV)
ತರುವಾಯ ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ಆಗಲೇ ನಾಲ್ಕು ದಿವಸಗಳಾಗಿದ್ದ ವೆಂದು ಆತನು ತಿಳಿದುಕೊಂಡನು;
ಯೋಹಾನನು 11 : 18 (KNV)
ಬೇಥಾನ್ಯವು ಯೆರೂಸಲೇಮಿಗೆ ಹೆಚ್ಚುಕಡಿಮೆ ಒಂದು ಹರದಾರಿ ಯಷ್ಟು ಸವಿಾಪದಲ್ಲಿತ್ತು.
ಯೋಹಾನನು 11 : 19 (KNV)
ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋ ದರನ ವಿಷಯವಾಗಿ ಆದರಿಸುವದಕ್ಕೆ ಬಂದಿದ್ದರು.
ಯೋಹಾನನು 11 : 20 (KNV)
ಆಗ ಯೇಸು ಬರುತ್ತಿದ್ದಾನೆಂದು ಮಾರ್ಥಳು ಕೇಳು ತ್ತಲೇ ಹೋಗಿ ಆತನನ್ನು ಎದುರುಗೊಂಡಳು. ಮರಿಯಳಾದರೋ ಮನೆಯಲ್ಲಿಯೇ ಕೂತುಕೊಂಡಿ ದ್ದಳು.
ಯೋಹಾನನು 11 : 21 (KNV)
ಆಗ ಮಾರ್ಥಳು ಯೇಸುವಿಗೆ-- ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯು ತ್ತಿರಲಿಲ್ಲ.
ಯೋಹಾನನು 11 : 22 (KNV)
ಆದರೆ ಈಗಲೂ ಸಹ ನೀನು ದೇವರಿಂದ ಏನು ಕೇಳಿಕೊಳ್ಳುತ್ತೀಯೋ ದೇವರು ಅದನ್ನು ನಿನಗೆ ಕೊಡುವನೆಂದು ನಾನು ಬಲ್ಲೆನು ಅಂದಳು.
ಯೋಹಾನನು 11 : 23 (KNV)
ಯೇಸು ಆಕೆಗೆ--ನಿನ್ನ ಸಹೋದರನು ತಿರಿಗಿ ಎದ್ದೇಳುವನು ಎಂದು ಹೇಳಿದನು.
ಯೋಹಾನನು 11 : 24 (KNV)
ಮಾರ್ಥಳು ಆತನಿಗೆ--ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ತಿರಿಗಿ ಎದ್ದೇಳುವನೆಂದು ನಾನು ಬಲ್ಲೆನು ಎಂದು ಹೇಳಿದಳು.
ಯೋಹಾನನು 11 : 25 (KNV)
ಯೇಸು ಆಕೆಗೆ--ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು;
ಯೋಹಾನನು 11 : 26 (KNV)
ಯಾವನಾದರೂ ಬದುಕುತ್ತಾ ನನ್ನಲ್ಲಿ ನಂಬಿಕೆಯಿಡುವದಾದರೆ ಅವನು ಎಂದಿಗೂ ಸಾಯುವ ದಿಲ್ಲ. ಇದನ್ನು ನೀನು ನಂಬುತ್ತೀಯೋ ಎಂದು ಕೇಳಿದ್ದಕ್ಕೆ
ಯೋಹಾನನು 11 : 27 (KNV)
ಆಕೆಯು ಆತನಿಗೆ--ಹೌದು, ಕರ್ತನೇ, ಲೋಕಕ್ಕೆ ಬರಬೇಕಾಗಿದ್ದ ದೇವರಮಗನಾದ ಕ್ರಿಸ್ತನು ನೀನೇ ಎಂದು ನಾನು ನಂಬುತ್ತೇನೆ ಅಂದಳು.
ಯೋಹಾನನು 11 : 28 (KNV)
ಆಕೆಯು ಹೀಗೆ ಹೇಳಿದ ಮೇಲೆ ಹೊರಟು ಹೋಗಿ ತನ್ನ ಸಹೋದರಿಯಾದ ಮರಿಯಳನ್ನು ಗುಪ್ತ ವಾಗಿ ಕರೆದು--ಬೋಧಕನು ಬಂದಿದ್ದಾನೆ, ನಿನ್ನನ್ನು ಕರೆಯುತ್ತಾನೆ ಅಂದಳು.
ಯೋಹಾನನು 11 : 29 (KNV)
ಆಕೆಯು ಇದನ್ನು ಕೇಳಿದ ಕೂಡಲೆ ತಟ್ಟನೆ ಎದ್ದು ಆತನ ಬಳಿಗೆ ಬಂದಳು.
ಯೋಹಾನನು 11 : 30 (KNV)
ಯೇಸು ಇನ್ನೂ ಊರೊಳಕ್ಕೆ ಬಾರದೆ ಮಾರ್ಥಳು ಆತನನ್ನು ಸಂಧಿಸಿದ ಸ್ಥಳದಲ್ಲಿಯೇ ಇದ್ದನು.
ಯೋಹಾನನು 11 : 31 (KNV)
ಮನೆ ಯಲ್ಲಿ ಆಕೆಯ ಕೂಡ ಇದ್ದು ಆಕೆಯನ್ನು ಆದರಿಸುತ್ತಿದ್ದ ಯೆಹೂದ್ಯರು ಆಕೆಯು ತಟ್ಟನೆ ಎದ್ದು ಹೊರಗೆ ಹೋಗುವದನ್ನು ನೋಡಿ--ಆಕೆಯು ಅಳುವದಕ್ಕಾಗಿ ಸಮಾಧಿಯ ಬಳಿಗೆ ಹೋಗುತ್ತಾಳೆಂದು ತಿಳಿದು ಆಕೆ ಯನ್ನು ಹಿಂಬಾಲಿಸಿದರು.
ಯೋಹಾನನು 11 : 32 (KNV)
ತರುವಾಯ ಯೇಸು ಇದ್ದ ಸ್ಥಳಕ್ಕೆ ಮರಿಯಳು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು ಆತನಿಗೆ--ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ ಎಂದು ಹೇಳಿದಳು.
ಯೋಹಾನನು 11 : 33 (KNV)
ಆಕೆಯು ಅಳುವದನ್ನು ಮತ್ತು ಆಕೆಯೊಂದಿಗೆ ಬಂದ ಯೆಹೂದ್ಯರು ಸಹ ಅಳುವದನ್ನು ಯೇಸು ನೋಡಿದಾಗ ಆತ್ಮದಲ್ಲಿ ಕಳವಳಪಟ್ಟು ಮೂಲ್ಗುತ್ತಾ--
ಯೋಹಾನನು 11 : 34 (KNV)
ಅವನನ್ನು ಎಲ್ಲಿ ಇಟ್ಟಿದ್ದೀರಿ ಅಂದನು. ಅವರು ಆತನಿಗೆ--ಕರ್ತನೇ, ಬಂದು ನೋಡು ಅಂದರು.
ಯೋಹಾನನು 11 : 35 (KNV)
ಯೇಸು ಅತ್ತನು.
ಯೋಹಾನನು 11 : 36 (KNV)
ಆಗ ಯೆಹೂದ್ಯ ರು--ಇಗೋ, ಆತನು ಅವನನ್ನು ಎಷ್ಟು ಪ್ರೀತಿ ಮಾಡಿದನಲ್ಲಾ ಅಂದರು.
ಯೋಹಾನನು 11 : 37 (KNV)
ಅವರಲ್ಲಿ ಕೆಲ ವರು--ಆ ಕುರುಡನ ಕಣ್ಣುಗಳನ್ನು ತೆರೆದ ಈ ಮನುಷ್ಯನು ಇವನನ್ನೂ ಸಾಯದಹಾಗೆ ಮಾಡಲಾರದೆ ಇದ್ದನೇ ಅಂದರು.
ಯೋಹಾನನು 11 : 38 (KNV)
ಆದದರಿಂದ ಯೇಸು ತಿರಿಗಿ ತನ್ನಲ್ಲಿ ಮೂಲ್ಗುತ್ತಾ ಸಮಾಧಿಗೆ ಬಂದನು. ಅದು ಗವಿಯಾಗಿತ್ತು; ಒಂದು ಕಲ್ಲು ಅದರ ಮೇಲೆ ಇಟ್ಟಿತ್ತು.
ಯೋಹಾನನು 11 : 39 (KNV)
ಯೇಸು--ಆ ಕಲ್ಲನ್ನು ತೆಗೆದುಹಾಕಿರಿ ಅಂದನು. ಅದಕ್ಕೆ ಸತ್ತುಹೋದವನ ಸಹೋದರಿಯಾದ ಮಾರ್ಥಳು ಆತನಿಗೆ--ಕರ್ತನೇ, ಇಷ್ಟರೊಳಗೆ ಅವನು ನಾರುತ್ತಾನೆ; ಯಾಕಂದರೆ ಅವನು ಸತ್ತು ನಾಲ್ಕು ದಿನಗಳಾದವು ಅಂದಳು.
ಯೋಹಾನನು 11 : 40 (KNV)
ಯೇಸು ಆಕೆಗೆ--ನೀನು ನಂಬುವದಾದರೆ ದೇವರ ಮಹಿಮೆಯನ್ನು ನೋಡುವಿ ಎಂದು ನಾನು ನಿನಗೆ ಹೇಳಲಿಲ್ಲವೇ ಅಂದನು.
ಯೋಹಾನನು 11 : 41 (KNV)
ಆಗ ಅವರು ಸತ್ತವನನ್ನು ಇಟ್ಟಿದ್ದ ಸ್ಥಳದಿಂದ ಕಲ್ಲನ್ನು ತೆಗೆದುಹಾಕಿದರು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ--ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಾನು ನಿನ್ನನ್ನು ಕೊಂಡಾಡುತ್ತೇನೆ.
ಯೋಹಾನನು 11 : 42 (KNV)
ನೀನು ನನ್ನ ಪ್ರಾರ್ಥನೆಯನ್ನು ಯಾವಾಗಲೂ ಕೇಳುತ್ತೀ ಎಂದು ನಾನು ಬಲ್ಲೆನು. ಆದರೆ ನನ್ನ ಹತ್ತಿರದಲ್ಲಿ ನಿಂತಿರುವ ಜನರ ನಿಮಿತ್ತವಾಗಿ ನೀನು ನನ್ನನ್ನು ಕಳುಹಿಸಿದ್ದೀ ಎಂದು ಅವರು ನಂಬುವಂತೆ ನಾನು ಅದನ್ನು ಹೇಳಿದೆನು ಅಂದನು.
ಯೋಹಾನನು 11 : 43 (KNV)
ಆತನು ಹೀಗೆ ಮಾತನಾಡಿದ ಮೇಲೆ--ಲಾಜರನೇ, ಹೊರಗೆ ಬಾ ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು.
ಯೋಹಾನನು 11 : 44 (KNV)
ಆಗ ಪ್ರೇತ ವಸ್ತ್ರಗಳಿಂದ ಕೈಕಾಲುಗಳನ್ನು ಕಟ್ಟಿದ್ದ ಆ ಸತ್ತವನು ಹೊರಗೆ ಬಂದನು. ಅವನ ಮುಖವು ವಸ್ತ್ರ ದಿಂದ ಸುತ್ತಲ್ಪಟ್ಟಿತ್ತು; ಯೇಸು ಅವರಿಗೆ--ಅವನನ್ನು ಬಿಚ್ಚಿರಿ, ಅವನು ಹೋಗಲಿ ಎಂದು ಹೇಳಿದನು.
ಯೋಹಾನನು 11 : 45 (KNV)
ಆಗ ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯ ರಲ್ಲಿ ಅನೇಕರು ಯೇಸು ಮಾಡಿದವುಗಳನ್ನು ನೋಡಿ ಆತನಲ್ಲಿ ನಂಬಿಕೆಯಿಟ್ಟರು.
ಯೋಹಾನನು 11 : 46 (KNV)
ಆದರೆ ಅವರಲ್ಲಿ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದವುಗಳನ್ನು ಅವರಿಗೆ ಹೇಳಿದರು.
ಯೋಹಾನನು 11 : 47 (KNV)
ಆಗ ಪ್ರಧಾನಯಾಜಕರೂ ಫರಿಸಾಯರೂ ಆಲೋಚನಾ ಸಭೆಯನ್ನು ಕೂಡಿಸಿ--ಈ ಮನುಷ್ಯನು ಅನೇಕ ಅದ್ಭುತಕಾರ್ಯಗಳನ್ನು ಮಾಡುತ್ತಾನಲ್ಲಾ, ನಾವು ಏನು ಮಾಡೋಣ?
ಯೋಹಾನನು 11 : 48 (KNV)
ನಾವು ಅವನನ್ನು ಹಾಗೆಯೇ ಬಿಟ್ಟರೆ ಎಲ್ಲರೂ ಅವನ ಮೇಲೆ ನಂಬಿಕೆಯಿಡುವರು ಮತ್ತು ರೋಮಾಯರು ಬಂದು ನಮ್ಮ ಸ್ಥಳವನ್ನೂ ಜನಾಂಗವನ್ನೂ ತೆಗೆದುಕೊಂಡು ಬಿಟ್ಟಾರು ಅಂದರು.
ಯೋಹಾನನು 11 : 49 (KNV)
ಆದರೆ ಅವರಲ್ಲಿ ಆ ವರುಷದ ಮಹಾಯಾಜಕ ನಾದ ಕಾಯಫನೆಂಬವನು ಅವರಿಗೆ--
ಯೋಹಾನನು 11 : 50 (KNV)
ನಿಮಗೆ ಏನೂ ತಿಳಿಯದು; ಜನಾಂಗವೆಲ್ಲಾ ನಾಶವಾಗದ ಹಾಗೆ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವದು ನಮಗೆ ವಿಹಿತವಾಗಿದೆ ಎಂದು ನೀವು ಯೋಚಿಸುವದೂ ಇಲ್ಲ ಅಂದನು.
ಯೋಹಾನನು 11 : 51 (KNV)
ಈ ಮಾತನ್ನು ತನ್ನಷ್ಟಕ್ಕೆ ತಾನೇ ಮಾತನಾಡಲಿಲ್ಲ; ಆದರೆ ಅವನು ಆ ವರುಷದಲ್ಲಿ ಮಹಾಯಾಜಕನಾಗಿದ್ದು ಯೇಸು ಆ ಜನಾಂಗಕ್ಕೋಸ್ಕರ ಮಾತ್ರವಲ್ಲದೆ
ಯೋಹಾನನು 11 : 52 (KNV)
ಚದರಿರುವ ದೇವರ ಮಕ್ಕಳನ್ನು ಒಟ್ಟುಗೂಡಿಸುವದಕ್ಕೂ ಆತನು ಸಾಯಬೇಕಾಗಿದೆ ಎಂದು ಅವನು ಪ್ರವಾದಿಸಿದನು.
ಯೋಹಾನನು 11 : 53 (KNV)
ಅವರು ಕೂಡಿ ಕೊಂಡು ಆ ದಿನದಿಂದ ಆತನನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
ಯೋಹಾನನು 11 : 54 (KNV)
ಹೀಗಿರುವದರಿಂದ ಯೇಸು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ತಿರುಗಾಡಲಿಲ್ಲ. ಆದರೆ ಅಲ್ಲಿಂದ ಅಡವಿಗೆ ಸವಿಾಪ ದಲ್ಲಿದ್ದ ಪ್ರದೇಶದ ಎಫ್ರಾಯಿಮ್‌ ಎಂಬ ಪಟ್ಟಣಕ್ಕೆ ಹೋಗಿ ಅಲ್ಲಿ ತನ್ನ ಶಿಷ್ಯರ ಸಂಗಡ ಇದ್ದನು.
ಯೋಹಾನನು 11 : 55 (KNV)
ಆಗ ಯೆಹೂದ್ಯರ ಪಸ್ಕವು ಹತ್ತಿರವಾಗಿತ್ತು; ಅನೇಕರು ತಮ್ಮನ್ನು ಶುದ್ಧಿ ಮಾಡಿಕೊಳ್ಳುವದಕ್ಕೋಸ್ಕರ ಪಸ್ಕಕ್ಕೆ ಮುಂಚೆ ಹಳ್ಳಿಗಳಿಂದ ಯೆರೂಸಲೇಮಿಗೆ ಹೋದರು.
ಯೋಹಾನನು 11 : 56 (KNV)
ಆಗ ಅವರು ಯೇಸುವನ್ನು ಹುಡುಕು ವವರಾಗಿ ದೇವಾಲಯದಲ್ಲಿ ನಿಂತುಕೊಂಡಿದ್ದಾಗ--ಆತನು ಹಬ್ಬಕ್ಕೆ ಬರುವದಿಲ್ಲವೋ? ನಿಮಗೆ ಹೇಗೆ ಕಾಣುತ್ತದೆ ಎಂದು ತಮ್ಮತಮ್ಮೊಳಗೆ ಮಾತನಾಡಿ ಕೊಂಡರು.ಆಗ ಪ್ರಧಾನಯಾಜಕರೂ ಫರಿಸಾಯ ರೂ ಆತನನ್ನು ಹಿಡಿಯುವಂತೆ ಆತನಿರುವ ಸ್ಥಳವು ಯಾರಿಗಾದರೂ ತಿಳಿದರೆ ಅವರು ತಮಗೆ ತೋರಿಸ ಬೇಕೆಂದು ಅಪ್ಪಣೆ ಕೊಟ್ಟಿದ್ದರು.
ಯೋಹಾನನು 11 : 57 (KNV)
ಆಗ ಪ್ರಧಾನಯಾಜಕರೂ ಫರಿಸಾಯ ರೂ ಆತನನ್ನು ಹಿಡಿಯುವಂತೆ ಆತನಿರುವ ಸ್ಥಳವು ಯಾರಿಗಾದರೂ ತಿಳಿದರೆ ಅವರು ತಮಗೆ ತೋರಿಸ ಬೇಕೆಂದು ಅಪ್ಪಣೆ ಕೊಟ್ಟಿದ್ದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57

BG:

Opacity:

Color:


Size:


Font: