ಲೂಕನು 4 : 1 (KNV)
ಯೇಸು ಪರಿಶುದ್ಧಾತ್ಮನಿಂದ ತುಂಬಿದವನಾಗಿ ಯೊರ್ದನಿನಿಂದ ಹಿಂತಿರುಗಿ ಬಂದು ಆತ್ಮ ನಿಂದ ಅಡವಿಯೊಳಕ್ಕೆ ನಡಿಸಲ್ಪಟ್ಟು
ಲೂಕನು 4 : 2 (KNV)
ನಾಲ್ವತ್ತು ದಿನಗಳು ಸೈತಾನನಿಂದ ಶೋಧಿಸಲ್ಪಡುತ್ತಿದ್ದನು. ಆ ದಿನಗಳಲ್ಲಿ ಆತನು ಏನೂ ತಿನ್ನಲಿಲ್ಲ. ಅವು ಮುಗಿದ ಮೇಲೆ ಆತನು ಹಸಿದನು.
ಲೂಕನು 4 : 3 (KNV)
ಆಗ ಸೈತಾನನು ಆತ ನಿಗೆ--ನೀನು ದೇವಕುಮಾರನಾಗಿದ್ದರೆ ಈ ಕಲ್ಲು ರೊಟ್ಟಿಯಾಗುವಂತೆ ಅಪ್ಪಣೆಕೊಡು ಅಂದನು.
ಲೂಕನು 4 : 4 (KNV)
ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ಮನುಷ್ಯನು ರೊಟ್ಟಿಯಿಂದ ಮಾತ್ರವೇ ಅಲ್ಲ, ಆದರೆ ದೇವರ ಪ್ರತಿಯೊಂದು ಮಾತಿನಿಂದ ಜೀವಿಸುವನು ಎಂದು ಬರೆದದೆ ಅಂದನು.
ಲೂಕನು 4 : 5 (KNV)
ಬಳಿಕ ಸೈತಾನನು ಉನ್ನತವಾದ ಬೆಟ್ಟಕ್ಕೆ ಆತನನ್ನು ಕರಕೊಂಡುಹೋಗಿ ಲೋಕದ ಎಲ್ಲಾ ರಾಜ್ಯಗಳನ್ನು ಕ್ಷಣಮಾತ್ರದಲ್ಲಿ ಆತನಿಗೆ ತೋರಿಸಿದನು.
ಲೂಕನು 4 : 6 (KNV)
ಸೈತಾನನು ಆತನಿಗೆ--ಈ ಎಲ್ಲಾ ಅಧಿಕಾರವನ್ನೂ ಅವುಗಳ ವೈಭವವನ್ನೂ ನಾನು ನಿನಗೆ ಕೊಡುವೆನು; ಯಾಕಂದರೆ ಅದು ನನಗೆ ಕೊಡಲ್ಪಟ್ಟಿರುವದರಿಂದ ನನಗೆ ಇಷ್ಟ ಬಂದ ಯಾರಿಗಾದರೂ ನಾನು ಕೊಡು ವೆನು.
ಲೂಕನು 4 : 7 (KNV)
ಆದದರಿಂದ ನೀನು ನನ್ನನ್ನು ಆರಾಧಿಸಿದರೆ ಎಲ್ಲವುಗಳು ನಿನ್ನದಾಗುವವು ಎಂದು ಹೇಳಿದನು.
ಲೂಕನು 4 : 8 (KNV)
ಯೇಸು ಅವನಿಗೆ ಪ್ರತ್ಯುತ್ತರವಾಗಿ--ಸೈತಾನನೇ, ನನ್ನ ಹಿಂದೆ ಹೋಗು; ಯಾಕಂದರೆ--ನೀನು ನಿನ್ನ ದೇವರಾದ ಕರ್ತನನ್ನು ಆರಾಧಿಸಿ ಆತನೊಬ್ಬನನ್ನೇ ಸೇವಿಸತಕ್ಕದ್ದು ಎಂದು ಬರೆದದೆ ಅಂದನು.
ಲೂಕನು 4 : 9 (KNV)
ಇದಲ್ಲದೆ ಅವನು ಆತನನ್ನು ಯೆರೂಸಲೇಮಿಗೆ ಕರತಂದು ದೇವಾಲಯ ಗೋಪುರದ ಮೇಲೆ ನಿಲ್ಲಿಸಿ ಆತನಿಗೆ--ನೀನು ದೇವಕುಮಾರನಾಗಿದ್ದರೆ ಇಲ್ಲಿಂದ ಕೆಳಗೆ ದುಮುಕು;
ಲೂಕನು 4 : 10 (KNV)
ಆತನು ನಿನ್ನನ್ನು ಕಾಯುವದಕ್ಕೆ ತನ್ನ ದೂತರಿಗೆ ಅಪ್ಪಣೆ ಕೊಡುವನು;
ಲೂಕನು 4 : 11 (KNV)
ಯಾವ ಸಮಯದಲ್ಲಿಯಾದರೂ ನಿನ್ನ ಕಾಲು ಕಲ್ಲಿಗೆ ಅಪ್ಪಳಿಸ ದಂತೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು ಎಂದು ಬರೆದದೆ ಅಂದನು.
ಲೂಕನು 4 : 12 (KNV)
ಅದಕ್ಕೆ ಯೇಸು ಪ್ರತ್ಯು ತ್ತರವಾಗಿ ಅವನಿಗೆ--ನೀನು ನಿನ್ನ ದೇವರಾದ ಕರ್ತನನ್ನು ಶೋಧಿಸಬಾರದೆಂದು ಹೇಳಲ್ಪಟ್ಟಿದೆ ಅಂದನು.
ಲೂಕನು 4 : 13 (KNV)
ಸೈತಾನನು ಎಲ್ಲಾ ಶೋಧನೆಯನ್ನು ಮುಗಿಸಿದ ಮೇಲೆ ಸ್ವಲ್ಪ ಕಾಲ ಆತನ ಬಳಿಯಿಂದ ಹೊರಟು ಹೋದನು.
ಲೂಕನು 4 : 14 (KNV)
ತರುವಾಯ ಯೇಸು ಆತ್ಮನಿಂದ ಬಲಹೊಂದಿ ಗಲಿಲಾಯಕ್ಕೆ ಹಿಂದಿರುಗಿದನು. ಆತನ ಕೀರ್ತಿಯು ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಹರಡಿತು.
ಲೂಕನು 4 : 15 (KNV)
ಆತನು ಎಲ್ಲರಿಂದ ಮಹಿಮೆಯನ್ನು ಹೊಂದುತ್ತಾ ಅವರ ಸಭಾಮಂದಿರಗಳಲ್ಲಿ ಬೋಧಿಸಿದನು.
ಲೂಕನು 4 : 16 (KNV)
ಆತನು ತಾನು ಬೆಳೆದ ನಜರೇತಿಗೆ ಬಂದು ತನ್ನ ಪದ್ಧತಿಯಂತೆ ಸಬ್ಬತ್‌ ದಿನದಲ್ಲಿ ಸಭಾಮಂದಿರ ದೊಳಕ್ಕೆ ಹೋಗಿ ಓದುವದಕ್ಕಾಗಿ ಎದ್ದುನಿಂತನು.
ಲೂಕನು 4 : 17 (KNV)
ಆಗ ಪ್ರವಾದಿಯಾದ ಯೆಶಾಯನ ಪುಸ್ತಕವು ಆತನಿಗೆ ಕೊಡಲ್ಪಟ್ಟಿತು. ಆತನು ಆ ಪುಸ್ತಕವನ್ನು ತೆರೆದು--
ಲೂಕನು 4 : 18 (KNV)
ಕರ್ತನ ಆತ್ಮವು ನನ್ನ ಮೇಲೆ ಇದೆ; ಯಾಕಂದರೆ ಬಡವರಿಗೆ ಸುವಾರ್ತೆ ಸಾರುವದಕ್ಕೆ ಆತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯ ವುಳ್ಳವರನ್ನು ಸ್ವಸ್ಥಮಾಡುವದಕ್ಕೂ ಸೆರೆಯಲ್ಲಿದ್ದವರಿಗೆ ಬಿಡುಗಡೆಯನ್ನು ಸಾರುವದಕ್ಕೂ ಕುರುಡರಿಗೆ ದೃಷ್ಟಿ ಕೊಡುವದಕ್ಕೂ ಜಜ್ಜಲ್ಪಟ್ಟವರನ್ನು ಬಿ
ಲೂಕನು 4 : 19 (KNV)
ಕರ್ತನ ಅಂಗೀಕೃತವಾದ ವರುಷವನ್ನು ಸಾರುವದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ ಎಂದು ಬರೆದಿರುವದನ್ನು ಕಂಡು ಓದಿದನು.
ಲೂಕನು 4 : 20 (KNV)
ಆತನು ಆ ಪುಸ್ತಕವನ್ನು ಮುಚ್ಚಿ ತಿರಿಗಿ ಪರಿಚಾರಕನ ಕೈಗೆ ಕೊಟ್ಟು ಕೂತುಕೊಂಡನು. ಆಗ ಆ ಸಭಾ ಮಂದಿರದಲ್ಲಿದ್ದವ ರೆಲ್ಲರ ಕಣ್ಣುಗಳು ಆತನನ್ನೇ ದೃಷ್ಟಿಸಿದವು.
ಲೂಕನು 4 : 21 (KNV)
ಆತನು ಅವರಿಗೆ--ನೀವು ಕಿವಿಯಿಂದ ಕೇಳಿದ ಈ ಬರಹವು ಈ ದಿವಸ ನೆರವೇರಿತು ಎಂದು ಹೇಳಲಾರಂಭಿಸಿದನು.
ಲೂಕನು 4 : 22 (KNV)
ಎಲ್ಲರೂ ಆತನಿಗೆ ಸಾಕ್ಷಿಕೊಟ್ಟು ಆತನ ಬಾಯಿಂದ ಹೊರಟ ಕೃಪಾವಾಕ್ಯಗಳಿಗಾಗಿ ಆಶ್ಚರ್ಯಪಟ್ಟು-- ಈತನು ಯೋಸೇಫನ ಮಗನಲ್ಲವೇ ಅಂದರು.
ಲೂಕನು 4 : 23 (KNV)
ಆತನು ಅವರಿಗೆ--ವೈದ್ಯನೇ, ನಿನ್ನನ್ನು ನೀನೇ ವಾಸಿ ಮಾಡಿಕೋ ಎಂಬ ಈ ನಾನ್ನುಡಿಯನ್ನು ನೀವು ನನಗೆ ನಿಶ್ಚಯವಾಗಿ ಹೇಳಿ ಕಪೆರ್ನೌಮಿನಲ್ಲಿ ಯಾವದು ನಡೆಯಿತೆಂದು ನಾವು ಕೇಳಿದೆವೋ ಅದನ್ನು ಇಲ್ಲಿ ನಿನ್ನ ದೇಶದಲ್ಲಿಯೂ ಮಾಡು ಎಂದು ಹೇಳುವಿರಿ ಅಂದನು.
ಲೂಕನು 4 : 24 (KNV)
ಆತನು--ನಿಮಗೆ ನಿಜವಾಗಿ ಹೇಳುವದೇನಂದರೆ--ಯಾವ ಪ್ರವಾದಿಯೂ ತನ್ನ ಸ್ವದೇಶದಲ್ಲಿ ಅಂಗೀಕರಿಸಲ್ಪಡುವದಿಲ್ಲ.
ಲೂಕನು 4 : 25 (KNV)
ಆದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಎಲೀಯನ ದಿವಸಗಳಲ್ಲಿ ಮೂರು ವರುಷ ಆರು ತಿಂಗಳು ಆಕಾಶವು ಮುಚ್ಚಲ್ಪಟ್ಟು ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರೂ
ಲೂಕನು 4 : 26 (KNV)
ಅವರಲ್ಲಿ ಯಾರ ಬಳಿಗೂ (ದೇವರು) ಎಲೀಯನನ್ನು ಕಳುಹಿಸದೆ ಸೀದೋನ್‌ ಪಟ್ಟಣದ ಸರೆಪ್ತದಲ್ಲಿದ್ದ ಒಬ್ಬ ವಿಧವೆಯ ಬಳಿಗೇ ಕಳುಹಿಸಿದನು.
ಲೂಕನು 4 : 27 (KNV)
ಪ್ರವಾದಿಯಾದ ಎಲೀಷನ ಕಾಲ ದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರಾಯೇಲಿನಲ್ಲಿ ದ್ದಾಗ್ಯೂ ಸಿರಿಯದವನಾದ ನಾಮಾನನ ಹೊರತು ಅವರಲ್ಲಿ ಒಬ್ಬನಾದರೂ ಶುದ್ಧನಾಗಲಿಲ್ಲ ಅಂದನು.
ಲೂಕನು 4 : 28 (KNV)
ಆಗ ಸಭಾಮಂದಿರದಲ್ಲಿದ್ದವರೆಲ್ಲರೂ ಇವುಗಳನ್ನು ಕೇಳಿ ಕೋಪದಿಂದ ತುಂಬಿದವರಾದರು.
ಲೂಕನು 4 : 29 (KNV)
ಅವರು ಮೇಲಕ್ಕೆದ್ದು ಆತನನ್ನು ಪಟ್ಟಣದ ಹೊರಗೆ ದೂಡಿ ಕೊಂಡು ಹೋಗಿ ತಲೆ ಕೆಳಗೆ ಮಾಡಿ ದೊಬ್ಬಬೇಕೆಂದು ತಮ್ಮ ಪಟ್ಟಣವು ಕಟ್ಟಲ್ಪಟ್ಟಿದ್ದ ಬೆಟ್ಟದ ಕಡಿದಾದ ಸ್ಥಳಕ್ಕೆ ಆತನನ್ನು ನಡಿಸಿಕೊಂಡು ಹೋದರು.
ಲೂಕನು 4 : 30 (KNV)
ಆದರೆ ಆತನು ಅವರ ಮಧ್ಯದಿಂದ ಹಾದು ಹೊರಟು ಹೋದನು.
ಲೂಕನು 4 : 31 (KNV)
ಆತನು ಗಲಿಲಾಯ ಪಟ್ಟಣವಾದ ಕಪೆ ರ್ನೌಮಿಗೆ ಬಂದು ಸಬ್ಬತ್‌ ದಿನಗಳಲ್ಲಿ ಅವರಿಗೆ ಬೋಧಿಸುತ್ತಿದ್ದನು.
ಲೂಕನು 4 : 32 (KNV)
ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನ ವಾಕ್ಯವು ಅಧಿಕಾರದಿಂದ ಕೂಡಿದ್ದಾಗಿತ್ತು.
ಲೂಕನು 4 : 33 (KNV)
ಆ ಸಭಾಮಂದಿರ ದಲ್ಲಿ ಅಶುದ್ಧ ದೆವ್ವ ಆತ್ಮವಿದ್ದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾಗಿ ಕೂಗುತ್ತಾ--
ಲೂಕನು 4 : 34 (KNV)
ನಮ್ಮನ್ನು ಬಿಟ್ಟು ಬಿಡು; ನಜರೇತಿನ ಯೇಸುವೇ, ನಮ್ಮಗೊಡವೆ ನಿನಗೆ ಯಾಕೆ? ನಮ್ಮನ್ನು ನಾಶಮಾಡುವದಕ್ಕಾಗಿ ನೀನು ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು; ನೀನು ದೇವರ ಪರಿಶುದ್ಧನು ಎಂದು ಹೇಳಿದನು.
ಲೂಕನು 4 : 35 (KNV)
ಆಗ ಯೇಸು ಅವನನ್ನು ಗದರಿಸಿ--ಸುಮ್ಮನಿರು, ಅವನೊಳಗಿಂದ ಹೊರಗೆ ಬಾ ಅಂದನು. ಆ ದೆವ್ವವು ಅವನನ್ನು ಮಧ್ಯದಲ್ಲಿ ಕೆಡವಿ ಅವನನ್ನು ಬಾಧಿಸದೆ ಅವನೊಳಗಿಂದ ಹೊರಗೆ ಬಂತು.
ಲೂಕನು 4 : 36 (KNV)
ಆಗ ಅವರೆ ಲ್ಲರೂ ಬೆರಗಾಗಿ--ಇದೆಂಥ ಮಾತಾಗಿದೆ! ಈತನು ಅಧಿಕಾರದಿಂದಲೂ ಬಲದಿಂದಲೂ ಅಶುದ್ಧಾತ್ಮಗಳಿಗೆ ಅಪ್ಪಣೆ ಕೊಡಲು ಅವು ಹೊರಗೆ ಬರುತ್ತವಲ್ಲಾ ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡರು.
ಲೂಕನು 4 : 37 (KNV)
ಆತನ ಕೀರ್ತಿಯು ಸುತ್ತಲಿನ ಪ್ರದೇಶದ ಪ್ರತಿಯೊಂದು ಸ್ಥಳದಲ್ಲಿ ಹರಡಿತು.
ಲೂಕನು 4 : 38 (KNV)
ತರುವಾಯ ಆತನು ಸಭಾಮಂದಿರದಿಂದ ಎದ್ದು ಸೀಮೋನನ ಮನೆಯಲ್ಲಿ ಪ್ರವೇಶಿಸಿದನು; ಅಲ್ಲಿ ಸೀಮೋನನ ಹೆಂಡತಿಯ ತಾಯಿಗೆ ಕಠಿಣ ಜ್ವರವಿದ್ದದ ರಿಂದ ಅವರು ಆಕೆಗೋಸ್ಕರ ಆತನನ್ನು ಬೇಡಿಕೊಂಡರು.
ಲೂಕನು 4 : 39 (KNV)
ಆಗ ಆತನು ಆಕೆಯ ಬಳಿಯಲ್ಲಿ ನಿಂತು ಜ್ವರವನ್ನು ಗದರಿಸಲು ಅದು ಆಕೆಯನ್ನು ಬಿಟ್ಟಿತು; ಕೂಡಲೆ ಆಕೆಯು ಎದ್ದು ಅವರನ್ನು ಉಪಚರಿಸಿದಳು.
ಲೂಕನು 4 : 40 (KNV)
ಸೂರ್ಯಾಸ್ತಮಾನವಾಗುತ್ತಿದ್ದಾಗ ನಾನಾ ವಿಧ ವಾದ ರೋಗಗಳಿಂದ ಅಸ್ವಸ್ಥವಾದವರೆಲ್ಲರನ್ನು ಅವರು ಆತನ ಬಳಿಗೆ ತಂದರು; ಆತನು ಅವರಲ್ಲಿ ಪ್ರತಿಯೊಬ್ಬನ ಮೇಲೆ ತನ್ನ ಕೈಗಳನ್ನಿಟ್ಟು ಅವರನ್ನು ಸ್ವಸ್ಥಪಡಿಸಿದನು.
ಲೂಕನು 4 : 41 (KNV)
ಅನೇಕರೊಳಗಿಂದ ದೆವ್ವಗಳು ಸಹ ಹೊರಗೆ ಬಂದು ಕೂಗುತ್ತಾ--ನೀನು ದೇವಕುಮಾರನಾದ ಕ್ರಿಸ್ತನೇ ಎಂದು ಹೇಳಿದವು. ಆತನು ಅವುಗಳನ್ನು ಗದರಿಸಿ ಮಾತನಾಡಬಾರದೆಂದು ಹೇಳಿದನು. ಯಾಕಂದರೆ ಆತನು ಕ್ರಿಸ್ತನೆಂದು ಅವುಗಳಿಗೆ ಗೊತ್ತಿತ್ತು.
ಲೂಕನು 4 : 42 (KNV)
ಬೆಳಗಾದ ಮೇಲೆ ಆತನು ಅರಣ್ಯ ಸ್ಥಳಕ್ಕೆ ಹೊರಟು ಹೋದನು; ಜನರು ಆತನನ್ನು ಹುಡುಕಿಕೊಂಡು ಆತನ ಬಳಿಗೆ ಬಂದು ತಮ್ಮನ್ನು ಬಿಟ್ಟು ಹೋಗ ಬಾರದೆಂದು ಆತನನ್ನು ತಡೆದರು.
ಲೂಕನು 4 : 43 (KNV)
ಆದರೆ ಆತನು ಅವರಿಗೆ--ಬೇರೆ ಪಟ್ಟಣಗಳಿಗೂ ದೇವರ ರಾಜ್ಯವನ್ನು ನಾನು ಸಾರಲೇಬೇಕು; ಇದಕ್ಕಾಗಿಯೇ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು.ಆತನು ಗಲಿಲಾಯದ ಸಭಾಮಂದಿರಗಳಲ್ಲಿ ಸಾರಿದನು.
ಲೂಕನು 4 : 44 (KNV)
ಆತನು ಗಲಿಲಾಯದ ಸಭಾಮಂದಿರಗಳಲ್ಲಿ ಸಾರಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44

BG:

Opacity:

Color:


Size:


Font: